ಶೇರ್
 
Comments
1000 ಕೋಟಿ ಸ್ಟಾರ್ಟ್ಅಪ್ ಇಂಡಿಯಾ ಮೂಲನಿಧಿಯ ಘೋಷಣೆ
ಸ್ಟಾರ್ಟ್‌ಅಪ್‌ಗಳು ವ್ಯವಹಾರದ ಗುಣಲಕ್ಷಣಗಳನ್ನು ಬದಲಾಯಿಸುತ್ತಿವೆ
'ಯುವಜನರಿಂದ, ಯುವಜನರಿಗಾಗಿ, ಯುವಜನರಿಗೋಸ್ಕರ' ಸ್ಟಾರ್ಟ್‌ಅಪ್‌ ವ್ಯವಸ್ಥೆಗಾಗಿ ಭಾರತ ಕೆಲಸ ಮಾಡುತ್ತಿದೆ
ಜಿಇಎಂನಲ್ಲಿ 8 ಸಾವಿರ ಸ್ಟಾರ್ಟ್ಅಪ್ ಗಳ ನೋಂದಾವಣೆ; 2300 ಕೋಟಿ ರೂ.ಮೌಲ್ಯದ ವ್ಯವಹಾರ: ಪ್ರಧಾನಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ‘ಪ್ರಾರಂಭ್: ಸ್ಟಾರ್ಟ್ಅಪ್ ಇಂಡಿಯಾ ಅಂತರರಾಷ್ಟ್ರೀಯ ಶೃಂಗಸಭೆ’ ಉದ್ದೇಶಿಸಿ ಮಾತನಾಡಿದರು ಮತ್ತು ಸ್ಟಾರ್ಟ್‌ಅಪ್‌ಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಬಿಮ್‌ಸ್ಟೆಕ್ ದೇಶಗಳ ಸಚಿವರು ಮತ್ತು ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್, ಶ್ರೀ ಪೀಯೂಷ್ ಗೋಯಲ್ ಮತ್ತು ಶ್ರೀ ಸೋಮ್ ಪ್ರಕಾಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಸ್ಟಾರ್ಟ್ ಅಪ್ ಗಳು ಇಂದಿನ ವ್ಯವಹಾರದ ಗುಣಲಕ್ಷಣಗಳನ್ನು ಬದಲಾಯಿಸುತ್ತಿವೆ ಎಂದರು. ಶೇಕಡಾ 44 ರಷ್ಟು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಲ್ಲಿ ಮಹಿಳಾ ನಿರ್ದೇಶಕರು ಇದ್ದಾರೆ ಮತ್ತು ಈ ಸ್ಟಾರ್ಟ್ ಅಪ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಸಹ ಹೆಚ್ಚಾಗಿದೆ ಎಂದು ಅವರು ಹೇಳಿದರು. ಅಂತೆಯೇ, ಶೇಕಡಾ 45 ರಷ್ಟು ಸ್ಟಾರ್ಟ್‌ಅಪ್‌ಗಳು 2 ಮತ್ತು 3ನೇ ಶ್ರೇಣಿ ನಗರಗಳಲ್ಲಿವೆ, ಸ್ಥಳೀಯ ಉತ್ಪನ್ನಗಳ ಬ್ರಾಂಡ್ ರಾಯಭಾರಿಗಳಾಗಿ ಇವು ಕಾರ್ಯನಿರ್ವಹಿಸುತ್ತಿವೆ. ಪ್ರತಿ ರಾಜ್ಯವು ಸ್ಥಳೀಯ ಸಾಧ್ಯತೆಗಳಿಗೆ ಅನುಗುಣವಾಗಿ ಸ್ಟಾರ್ಟ್ಅಪ್‌ಗಳನ್ನು ಬೆಂಬಲಿಸುತ್ತಿವೆ ಮತ್ತು ದೇಶದ ಶೇ.80 ರಷ್ಟು ಜಿಲ್ಲೆಗಳು ಈಗ ಸ್ಟಾರ್ಟ್ಅಪ್ ಇಂಡಿಯಾ ಮಿಷನ್‌ನ ಭಾಗವಾಗಿವೆ. ಎಲ್ಲಾ ರೀತಿಯ ಹಿನ್ನೆಲೆಯಿಂದ ಯುವಕರು ಈ ಪರಿಸರ ವ್ಯವಸ್ಥೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಮಾಡಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ. ಎಂದರು ‘ನೀವು ಯಾಕೆ ಕೆಲಸ ಮಾಡಬಾರದು? ಸ್ಟಾರ್ಟ್ಅಪ್ ಏಕೆ?’ ಎಂಬುದು ಈಗ ‘ ಕೆಲಸವೇನೋ ಸರಿ, ಅದರೆ ನಿಮ್ಮ ಸ್ವಂತ ಸ್ಟಾರ್ಟ್ಅಪ್ ಏಕೆ ಆರಂಭಿಸಬಾರದು! ’ ಎಂದು ಬದಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. 2014 ರಲ್ಲಿ ಕೇವಲ 4 ಭಾರತೀಯ ಸ್ಟಾರ್ಟ್ಅಪ್‌ಗಳು ‘ಯುನಿಕಾರ್ನ್ ಕ್ಲಬ್’ನಲ್ಲಿದ್ದವು, ಈಗ 30 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು 1 ಬಿಲಿಯನ್ ವ್ಯವಹಾರದ ಗಡಿ ದಾಟಿವೆ ಎಂದು ಶ್ರೀ ಮೋದಿ ಹೇಳಿದರು.

2020 ರಲ್ಲಿ ಕೊರೊನಾ ಸಮಯದಲ್ಲಿ 11 ಸ್ಟಾರ್ಟ್‌ಅಪ್‌ಗಳು ‘ಯುನಿಕಾರ್ನ್ ಕ್ಲಬ್‌’ಗೆ ಸೇರ್ಪಡೆಯಾಗಿವೆ ಎಂಬ ಅಂಶದ ಬಗ್ಗೆ ಗಮನಸೆಳೆದ ಪ್ರಧಾನಿ, ಬಿಕ್ಕಟ್ಟಿನ ಸಂದರ್ಭದಲ್ಲಿ ಆತ್ಮನಿರ್ಭರ ಬಾರತಕ್ಕೆ ಅವುಗಳ ಕೊಡುಗೆಯನ್ನು ಒತ್ತಿಹೇಳಿದರು. ಸ್ಯಾನಿಟೈಜರ್‌ಗಳು, ಪಿಪಿಇ ಕಿಟ್‌ಗಳು ಮತ್ತು ಸಂಬಂಧಿತ ಪೂರೈಕೆ ಸರಪಳಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ಸ್ಟಾರ್ಟ್ಅಪ್‌ಗಳು ಪ್ರಮುಖ ಪಾತ್ರವಹಿಸಿವೆ. ಮನೆ ಬಾಗಿಲಿಗೆ ಕಿರಾಣಿ, ಔಷಧ ವಿತರಣೆ, ಮುಂಚೂಣಿ ಕಾರ್ಯಕರ್ತರ ಸಾರಿಗೆ ಮತ್ತು ಆನ್‌ಲೈನ್ ಅಧ್ಯಯನ ಸಾಮಗ್ರಿಗಳಂತಹ ಸ್ಥಳೀಯ ಅಗತ್ಯಗಳನ್ನು ಪೂರೈಸುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು. ಪ್ರತಿಕೂಲ ಪರಿಸ್ಥಿತಿಯನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಸ್ಟಾರ್ಟ್ಅಪ್‌ಗಳ ಮನೋಭಾವವನ್ನು ಪ್ರಧಾನಿಯವರು ಶ್ಲಾಘಿಸಿದರು.

ಇಂದು ಅನೇಕರಿಗೆ ‘ಪ್ರಾರಂಭ’ ಅಂದರೆ ಇಂದು ಆರಂಭವಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ಇಂದು, ಬಿಮ್ಸ್ಟೆಕ್ ರಾಷ್ಟ್ರಗಳ ಮೊದಲ ಸ್ಟಾರ್ಟ್ಅಪ್‌ ಸಮಾವೇಶವನ್ನು ಆಯೋಜಿಸಲಾಗಿದೆ. ಸ್ಟಾರ್ಟ್ಅಪ್ ಇಂಡಿಯಾ ಆಂದೋಲನ ಇಂದು ತನ್ನ ಯಶಸ್ವಿ ಐದು ವರ್ಷಗಳನ್ನು ಪೂರೈಸಿದೆ ಮತ್ತು ಭಾರತ ಇಂದು ಅತಿದೊಡ್ಡ ಲಸಿಕಾ ಅಭಿಯಾನ ಆರಂಭಿಸಿದೆ. ಈ ದಿನವು ನಮ್ಮ ಯುವಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಮತ್ತು ನಮ್ಮ ವೈದ್ಯರು, ದಾ

ದಿಯರು ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಬಿಮ್ಸ್ಟೆಕ್ ದೇಶಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿನ ಸ್ಟಾರ್ಟ್ಅಪ್ ರೋಮಾಂಚಕ ಶಕ್ತಿಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಈ ಶತಮಾನವು ಡಿಜಿಟಲ್ ಕ್ರಾಂತಿ ಮತ್ತು ಹೊಸ ಯುಗದ ಆವಿಷ್ಕಾರಗಳ ಶತಮಾನವಾಗಿದೆ ಎಂದು ಅವರು ಹೇಳಿದರು. ಇದು ಏಷ್ಯಾದ ಶತಮಾನವೂ ಆಗಿದೆ. ಆದ್ದರಿಂದ, ಭವಿಷ್ಯದ ತಂತ್ರಜ್ಞಾನ ಮತ್ತು ಉದ್ಯಮಿಗಳು ಈ ಪ್ರದೇಶದಿಂದ ಬರಬೇಕು ಎಂಬುದು ಸದ್ಯದ ಬೇಡಿಕೆಯಾಗಿದೆ. ಇದಕ್ಕಾಗಿ, ಸಹಯೋಗಕ್ಕಾಗಿ ಇಚ್ಛಾಶಕ್ತಿ ಹೊಂದಿರುವ ಏಷ್ಯಾ ರಾಷ್ಟ್ರಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಒಗ್ಗಟ್ಟಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಜವಾಬ್ದಾರಿ ಸ್ವಾಭಾವಿಕವಾಗಿ ಜಗತ್ತಿನ ಐದನೇ ಒಂದು ಭಾಗ ಜನಸಂಖ್ಯೆ ಹೊಂದಿರುವ ಬಿಮ್‌ಸ್ಟೆಕ್ ದೇಶಗಳ ಮೇಲೆ ಇರುತ್ತದೆ ಎಂದು ಪ್ರಧಾನಿ ಹೇಳಿದರು.

ಭಾರತದ 5 ವರ್ಷಗಳ ಸ್ಟಾರ್ಟ್ಅಪ್ ಪಯಣವನ್ನು ವಿವರಿಸುವ ‘ಸ್ಟಾರ್ಟ್ಅಪ್ ಇಂಡಿಯಾದ ವಿಕಸನ’ ಎಂಬ ಕಿರುಪುಸ್ತಕವನ್ನೂ ಪ್ರಧಾನಿ ಬಿಡುಗಡೆ ಮಾಡಿದರು. 41 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಎದುರಾದ ಸವಾಲುಗಳನ್ನು ಅವರು ಸ್ಮರಿಸಿದರು. ಈ ನವೋದ್ಯಮಗಳಲ್ಲಿ 5700 ಐಟಿ ವಲಯದಲ್ಲಿದ್ದರೆ, 3600 ಆರೋಗ್ಯ ಕ್ಷೇತ್ರಗಳಲ್ಲಿ ಮತ್ತು ಸುಮಾರು 1700 ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿವೆ. ಜನರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗೃತರಾಗುತ್ತಿರುವುದರಿಂದ ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ಹೆಚ್ಚಾಗಿರುವ ಬಗ್ಗೆ ಪ್ರಧಾನಿ ಗಮನಸೆಳೆದರು. ಒಂದು ಲಕ್ಷ ಕೋಟಿ ಬಂಡವಾಳದ ಮೂಲ ಬಂಡವಾಳದೊಂದಿಗೆ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಿರುವ ಮೂಲಕ ಭಾರತ ಈ ಕ್ಷೇತ್ರಗಳ ಬೆಳವಣಿಗೆಗೆ ವಿಶೇಷ ಗಮನ ಹರಿಸಿದೆ. ಈ ಹೊಸ ಮಾರ್ಗಗಳೊಂದಿಗೆ, ಸ್ಟಾರ್ಟ್ಅಪ್ ಗಳು ರೈತರೊಂದಿಗೆ ಸಮನ್ವಯ ಸಾಧಿಸುತ್ತಿವೆ ಮತ್ತು ಉತ್ಪನ್ನಗಳನ್ನು ಸುಲಭವಾಗಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಜಮೀನಿನಿಂದ ಊಟದ ಟೇಬಲ್‌ಗೆ ತಲುಪಿಸಲು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಸ್ಟಾರ್ಟ್ಅಪ್ ಜಗತ್ತಿನ ಅತಿದೊಡ್ಡ ವೈಶಿಷ್ಟ್ಯವೆಂದರೆ, ಎದುರಿಸುವ ಅಡಚಣೆ ಮತ್ತು ವೈವಿಧ್ಯತೆಯ ಸಾಮರ್ಥ್ಯಗಳು ಎಂದು ಪ್ರಧಾನಿ ಹೇಳಿದರು. ಅಡಚಣೆಗಳು, ಹೊಸ ವಿಧಾನಗಳು, ಹೊಸ ತಂತ್ರಜ್ಞಾನ ಮತ್ತು ಹೊಸ ಮಾರ್ಗಗಳಿಗೆ ಕಾರಣವಾಗುತ್ತಿವೆ; ವೈವಿಧ್ಯೀಕರಣ ಏಕೆಂದರೆ ಅವುಗಳು ಕ್ರಾಂತಿಕಾರಕ ವೈವಿಧ್ಯಮಯ ಆಲೋಚನೆಗಳನ್ನು ಹೊಂದಿರುತ್ತವೆ. ಈ ಪರಿಸರ ವ್ಯವಸ್ಥೆಯ ಬಹುದೊಡ್ಡ ವೈಶಿಷ್ಟ್ಯವೆಂದರೆ ಅದು ವಾಸ್ತವಕ್ಕಿಂತ ಉತ್ಸಾಹದಿಂದ ನಡೆಯುತ್ತದೆ. ಇಂದು ಈ ‘ಮಾಡಬಲ್ಲೆ’ ಮನೋಭಾವವು ಭಾರತದ ಕಾರ್ಯವಿಧಾನದಲ್ಲಿ ಸ್ಪಷ್ಟವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಭೀಮ್ ಯುಪಿಐ ಅನ್ನು ಉದಾಹರಣೆ ನೀಡಿದ ಪ್ರಧಾನಿಯವರು, ಡಿಸೆಂಬರ್ 2020 ರಲ್ಲಿ, ಭಾರತದಲ್ಲಿ ಯುಪಿಐ ಮೂಲಕ 4 ಲಕ್ಷ ಕೋಟಿ ಮೌಲ್ಯದ ವ್ಯವಹಾರ ನಡೆದಿವೆ ಎಂದರು. ಅದೇ ರೀತಿ ಭಾರತವು ಸೌರ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಬಡವರು, ರೈತರು ಮತ್ತು ವಿದ್ಯಾರ್ಥಿಗಳ ಖಾತೆಗಳಿಗೆ ನೇರವಾಗಿ ನೆರವು ನೀಡುವ, ಮತ್ತು 1.75 ಲಕ್ಷ ಕೋಟಿ ರೂ. ಮೌಲ್ಯದ ಸೋರಿಕೆಯನ್ನು ತಡೆಗಟ್ಟುವ ನೇರ ಲಾಭ ವರ್ಗಾವಣೆ ವ್ಯವಸ್ಥೆಯ ಬಗ್ಗೆ ಶ್ರೀ ಮೋದಿ ಪ್ರಸ್ತಾಪಿಸಿದರು.

ಸರ್ಕಾರಿ ಖರೀದಿ ಪೋರ್ಟಲ್ ಜಿಇಎಂ ನಲ್ಲಿ 8 ಸಾವಿರ ಸ್ಟಾರ್ಟ್ಅಪ್‌ಗಳು ನೋಂದಣಿಯಾಗಿರುವುದರಿಂದ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳು ಸಿಗುತ್ತಿವೆ ಮತ್ತು ಅವರು ಜಿಇಎಂ ಮೂಲಕ 2300 ಕೋಟಿ ವ್ಯವಹಾರವನ್ನು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಮುಂಬರುವ ದಿನಗಳಲ್ಲಿ ಜಿಇಎಂನಲ್ಲಿ ಸ್ಟಾರ್ಟ್ಅಪ್‌ಗಳ ಉಪಸ್ಥಿತಿಯು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಇದು ಸ್ಥಳೀಯ ಉತ್ಪಾದನೆ, ಸ್ಥಳೀಯ ಉದ್ಯೋಗ ಮತ್ತು ಸ್ಟಾರ್ಟ್ಅಪ್‌ಗಳ ಸಂಶೋಧನೆ ಮತ್ತು ಅನುಶೋಧನೆಗಳಲ್ಲಿ ಉತ್ತಮ ಹೂಡಿಕೆಗೆ ಉತ್ತೇಜನ ನೀಡುತ್ತದೆ ಎಂದರು.

ಸ್ಟಾರ್ಟ್‌ಅಪ್‌ಗಳಿಗೆ ಮೂಲ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಒಂದು ಸಾವಿರ ಕೋಟಿ ರೂಪಾಯಿಗಳ ಸ್ಟಾರ್ಟ್ಅಪ್ ಇಂಡಿಯಾ ಮೂಲ ನಿಧಿಯನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಘೋಷಿಸಿದರು. ಹೊಸ ಸ್ಟಾರ್ಟ್ಅಪ್‌ಗಳನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಇದು ಸಹಾಯ ಮಾಡುತ್ತದೆ. ಈಕ್ವಿಟಿ ಬಂಡವಾಳ ಸಂಗ್ರಹಿಸಲು ಸ್ಟಾರ್ಟ್ಅಪ್‌ಗಳಿಗೆ ಫಂಡ್ ಆಫ್ ಫಂಡ್ಸ್ ಯೋಜನೆ ಈಗಾಗಲೇ ನೆರವಾಗುತ್ತಿದೆ. ಖಾತ್ರಿಗಳ ಮೂಲಕ ಬಂಡವಾಳವನ್ನು ಸಂಗ್ರಹಿಸಲು ಸರ್ಕಾರವು ಸ್ಟಾರ್ಟ್ಅಪ್‌ಗಳಿಗೆ ಸಹಾಯ ಮಾಡುತ್ತದೆ. ಭಾರತವು 'ಯುವಜನತೆಯಿಂದ, ಯುವಜನರಿಗಾಗಿ, ಯುವಜನರಿಗೋಸ್ಕರ' ಎಂಬ ಮಂತ್ರವನ್ನು ಆಧರಿಸಿದ ಸ್ಟಾರ್ಟ್ಅಪ್‌ ಪರಿಸರ ವ್ಯವಸ್ಥೆಗೆ ಕೆಲಸ ಮಾಡುತ್ತಿದೆ, ಮುಂದಿನ ಐದು ವರ್ಷಗಳವರೆಗೆ ನಾವು ನಮ್ಮ ಗುರಿಗಳನ್ನು ನಿಗದಿಪಡಿಸಬೇಕಾಗಿದೆ ಮತ್ತು ಈ ಗುರಿಗಳು ನಮ್ಮ ಸ್ಟಾರ್ಟ್ಅಪ್‌ಗಳು, ನಮ್ಮ ಯುನಿಕಾರ್ನ್ಗಳು ಜಾಗತಿಕ ದೈತ್ಯರಾಗಿ ಹೊರಹೊಮ್ಮುವಂತೆ ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ಮುನ್ನಡೆ ಸಾಧಿಸುವಂತೆ ಇರಬೇಕು ಎಂದು ಪ್ರಧಾನಿ ತಿಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
All citizens will get digital health ID: PM Modi

Media Coverage

All citizens will get digital health ID: PM Modi
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಸೆಪ್ಟೆಂಬರ್ 2021
September 28, 2021
ಶೇರ್
 
Comments

Citizens praised PM Modi perseverance towards farmers welfare as he dedicated 35 crop varieties with special traits to the nation

India is on the move under the efforts of Modi Govt towards Development for all