ಯೋಗವು ಮನುಕುಲಕ್ಕೆ ಭಾರತ ನೀಡಿದ ಸಾರ್ವಕಾಲಿಕ ಕೊಡುಗೆಯಾಗಿದೆ! ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುವ ಮೂಲಕ ಇದು ಆರೋಗ್ಯಕರ ಮತ್ತು ಹೆಚ್ಚು ಸಾಮರಸ್ಯದ ಜಗತ್ತಿಗೆ ಪ್ರೇರಣೆ ನೀಡುತ್ತದೆ: ಪ್ರಧಾನಮಂತ್ರಿ
ಅಹಮದಾಬಾದ್ ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿದೆ ಮತ್ತು ಭಾರತದ ಈ ಐತಿಹಾಸಿಕ ನಗರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ: ಪ್ರಧಾನಮಂತ್ರಿ
ವಿಶ್ವ ಯೋಗ ದಿನಕ್ಕೂ ಮುನ್ನ ನಡೆಯುತ್ತಿರುವ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಆರೋಗ್ಯ ಮತ್ತು ಯೋಗಕ್ಷೇಮದ ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು ತಂದಿದೆ: ಪ್ರಧಾನಮಂತ್ರಿ
ಈ ಚಾಂಪಿಯನ್ ಶಿಪ್ ಮೂಲಕ ಯೋಗಾಸನವು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊಸ ಮನ್ನಣೆಯನ್ನು ಪಡೆಯಲಿದೆ ಮತ್ತು ಭವಿಷ್ಯದಲ್ಲಿ ಯೋಗಾಸನವನ್ನು ಒಲಿಂಪಿಕ್ಸ್ ಹಾಗೂ ಇತರ ಬಹು-ಕ್ರೀಡಾಕೂಟಗಳಲ್ಲಿ ಸೇರಿಸಲಾಗುವುದು ಎಂಬ ವಿಶ್ವಾಸ ನನಗಿದೆ: ಪ್ರಧಾನಮಂತ್ರಿ

ನಮಸ್ಕಾರ!

ಇಂದು, ಅಹಮದಾಬಾದ್ ನ ಮಣ್ಣಿನಿಂದ ವಿಶ್ವದ ಕ್ರೀಡಾ ಪರಂಪರೆಗೆ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಇಂದು ಪ್ರಾರಂಭವಾಗುತ್ತಿದೆ. ಇದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ವಿವಿಧ ದೇಶಗಳ ಎಲ್ಲಾ ಕ್ರೀಡಾಪಟುಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಯುನೆಸ್ಕೋ ವಿಶ್ವ ಪರಂಪರೆಯ ನಗರವಾದ ಅಹಮದಾಬಾದ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ, ಜೂನ್ 21 ರಂದು ‘ವಿಶ್ವ ಯೋಗ ದಿನ’ವನ್ನು ಸಹ ಆಚರಿಸಲಾಗುವುದು. ಅಂದು ವಿವಿಧ ದೇಶಗಳಲ್ಲಿ ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿದ್ದು, ಮುಖ್ಯ ಕಾರ್ಯಕ್ರಮವು ಭಾರತದ ಮತ್ತೊಂದು ಐತಿಹಾಸಿಕ ನಗರವಾದ ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ, ವಿಶ್ವ ಯೋಗ ದಿನಕ್ಕೂ ಮೊದಲು  ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಬಂದಿರುವುದು, ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು  ತಂದಿದೆ.

ಸ್ನೇಹಿತರೇ,

ಸುಮಾರು ಒಂದು ದಶಕದ ಹಿಂದೆ, ಭಾರತವು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರಸ್ತಾವನೆಯನ್ನು ಮಂಡಿಸಿತ್ತು. ಈ ಪ್ರಾಚೀನ ಭಾರತೀಯ ಸಂಪ್ರದಾಯವನ್ನು ಮಾನವಕುಲದ ಆರೋಗ್ಯ ಮತ್ತು ಸಾಮೂಹಿಕ ಯೋಗಕ್ಷೇಮದೊಂದಿಗೆ ಜೋಡಿಸುವುದು ನಮ್ಮ ಉದ್ದೇಶವಾಗಿತ್ತು. ಆ ಸಮಯದಲ್ಲಿ, 190 ದೇಶಗಳು ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು. ಇಂದು, ಕೋಟ್ಯಂತರ ಜನರು ಯೋಗವನ್ನು ತಮ್ಮ ದಿನಚರಿಯ ಒಂದು ಭಾಗವಾಗಿಸಿಕೊಂಡಿರುವುದನ್ನು ನೋಡಿ ಸಂತೋಷವಾಗುತ್ತದೆ. ಧ್ಯಾನ ಮತ್ತು ಪ್ರಾಣಾಯಾಮ  ಅವರ ಜೀವನಶೈಲಿಯ ಅವಿಭಾಜ್ಯ ಅಂಗವಾಗುತ್ತಿವೆ.

ಆದರೆ ಸ್ನೇಹಿತರೇ,

ಪ್ರತಿಯೊಂದು ಜೀವಂತ ಪರಂಪರೆಯೂ ಕಾಲಕಾಲಕ್ಕೆ ಹೊಸ ಹಂತಗಳನ್ನು ಪ್ರವೇಶಿಸುತ್ತದೆ. ಯೋಗಾಸನ ಕ್ರೀಡೆಯ ಈ ವಿಶ್ವ ಚಾಂಪಿಯನ್ ಶಿಪ್ ಅಂತಹ ಒಂದು ಹೊಸ ಹಂತದ ಆರಂಭವನ್ನು ಸೂಚಿಸುತ್ತದೆ. ಈ ಚಾಂಪಿಯನ್ ಶಿಪ್ ಮೂಲಕ ಯೋಗಾಸನವು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಮನ್ನಣೆ ಪಡೆಯಲಿದೆ. ಭವಿಷ್ಯದಲ್ಲಿ ಯೋಗಾಸನವು ಒಲಿಂಪಿಕ್ಸ್ ಅಥವಾ ಇತರ ಬಹು-ಕ್ರೀಡಾಕೂಟಗಳಾಗಲಿ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿದೆ. ನಮ್ಮ ಪ್ರಯತ್ನಗಳು ಹೆಚ್ಚಾದಷ್ಟೂ ಸಕಾರಾತ್ಮಕ ಫಲಿತಾಂಶಗಳು ಸಾಧ್ಯವಾಗುತ್ತವೆ. ಖಂಡಿತವಾಗಿಯೂ, ಅಹಮದಾಬಾದಿನಲ್ಲಿ ನಡೆಯುತ್ತಿರುವ ಈ ಮೊದಲ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಆ ಪ್ರಯಾಣದಲ್ಲಿ ಮಹತ್ತರ ಪಾತ್ರ ವಹಿಸಲಿದೆ.

ಸ್ನೇಹಿತರೇ,

ಯೋಗಾಸನ ಕ್ರೀಡೆಗೆ ಮತ್ತೊಂದು ಆಯಾಮವಿದೆ. ಪ್ರತಿಯೊಂದು ಪ್ರಮುಖ ಕ್ರೀಡೆಯೂ ತನ್ನದೇ ಆದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಹೊತ್ತು ತರುತ್ತದೆ ಎಂಬುದು ನಮಗೆ ತಿಳಿದಿದೆ. ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಯೋಗಾಸನ ಕ್ರೀಡೆಗಳು ವಿಸ್ತರಿಸಿದಂತೆ, ಹೊಸ ಸಾಧ್ಯತೆಗಳೂ ಬೆಳೆಯುತ್ತವೆ. ಇದು ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಸಂಶೋಧಕರು ಮತ್ತು ಈವೆಂಟ್ ಮ್ಯಾನೇಜರ್ ಗಳಿಗೂ ವೃತ್ತಿಯ  ಅವಕಾಶಗಳನ್ನು ತೆರೆಯುತ್ತದೆ.

ಸ್ನೇಹಿತರೇ,

ನಾನು ಈ ಮೊದಲೇ ಹೇಳಿದಂತೆ, ಇಡೀ ವಿಶ್ವವೇ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಈ ಚಾಂಪಿಯನ್ಶಿಪ್ ನಡೆಯುತ್ತಿದೆ. ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ವಿಷಯ   ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’   ಎಂಬುದಾಗಿದೆ. ಇಂದು ಜನರು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಸಕ್ರಿಯವಾಗಿರಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದಕ್ಕೆ ಯೋಗವು ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ. ಯೋಗವು ನಮ್ಮನ್ನು ಭೋಗದಿಂದ ಹಾಗೂ ರೋಗದಿಂದ ಮುಕ್ತಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕನಿಷ್ಠ ವೆಚ್ಚದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. *ಆದ್ದರಿಂದ, ಈ ಮಂತ್ರವನ್ನು ನೆನಪಿನಲ್ಲಿಡಿ: ‘ಪ್ರತಿದಿನದ ಯೋಗ, ಓಡಿಸುವುದು ಎಲ್ಲಾ ರೋಗʼ.*

ಸ್ನೇಹಿತರೇ,

ಈ ದೃಷ್ಟಿಕೋನವನ್ನು ಮುನ್ನಡೆಸುತ್ತಾ, ಭಾರತ ಸರ್ಕಾರದ ಆಯುಷ್ ಸಚಿವಾಲಯವು ‘ಯೋಗ ತ್ರೀ ಸಿಕ್ಸ್ಟಿ ಫೈವ್’   ಅಭಿಯಾನವನ್ನು ಪ್ರಾರಂಭಿಸಿದೆ.  ಈ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ನಿಮ್ಮ ದೇಶಗಳಿಗೆ ಹಿಂದಿರುಗಿದ ನಂತರ, ನೀವು ಯೋಗದ ಈ ಸಂದೇಶವನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕೆಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ದೇಶಗಳಲ್ಲಿ ನೀವು ‘ಯೋಗ ತ್ರೀ ಸಿಕ್ಸ್ಟಿ ಫೈವ್’ ಅಭಿಯಾನದ ರಾಯಭಾರಿಗಳಾಗಬಹುದು. ಯೋಗದ ಮೇಲಿನ ನಿಮ್ಮ ಅನುಭವ ಮತ್ತು ನಂಬಿಕೆಯು ಇಡೀ ವಿಶ್ವವನ್ನು ಈ ಸಂದೇಶದೊಂದಿಗೆ ಜೋಡಿಸಬಲ್ಲದು.

ಸ್ನೇಹಿತರೇ,

ಈ ಸ್ಪರ್ಧೆಯಲ್ಲಿ ಯಾರು ಗೆದ್ದರೂ, ಈ ಐತಿಹಾಸಿಕ ಅಧ್ಯಾಯದ ಭಾಗವಾಗುವ ಮೂಲಕ ನೀವೆಲ್ಲರೂ ಈಗಾಗಲೇ ವಿಜೇತರಾಗಿದ್ದೀರಿ. ನಿಮ್ಮ ಪ್ರತಿಭೆ ಮತ್ತು ಶಿಸ್ತು ಜಗತ್ತಿನಾದ್ಯಂತದ ಯುವಕರಿಗೆ ಸ್ಫೂರ್ತಿಯಾಗಲಿದೆ.  ಈ ಶುಭಾಶಯಗಳೊಂದಿಗೆ, ವಿಶ್ವ ಯೋಗಾಸನ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸುವ ಎಲ್ಲರಿಗೂ ಮತ್ತು ಸಂಘಟಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಹಮದಾಬಾದ್ನ ‘ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ಶಿಪ್ 2026’ ಅಧಿಕೃತವಾಗಿ ಆರಂಭವಾಗಿದೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto industry contributes over ₹22.75 lakh crore to Indian economy: SIAM

Media Coverage

Auto industry contributes over ₹22.75 lakh crore to Indian economy: SIAM
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"