ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ 2023ರ ಡಿಸೆಂಬರ್ 1 ರಂದು ದುಬೈನಲ್ಲಿ ಕಾಪ್-28 ನಲ್ಲಿ ‘ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ’ ಕುರಿತು ಉನ್ನತ ಮಟ್ಟದ ಕಾರ್ಯಕ್ರಮದ ಸಹ ಆತಿಥ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವೀಡನ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಶ್ರೀ ಫಿಲಿಪ್ ನ್ಯುಸಿ  ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಗೌರವಾನ್ವಿತ ಶ್ರೀ ಚಾರ್ಲ್ಸ್ ಮೈಕೆಲ್  ಭಾಗವಹಿಸಿದ್ದರು.

ಪ್ರಧಾನಮಂತ್ರಿ ಅವರು ಎಲ್ಲಾ ರಾಷ್ಟ್ರಗಳು ಈ ಉಪಕ್ರಮಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದರು.

ಈ ಗ್ರೀನ್ ಕ್ರೆಡಿಟ್ ಉಪಕ್ರಮವನ್ನು ಹವಾಮಾನ ಬದಲಾವಣೆಯ ಸವಾಲಿಗೆ ಪರಿಣಾಮಕಾರಿ ಪ್ರತಿಕ್ರಿಯೆಯಾಗಿ ಸ್ವಯಂಪ್ರೇರಿತ ಭೂ ಗ್ರಹ ಸಂರಕ್ಷಣೆ ಪರ ಕ್ರಿಯೆಗಳನ್ನು ಉತ್ತೇಜಿಸುವ ಕಾರ್ಯವಿಧಾನವನ್ನು ಪರಿಕಲ್ಪನೆಯಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಪುನರ್ ಸ್ಥಾಪನೆಗೊಳಿಸಲು ತ್ಯಾಜ್ಯ/ಸವಕಲಾದ ಭೂಮಿಗಳು ಮತ್ತು ನದಿ ಜಲಾನಯನ ಪ್ರದೇಶಗಳಲ್ಲಿನ ತೋಟಗಳಿಗೆ ಗ್ರೀನ್ ಕ್ರೆಡಿಟ್‌ಗಳ ಸಮಸ್ಯೆಯನ್ನು ಪರಿಹರಿಸುತ್ತದೆ.

ಬೆವ್ ವೇದಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಪ್ರೋತ್ಸಾಹಕ ಉಪಕ್ರಮಗಳು ಮತ್ತು ನೀತಿಗಳ ಭಂಡಾರವಾಗಿ ಕಾರ್ಯನಿರ್ವಹಿಸುವ https://ggci-world.in/ ಗೆ ಚಾಲನೆ ನೀಡಲಾಯಿತು.

ಈ ಜಾಗತಿಕ ಉಪಕ್ರಮವು ಹಸಿರು ಕ್ರೆಡಿಟ್‌ಗಳಂತಹ ಕಾರ್ಯಕ್ರಮಗಳು/ ಕಾರ್ಯ ವಿಧಾನಗಳ ಮೂಲಕ ಪರಿಸರ ಸಕಾರಾತ್ಮಕ ಕ್ರಿಯೆಗಳ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯಲ್ಲಿ ಜ್ಞಾನ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯದ ಮೂಲಕ ಜಾಗತಿಕ ಸಹಯೋಗ, ಸಹಕಾರ ಮತ್ತು ಪಾಲುದಾರಿಕೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The quiet foundations for India’s next growth phase

Media Coverage

The quiet foundations for India’s next growth phase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಡಿಸೆಂಬರ್ 2025
December 30, 2025

PM Modi’s Decisive Leadership Transforming Reforms into Tangible Growth, Collective Strength & National Pride