ಪಶ್ಚಿಮ ಬಂಗಾಳದ ಸಿಲಿಗುರಿಯ ಬಾಗ್ದ್‌ ಗೋರಾ ವಿಮಾನ ನಿಲ್ದಾಣದಲ್ಲಿ ರೂ.1549 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ ಸಾರ್ವಜನಿಕರ ಸೌಕರ್ಯ ಸಂಕೀರ್ಣ (ಸಿವಿಲ್ ಎನ್ಕ್ಲೇವ್) ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - ಎ.ಎ.ಐ.) ಸಲ್ಲಿಸಿದ ಪ್ರಸ್ತಾವನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅಂಗೀಕಾರ ನೀಡಿ ಅನುಮೋದಿಸಿದೆ.

ಪ್ರಸ್ತಾವಿತ ಟರ್ಮಿನಲ್ ಕಟ್ಟಡವು 70,390 ಚದರ ಮೀಟರ್ ವ್ಯಾಪ್ತಿ ಹೊಂದಿದೆ ಮತ್ತು ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ (ಪಿ.ಹೆಚ್.ಪಿ.) ಸುಮಾರು 3000 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುವಂತೆ ಹಾಗೂ ವಾರ್ಷಿಕ 10 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ  ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ಎ-321 ಮಾದರಿಯ ವಿಮಾನಗಳಿಗೆ ಸೂಕ್ತವಾದ 10 ನಿಲುಗಡೆ ಹಾದಿ (ಪಾರ್ಕಿಂಗ್ ಬೇ) ಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಮೇಲ್ಚಾವಣಿ (ಅಪ್ರಾನ್‌ ) ನಿರ್ಮಾಣ ಹಾಗೂ ಇದರ ಜೊತೆಗೆ ಎರಡು ಲಿಂಕ್ ಟ್ಯಾಕ್ಸಿ ವೇ ಗಳು ಮತ್ತು ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯ ಪ್ರಮುಖ ಅಂಶಗಳಲ್ಲಿ ಸೇರಿವೆ.

ಪರಿಸರದ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯ ಆಧಾರದಲ್ಲಿ, ಟರ್ಮಿನಲ್ ಕಟ್ಟಡವು ಸಂಪೂರ್ಣ ಹಸಿರು ಕಟ್ಟಡವಾಗಿ ನಿರ್ಮಾಣವಾಗಲಿದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂಯೋಜಿಸಲಿವೆ, ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ನೈಸರ್ಗಿಕ ಬೆಳಕಿನ ಬಳಕೆಯನ್ನು ಗರಿಷ್ಠಗೊಳಿಸಲಿದೆ.

ಈ ಸಂಕೀರ್ಣದ ಪ್ರಸ್ತಾವಿತ ಅಭಿವೃದ್ಧಿಯು ಬಾಗ್ದ್‌ ಗೋರಾ ವಿಮಾನ ನಿಲ್ದಾಣದ ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಗಣನೀಯವಾಗಿ ಹೆಚ್ಚಿಸಲು ಸಿದ್ಧವಾಗಿದೆ. ಈ ಪ್ರದೇಶಕ್ಕೆ ಪ್ರಮುಖ ವಾಯುಯಾನ ಕೇಂದ್ರವಾಗಿ ಅದರ ಪಾತ್ರವನ್ನು ಬಲಪಡಿಸಲಿದೆ.

 

This development is poised to significantly enhance Bagdogra Airport's operational efficiency and passenger experience, reinforcing its role as a pivotal air travel hub for the region.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India adds record renewable energy capacity of about 30 GW in 2024

Media Coverage

India adds record renewable energy capacity of about 30 GW in 2024
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಜನವರಿ 2025
January 12, 2025

Appreciation for PM Modi's Effort from Empowering Youth to Delivery on Promises