ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ರಶ್ಯಾ ಅಧ್ಯಕ್ಷ ಶ್ರೀ ವ್ಲಾದಮೀರ್ ಪುಟಿನ್ ಅವರು ಇಂದು ದೂರವಾಣಿ ಸಂಭಾಷಣೆಯ ಮೂಲಕ 2019ನೇ ವರ್ಷದ ಹಾರ್ದಿಕ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿ ಅವರು ರಶ್ಯಾದಲ್ಲಿ ಇಂದು ಕ್ರಿಸ್ಮಸ್ ಆಚರಣೆಯ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ಮತ್ತು ರಶ್ಯಾದ ಜನತೆಗೆ ಕ್ರಿಸ್ಮಸ್ ಶುಭಾಶಯ ಕೋರಿದರು.

ಕಳೆದ ವರ್ಷದ ಅವಧಿಯಲ್ಲಿ ಉಭಯ ದೇಶಗಳು ವಿಶೇಷವಾಗಿ ಮತ್ತು ಸ್ವತಂತ್ರವಾಗಿ ವ್ಯೂಹಾತ್ಮಕ ಸಹಭಾಗಿತ್ವದಲ್ಲಿ ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ಇಬ್ಬರು ನಾಯಕರೂ ತೃಪ್ತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು. ವಿಸ್ತ್ರತ ಯಶಸ್ವೀ ಮಾತುಕತೆಗಳನ್ನು ಸ್ಮರಿಸಿಕೊಂಡ ಇಬ್ಬರು ನಾಯಕರೂ ಮೇ ತಿಂಗಳಲ್ಲಿ ಸೋಚಿಯಲ್ಲಿ ನಡೆದ ಮತ್ತು ವಾರ್ಷಿಕ ಶೃಂಗಕ್ಕಾಗಿ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷ ಶ್ರೀ ಪುಟಿನ್ ಅವರು ಹೊಸದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಮಾತುಕತೆಗಳನ್ನು ನೆನಪಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳಲ್ಲಿ ಚಲನೆಯನ್ನು ಕಾಪಾಡಿಕೊಂಡು ಹೋಗಲು ಒಪ್ಪಿಕೊಂಡರು. ಅಧ್ಯಕ್ಷ ಶ್ರೀ ಪುಟಿನ್ ಅವರು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗದ ಆಹ್ವಾನವನ್ನು ಪುನರುಚ್ಚರಿಸಿದರು.

ರಕ್ಷಣಾ ಮತ್ತು ಭಯೋತ್ಪಾದನಾ ನಿಗ್ರಹ ಸಹಿತ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತಂತೆ ಚರ್ಚಿಸಲಾಯಿತು.

ಉಭಯ ನಾಯಕರೂ ಭಾರತ –ರಶ್ಯಾ ಸಹಕಾರವು ಜಾಗತಿಕ ಬಹು-ಆಯಾಮದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಿಕೊಂಡರು. ಆದುದರಿಂದ ಉಭಯ ದೇಶಗಳೂ ವಿಶ್ವ ಸಂಸ್ಥೆ , ಬ್ರಿಕ್ಸ್ ಮತ್ತು ಎಸ್.ಸಿ.ಒ. ಹಾಗೂ ಇತರ ಬಹು-ಆಯಾಮದ ಸಂಸ್ಥೆಗಳಲ್ಲಿ ತಮ್ಮ ನಿಕಟ ಸಮಾಲೋಚನೆಯನ್ನು ಮುಂದುವರಿಸಲಿವೆ.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India accelerates ‘semiconductor drive’ with Rs 1.64 lakh crore investment plan

Media Coverage

India accelerates ‘semiconductor drive’ with Rs 1.64 lakh crore investment plan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜೂನ್ 2026
June 29, 2026

PM Modi Advancing National Strength Through Unity, Innovation and Janbhagidari