ಈಜಿಪ್ಟ್ ನ ವಿದೇಶಾಂಗ ಸಚಿವ ಡಾ. ಬದರ್ ಅಬ್ದೆಲಟ್ಟಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಗಾಜಾ ಶಾಂತಿ ಒಪ್ಪಂದದಲ್ಲಿ ಈಜಿಪ್ಟ್ ನ ನಿರ್ಣಾಯಕ ಪಾತ್ರಕ್ಕಾಗಿ ಅಧ್ಯಕ್ಷರಾದ ಸಿಸಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅದು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ಕಾರಣವಾಗಲಿದೆ ಎಂದು ಅವರು ಆಶಿಸಿದರು.
ಭೇಟಿಯ ಸಮಯದಲ್ಲಿ ನಡೆದ ಮೊದಲ ಭಾರತ-ಈಜಿಪ್ಟ್ ಕಾರ್ಯತಂತ್ರದ ಸಂವಾದದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿದೇಶಾಂಗ ಸಚಿವರಾದ ಅಬ್ದೆಲಟ್ಟಿ ತಮ್ಮ ಅವರು ವಿವರಿಸಿದರು.
ವ್ಯಾಪಾರ, ತಂತ್ರಜ್ಞಾನ, ಇಂಧನ, ರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು.
Pleased to receive Foreign Minister of Egypt, Dr. Badr Abdelatty. Conveyed deep appreciation for my friend, President Sisi for his crucial role in the Gaza Peace Agreement.
— Narendra Modi (@narendramodi) October 17, 2025
India-Egypt Strategic Partnership continues to grow from strength to strength for the benefit of our… pic.twitter.com/aQQEMfxeRV


