1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಜರ್ಮನಿ ಒಕ್ಕೂಟದ  ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಅವರು ಐದನೇ ಸುತ್ತಿನ ಅಂತರ ಸರ್ಕಾರ ಸಮಾಲೋಚನೆ (ಐಜಿಸಿ) ಸಲುವಾಗಿ ಅಕ್ಟೋಬರ್ 31ರಿಂದ ನವೆಂಬರ್ 1, 2019ರ ವರೆಗೆ ಭಾರತಕ್ಕೆ ಭೇಟಿ ನೀಡಿದ್ದರು.  ಮರ್ಕೆಲ್ ಅವರ ಜೊತೆ ವಿದೇಶಾಂಗ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ಮತ್ತು ಕೃಷಿ ಸಚಿವರುಗಳ ಹಾಗೂ ಅಧಿಕೃತ ನಿಯೋಗವಿತ್ತು. ಅಲ್ಲದೆ ಚಾನ್ಸಲರ್ ಮರ್ಕೆಲ್ ಅವರ ಜತೆ ಜರ್ಮನಿಯ ವಾಣಿಜ್ಯ ನಾಯಕರನ್ನೊಳಗೊಂಡ ನಿಯೋಗವೂ ಇತ್ತು. ಭಾರತ ಭೇಟಿಯ ವೇಳೆ ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್  ಅವರು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. 

 

2. ಚಾನ್ಸಲರ್ ಡಾ. ಆಂಗೆಲಾ ಮರ್ಕೆಲ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾನ್ಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ನಿಯಮಗಳು, ಮುಕ್ತ ಹಾಗೂ ನ್ಯಾಯಯುತ ವ್ಯಾಪಾರ ಮತ್ತು ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ, ಪರಸ್ಪರ ವಿಶ್ವಾಸ ಮತ್ತು ಗೌರವ ನೀಡುವಂತಹ ಭಾರತ ಮತ್ತು ಜರ್ಮನಿ ಕಾರ್ಯತಂತ್ರ ಪಾಲುದಾರಿಕೆಯನ್ನು ಹೊಂದಲಿವೆ ಎಂದು ಪುನರುಚ್ಚರಿಸಿದರು. ಆವಿಷ್ಕಾರ ಮತ್ತು ಸರಹದ್ದು ತಂತ್ರಜ್ಞಾನದ ಮೂಲಕ ಡಿಜಿಟಲ್ ಪರಿವರ್ತನೆಗೆ ಜಂಟಿಯಾಗಿ ಮುನ್ನಡೆಯುವುದು, ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಹವಾಮಾನ ವೈಪರೀತ್ಯಕ್ಕೆ ಸಹಕಾರ ನೀಡುವ ಮೂಲಕ ಸುಸ್ಥಿರ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿ, ಕೌಶಲ್ಯ ಹೊಂದಿದ ಕಾರ್ಮಿಕರ ಕಾನೂನುಬದ್ಧ ಸಂಚಾರದ ಮೂಲಕ ಜನರ ನಡುವೆ ಸಂವಹನ ಸೃಷ್ಟಿಸುವುದು ಮತ್ತು ಬಹು ವಿಧದ ಸಂಸ್ಥೆಗಳ ಸಾಮರ್ಥ್ಯವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಮೂಲಕ ವಿಶ್ವಾಸಾರ್ಹ ಅಂತಾರಾಷ್ಟ್ರೀಯ ವ್ಯವಸ್ಥೆ ರೂಪಿಸಲು ನೆರವು ನೀಡುವುದು ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಸಮಾಲೋಚನೆಗಳು ನಡೆದವು. 

 

I. ಡಿಜಿಟಲ್ ಪರಿವರ್ತನೆ ಮತ್ತು ಕೃತಕ ಬುದ್ಧಿಮತ್ತೆ ವಲಯದಲ್ಲಿ ಸಹಕಾರ ಬಲವರ್ಧನೆ

 

3. ಕೃತಕ ಬುದ್ಧಿಮತ್ತೆ ಜಗತ್ತಿನ ಜನರ ಜೀವನದ ಮೇಲೆ ಮೂಲಭೂತ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಗುರುತಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮತ್ತು ಆ ಮೂಲಕ ಆವಿಷ್ಕಾರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡಲು ತ್ವರಿತ ಕ್ರಮಗಳನ್ನು ಕೈಗೊಳ್ಳಲು ಮತ್ತು ಅಭಿವೃದ್ಧಿ ಸಹಕಾರ ಹೊಂದಲು ಪರಸ್ಪರ ಒಗ್ಗೂಡಿ ಕೆಲಸ ಮಾಡಲು ಉಭಯ ದೇಶಗಳು ಆಸಕ್ತಿ ತೋರಿದವು.

 

4. ಉಭಯ ದೇಶಗಳು ಡಿಜಿಟಲ್ ಪಾಲುದಾರಿಕೆ ಸಾಮರ್ಥ್ಯವೃದ್ಧಿಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದವು ಮತ್ತು ಆ ಮೂಲಕ ನಿರಂತರ ಸಂವಾದ ಹಾಗೂ ಸಮನ್ವಯದ ಮೂಲಕ  ಮುಂದಿನ ತಲೆಮಾರಿನ ತಂತ್ರಜ್ಞಾನಗಳಲ್ಲಿ ಸಹಭಾಗಿತ್ವ ಸಾಧಿಸುವ ಕಾರ್ಯ ಚುರುಕುಗೊಳಿಸಲು ತೀರ್ಮಾನಿಸಿದವು. ಭಾರತ ಮತ್ತು ಜರ್ಮನಿ ಸಾಮಾಜಿಕ ಅನುಕೂಲತೆಗಳಿಗಾಗಿ ಕೃತಕ ಬುದ್ಧಿಮತ್ತೆ ಪರಿಹಾರಗಳು ಹಾಗೂ ಐಒಟಿ ಅಭಿವೃದ್ಧಿಗೆ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿ, ಆ ಅನುಕೂಲಗಳ ಪಾಲುದಾರಿಕೆಯೊಂದಿಗೆ ಪರಸ್ಪರ ಬೆಳವಣಿಗೆ ಹೊಂದುವ ಆಶಯವನ್ನು ಹೊಂದಿವೆ. 

 

5. ಕೃತಕ ಬುದ್ಧಿಮತ್ತೆ ಕುರಿತಂತೆ ಉಭಯ ದೇಶಗಳು ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿವೆ, ಸಮಾಜದಲ್ಲಿನ ಒಟ್ಟಾರೆ ಸಂಶೋಧನೆ ಮತ್ತು ಆವಿಷ್ಕಾರದ ತಮ್ಮ ಸಾಮರ್ಥ್ಯವನ್ನು ಗುರುತಿಸಿವೆ. ಆರೋಗ್ಯ, ಸಾರಿಗೆ, ಪರಿಸರ ಮತ್ತು ಕೃಷಿ ವಲಯಗಳಲ್ಲಿ ಹೆಚ್ಚಿನ ಒತ್ತು ನೀಡಿ, ಆ ಮೂಲಕ ನಮ್ಮ ಹೋಲಿಕೆಯ ಲಾಭದ ಸಹಕಾರ ಮತ್ತು ಬಲವೃದ್ಧಿಗೆ ವ್ಯಾಪಕ ಅವಕಾಶಗಳಿರುವುದನ್ನು ಗುರುತಿಸಲಾಯಿತು. ಭಾರತ ಮತ್ತು ಜರ್ಮನಿ ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಬಹುವಿಧದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಸಹಕಾರ ಹೊಂದಲು ಬಯಸಿವೆ ಮತ್ತು ತಮ್ಮ ಪರಿಣಿತಿ ಹಾಗೂ ಉತ್ತಮ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲಿವೆ. ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ-ಜರ್ಮನಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಮೂಲಕ ಪರಸ್ಪರ ಹಿತಾಸಕ್ತಿಯ ವಲಯಗಳನ್ನು ಗುರುತಿಸಲು 2020ರಲ್ಲಿ ಬರ್ಲಿನ್ಅಲ್ಲಿ ದ್ವಿಪಕ್ಷೀಯ ಕಾರ್ಯಾಗಾರ ಆಯೋಜಿಸಲು ಒಪ್ಪಿದವು. 

 

6. ಸ್ಪರ್ಧಾತ್ಮಕ ಸಂಶೋಧನಾ ಯೋಜನೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ಗುರುತಿಸುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಭಾರತ ಮತ್ತು ಜರ್ಮನಿ ಎರಡೂ ಕೃತಕ ಬುದ್ಧಿಮತ್ತೆ, ಅಭಿವೃದ್ಧಿ ಮತ್ತು ಬಳಕೆಯ ಬಹು ಹಂತದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಚಟುವಟಿಕೆಗಳು ಹಾಗೂ ಜಂಟಿ ಬಹು ವಿಧದ ಚಟುವಟಿಕೆಗಳನ್ನು ನಿಕಟವಾಗಿ ಕೈಗೊಳ್ಳಲು ಪರಸ್ಪರ ಒಪ್ಪಿದವು. ಇದರಲ್ಲಿ ಜಾಗತಿಕ ಮೌಲ್ಯ ಸರಣಿಯ ಭಾಗವಾಗಿ ಭಾರತ ಮತ್ತು ಜರ್ಮನಿಯ ಕಂಪನಿಗಳ ನಡುವೆ ಸಹಕಾರ ಹೊಂದುವ ಅಂಶವೂ ಸೇರಿವೆ. ಆರೋಗ್ಯ ವಲಯದಲ್ಲಿ ಕೃತಕ ಬುದ್ಧಿಮತ್ತೆ ಬಳಸುವ ಕುರಿತು ಭಾರತ ಮತ್ತು ಜರ್ಮನಿ ಸಹಭಾಗಿತ್ವವನ್ನು ವೃದ್ಧಿಸುವ ವಿಭಿನ್ನ ಅವಕಾಶಗಳಿಗೆ ಒತ್ತು ನೀಡಲು ಉಭಯ ದೇಶಗಳು ಸಮ್ಮತಿಸಿದವು. ಸೆಪ್ಟೆಂಬರ್ 2019ರಲ್ಲಿ ಬರ್ಲಿನ್ ನಲ್ಲಿ ನಡೆದ ಮೊದಲ ಸಂಬಂಧಪಟ್ಟವರ ಸಭೆಯನ್ನು ಸ್ವಾಗತಿಸಿದ ಅವರು, ಭಾರತದಲ್ಲಿ ನಡೆಯಲಿರುವ ಮತ್ತೊಂದು ಅಂತಹ ಸಭೆಗೆ ನೆರವು ನೀಡಲು ಒಪ್ಪಿದವು. 

 

7. ಉಭಯ ನಾಯಕರು ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ ಸಹಭಾಗಿತ್ವವನ್ನು ಸ್ವಾಗತಿಸಿದರು. ಅದರಡಿ ಆಹಾರ ವ್ಯರ್ಥವಾಗುವುದನ್ನು ಮತ್ತು ನಷ್ಟವಾಗುವುದನ್ನು ತಗ್ಗಿಸುವ ಜೊತೆಗೆ ಸಂಪನ್ಮೂಲಗಳನ್ನು ಉಳಿಕೆ ಮಾಡುವುದು ಮತ್ತು ದಕ್ಷತೆ ಹೆಚ್ಚಿಸುವ ಗುರಿಯೊಂದಿಗೆ ನಿಖರ ಕೃಷಿ ಪದ್ಧತಿಯನ್ನು ಉತ್ತೇಜಿಸುವುದಾಗಿದೆ. ಅಲ್ಲದೆ ಉಭಯ ದೇಶಗಳ ಕೃಷಿ ಸಚಿವಾಲಯಗಳು ಕೃತಕ ಬುದ್ಧಿಮತ್ತೆ ಕುರಿತ ಕಾನೂನು ತೊಡಕುಗಳನ್ನು ಎದುರಿಸಲು ಮುಕ್ತ ತರಬೇತಿ ದತ್ತಾಂಶ ಕೇಂದ್ರವನ್ನು ಸ್ಥಾಪಿಸುವ ಗುರಿ ಹೊಂದಿದವು. ಉಭಯ ದೇಶಗಳು ನೀತಿ ಆಯೋಗ ಹಾಗೂ ಜರ್ಮನಿ ಕಂಪನಿಗಳೊಂದಿಗೆ 2019ರ ಸೆಪ್ಟೆಂಬರ್ 30ರಂದು ನಡೆಸಿದ ದುಂಡುಮೇಜಿನ ಸಭೆಯನ್ನು ಸ್ವಾಗತಿಸಿದವು. ಖಾಸಗಿ ಪಾಲುದಾರಿಕೆಯ ಖಾತ್ರಿಯೊಂದಿಗೆ ಭಾರತದ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ವೃದ್ಧಿಸಲು ಹೊಸ ಅವಕಾಶಗಳ ಅನ್ವೇಷಣೆಗೆ ಪ್ರಯತ್ನಿಸಲಾಯಿತು. ದುಡಿಯುವ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ಆಗುವ ಸಂಕೀರ್ಣತೆಗಳ ಕುರಿತ ಸಂಶೋಧನೆಯನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳುವ ಕುರಿತು ಹಾಗೂ ಸಮಾಜ ಮತ್ತು ಆರ್ಥಿಕತೆಯ ಮೇಲೆ ಆಗಲಿರುವ ಪರಿಣಾಮಗಳ ಬಗ್ಗೆ ಜಂಟಿ ಕಾರ್ಯಾಗಾರಗಳ ಬಗ್ಗೆ ಚರ್ಚಿಸಲು ಉಭಯ ದೇಶಗಳು ಸಮ್ಮತಿಸಿದವು.

 

8. ಜರ್ಮನಿ ಮತ್ತು ಭಾರತ ಡಿಜಿಟಲ್ ವಲಯದಲ್ಲಿ ವೇಗದ ವ್ಯವಹಾರಿಕ ಸಹಕಾರವನ್ನು ಬಯಸುತ್ತವೆ, ಆದ್ದರಿಂದಾಗಿ ಜರ್ಮನಿ ಮತ್ತು ಭಾರತದ ಡಿಜಿಟಲ್ ಕಂಪನಿಗಳು ಪರಸ್ಪರ ರಾಷ್ಟ್ರಗಳಲ್ಲಿ ಮಾರುಕಟ್ಟೆ ಅವಕಾಶಗಳ ವ್ಯಾಪ್ತಿ ಮತ್ತು ದ್ವಿಪಕ್ಷೀಯ ಹೂಡಿಕೆಗಳ ಕುರಿತು ಜಂಟಿಯಾಗಿ ಕಾರ್ಯನಿರ್ವಹಿಸಲು ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ವೃದ್ಧಿಸಲು ಸಂಬಂಧಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಿರ್ಧರಿಸಲಾಯಿತು. 

 

9. ಡಿಜಿಟಲ್ ಸಮಾಲೋಚನೆಯನ್ನು ಇನ್ನಷ್ಟು ವಿಸ್ತರಿಸಲು ಹಾಗೂ ಬರ್ಲಿನ್ ನಲ್ಲಿ 2017ರ ಮೇ 30ರಂದು ಸಹಿ ಹಾಕಿದ ಡಿಜಿಟಲ್ ವಲಯದಲ್ಲಿ – ಸಬಲೀಕರಣ ಮತ್ತು ಆರ್ಥಿಕ ಪರಿಣಾಮಗಳು – ಕುರಿತ ಜಂಟಿ ಘೋಷಣೆಯನ್ನು ಭಾರತ ಮತ್ತು ಜರ್ಮನಿ ನೆನಪು ಮಾಡಿಕೊಂಡವು. ಉಭಯ ದೇಶಗಳು ಭಾರತೀಯ ಮತ್ತು ಜರ್ಮನಿ ವಾಣಿಜ್ಯ ಸಮುದಾಯಗಳು ‘ಡಿಜಿಟಲ್ ಪರಿಣಿತರ ತಂಡ’ ರಚನೆಗೆ ಮುಂದಾಗಿರುವ ಕ್ರಮವನ್ನು ಸ್ವಾಗತಿಸಿದವು. ಈ ತಂಡದಲ್ಲಿ ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ಉದ್ಯಮಿಗಳಿದ್ದು ಅವರು ಪರಸ್ಪರ ಸಹಕಾರದ ಹಲವು ವಲಯಗಳನ್ನು ಗುರುತಿಸುವರು ಮತ್ತು ಉಭಯ ದೇಶಗಳಿಗೆ ಅನುಕೂಲಕಾರಿಯಾಗುವಂತಹ ಭವಿಷ್ಯದ ನೀತಿ ನಿರೂಪಣೆಗೆ ಅಗತ್ಯವಾದ ಶಿಫಾರಸ್ಸುಗಳನ್ನು ನೀಡಲಿದೆ. 

 

10. ಉಭಯ ದೇಶಗಳು ಜರ್ಮನಿಯ ಕೈಗಾರಿಕೆಗಳ ವೇದಿಕೆ 4.0 ಮತ್ತು ಮುಂದಿನ ಸಿಐಐ ಸ್ಮಾರ್ಟ್ ಉತ್ಪಾದನಾ ವೇದಿಕೆಯ ನಡುವೆ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕೆ ಸಂಬಂಧ ಜೋಡಣೆಗೆ ಒಪ್ಪಿದವು, ಇದರಲ್ಲಿ ಉನ್ನತೀಕರಣ, ಐಟಿ ಸಂಬಂಧಿ ಸಂಪರ್ಕಜಾಲ ವ್ಯವಸ್ಥೆಯಲ್ಲಿ ಭದ್ರತೆ, ಟೆಸ್ಟ್ ಬೆಡ್ ಗಳು ಮತ್ತು ವ್ಯಾಪಾರಿ ಮಾದರಿಗಳು ಹಾಗೂ ಬಿ2ಬಿ ವೇದಿಕೆಗಳು ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ 4.0 ಭವಿಷ್ಯದ ಡಿಜಿಟಲ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ ವಿಷಯಗಳು ಸೇರಿವೆ. ಭಾರತ ಮತ್ತು ಜರ್ಮನಿ ಉಭಯ ದೇಶಗಳಲ್ಲಿನ ನವೋದ್ಯಮಕ್ಕೆ ಪೂರಕ ವ್ಯವಸ್ಥೆ ಸ್ಥಾಪಿಸುವ ಕ್ಷಿಪ್ರ ಬೆಳವಣಿಗೆಗಳಿಗೆ ಆದ್ಯತೆ ನೀಡುವ ವಿಷಯವನ್ನು ಬಲವಾಗಿ ಪ್ರತಿಪಾದಿಸಿ ಉದ್ಯಮಿಗಳು ಚಿಂತನೆಗಳನ್ನು ವಿನಿಮಯ ಮತ್ತು ಯೋಜನೆಗಳನ್ನು ಹಂಚಿಕೆ ಮಾಡಿಕೊಳ್ಳುವ ಕ್ರಮಗಳಿಗೆ ಉತ್ತೇಜನ ನೀಡುವುದನ್ನು ಸ್ವಾಗತಿಸಲಾಯಿತು. ಉಭಯ ನಾಯಕರು ನವೋದ್ಯಮಗಳ ನಡುವೆ ತ್ವರಿತ ಸಹಭಾಗಿತ್ವಕ್ಕೆ ಆದ್ಯತೆ ನೀಡುವುದನ್ನು ಗುರುತಿಸಿದರು. ಆ ನಿಟ್ಟಿನಲ್ಲಿ ನವೋದ್ಯಮಗಳಿಗೆ ಬೂಟ್ ಕ್ಯಾಂಪ್ (ತರಬೇತಿ ಶಿಬಿರ)ಗಳನ್ನು ನಡೆಸುವ ಪ್ರಸ್ತಾವವನ್ನು ಸ್ವಾಗತಿಸಿದವು. ಇದರಿಂದಾಗಿ ಡಿಜಿಟಲ್ ಕ್ಷೇತ್ರದಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಿ ಪೂರಕ ವ್ಯವಸ್ಥೆ ಸೃಷ್ಟಿಸಲು ಸಹಾಯಕವಾಗಲಿದೆ. 

 

11. ಅಂತಾರಾಷ್ಟ್ರೀಯ ಕಾನೂನಿನಂತೆ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಮಾನವ ಕೇಂದ್ರಿತ ಅಭಿವೃದ್ಧಿಯ ಹೊಣೆಗಾರಿಕೆ ನಿಭಾಯಿಸಲು ಅಂತಾರಾಷ್ಟ್ರೀಯ ವೇದಿಕೆ ಸ್ಥಾಪಿಸುವ ಪ್ರಾಮುಖ್ಯತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆ(ಜಿಪಿಎಐ)ನಲ್ಲಿ ಭಾಗವಹಿಸುವ ಅವಕಾಶವನ್ನು ಭಾರತ ಮತ್ತು ಜರ್ಮನಿ ಸ್ವಾಗತಿಸಿದವು. 

 

12. ಸೈಬರ್ ಭದ್ರತೆ ಸಂಬಂಧಿಸಿದಂತೆ ಉತ್ತಮ ಸಂಭಾವ್ಯ ಅನುಸಂಧಾನಕ್ಕೆ ಪರಸ್ಪರ ಸಮಾಲೋಚನೆ ನಡೆಸಲು ಭಾರತ ಮತ್ತು ಜರ್ಮನಿ ಸಮ್ಮತಿಸಿದವು ಹಾಗೂ ಆ ನಿಟ್ಟಿನಲ್ಲಿ ಪರಸ್ಪರ ಸಹಕಾರದ ವಲಯಗಳನ್ನು ಗುರುತಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹ ನಿರ್ಧರಿಸಿವು. 

 

II. ಆವಿಷ್ಕಾರ ಮತ್ತು ಜ್ಞಾನದ ಮೂಲಕ ವ್ಯಾಪಾರ ಹಾಗೂ ಹೂಡಿಕೆಯ ಆಯಾಮಗಳ ವಿಸ್ತರಣೆ

 

13. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಸಂಬಂಧ ವೃದ್ಧಿಗೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸಿದವು. ಎರಡೂ ದೇಶಗಳು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆಯನ್ನು ಖಚಿತಪಡಿಸಿದವು ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದದ ಕುರಿತು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಸಮಾಲೋಚನೆಗಳನ್ನು ಪುನರಾರಂಭಿಸಲು ಪ್ರಯತ್ನಗಳನ್ನು ತೀವ್ರಗೊಳಿಸಲು ಒಪ್ಪಿದವು. 

 

14. ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ)ಅನ್ನು ಕೇಂದ್ರವಾಗಿಟ್ಟುಕೊಂಡು ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ಹೊಂದಲು ಬಲವಾದ ಬೆಂಬಲ ನೀಡಲು ಉಭಯ ದೇಶಗಳು ತಮ್ಮ ನಿಲುವು ಪುನರುಚ್ಚರಿಸಿದವು. ಡಬ್ಲ್ಯೂಟಿಒದ ವ್ಯಾಜ್ಯ ಇತ್ಯರ್ಥ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಮರು ಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲು ಹಾಗೂ ವಿಶೇಷ ಹಾಗೂ ತಾರತಮ್ಯದಿಂದ ನೋಡುವ, ಸರ್ವಾನುಮತ ಆಧಾರಿತ ನಿರ್ಣಯ ಕೈಗೊಳ್ಳುವುದು ಹಾಗೂ ಅಭಿವೃದ್ಧಿ ಧ್ಯೇಯ ಮತ್ತಿತರ ಮೂಲ ತತ್ವಗಳನ್ನು ಕಡೆಗಣಿಸದೆ ಡಬ್ಲ್ಯೂಟಿಒನಲ್ಲಿ ಸುಧಾರಣೆಗಳನ್ನು ತರಲು ಉಭಯ ದೇಶಗಳು ಒಪ್ಪಿದವು. ಈ ನಿಟ್ಟಿನಲ್ಲಿ ಕಜಖಸ್ತಾನದ ನೂರ್ ಸುಲ್ತಾನ್ ನಲ್ಲಿ ನಡೆಯಲಿರುವ ಮುಂದಿನ ಡಬ್ಲ್ಯೂಟಿಒ ಸಚಿವರ ಸಮಾವೇಶದಲ್ಲಿ ವಿಷಯವನ್ನು ಮಂಡಿಸಲು ಉಭಯ ದೇಶಗಳು ತೀರ್ಮಾನಿಸಿದವು. 

 

15. ದ್ವಿಪಕ್ಷೀಯ ಹೂಡಿಕೆಗಳಲ್ಲಿ ಸುಸ್ಥಿರ ಬೆಳವಣಿಗೆಯ ಬಗ್ಗೆ ಉಭಯ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಮೇಕ್ ಇನ್ ಇಂಡಿಯಾ ಮಿತ್ತಲ್ ಸ್ಟ್ಯಾಂಡ್(ಎಂಐಐಎಂ) ಕಾರ್ಯಕ್ರಮದ ಯಶಸ್ಸಿನಿಂದಾಗಿ ಸುಮಾರು 135 ಜರ್ಮನ್ ಸ್ಟ್ಯಾಂಡ್ ಹಾಗೂ ಕುಟುಂಬ ಒಡೆತನದ ಕಂಪನಿಗಳು 1.2 ಬಿಲಿಯನ್ ಯೂರೋಗಳಿಗೂ ಅಧಿಕ ಹೂಡಿಕೆಯನ್ನು ಘೋಷಿಸಿರುವುದನ್ನು ಸ್ವಾಗತಿಸಿದರು. ಐರೋಪ್ಯ ಒಕ್ಕೂಟದ ಜೊತೆ ಹಾಗೂ ಐರೋಪ್ಯ ಒಕ್ಕೂಟದ ಸದಸ್ಯರ ಜೊತೆ ಶೀಘ್ರವೇ ಬಂಡವಾಳ ಹೂಡಿಕೆ ರಕ್ಷಣಾ ಒಪ್ಪಂದ ಅಂತಿಮಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸಲು ಅವರು ಒಪ್ಪಿದರು. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿ ಬಂಡವಾಳ ಹೂಡುವ ಜರ್ಮನಿ ಕಂಪನಿಗಳಿಗೆ ನೇರ ಬಂಡವಾಳ ಹೂಡಿಕೆ ಖಾತ್ರಿ ಒದಗಿಸುವ ನೀತಿಯನ್ನು ಪುನರ್ ಸ್ಥಾಪಿಸುವ ಜರ್ಮನಿಯ ನಿರ್ಧಾರವನ್ನು ಭಾರತ ಸ್ವಾಗತಿಸಿತು. ತ್ವರಿತಗತಿಯ ಕಾರ್ಯತಂತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಬಲಿಷ್ಠ ವ್ಯವಹಾರಿಕ ವಿಶ್ವಾಸವೃದ್ಧಿಯಾಗಿದೆ ಎಂದು ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. 

 

16. ಉಭಯ ದೇಶಗಳ ನಾಯಕರು ಜರ್ಮನಿ ಭಾರತ ನವೋದ್ಯಮ ವಿನಿಮಯ ಕಾರ್ಯಕ್ರಮ(ಜಿಐಎನ್ಎಸ್ಇಪಿ)ಅಡಿಯಲ್ಲಿ ನವೋದ್ಯಮ ಪೂರಕ ವ್ಯವಸ್ಥೆಯ ನಡುವೆ ವಿನಿಮಯಕ್ಕೆ ಉತ್ತೇಜನ ನೀಡುವ ಕಾರ್ಯ ಯಶಸ್ವಿಯಾಗಿರುವುದನ್ನು ಶ್ಲಾಘಿಸಿದರು. ಹೊಸ ಜಿಐಎನ್ಎಸ್ಇಪಿ ಕಾರ್ಯಕ್ರಮದ ಮೂಲಕ ಇನ್ನಷ್ಟು ಬಲವರ್ಧನೆ ಮತ್ತು ಪ್ರಾಮುಖ್ಯತೆ ನೀಡುವುದನ್ನು ಅವರು ಸ್ವಾಗತಿಸಿ ಭಾರತದಲ್ಲಿ ಜರ್ಮನಿಯ ನವೋದ್ಯಮಗಳಿಗೆ ಪೂರ್ಣ ಅವಕಾಶ ನೀಡುವ ‘ಮುಂದಿನ ಹಂತದಲ್ಲಿ ಭಾರತ’(ನೆಕ್ಸ್ಟ್ ಸ್ಪೆಪ್ ಇಂಡಿಯಾ) ಅಡಿಯಲ್ಲಿ ಹೊಸ ಜರ್ಮನ್ ಆಕ್ಸಲರೇಟರ್ (ಜಿಎ) ಕಾರ್ಯಕ್ರಮ ಪರಿಚಯಿಸಲು ತೀರ್ಮಾನಿಸಲಾಯಿತು. 

 

17. ಯುವಕರಿಗೆ ಸುಸ್ಥಿರ ಜೀವನೋಪಾಯ ಮತ್ತು ಅವಕಾಶಗಳ ಸೃಷ್ಟಿಗೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಸೃಷ್ಟಿಯ ಸಾಮರ್ಥ್ಯವೃದ್ಧಿಗೆ ಪ್ರಾಮುಖ್ಯತೆ ನೀಡಲು ಉಭಯ ನಾಯಕರು ಒಪ್ಪಿದರು. ಕೌಶಲ್ಯ ಹೊಂದಿದ ದುಡಿಯುವ ಶಕ್ತಿಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರವನ್ನು ತಗ್ಗಿಸಲು ತಮ್ಮ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಲು ಉಭಯ ದೇಶಗಳು ಪರಸ್ಪರ ತಮ್ಮ ಒಪ್ಪಿಗೆಯನ್ನು ಸೂಚಿಸಿದವು. ಈ ನಿಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದವಲ್ಲದೆ ಕ್ಲಸ್ಟರ್ ಆಧಾರಿತ ವ್ಯವಸ್ಥೆ ಸ್ಥಾಪನೆ, ಪಠ್ಯಕ್ರಮ ಅಭಿವೃದ್ಧಿ, ತರಬೇತುದಾರರಿಗೆ ತರಬೇತಿ, ಜಂಟಿ ತರಬೇತಿ ಕೇಂದ್ರಗಳ ಅಭಿವೃದ್ಧಿಗೆ ನೆರವು ಮತ್ತಿತರ ವಲಯಗಳಲ್ಲಿ ಸಹಕಾರದ ಜಂಟಿ ಘೋಷಣೆ ನವೀಕರಿಸುವುದನ್ನು ಉಭಯ ದೇಶಗಳು ಸ್ವಾಗತಿಸಿದವು. ಅಲ್ಲದೆ ನವೀಕರಿಸಬಹುದಾದ ಇಂಧನ, ಇ-ಸಾರಿಗೆ ಮತ್ತು ಪರಿಣಾಮಕಾರಿ ಇಂಧನ ಮತ್ತಿತರ ಆವಿಷ್ಕಾರಿ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಬೆಂಬಲಿಸುವುದು ಮತ್ತು ಅದನ್ನು ಗುರುತಿಸಲು ಉಭಯ ದೇಶಗಳು ಒಪ್ಪಿದವು. ಈ ಪ್ರಯತ್ನಗಳಿಗೆ ಉಭಯ ದೇಶಗಳು ಖಾಸಗಿ ವಲಯವನ್ನು ಉತ್ತೇಜಿಸಲೂ ಸಹ ತೀರ್ಮಾನಿಸಿದವು. 

 

18. ಮ್ಯಾನೇಜರ್ ತರಬೇತಿ ಕಾರ್ಯಕ್ರಮ ‘ಜರ್ಮನಿ ಜೊತೆ ಪಾಲುದಾರಿಕೆಗೆ ಫಿಟ್ ಆಗಿ’ ಚೌಕಟ್ಟಿನಡಿ ಒಂದು ದಶಕಕ್ಕೂ ಅಧಿಕ ಕಾಲದಿಂದ ಇರುವ ಯಶಸ್ವಿ ಸಹಕಾರದ ಕುರಿತು ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈವರೆಗೆ ಈ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಭಾರತೀಯ ಮ್ಯಾನೇಜರ್ ಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಡಿ ಆ ಸಹಕಾರ ಮುಂದುವರಿಯುವುದನ್ನು ಅವರು ಸ್ವಾಗತಿಸಿದರು.

 

19. ಬೆಳವಣಿಗೆ ಹೊಂದುತ್ತಿರುವ ಹೊಸ ತಂತ್ರಜ್ಞಾನಗಳ ಕುರಿತಂತೆ ಮತ್ತಷ್ಟು ರಾಷ್ಟ್ರೀಯ ಉಪಕ್ರಮಗಳ ವಿನಿಮಯವನ್ನು ಉಭಯ ದೇಶಗಳ ನಾಯಕರು ಸ್ವಾಗತಿಸಿದರು. ಜಾಗತಿಕ ಸರಣಿ ಪೂರೈಕೆಯಲ್ಲಿ ಬಾಲಕಾರ್ಮಿಕ ಮತ್ತು ಜೀತಪದ್ಧತಿ ನಿರ್ಮೂಲನೆಗೆ ಜಿ20 ಕಾರ್ಯತಂತ್ರ ಅನುಸರಿಸಲು ಎರಡೂ ದೇಶಗಳು ಒಪ್ಪಿದವು. ಆ ಮೂಲಕ ಜಿ20ರ ನಿಯಮದಂತೆ ವಿಶ್ವದಿಂದ ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಮಾನವ ಕಳ್ಳಸಾಗಣೆ ಹಾಗೂ ಆಧುನಿಕ ಜೀತಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾರ್ಯತಂತ್ರ ರೂಪಿಸಲು ಸಮ್ಮತಿಸಿದವು.

 

20. ಜಿ-20 ಬದ್ಧತೆಯಂತೆ ಸುಸ್ಥಿರ ಪೂರೈಕೆ ಸರಣಿ ತ್ವರಿತಗೊಳಿಸುವುದು ಮತ್ತು ವಿಶ್ವಸಂಸ್ಥೆಯ ವ್ಯಾವಹಾರಿಕ ಹಾಗೂ ಮಾನವ ಹಕ್ಕುಗಳ ಕುರಿತಾದ ಮಾರ್ಗದರ್ಶಿ ಸೂತ್ರದ ಬದ್ಧತೆಯಂತೆ ವಾಣಿಜ್ಯ ವಲಯ, ಮಾನವ ಹಕ್ಕುಗಳಿಗೆ ಗೌರವ ನೀಡಬೇಕೆಂಬ ಹೊಣೆಗಾರಿಕೆಯನ್ನು ಉಭಯ ನಾಯಕರು ಪ್ರಸ್ತಾಪಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಖಾಸಗಿ ವಲಯ ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂಬುದನ್ನು ಉಭಯ ದೇಶಗಳು ಒಪ್ಪಿದವು ಮತ್ತು ಜವಾಬ್ದಾರಿಯುತ ಹಾಗೂ ಸುಸ್ಥಿರ ವ್ಯಾಪಾರ ಪದ್ಧತಿಗಳನ್ನು ಹೊಂದಲು ಪೂರಕ ವ್ಯವಸ್ಥೆಗಳಿಗೆ ಅಗತ್ಯ ಸಹಕಾರ ನೀಡುವ ಬೆಂಬಲವನ್ನು ವ್ಯಕ್ತಪಡಿಸಿದವು. ವಿಶೇಷವಾಗಿ ಭಾರತ ಮತ್ತು ಜರ್ಮನಿಯ ರಾಷ್ಟ್ರೀಯ ಕ್ರಿಯಾ ಯೋಜನೆಗಳ ಅನುಷ್ಠಾನ ಮತ್ತು ಸ್ಥಾಪನೆ ಕುರಿತಂತೆ ಉಭಯ ದೇಶಗಳು ನೈಪುಣ್ಯತೆ ಮತ್ತು ಅನುಭವವನ್ನು ಪರಸ್ಪರ ವಿನಿಯಮ ಮಾಡಿಕೊಳ್ಳಲು ಒಪ್ಪಿದವು. 

 

21. ವೃತ್ತಿ ಸಂಬಂಧಿ ಕಾಯಿಲೆಗಳು ಜರ್ಮನಿಯ ಸಾಮಾಜಿಕ ಅಪಘಾತ ವಿಮೆ ಅಡಿಯಲ್ಲಿ ಹೊಂದಿದ ವಿಕಲಚೇತನರಿಗೆ ಪುನರ್ವಸತಿ ಮತ್ತು ವೃತ್ತಿಪರ ತರಬೇತಿ ವಲಯ (ಡಿಜಿಯುವಿ)ಗಳಲ್ಲಿ ನೌಕರರ ರಾಜ್ಯ ವಿಮಾ ನಿಗಮ ಮತ್ತು  ಭಾರತೀಯರ ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯದ ಅಡಿ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಉಭಯ ದೇಶಗಳು ಸ್ವಾಗತಿಸಿದವು, ಅದರಲ್ಲಿ ವೃತ್ತಿಪರ ಉದ್ಯೋಗಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ವಿಮೆ ಮಾಡಿಸಿರುವ ವಿಕಲಚೇತನರಿಗೆ ಸಾಮಾಜಿಕ ಪುನರ್ವಸತಿ ಕಲ್ಪಿಸುವುದು ಹಾಗೂ ಸಾಮರ್ಥ್ಯವೃದ್ಧಿಯೂ ಸೇರಿದೆ.

 

22. ತೆರಿಗೆ ವಲಯಕ್ಕೆ ಸಂಬಂಧಿಸಿದಂತೆ ಉಭಯ ನಾಯಕರು ಡಿಜಿಟಲೀಕರಣದಿಂದ ಎದುರಾಗಿರುವ ತೆರಿಗೆ ಸವಾಲುಗಳನ್ನು ಹಿಮ್ಮೆಟ್ಟಿಸಲು ಕೈಗೊಂಡಿರುವ ಕ್ರಮಗಳ ಇತ್ತೀಚಿನ ಪ್ರಗತಿಯನ್ನು ಸ್ವಾಗತಿಸಿದರು. ಜೊತೆಗೆ ಜಿ-20ರಡಿ ಎರಡು ಹಂತದ ಕಾರ್ಯ ವಿಧಾನವನ್ನು ಒಳಗೊಂಡಿರುವ ಮಹತ್ವಾಕಾಂಕ್ಷೆಯ ಕಾರ್ಯಯೋಜನೆಗಳನ್ನು ಅನುಮೋದಿಸಿದವು. ಅದರಡಿ ಒಇಸಿಡಿಯಲ್ಲಿ ಬೇಸ್ ಎರೋಷನ್ ಮತ್ತು ಪ್ರಾಫಿಟ್ ಶಿಫ್ಟಿಂಗ್(ಬಿಇಪಿಎಸ್)ನಡಿ ಸಮಗ್ರ ಕಾರ್ಯತಂತ್ರ ಅಭಿವೃದ್ಧಿ ಸೇರಿದೆ ಮತ್ತು ಇದು 2020ರ ವರದಿಯೊಂದಿಗೆ ಅದನ್ನು ಅಂತಿಮಗೊಳಿಸಲಾಗುವುದು. ಎಲ್ಲ ಬಗೆಯ ವಹಿವಾಟಿಗೆ ಸಮಾನ ಅವಕಾಶಗಳನ್ನು ನೀಡುವ ಸಹಮತ ಆಧಾರಿತ ಪರಿಹಾರದ ಒಂದು ಮತ್ತು ಎರಡರ ಅಡಿಯಲ್ಲಿ ಸಕಾಲಿಕವಾಗಿ ನೆರವು ತಲುಪಿಸಲು ಭಾರತ ಮತ್ತು ಜರ್ಮನಿ ಒತ್ತು ನೀಡಲು ಸಹಮತ ವ್ಯಕ್ತಪಡಿಸಿದವು.

 

23. ಉಭಯ ನಾಯಕರು ಭಾರತ – ಜರ್ಮನಿ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ಪುನರಾರಂಭವನ್ನು ಸ್ವಾಗತಿಸಿದರು.  ಅದು ಪರಸ್ಪರ ಆರ್ಥಿಕ ಹಿತಾಸಕ್ತಿಯ ಬಗ್ಗೆ ಮಾಹಿತಿ ವಿನಿಮಯ ಮತ್ತು ಚರ್ಚೆಗೆ ವೇದಿಕೆಯನ್ನು ಒದಗಿಸಲಿದೆ. ಈ ವರ್ಷ ವಿನಿಮಯ ಮಾಡಿಕೊಂಡ ಪ್ರಮುಖ ವಿಷಯಗಳೆಂದರೆ ಡಿಜಿಟಲೀಕರಣದಿಂದ ಎದುರಾದ ತೆರಿಗೆ ಸವಾಲುಗಳು ಮತ್ತು ಹಣಕಾಸು ಹಾಗೂ ವಿಮಾ ವಲಯದ ವಿಷಯಗಳು. 

 

24. ಸಾರಿಗೆ ವಲಯದಲ್ಲಿ ಉಭಯ ನಾಯಕರು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಹಕಾರದ ಜಂಟಿ ಘೋಷಣೆಗೆ ಸಹಿ ಹಾಕಿದ್ದನ್ನು ಉಲ್ಲೇಖಿಸಿದರು ಮತ್ತು ಅದರಿಂದ ತಾಂತ್ರಿಕ ಮತ್ತು ತಾಂತ್ರಿಕೇತರ ತರಬೇತಿಯಲ್ಲಿ ಸಹಭಾಗಿತ್ವ ಸಾಧಿಸಿ, ಮಾಹಿತಿ ಹಾಗೂ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವಾಗುವುದು. ತಂತ್ರಜ್ಞಾನ ಮತ್ತು ತಾಂತ್ರಿಕ ಪರಿಣಿತಿ ವರ್ಗಾವಣೆ ಸೇರಿದಂತೆ ಭಾರತದಲ್ಲಿ ನಾಗರಿಕ ವಿಮಾನಯಾನದ ಸಹ ಅಭಿವೃದ್ಧಿ ಮತ್ತು ಸಹ ಉತ್ಪಾದನೆಗೆ ವ್ಯವಸ್ಥೆಗಳನ್ನು ಕೈಗೊಳ್ಳಲು ಸಂಬಂಧಿಸಿದ ವಾಣಿಜ್ಯ ಉದ್ಯಮಿಗಳನ್ನು ಉತ್ತೇಜಿಸುವುದು ಸಹ ಸೇರಿದೆ. 

 

25. ಭಾರತ ಮತ್ತು ಜರ್ಮನಿ ರೈಲ್ವೆ ಸಹಕಾರದಲ್ಲಿ ಸುದೀರ್ಘ ಮತ್ತು ಯಶಸ್ವಿ ಇತಿಹಾಸವನ್ನು ಹೊಂದಿವೆ. ರೈಲ್ವೆ ವೃತ್ತಿಪರರ ತರಬೇತಿಯಲ್ಲಿ ಹಲವು ವರ್ಷಗಳಿಂದ ಒಗ್ಗೂಡಿ ಕಾರ್ಯ ನಿರ್ವಹಿಸಿರುವುದರಿಂದ ಆಗಿರುವ ಅನುಕೂಲಗಳ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಹೈಸ್ಪೀಡ್ ರೈಲು, ಸೆಮಿ ಹೈಸ್ಪೀಡ್ ರೈಲು ಹಾಗೂ ರೈಲ್ವೆ ಭದ್ರತೆ ಮತ್ತಿತರ ವಿಷಯಗಳಲ್ಲಿ ತಾಂತ್ರಿಕ ಮಾಹಿತಿ ವಿನಿಮಯ ಮುಂದುವರಿಯಲಿದೆ ಮತ್ತು  ವಿಸ್ತರಣೆಗೊಳ್ಳಲಿದೆ. ಭಾರತದಲ್ಲಿ ಹೈಸ್ಪೀಡ್ ರೈಲು ಮತ್ತು ಸೆಮಿ ಹೈಸ್ಪೀಡ್ ರೈಲು ಯೋಜನೆಗಳನ್ನು ಕೈಗೊಳ್ಳಲು ಮುಂದಿನ ಕ್ರಿಯೆಯ ಬಗ್ಗೆ ಉಭಯ ದೇಶಗಳು ಒಂದಾಗಿರುವುದರ ಬಗ್ಗೆ  ನಾಯಕರು ತೃಪ್ತಿ ವ್ಯಕ್ತಪಸಿದರು. 

 

26. ಐಜಿಸಿ 2013ರಲ್ಲಿ ಜಂಟಿ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದನ್ನು ಆಧರಿಸಿದ ಗುಣಮಟ್ಟ ಮೂಲಸೌಕರ್ಯ ಕುರಿತ ಭಾರತ – ಜರ್ಮನಿ ಕಾರ್ಯಕಾರಿ ಸಮಿತಿಯ ನಿಕಟ ಸಹಕಾರದ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಉಭಯ ಸರ್ಕಾರಗಳು ದ್ವಿಪಕ್ಷೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಪ್ಪಂದದ ಬದ್ಧತೆಯನ್ನು ಪುನರುಚ್ಚರಿಸಿದವು. ಜಾಗತಿಕ ಯೋಜನಾ ಗುಣಮಟ್ಟ ಮೂಲಸೌಕರ್ಯ (ಜಿಪಿಕ್ಯೂಐ) ಮೂಲಕ 2020ರ ನಂತರವೂ ಕಾರ್ಯಕಾರಿ ಸಮಿತಿಯನ್ನು ಬೆಂಬಲಿಸಲು ಬಿಎಂಡಬ್ಲ್ಯೂಐ ಉದ್ದೇಶಿಸಿದೆ. 

 

27. ಉಭಯ ದೇಶಗಳ ನಡುವೆ ಹಾಲಿ ಇರುವ ಬಾಹ್ಯಾಕಾಶ ಸಹಕಾರ ಕುರಿತಂತೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಪ್ರಕೋಪ ನಿರ್ವಹಣೆ ಹಾಗೂ ಭೂ ವಿಶ್ಲೇಷಣೆ ಮತ್ತಿತರ ವಲಯಗಳಲ್ಲಿ ಸಂಬಂಧಗಳನ್ನು ಇನ್ನಷ್ಟು ಬಲವರ್ಧನೆ ಮಾಡುವ ಪ್ರಸ್ತಾವವನ್ನು ಸ್ವಾಗತಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಜರ್ಮನ್ ಏರೋಸ್ಪೇಸ್ ಸೆಂಟರ್ (ಡಿಎಲ್ಆರ್) ನಡುವೆ ಸಿಬ್ಬಂದಿ ವಿನಿಮಯ ಅನುಷ್ಠಾನ ವ್ಯವಸ್ಥೆಗೆ ಸಹಿ ಹಾಕಿದ್ದನ್ನು ಅವರು ಸ್ವಾಗತಿಸಿದರು.

 

28. ರಾಷ್ಟ್ರೀಯ ಸರ್ಕಾರಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು ಮತ್ತು ಕಾರ್ಯಕ್ರಮಗಳು, ಬಹು ಉಪಯೋಗಿ ಅಭಿವೃದ್ಧಿ ಬ್ಯಾಂಕ್ ಗಳು ಹಾಗೂ ಹಣಕಾಸು ಕಾರ್ಯತಂತ್ರಗಳನ್ನು ಖಾಸಗಿ ವಲಯ, ಶೈಕ್ಷಣಿಕ ಮತ್ತು ಜ್ಞಾನ ಸಂಸ್ಥೆಗಳನ್ನು ಜಾಗತಿಕ ಪಾಲುದಾರಿಕೆಯಲ್ಲಿ ಒಗ್ಗೂಡಿಸುವ   ಪ್ರಕೋಪ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ(ಸಿ ಡಿ ಆರ್ ಐ)ಅನ್ನು ಸ್ವಾಗತಿಸಿದರು. ಇದು ಪ್ಯಾರಿಸ್ ಹವಾಮಾನ ಒಪ್ಪಂದ ಹಾಗೂ ಸಂಡೈ ಪ್ರಕೋಪ ಅಪಾಯ ತಗ್ಗಿಸುವ ಒಪ್ಪಂದದಲ್ಲಿ ಮಾಡಿಕೊಳ್ಳಲಾದ ಸುಸ್ಥಿರ ಅಭಿವೃದ್ಧಿ ಧ್ಯೇಯಗಳನ್ನು ಸಾಧಿಸಲು ವ್ಯವಸ್ಥೆಗಳನ್ನು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ. ಜರ್ಮನಿ, ಸಿ ಡಿ ಆರ್ ಐ ಗೆ ಬೆಂಬಲ ವ್ಯಕ್ತಪಡಿಸಿತು ಮತ್ತು ಅಧಿಕೃತವಾಗಿ ಸಿ ಡಿ ಆರ್ ಐ ಸೇರುವ ಉದ್ದೇಶವನ್ನು ಪ್ರಕಟಿಸಿತು. ಇದೇ ವೇಳೆ ಭಾರತದೊಂದಿಗೆ ಹವಾಮಾನ ಮತ್ತು ಪ್ರಕೋಪ ಸ್ಥಿತಿ ಸ್ಥಾಪಕತ್ವ ಹಾಗೂ ಸುಸ್ಥಿರ ಮೂಲಸೌಕರ್ಯ ಹೂಡಿಕೆ ವಲಯಗಳಲ್ಲಿ ಕೆಲಸ ಮಾಡುವುದಾಗಿ ತಿಳಿಸಿದೆ. 

 

III. ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕುರಿತಂತೆ ಕೈಗೊಂಡ ಕ್ರಮಗಳು

 

29. ಉಭಯ ನಾಯಕರು ಭೂಮಿಯನ್ನು ರಕ್ಷಿಸುವುದು ಹಾಗೂ ಹವಾಮಾನ ವೈಪರೀತ್ಯ ತಡೆಗೆ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಪರಿಣಾಮಕಾರಿ ಬಳಕೆ ಹೆಚ್ಚಿಸುವುದು ಹಾಗೂ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದನ್ನು ಉತ್ತೇಜಿಸುವುದು ಜಂಟಿ ಹೊಣೆಗಾರಿಕೆ ಆಗಿದೆ ಎಂದು ಒಪ್ಪಿಕೊಂಡರು. ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಪ್ಯಾರಿಸ್ ಒಪ್ಪಂದ ಉಭಯ ದೇಶಗಳ ಸಹಕಾರದಲ್ಲಿ ಮಾರ್ಗದರ್ಶಿ ಮಾರ್ಗಸೂಚಿಗಳಾಗಿ ಕೆಲಸ ಮಾಡುತ್ತಿವೆ. ಭಾರತದಲ್ಲಿನ ಯಶಸ್ವಿ ಇಂಧನ ಮತ್ತು ಸಾರಿಗೆ ಪರಿವರ್ತನೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು, ಜರ್ಮನಿಯಲ್ಲಿ ಉಭಯ ದೇಶಗಳು ಅತ್ಯಂತ ನಿಕಟ ಸಹಕಾರ ಹೊಂದುವುದು, ಪರಸ್ಪರ ಅರಿತುಕೊಳ್ಳುವುದು ಮತ್ತು ಹವಾಮಾನ ಸಂರಕ್ಷಣೆಗೆ  ಬಂಡವಾಳ ಮಾಡಿಕೊಳ್ಳುವುದೂ ಸೇರಿವೆ.

 

30. ಪ್ರಸಕ್ತ ಜಾಗತಿಕ ಮಟ್ಟದಲ್ಲಿನ ಹವಾಮಾನ ಕ್ರಿಯಾ ಯೋಜನೆಯ ಬಗ್ಗೆ ಉಭಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿ ಎಲ್ಲಾ ದೇಶಗಳು ತಮ್ಮ ಪ್ರಯತ್ನಗಳನ್ನು ಚುರುಕುಗೊಳಿಸಬೇಕು ಎಂದು ಕರೆ ನೀಡಿದರು. ಜರ್ಮನಿ ಮತ್ತು ಭಾರತ ಸಮಾನತೆಯ ತತ್ವದ ಆಧಾರದ ಮೇಲೆ ಹವಾಮಾನ ಕ್ರಿಯಾಯೋಜನೆಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದವು ಹಾಗೂ ಭಿನ್ನ ಹೊಣೆಗಾರಿಕೆ ಹಾಗೂ ಅಯಾ ದೇಶಗಳ ಸಾಮರ್ಥ್ಯಗಳನ್ನು ಪ್ಯಾರಿಸ್ ನಲ್ಲಿ ಒಪ್ಪಿಕೊಂಡಂತೆ ಎನ್ ಡಿ ಸಿ ಎಸ್ ನ ಸಂಬಂಧ ಭಿನ್ನ ರಾಷ್ಟ್ರೀಯ ಸನ್ನಿವೇಶಗಳನ್ನು ಒಪ್ಪಿಕೊಂಡು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅದೇ ರೀತಿ ಐರೋಪ್ಯ ಒಕ್ಕೂಟದ ಭಾಗವಾಗಿರುವ ಜರ್ಮನಿ ಮತ್ತು ಭಾರತ ಪ್ಯಾರಿಸ್ ಒಪ್ಪಂದದ ಎರಡನೇ ಕಲಂ ಅನ್ವಯ ಅಭಿವೃದ್ಧಿ ಕಾರ್ಯತಂತ್ರಗಳನ್ನು ರೂಪಿಸುವುದು, ದೀರ್ಘಕಾಲ ಕಡಿಮೆ ಹಸಿರು ಮನೆ ಇಂಧನ ಹೊರಸೂಸುವಿಕೆ ತಗ್ಗಿಸುವ ಸೂತ್ರಗಳನ್ನು ಮಂಡಿಸಲಾಯಿತು. ಐಪಿಸಿಸಿಯ ಇತ್ತೀಚಿನ ಅಧ್ಯಯನದಲ್ಲಿ ಬೆಳಕಿಗೆ ಬಂದಿರುವಂತೆ ಬಡತನ ನಿರ್ಮೂಲನೆ ಮತ್ತು ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ಭಿನ್ನ ರಾಷ್ಟ್ರೀಯ ಸಂದರ್ಭಗಳನ್ನು ಸಮಾನತೆಯ ಆಧಾರದಲ್ಲಿ ಸಾಮಾನ್ಯವಾದರೂ ಭಿನ್ನ ಹೊಣೆಗಾರಿಕೆಗಳು ಮತ್ತು ಸಾಮರ್ಥ್ಯಗಳನ್ನು ಗುರುತಿಸಲಾಯಿತು. 

 

31. ಹಸಿರು ಹವಾಮಾನ ನಿಧಿ( ಗ್ರೀನ್ ಕ್ಲೈಮೆಟ್ ಫಂಡ್ )ಯನ್ನು ಯಶಸ್ವಿಯಾಗಿ ಮತ್ತೆ ತುಂಬಲು ಪ್ರಾಮುಖ್ಯತೆ ನೀಡಲು ಭಾರತ ಮತ್ತು ಜರ್ಮನಿ ಪ್ರಸ್ತಾಪಿಸಿದವು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಇತರೆ ರಾಷ್ಟ್ರಗಳು ತಮ್ಮ ನೆರವನ್ನುಮೊದಲ ಬಾರಿಗೆ ಹಸಿರು ಹವಾಮಾನ ನಿಧಿಗೆ ನೀಡಲಿವೆ. ಪ್ಯಾರಿಸ್ ಒಪ್ಪಂದ ಮತ್ತು ಯು ಎನ್ ಎಫ್ ಸಿ ಸಿ ಸಿ ಅನ್ವಯವಾಗುವಂತೆ ಮೊದಲ ಮರುಪಾವತಿ ಅವಧಿಯಲ್ಲಿ ಪರಿಸರ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಲು ಮಾರುಕಟ್ಟೆ ಕಾರ್ಯತಂತ್ರಗಳಿಗೆ ಸ್ಪಷ್ಟ ನಿಯಮಗಳನ್ನು ಅಳವಡಿಸಿಕೊಳ್ಳುವುದು, ಎರಡಂಕಿ ಲೆಕ್ಕವನ್ನು ಹೊರಗಿಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ರಕ್ಷಿಸುವುದು ಸೇರಿ ಸಿಒಪಿ25ನ ಯಶಸ್ಸಿಗೆ ಎಲ್ಲ ಪಾಲುದಾರರೊಂದಿಗೆ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಛರಿಸಿದರು. 

 

32. ಭಾರತ ಮತ್ತು ಜರ್ಮನಿ ನಡುವೆ ಯಶಸ್ವಿ ಅಭಿವೃದ್ಧಿ ಸಹಕಾರ ಸುಮಾರು 60 ವರ್ಷಗಳಿಂದಲೂ ಇದೆ. ಇಂಧನ, ಸುಸ್ಥಿರ ಮತ್ತು ಹವಾಮಾನ ಸ್ನೇಹಿ ನಗರಾಭಿವೃದ್ಧಿ, ಸಾರಿಗೆ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಹಾಗೂ ಜೀವವೈವಿಧ್ಯ ಸಂರಕ್ಷಣೆ ಸೇರಿ ಪರಸ್ಪರ ಅನುಕೂಲಕಾರಿಯಾದ ಉಭಯ ದೇಶಗಳಿಗೂ ಅಗತ್ಯವಾದ ಅವಧಿಯಲ್ಲಿ ಅದನ್ನು ಅಳವಡಿಸಿಕೊಳ್ಳಲು ಕ್ರಮಗಳನ್ನು ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. 

 

33. ಉದಯಿಸುತ್ತಿರುವ ಮತ್ತು ಕೈಗಾರಿಕೀಕೃತ ಆರ್ಥಿಕತೆಗಳೆರಡರಲ್ಲೂ ಪ್ರಮುಖ ಸವಾಲಿದ್ದು, ಅದಕ್ಕಾಗಿ ಉಭಯ ದೇಶಗಳು ಕಡಿಮೆ ಇಂಗಾಲ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳನ್ನು ಜನಸಾಮಾನ್ಯರಿಗೆ ಒದಗಿಸಲು ಸಮ್ಮತಿಸಿದವು. ಭಾರತ ಮತ್ತು ಜರ್ಮನಿ ರಾಷ್ಟ್ರೀಯ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಳಕೆದಾರರ ಸ್ನೇಹಿ ಮತ್ತು ಪರಿಸರ ಸುಸ್ಥಿರ ಸಾರಿಗೆ ಯೋಜನೆಗಳನ್ನು ರೂಪಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಉಭಯ ದೇಶಗಳು ಕಡಿಮೆ ಇಂಗಾಲದ ಸಾರಿಗೆ ಸೂತ್ರಗಳನ್ನು ಹೊಂದುವ ಸಹಕಾರವನ್ನು ತ್ವರಿತಗೊಳಿಸಲು ಒಪ್ಪಿದವು ಮತ್ತು ಭಾರತ – ಜರ್ಮನಿ ಸಹಭಾಗಿತ್ವದಲ್ಲಿ ಹಸಿರು ನಗರ ಸಾರಿಗೆ ಕುರಿತ ಜಂಟಿ ಘೋಷಣೆಗೆ ಸಹಿ ಹಾಕುವುದನ್ನು ಸ್ವಾಗತಿಸಿದವು. ಈ ಘೋಷಣೆಯಲ್ಲಿ ಜರ್ಮನಿ ಹಸಿರು ನಗರ ಸಾರಿಗೆ ಮೂಲಸೌಕರ್ಯ ಸೇವೆಗಳನ್ನು ಸುಧಾರಿಸಲು ಹೆಚ್ಚುವರಿಯಾಗಿ ಒಂದು ಬಿಲಿಯನ್ ಯೂರೋ ಹಣಕಾಸಿನ ನೆರವು ನೀಡಲು ಸಿದ್ಧವಿರುವುದಾಗಿ ಹೇಳಿದೆ. ಅದರ ಮೂಲಕ ಭಾರತದ ನಗರಗಳಲ್ಲಿ ಸುಸ್ಥಿರ ಸಮಗ್ರ ಮತ್ತು ಸ್ಮಾರ್ಟ್ ಸಾರಿಗೆ ಸೂತ್ರಗಳನ್ನು ವಿನ್ಯಾಸಗೊಳಿಸಿ ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುವುದು. ಇದಲ್ಲದೆ ಉಭಯ ನಾಯಕರು ಈಗಾಗಲೇ ಸ್ಥಾಪನೆಯಾಗಿರುವ ಆಟೋಮೋಟಿವ್ ಕುರಿತ ಜಂಟಿ ಕಾರ್ಯಕಾರಿ ಸಮಿತಿಯಲ್ಲಿ ಸಹಕಾರ ಸೇರಿದಂತೆ ಇ-ಸಾರಿಗೆ ಅಳವಡಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು. 

 

34. ಪ್ಯಾರಿಸ್ ಒಪ್ಪಂದ ಮತ್ತು 2030ರೊಳಗೆ ಸಾಧಿಸಬೇಕಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ದೀರ್ಘಕಾಲದ ಗುರಿಗಳ ಸಾಧನೆಗೆ ಯಶಸ್ವಿ ಜಾಗತಿಕ ಇಂಧನ ಪರಿವರ್ತನ ವ್ಯವಸ್ಥೆಯನ್ನು ಗುರುತಿಸಿ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಉಭಯ ದೇಶಗಳು ನಿರ್ಧರಿಸಿದವು. ಉಭಯ ನಾಯಕರು ಪರಿಣಾಮಕಾರಿ ಇಂಧನ ಬಳಕೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ – ಜರ್ಮನಿ ಇಂಧನ ವೇದಿಕೆ (ಐಜಿಇಎಫ್) ಮತ್ತು ಅಂತಾರಾಷ್ಟ್ರೀಯ ಹವಾಮಾನ ಉಪಕ್ರಮದಡಿ ಬರುವ ಭಾರತ – ಜರ್ಮನಿ ಅಭಿವೃದ್ಧಿ ಸಹಕಾರಗಳ ಕುರಿತು ತೃಪ್ತಿ ವ್ಯಕ್ತಪಡಿಸಿದರು.

 

35. ಉಭಯ ದೇಶಗಳು ಕಲ್ಲಿದ್ದಲು ಸೇರಿದಂತೆ ಬಳಸಿದರೆ ಬರಿದಾಗುವ ಇಂಧನ(ಫಾಸಿಲ್ ಪ್ಯೂಯಲ್) ಸುಸ್ಥಿರ ಪರ್ಯಾಯ ಮಾರ್ಗಗಳನ್ನು ಉತ್ತೇಜಿಸುವ ಅಗತ್ಯ ನೀತಿ ರೂಪಿಸಲು ಬದ್ಧತೆ ತೋರಿದವು. ಸುಸ್ಥಿರ ಇಂಧನ ಪರಿವರ್ತನೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಒಗ್ಗೂಡಿಸಿ ದೊಡ್ಡ ಗ್ರಿಡ್ ಸ್ಥಾಪಿಸುವ ಮೂಲಕ ಗ್ರಿಡ್ ಮೂಲಸೌಕರ್ಯವೃದ್ಧಿ, ಪರಿಣಾಮಕಾರಿ ಇಂಧನ ಬಳಕೆ, ಬೇಡಿಕೆ ಆಧಾರಿತ ನಿರ್ವಹಣೆ, ಸರಳೀಕೃತ ಇಂಧನ ಉತ್ಪಾದನೆ ಮತ್ತು ಸಂಗ್ರಹ ಸಾಮರ್ಥ್ಯ ವೃದ್ಧಿಸುವುದಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. ಇದಲ್ಲದೆ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಬದಲಾವಣೆಯನ್ನು ತರುವಂತಹ ಹಲವು ಮಾರ್ಗಗಳು ವಿಶೇಷವಾಗಿ ಸೌರ ತಂತ್ರಜ್ಞಾನವನ್ನು ಉಭಯ ನಾಯಕರು ಗುರುತಿಸಿದರು. ಜೊತೆಗೆ ಈ ವಲಯದಲ್ಲಿ ವಿಶೇಷವಾಗಿ ವಿದ್ಯುದೀಕರಣಕ್ಕೆ ಮೈಕ್ರೋ ಗ್ರಿಡ್ ಪರಿಹಾರಗಳು ಮತ್ತು ಸಂಗ್ರಹಕೋಶ ಅಳವಡಿಕೆಗೆ ಸಂಭಾವ್ಯ ಅವಕಾಶಗಳನ್ನು ಗುರುತಿಸಲು ನಾಯಕರು ಒಪ್ಪಿಗೆ ಸೂಚಿಸಿದರು. 

 

36. 2015ರಲ್ಲಿ ಸ್ಥಾಪಿಸಿದ ಯಶಸ್ವಿ ಭಾರತ – ಜರ್ಮನಿ ಸೌರ ಸಹಭಾಗಿತ್ವ ಮತ್ತು 2013ರಲ್ಲಿ ಸ್ಥಾಪಿಸಿದ ಹಸಿರು ಇಂಧನ ಕಾರಿಡಾರ್ ಸಹಕಾರದ ಯಶಸ್ಸನ್ನು ಇಬ್ಬರು ನಾಯಕರು ಅನುಮೋದಿಸಿದರು. 2022ರ ವೇಳೆಗೆ 175 ಗಿಗಾವ್ಯಾಟ್  ಮತ್ತು ಆನಂತರದ ವರ್ಷಗಳಲ್ಲಿ 450 ಗಿಗಾವ್ಯಾಟ್ ವಿದ್ಯುತ್ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಮತ್ತು ಸಕಾರಾತ್ಮಕ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದವು. ಜರ್ಮನಿ ಸರ್ಕಾರ 2050ರ ವೇಳೆಗೆ ನವೀಕರಿಸಬಹುದಾದ ಇಂಧನಗಳಿಂದ ಉತ್ಪಾದಿಸಿದ ಶೇಕಡ 80ರಷ್ಟುಅನ್ನು ಒದಗಿಸಲು ತೀರ್ಮಾನಿಸಿತು. ಉಭಯ ನಾಯಕರು ಭಾರತ ಮತ್ತು ಜರ್ಮನಿಯ ಇಂಧನ ಮಾರುಕಟ್ಟೆಗಳಲ್ಲಿ ಹವಾಮಾನ ಸ್ನೇಹಿ ಅಭಿವೃದ್ಧಿ ಉತ್ತೇಜನಕ್ಕೆ ಸಮ್ಮತಿಸಿದರು. 

 

37. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿ ಇಂಧನ ಸೂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ಸುಸ್ಥಿರ ಪರಿಸರಸ್ನೇಹಿ ಕ್ರಮಗಳ ಉತ್ತೇಜನ ದೃಷ್ಟಿಯಿಂದ ಜರ್ಮನಿ ಅಂತಾರಾಷ್ಟ್ರೀಯ ಸೌರಮೈತ್ರಿ (ಐಎಸ್ಎ) ಸೇರ್ಪಡೆಯಾಗಲು ಜರ್ಮನಿ ಉತ್ಸುಕತೆ ತೋರುತ್ತಿರುವುದನ್ನು ಭಾರತ ಸ್ವಾಗತಿಸಿದೆ. 

 

38. ದೆಹಲಿಯಲ್ಲಿ 2019ರ ಫೆಬ್ರವರಿಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಒಪ್ಪಿಕೊಂಡಂತೆ ಭಾರತ – ಜರ್ಮನಿ ಪರಿಸರ ವೇದಿಕೆ(ಐ ಜಿ ಇ ಎನ್ ವಿ ಎಫ್)ಗೆ ಪ್ರಾಮುಖ್ಯತೆ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಚಾನ್ಸಲರ್ ಮರ್ಕೆಲ್ ಅವರು ತಮ್ಮ ಬದ್ಧತೆಯನ್ನು ಪುನರ್ ಪ್ರತಿಪಾದಿಸಿದರು. ಎರಡೂ ದೇಶಗಳ ಒಕ್ಕೂಟ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಹಾಗೂ ಮುನಿಸಿಪಲ್ ಪ್ರಾಧಿಕಾರಗಳ ನಡುವೆ ಸಹಭಾಗಿತ್ವ ಹೊಂದುವುದನ್ನು ಉತ್ತೇಜಿಸಲು ನಿರ್ಧರಿಸಲಾಯಿತು. 

 

39. 2019ರಲ್ಲಿ ಜಲನಿರ್ವಹಣೆ, ತ್ಯಾಜ್ಯ ನಿರ್ವಹಣೆ/ಆರ್ಥಿಕತೆ ಮತ್ತು ಹವಾಮಾನ ವೈಪರೀತ್ಯ ಹಾಗೂ ಜೀವವೈವಿಧ್ಯ ಕುರಿತಂತೆ ಸಹಭಾಗಿತ್ವ ಸಾಧಿಸಲು ಜಂಟಿ ಕಾರ್ಯಕಾರಿ ಗುಂಪುಗಳ ಸಭೆಗಳನ್ನು ಉಭಯ ನಾಯಕರು ಸ್ವಾಗತಿಸಿದರು. “ಜೈವಿಕ ವ್ಯವಸ್ಥೆಯಲ್ಲಿ ಸಾಗರದಲ್ಲಿನ ತ್ಯಾಜ್ಯ ತೆಗೆಯುವ ಉಪಕ್ರಮ” ಆರಂಭಿಸುವುದನ್ನು ಉಭಯ ನಾಯಕರು ಸ್ವಾಗತಿಸಿದರು. 12 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಉಭಯ ನಾಯಕರು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿ, ಸಂಬಂಧಿಸಿದ ಎಲ್ಲರೊಂದಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಮತ್ತು ಸಹಭಾಗಿತ್ವ ಹೊಂದಲು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮತ್ತು ಬದಲಾಗುತ್ತಿರುವ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲಾಯಿತು. ಸಾಗರದ ತ್ಯಾಜ್ಯವನ್ನು ತೆಗೆಯುವ ಕುರಿತಂತೆ ಎರಡು ಜಂಟಿ ಘೋಷಣೆಗಳಿಗೆ ಸಹಿ ಹಾಕುವುದನ್ನು ಉಭಯ ದೇಶಗಳು ಸ್ವಾಗತಿಸಿದವು. 

 

40. ಅರಣ್ಯ ಭೂಮಿ ಪುನರ್ ಸ್ಥಾಪನೆ ಭಾಗ ಮತ್ತು ನವೀಕರಿಸಹುದಾದ ಇಂಧನಗಳ ಸಂಗ್ರಹ ವ್ಯವಸ್ಥೆ ಹಾಗೂ ಗ್ರಿಡ್ ವಿಸ್ತರಣೆಗೆ ಅಂತಾರಾಷ್ಟ್ರೀಯ ಹವಾಮಾನ ಉಪಕ್ರಮಕ್ಕೆ 35 ಯೂರೋ ನೀಡಲು ಉಭಯ ದೇಶಗಳು ಒಪ್ಪಿದವು. ಶೇಕಡ 33ರಷ್ಟು ಅರಣ್ಯ ವ್ಯಾಪ್ತಿ ಹೊಂದುವ ಭಾರತದ ಗುರಿ ಸಾಧನೆಗೆ ಮತ್ತು ಭಾರತದ ಬೋನ್ ಸವಾಲು ಗುರಿ ಗೆ ನೆರವಾಗಲು ಹೊಸ ಮಾದರಿಯ ಅರಣ್ಯ ಭೂಮಿ ಮರುಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಉಭಯ ದೇಶಗಳು ಹವಾಮಾನ ರಕ್ಷಣೆಗೆ ಅರಣ್ಯಗಳು ಅತ್ಯಗತ್ಯ ಎಂಬ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಜೀವವೈವಿಧ್ಯತೆ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ನೆರವಾಗಲು ಸಮ್ಮತಿಸಿದವು. 

 

41. 2020ರ ಜಾಗತಿಕ ಜೀವ ವೈವಿಧ್ಯ ನೀತಿ ಸೇರಿದಂತೆ ಜೀವವೈವಿಧ್ಯ ಮಾತುಕತೆಗಳು(ಸಿಬಿಡಿ)ಯಲ್ಲಿ ಜೀವವೈವಿಧ್ಯ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಮುಂದುವರಿಸುವ ಆಸಕ್ತಿಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು. ಕರಾವಳಿ ಮತ್ತು ಸಾಗರ ಜೀವವೈವಿಧ್ಯ ಸಂರಕ್ಷಣೆ, ಜೀವವೈವಿಧ್ಯ ವರ್ಗಾವಣೆ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆ, ಅಪರೂಪದ ಮರಗಳ ರಕ್ಷಣೆ ಮತ್ತಿತರ ವಿಚಾರಗಳ ಬಗ್ಗೆ ಸಹಕಾರ ಹೊಂದುವ ಕುರಿತು ಚರ್ಚಿಸಲಾಯಿತು. 

 

42. ಉಭಯ ನಾಯಕರು ಮೇ 2017ರಲ್ಲಿ ಸಹಿ ಹಾಕಲಾದ ಸುಸ್ಥಿರ ಅಭಿವೃದ್ಧಿ ಗುರಿ ಕುರಿತಾದ ಜಂಟಿ ಘೋಷಣೆಯಲ್ಲಿ ಈವರೆಗೆ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿ ಆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಯಶಸ್ವಿ ಸಹಕಾರ ಮುಂದುವರಿಕೆಗೆ ತಮ್ಮ ಬದ್ಧತೆ ತೋರಿದರು. ಅಂತಾರಾಷ್ಟ್ರೀಯ ಸ್ಮಾರ್ಟ್ ಸಿಟಿ ಸಂಪರ್ಕ ಜಾಲದಲ್ಲಿ ಭಾರತ ಅಧಿಕೃತವಾಗಿ ಭಾಗಿಯಾಗುವುದಕ್ಕೆ ಜಂಟಿ ಘೋಷಣೆ ಮಾಡುವ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಲಾಯಿತು. 2019-20ನೇ ಸಾಲಿನಲ್ಲಿ ಭಾರತದಲ್ಲಿ ಕಟ್ಟಡ ನಿರ್ಮಾಣ ತಂತ್ರಜ್ಞಾನ ವರ್ಷವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೊಸ ನಿರ್ಮಾಣ ತಂತ್ರಜ್ಞಾನಗಳ ಉತ್ತೇಜನಕ್ಕೆ ಮತ್ತು ಕೈಗೆಟಕುವ ದರಗಳಲ್ಲಿ ವಸತಿ ಯೋಜನೆಯನ್ನು ಒದಗಿಸುವ ಕಾರ್ಯಗಳಲ್ಲಿ ಭಾಗಿಯಾಗಲು ಭಾರತ, ಜರ್ಮನಿಯ ಕಂಪನಿಗಳಿಗೆ ಆಹ್ವಾನ ನೀಡಿತು. ಉಭಯ ದೇಶಗಳು 2020ರಲ್ಲಿ ಜರ್ಮನಿಯಲ್ಲಿ ನಡೆಯಲಿರುವ ನಗರಾಭಿವೃದ್ಧಿ ಕುರಿತ ಜಂಟಿ ಕಾರ್ಯಕಾರಿ ಗುಂಪಿನ ಮುಂದಿನ ಸಭೆಯನ್ನು ಎದುರು ನೋಡುತ್ತಿರುವುದಾಗಿ ಉಭಯ ದೇಶಗಳು ಹೇಳಿದವು. 

 

43. 2016ರಲ್ಲಿ ನಡೆದ ಹ್ಯಾಬಿಟೇಟ್ -3 ಸಮಾವೇಶದಲ್ಲಿ ಗುರುತಿಸಲಾದ ಹೊಸ ನಗರಾಭಿವೃದ್ಧಿ ಅಜೆಂಡಾದ ಗುರಿಗಳ ಸಾಧನೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಉಭಯ ದೇಶಗಳು ತಮ್ಮ ಬದ್ಧತೆ ವ್ಯಕ್ತಪಡಿಸಿದವು. ದ್ವಿಪಕ್ಷೀಯ ಸಹಕಾರ ನೀತಿಯನ್ನು ಕೊಚ್ಚಿ, ಕೊಯಮತ್ತೂರು ಮತ್ತು ಭುವನೇಶ್ವರ ನಗರಗಳಲ್ಲಿ ಅನುಷ್ಠಾನಗೊಳಿಸಿರುವುದಕ್ಕೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತದ ಇನ್ನೂ ಹೆಚ್ಚಿನ ನಗರಗಳಿಗೆ ಅದನ್ನು ವಿಸ್ತರಿಸುವುದಕ್ಕೆ ಸಹಕಾರ ನೀಡಲು ಸಮ್ಮತಿಸಿದರು. 

 

44. ಭಾರತದ ಚತ್ತೀಸ್ ಗಢ ರಾಜ್ಯ ಸಮಗ್ರ ಹವಾಮಾನ ಕ್ರಿಯಾ ನೀತಿಯಲ್ಲಿ ಪಾಲುದಾರಿಕೆ ಹೊಂದಲು ಘೋಷಣೆ ಮಾಡಿರುವುದನ್ನು ಜರ್ಮನಿ ಸ್ವಾಗತಿಸಿತು ಮತ್ತು ಇನ್ನೂ ಹೆಚ್ಚಿನ ಭಾರತದ ನಗರಗಳು, ಒಕ್ಕೂಟ ವ್ಯವಸ್ಥೆ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರ ಅದಕ್ಕೆ ಸೇರಬೇಕೆಂದು ಉತ್ತೇಜಿಸಲಾಯಿತು.

 

45. ದೆಹಲಿಯಲ್ಲಿ 2019ರ ಮಾರ್ಚ್ ನಲ್ಲಿ ನಡೆದ ಕೃಷಿ, ಆಹಾರ ಉದ್ಯಮ ಹಾಗೂ ಗ್ರಾಹಕರ ಹಿತರಕ್ಷಣೆ ಕುರಿತ ಜಂಟಿ ಕಾರ್ಯಕಾರಿ ಸಮಿತಿ ಸಭೆ, ಗುಣಾತ್ಮಕ ಪಾತ್ರವಹಿಸಿದ್ದನ್ನು ಉಭಯ ದೇಶಗಳು ಪ್ರತಿಪಾದಿಸಿದವು. ಆಹಾರ ಭದ್ರತೆ, ಕೃಷಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ, ಕಟಾವಿನ ನಂತರ ನಿರ್ವಹಣೆ ಮತ್ತು ಕೃಷಿ ಉತ್ಪನ್ನಗಳ ಸಾಗಾಣೆ ಮತ್ತಿತರ ವಲಯಗಳಲ್ಲಿ ಹಾಲಿ ಇರುವ ಒಪ್ಪಂದಗಳಲ್ಲಿ ಸಮಗ್ರ ಯೋಜನೆಗಳನ್ನು ರೂಪಿಸುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. 

 

46. ಭಾರತದಲ್ಲಿ ಜರ್ಮನಿ ಕಂಪನಿಗಳಿಗೆ ಕೃಷಿ ವಲಯದಲ್ಲಿ ತಾಂತ್ರಿಕ ಸಹಕಾರ, ಪಶು ಸಂಗೋಪನೆ, ಆಹಾರ ಸಂಸ್ಕರಣೆ ಮತ್ತು ಸರಣಿ ಪೂರೈಕೆ ನಿರ್ವಹಣೆಯಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ  ಉಭಯ ದೇಶಗಳು ಪ್ರಮುಖವಾಗಿ ಪ್ರಸ್ತಾಪಿಸಿದವು. ಅವು ಕಟಾವಿನ ನಂತರದ ನಿರ್ವಹಣೆ ಮತ್ತು ಕೃಷಿ ಉತ್ಪನ್ನಗಳ ಸಾಗಾಣೆ ವಿಷಯದಲ್ಲಿ 2019ರ ಅಂತ್ಯದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ಸ್ವಾಗತಿಸಿದರು. 

 

47. 2019ರ ಜೂನ್ ನಲ್ಲಿ ಘೋಷಿಸಲಾದ ಜಂಟಿ ಘೋಷಣೆಯಂತೆ ರೈತರಿಗೆ ಉತ್ತಮ ಗುಣಮಟ್ಟದ ಬೀಜ ಪೂರೈಕೆ ಮಾಡಲು ಬೀಜ ಅಭಿವೃದ್ಧಿ ವಲಯದಲ್ಲಿ ಸಹಕಾರ ಪಲಪ್ರಧವಾಗಿದ್ದು, ಅದನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿದರು. ಉಭಯ ದೇಶಗಳು ಕೃಷಿ ವಲಯದಲ್ಲಿ ಸಹಕಾರ ಸಂಬಂಧ ವಿಸ್ತರಣೆಗೆ ಬದ್ಧತೆಯನ್ನು ವ್ಯಕ್ತಪಡಿಸಿದರು ಮತ್ತು ಭಾರತದಲ್ಲಿ ಕೃಷಿ ಮಾರುಕಟ್ಟೆ ಅಭಿವೃದ್ಧಿ ಸಾಮರ್ಥ್ಯಗಳನ್ನು ಬೆಂಬಲಿಸಲು ಹೊಸ ದ್ವಿಪಕ್ಷೀಯ ಸಹಕಾರ ಯೋಜನೆಯನ್ನು ಸ್ಥಾಪಿಸಲು ಜಂಟಿ ಘೋಷಣೆಗೆ ಸಹಿ ಹಾಕುವ ಪ್ರಸ್ತಾವವನ್ನು ಸ್ವಾಗತಿಸಿದರು. 

 

48. ಇದಲ್ಲದೆ ಉಭಯ ನಾಯಕರು ನೈಸರ್ಗಿಕ ಸಂಪನ್ಮೂಲಗಳು ವಿಶೇಷವಾಗಿ ನೀರು ಮತ್ತು ಮಣ್ಣು ಕುರಿತು ಸುಸ್ಥಿರ ನಿರ್ವಹಣೆ ಮತ್ತು ಸಹಕಾರ ಮುಂದುವರಿಸುವುದನ್ನು ಉಭಯ ನಾಯಕರು ಸ್ವಾಗತಿಸಿದರು. 

 

IV. ಜನರನ್ನು ಒಂದು ಗೂಡಿಸುವುದು

 

49. ಸಂಸ್ಕೃತಿ ವಲಯದಲ್ಲಿ ಹಾಲಿ ಇರುವ ಬಲಿಷ್ಠ ಸಹಕಾರದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಜರ್ಮನಿ ಹಾಗೂ ಭಾರತೀಯ – ರಾಷ್ಟ್ರೀಯ ವಸ್ತು ಸಂಗ್ರಹಾಲಯ, ನಡುವೆ ಸಹಕಾರ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಹಾಗೂ ವಸ್ತು ಸಂಗ್ರಹಾಲಯಗಳ ಪುನರ್ ಸ್ಥಾಪನಗೆ ಒತ್ತು ನೀಡಲಾಯಿತು.

 

50. ಉಭಯ ದೇಶಗಳು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎ ಐ ಎಫ್ ಎಫ್) ಮತ್ತು ಡೆಸ್ಚರ್ ಫುಟ್ಬಾಲ್ ಬಂಡ್(ಜರ್ಮನ್ ಫುಟ್ಬಾಲ್ ಅಸೋಸಿಯೇಷನ್, ಡಿ ಎಫ್ ಬಿ) ನಡುವೆ ಸಹಭಾಗಿತ್ವ ಒಪ್ಪಂದವನ್ನು ಉಭಯ ದೇಶಗಳು ಸ್ವಾಗತಿಸಿದವು. ಆ ವಲಯದಡಿ ಕೋಚ್ ಗಳ ತರಬೇತಿ, ಪ್ರತಿಭಾನ್ವೇಷಣೆ ಮತ್ತು ತಂತ್ರಜ್ಞಾನ ಆವಿಷ್ಕಾರ ಕುರಿತ ಸಹಕಾರವೂ ಸೇರಿದೆ.

 

51. ನವದೆಹಲಿಯ ನ್ಯಾಯಮಾರ್ಗ್ –2 ರಲ್ಲಿ ಜರ್ಮನ್ ಹೌಸ್ ನಿರ್ಮಿಸುವ ಯೋಜನೆಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಅದರಲ್ಲಿ ಜರ್ಮನಿ ಎಂಬಸ್ಸಿ ಸ್ಕೂಲ್ ಮತ್ತು ಸರ್ಕಾರ ಪ್ರಾಯೋಜಿಸುವ ವಾಣಿಜ್ಯ, ಆರ್ಥಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ನಡೆಸಲು  ಅವಕಾಶ ಮಾಡಿಕೊಡಲಾಗುವುದು. ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ-ಜರ್ಮನಿ ತಂತ್ರಜ್ಞಾನ ಪಾಲುದಾರಿಕೆ ಬೆಳೆಯುತ್ತಿರುವುದನ್ನು ಅದರಲ್ಲಿ ಪ್ರದರ್ಶಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು. 

 

52. ಶಿಕ್ಷಣ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ವಿನಿಮಯ ಕಾರ್ಯಕ್ರಮಗಳು ಹೆಚ್ಚುತ್ತಿರುವ ಬಗ್ಗೆ ಉಭಯ ದೇಶಗಳು ತೃಪ್ತಿ ವ್ಯಕ್ತಪಡಿಸಿದವು ಮತ್ತು “ಎ ನ್ಯೂ ಪ್ಯಾಸೇಜ್ ಟು ಇಂಡಿಯಾ’ (ಎ ಎನ್ ಪಿ ಟಿ ಐ) ಕಾರ್ಯಕ್ರಮದ ಭಾಗವಾಗಿ ಉನ್ನತ ಶಿಕ್ಷಣ ಕುರಿತಂತೆ  ಇಂಡೋ-ಜರ್ಮನ್ ಪಾಲುದಾರಿಕೆ(ಐಜಿಪಿ)ಯನ್ನು ಸ್ವಾಗತಿಸಲಾಯಿತು. ಅಲ್ಲದೆ ಪ್ರಸ್ತುತ ಜರ್ಮನಿಯಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20,800 ಇದ್ದು, ಅದನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಭಾರತದಲ್ಲಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ 2015ರಲ್ಲಿ ಸಹಿ ಹಾಕಲಾದ ಜಂಟಿ ಘೋಷಣೆಯಂತೆ ಜರ್ಮನ್ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಭಾರತೀಯ ಭಾಷೆಗಳ ಬೋಧನೆಯನ್ನು ಉತ್ತೇಜಿಸುವುದಕ್ಕೆ ಪ್ರಾಮುಖ್ಯತೆ ನೀಡಲು ಉಭಯ ದೇಶಗಳು ಒಪ್ಪಿದವು.

 

53. ಭಾರತ – ಜರ್ಮನಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ – ಐ ಜಿ ಎಸ್ ಟಿ ಸಿ 2020ರಲ್ಲಿ ತನ್ನ 10ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದು, ಅದರಲ್ಲಿನ ಸುದೀರ್ಘ ಸಂಶೋಧನಾ ಪಾಲುದಾರಿಕೆಯ ಬಗ್ಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಟಿಯು9 ಮತ್ತು ಐಐಟಿ ವಿಶ್ವವಿದ್ಯಾಲಯ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅದನ್ನು ಭಾರತ – ಜರ್ಮನಿ ಸುಸ್ಥಿರ ಕೇಂದ್ರದಡಿಯಲ್ಲಿ ವಿಸ್ತರಿಸಲು ನಿರ್ಧರಿಸಲಾಯಿತು. 

 

54. ಸಾಂಪ್ರದಾಯಿಕ ಔಷಧಿಗಳ ವಲಯದಲ್ಲಿ ಸಂಶೋಧನೆಗೆ ಮತ್ತಷ್ಟು ಸಹಕಾರ ನೀಡಲು ಫ್ರಾಂಕ್ ಫರ್ಟರ್ ಇನೊವೇಷನ್ ಸೆಂಕಟ್ರಂ ಬಯೋಟೆಕ್ನಾಲಜಿ ಜಿಎಂಬಿಎಚ್(ಎಫ್ ಐ ಝಡ್) ಮತ್ತು ಭಾರತ ಸರ್ಕಾರದ ಆಯುಷ್ ಸಚಿವಾಲಯದಡಿ ಬರುವ ಸ್ವಾಯತ್ತ ಸಂಸ್ಥೆ ಅಖಿಲ ಆಯುರ್ವೇದ ಕೇಂದ್ರ(ಎಐಐಎ) ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಇದರಿಂದ ಆಧುನಿಕ ಔಷಧಗಳ ಜೊತೆಗೆ ಆಯುರ್ವೇದ ತತ್ವಗಳನ್ನು ಸೇರಿಸಿಕೊಂಡು ಸಂಶೋಧನೆ ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಉತ್ತೇಜನ ದೊರಕಲಿದೆ. 

 

55. ಆಯುರ್ವೇದ, ಯೋಗ ಮತ್ತಿತರ ಸಾಂಪ್ರದಾಯಿಕ ಪದ್ಧತಿಗಳು ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂಬುದನ್ನು ಮನಗಾಣಲಾಗಿದೆ ಮತ್ತು ಭಾರತದಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಸಾಂಪ್ರದಾಯಿಕ ಔಷಧಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಹಾಗಾಗಿ ಜನರ ಅನುಕೂಲಕ್ಕಾಗಿ ಸಾಂಪ್ರದಾಯಿಕ ವೈದ್ಯ ಪದ್ಧತಿಗಳು ವಿಶೇಷವಾಗಿ ಯೋಗ ಮತ್ತು ಆಯುರ್ವೇದದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಉಭಯ ದೇಶಗಳು ಒಪ್ಪಿವೆ. ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಸಂಶೋಧನೆ ಹಾಗೂ ಶಿಕ್ಷಣದಲ್ಲಿ  ಸಹಭಾಗಿತ್ವದ ವಲಯಗಳನ್ನು ಗುರುತಿಸಲು ದ್ವಿಪಕ್ಷೀಯ ಯೋಜನೆಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು ಮತ್ತು ಆ ಮೂಲಕ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಸಂಬಂಧಿಸಿದ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. 

 

56. ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ನಿರ್ಧರಿಸಲು ನಿರಂತರ ರಾಯಭಾರ ಸಂವಾದ ಕಾರ್ಯತಂತ್ರ ಸ್ಥಾಪನೆಗೆ ಉಭಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಎರಡೂ ದೇಶಗಳು ಮೊದಲನೇ ಭಾರತ–ಜರ್ಮನಿ ರಾಯಭಾರಿಗಳ ಸಂವಾದವನ್ನು ಆದಷ್ಟು ಬೇಗ ನಡೆಸಲು ಒಪ್ಪಿದವು. 

 

57. ಅಪರಾಧ ಪ್ರಕರಣಗಳಲ್ಲಿ ಪರಸ್ಪರ ಕಾನೂನು ನೆರವು ನೀಡುವ ಒಪ್ಪಂದ(ಎಂಎಲ್ಎಟಿ) ಅಂತಿಮಗೊಳಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಉಭಯ ನಾಯಕರು ಅದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಯನ್ನು ಒಪ್ಪಿದ ನಾಯಕರು ಆದಷ್ಟು ಬೇಗ ಎರಡೂ ಸರ್ಕಾರಗಳು ಭಾರತ – ಜರ್ಮನಿ ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಆಶಯದಂತೆ ಅಂತಿಮಗೊಳಿಸಬೇಕೆಂದು ತೀರ್ಮಾನಿಸಿದರು.

 

58. ಆಗಸ್ಟ್ 2020ಕ್ಕೆ ಮುಂಬೈನ ಜರ್ಮನ್ ರಾಯಭಾರ ಕಚೇರಿಯಲ್ಲಿ ಶೆಂಘೆನ್ ವೀಸಾ ಕೇಂದ್ರವನ್ನು ಸ್ಥಾಪಿಸಲು ಜರ್ಮನ್ ಒಕ್ಕೂಟದ ವಿದೇಶಾಂಗ ಕಚೇರಿಯ ಉದ್ದೇಶವನ್ನು ಭಾರತ ಸ್ವಾಗತಿಸಿತು. ಇದರಿಂದ ವೀಸಾ ವಿತರಣೆಗೆ ಇನ್ನಷ್ಟು ಸಹಕಾರಿಯಾಗಲಿದೆ. 

 

V. ಜಾಗತಿಕ ಹೊಣೆಗಾರಿಕೆ ಹಂಚಿಕೆ

 

59. 2020ಕ್ಕೆ ಕಾರ್ಯತಂತ್ರ ಪಾಲುದಾರಿಕೆ 20ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮತ್ತಷ್ಟು ಅಭಿವೃದ್ಧಿ ಮತ್ತು ಬಲವರ್ಧನೆಗೊಳಿಸುವ ಉದ್ದೇಶದಿಂದ ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ಜರ್ಮನ್ ಫೆಡರಲ್ ವಿದೇಶಾಂಗ ಕಚೇರಿಯ ಕಾರ್ಯದರ್ಶಿ ನಡುವೆ ಪ್ರತಿ ವರ್ಷ ವಿದೇಶಾಂಗ ಕಚೇರಿ ಸಮಾಲೋಚನಾ ಕಾರ್ಯತಂತ್ರಗಳನ್ನು ಸ್ಥಾಪಿಸಲು ಉಭಯ ದೇಶಗಳು ನಿರ್ಧರಿಸಿದವು. ರಾಷ್ಟ್ರೀಯ ಪ್ರಾದೇಶಿಕ ಮತ್ತು ಕಾರ್ಯತಂತ್ರ ಹಿತಾಸಕ್ತಿಗಳನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಹಾಗೂ ಮುಕ್ತ ಅಭಿಪ್ರಾಯಗಳ ಹಂಚಿಕೆಗೆ ವಾರ್ಷಿಕವಾಗಿ ಸಂಬಂಧಿಸಿದ ಪ್ರಮುಖರೊಂದಿಗೆ ಸಂವಾದ ನಡೆಸಲು 1.5 ಕಾರ್ಯತಂತ್ರ ಮಾರ್ಗ ಸ್ಥಾಪಿಸಲಾಗಿದೆ. ವೈಯಕ್ತಿಕ ನೀತಿ ವಲಯಗಳಲ್ಲಿ ಜಂಟಿ ಕಾರ್ಯಕ್ರಮಗಳ ಶಿಫಾರಸ್ಸುಗಳನ್ನು ರೂಪಿಸಲು ನೆರವಾಗಲಿದೆ. ಭಾರತ ಮತ್ತು ಜರ್ಮನಿ ನಡುವೆ ಎರಡೂ ಕಡೆಯಿಂದ ಮಾಧ್ಯಮ ವೃತ್ತಿಪರರ ಭೇಟಿಗಳಿಗೆ ಸಹಾಯವಾಗುವಂತೆ ಮಾಹಿತಿಯನ್ನು ಹಂಚಿಕೊಳ್ಳಲು ಎರಡೂ ದೇಶಗಳು ಬದ್ಧತೆ ತೋರಿದವು. ನಮ್ಮ ಪ್ರಜಾಪ್ರಭುತ್ವ ಸಮಾಜಗಳಲ್ಲಿ ಮುಕ್ತ ಮಾಧ್ಯಮಗಳ ಪ್ರಾಮುಖ್ಯತೆಯನ್ನು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು. ಸಂಸದರು ಹಾಗೂ ವಿದ್ವಾಂಸರ ನಡುವೆ ನಿರಂತರ ಸಂಪರ್ಕ ಮತ್ತು ಸಂವಹನ ಕಾಯ್ದುಕೊಂಡಿರುವುದನ್ನು ಉಭಯ ನಾಯಕರು ಶ್ಲಾಘಿಸಿದರು. ಜರ್ಮನಿಯ ರಾಜಕೀಯ ಫೌಂಡೇಶನ್ ಗಳು ಶೈಕ್ಷಣಿಕ ಮತ್ತು ಸಂವಾದದ ಮೂಲಕ ಅಂತಹ ಸಂಪರ್ಕಗಳನ್ನು ಉತ್ತೇಜಿಸುತ್ತಿರುವ ಪಾತ್ರವನ್ನು ಅವರು ಗುರುತಿಸಿದರು. 

 

60. ಕಡಿಮೆ ಆದಾಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾವರಿನ್ ಡೆಬ್ಪ್ ನಿಯಂತ್ರಸಲು ಉಭಯ ನಾಯಕರು ಅಧಿಕೃತ ಹಾಗೂ ಖಾಸಗಿ ವಲಯದ ಸಾಲಗಾರರು ಮತ್ತು ಸಾಲ ನೀಡುವವರ ನಡುವೆ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸುಸ್ಥಿರ ಹಣಕಾಸು ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಜರ್ಮನಿ ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳ ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್ ಬಳಗ ಮತ್ತು ಪ್ಯಾರಿಸ್ ಕ್ಲಬ್(ಪಿಸಿ) ಕೈಗೊಂಡಿರುವ ಕ್ರಮಗಳನ್ನು ಮತ್ತು ಹೊಸ ಸಾಲಗಾರರನ್ನು ಸೇರ್ಪಡೆಮಾಡಿಕೊಳ್ಳಲು ಪ್ಯಾರಿಸ್ ಕ್ಲಬ್ ನ ನಿರಂತರ ಪ್ರಯತ್ನಗಳನ್ನು ಬೆಂಬಲಿಸಲು ನಿರ್ಧರಿಸಿದರು. ಉಭಯ ದೇಶಗಳು ಅಧಿಕೃತ ದ್ವಿಪಕ್ಷೀಯ ಸಾಲಗಳ  ಮರು ಹೊಂದಾಣಿಕೆ ಮತ್ತು ಸಾವರಿನ್ ಸಾಲ ವಿಷಯಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಬೆಂಬಲಿಸಲು ಪ್ಯಾರಿಸ್ ಕ್ಲಬ್ ಮೂಲ ವೇದಿಕೆಯ ಪಾತ್ರವನ್ನು ನಿರ್ವಹಿಸುವುದಕ್ಕೆ ಬದ್ಧತೆ ವ್ಯಕ್ತಪಡಿಸಿದವು. 

 

61. ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ಸವಾಲುಗಳನ್ನು ಜಂಟಿಯಾಗಿ ಎದುರಿಸಲು ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯತೆಯನ್ನು ಭಾರತ ಮತ್ತು ಜರ್ಮನಿ ಒಪ್ಪಿಕೊಂಡವು. ಪ್ರಸಕ್ತ ಅಂತಾರಾಷ್ಟ್ರೀಯ, ಐರೋಪ್ಯ ಮತ್ತು ರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ಭಾರತದೊಂದಿಗೆ ಮಿಲಿಟರಿ ಉಪಕರಣಗಳ ರಫ್ತು ಮತ್ತು ತಂತ್ರಜ್ಞಾನ ವಿನಿಮಯ ನಿಟ್ಟಿನಲ್ಲಿ ಜರ್ಮನಿ ಕೆಲಸ ಮಾಡಲಿದೆ. ಉಭಯ ದೇಶಗಳು ರಕ್ಷಣಾ ಕೈಗಾರಿಕೆಗಳ ನಡುವೆ ಆಳವಾದ ಸಹಕಾರ ಹೊಂದಲು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಉತ್ತೇಜನ ನೀಡಲು ನಿರ್ಧರಿಸಿದವು ಮತ್ತು ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ರಕ್ಷಣಾ ಕಾರಿಡಾರ್ ಗಳನ್ನು ಸ್ಥಾಪಿಸುವುದಕ್ಕೆ ಅನುಕೂಲವಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಮಾನ ಹಂಚಿಕೆಯ ದೃಷ್ಟಿಯಿಂದ ಭಾರತ ಮತ್ತು ಜರ್ಮನಿ ನಡುವೆ ಸಾಗರ ಯೋಜನೆಗಳನ್ನು, ನೌಕಾ ಕೈಗಾರಿಕೆಗಳನ್ನು(ಸಬ್ ಮೆರಿಯನ್ಸ್)ಗೆ ಉತ್ತೇಜನ ನೀಡಲು ನಿರ್ಧರಿಸಿದವು.  ರಕ್ಷಣಾ ಕೈಗಾರಿಕೆ ಪರೀಕ್ಷಾ ಮತ್ತು ಪ್ರಮಾಣೀಕರಣ ವಲಯದಲ್ಲಿ ವಿಶೇಷವಾಗಿ ನಾನಾ ವ್ಯವಸ್ಥೆಗಳ ಮತ್ತು ಉಪ ವ್ಯವಸ್ಥೆಗಳ ವಿನ್ಯಾಸ ಪ್ರಮಾಣೀಕರಣ ಹಾಗೂ ಗುಣಮಟ್ಟ ಖಾತ್ರಿ ಕುರಿತ ಸಹಕಾರ ಬಲವರ್ಧನೆ ಅಭಿವೃದ್ಧಿಗೆ ಉಭಯ ದೇಶಗಳು ಒಪ್ಪಿದವು. ಎರಡೂ ದೇಶಗಳ ಪ್ರಮುಖ ಕೈಗಾರಿಕೆಗಳೊಂದಿಗೆ ಎಸ್ಎಂಇ/ಎಂಎಸ್ಎಂಇ ಗಳನ್ನು ಪರಸ್ಪರ ರಾಷ್ಟ್ರಗಳಲ್ಲಿ ಪೂರೈಕೆ ಸರಣಿಗೆ ಸೇರಿಸಲು ಉಭಯ ದೇಶಗಳು ಒಪ್ಪಿದವು.

 

62. ಕನಿಷ್ಠ ಎರಡು ವರ್ಷಗಳಿಗೊಮ್ಮೆ ಭಾರತ ಮತ್ತು ಜರ್ಮನಿಯಲ್ಲಿ ಪರ್ಯಾಯವಾಗಿ ಎರಡೂ ದೇಶಗಳ ರಕ್ಷಣಾ ಸಚಿವರು ನಿರಂತರ ಸಂವಾದದಲ್ಲಿ ತೊಡಗಬೇಕೆಂದು ಮಾಡಿರುವ ನಿರ್ಣಯವನ್ನು ಉಭಯ ನಾಯಕರು ಸ್ವಾಗತಿಸಿದರು. ಈ ವರ್ಷಾಂತ್ಯದ ವೇಳೆಗೆ ಸಹಿ ಮಾಡಲಿರುವ “ದ್ವಿಪಕ್ಷೀಯ ರಕ್ಷಣಾ ಸಹಕಾರ ಕುರಿತ ಅನುಷ್ಠಾನ ವ್ಯವಸ್ಥೆ –“ ಅನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಇದು ಹಾಲಿ ಇರುವ ಭದ್ರತಾ ನೀತಿಯಲ್ಲಿ ಹಾಗೂ ಹೊಸ ರಕ್ಷಣಾ ಮತ್ತು ಭದ್ರತಾ ಮಾತುಕತೆ ವಿಧಾನದಲ್ಲಿ ಸಹಕಾರ ಹೊಂದಲು ಸಹಾಯಕವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಲಾಯಿತು. ಜಾಗತಿಕ, ಪ್ರಾದೇಶಿಕ, ಸಾಗರ ಮತ್ತು ಸೈಬರ್ ಭದ್ರತೆ ಮಾತ್ರವಲ್ಲದೆ, ವಿಶ್ವಸಂಸ್ಥೆಯ ಶಾಂತಿಪಾಲನಾ ತರಬೇತಿ ವಿಭಾಗದಲ್ಲಿ ಆಳವಾದ ಮತ್ತು ವಿಸ್ತೃತ ಸಹಕಾರ ಹೊಂದಲು ಮತ್ತು ನಿರಂತರವಾಗಿ ಉನ್ನತ ಮಟ್ಟದ ಹಾಗೂ ಪರಿಣಿತರ ಸಮಾಲೋಚನೆಗಳನ್ನು ನಡೆಸಿ ಪರಸ್ಪರ ಪೂರಕವಾಗುವ ವಿಷಯಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಯಿತು.

 

63. ಮಹಾತ್ಮ ಗಾಂಧೀಜಿ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಉಭಯ ನಾಯಕರು ಎಂದಿಗೂ ಮರೆಯಲಾಗದ ಮಹಾತ್ಮ ಗಾಂಧಿ ಅವರ ಅಹಿಂಸೆ ಮತ್ತು ಸೌಹಾರ್ದದ ಸಿದ್ಧಾಂತಕ್ಕೆ ಗೌರವ ನಮನ ಸಲ್ಲಿಸಿದರು.  ಪ್ರಜಾಪ್ರಭುತ್ವ ಆಡಳಿತ, ನ್ಯಾಯಪಾಲನೆ, ಮಾನವ ಹಕ್ಕುಗಳಿಗೆ ಗೌರವ ನೀಡುವುದು ಮತ್ತು ಮೂಲಭೂತ ಸ್ವಾತಂತ್ರ್ಯ ಹಾಗೂ ಬಹುವಿಧದ ಸಹಕಾರ ಮತ್ತಿತರ ವಿಷಯಗಳಲ್ಲಿ ಸಮಾನ ಮೌಲ್ಯಗಳನ್ನು ಉತ್ತೇಜಿಸುವ ಬದ್ಧತೆಯನ್ನು ಎರಡೂ ದೇಶಗಳು ಪುನರುಚ್ಚರಿಸಿದವು. ವಿಶ್ವಸಂಸ್ಥೆಯ ಒಪ್ಪಂದದ ನಿಯಮಗಳು ಹಾಗೂ ಉದ್ದೇಶದಂತೆ ಎಲ್ಲ ದೇಶಗಳಲ್ಲಿ ಸಮಾನತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಏಕತೆಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಉಭಯ ನಾಯಕರು ಮೂಲಭೂತ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದರು ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯತಂತ್ರಗಳನ್ನು ಬಲವರ್ಧನೆಗೊಳಿಸಲು ನಿರ್ಧರಿಸಲಾಯಿತು. ಜಿ20, ವಿಶ್ವಸಂಸ್ಥೆ ಮತ್ತು ಇತರ ಬಹುವಿಧದ ವೇದಿಕೆಗಳಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಜಾಗತಿಕ, ಆರ್ಥಿಕ ಸ್ಥಿರತೆ ಮತ್ತು ಪ್ರಗತಿ ಕುರಿತು ಎದುರಾಗುತ್ತಿರುವ ಹಾಗೂ ಹಾಲಿ ಇರುವ ಸವಾಲುಗಳನ್ನು ಎದುರಿಸಲು  ಭಾರತ ಮತ್ತು ಜರ್ಮನಿ ದ್ವಿಪಕ್ಷೀಯ ಹಾಗೂ ಇತರ ಪಾಲುದಾರರೊಂದಿಗೆ ನಿಕಟ ಸಹಕಾರ ಹೊಂದುವ ಬದ್ಧತೆಯನ್ನು ವ್ಯಕ್ತಪಡಿಸಿದವು. ಈ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿ ವಿಶೇಷವಾಗಿ ಭಾರತೀಯ ಜಿ20 ಪ್ರೆಸಿಡೆನ್ಸಿ ಮತ್ತು 2022ರಲ್ಲಿ ನಡೆಯಲಿರುವ ಜರ್ಮನ್ ಜಿ7 ಪ್ರೆಸಿಡೆನ್ಸಿಯಲ್ಲಿ ನಿಕಟ ಸಹಕಾರ ಮುಂದುವರಿಸುವ ನಿರ್ಧಾರ ಮಾಡಲಾಯಿತು. 

 

64. ಸಾಗರ ಕುರಿತ ವಿಶ್ವಸಂಸ್ಥೆಯ ಒಪ್ಪಂದದ ಕಾನೂನು(ಯು ಎನ್ ಸಿ ಎಲ್ ಒ ಎಸ್) 1982 ಅನ್ವಯ ಅಂತಾರಾಷ್ಟ್ರೀಯ ನಿಮಯಗಳಿಗೆ ಅನುಸಾರ ನೌಕಾ ವಲಯದಲ್ಲಿ ಅಡೆತಡೆ ಇಲ್ಲದೆ ವಾಣಿಜ್ಯ ವಹಿವಾಟು ಮತ್ತು ಸ್ವಾತಂತ್ರ್ಯ ಹೊಂದುವ ಪ್ರಾಮುಖ್ಯತೆಯನ್ನು ಉಭಯ ದೇಶಗಳು ಬಲವಾಗಿ ಪ್ರತಿಪಾದಿಸಿದವು. 

 

65. ಉಭಯ ನಾಯಕರು ಸ್ಥಿರತೆ, ಏಕತೆ, ಏಳಿಗೆ ಮತ್ತು ಶಾಂತಿಯುತ ಅಫ್ಘಾನಿಸ್ತಾನಕ್ಕೆ ಬದ್ಧತೆಯನ್ನು ಪುನರುಚ್ಚರಿಸಿದರು. ಜರ್ಮನಿ ಅಂತರ – ಆಫ್ಘನ್ ಸಂವಾದ ಸಂಘಟಿಸುವ ಪ್ರಯತ್ನಗಳನ್ನು ಭಾರತ ಸ್ವಾಗತಿಸಿತು. ಅದರಲ್ಲಿ ಸರ್ಕಾರ ಮತ್ತು ಸಮಗ್ರ ಹಾಗೂ ಎಲ್ಲರನ್ನು ಒಳಗೊಳ್ಳುವ ಆಫ್ಘನ್ ನೇತೃತ್ವ ಮತ್ತು ಆಫ್ಘನ್ ಆಧರಿತ ಶಾಂತಿ ಹಾಗೂ ಸಂಧಾನ ಪ್ರಕ್ರಿಯೆಗಳನ್ನು ಖಾತ್ರಿಪಡಿಸಲಾಯಿತು. ಅವರು ಹಿಂಸಾಚಾರ ತ್ಯಾಗಕ್ಕೆ ಕರೆ ನೀಡಿದರು. ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಎಲ್ಲ ಸಂಬಂಧಗಳನ್ನು ಮುರಿಯಲು ಭಯೋತ್ಪಾದಕರ ಸುರಕ್ಷಿತ ಸ್ವರ್ಗಗಳು ಮತ್ತು ಆ ಪ್ರದೇಶಗಳನ್ನು ತೆರವುಗೊಳಿಸುವುದು, ಸಾಂವಿಧಾನಿಕ ವ್ಯವಸ್ಥೆಯ ಸಂರಕ್ಷಣೆ, ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಎಲ್ಲ ಆಫ್ಘನ್ ಪ್ರಜೆಗಳ ಜಾಗತಿಕ ಮಾನವ ಹಕ್ಕುಗಳಿಗೆ ಗೌರವ ನೀಡಬೇಕೆಂದು ಬೆಂಬಲಿಸಲಾಯಿತು. ಅಫ್ಘಾನಿಸ್ತಾನದ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯದ ಸಹಕಾರದಲ್ಲಿ ಭಾರತ ನೀಡುತ್ತಿರುವ ಕೊಡುಗೆಯ ಬಗ್ಗೆ ಜರ್ಮನಿ ಮೆಚ್ಚುಗೆ ವ್ಯಕ್ತಪಡಿಸಿತು. ಉಭಯ ನಾಯಕರು ಏಷ್ಯಾದ ಹೃದಯ – ಇಸ್ತಾನ್ ಬುಲ್ ಪ್ರಕ್ರಿಯೆಯನ್ನು ಬಲವಾಗಿ ಪ್ರತಿಪಾದಿಸಿದರು ಮತ್ತು ರಾಜಕೀಯ ಸಹಕಾರ ಹಾಗೂ ವಿಶ್ವಾಸವೃದ್ಧಿಯಲ್ಲಿ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಫ್ಘನಿಸ್ತಾನ ಪ್ರಮುಖ ಎಂದು ಗುರುತಿಸಲಾಯಿತು.

 

66. ಭಯೋತ್ಪಾದನೆ ಜಾಗತಿಕ ವಿಪತ್ತು ಎಂದು ಪ್ರತಿಪಾದಿಸಿದ ಇಬ್ಬರು ನಾಯಕರು, ಭಯೋತ್ಪಾದನೆ ಜಾಗತಿಕ ಅಪಾಯವಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಎಲ್ಲ ದೇಶಗಳು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗಗಳೆನಿಸಿರುವ ಜಾಗಗಳಿಂದ ತೆರವು ಮಾಡಬೇಕು, ಮೌಲಸೌಕರ್ಯ ಒದಗಿಸುವುದು ನಿಲ್ಲಿಸಬೇಕು, ಭಯೋತ್ಪಾದನಾ ಸಂಪರ್ಕಜಾಲಗಳನ್ನು ಧ್ವಂಸಗೊಳಿಸಬೇಕು ಮತ್ತು ಭಯೋತ್ಪಾದಕರು ಗಡಿ ಆಚೆಯಿಂದ ನುಸುಳದಂತೆ ತಡೆಯಬೇಕೆಂದು ಹೇಳಿದರು. ಅವರು ಅಂತಾರಾಷ್ಟ್ರೀಯ ಕಾನೂನು, ನ್ಯಾಯಪಾಲನೆ, ಮಾನವ ಹಕ್ಕುಗಳ ಕಾನೂನು ಹಾಗೂ ಅಂತಾರಾಷ್ಟ್ರೀಯ ಮಾನವೀಯತೆಯ ಕಾನೂನುಗಳ ಅನುಸಾರ ವಿಚಕ್ಷಣಾ ಹಾಗೂ ಮಾಹಿತಿಯನ್ನು ಹಂಚಿಕೊಂಡು ಭಯೋತ್ಪಾದನೆಯನ್ನು ನಿಗ್ರಹಿಸಲು ಬಲಿಷ್ಠ ಅಂತಾರಾಷ್ಟ್ರೀಯ ಸಹಭಾಗಿತ್ವ ಅಗತ್ಯವೆಂದು ಬಲವಾಗಿ ಪ್ರತಿಪಾದಿಸಿದರು.

 

67. ಉಭಯ ನಾಯಕರು ಎಲ್ಲ ದೇಶಗಳು ತಮ್ಮ ಭೂ ಪ್ರದೇಶಗಳು, ಯಾವುದೇ ಇತರ ರಾಷ್ಟ್ರಗಳ ವಿರುದ್ಧ ಯಾವುದೇ ಬಗೆಯ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಬಳಕೆ ಮಾಡದಿರುವಂತೆ ನೋಡಿಕೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಜಾಗತಿಕ ಭಯೋತ್ಪಾದನೆ  ವಿರುದ್ಧ ಹೋರಾಡಲು ಎಲ್ಲ ದೇಶಗಳ ಸಂಘಟಿತ ಪ್ರಯತ್ನದ ಪ್ರಾಮುಖ್ಯತೆಯನ್ನು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು ಮತ್ತು ಆ ಮೂಲಕ ಅಂತಾರಾಷ್ಟ್ರೀಯ ಸಮುದಾಯ ಯಾವುದೇ ವಿಧಾನ ಮತ್ತು ಸ್ವರೂಪದ ಭಯೋತ್ಪಾದನೆಯನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ನೀಡಲಾಯಿತು. ಜಾಗತಿಕ ಪಿಡುಗಿನ ವಿರುದ್ಧ ಹೋರಾಡಲು ಏಕೀಕೃತ ವೇದಿಕೆ ಅಗತ್ಯವಿದೆ ಎಂಬುದನ್ನು ಉಲ್ಲೇಖಿಸಲಾಯಿತು. ಮಾರ್ಚ್ 2020ರಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದ(ಸಿಸಿಐಟಿ)ವನ್ನು ಅಳವಡಿಸಿಕೊಳ್ಳಲು ಹಾಗೂ ಅಂತಿಮಗೊಳಿಸಲು ಉಭಯ ನಾಯಕರು ಕರೆ ನೀಡಿದರು. 

 

68. ಉಗ್ರರ ಸಂಪರ್ಕ ಜಾಲಗಳ ಕುರಿತ ಮಾಹಿತಿ ಮತ್ತು ಗುಪ್ತಚರ ಮಾಹಿತಿ ವಿನಿಮಯ ಸೇರಿದಂತೆ ಭಯೋತ್ಪಾದನೆ ನಿಗ್ರಹ ಕುರಿತಾದ ಜಂಟಿ ಕಾರ್ಯಕಾರಿ ಗುಂಪಿನ ಚೌಕಟ್ಟಿನಲ್ಲಿ ಭಾರತ ಮತ್ತು ಜರ್ಮನಿ ಪರಸ್ಪರ ಸಹಕಾರವನ್ನು ಮುಂದುವರಿಸಲು ಉಭಯ ದೇಶಗಳು ಒಪ್ಪಿದವು. ಮೂಲಭೂತವಾದ ಬೆಳೆಯುತ್ತಿರುವ ಬಗ್ಗೆ ಅದನ್ನು ನಿಯಂತ್ರಿಸಲು, ಅನುಭವಗಳನ್ನು ಹಂಚಿಕೊಂಡು ಜೊತೆಯಾಗಿ ಕೆಲಸ ಮಾಡಲು ನಿರ್ಧರಿಸಲಾಯಿತು. ಆದಷ್ಟು ಶೀಘ್ರ ಭಯೋತ್ಪಾದನೆ ನಿಗ್ರಹ ಕುರಿತಾದ ಜಂಟಿ ಕಾರ್ಯಕಾರಿ ಸಮಿತಿಯ ಮುಂದಿನ ಸಭೆಯ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು

69. ಇರಾನ್ ಮತ್ತು ಇ3+3 ನಡುವೆ ಜಂಟಿ ಸಮಗ್ರ ಕ್ರಿಯಾ ಯೋಜನೆ(ಜೆಸಿಪಿಒಎ) ಪೂರ್ಣ ಜಾರಿಗೆ ಬೆಂಬಲ ನೀಡಲು ಉಭಯ ದೇಶಗಳು ಪುನರುಚ್ಚರಿಸಿದವು. ಅದರ ಸುತ್ತ ಉದ್ಭವಿಸುವ ವಿಷಯಗಳಿಗೆ ರಾಜಕೀಯ ಸಂವಾದದಿಂದ ಮಾತ್ರ ಶಾಂತಿಯುತ ಬಗೆಹರಿಸಲು ಸಾಧ್ಯ. ಇರಾನ್ ನ ಅಣ್ವಸ್ತ್ರ ಕಾರ್ಯಕ್ರಮ ಕುರಿತಂತೆ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ)ಯನ್ನು ಪೂರ್ಣ ಪ್ರಮಾಣದಲ್ಲಿ ಭಾರತ ಮತ್ತು ಜರ್ಮನಿ ಒಪ್ಪಿಕೊಂಡವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2231 ಅನ್ವಯ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಖಾತ್ರಿಗೊಳಿಸುವ ಅಗತ್ಯವಿದೆ ಮತ್ತು ಪ್ರಸಕ್ತ ವಿಷಯಗಳನ್ನು ಶಾಂತಿಯುವ ಮಾತುಕತೆಗಳ ಮೂಲಕ ಬಗೆಹರಿಸಿಕೊಂಡು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಮೂಲಕ ವಿಶ್ವಾಸವೃದ್ಧಿ ಮತ್ತು ಮಾತುಕತೆಯ ಕೆಲಸಗಳನ್ನು ಮಾಡಬೇಕಿದೆ.

 

70. ಜಾಗತಿಕ ಅಣ್ವಸ್ತ್ರ ಪ್ರಸರಣಾ ವಿರೋಧಿ ಪ್ರಯುತ್ನಗಳನ್ನು ಬಲವರ್ಧನೆಗೊಳಿಸಲು ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯತ್ತ ಸಾಗಿ ಆಸ್ಟ್ರೇಲಿಯಾ ಬಳಗ ಮತ್ತು ವೆಸೆನ್ನಾರ್ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಬೆಂಬಲಿಸಿದ್ದಕ್ಕೆ  ಭಾರತ, ಜರ್ಮನಿಗೆ ಧನ್ಯವಾದಗಳನ್ನು ಹೇಳಿತು. ಅಣ್ವಸ್ತ್ರ ಪೂರೈಕೆ ಗುಂಪು(ಎನ್ ಎಸ್ ಜಿ)ಯಲ್ಲಿ ಆದಷ್ಟು ಶೀಘ್ರ ಸೇರ್ಪಡೆಯಾಗಲು ಜರ್ಮನಿ ತನ್ನ ಬೆಂಬಲವನ್ನು ಪುನರುಚ್ಚಿರಿಸಿತು. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ, ನಿಶ್ಯಸ್ತ್ರೀಕರಣ ಮತ್ತು ಅಣ್ವಸ್ತ್ರ ಪ್ರಸರಣಾ ವಿರೋಧಿ ಪ್ರಯತ್ನಗಳಲ್ಲಿ ಗುಣಾತ್ಮಕ ತೊಡಗಿರುವ ಭಾರತದ ಪ್ರಾಮುಖ್ಯತೆಯನ್ನು ನೆನೆಪು ಮಾಡಿಕೊಳ್ಳಲಾಯಿತು.

 

71. ವಿಶ್ವಸಂಸ್ಥೆಯ 74ನೇ ಮಹಾಧಿವೇಶನದ ವೇಳೆ ಆರಂಭಿಸಲಾದ ವಸ್ತು ಆಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರುವ ವಿಚಾರದಲ್ಲಿ ಜಿ-4 ಮತ್ತು ಇತರೆ ಸುಧಾರಣೆ ಬಯಸುತ್ತಿರುವ ರಾಷ್ಟ್ರಗಳು ಹಾಗೂ ಗುಂಪುಗಳ ತ್ವರಿತ ಪ್ರಯ್ತ್ನಗಳನ್ನು ಉಭಯ ನಾಯಕರು ಒತ್ತಿ ಹೇಳಿದರು.  ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಸ್ತರಣೆ ಮತ್ತು ಸುಧಾರಣೆಯಲ್ಲಿ ಪರಸ್ಪರರಿಗೆ ಕಾಯಂ ಸ್ಥಾನದ ಬಗ್ಗೆ ಉಭಯ ದೇಶಗಳು ಪರಸ್ಪರ ಪೂರ್ಣ ಬೆಂಬಲವನ್ನು ಪುನರುಚ್ಚರಿಸಿದವು. ಬಹುಶಿಸ್ತೀಯ ಕಾನೂನು ಆಧರಿಸಿದ ವ್ಯವಸ್ಥೆಯ ರಕ್ಷಣೆ ಹಾಗೂ ಬಲವರ್ಧನೆಗೆ ಭದ್ರತಾ ಮಂಡಳಿ ಸುಧಾರಭೆ ಅತಿ ಮುಖ್ಯ. ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಪ್ರತಿನಿಧಿತ್ವ ಇಲ್ಲದೇ ಇರುವುದರಿಂದ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತಾಗೆ, ಮಂಡಳಿಯ ನಿರ್ಣಯಗಳ ಸಿಂಧುತ್ವಕ್ಕೆ ಮತ್ತು ಅವುಗಳನ್ನು ಪರಿಣಾಮಕಾರಿ ಜಾರಿಗೆ ಅಡ್ಡಿಯುಂಟಾಗುತ್ತದೆ. ಇಂದು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಹಿನ್ನೆಲೆಯಲ್ಲಿ ನಾವು ಬಲಿಷ್ಠ, ಅಧಿಕಾರಯುತ ಹಾಗೂ ಪರಿಣಾಮಕಾರಿ ವಿಶ್ವಸಂಸ್ಥೆಯ ಅಗತ್ಯವಿದೆ

72.  ಶಾಂತಿ, ಸ್ಥಿರತೆ ಮತ್ತು ಏಳಿಗೆಗೆ ಸದೃಢ ಮತ್ತು ಪರಿಣಾಮಕಾರಿ ಬಹುವಿಧದ ಸಹಕಾರ ಅತಿಮುಖ್ಯವಾಗಿದೆ. ಜಾಗತಿಕ ವ್ಯಾಪ್ತಿಯಲ್ಲಿ ಮತ್ತು ಸ್ವಾಭಾವಿಕವಾಗಿ ಇಂದು ಎದುರಾಗುತ್ತಿರುವ ಪ್ರಮುಖ ಸವಾಲುಗಳನ್ನು ಎಲ್ಲ ರಾಷ್ಟ್ರಗಳು  ಪ್ರತ್ಯೇಕವಾಗಿ ಎದುರಿಸಲು ಸಾಧ್ಯವಿಲ್ಲ, ಅವುಗಳನ್ನು ಜಂಟಿಯಾಗಿ ಮಾತ್ರ ಹತ್ತಿಕ್ಕಲು ಸಾಧ್ಯ.

 

73. ಉಭಯ ನಾಯಕರು 5ನೇ ಐಜಿಸಿಯಲ್ಲಿ ನಡೆಸ ಸಮಾಲೋಚನೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲು ತಮ್ಮ ಬದ್ಧತೆ ಪುನರುಚ್ಚರಿಸಿದರು. ಪ್ರಾದೇಶಿಕ ಹಾಗೂ ಜಾಗತಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ತಮ್ಮ ಸಂಘಟಿತ ಧೋರಣೆಗಳನ್ನು ಮುಂದುರಿಸಲು ಸಹ ನಿರ್ಣಯಿಸಲಾಯಿತು. ಐಜಿಸಿ ಆಯೋಜಿಸಿದಕ್ಕೆ ಮತ್ತು ಆತ್ಮೀಯ ಆತಿಥ್ಯಕ್ಕಾಗಿ ಜರ್ಮನ್ ಚಾನ್ಸೆಲರ್ ಡಾ. ಆಂಗೆಲಾ ಮರ್ಕಲ್ ಅವರು ಭಾರತದ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳಿದರು. 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM to IT firms: Go beyond services, make AI products

Media Coverage

PM to IT firms: Go beyond services, make AI products
NM on the go

Nm on the go

Always be the first to hear from the PM. Get the App Now!
...
Prime Minister pays tribute to Chhatrapati Shivaji Maharaj on his Jayanti
February 19, 2026

On the Jayanti of Chhatrapati Shivaji Maharaj, Prime Minister Shri Narendra Modi paid homage to the visionary leader, exceptional administrator, strategic thinker, and champion of Swarajya.

The Prime Minister stated that Shivaji Maharaj’s courage continues to inspire, his governance serves as a guiding light, and his spirit of justice and self-respect strengthens society even today.

He emphasized that Chhatrapati Shivaji Maharaj always placed the welfare of every single person above everything else and dedicated himself completely to their protection. This commitment is why his life remains a beacon for India across generations.

In separate posts on X, Shri Modi said:

“On the Jayanti of Chhatrapati Shivaji Maharaj, we bow in reverence to the visionary leader, exceptional administrator, strategic thinker and champion of Swarajya.

May his courage inspire us, his governance guide us and his spirit of justice and self-respect strengthen our society.”