ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2025-26ನೇ ಸಾಲಿನ ಮಾರುಕಟ್ಟೆ ಹಂಗಾಮಿಗಾಗಿ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ ಎಸ್ ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ.
ರೈತರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2025-26 ರ ಮಾರುಕಟ್ಟೆ ಹಂಗಾಮಿನಲ್ಲಿ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಹಿಂದಿನ ವರ್ಷಕ್ಕಿಂತ ಕನಿಷ್ಠ ಬೆಂಬಲ ಬೆಲೆಯಲ್ಲಿ ಅತ್ಯಧಿಕ ಹೆಚ್ಚಳವನ್ನು ಹುಚ್ಚೆಳ್ಳು (ಪ್ರತಿ ಕ್ವಿಂಟಲ್ ಗೆ ರೂ. 820), ರಾಗಿ (ಪ್ರತಿ ಕ್ವಿಂಟಲ್ ಗೆ ರೂ. 596), ಹತ್ತಿ (ಪ್ರತಿ ಕ್ವಿಂಟಲ್ ಗೆ ರೂ. 589) ಮತ್ತು ಎಳ್ಳು (ಪ್ರತಿ ಕ್ವಿಂಟಲ್ ಗೆ ರೂ. 579) ಶಿಫಾರಸು ಮಾಡಲಾಗಿದೆ.
2025-26ನೇ ಸಾಲಿನ ಮಾರುಕಟ್ಟೆ ಹಂಗಾಮಿಗಾಗಿ ಎಲ್ಲಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು
(ಪ್ರತಿ ಕ್ವಿಂಟಲ್‌ಗೆ ರೂ.)
|
ಕ್ರ.ಸಂ. |
ಬೆಳೆಗಳು |
ಎಂ ಎಸ್ ಪಿ 2025-26 |
ವೆಚ್ಚ * ಕೆಎಂಎಸ್ 2025-26 |
ವೆಚ್ಚದ ಮೇಲಿನ ಲಾಭ (%) |
ಎಂ ಎಸ್ ಪಿ |
2025-26ರಲ್ಲಿ ಎಂ ಎಸ್ ಪಿ ಹೆಚ್ಚಳ |
|||||
|
ಧಾನ್ಯಗಳು |
|||||||||||
|
2024-25 |
2013-14 |
2024-25ರ ಮೇಲೆ |
2013-14ರ ಮೇಲೆ |
||||||||
|
1 |
ಭತ್ತ |
ಸಾಮಾನ್ಯ |
2369 |
1579 |
50 |
2300 |
1310 |
69 |
1059 (81%) |
||
|
|
ಗ್ರೇಡ್ ಎ^ |
2389 |
- |
- |
2320 |
1345 |
69 |
1044 (78%) |
|||
|
2 |
ಜೋಳ |
ಹೈಬ್ರಿಡ್ |
3699 |
2466 |
50 |
3371 |
1500 |
328 |
2199 (147%) |
||
|
|
ಮಾಲ್ದಂಡಿ^ |
3749 |
- |
- |
3421 |
1520 |
328
|
2299 (147%) |
|||
|
3 |
ಸಜ್ಜೆ |
2775 |
1703 |
63 |
2625 |
1250 |
150 |
1525 (122%) |
|||
|
4 |
ರಾಗಿ |
4886 |
3257 |
50 |
4290 |
1500 |
596 |
3386 (226%) |
|||
|
5 |
ಮೆಕ್ಕೆಜೋಳ |
2400 |
1508 |
59 |
2225 |
1310 |
175 |
1090 (83%) |
|||
|
|
ದ್ವಿದಳ ಧಾನ್ಯಗಳು |
||||||||||
|
6 |
ತೊಗರಿ/ಅರಹರ್ |
8000 |
5038 |
59 |
7550 |
4300 |
450 |
3700 (86%) |
|||
|
7 |
ಹೆಸರು ಕಾಳು |
8768 |
5845 |
50 |
8682 |
4500 |
86 |
4268 (95%) |
|||
|
8 |
ಉದ್ದಿನ ಕಾಳು |
7800 |
5114 |
53 |
7400 |
4300 |
400
|
3500 |
|||
|
|
ಎಣ್ಣೆ ಬೀಜಗಳು |
||||||||||
|
9 |
ನೆಲಗಡಲೆ |
7263 |
4842 |
50 |
6783 |
4000 |
480 |
3263 (82%)
|
|||
|
10 |
ಸೂರ್ಯಕಾಂತಿ ಬೀಜ |
7721 |
5147 |
50 |
7280 |
3700 |
441 |
4021 (109%) |
|||
|
11 |
ಸೋಯಾಬೀನ್ (ಹಳದಿ) |
5328 |
3552 |
50 |
4892 |
2560 |
436 |
2768 (108%) |
|||
|
12 |
ಎಳ್ಳು |
9846 |
6564 |
50 |
9267 |
4500 |
579 |
5346 (119%) |
|||
|
13 |
ಹುಚ್ಚೆಳ್ಳು |
9537 |
6358 |
50 |
8717 |
3500 |
820 |
6037 (172%) |
|||
|
|
ವಾಣಿಜ್ಯ |
|
|
|
|
|
|
|
|||
|
14 |
ಹತ್ತಿ |
ಮಧ್ಯಮ ಎಳೆ |
7710 |
5140 |
50 |
7121 |
3700 |
589 |
4010 (108%) |
||
|
ಉದ್ದನೆಯ ಎಳೆ |
8110 |
- |
- |
7521 |
4000 |
589 |
4110 (103%) |
||||
|
|
|||||||||||
*ಮಾನವ ಕಾರ್ಮಿಕರಿಗೆ ಬಾಡಿಗೆ, ಎತ್ತುಗಳ ಕೂಲಿ /ಯಂತ್ರ ಬಾಡಿಗೆ, ಭೂಮಿಯ ಗುತ್ತಿಗೆಗೆ ನೀಡಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ಕಾರ್ಯನಿರತ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್/ವಿದ್ಯುತ್ ಇತ್ಯಾದಿ, ವಿವಿಧ ವೆಚ್ಚಗಳು ಮತ್ತು ಕುಟುಂಬ ಕಾರ್ಮಿಕರ ಲೆಕ್ಕಹಾಕಿದ ಮೌಲ್ಯದಂತಹ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಒಳಗೊಂಡಿರುವ ವೆಚ್ಚವನ್ನು ಉಲ್ಲೇಖಿಸುತ್ತದೆ.
^ ಭತ್ತ (ಗ್ರೇಡ್ ಎ), ಜೋಳ (ಮಾಲ್ದಂಡಿ) ಮತ್ತು ಹತ್ತಿ (ಉದ್ದನೆಯ ಎಳೆ) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿಲ್ಲ.
2025-26ರ ಮಾರುಕಟ್ಟೆ ಹಂಗಾಮನಿನಲ್ಲಿ ಖಾರಿಫ್ ಬೆಳೆಗಳಿಗೆ ಎಂ ಎಸ್ ಪಿ ಹೆಚ್ಚಳವು 2018-19 ರ ಕೇಂದ್ರ ಬಜೆಟ್ ನಲ್ಲಿ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂ ಎಸ್ ಪಿ ಯನ್ನು ನಿಗದಿಪಡಿಸುವ ಘೋಷಣೆಗೆ ಅನುಗುಣವಾಗಿದೆ. ಸಜ್ಜೆ (63%) ನಂತರ ಮೆಕ್ಕೆಜೋಳ (59%), ತೊಗರಿ (59%) ಮತ್ತು ಉದ್ದಿನ ಕಾಳು (53%) ಸಂದರ್ಭದಲ್ಲಿ ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಲಾಭದ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ 50% ಲಾಭವನ್ನು ಅಂದಾಜಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಪೌಷ್ಟಿಕ ಧಾನ್ಯಗಳು/ ಶ್ರೀ ಅನ್ನದಂತಹ ಧಾನ್ಯಗಳಲ್ಲದೆ ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ, ಈ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತಿದೆ.
2014-15 ರಿಂದ 2024-25 ರ ಅವಧಿಯಲ್ಲಿ 7608 ಎಲ್ ಎಂ ಟಿ ಭತ್ತ ಖರೀದಿಯಾಗಿದ್ದರೆ, 2004-05 ರಿಂದ 2013-14 ರ ಅವಧಿಯಲ್ಲಿ 4590 ಎಲ್ ಎಂ ಟಿ ಭತ್ತ ಖರೀದಿಯಾಗಿತ್ತು.
2014-15 ರಿಂದ 2024-25 ರ ಅವಧಿಯಲ್ಲಿ, 14 ಖಾರಿಫ್ ಬೆಳೆಗಳ ಖರೀದಿ 7871 ಎಲ್ ಎಂ ಟಿ ಆಗಿದ್ದರೆ, 2004-05 ರಿಂದ 2013-14 ರ ಅವಧಿಯಲ್ಲಿ, ಇವುಗಳ ಖರೀದಿ 4679 ಎಲ್ ಎಂ ಟಿ ಆಗಿತ್ತು.
2014-15 ರಿಂದ 2024-25 ರ ಅವಧಿಯಲ್ಲಿ, ಭತ್ತ ಬೆಳೆಯುವ ರೈತರಿಗೆ ಪಾವತಿಸಿದ ಕನಿಷ್ಠ ಬೆಂಬಲ ಬೆಲೆ ಮೊತ್ತ 14.16 ಲಕ್ಷ ಕೋಟಿ ರೂ.ಗಳಾಗಿದ್ದರೆ, 2004-05 ರಿಂದ 2013-14 ರ ಅವಧಿಯಲ್ಲಿ, ರೈತರಿಗೆ ಪಾವತಿಸಿದ ಮೊತ್ತ 4.44 ಲಕ್ಷ ಕೋಟಿ ರೂ.ಗಳಾಗಿತ್ತು.
2014-15 ರಿಂದ 2024-25 ರ ಅವಧಿಯಲ್ಲಿ, 14 ಖಾರಿಫ್ ಬೆಳೆಗಳನ್ನು ಬೆಳೆಯುವ ರೈತರಿಗೆ ಪಾವತಿಸಿದ ಎಂ ಎಸ್ ಪಿ ಮೊತ್ತವು 16.35 ಲಕ್ಷ ಕೋಟಿ ರೂ.ಗಳಾಗಿದ್ದರೆ, 2004-05 ರಿಂದ 2013-14 ರ ಅವಧಿಯಲ್ಲಿ, ರೈತರಿಗೆ ಪಾವತಿಸಿದ ಎಂ ಎಸ್ ಪಿ ಮೊತ್ತವು 4.75 ಲಕ್ಷ ಕೋಟಿ ರೂ.ಗಳಷ್ಟಿತ್ತು.
देशभर के किसान भाई-बहनों के कल्याण के लिए हम पूरी तरह से प्रतिबद्ध हैं। इसी दिशा में 2025-26 के खरीफ सीजन के लिए धान, तिलहन और दलहन सहित 14 फसलों की एमएसपी में बढ़ोतरी को मंजूरी दी गई है। इससे अन्नदाताओं की कमाई बढ़ने के साथ इन फसलों का उत्पादन भी बढ़ेगा।https://t.co/K5A257TSTr
— Narendra Modi (@narendramodi) May 28, 2025


