ಶೇರ್
 
Comments

ಸಾರ್ಕ್ ನಾಯಕರು ಮತ್ತು ಪ್ರತಿನಿಧಿಗಳೊಂದಿಗೆ ಸಂವಾದದ ವೇಳೆ, ಪ್ರಧಾನಮಂತ್ರಿ ಮೋದಿ ಅವರು, ಕೋವಿಡ್ 19 ತುರ್ತು ನಿಧಿ ಸ್ಥಾಪಿಸುವ ಪ್ರಸ್ತಾಪ ಮುಂದಿಟ್ಟರು. ಈ ನಿಧಿ ಸಾರ್ಕ್ ರಾಷ್ಟ್ರಗಳ ಸ್ವಯಂಪ್ರೇರಿತ ದೇಣಿಗೆಯಿಂದ ರೂಪುಗೊಳ್ಳುತ್ತದೆ. ಮೊದಲಿಗೆ ಭಾರತವು ಆರಂಭಿಕವಾದಿ 10 ದಶಲಕ್ಷ ಡಾಲರ್ ಗಳನ್ನು ನಿಧಿಗೆ ನೀಡುವುದಾಗಿ ತಿಳಿಸಿದೆ.

ಯಾವುದೇ ಸಾರ್ಕ್ ಸದಸ್ಯ ರಾಷ್ಟ್ರ ತತ್ ಕ್ಷಣದ ಕ್ರಮಗಳ ವೆಚ್ಚ ಭರಿಸಲು ಈ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಮೋದಿ ಅವರು, ಸರ್ಕಾರವು,  ಭಾರತದಲ್ಲಿ ಪರೀಕ್ಷಾ ಕಿಟ್ ಮತ್ತು ಇತರ ಸಲಕರಣೆಗಳೊಂದಿಗೆ ವೈದ್ಯರು, ತಜ್ಞರನ್ನು ಒಳಗೊಂಡ ತ್ವರಿತ ಸ್ಪಂದನಾ ತಂಡ ಒಗ್ಗೂಡಿಸುತ್ತಿದೆ ಎಂದು ತಿಳಿಸಿದರು.

ಇತರ ಸಾರ್ಕ್ ರಾಷ್ಟ್ರಗಳ ತುರ್ತು ಸ್ಪಂದನಾ ತಂಡಗಳಿಗಾಗಿ ನಾವು ಆನ್ ಲೈನ್ ತರಬೇತಿ ತುಣುಕುಗಳನ್ನು ತ್ವರಿತವಾಗಿ ಒದಗಿಸಲಿದ್ದೇವೆ, ಇವು ಭಾರತ ಬಳಸುತ್ತಿರುವ ಮಾದರಿಯನ್ನು ಆಧರಿಸಿದ್ದು, ನಮ್ಮ ಎಲ್ಲ ತುರ್ತು ಸಿಬ್ಬಂದಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದೂ ಪ್ರಧಾನಮಂತ್ರಿ ಮೋದಿ ತಿಳಿಸಿದರು.

ವೈರಾಣು ಹೊಂದಿರುವ ಸಂಭವನೀಯರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಜನರನ್ನು ಉತ್ತಮ ರೀತಿಯಲ್ಲಿ ಕಂಡುಹಿಡಿಯಲು. ಭಾರತವು ರೂಪಿಸಿರುವ ಸಮಗ್ರ ಕಾಯಿಲೆಗಳ ನಿಗಾ ಪೋರ್ಟಲ್ ಬಗ್ಗೆಯೂ ಪ್ರಧಾನಮಂತ್ರಿ ಮೋದಿ ಪ್ರಸ್ತಾಪಿಸಿದರು, ಭಾರತವು ಈ ರೋಗ ನಿಗಾ ತಂತ್ರಾಂಶವನ್ನು ಸಾರ್ಕ್ ಸಹಯೋಗಿಗಳೊಂದಿಗೆ ಹಂಚಿಕೊಳ್ಳಲಿದೆ ಮತ್ತು ಅದನ್ನು ಬಳಸಲು ತರಬೇತಿ ನೀಡಲಿದೆ ಎಂದೂ ತಿಳಿಸಿದರು.

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Forex reserves rise $3.07 billion to lifetime high of $608.08 billion

Media Coverage

Forex reserves rise $3.07 billion to lifetime high of $608.08 billion
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜೂನ್ 2021
June 19, 2021
ಶೇರ್
 
Comments

India's forex reserves rise by over $3 billion to lifetime high of $608.08 billion under the leadership of Modi Govt

Steps taken by Modi Govt. ensured India's success has led to transformation and effective containment of pandemic effect