ಪ್ರಧಾನ ಮಂತ್ರಿ ಅವರಿಗೆ ಮೊಟ್ಟ ಮೊದಲ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ
ಪ್ರಶಸ್ತಿ ಫಲಕ ಹೀಗೆ ಹೇಳುತ್ತದೆ:“ಶ್ರೀ ನರೇಂದ್ರ ಮೋದಿ ಅವರನ್ನು ದೇಶಕ್ಕೆ ನೀಡಿದ ಶ್ರೇಷ್ಟತಮ ನಾಯಕತ್ವಕ್ಕಾಗಿ ಆಯ್ಕೆ ಮಾಡಲಾಗಿದೆ. ಭಾರತಕ್ಕಾಗಿ ಅವರ ನಿಸ್ವಾರ್ಥ ಸೇವೆ ಜೊತೆಗೆ ಆಯಾಸಗೊಳ್ಳದ ಅವರ ಚೈತನ್ಯದ ಫಲವಾಗಿ ಅಸಾಧಾರಣ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯನ್ನು ದೇಶವು ಸಾಧಿಸುವಂತಾಗಿದೆ.”
ಮೋದಿ ಅವರ ನಾಯಕತ್ವದಲ್ಲಿ , ಭಾರತವು ಈಗ ಅನ್ವೇಷಣೆಯ ಮತ್ತು ಮೌಲ್ಯವರ್ಧಿತ ಉತ್ಪಾದನೆಯ (ಮೇಕ್ ಇನ್ ಇಂಡಿಯಾ ) ಕೇಂದ್ರವಾಗಿ ಹಾಗು ಮಾಹಿತಿ ತಂತ್ರಜ್ಞಾನ , ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳಂತಹ ವೃತ್ತಿಪರ ಸೇವೆಗಳಿಗೆ ಜಾಗತಿಕ ತಾಣವಾಗಿ ಗುರುತಿಸಲ್ಪಟ್ಟಿದೆ “ ಎಂಬುದನ್ನೂ ಪ್ರಶಸ್ತಿ ಪತ್ರವು ಉಲ್ಲೇಖಿಸಿದೆ
ಪ್ರಧಾನಿ ಮೋದಿ ಫಿಲಿಪ್ ಕೋಟ್ಲರ್ ಅವರ ದೂರದರ್ಶಿತ್ವದ ಚಿಂತನೆಯ ನಾಯಕತ್ವದಿಂದಾಗಿ ಡಿಜಿಟಲ್ ಕ್ರಾಂತಿ (ಡಿಜಿಟಲ್ ಇಂಡಿಯಾ ) ಯಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮೊಟ್ಟ ಮೊದಲ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿಯನ್ನು ಹೊಸದಿಲ್ಲಿಯ 7 ನೇ ಲೋಕ ಕಲ್ಯಾಣ ಮಾರ್ಗದಲ್ಲಿಯ ನಿವಾಸದಲ್ಲಿ ಸ್ವೀಕರಿಸಿದರು.

ಈ ಪ್ರಶಸ್ತಿಯು ಜನತೆ, ಲಾಭ ಮತ್ತು ಭೂಗ್ರಹ -ಈ ತ್ರಿವಳಿ ಅಂಶಗಳಿಗೆ ನೀಡಿದ ಆದ್ಯತೆಯಾಧಾರದ ಮೇಲೆ ಕೊಡಲಾಗುತ್ತದೆ. ಇದನ್ನು ವಾರ್ಷಿಕ ನೆಲೆಯಲ್ಲಿ ರಾಷ್ಟ್ರದ ಒಬ್ಬರು ನಾಯಕರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಫಲಕ ಹೀಗೆ ಹೇಳುತ್ತದೆ:

“ಶ್ರೀ ನರೇಂದ್ರ ಮೋದಿ ಅವರನ್ನು ದೇಶಕ್ಕೆ ನೀಡಿದ ಶ್ರೇಷ್ಟತಮ ನಾಯಕತ್ವಕ್ಕಾಗಿ ಆಯ್ಕೆ ಮಾಡಲಾಗಿದೆ. ಭಾರತಕ್ಕಾಗಿ ಅವರ ನಿಸ್ವಾರ್ಥ ಸೇವೆ ಜೊತೆಗೆ ಆಯಾಸಗೊಳ್ಳದ ಅವರ ಚೈತನ್ಯದ ಫಲವಾಗಿ ಅಸಾಧಾರಣ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯನ್ನು ದೇಶವು ಸಾಧಿಸುವಂತಾಗಿದೆ.”

“ಅವರ ನಾಯಕತ್ವದಲ್ಲಿ , ಭಾರತವು ಈಗ ಅನ್ವೇಷಣೆಯ ಮತ್ತು ಮೌಲ್ಯವರ್ಧಿತ ಉತ್ಪಾದನೆಯ (ಮೇಕ್ ಇನ್ ಇಂಡಿಯಾ ) ಕೇಂದ್ರವಾಗಿ ಹಾಗು ಮಾಹಿತಿ ತಂತ್ರಜ್ಞಾನ , ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳಂತಹ ವೃತ್ತಿಪರ ಸೇವೆಗಳಿಗೆ ಜಾಗತಿಕ ತಾಣವಾಗಿ ಗುರುತಿಸಲ್ಪಟ್ಟಿದೆ “ ಎಂಬುದನ್ನೂ ಪ್ರಶಸ್ತಿ ಪತ್ರವು ಉಲ್ಲೇಖಿಸಿದೆ.

“ಅವರ ದೂರದರ್ಶಿತ್ವದ ಚಿಂತನೆಯ ನಾಯಕತ್ವದಿಂದಾಗಿ ಡಿಜಿಟಲ್ ಕ್ರಾಂತಿ (ಡಿಜಿಟಲ್ ಇಂಡಿಯಾ ) ಯಾಗಿದೆ, ಸಾಮಾಜಿಕ ಲಾಭಗಳಿಗಾಗಿ ವಿಶಿಷ್ಟ ಗುರುತಿನ ಸಂಖ್ಯೆ, ಆಧಾರ್. ಹಣಕಾಸು ಸೇರ್ಪಡೆಗಳನ್ನು ಇದು ಒಳಗೊಂಡಿದೆ. ಇದರಿಂದ ಉದ್ಯಮಶೀಲತ್ವ, ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಾಗಿದೆ. ಮತ್ತು ಇದು 21 ನೇ ಶತಮಾನದ ಮೂಲಸೌಕರ್ಯಗಳನ್ನು ರೂಪಿಸುತ್ತಿದೆ” ಎಂದೂ ಪ್ರಶಸ್ತಿ ಪತ್ರ ಬಣ್ಣಿಸಿದೆ.

ಪ್ರಶಸ್ತಿ ಫಲಕವು ಮೇಕ್ ಇನ್ ಇಂಡಿಯಾ, ನವೋದ್ಯಮ ಭಾರತ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಚ ಭಾರತ್ ಉಪಕ್ರಮಗಳನ್ನು ಉಲ್ಲೇಖಿಸಿದೆ. “ಇವುಗಳಿಂದಾಗಿ ಭಾರತವಿಂದು ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಕ ಉತ್ಪಾದನಾ ಮತ್ತು ವ್ಯಾಪಾರೋದ್ಯಮ ತಾಣವಾಗಿ ಸ್ಥಾಪಿತವಾಗಿದೆ ” ಎಂದೂ ಅದರಲ್ಲಿ ನಮೂದಿಸಲಾಗಿದೆ.

ಪ್ರೊ. ಫಿಲಿಪ್ ಕೋಟ್ಲರ್ ಅವರು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಕೆಲ್ಲಾಗ್ ಉದ್ಯಮಾಡಳಿತ ಸ್ಕೂಲ್ ನ ಮಾರುಕಟ್ಟೆ ವಿಭಾಗದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದಾರೆ. ತಮ್ಮ ಅನಾರೋಗ್ಯದ ಕಾರಣದಿಂದ ಅವರು ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯು.ಎಸ್.ಎ.ಯ ಜಾರ್ಜಿಯಾದ ಎ.ಎಂ.ಒ.ಆರ್.ವೈ. ವಿಶ್ವವಿದ್ಯಾಲಯದ ಡಾ. ಜಗದೀಶ ಸೇಥ್ ಅವರನ್ನು ನಿಯೋಜಿಸಿ ಕಳುಹಿಸಿಕೊಟ್ಟಿದ್ದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India vehicle retail sales seen steady in December as tax cuts spur demand: FADA

Media Coverage

India vehicle retail sales seen steady in December as tax cuts spur demand: FADA
NM on the go

Nm on the go

Always be the first to hear from the PM. Get the App Now!
...
Prime Minister Modi Meets Mr. Lip-Bu Tan, Hails Intel’s Commitment to India’s Semiconductor Journey
December 09, 2025

Prime Minister Shri Narendra Modi today expressed his delight at meeting Mr. Lip-Bu Tan and warmly welcomed Intel’s commitment to India’s semiconductor journey.

The Prime Minister in a post on X stated:

“Glad to have met Mr. Lip-Bu Tan. India welcomes Intel’s commitment to our semiconductor journey. I am sure Intel will have a great experience working with our youth to build an innovation-driven future for technology.”