ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಸ್ಸಾಂ ಮತ್ತು ತ್ರಿಪುರಾಗಳಿಗೆ ಅಸ್ತಿತ್ವದಲ್ಲಿರುವ ಕೇಂದ್ರ ವಲಯದ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ಗಳ ಯೋಜನೆಯಡಿ (ಎಸ್.ಡಿ.ಪಿ.-SDPs) ನಾಲ್ಕು ಹೊಸ ಘಟಕಗಳನ್ನು ಅನುಮೋದಿಸಿದೆ, ಇದರ ಒಟ್ಟು ವೆಚ್ಚ ರೂ. 4,250 ಕೋಟಿ.
ವಿವರಗಳು:
- ಭಾರತ ಸರ್ಕಾರ ಮತ್ತು ಅಸ್ಸಾಂ ಸರ್ಕಾರವು ಅಸ್ಸಾಂನ ಆದಿವಾಸಿ ಗುಂಪುಗಳೊಂದಿಗೆ ಅಂಕಿತ ಹಾಕಿದ ಒಪ್ಪಂದದ ಅನ್ವಯ (ಎಂ.ಒ.ಎಸ್-MoS) ಅಸ್ಸಾಂನ ಆದಿವಾಸಿಗಳು ವಾಸಿಸುವ ಗ್ರಾಮಗಳು/ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂ.500 ಕೋಟಿ.
- ಭಾರತ ಸರ್ಕಾರ ಮತ್ತು ಅಸ್ಸಾಂ ಸರ್ಕಾರವು ದಿಮಾಸಾ ರಾಷ್ಟ್ರೀಯ ವಿಮೋಚನಾ ಸೇನೆ (ಡಿ.ಎನ್.ಎಲ್.ಎ.-DNLA) / ದಿಮಾಸಾ ಪೀಪಲ್ಸ್ ಸುಪ್ರೀಂ ಕೌನ್ಸಿಲ್ (ಡಿ.ಪಿ.ಎಸ್.ಸಿ.-DPSC) ಗುಂಪುಗಳೊಂದಿಗೆ ಅಂಕಿತ ಹಾಕಿದ ಒಪ್ಪಂದದ ಪ್ರಕಾರ, ದಿಮಾಸಾ ರಾಷ್ಟ್ರೀಯ ವಿಮೋಚನಾ ಸೇನೆ/ ದಿಮಾಸಾ ಪೀಪಲ್ಸ್ ಸುಪ್ರೀಂ ಕೌನ್ಸಿಲ್ ಜನರು ವಾಸಿಸುವ ಹಳ್ಳಿಗಳು/ಅಸ್ಸಾಂನ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂ.500 ಕೋಟಿ.
- ಭಾರತ ಸರ್ಕಾರ ಮತ್ತು ಅಸ್ಸಾಂ ಸರ್ಕಾರವು ಅಸ್ಸಾಂನ ಉಲ್ಫಾ (ULFA) ಗುಂಪುಗಳೊಂದಿಗೆ ಸಹಿ ಮಾಡಿದ ಒಪ್ಪಂದ (MoS) ಪ್ರಕಾರ, ಅಸ್ಸಾಂ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂ.3,000 ಕೋಟಿ.
- ಭಾರತ ಸರ್ಕಾರ ಮತ್ತು ತ್ರಿಪುರ ಸರ್ಕಾರಗಳು ತ್ರಿಪುರದ ರಾಷ್ಟ್ರೀಯ ವಿಮೋಚನಾ ರಂಗ (ಎನ್.ಎಲ್.ಎಫ್.ಟಿ-NLFT) ಮತ್ತು ಆಲ್ ತ್ರಿಪುರ ಟೈಗರ್ ಫೋರ್ಸ್ (ಎ.ಟಿ.ಟಿ.ಎಫ್.- ATTF) ಗುಂಪುಗಳೊಂದಿಗೆ ಸಹಿ ಮಾಡಿದ ಒಪ್ಪಂದ ಪ್ರಕಾರ, ತ್ರಿಪುರದ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ರೂ.250 ಕೋಟಿ.
ಹಣಕಾಸಿನ ಪರಿಣಾಮ:
ಪ್ರಸ್ತಾವಿತ ನಾಲ್ಕು ಹೊಸ ಘಟಕಗಳ ಒಟ್ಟಾರೆ ವೆಚ್ಚವು ರೂ.7,250 ಕೋಟಿಗಳಾಗಿದ್ದು, ಇದರಲ್ಲಿ ರೂ.4,250 ಕೋಟಿಗಳನ್ನು ಅಸ್ಸಾಂ (ರೂ.4000 ಕೋಟಿ) ಮತ್ತು ತ್ರಿಪುರ (ರೂ.250 ಕೋಟಿ) ಗಳಿಗೆ ಅಸ್ತಿತ್ವದಲ್ಲಿರುವ ಕೇಂದ್ರ ವಲಯದ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ಗಳ ಯೋಜನೆಯಡಿಯಲ್ಲಿ ಒದಗಿಸಲಾಗುವುದು ಮತ್ತು ಉಳಿದ ರೂ.3,000 ಕೋಟಿಗಳನ್ನು ಅಸ್ಸಾಂ ರಾಜ್ಯ ಸರ್ಕಾರವು ತನ್ನ ಸಂಪನ್ಮೂಲಗಳಿಂದ ನೀಡುತ್ತದೆ.
4,250 ಕೋಟಿ ರೂ.ಗಳಲ್ಲಿ, 2025-26 ರಿಂದ 2029-30 ರವರೆಗಿನ ಐದು ವರ್ಷಗಳ ಹಣಕಾಸು ಅವಧಿಗೆ ರೂ.4,000 ಕೋಟಿ ಮೊತ್ತವು ಅಸ್ಸಾಂನ ಮೂರು ಘಟಕಗಳಿಗೆ ಮತ್ತು 2025-26 ರಿಂದ 2028-29 ರವರೆಗಿನ ನಾಲ್ಕು ಹಣಕಾಸು ವರ್ಷಗಳ ಅವಧಿಗೆ ರೂ.250 ಕೋಟಿ ಮೊತ್ತವು ತ್ರಿಪುರದ ಒಂದು ಘಟಕಕ್ಕೆ ಭಾರತ ಸರ್ಕಾರ, ಅಸ್ಸಾಂ ಮತ್ತು ತ್ರಿಪುರ ರಾಜ್ಯ ಸರ್ಕಾರಗಳು ಸಂಬಂಧಪಟ್ಟ ರಾಜ್ಯದ ಆಯಾ ಜನಾಂಗೀಯ ಗುಂಪುಗಳೊಂದಿಗೆ ಅಂಕಿತ ಮಾಡಿದ ಒಪ್ಪಂದ/ಇತ್ಯರ್ಥಗಳ ಪತ್ರದ ಪ್ರಕಾರರ ವಿನಿಯೋಗವಾಗಲಿದೆ.
ಉದ್ಯೋಗ ಸೃಷ್ಟಿಯ ಸಾಧ್ಯತೆ ಸೇರಿದಂತೆ ಒಟ್ಟು ಪರಿಣಾಮ:
• ಮೂಲಸೌಕರ್ಯ ಮತ್ತು ಜೀವನೋಪಾಯ ಯೋಜನೆಗಳು ಉದ್ಯೋಗ ಸೃಷ್ಟಿಸುತ್ತವೆ
• ಕೌಶಲ್ಯ ಅಭಿವೃದ್ಧಿ, ಆದಾಯ ಉತ್ಪಾದನೆ ಮತ್ತು ಸ್ಥಳೀಯ ಉದ್ಯಮಶೀಲತೆಯ ಮೂಲಕ ಯುವಜನರು ಮತ್ತು ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ.
• ಕೌಶಲ್ಯ ಅಭಿವೃದ್ಧಿ, ಆದಾಯ ಉತ್ಪಾದನೆ ಮತ್ತು ಸ್ಥಳೀಯ ಉದ್ಯಮಶೀಲತೆಯ ಮೂಲಕ ಯುವಜನರು ಮತ್ತು ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ.
• ಬಾಧಿತ ಸಮುದಾಯಗಳನ್ನು ಸ್ಥಿರತೆ ಮತ್ತು ಮುಖ್ಯವಾಹಿನಿಗೆ ತರುವ ನಿರೀಕ್ಷೆಯಿದೆ
ಪ್ರಯೋಜನಗಳು:
ಈ ಯೋಜನೆಯು ನಿರ್ದಿಷ್ಟವಾಗಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರವನ್ನು ಗುರಿಯಾಗಿರಿಸಿಕೊಂಡಿದೆ. ಇದು ಈ ಮೂಲಕ ಸಮಾನತೆಯನ್ನು ಉತ್ತೇಜಿಸುತ್ತದೆ:
• ಅಸ್ತಿತ್ವದಲ್ಲಿರುವ ವಿವಿಧ ಸರ್ಕಾರಿ ಯೋಜನೆಗಳಿಂದ ಸಮರ್ಪಕವಾಗಿ ಪ್ರಯೋಜನ ಪಡೆಯದ ದುರ್ಬಲ ಮತ್ತು ಸಮಾಜದ ಅಂಚಿನಲ್ಲಿರುವ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು;
• ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಆರೋಗ್ಯ ಸೇವೆಗಳನ್ನು ಒದಗಿಸುವುದು, ಯುವಜನರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳ ಮೂಲಕ ಶಿಕ್ಷಣ ಮತ್ತು ಕೌಶಲ್ಯಗಳಿಗೆ ಉತ್ತೇಜನ ನೀಡುವುದು ಹಾಗು ಆದಾಯವನ್ನು ಉತ್ತೇಜಿಸುವುದು;
• ದೇಶದ ಇತರ ಭಾಗಗಳಿಂದ ಪ್ರವಾಸಿಗರ ಒಳಹರಿವನ್ನು ಹೆಚ್ಚಿಸುವುದು, ಇದರಿಂದಾಗಿ ಈಶಾನ್ಯ ಪ್ರದೇಶದ ಜನರಿಗೆ ಹೆಚ್ಚುವರಿ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು.
ಇದರ ಮೂಲಕ, ಅಸ್ಸಾಂನ ಆದಿವಾಸಿ ಮತ್ತು ದಿಮಾಸಾ ಸಮುದಾಯಗಳ ಲಕ್ಷಾಂತರ ಜನರು, ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ವಾಸಿಸುವ ಜನರು ಮತ್ತು ತ್ರಿಪುರದ ಬುಡಕಟ್ಟು ಸಮುದಾಯಗಳ ಜನರು ಪ್ರಯೋಜನ ಪಡೆಯುತ್ತಾರೆ.
ಇದು ಪ್ರಸ್ತುತ ಚಾಲ್ತಿಯಲ್ಲಿರುವ ಕೇಂದ್ರ ವಲಯದ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ಗಳ ಯೋಜನೆಯಡಿಯಲ್ಲಿ ಹೊಸ ಉಪಕ್ರಮವಾಗಿದೆ. ಹಿಂದಿನ ಎಂ.ಒ.ಎಸ್.--ಆಧಾರಿತ ಪ್ಯಾಕೇಜ್‌ಗಳು (ಉದಾ., ಬೋಡೋ ಮತ್ತು ಕಾರ್ಬಿ ಗುಂಪುಗಳಿಗೆ) ಶಾಂತಿ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿವೆ.
ಹಿನ್ನೆಲೆ:
ಭಾರತ ಸರ್ಕಾರ, ಅಸ್ಸಾಂ ಮತ್ತು ತ್ರಿಪುರ ರಾಜ್ಯ ಸರ್ಕಾರಗಳು ಆಯಾ ಜನಾಂಗೀಯ ಗುಂಪುಗಳೊಂದಿಗೆ (ಆದಿವಾಸಿ ಗುಂಪುಗಳು - 2022, ಡಿ.ಎನ್.ಎಲ್.ಎ./ಡಿ.ಪಿ.ಎಸ್.ಸಿ.(DNLA/DPSC) - 2023, ಉಲ್ಫಾ (ULFA) - 2023, ಎನ್.ಎಲ್.ಎಫ್.ಟಿ/ಎ.ಟಿ.ಟಿ.ಎಫ್-(NLFT/ATTF ) - 2024) ಒಪ್ಪಂದಗಳಿಗೆ ಸಹಿ ಹಾಕಿದ್ದವು. ಈ ಎಂ.ಒ.ಎಸ್. ಗಳು ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಯೋಜನೆಗಳ ಮೂಲಕ ಶಾಂತಿ, ಸಮಗ್ರ ಅಭಿವೃದ್ಧಿ ಮತ್ತು ಪುನರ್ವಸತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.


