RERA has strengthened the trust between the customers and the real estate developers: PM Modi
Government is committed towards ensuring Ease of Doing Business in India: PM Modi
When a Government frames policies with the right intent, it results in the elimination of corruption and better outcomes: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಸಿ.ಆರ್.ಡಿ.ಎ.ಐ. ಯೂತ್ ಕಾನ್ 2019 ಉದ್ದೇಶಿಸಿ ಭಾಷಣ ಮಾಡಿದರು.




ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, 2022ರ ಹೊತ್ತಿಗೆ ವಸತಿ ರಹಿತ ಎಲ್ಲರಿಗೂ ಮನೆ ನೀಡುವ ಕಾರ್ಯ ವೇಗವಾಗಿ ಸಾಗಿದೆ ಎಂದು ತಿಳಿಸಿದರು. ಸುಮಾರು 1.5 ಕೋಟಿ ಮನೆಗಳನ್ನು ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ, ಈ ಪೈಕಿ 15 ಲಕ್ಷ ಮನೆಗಳನ್ನು ನಗರ ಪ್ರದೇಶದ ಬಡವರಿಗೆ ನಿರ್ಮಿಸಲಾಗಿದೆ ಎಂದರು. ಪ್ರಸಕ್ತ ಕೇಂದ್ರ ಸರ್ಕಾರದ ಅಡಿಯಲ್ಲಿ ಇಡೀ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿತ್ತು ಎಂದೂ ಹೇಳಿದರು. ಸರಕಾರವು ಸರಿಯಾದ ಆಶಯದೊಂದಿಗೆ ನೀತಿಗಳನ್ನು ರೂಪಿಸಿದಾಗ ಅದು ಭ್ರಷ್ಟಾಚಾರ ತೆಗೆದುಹಾಕಿ ಮತ್ತು ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಅವರು ಉಲ್ಲೇಖಿಸಿದರು.

 

ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (ರೇರಾ) ಗ್ರಾಹಕರು ಮತ್ತು ರಿಯಲ್ ಎಸ್ಟೇಟ್ ಡೆವಲಪರುಗಳ ನಡುವೆ ವಿಶ್ವಾಸವನ್ನು ವರ್ಧಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ರೇರಾವನ್ನು 28 ರಾಜ್ಯಗಳಲ್ಲಿ ಅಧಿಸೂಚಿಸಲಾಗಿದೆ ಎಂದು ತಿಳಿಸಿದರು. 35000ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳು ಮತ್ತು 27 ಸಾವಿರ ರಿಯಲ್ ಎಸ್ಟೇಟ್ ಏಜೆಂಟರು ರೇರಾ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದು, ಲಕ್ಷಾಂತರ ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಸುಗಮವಾಗಿ ವಾಣಿಜ್ಯ ನಡೆಸುವ ಶ್ರೇಯಾಂಕದಲ್ಲಿ ಭಾರಿ ಜಿಗಿತ ಆಗಿರುವ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಸುಗಮವಾಗಿ ವಾಣಿಜ್ಯ ನಡೆಸುವುದನ್ನು ಖಾತ್ರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು. ಈ ನಿಟ್ಟಿನಲ್ಲಿ, ನಿರ್ಮಾಣದ ಅನುಮತಿ ಸೇರಿದಂತೆ ಸರ್ಕಾರದ ಎಲ್ಲ ಅನುಮತಿಗಳನ್ನೂ ಹಿಂದೆಂದಿಗಿಂತ ವೇಗವಾಗಿ ನೀಡಲಾಗುತ್ತಿದೆ ಎಂದರು.

ವಸತಿ ಕೈಗಾರಿಕೆ ಮತ್ತು ವಸತಿ ಖರೀದಿದಾರರಿಗೆ ನೆರವಾಗಲು ಕೇಂದ್ರ ಸರ್ಕಾರ ಆರಂಭಿಸಿರುವ ತೆರಿಗೆ ಸುಧಾರಣೆಗಳ ಕುರಿತಂತೆ ಪ್ರಧಾನಮಂತ್ರಿಯವರು ಮಾತನಾಡಿದರು. ಅವರು ವಿವಿಧ ನಿರ್ಮಾಣ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಕೆಯ ಕುರಿತು ಪ್ರಸ್ತಾಪಿಸಿದರು. ಇತ್ತೀಚಿನ ಬಜೆಟ್ ನಲ್ಲಿ ಮಧ್ಯಮವರ್ಗದವರಿಗೆ ಪರಿಚಯಿಸಲಾಗಿರುವ ಆದಾಯ ತೆರಿಗೆ ಸೌಲಭ್ಯಗಳ ಕುರಿತೂ ಪ್ರಸ್ತಾಪಿಸಿದರು. ಈ ಎಲ್ಲ ಉಪಕ್ರಮಗಳ ಸಂಚಿತ ಪರಿಣಾಮಗಳು ವಸತಿ ಕ್ಷೇತ್ರಕ್ಕೆ ಮತ್ತು ಮನೆ ಖರೀದಿಸುವವರಿಗೆ ನೆರವಾಗಿದೆ ಎಂದರು.

ಸ್ವಂತ ಮನೆ ಹೊಂದಬೇಕು ಎಂಬ ಸಾಮಾನ್ಯ ನಾಗರಿಕನ ಕನಸು ನನಸು ಮಾಡುತ್ತಿರುವುದಕ್ಕಾಗಿ ಸಿ.ಆರ್.ಇ.ಡಿ.ಎ.ಐ. ಅನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ನವ ಭಾರತ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಯೂತ್ ಕಾನ್ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶದ ಯುವಜನರು ನವ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಸಿಆರ್.ಇ.ಡಿ.ಎಐ. ತಾಲ್ಕಟೋರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Year Ender 2025: Major Income Tax And GST Reforms Redefine India's Tax Landscape

Media Coverage

Year Ender 2025: Major Income Tax And GST Reforms Redefine India's Tax Landscape
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಡಿಸೆಂಬರ್ 2025
December 29, 2025

From Culture to Commerce: Appreciation for PM Modi’s Vision for a Globally Competitive India