ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 808 ದಶಲಕ್ಷ ಅಮೆರಿಕನ್ ಡಾಲರ್ ಅಥವಾ 6,062.45 ಕೋಟಿ ರೂ.ಗಳ ವಿಶ್ವಬ್ಯಾಂಕ್ ನೆರವಿನ "ಎಂಎಸ್ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ" (ರಾಂಪ್) ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ರ‍್ಯಾoಪ್ ಒಂದು ಹೊಸ ಯೋಜನೆಯಾಗಿದ್ದು, 2022-23ರ ಹಣಕಾಸು ವರ್ಷದಲ್ಲಿ ಪ್ರಾರಂಭವಾಗಲಿದೆ. 
ಒಳಗೊಂಡಿರುವ ವೆಚ್ಚ:
ಈ ಯೋಜನೆಯ ಒಟ್ಟು ವೆಚ್ಚ ರೂ.6,062.45 ಕೋಟಿ ಅಥವಾ 808 ದಶಲಕ್ಷ ಡಾಲರ್ ಆಗಿದ್ದು, ಅದರಲ್ಲಿ ರೂ.3750 ಕೋಟಿ ಅಥವಾ 500 ದಶಲಕ್ಷ ಅಮೆರಿಕನ್ ಡಾಲರ್ ವಿಶ್ವ ಬ್ಯಾಂಕ್ ಸಾಲವಾಗಿರುತ್ತದೆ ಮತ್ತು ಉಳಿದ ರೂ.2312.45 ಕೋಟಿ ರೂ.ಅಥವಾ 308 ದಶಲಕ್ಷ ಅಮೆರಿಕನ್ ಡಾಲರ್ ಗಳ ಹಣವನ್ನು ಭಾರತ ಸರ್ಕಾರ ನೀಡಲಿದೆ.
ಅಂಶವಾರು ವಿವರಗಳು:
"ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವುದು" (ರ‍್ಯಾoಪ್) ಎಂಬುದು ವಿಶ್ವಬ್ಯಾಂಕ್ ನೆರವಿನ ಕೇಂದ್ರ ವಲಯದ ಯೋಜನೆಯಾಗಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಎಂ.ಒ.ಎಂಎಸ್ಎಂಇ) ಕೊರೊನಾ ವೈರಾಣು ರೋಗ 2019 (ಕೋವಿಡ್)ನಿಂದಾದ ಸಂಕಷ್ಟ ತಾಳಿಕೊಳ್ಳುವ ಮತ್ತು  ಚೇತರಿಕೆಗೆ ಮಧ್ಯಸ್ಥಿಕೆಗಳನ್ನು ಬೆಂಬಲಿಸುತ್ತದೆ.
ಈ ಕಾರ್ಯಕ್ರಮವು ಮಾರುಕಟ್ಟೆ ಮತ್ತು ಸಾಲದ ಲಭ್ಯತೆಯನ್ನು ಉತ್ತಮಪಡಿಸಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಂಸ್ಥೆಗಳು ಮತ್ತು ಆಡಳಿತವನ್ನು ಬಲಪಡಿಸುತ್ತದೆ, ಕೇಂದ್ರ-ರಾಜ್ಯ ಸಂಪರ್ಕಗಳು ಮತ್ತು ಪಾಲುದಾರಿಕೆಗಳನ್ನು ಸುಧಾರಿಸಿ, ವಿಳಂಬಿತ ಪಾವತಿಗಳು ಮತ್ತು ಎಂಎಸ್ಎಂಇಗಳ ಹಸಿರೀಕರಣದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನೂ ಹೊಂದಿದೆ.
ರಾಷ್ಟ್ರೀಯ ಮಟ್ಟದಲ್ಲಿ ಎಂಒಎಂಎಸ್ಎಂಇ ಸಾಮರ್ಥ್ಯವನ್ನು ನಿರ್ಮಿಸುವುದರ ಜೊತೆಗೆ, ರಾಂಪ್ ಕಾರ್ಯಕ್ರಮವು ರಾಜ್ಯಗಳಲ್ಲಿ ಅನುಷ್ಠಾನ ಸಾಮರ್ಥ್ಯ ಮತ್ತು ಎಂಎಸ್ಎಂಇ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
ಉದ್ಯೋಗ ಸೃಷ್ಟಿ ಸಾಮರ್ಥ್ಯ ಮತ್ತು ಫಲಾನುಭವಿಗಳ ಸಂಖ್ಯೆ ಸೇರಿದಂತೆ ಪ್ರಮುಖ ಪರಿಣಾಮ:
ರಾಂಪ್ ಕಾರ್ಯಕ್ರಮವು ಅಸ್ತಿತ್ವದಲ್ಲಿರುವ ಎಂಎಸ್ಎಂಇ ಯೋಜನೆಗಳ, ವಿಶೇಷವಾಗಿ ಸ್ಪರ್ಧಾತ್ಮಕತೆಯ ಮುಂಚೂಣಿಯಲ್ಲಿ ಪ್ರಭಾವ ವರ್ಧನೆಯ ಮೂಲಕ ಎಂಎಸ್ಎಂಇ ವಲಯದಲ್ಲಿನ ಸಾಮಾನ್ಯ ಮತ್ತು ಕೋವಿಡ್ ಸಂಬಂಧಿತ ಸವಾಲುಗಳನ್ನು ಪರಿಹರಿಸುತ್ತದೆ. ಜೊತೆಗೆ, ಈ ಕಾರ್ಯಕ್ರಮವು ಸಾಮರ್ಥ್ಯ ವರ್ಧನೆ, ಕೈಹಿಡಿಯುವಿಕೆ, ಕೌಶಲ್ಯ ಅಭಿವೃದ್ಧಿ, ಗುಣಮಟ್ಟ ವೃದ್ಧಿ, ತಾಂತ್ರಿಕ ಉನ್ನತೀಕರಣ, ಡಿಜಿಟಲೀಕರಣ, ಜನ ಸಂಪರ್ಕ ಮತ್ತು ಮಾರುಕಟ್ಟೆ ಉತ್ತೇಜನದ ಅಸಮರ್ಪಕವಾದ ವಿಭಾಗಗಳನ್ನೂ ಬಲಪಡಿಸುತ್ತದೆ.
ರಾಜ್ಯಗಳೊಂದಿಗೆ ವರ್ಧಿತ ಸಹಯೋಗದ ಮೂಲಕ ರ‍್ಯಾoಪ್ ಕಾರ್ಯಕ್ರಮವು ಉದ್ಯೋಗ-ಸಕ್ರಿಯಗೊಳಿಸುವ, ಮಾರುಕಟ್ಟೆ ಪ್ರವರ್ತಕ, ಹಣಕಾಸು ಆಯೋಜಕ, ಮತ್ತು ದುರ್ಬಲ ವಿಭಾಗಗಳು ಮತ್ತು ಹಸಿರೀಕರಣ ಉಪಕ್ರಮಗಳನ್ನು ಬೆಂಬಲಿಸುತ್ತದೆ.
ಎಂ.ಎಸ್.ಎಂ.ಇ.ಗಳ ಉಪಸ್ಥಿತಿ  ಕೆಳಮಟ್ಟದಲ್ಲಿ ಇರುವ ರಾಜ್ಯಗಳಲ್ಲಿ, ಈ ಕಾರ್ಯಕ್ರಮವು ರ‍್ಯಾoಪ್ ಅಡಿಯಲ್ಲಿ ಬರುವ ಯೋಜನೆಗಳ ಹೆಚ್ಚಿನ ಪರಿಣಾಮದಿಂದ ಉಂಟಾಗುವ ಹೆಚ್ಚಿನ ಔಪಚಾರಿಕೀಕರಣಕ್ಕೆ ನಾಂದಿ ಹಾಡುತ್ತದೆ. ಈ ರಾಜ್ಯಗಳು ಅಭಿವೃದ್ಧಿಪಡಿಸಿದ ಎಸ್ಐಪಿಗಳು ಸುಧಾರಿತ ಎಂಎಸ್ಎಂಇ ವಲಯದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ.
ಉದ್ಯಮದ ಮಾನದಂಡಗಳು, ರೂಢಿಗಳಲ್ಲಿ ನಾವೀನ್ಯತೆ ಮತ್ತು ವರ್ಧನೆಯನ್ನು ಉತ್ತೇಜಿಸುವ ಮೂಲಕ ಮತ್ತು ಎಂಎಸ್ಎಂಇಗಳನ್ನು ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು, ರಫ್ತು ಹೆಚ್ಚಿಸಲು, ಆಮದಿಗೆ ಪರ್ಯಾಯ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಅಗತ್ಯವಾದ ತಾಂತ್ರಿಕ ಆಧಾನಗಳನ್ನು ಒದಗಿಸುವ ಮೂಲಕ ರಾಂಪ್ ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿದೆ.
ರ‍್ಯಾoಪ್ ಹೀಗೆ ಇರುತ್ತದೆ:
‘ನೀತಿ ಒದಗಿಸುವವರು, ಸ್ಪರ್ಧಾತ್ಮಕತೆ ಮತ್ತು ವ್ಯಾಪಾರ ಸುಸ್ಥಿರತೆಯನ್ನು ಸುಧಾರಿಸಲು ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿಯಾದ ಎಂ.ಎಸ್.ಎಂ.ಇ. ಮಧ್ಯಸ್ಥಿಕೆಗಳ ವಿತರಣೆಯನ್ನು ಸಾಕ್ಷ್ಯಾಧಾರಿತ ನೀತಿ ಮತ್ತು ಕಾರ್ಯಕ್ರಮಗಳ ವಿನ್ಯಾಸಕ್ಕಾಗಿ ವರ್ಧಿತ ಸಾಮರ್ಥ್ಯದ ಮೂಲಕ ಸಕ್ರಿಯಗೊಳಿಸುತ್ತಾರೆ’
•    "ಜ್ಞಾನ ಪೂರೈಕೆದಾರ"ರು ಮಾನದಂಡಗಳು, ಅಂತಾರಾಷ್ಟ್ರೀಯ ಅನುಭವಗಳನ್ನು ಬಳಸಿಕೊಳ್ಳುವ ಮೂಲಕ ಉತ್ತಮ ರೂಢಿಗಳು / ಯಶೋಗಾಥೆಗಳನ್ನು ಹಂಚಿಕೊಳ್ಳುವ ಮತ್ತು ಪ್ರದರ್ಶಿಸುತ್ತಾರೆ, ಮತ್ತು
•    "ತಂತ್ರಜ್ಞಾನ ಪೂರೈಕೆದಾರರು" ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಮಶೀನ್ ಲರ್ನಿಂಗ್ ಇತ್ಯಾದಿಗಳ ಮೂಲಕ ಎಂಎಸ್ಎಂಇಗಳ ಡಿಜಿಟಲ್ ಮತ್ತು ತಾಂತ್ರಿಕ ರೂಪಾಂತರಕ್ಕೆ ಕಾರಣವಾಗುವ ಉನ್ನತ ಮಟ್ಟದ ತಂತ್ರಜ್ಞಾನಕ್ಕೆ ಪ್ರವೇಶ ಒದಗಿಸುತ್ತಾರೆ.
ದೇಶಾದ್ಯಂತ ಪರಿಣಾಮಗಳೊಂದಿಗೆ ರ‍್ಯಾoಪ್ ಕಾರ್ಯಕ್ರಮವು ನೇರವಾಗಿ ಅಥವಾ ಪರೋಕ್ಷವಾಗಿ ಎಂಎಸ್ಎಂಇಗಳಾಗಿ ಅರ್ಹತೆ ಪಡೆದ ಎಲ್ಲಾ 63 ದಶಲಕ್ಷ ಉದ್ಯಮಗಳಿಗೆ ಪ್ರಯೋಜನವನ್ನು ನೀಡುತ್ತದೆ
ಆದಾಗ್ಯೂ, ಒಟ್ಟು 5,55,000 ಎಂಎಸ್ಎಂಇಗಳನ್ನು ನಿರ್ದಿಷ್ಟವಾಗಿ ವರ್ಧಿತ ಕಾರ್ಯಕ್ಷಮತೆಗಾಗಿ ಗುರಿಯಾಗಿಟ್ಟುಕೊಳ್ಳಲಾಗಿದೆ ಮತ್ತು ಹೆಚ್ಚುವರಿಯಾಗಿ, ಸೇವಾ ವಿಭಾಗಗಳನ್ನು ಸೇರಿಸಲು ಗುರಿ ಮಾರುಕಟ್ಟೆಯ ವಿಸ್ತರಣೆ ಮತ್ತು ಸುಮಾರು 70,500 ಮಹಿಳಾ ಎಂಎಸ್ಎಂಇಗಳ ಹೆಚ್ಚಳವನ್ನೂ ನಿರೀಕ್ಷಿಸಲಾಗಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ಈ ಕಾರ್ಯಕ್ರಮವು ಪ್ರಾಥಮಿಕ ಅಭಿಯಾನಗಳು ಮತ್ತು ಅಧ್ಯಯನಗಳ ನಂತರ ಎರಡು ಫಲಿತಾಂಶದ ಕ್ಷೇತ್ರಗಳನ್ನು ಗುರುತಿಸಿದೆ: (1) ಎಂಎಸ್ಎಂಇ ಕಾರ್ಯಕ್ರಮದ ಸಂಸ್ಥೆಗಳು ಮತ್ತು ಆಡಳಿತವನ್ನು ಬಲಪಡಿಸುವುದು ಹಾಗೂ (2) ಮಾರುಕಟ್ಟೆ ಪ್ರವೇಶಕ್ಕೆ ಬೆಂಬಲ, ಸ್ಥಿರ ಸಾಮರ್ಥ್ಯಗಳು ಮತ್ತು ಹಣಕಾಸು ಪ್ರವೇಶಕ್ಕೆ ಬೆಂಬಲ.
ಮಾರುಕಟ್ಟೆ ಪ್ರವೇಶ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುವತ್ತ ಗಮನ ಕೇಂದ್ರೀಕರಿಸಿ, ಚಾಲ್ತಿಯಲ್ಲಿರುವ ಎಂ.ಓ.ಎಂ.ಓಸ್.ಎಂ.ಇ. ಕಾರ್ಯಕ್ರಮಗಳನ್ನು ಬೆಂಬಲಿಸಲು ವಿತರಣೆ ಸಂಪರ್ಕಿತ ಸೂಚಕಗಳ (ಡಿಎಲ್ಐಗಳ) ವಿರುದ್ಧ ಸಚಿವಾಲಯದ ಬಜೆಟ್ ನಲ್ಲಿ ರಾಂಪ್ ಮೂಲಕ ಹಣ ಹರಿಯಲಿದೆ.
ಈ ಕೆಳಗಿನ ವಿತರಣೆ ಸಂಪರ್ಕಿತ ಸೂಚಕಗಳನ್ನು ಪೂರೈಸಿದ ನಂತರ ವಿಶ್ವಬ್ಯಾಂಕ್ ನಿಂದ ರ‍್ಯಾoಪ್ ಗೆ ಹಣವನ್ನು ವಿತರಿಸಲಾಗುವುದು:
i.     ರಾಷ್ಟ್ರೀಯ ಎಂ.ಎಸ್.ಎಂ.ಇ. ಸುಧಾರಣಾ ಕಾರ್ಯಸೂಚಿಯನ್ನು ಅನುಷ್ಠಾನ
ii.    ಎಂಎಸ್ಎಂಇ ವಲಯದ ಕೇಂದ್ರ-ರಾಜ್ಯ ಸಹಯೋಗವನ್ನು ತ್ವರಿತಗೊಳಿಸುವುದು
iii.    ತಂತ್ರಜ್ಞಾನ ಉನ್ನತೀಕರಣ ಯೋಜನೆಯ (ಸಿಎಲ್.ಸಿ.ಎಸ್-ಟಿಯುಎಸ್) ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು
iv.    ಎಂ.ಎಸ್.ಎಂ.ಇ.ಗಳಿಗೆ ಸ್ವೀಕಾರಯೋಗ್ಯವಾದ ಹಣಕಾಸು ಮಾರುಕಟ್ಟೆಯನ್ನು ಬಲಪಡಿಸುವುದು
v.    ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗಾಗಿ ಸಾಲ ಖಾತ್ರಿ ಟ್ರಸ್ಟ್ (ಸಿಜಿ.ಟಿ.ಎಂ.ಎಸ್.ಇ.) ಮತ್ತು "ಹಸಿರೀಕರಣ ಮತ್ತು ಜಂಡರ್" ವಿತರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು
vi.    ವಿಳಂಬವಾದ ಪಾವತಿಗಳ ಸಂಭವನೀಯತೆಯನ್ನು ಕಡಿಮೆ ಮಾಡುವುದು
ರಾಂಪ್ ನ ಪ್ರಮುಖ ಅಂಶವೆಂದರೆ ಕಾರ್ಯತಂತ್ರ ಹೂಡಿಕೆ ಯೋಜನೆಗಳನ್ನು (ಎಸ್ಐಪಿಗಳು) ತಯಾರಿಸುವುದು, ಇದರಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಆಹ್ವಾನಿಸಲಾಗುತ್ತದೆ.
ಎಸ್ಐಪಿಗಳು ರ‍್ಯಾoಪ್ ಅಡಿಯಲ್ಲಿ ಎಂಎಸ್ಎಂಇಗಳನ್ನು ಗುರುತಿಸಲು ಮತ್ತು ಸಂಘಟಿಸಲು, ಪ್ರಮುಖ ನಿರ್ಬಂಧಗಳು ಮತ್ತು ಅಂತರಗಳನ್ನು ಗುರುತಿಸಲು, ಮೈಲಿಗಲ್ಲುಗಳನ್ನು ನಿಗದಿಪಡಿಸಲು ಮತ್ತು ನವೀಕರಿಸಬಹುದಾದ ಇಂಧನ, ಗ್ರಾಮೀಣ ಮತ್ತು ಕೃಷಿಯೇತರ ವ್ಯಾಪಾರ, ಸಗಟು ಮತ್ತು ಚಿಲ್ಲರೆ ವ್ಯಾಪಾರ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು, ಮಹಿಳಾ ಉದ್ಯಮಗಳು ಇತ್ಯಾದಿ ಸೇರಿದಂತೆ ಆದ್ಯತಾ ವಲಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಅಗತ್ಯವಾದ ಬಜೆಟ್ ಗಳನ್ನು ಯೋಜಿಸುತ್ತವೆ.
ರ‍್ಯಾoಪ್ ನ ಒಟ್ಟಾರೆ ಮೇಲ್ವಿಚಾರಣೆ ಮತ್ತು ನೀತಿ ಅವಲೋಕನವನ್ನು ವಿವಿಧ ಸಚಿವಾಲಯಗಳ ಪ್ರಾತಿನಿಧ್ಯ ಮತ್ತು ಸಚಿವಾಲಯದ ಬೆಂಬಲದೊಂದಿಗೆ ಎಂಎಸ್ಎಂಇ ಸಚಿವರ ನೇತೃತ್ವದ ಉನ್ನತ ರಾಷ್ಟ್ರೀಯ ಎಂಎಸ್ಎಂಇ ಮಂಡಳಿ ಮಾಡುತ್ತದೆ. ರ‍್ಯಾoಪ್ ಅಡಿಯಲ್ಲಿ ನಿರ್ದಿಷ್ಟ ವಿತರಣಾರ್ಹತೆಗಳ ಮೇಲ್ವಿಚಾರಣೆಯನ್ನು ಎಂ.ಓ.ಎಂ.ಎಸ್.ಎಂ.ಇ.ಯ ಕಾರ್ಯದರ್ಶಿ ನೇತೃತ್ವದ ರ‍್ಯಾoಪ್ ಕಾರ್ಯಕ್ರಮ ಸಮಿತಿ ಮಾಡುತ್ತದೆ. ಇದಲ್ಲದೆ, ದೈನಂದಿನ ಅನುಷ್ಠಾನಕ್ಕಾಗಿ, ಎಂಒಎಂಎಸ್ಎಂಇ ಮತ್ತು ರಾಜ್ಯಗಳನ್ನು ಬೆಂಬಲಿಸಲು, ರ‍್ಯಾoಪ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಉದ್ಯಮದಿಂದ ಸ್ಪರ್ಧಾತ್ಮಕವಾಗಿ ಆಯ್ಕೆಯಾದ ವೃತ್ತಿಪರರು ಮತ್ತು ತಜ್ಞರನ್ನು ಒಳಗೊಂಡ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯಗಳಲ್ಲಿ ಕಾರ್ಯಕ್ರಮ ನಿರ್ವಹಣಾ ಘಟಕಗಳು ಇರುತ್ತವೆ.
ವ್ಯಾಪ್ತಿಗೆ ಬರುವ ರಾಜ್ಯಗಳು/ಜಿಲ್ಲೆಗಳು:
ಎಸ್ಐಪಿಗಳನ್ನು ತಯಾರಿಸಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಆಹ್ವಾನಿಸಲಾಗುವುದು ಮತ್ತು ಎಸ್ಐಪಿಗಳ ಅಡಿಯಲ್ಲಿ ಇರಿಸಲಾದ ಪ್ರಸ್ತಾಪಗಳಿಗೆ ಮೌಲ್ಯಮಾಪನಗಳ ಆಧಾರದ ಮೇಲೆ ಧನಸಹಾಯ ನೀಡಲಾಗುವುದು.
ಈ ನಿಧಿಯು ವಸ್ತುನಿಷ್ಠ ಆಯ್ಕೆ ಮಾನದಂಡವನ್ನು ಆಧರಿಸಿರುತ್ತದೆ ಮತ್ತು ಎಂ.ಓ. ಎಂ.ಎಸ್.ಎಂ.ಇ.ಯಲ್ಲಿ ಸ್ಥಾಪಿಸಲಾದ ಕಠಿಣ ಪ್ರಕ್ರಿಯೆಯ ಮೂಲಕ ಎಸ್ಐಪಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅನುಮೋದಿಸಲಾಗುತ್ತದೆ.
ಹಿನ್ನೆಲೆ:
ಯು.ಕೆ.ಸಿನ್ಹಾ ಸಮಿತಿ, ಕೆ.ವಿ.ಕಾಮತ್ ಸಮಿತಿ ಮತ್ತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಪಿ.ಎಂ.ಇ.ಎ.ಸಿ)ಯ ಶಿಫಾರಸುಗಳಿಗೆ ಅನುಗುಣವಾಗಿ ಎಂಎಸ್ಎಂಇಗಳನ್ನು ಬಲಪಡಿಸಲು ಭಾರತ ಸರ್ಕಾರವು ರ‍್ಯಾoಪ್ ಅನ್ನು ಪ್ರಸ್ತಾಪಿಸಿತು ಮತ್ತು ರೂಪಿಸಿತು.
ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) 97 ನೇ ಪರಿಶೀಲನಾ ಸಮಿತಿ ಸಭೆಯಲ್ಲಿ ರ‍್ಯಾoಪ್ ಕುರಿತ ಪ್ರಾಥಮಿಕ ಪ್ರಸ್ತಾಪವನ್ನು ಅನುಮೋದಿಸಿತು. ಇದನ್ನು ಅಭಿಯಾನಗಳು, ರಾಜ್ಯಗಳು ಮತ್ತು ಇತರ ಬಾಧ್ಯಸ್ಥಗಾರರೊಂದಿಗೆ ವಿಸ್ತೃತ ಸಮಾಲೋಚನೆಗಳು, ವಿಶ್ವಬ್ಯಾಂಕ್ ನಡೆಸಿದ ತಾಂತ್ರಿಕ ಮತ್ತು ವಿಶ್ವಾಸಾರ್ಹ ಮೌಲ್ಯಮಾಪನಗಳು ನಂತರ ಮಾಡಲಾಯಿತು. ತದನಂತರ, ವೆಚ್ಚ ಹಣಕಾಸು ಸಮಿತಿ (ಇಎಫ್.ಸಿ.) ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಬಂಧಿತ ಸಚಿವಾಲಯಗಳು / ಇಲಾಖೆಗಳಿಗೆ ಅವರ ಅಭಿಪ್ರಾಯಗಳನ್ನು ಪಡೆಯಲು ರವಾನಿಸಿತು. 2021 ರ ಮಾರ್ಚ್ 18 ರಂದು ನಡೆದ ತನ್ನ ಸಭೆಯಲ್ಲಿ ಇಎಫ್.ಸಿ. ಟಿಪ್ಪಣಿಯ ಬಗ್ಗೆ ಚರ್ಚಿಸಿತು ಮತ್ತು ಈ ಪ್ರಸ್ತಾಪವನ್ನು ಸಂಪುಟ ಪರಿಶೀಲನೆಗೆ ಶಿಫಾರಸು ಮಾಡಿತು. 

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
India on track to become $10 trillion economy, set for 3rd largest slot: WEF President Borge Brende

Media Coverage

India on track to become $10 trillion economy, set for 3rd largest slot: WEF President Borge Brende
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಫೆಬ್ರವರಿ 2024
February 23, 2024

Vikas Bhi, Virasat Bhi - Era of Development and Progress under leadership of PM Modi