ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಫೆಬ್ರವರಿ 17 ರಂದು ಜಾರ್ಖಂಡದ ರಾಂಚಿಗೆ ಭೇಟಿ ನೀಡಿದರು. ಅವರು ಅಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಆಯ್ದ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಜಾರ್ಖಂಡ ರಾಜ್ಯಪಾಲರಾದ ಶ್ರೀಮತಿ ದ್ರೌಪದಿ ಮುರ್ಮು, ಜಾರ್ಖಂಡ ಮುಖ್ಯಮಂತ್ರಿ ಶ್ರೀ ರಘುವರ ದಾಸ್ ಅವರು ಈ ಸಂದರ್ಭ ಉಪಸ್ಥಿತರಿದ್ದರು.

ಇದಕ್ಕೆ ಮೊದಲು ಜಾರ್ಖಂಡ್ ನ ಹಜಾರಿಬಾಗ್ ನಲ್ಲಿ ಇಂದು ಮಾತನಾಡಿದ ಪ್ರಧಾನಮಂತ್ರಿ ಅವರು ಜಾರ್ಖಂಡದ ನೆಲದಲ್ಲಿ ಆರಂಭಗೊಂಡ ಆಯುಷ್ಮಾನ ಭಾರತ ಯೋಜನೆಯು ಜಾರ್ಖಂಡದ ಸಾವಿರಾರು ಜನರ ಸಹಿತ ಭಾರತದಾದ್ಯಂತ ಲಕ್ಷಾಂತರ ಜನತೆಗೆ ಪ್ರಯೋಜನಕ್ಕೆ ಬಂದಿದೆ ಎಂದರು. ಪ್ರಧಾನಮಂತ್ರಿ ಅವರು 2018 ರ ಸೆಪ್ಟೆಂಬರ್ 23 ರಂದು ರಾಂಚಿಯಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ-ಆಯುಷ್ಮಾನ ಭಾರತ ಯೋಜನೆಯನ್ನು ಆರಂಭ ಮಾಡಿದ್ದರು ಮತ್ತು ಇದು “ಬಡವರಿಗೆ ನೆರವಾಗುವಲ್ಲಿ ಭಾರೀ ಬದಲಾವಣೆ ತರುವ ಉಪಕ್ರಮ “ಎಂದು ಬಣ್ಣಿಸಿದ್ದರು

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (ಪಿ.ಎಂ. –ಜೆ.ಎ.ವೈ.) ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವ ಬಡವರು ಮತ್ತು ಅಪಾಯಕ್ಕೆ ಈಡಾಗುವ ಸಾಧ್ಯತೆ ಇರುವ ಗುಂಪಿನವರ ಹಣಕಾಸು ಹೊರೆಯನ್ನು ನಿಭಾಯಿಸುವುದಕ್ಕಾಗಿ ಮತ್ತು ಅವರಿಗೆ ಗುಣಮಟ್ಟದ ಆರೋಗ್ಯ ರಕ್ಷಣಾ ಸೇವೆ ಲಭ್ಯವಾಗುವಂತೆ ಮಾಡಲು ಆರಂಭಿಸಲಾಯಿತು. ಯೋಜನೆಯು ಕುಟುಂಬವೊಂದಕ್ಕೆ , ವರ್ಷವೊಂದಕ್ಕೆ 5 ಲಕ್ಷ ರೂಪಾಯಿಗಳ ಮೊತ್ತದ ಆರೋಗ್ಯ ವಿಮಾ ಸೌಲಭ್ಯವನ್ನು ಹೊಂದಿರುತ್ತದೆ. ಇದರಿಂದ ಐವತ್ತು ಕೋಟಿ ಜನರಿಗೆ ಪ್ರಯೋಜನವಾಗಲಿದೆ ಮತ್ತು ಇದು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆ ಆಗಿರುತ್ತದೆ. ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯು ಸುಮಾರು ಯುರೋಪಿಯನ್ ಯೂನಿಯನ್ನಿನ ಜನಸಂಖ್ಯೆಗೆ ಅಥವಾ ಅಮೇರಿಕಾ, ಕೆನಡಾ ಮತ್ತು ಮೆಕ್ಸಿಕೋಗಳ ಒಟ್ಟು ಜನಸಂಖ್ಯೆಗೆ ಸಮನಾಗಿರುತ್ತದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why India's ₹37,500 cr coal gasification push matters for its energy future

Media Coverage

Why India's ₹37,500 cr coal gasification push matters for its energy future
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2026
May 14, 2026

Kisan Kalyan to Viksit Bharat: PM Modi Delivers Jobs, Markets & Dignity Across Rural and Industrial India