ಶೇರ್
 
Comments

ಸಾರ್ಕ್” ಭಾರತದಪಾಲಿಗೆ ಅತ್ಯುತ್ತಮ ವಿದೇಶನೀತಿಯ ಪ್ರಮುಖ ಭಾಗವಾಗಿದೆ. ಸಾರ್ಕ್ ಪ್ರದೇಶದ ಅತಿ ದೊಡ್ಡ ದೇಶವಾಗಿರುವ ಭಾರತ, ಆರ್ಥಿಕವಾಗಿಯೂ ಬಹು ಮುಖ್ಯವಾಗಿದೆ. ಮೊದಲ ದಿನದಿಂದಲೂ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಸಾರ್ಕ್ ತಮ್ಮ ವಿದೇಶ ನೀತಿಯ ಉತ್ತಮ ಬೆಳವಣಿಗೆಗೆ ಕೇಂದ್ರ ಬಿಂಧುವಾಗಿಸಿದ್ದರು.



ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 26ನೇ ಮೇ, 2014ರಂದು ಸಾರ್ಕ್ ದೇಶಗಳ ಮುಖ್ಯಸ್ಥರನ್ನೆಲ್ಲಾ ವಿಶೇಷಗಣ್ಯರಾಗಿ ಆಹ್ವಾನಿಸಿಲು ನಿರ್ಧರಿಸಿದ್ದರು. ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ, ಬಂಗ್ಲಾದೇಶ್ ಸ್ಪೀಕರ್ ಶರ್ಮಿನ್ ಚೌಧರಿ, ಭೂತಾನ ಪ್ರಧಾನಿ ಶೆರಿಂಗ್ ತೋಬ್ಗಿ, ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲ ಯಮೀನ್, ನೇಪಾಲ ಪ್ರಧಾನಿ ಸುಶೀಲ್ ಕೊಯಿರಾಲ, ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಮತ್ತು ಶ್ರೀ ಲಂಕಾ ಅಧ್ಯಕ ರಾಜಪಕ್ಸ ಮುಂತಾದವರೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಮರುದಿನ ಅವರೆಲ್ಲ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಇದೊಂದು ಆಶಾದಾಯಕ ಪ್ರಕ್ರಿಯೆಗಾಗಿ ಗುರುತಿಸಲಾಗಿತ್ತು.



ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಯಾತ್ರೆಯನ್ನು ಭೂತಾನ್ ಮೂಲಕ 15ನೇ ಜೂನ್ 2014ರಂದು ಪ್ರಾರಂಭಿಸಿದರು.ಭೂತಾನ್ ಸಂಸತ್ತಿನಲ್ಲೂ ಭಾಷಣ ಮಾಡಿದರು.

2014ರಲ್ಲಿ 17 ವರ್ಷಗಳನಂತರ ಭಾರತದ ಪ್ರಧಾನ ಮಂತ್ರಿಯವರು ನೇಪಾಲ್ ಸಂದರ್ಶಿಸಿದರು, ಅದು , ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಯಾಗಿತ್ತು.



ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫೆಬ್ರವರಿ 2015ರಲ್ಲಿ, ಶ್ರೀಲಂಕಾ ಭೇಟಿಮಾಡಿದಾಗ , ಹಲವು ವರ್ಷಗಳ ನಂತರ ಭಾರತದ ಆಡಳಿತ ಮುಖ್ಯಸ್ಥರ ಸಂದರ್ಶನವೆಂಬ ಹಗ್ಗಳಿಕೆಗೆ ಪಾತ್ರವಾಯಿತು. ಜಾಫ್ನಾ ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು.

ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ ಅವರು ಮೇ 2015ರಲ್ಲಿ ಭಾರತ ಭೇಟಿ ಸಮಯದಲ್ಲಿ, ಎರಡೂ ದೇಶಗಳ ಸಂಬಂಧ ವೃದ್ದಿಗೆ ಒಪ್ಪಂದ ಮಾಡಿಕೊಂಡರು



ದಶಕಗಳಕಾಲ ನೆನೆಗುದಿ ಬಿದ್ದಿದ್ದ ಬಾಂಗ್ಲಾ ದೇಶದ ಗಡಿ ಒಪ್ಪಂದ ಮೇ 2015ರಲ್ಲಿ ಐತಿಹಾಸಿಕ ನಿರ್ಣಯವಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದಕ್ಕಾಗಿ ಎಲ್ಲ ಮುಖ್ಯಮಂತ್ರಿಗಳನ್ನೂ, ಬಾಂಗ್ಲಾ ಪ್ರಧಾನಿ ಶೈಖ್ ಹಸೀನಾ ಅವರನ್ನೂ ಅಭಿನಂದಿಸಿ, ಮುಂಬರುವ ದಿನಗಳಿಗೆ ಉತ್ತಮ ಭಾಂದವ್ಯವನ್ನು ವರ್ಣಮಯಗೊಳಿಸಿದರು.
ದ್ವಿಪಕ್ಷೀಯ ಮಾತುಕತೆಗಳು, ಪ್ರಮುಖ ಒಪ್ಪಂದಗಳು ಸೇರಿದಂತೆ ಇನ್ನೂ ಅನೇಕ ವಿಷಯಗಳು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರ್ಕ್ ನಾಯಕರೊಂದಿಗೆ ಸಧೃಡ ಸಂಬಂಧಕ್ಕಾಗಿ ಯಶಸ್ವಿಯಾಗಿ ಭದ್ರಬುನಾದಿ ಹಾಕಿದರು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Average time taken for issuing I-T refunds reduced to 16 days in 2022-23: CBDT chairman

Media Coverage

Average time taken for issuing I-T refunds reduced to 16 days in 2022-23: CBDT chairman
...

Nm on the go

Always be the first to hear from the PM. Get the App Now!
...
ಶೇರ್
 
Comments

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .