ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿರುವಳ್ಳುವರ್ ದಿನದಂದು ತಮಿಳಿನ ಮಹಾನ್ ತತ್ವಜ್ಞಾನಿ, ಕವಿ ಮತ್ತು ಚಿಂತಕರಾದ ತಿರುವಳ್ಳುವರ್ ಅವರನ್ನು ಸ್ಮರಿಸಿದ್ದಾರೆ. ಧೀಮಂತ ತಿರುವಳ್ಳವರ್ ಅವರ ವಚನ/ಪದ್ಯಗಳು ತಮಿಳು ಸಂಸ್ಕೃತಿಯ ಸಾರ ಮತ್ತು ನಮ್ಮ ತಾತ್ವಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ.
"ವೈವಿಧ್ಯಮಯ ವಿಷಯಗಳ ಬಗ್ಗೆ ಆಳವಾದ ಒಳನೋಟ ನೀಡುವ ಅವರ ಸಮಯಾತೀತವಾದ ಕೃತಿ, ತಿರುಕ್ಕುರಲ್, ಸ್ಪೂರ್ತಿಯ ಸೆಲೆಯಾಗಿದೆ, " ಎಂದು ಶ್ರೀ ಮೋದಿ ಹೇಳಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ತಿರುವಳ್ಳುವರ್ ದಿನದಂದು, ನಾವು ನಮ್ಮ ನಾಡಿನ ಶ್ರೇಷ್ಠ ದಾರ್ಶನಿಕರು, ಕವಿಗಳು ಮತ್ತು ಚಿಂತಕರಲ್ಲಿ ಒಬ್ಬರಾದ ಮಹಾನ್ ವ್ಯಕ್ತಿ ತಿರುವಳ್ಳುವರ್ ಅವರನ್ನು ಸ್ಮರಿಸುತ್ತೇವೆ. ಅವರ ವಚನ/ಪದ್ಯಗಳು ತಮಿಳು ಸಂಸ್ಕೃತಿಯ ಸಾರ ಮತ್ತು ನಮ್ಮ ತಾತ್ವಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಅವರ ಬೋಧನೆಗಳು ಸದಾಚಾರ, ಕರುಣೆ ಮತ್ತು ನ್ಯಾಯವನ್ನು ಒತ್ತಿಹೇಳುತ್ತವೆ. ವಿವಿಧ ವಿಚಾರಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಅವರ ಸಮಯಾತೀತ ಕೃತಿಯಾದ ತಿರುಕ್ಕುರಲ್, ಸ್ಫೂರ್ತಿಯ ಸೆಲೆಯಾಗಿದೆ. ನಮ್ಮ ಸಮಾಜಕ್ಕಾಗಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ.”
On Thiruvalluvar Day, we remember one of our land’s greatest philosophers, poets, and thinkers, the great Thiruvalluvar. His verses reflect the essence of Tamil culture and our philosophical heritage. His teachings emphasize righteousness, compassion, and justice. His timeless…
— Narendra Modi (@narendramodi) January 15, 2025