ಪ್ರಸ್ತುತ ಜಗತ್ ಪರ್ಯಟನೆ ಅಭಿಯಾನ ಕೈಗೊಂಡಿರುವ ಭಾರತೀಯ ನೌಕಾ ಯಾನ ಹಡಗು (ಐ.ಎನ್.ಎಸ್.ವಿ.) ತಾರಿಣಿಯ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕರೆ ಮಾಡಿದ್ದರು.
ಐ.ಎನ್.ಎಸ್.ವಿ. ತಾರಿಣಿಯ ಸಿಬ್ಬಂದಿಗೆ ಪ್ರಧಾನಮಂತ್ರಿಯವರು ದೇಶದ ಪರವಾಗಿ ದೀಪಾವಳಿ ಶುಭಾಶಯ ಸಲ್ಲಿಸಿದರು. ಅಭಿಯಾನದಲ್ಲಿ ಯಶಸ್ಸು ಸಿಗಲೆಂದು ಆಶಿಸಿದರು.

22,100 ನಾಟಿಕಲ್ ಮೈಲಿಗಳ ಸುತ್ತಿನ ಪ್ರಯಾಣವನ್ನು ಪ್ರಾರಂಭಿಸುವ ಮುನ್ನ ಐ.ಎನ್.ಎಸ್.ವಿ. ತಾರಿಣಿಯ ಸಿಬ್ಬಂದಿಯನ್ನು ಇದಕ್ಕೂ ಮುನ್ನ 2017ರ ಆಗಸ್ಟ್ 16ರಂದು ಪ್ರಧಾನಮಂತ್ರಿಯವರು ಭೇಟಿ ಮಾಡಿದ್ದರು. 4770 ನಾಟಿಕಲ್ ಮೈಲಿ ಕ್ರಮಿಸಿರುವ ಐ.ಎನ್.ಎಸ್.ವಿ. ತಾರಿಣಿ ಪ್ರಸ್ತುತ ತನ್ನ ಮೊದಲ ನಿಲುಗಡೆಯಾದ ಆಸ್ಟ್ರೇಲಿಯಾದ ಫ್ರೆಮಾಂಟಲ್ ನತ್ತ ಸಾಗಿದ್ದು, 2017ರ ಅಕ್ಟೋಬರ್ 22ರಂದು ಅಲ್ಲಿಗೆ ತಲುಪುವ ನಿರೀಕ್ಷೆ ಇದೆ.
ಈ ಹಡಗಿನಲ್ಲಿರುವ ಸಿಬ್ಬಂದಿಗಳ ಪೈಕಿ ಕೆಲವೇ ದಿನಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಲೆಫ್ಟಿನೆಂಟ್ ಸಿಡಿಆರ್. ವಾರ್ತಿಕಾ ಜೋಶಿ ಮತ್ತು ಲೆಫ್ಟಿನೆಂಟ್ ಪಾಯಲ್ ಗುಪ್ತಾ ಅವರಿಗೆ ಮುಂಚಿತವಾಗಿಯೇ ಪ್ರಧಾನಿ ಜನ್ಮ ದಿನದ ಶುಭಾಶಯ ಸಲ್ಲಿಸಿದರು.


