ಇನ್ನು ಮುಂದೆ "ಎರಡೂ ಕಡೆಯವರು" ಎಂದು ಕರೆಯಲ್ಪಡುವ ಭಾರತ ಮತ್ತು ಕೊರಿಯಾ ದೇಶಗಳು ಹವಾಮಾನ ಬದಲಾವಣೆ, ಸಮುದ್ರ ಮತ್ತು ಉತ್ತರ ಧ್ರುವ ಸುತ್ತಲಿನ ದೊಡ್ಡ ಮತ್ತು ಅತ್ಯಂತ ಶೀತ ಪ್ರದೇಶ(ಆರ್ಕ್ಟಿಕ್)ದ ಸುಧಾರಣೆ ವಿಷಯಗಳಲ್ಲಿ ಪ್ರಾಯೋಗಿಕ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯ ಸಹಕಾರ ಬಲಪಡಿಸಲು ಒಪ್ಪಿಕೊಂಡಿವೆ.

ಪರಿಸರ ಜವಾಬ್ದಾರಿಯುತ ರಾಷ್ಟ್ರಗಳಾಗಿ, ಪರಿಸರಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಸಮಗ್ರ ರೀತಿಯಲ್ಲಿ ಪೂರೈಸುವ ತಮ್ಮ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಇದನ್ನು ಸಾಧಿಸಲು ಭೂಮಿ, ಗಾಳಿ, ನೀರು, ಜೀವವೈವಿಧ್ಯ ಮತ್ತು ತ್ಯಾಜ್ಯಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಸೇರಿದಂತೆ ಪರಿಸರ ವಿಷಯಗಳು ಮತ್ತು ಹವಾಮಾನ ಬದಲಾವಣೆಯ ಕುರಿತು ಸಹಕಾರ ಉತ್ತೇಜಿಸಲು ಎರಡೂ ಕಡೆಯವರು ನಿರ್ಧರಿಸಿದರು.

ಹವಾಮಾನ ಬದಲಾವಣೆ ಸಹಕಾರ

ನಿಯಮ ಆಧಾರಿತ ಅಂತಾರಾಷ್ಟ್ರೀಯ ಕ್ರಮಕ್ಕೆ ತಮ್ಮ ಬೆಂಬಲ ಮತ್ತು ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಮಾನವತೆ ಮತ್ತು ಪ್ರಕೃತಿಯ ಸುಸ್ಥಿರತೆಗೆ ಬೆದರಿಕೆಯೊಡ್ಡುವ ಅಭೂತಪೂರ್ವ ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ಹವಾಮಾನ ಕ್ರಮಗಳನ್ನು ಹೆಚ್ಚಿಸುವ ನಿರ್ಣಾಯಕ ಮಹತ್ವವನ್ನು ಎರಡೂ ಕಡೆಯವರು ಗುರುತಿಸಿದರು.

ಈ ಸಂದರ್ಭದಲ್ಲಿ, ಹೂಡಿಕೆ-ಚಾಲಿತ ಪರಿಣಾಮಗಳನ್ನು ತಗ್ಗಿಸುವ ಯೋಜನೆಗಳಿಗೆ ಸಹಕಾರಿ ಕಾರ್ಯವಿಧಾನ ಸ್ಥಾಪಿಸುವ, ಆಯಾ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ ಸಾಧನೆಗಳನ್ನು ಮುನ್ನಡೆಸುವ ಮತ್ತು ಹವಾಮಾನ ಕ್ರಿಯೆಯ ಕ್ಷೇತ್ರದಲ್ಲಿ ತಮ್ಮ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಪ್ಯಾರಿಸ್ ಒಪ್ಪಂದದ 6.2ನೇ ವಿಧಿಯ ಅಡಿ ಎಂಒಸಿ(ಭೂಮಿಯ ಹವಾಮಾನವನ್ನು ಸ್ಥಿರಗೊಳಿಸುವ, ವಿಶೇಷವಾಗಿ ಯುರೋಪ್ ಅನ್ನು ಬೆಚ್ಚಗಾಗಿಸುವ ಒಪ್ಪಂದ)ಯ ತೀರ್ಮಾನವನ್ನು ಎರಡೂ ಕಡೆಯವರು ಸ್ವಾಗತಿಸಿದರು. ಇಂಗಾಲದ ಮಾರುಕಟ್ಟೆ, 6.2ನೇ ವಿಧಿಯ ಸಹಕಾರಿ ವಿಧಾನ, ನವೀಕರಿಸಬಹುದಾದ ಇಂಧನ ಮತ್ತು ಕಡಿಮೆ-ಇಂಗಾಲ ತಂತ್ರಜ್ಞಾನಗಳು ಸೇರಿದಂತೆ ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಎರಡೂ ಕಡೆಯವರು ಸಹಕಾರ ಉತ್ತೇಜಿಸಲು ಒಪ್ಪಿಗೆ ಸೂಚಿಸಿದರು.

ಪರಿಸರ ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿ

ಪರಿಸರ ಜವಾಬ್ದಾರಿಯುತ ರಾಷ್ಟ್ರಗಳಾಗಿ, ಭಾರತ ಮತ್ತು ಕೊರಿಯಾ ಹವಾಮಾನ ಮತ್ತು ಪರಿಸರ ಕ್ಷೇತ್ರದಲ್ಲಿ ಸಹಕಾರ ಕುರಿತು ತಿಳಿವಳಿಕೆ ಪತ್ರ(ಎಂಒಯು)ದ ಮೂಲಕ ಸಾಂಸ್ಥಿಕ ಸಹಕಾರ ಮುಂದುವರಿಸಲು ನಿರ್ಧರಿಸಿದವು. ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ)ದ ಸದಸ್ಯರಾಗಿ ಕೊರಿಯಾದ ಸೇರ್ಪಡೆಯನ್ನು ಭಾರತದ ಕಡೆಯವರು ಸ್ವಾಗತಿಸಿದರು. ಜಾಗತಿಕ ಹಸಿರು ಬೆಳವಣಿಗೆಯ ಸಂಸ್ಥೆ(ಜಿಜಿಜಿಐ)ಯ ಸದಸ್ಯರಾಗಿ ಭಾರತ ಸೇರ್ಪಡೆಯನ್ನು ಕೊರಿಯಾ ಕಡೆಯವರು ಸ್ವಾಗತಿಸಿದರು.

ಸಾಗರಗಳು ಮತ್ತು ಸಾಗರ ಸುಸ್ಥಿರತೆ

ಆರ್ಥಿಕ ಅಭಿವೃದ್ಧಿ, ಪರಿಸರ ಸಮತೋಲನ ಮತ್ತು ಆಹಾರ ಭದ್ರತೆಗಾಗಿ ಸಾಗರಗಳ ಪ್ರಾಮುಖ್ಯತೆಯನ್ನು ಗುರುತಿಸಿ, ಸಮುದ್ರ ವಿಜ್ಞಾನ, ಸುಸ್ಥಿರ ಮೀನುಗಾರಿಕೆ, ಕರಾವಳಿ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಸಮುದ್ರ ಮಾಲಿನ್ಯ ತಡೆಗಟ್ಟುವಿಕೆಯ ಸಹಕಾರ ವಿಸ್ತರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

ನೀಲಿ ಆರ್ಥಿಕತೆಯಲ್ಲಿ ಎರಡೂ ಕಡೆಯವರು ಭಾಗಿತ್ವ ಹೆಚ್ಚಿಸಲು ಮತ್ತು ಎರಡೂ ದೇಶಗಳಲ್ಲಿನ ವೈಜ್ಞಾನಿಕ ಸಂಸ್ಥೆಗಳು ಮತ್ತು ಕಡಲ ಸಂಸ್ಥೆಗಳ ನಡುವೆ ನಿಕಟ ವಿನಿಮಯ ಉತ್ತೇಜಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಆರ್ಕ್ಟಿಕ್ ಸಂಶೋಧನೆ ಮತ್ತು ಧ್ರುವ ಸಹಕಾರ

ಭಾರತ ಮತ್ತು ಕೊರಿಯಾ ಆರ್ಕ್ಟಿಕ್ ಸಂಶೋಧನೆ ಮತ್ತು ವೈಜ್ಞಾನಿಕ ಸಹಕಾರದಲ್ಲಿ ತಮ್ಮ ಬೆಳೆಯುತ್ತಿರುವ ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಿದವು. ಹವಾಮಾನ ಬದಲಾವಣೆಯ ತಿಳಿವಳಿಕೆ ಮುಂದುವರಿಸಲು ಆರ್ಕ್ಟಿಕ್ ಅನ್ನು ಪ್ರಮುಖ ಪ್ರದೇಶವೆಂದು ಎರಡೂ ಕಡೆಯವರು ಗುರುತಿಸಿದರು, ಆರ್ಕ್ಟಿಕ್ ವಿಜ್ಞಾನ ಮತ್ತು ಆರ್ಕ್ಟಿಕ್ ಸಾಗಣೆ ಸೇರಿದಂತೆ ಆರ್ಕ್ಟಿಕ್‌ನಲ್ಲಿ ಸಹಕಾರ ವಿಸ್ತರಿಸಲು ಒಪ್ಪಿಕೊಂಡರು.

ಆರ್ಕ್ಟಿಕ್ ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಸಹಭಾಗಿತ್ವ ಉತ್ತೇಜಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ಜಂಟಿ ಸಂಶೋಧನಾ ಉಪಕ್ರಮಗಳು, ವೈಜ್ಞಾನಿಕ ವಿನಿಮಯ ಮತ್ತು ಅಂತಾರಾಷ್ಟ್ರೀಯ ಧ್ರುವ ಸಂಶೋಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಗೆ ಅವಕಾಶಗಳನ್ನು ಅನ್ವೇಷಿಸಲು ಒಪ್ಪಿಗೆ ಸೂಚಿಸಿದರು.

ಮುಂದಿನ ಹಾದಿ

ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕ್ರಮಕ್ಕೆ ಕೊಡುಗೆ ನೀಡುವ ಪ್ರಾಯೋಗಿಕ ಸಹಕಾರ ಮುಂದುವರಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

ಈ ಜಂಟಿ ಹೇಳಿಕೆಯಲ್ಲಿ ವಿವರಿಸಿರುವ ವಿಸ್ತೃತ ಸಹಕಾರವು ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗೆ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವ ನವೀನ ಮತ್ತು ಅಳೆಯಬಹುದಾದ ಪರಿಹಾರಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಭಾರತ ಮತ್ತು ಕೊರಿಯಾ ವಿಶ್ವಾಸ ವ್ಯಕ್ತಪಡಿಸಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's Q4 GDP growth seen at 7.3%; CNBC-TV18 poll pegs FY26 at 7.5%

Media Coverage

India's Q4 GDP growth seen at 7.3%; CNBC-TV18 poll pegs FY26 at 7.5%
NM on the go

Nm on the go

Always be the first to hear from the PM. Get the App Now!
...
Share your ideas and suggestions for 'Mann Ki Baat' now!
June 05, 2026

Prime Minister Narendra Modi will share 'Mann Ki Baat' on Sunday, June 28th. If you have innovative ideas and suggestions, here is an opportunity to directly share it with the PM. Some of the suggestions would be referred by the Prime Minister during his address.

Share your inputs in the comments section below.