ಅ. ಒಡಂಬಡಿಕೆ ಪಟ್ಟಿ/ ತಿಳಿವಳಿಕೆ ಪತ್ರಗಳ ವಿನಿಮಯ

ಕ್ರಮ ಸಂಖ್ಯೆ

ತಿಳಿವಳಿಕೆ ಪತ್ರ/ಒಡಂಬಡಿಕೆಗಳ ಹೆಸರು

ಭಾರತದ ಕಡೆಯಿಂದ ವಿನಿಮಯ

ಬಾಂಗ್ಲಾದೇಶ ಕಡೆಯಿಂದ ವಿನಿಯಮ

1

ಭಾರತ ಮತ್ತು ಬಾಂಗ್ಲಾದೇಶದ ಸಾಮಾನ್ಯ ಗಡಿ ಭಾಗದ ಕುಶಿಯಾರ ನದಿಯಿಂದ ನೀರನ್ನು ಹಿಂಪಡೆಯುವ ಕುರಿತು ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯ ಮತ್ತು ಬಾಂಗ್ಲಾದೇಶದ ಜಲ ಸಂಪನ್ಮೂಲ ಸಚಿವಾಲಯದ ನಡುವೆ ತಿಳಿವಳಿಕೆ ಪತ್ರದ ವಿನಿಮಯ

ಶ್ರೀ ಪಂಕಜ್ ಕುಮಾರ್, ಕಾರ್ಯದರ್ಶಿ, ಜಲ ಶಕ್ತಿ ಸಚಿವಾಲಯ

ಶ್ರೀ ಕಬೀರ್ ಬಿನ್ ಅನ್ವರ್, ಹಿರಿಯ ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ

2

ಬಾಂಗ್ಲಾದೇಶದ ರೈಲ್ವೆ ಸಿಬ್ಬಂದಿಗೆ ಭಾರತದಲ್ಲಿ ತರಬೇತಿ ನೀಡುವ ಕುರಿತು ರೈಲ್ವೆ ಸಚಿವಾಲಯ [ರೈಲ್ವೆ ಮಂಡಳಿ] ಭಾರತ ಸರ್ಕಾರ ಮತ್ತು ಬಾಂಗ್ಲಾದೇಶದ ರೈಲ್ವೆ ಸಚಿವಾಲಯ ನಡುವೆ ತಿಳಿವಳಿಕೆ ಪತ್ರದ ವಿನಿಯಮ

ಶ್ರೀ ವಿನಯ್ ಕುಮಾರ್ ತ್ರಿಪಾಠಿ, ಅಧ್ಯಕ್ಷರು, ರೈಲ್ವೆ ಮಂಡಳಿ

ಶ್ರೀ. ಮುಹಮ್ಮದ್ ಇಮ್ರಾನ್, ಭಾರತದಲ್ಲಿ ಬಾಂಗ್ಲಾದೇಶದ ರಾಯಭಾರಿ

3

ಬಾಂಗ್ಲಾದೇಶದ ರೈಲ್ವೆಗಾಗಿ ಎಫ್.ಒ.ಐ.ಎಸ್ ನಂತಹ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಇತರೆ ಮಾಹಿತಿ ತಂತ್ರಜ್ಞಾನ ಅಪ್ಲಿಕೇಶನ್ ಒದಗಿಸಲು ಭಾರತ ಸರ್ಕಾರದ ರೈಲ್ವೆ ಸಚಿವಾಲಯ [ರೈಲ್ವೆ ಮಂಡಳಿ] ಹಾಗೂ ಬಾಂಗ್ಲಾದೇಶ ಸರ್ಕಾರದ ರೈಲ್ವೆ ಸಚಿವಾಲಯ ನಡುವೆ ತಿಳಿವಳಿಕೆ ಪತ್ರದ ವಿನಿಯಮ

ಶ್ರೀ ವಿನಯ್ ಕುಮಾರ್ ತ್ರಿಪಾಠಿ, ಅಧ್ಯಕ್ಷರು, ರೈಲ್ವೆ ಮಂಡಳಿ

ಶ್ರೀ. ಮುಹಮ್ಮದ್ ಇಮ್ರಾನ್, ಭಾರತದಲ್ಲಿ ಬಾಂಗ್ಲಾದೇಶದ ರಾಯಭಾರಿ

4

ಬಾಂಗ್ಲಾದೇಶದ ನ್ಯಾಯಾಂಗ ಅಧಿಕಾರಿಗಳಿಗೆ ಭಾರತದಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಕುರಿತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ಬಾಂಗ್ಲಾದೇಶದ ಸವೋಚ್ಛ ನ್ಯಾಯಾಲಯದ ನಡುವೆ ತಿಳಿವಳಿಕೆ ಪತ್ರದ ವಿನಿಯಮ

ಶ್ರೀ ವಿಕ್ರಮ್ ಕೆ. ದೊರೈಸ್ವಾಮಿ, ಬಾಂಗ್ಲಾದೇಶದಲ್ಲಿನ ಭಾರತದ ರಾಯಭಾರಿ

ಶ್ರೀ ಮೊಹಮ್ಮದ್ ಗೋಲಮ್ ರಬ್ಬಾನಿ, ರಿಜಿಸ್ಟ್ರಾರ್ ಜನರಲ್, ಬಾಂಗ್ಲಾದೇಶ ಸುಪ್ರೀಂ ಕೋರ್ಟ್

5

ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ [ಸಿ.ಎಸ್.ಐ.ಆರ್] ಮತ್ತು ಬಾಂಗ್ಲಾದೇಶದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ನಡುವೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಹಕಾರ ಕುರಿತ ತಿಳಿವಳಿಕೆ ಪತ್ರದ ವಿನಿಯಮ

ಡಾ. ಎನ್. ಕಲೈಸೆಲ್ವಿ, ಮಹಾನಿರ್ದೇಶಕರು, ಸಿ.ಎಸ್.ಐ.ಆರ್

ಡಾ. ಮೊಹಮ್ಮದ್ ಅಪ್ತಾಬ್ ಅಲಿ ಶೇಖ್, ಅಧ್ಯಕ್ಷರು, ಬಿಸಿಎಸ್ಐಆರ್

6

ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಸಹಕಾರ ಕುರಿತ ತಿಳಿವಳಿಕೆ ಪತ್ರದ ವಿನಿಮಯ

ಶ್ರೀ ಡಿ. ರಾಧಾಕೃಷ್ಣನ್, ಎನ್.ಎಸ್.ಐ.ಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು,

ಡಾ. ಶಹಜಹನ್ ಮೊಹಮೂದ್, ಬಿ.ಎಸ್.ಸಿ.ಎಲ್ ಅಧ್ಯಕ್ಷರು ಮತ್ತು ಸಿಇಒ

7

ಪ್ರಸಾರ ವಲಯದಲ್ಲಿ ಸಹಕಾರ ಕುರಿತು ಪ್ರಸಾರ ಭಾರತಿ ಮತ್ತು ಬಾಂಗ್ಲಾದೇಶ ಟೆಲಿವಿಷಯನ್ [ಬಿಟಿವಿ] ನಡುವೆ ತಿಳಿವಳಿಕೆ ಪತ್ರದ ವಿನಿಯಮ

ಶ್ರೀ ಮಾಯಾಂಕ್ ಕುಮಾರ್ ಅಗರ್ವಾಲ್, ಸಿಇಒ, ಪ್ರಸಾರ ಭಾರತಿ

ಶ್ರೀ ಶೋರ್ಹಬ್ ಹೊಸೈನಿ, ನಿರ್ದೇಶಕರು, ಬಿಟಿವಿ

. ಉದ್ಘಾಟನೆಗೊಂಡ/ಘೋಷಿಸಿದ/ಅನಾವರಣಗೊಂಡ ಯೋಜನೆಗಳ ಪಟ್ಟಿ

1. ಅನಾವರಣಗೊಂಡ ಮೈಟ್ರೀ ವಿದ್ಯುತ್ ಘಟಕ – ಖುಲ್ನಾದ ರಾಂಫಲ್ ನಲ್ಲಿ 1320 [660x2] ಮೆಗವ್ಯಾಟ್ ಸೂಪರ್ ಕ್ರಿಟಿಕಲ್ ಕಲ್ಲಿದ್ದಲು –ಚಾಲಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಅಂದಾಜು 2 ಶತಕೋಟಿ ಡಾಲರ್ ಮೊತ್ತದಲ್ಲಿ ಸ್ಥಾಪಿಸಲಾಗುತ್ತಿದ್ದು, ಭಾರತದ ರಿಯಾಯಿತಿ ಹಣಕಾಸು ಯೋಜನೆಯಡಿ 1.6 ಶತಕೋಟಿ ರೂಪಾಯಿ ಭಾರತೀಯ ಅಭಿವೃದ್ಧಿ ನೆರವನ್ನು ಈ ಯೋಜನೆಗೆ ನೀಡಲಾಗುತ್ತಿದೆ.

2. ರುಪ್ಸಾ ಸೇತುವೆ ಉದ್ಘಾಟನೆ – 5.13 ಕಿಲೋಮೀಟರ್ ಉದ್ಧದ ರುಪ್ಸಾ ಸೇತುವೆ 64.7 ಕಿಲೋಮೀಟರ್ ಖುಲ್ನಾ – ಮಂಗ್ಲಾ ಬಂದರಿನ ಸಿಂಗಲ್ ಟ್ರ್ಯಾಕ್ ಬ್ರಾಡ್ ಗೇಜ್ ರೈಲು ಈ ಯೋಜನೆಯ ಪ್ರಮುಖ ಭಾಗವಾಗಿದ್ದು, ಮೊದಲ ಬಾರಿಗೆ ಮೊಂಗ್ಲಾ ಬಂದರನ್ನು ಖುಲ್ನಾದೊಂದಿಗೆ ಸಂಪರ್ಕಿಸುತ್ತದೆ. ಆದ್ದರಿಂದ ಕೇಂದ್ರ ಮತ್ತು ಉತ್ತರ ಬಾಂಗ್ಲಾದೇಶ ಮತ್ತು ಭಾರತದ ಗಡಿ ಪತ್ರಪೊಲೆ ಹಾಗೂ ಪಶ್ವಿಮ ಬಂಗಾಳದ ಗೆಡೆಯನ್ನು ಈ ಮಾರ್ಗ ಸಂಪರ್ಕಿಸುತ್ತದೆ.

3. ರಸ್ತೆ ನಿರ್ಮಾಣ ಪರಿಕರ ಮತ್ತು ಯಂತ್ರೋಪಕರಣಗಳ ಪೂರೈಕೆ – ಬಾಂಗ್ಲಾದೇಶದ ಹೆದ್ದಾರಿ ಮತ್ತು ರಸ್ತೆ ಇಲಾಖೆಗೆ 25 ಪ್ಯಾಕೇಜ್ ಗಳಡಿ ರಸ್ತೆ ಮತ್ತು ನಿರ್ವಹಣೆ ಪರಿಕರಗಳು ಹಾಗೂ ಯಂತ್ರೋಪಕರಣಗಳನ್ನು ಪೂರೈಸುವುದನ್ನು ಇದು ಒಳಗೊಂಡಿದೆ.

4. ಖುಲ್ನಾ ದರ್ಶನ್ ರೈಲ್ವೆ ಮಾರ್ಗದ ಸಂಪರ್ಕ ಯೋಜನೆ – ಇದು ಗಡೆ ದರ್ಶನಾದಿಂದ ಖುಲ್ನಾಗೆ ಪ್ರಸ್ತುತ ಗಡಿಯಾಚೆಗಿನ ಮಾರ್ಗವನ್ನು ಸಂಪರ್ಕಿಸುವ, ಅಸ್ಥಿತ್ವದಲ್ಲಿರುವ [ಬ್ರಾಡ್ ಗೇಜ್ ಮಾರ್ಗದ ದ್ವಿಪಥ] ಮೂಲ ಸೌಕರ್ಯವನ್ನು ಮೇಲ್ದರ್ಜೆಗೇರಿಸುತ್ತದೆ. ಆ ಮೂಲಕ ಎರಡೂ ದೇಶಗಳ ನಡುವೆ ವಿಶೇಷವಾಗಿ ಢಾಕಾಗಿ ಮಾತ್ರವಲ್ಲದೇ ಭವಿಷ್ಯದಲ್ಲಿ ಮೊಂಗ್ಲಾದ ಬಂದರಿಗೆ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 312.48 ದಶಲಕ್ಷ ಡಾಲರ್.

5. ಪರ್ಬತಿಪುರ್ – ಕೌನಿಯಾ ರೈಲ್ವೆ ಮಾರ್ಗ – ಹಾಲಿ ಇರುವ ಮೀಟರ್ ಗೇಜ್ ಮಾರ್ಗವನ್ನು ದ್ವಿಪಥ ಮಾರ್ಗವಾಗಿ ಪರಿವರ್ತಿಸುವ 120.41 ದಶಲಕ್ಷ ಡಾಲರ್ ಅಂದಾಜು ವೆಚ್ಚದ ಯೋಜನೆಯಾಗಿದೆ. ಈ ಯೋಜನೆಯು ಹಾಲಿ ಗಡಿಯಾಚೆಯ ಬಿರೋಲ್ [ಬಾಂಗ್ಲಾದೇಶ] – ರಾಧಿಕಾಪುರ್ [ಪಶ್ಚಿಮ ಬಂಗಾಳ] ನಡುವೆ ಸಂಪರ್ಕಿಸುತ್ತದೆ ಮತ್ತು ದ್ವಿಪಕ್ಷೀಯ ರೈಲ್ವೆ ಸಂಪರ್ಕವನ್ನು ವೃದ್ಧಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's crude supply secure, LPG production increased: Hardeep Puri

Media Coverage

India's crude supply secure, LPG production increased: Hardeep Puri
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಮಾರ್ಚ್ 2026
March 13, 2026

Resilient India Under PM Modi: Diplomatic Mastery, Youth Power, and Unstoppable Progress