ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ಗುಜರಾತ್‌ನ ಕೆವಾಡಿಯಾದ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಜಂಟಿಯಾಗಿ ಆಯೋಜಿಸಿರುವ 94 ನೇ ನಾಗರಿಕ ಸೇವೆಗಳ ಪ್ರತಿಷ್ಠಾನ ಕೋರ್ಸ್‌ನ 430 ಶಿಕ್ಷಾರ್ಥಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿಯವರಿಗೆ ಆರಂಬ್ (ಆರಂಭ) ಕುರಿತು ವಿವರಿಸಲಾಯಿತು – ಇದು ಈ ರೀತಿಯ ಮೊದಲ ವಾರದ ವಿಶಿಷ್ಟವಾದ ಸಮಗ್ರ ಅಡಿಪಾಯದ ಕೋರ್ಸ್. ಉತ್ಸಾಹಭರಿತ ಸಂವಾದಾತ್ಮಕ ಅಧಿವೇಶನದಲ್ಲಿ, ಶಿಕ್ಷಾರ್ಥಿಗಳು ಕೃಷಿ ಮತ್ತು ಗ್ರಾಮೀಣ ಸಬಲೀಕರಣ, ಆರೋಗ್ಯ ಆರೈಕೆ ಸುಧಾರಣೆಗಳು ಮತ್ತು ನೀತಿ ನಿರೂಪಣೆ ಸುಸ್ಥಿರ ಗ್ರಾಮೀಣ ನಿರ್ವಹಣಾ ತಂತ್ರಗಳು, ಸಮಗ್ರ ನಗರೀಕರಣ ಮತ್ತು ಶಿಕ್ಷಣದ ಭವಿಷ್ಯ ಎಂಬ 5 ವಿಷಯಾಧಾರಿತ ಕ್ಷೇತ್ರಗಳ ಕುರಿತು ನಿರೂಪಣೆಗಳನ್ನು ನೀಡಿದರು.

ವಿಶ್ವಬ್ಯಾಂಕ್ ಅಧ್ಯಕ್ಷರಾದ ಶ್ರೀ ಡೇವಿಡ್ ಮಾಲ್ಪಾಸ್, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ, ಇನ್ಸ್ಟಿಟ್ಯೂಟ್ ಆಫ್ ಫ್ಯೂಚರ್ ಮತ್ತು ವೈವಿಧ್ಯತೆಯ ವಿಶ್ವವಿದ್ಯಾಲಯದ (ಯೂನಿವರ್ಸಿಟಿ ಆಫ್ ಡೈವರ್ಸಿಟಿ) ವಿಶ್ಲೇಷಕರು ಪ್ರಧಾನ ವಿಷಯಗಳ ಕುರಿತು ನಡೆಸಿದ ವಿವಿಧ ಅಧಿವೇಶನಗಳ ಮುಖ್ಯಾಂಶಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಿದರು.

ನಂತರ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ, ಭಾರತೀಯ ನಾಗರಿಕ ಸೇವೆಗಳ ಸ್ಥಾಪಕ ಪಿತಾಮಹರೆಂದು ಪರಿಗಣಿಸಲ್ಪಟ್ಟ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಾದ ಅಕ್ಟೋಬರ್ 31 ರಂದು ಈ ಕೋರ್ಸ್ ಅನ್ನು ಆಯೋಜಿಸಲಾಗುತ್ತಿರುವುದು ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು.

“ಭಾರತೀಯ ನಾಗರಿಕ ಸೇವೆ ಸರ್ದಾರ್ ಪಟೇಲ್ ಅವರಿಗೆ ಸಾಕಷ್ಟು ಋಣಿಯಾಗಿದೆ. ಇಲ್ಲಿಂದ ‘ಏಕತೆಯ ಪ್ರತಿಮೆ’ ಇರುವ ಕೆವಾಡಿಯಾದಲ್ಲಿ, ನಮ್ಮ ರಾಷ್ಟ್ರಕ್ಕಾಗಿ ಏನಾದರೂ ಮಾಡಲು ನಾವೆಲ್ಲರೂ ಪ್ರೇರಣೆ ಮತ್ತು ಚೈತನ್ಯವನ್ನು ಕಂಡುಕೊಳ್ಳೋಣ. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ”ಎಂದು ಅವರು ಹೇಳಿದರು.

ಅರಂಬ್ ಫೌಂಡೇಶನ್ ಕೋರ್ಸ್ ಅನ್ನು ಆಡಳಿತದಲ್ಲಿ ಒಂದು ಉನ್ನತ ಮಾದರಿಯ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿರುವ ಅನನ್ಯ ಭವಿಷ್ಯದ ಕೇಂದ್ರಿತವಾಗಿರುವ ಕೋರ್ಸ್ ಎಂದು ಪ್ರಧಾನ ಮಂತ್ರಿ ಬಣ್ಣಿಸಿದರು.

“ಈ ಕೋರ್ಸ್, ಆರಂಬ್, ರಾಷ್ಟ್ರ ಕೇಂದ್ರಿತ ಮತ್ತು ಭವಿಷ್ಯದ ಕೇಂದ್ರಿತವಾಗಿದೆ. ಇದು ಆಡಳಿತದಲ್ಲಿ ಒಂದು ಉನ್ನತ ಮಾದರಿಯ ಬದಲಾವಣೆಯನ್ನು ಉಂಟುಮಾಡುತ್ತದೆ, ಆ ಮೂಲಕ ಜನರು ಪ್ರತ್ಯೇಕವಾಗಿ, ಗೌಪ್ಯವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ. ಬದಲಾಗಿ, ಜನರು ಒಟ್ಟಾಗಿ ಮತ್ತು ಸಮಗ್ರವಾಗಿ ಕೆಲಸ ಮಾಡುತ್ತಾರೆ ”

ತರಬೇತಿ ಪಡೆಯುವವರು ವಿಷಯಗಳನ್ನು ನೋಡುವ ವಿಧಾನವನ್ನು ಬದಲಾಯಿಸುವಂತೆ ಅವರು ಪ್ರಚೋದಿಸಿದರು, ಕೆಲವೊಮ್ಮೆ ಪರಿಭಾಷೆಯಲ್ಲಿನ ಬದಲಾವಣೆಯು ದೃಷ್ಟಿಕೋನವನ್ನು ಬದಲಾಯಿಸಲು ಸಹ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
“ನಾವು ವಿಷಯಗಳನ್ನು ಹೇಗೆ ನೋಡುತ್ತೇವೆ ಎಂಬುದನ್ನು ಬದಲಾಯಿಸೋಣ. ಬದಲಾದ ಪರಿಭಾಷೆಯಂತಹವು ಸಹ ಸಹಾಯ ಮಾಡುತ್ತದೆ. ಈ ಹಿಂದೆ ಜನರು ಹಿಂದುಳಿದ ಜಿಲ್ಲೆಗಳೆಂದು ಹೇಳುತ್ತಲೇ ಬಂದಿದ್ದರು. ಇಂದು ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಹೇಳುತ್ತೇವೆ. ಯಾವುದೇ ಸ್ಥಳ ನಿಯುಕ್ತಿಯು ಏಕೆ ಶಿಕ್ಷೆಯ ಸ್ಥಳ ನಿಯುಕ್ತಿಯಾಗಿರಬೇಕು. ಇದನ್ನು ಸದವಕಾಶದ ಸ್ಥಳ ನಿಯುಕ್ತಿಯೆಂದು ಏಕೆ ನೋಡಬಾರದು ”

ಶಿಕ್ಷಣಾರ್ಥಿಗಳು ತೋರಿಸಿದ ಬದ್ಧತೆ ಮತ್ತು ಅವರ ಹೊಸ ಆಲೋಚನೆಗಳನ್ನು ಶ್ಲಾಘಿಸುತ್ತಾ, ಜಾಗತಿಕ ಅತ್ಯುತ್ತಮ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳ ಕುರಿತು ಈ ವಿಶಿಷ್ಟ ತರಬೇತಿ ಕೋರ್ಸ್ ಒದಗಿಸಿದ ಮಾನ್ಯತೆ, ನೀತಿ ನಿರೂಪಣೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ತಮ್ಮ ವೃತ್ತಿಜೀವನದಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ಭರವಸೆ ವ್ಯಕ್ತಪಡಿಸಿದರು.

ವ್ಯವಸ್ಥೆಯಲ್ಲಿನ ಗೌಪ್ಯತೆಗಳು ಮತ್ತು ಅಧಿಕಾರ ಶ್ರೇಣಿಗಳನ್ನು ನಿರ್ಮೂಲನೆ ಮಾಡಲು ಅವರು ಶ್ರಮಿಸಬೇಕು ಎಂದು ಅವರು ಹೇಳಿದರು. “ಗೌಪ್ಯತೆಗಳು ಮತ್ತು ಅಧಿಕಾರ ಶ್ರೇಣಿಗಳ ಉಪಸ್ಥಿತಿಯು ನಮ್ಮ ವ್ಯವಸ್ಥೆಗೆ ಸಹಾಯ ಮಾಡುವುದಿಲ್ಲ. ನಾವು ಯಾರೇ ಆಗಿರಲಿ, ನಾವು ಎಲ್ಲಿದ್ದರೂ ರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ” ಎಂದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India attracts $70 billion investment in AI infra, AI Mission 2.0 in 5-6 months: Ashwini Vaishnaw

Media Coverage

India attracts $70 billion investment in AI infra, AI Mission 2.0 in 5-6 months: Ashwini Vaishnaw
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜನವರಿ 2026
January 31, 2026

From AI Surge to Infra Boom: Modi's Vision Powers India's Economic Fortress