ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 62,500 ಕೋಟಿ ರೂ. (ಅರವತ್ತೆರಡು ಸಾವಿರದ ಐದು ನೂರು ಕೋಟಿ ರೂಪಾಯಿಗಳು ಮಾತ್ರ) ಬಜೆಟ್ ವೆಚ್ಚದೊಂದಿಗೆ 'ಮೊಬೈಲ್ ಫೋನ್ ಉತ್ಪಾದನಾ ಯೋಜನೆ'ಗೆ (ಎಂಪಿಎಂಎಸ್) ಅನುಮೋದನೆ ನೀಡಿದೆ.

ಪ್ರಮುಖ ಅಂಶಗಳು:

ಉತ್ಪಾದನೆಯನ್ನು ಮತ್ತಷ್ಟು ವಿಸ್ತರಿಸಲು, ದೇಶೀಯ ಮೌಲ್ಯವರ್ಧನೆಯನ್ನು ಆಳಗೊಳಿಸಲು, ಪೂರೈಕೆ ಸರಪಳಿಯ ಚೇತರಿಕೆಯನ್ನು ಬಲಪಡಿಸಲು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸರ್ಕಾರವು 'ಮೊಬೈಲ್ ಫೋನ್ ಉತ್ಪಾದನಾ ಯೋಜನೆ'ಯನ್ನು (ಎಂಪಿಎಂಎಸ್) ಪ್ರಾರಂಭಿಸಿದೆ.

ಎಂಪಿಎಂಎಸ್ ಯೋಜನೆಯು ತಾಂತ್ರಿಕ ಸ್ವಾವಲಂಭನೆಯನ್ನು ಸಾಧಿಸಲು, ದೊಡ್ಡ ಆರ್ಥಿಕ ಮೌಲ್ಯವನ್ನು ಹಿಡಿಯಲು ಮತ್ತು ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಆರ್& ಡಿ) ಭಾರತೀಯ ಪೇಟೆಂಟ್ ಗಳನ್ನು ರಚಿಸಲು ಭಾರತೀಯ ಬ್ರ್ಯಾಂಡ್ ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ಅವಧಿಯು 5 ವರ್ಷಗಳು, ಅಂದರೆ ಆರ್ಥಿಕ ವರ್ಷ 2026-27 ರಿಂದ ಆರ್ಥಿಕ ವರ್ಷ 2030-31 ರವರೆಗೆ ಇರಲಿದೆ.

ಈ ಯೋಜನೆಯು ಭಾರತದಲ್ಲಿ ಮೊಬೈಲ್ ಫೋನುಗಳ ಉತ್ಪಾದನೆಗಾಗಿ ಅರ್ಹ ಮಾರಾಟದ ಮೇಲೆ 2.25% ರಿಂದ 5% ರವರೆಗಿನ ವಿಭಿನ್ನ ದರಗಳಲ್ಲಿ ಪ್ರೋತ್ಸಾಹಕ ಬೆಂಬಲವನ್ನು ಒದಗಿಸುತ್ತದೆ. ಪ್ರಮುಖ ಘಟಕಗಳು, ಬಿಡಿಭಾಗಗಳು, ಉಪ-ಜೋಡಣೆಗಳ ದೇಶೀಯ ಮೂಲದ ಖರೀದಿಗೆ ಸಂಬಂಧಿಸಿ ಶೇಕಡಾ 1.5 ರವರೆಗಿನ ಹೆಚ್ಚುವರಿ ಪ್ರೋತ್ಸಾಹಕವನ್ನು ಸಹ ಈ ಯೋಜನೆ ಒದಗಿಸುತ್ತದೆ. ಭಾರತೀಯ ಬ್ರ್ಯಾಂಡ್ ಗಳನ್ನು ನಿರ್ಮಿಸಲು, ಉತ್ಪನ್ನದ ವಿನ್ಯಾಸ ಮತ್ತು ಆರ್ ಅಂಡ್ ಡಿ ಗಾಗಿ ಅರ್ಹ ಮಾರಾಟದ ಮೇಲೆ ಶೇಕಡಾ 3 ರಷ್ಟು ಹೆಚ್ಚುವರಿ ಪ್ರೋತ್ಸಾಹಕವನ್ನು ನೀಡಲಾಗುತ್ತದೆ.

ನಿರೀಕ್ಷಿತ ಫಲಿತಾಂಶಗಳು:

ಯೋಜನೆಯ ಅವಧಿಯಲ್ಲಿ, ದೇಶದಲ್ಲಿ ಒಟ್ಟು ಮೊಬೈಲ್ ಫೋನ್ ಉತ್ಪಾದನೆಯು ಸುಮಾರು 39,00,000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ ಮತ್ತು ಮೊಬೈಲ್ ಫೋನ್ಗಳ ರಫ್ತಿನಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. ಈ ಯೋಜನೆಯು ಸುಮಾರು 60,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ,  ಇದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರದಲ್ಲಿ  ಭಾರತದ ಸ್ಥಾನವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ.

ಹಿನ್ನೆಲೆ:

ಪ್ರಧಾನಮಂತ್ರಿಯವರ 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನವು ಆರ್ಥಿಕ ವರ್ಷ 2014-15 ರಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 7 ಪಟ್ಟು ಮತ್ತು ರಫ್ತನ್ನು 11 ಪಟ್ಟು ಬೆಳೆಸಲು ಪ್ರೇರೇಪಿಸಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವು ಪ್ರಮುಖ ಉದ್ಯೋಗದಾತನಾಗಿ ಹೊರಹೊಮ್ಮಿದೆ, ವಿಶೇಷವಾಗಿ ದೂರದ ಹಳ್ಳಿಗಳ ಯುವಕರು ಮತ್ತು ಮಹಿಳೆಯರಿಗೆ, ಕೆಲವು ಕಾರ್ಖಾನೆಗಳು ಒಂದೇ ಸ್ಥಳದಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ನೀಡಿವೆ.

ಮೊಬೈಲ್ ಫೋನ್ ಉತ್ಪಾದನೆಯು ಈ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿದೆ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯ ಪ್ರಮುಖ ಆಧಾರವಾಗಿ ಹೊರಹೊಮ್ಮಿದೆ. ಭಾರತವು ಪ್ರಸ್ತುತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ದೇಶವಾಗಿದ್ದು, ಭಾರತದಲ್ಲಿ ಬಳಸಲಾಗುವ ಶೇಕಡಾ 99.2 ರಷ್ಟು ಮೊಬೈಲ್ ಫೋನ್ಗಳನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದೆ.

ಡೀಸೆಲ್ ಇಂಧನ ಮತ್ತು ಕತ್ರರಿಸಿದ ವಜ್ರಗಳಂತಹ ಸಾಂಪ್ರದಾಯಿಕ ಪ್ರಮುಖ ರಫ್ತು ವಸ್ತುಗಳನ್ನು ಹಿಂದಿಕ್ಕಿ, ಸ್ಮಾರ್ಟ್ ಫೋನ್ಗಳು 2025 ರಲ್ಲಿ ಭಾರತದಿಂದ ಏಕೈಕ ಅತಿ ದೊಡ್ಡ ರಫ್ತು ಉತ್ಪನ್ನ ವರ್ಗವಾಗಿ ಹೊರಹೊಮ್ಮಿವೆ. ಮೊಬೈಲ್ ಫೋನ್ಗಳು ಈಗ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತಿನಲ್ಲಿ ಪ್ರಮುಖ ಪಾಲನ್ನು ಹೊಂದಿವೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಇರುವ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್ ಐ – ಎಲ್ ಎಸ್ ಇ ಎಂ), ಮೊಬೈಲ್ ಉತ್ಪಾದನೆ ಮತ್ತು ರಫ್ತುಗಳಿಗೆ ಭಾರತವನ್ನು ಜಾಗತಿಕ ಕೇಂದ್ರವಾಗಿ (ಹಬ್) ಸ್ಥಾಪಿಸುವಲ್ಲಿ ಪರಿವರ್ತಕ ಪಾತ್ರವನ್ನು ವಹಿಸಿದೆ. ಪಿಎಲ್ ಐ – ಎಲ್ ಎಸ್ ಇ ಎಂ ನ ಅವಧಿಯು 31 ಮಾರ್ಚ್ 2026 ಕ್ಕೆ ಮುಗಿಯಿತು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's forex reserves hit all-time high of $729.33 billion after $12.42 billion jump

Media Coverage

India's forex reserves hit all-time high of $729.33 billion after $12.42 billion jump
NM on the go

Nm on the go

Always be the first to hear from the PM. Get the App Now!
...
Prime Minister extends greetings on National Sports Day
August 29, 2026

The Prime Minister, Shri Narendra Modi has extended his greetings to all sports lovers on National Sports Day. Shri Modi said that the dedication, passion and determination of sportspersons make the entire nation proud.

The Prime Minister also paid homage to the legendary Major Dhyan Chand Ji, whose brilliance and contribution to Indian hockey continue to inspire generations.

Shri Modi posted on X:

“To every sports lover…your dedication, passion and determination make everyone proud.

We also pay homage to the legendary Major Dhyan Chand Ji, whose brilliance inspires generations.

#NationalSportsDay”