ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ), ಭಾರತ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದಡಿ 2024ರ ನವೆಂಬರ್ 1ರಿಂದ ಆರಂಭವಾಗಿ 2025ರ ಅಕ್ಟೋಬರ್‌ 31ರವರೆಗಿನ 2024-25ನೇ ಎಥೆನಾಲ್ ಪೂರೈಕೆ ವರ್ಷಕ್ಕೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಎಥೆನಾಲ್ ಖರೀದಿ ದರವನ್ನು ಪರಿಷ್ಕರಿಸಲು ಅನುಮೋದನೆ ನೀಡಿದೆ. ಅದರಂತೆ 2024-25 ರ ಎಥೆನಾಲ್ ಪೂರೈಕೆ ವರ್ಷ (2024ರ ನವೆಂಬರ್ 1 ರಿಂದ 2025ರ ಅಕ್ಟೋಬರ್ 31 ರವರೆಗೆ) ಸಿ ಹೆವಿ ಮೊಲಾಸಿಸ್ (ಸಿಎಚ್ ಎಂ) ನಿಂದ ಪಡೆದ ಇಬಿಪಿ ಕಾರ್ಯಕ್ರಮಕ್ಕಾಗಿ ಎಥೆನಾಲ್‌ನ ಒಳಗೊಂಡ ಕಾರ್ಖಾನೆ ಹೊರಗಿನ ಬೆಲೆಯನ್ನು ಲೀಟರ್‌ಗೆ 56.58 ರೂ.ಗಳಿಂದ 57.97 ರೂ.ಗೆ ನಿಗದಿಪಡಿಸಲಾಗಿದೆ.

ಈ ಅನುಮೋದನೆಯು ಸರ್ಕಾರಕ್ಕೆ ಬೆಲೆ ಸ್ಥಿರತೆ ಮತ್ತು ಎಥೆನಾಲ್ ಪೂರೈಕೆದಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವಲ್ಲಿ ನೀತಿಯನ್ನು ಮುಂದುವರಿಸುವ ಹಾದಿ ಸುಗಮಗೊಳಿಸುವುದಲ್ಲದೆ, ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ವಿದೇಶಿ ವಿನಿಮಯದಲ್ಲಿ ಉಳಿತಾಯ ಮಾಡಲು ಮತ್ತು ಪರಿಸರಕ್ಕೆ ಪ್ರಯೋಜನಗಳನ್ನುಂಟು ಮಾಡಲು ಸಹಾಯ ಮಾಡುತ್ತದೆ. ಕಬ್ಬು ರೈತರ ಹಿತದೃಷ್ಟಿಯಿಂದ ಹಿಂದಿನಂತೆ, ಜಿಎಸ್ ಟಿ ಮತ್ತು ಸಾರಿಗೆ ಶುಲ್ಕಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಸಿಎಚ್ಎಂ ಎಥೆನಾಲ್ ಬೆಲೆಗಳಲ್ಲಿ ಶೇ.3 ರಷ್ಟು ಹೆಚ್ಚಳವು ಹೆಚ್ಚಿನ ಮಿಶ್ರಣ ಗುರಿಯನ್ನು ಪೂರೈಸಲು ಸಾಕಷ್ಟು ಎಥೆನಾಲ್ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ. 

ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದರೆ, ಒಎಂಸಿಗಳು ಶೇ.20ರವರೆಗೆ ಎಥೆನಾಲ್ ಮಿಶ್ರಣ ಮಾಡಿ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿವೆ. ದೇಶಾದ್ಯಂತ ಪರ್ಯಾಯ ಮತ್ತು ಪರಿಸರ ಸ್ನೇಹಿ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಈ ಮಧ್ಯಸ್ಥಿಕೆಯು ಇಂಧನ ಅಗತ್ಯಗಳಿಗಾಗಿ ಆಮದು ಅವಲಂಬನೆಯನ್ನು ತಗ್ಗಿಸಲು ಮತ್ತು ಕೃಷಿ ವಲಯಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ (31.12.2024ರಂತೆ), ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ಸುಮಾರು 1,13,007 ಕೋಟಿ ರೂ.ಗಳಿಗಿಂತ ಅಧಿಕ ವಿದೇಶಿ ವಿನಿಮಯ ಮತ್ತು ಸುಮಾರು 193 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಚ್ಚಾ ತೈಲ ಪರ್ಯಾಯವನ್ನು ಉಳಿತಾಯ ಮಾಡಿವೆ.  

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ (ಒಎಂಸಿಗಳು) ಎಥೆನಾಲ್ ಮಿಶ್ರಣವು 2013-14 ರ ಎಥೆನಾಲ್ ಪೂರೈಕೆ ವರ್ಷದಲ್ಲಿ 38 ಕೋಟಿ ಲೀಟರ್‌ನಿಂದ (ಇಎಸ್ ವೈ - ಪ್ರಸ್ತುತ ವರ್ಷದ ನವೆಂಬರ್ 1 ರಿಂದ ಮುಂದಿನ ವರ್ಷದ ಅಕ್ಟೋಬರ್ 31 ರವರೆಗೆ ಎಥೆನಾಲ್ ಪೂರೈಕೆ ಅವಧಿ ಎಂದು ವ್ಯಾಖ್ಯಾನಿಸಲಾಗಿದೆ) 707 ಕೋಟಿ ಲೀಟರ್‌ಗೆ ಏರಿದೆ, ಇಎಸ್ ವೈ 2023-24 ರಲ್ಲಿ ಸರಾಸರಿ ಶೇ. 14.60 ರಷ್ಟು ಮಿಶ್ರಣವನ್ನು ಸಾಧಿಸಿದೆ.

ಸರ್ಕಾರವು ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು 2030ರ ಆರಂಭದಿಂದ ಇಎಸ್‌ ವೈ 2025-26 ಕ್ಕೆ ಮುಂದೂಡಿದೆ ಮತ್ತು "ಭಾರತದಲ್ಲಿ 2020-25 ರಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ನೀಲನಕ್ಷೆ"ಯನ್ನು ಸಾರ್ವಜನಿಕರಿಗೆ ಅವಗಾಹನೆಗೆ ಬಿಡುಗಡೆ ಮಾಡಲಾಗಿದೆ. ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿ ನಡೆಯುತ್ತಿರುವ ಇಎಸ್ ವೈ 2024-25ರ ಅವಧಿಯಲ್ಲಿ ಒಎಂಸಿಗಳು ಶೇ. 18 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸಲು ಯೋಜಿಸಿವೆ. ಇತ್ತೀಚೆಗೆ ಕೈಗೊಂಡಿರುವ ಇತರ ಸಕ್ರಿಯ ಕ್ರಮಗಳಿಲ್ಲಿ ಎಥೆನಾಲ್ ಬಟ್ಟಿ ಇಳಿಸುವಿಕೆಯ ಸಾಮರ್ಥ್ಯವನ್ನು ವರ್ಷಕ್ಕೆ 1713 ಕೋಟಿ ಲೀಟರ್‌ಗೆ ಹೆಚ್ಚಿಸುವುದು; ಎಥೆನಾಲ್ ಕೊರತೆಯಿರುವ ರಾಜ್ಯಗಳಲ್ಲಿ ಮೀಸಲಾದ ಎಥೆನಾಲ್ ಸ್ಥಾವರಗಳನ್ನು (ಡಿಇಪಿಗಳು) ಸ್ಥಾಪಿಸಲು ದೀರ್ಘಾವಧಿಯ ಆಫ್-ಟೇಕ್ ಒಪ್ಪಂದಗಳು (ಎಲ್ ಟಿಒಎ\ಗಳು); ಏಕ ಫೀಡ್ ಡಿಸ್ಟಿಲರಿಗಳನ್ನು ಬಹು ಫೀಡ್ ಆಗಿ ಪರಿವರ್ತಿಸುವುದನ್ನು ಪ್ರೋತ್ಸಾಹಿಸುವುದು; ಇ-100 ಮತ್ತು ಇ-20 ಇಂಧನದ ಲಭ್ಯತೆ; ಫ್ಲೆಕ್ಸಿ ಇಂಧನ ವಾಹನಗಳ ಉಡಾವಣೆ ಇತ್ಯಾದಿ ಸೇರಿವೆ. ಈ ಎಲ್ಲಾ ಹಂತಗಳು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಆತ್ಮನಿರ್ಭರ ಭಾರತದ ಉದ್ದೇಶಗಳನ್ನು ಸಾಧಿಸಲು ಸಹಕಾರಿಯಾಗುತ್ತವೆ.

ಸರ್ಕಾರವು ಇಬಿಪಿ ಕಾರ್ಯಕ್ರಮದಡಿಯಲ್ಲಿ ಒದಗಿಸಿದ ದೂರದೃಷ್ಟಿಯಿಂದಾಗಿ ದೇಶಾದ್ಯಂತ ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಡಿಸ್ಟಿಲರಿಗಳ ಜಾಲ, ಸಂಗ್ರಹಣೆ ಮತ್ತು ಸಾಗಾಣೆ ಸೌಲಭ್ಯಗಳ ರೂಪದಲ್ಲಿ ಹೂಡಿಕೆಗಳು ನಡೆದಿವೆ, ಜೊತೆಗೆ ಉದ್ಯೋಗಾವಕಾಶಗಳು ಮತ್ತು ವಿವಿಧ ಪಾಲುದಾರರಲ್ಲಿ ದೇಶದೊಳಗೆ ಮೌಲ್ಯ ಹಂಚಿಕೆಯನ್ನು ಸಹ ಹೊಂದಿವೆ. ಎಲ್ಲಾ ಡಿಸ್ಟಿಲರಿಗಳು ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಅವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಇಬಿಪಿ ಕಾರ್ಯಕ್ರಮಕ್ಕಾಗಿ ಎಥೆನಾಲ್ ಅನ್ನು ಪೂರೈಸುವ ನಿರೀಕ್ಷೆಯಿದೆ. ಇದು ಪರಿಮಾಣಾತ್ಮಕ ವಿದೇಶೀ ವಿನಿಮಯ ಉಳಿತಾಯ, ಕಚ್ಚಾ ತೈಲ ಪರ್ಯಾಯ, ಪರಿಸರ ಪ್ರಯೋಜನಗಳು ಮತ್ತು ಕಬ್ಬು ಬೆಳೆಯುವ ರೈತರಿಗೆ ಮೊದಲೇ ಹಣ ಪಾವತಿಗೆ ಸಹಾಯ ಮಾಡುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why The SHANTI Bill Makes Modi Government’s Nuclear Energy Push Truly Futuristic

Media Coverage

Why The SHANTI Bill Makes Modi Government’s Nuclear Energy Push Truly Futuristic
NM on the go

Nm on the go

Always be the first to hear from the PM. Get the App Now!
...
Chief Minister of Gujarat meets Prime Minister
December 19, 2025

The Chief Minister of Gujarat, Shri Bhupendra Patel met Prime Minister, Shri Narendra Modi today in New Delhi.

The Prime Minister’s Office posted on X;

“Chief Minister of Gujarat, Shri @Bhupendrapbjp met Prime Minister @narendramodi.

@CMOGuj”