ನಿಮ್ಮೆಲ್ಲರಿಗೂ ಶುಭಾಶಯಗಳು!

ಈ ಸಭಾಂಗಣವು ಇಂದು ಭಾರತ ಮತ್ತು ಆಸ್ಟ್ರೇಲಿಯಾದ ವ್ಯಾಪಾರ ಸಾಮರ್ಥ್ಯ ಮತ್ತು ವಾಣಿಜ್ಯ ಮಹತ್ವಾಕಾಂಕ್ಷೆಯನ್ನು ಒಗ್ಗೂಡಿಸುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿಮ್ಮ ಉಪಸ್ಥಿತಿಯು ನಮ್ಮ ಹಂಚಿಕೆಯ ವಿಶ್ವಾಸ ಮತ್ತು ಹಂಚಿಕೆಯ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ.

ಜಗತ್ತು ಇಂದು ಅನಿಶ್ಚಿತತೆ, ಪೂರೈಕೆ ಸರಣಿ ಅಡಚಣೆಗಳು ಮತ್ತು ಇಂಧನ ಬಿಕ್ಕಟ್ಟುಗಳ ಅವಧಿಯನ್ನು ಎದುರಿಸುತ್ತಿದೆ. ಇಂತಹ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ನೈಸರ್ಗಿಕ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ ಮುಂದುವರಿಯುವುದು ಸ್ವಾಭಾವಿಕ ಮತ್ತು ಅತ್ಯಗತ್ಯ.

ಕಳೆದ ಕೆಲವು ವರ್ಷಗಳಿಂದ, ನಮ್ಮ ಎರಡೂ ರಾಷ್ಟ್ರಗಳ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಭವಿಷ್ಯದ ಪಾಲುದಾರಿಕೆಗಾಗಿ ನಾವು ಸದೃಢವಾದ ಚೌಕಟ್ಟನ್ನು ನಿರ್ಮಿಸಿದ್ದೇವೆ. 2022 ರಲ್ಲಿ ದಾಖಲೆಯ ಸಮಯದಲ್ಲಿ ಮುಕ್ತಾಯಗೊಂಡ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ನಮ್ಮ ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ. ಅದರ ಜಾರಿಯ ನಂತರ ಆಸ್ಟ್ರೇಲಿಯಾಕ್ಕೆ ಭಾರತದ ರಫ್ತುಗಳು ದ್ವಿಗುಣಗೊಂಡಿವೆ ಮತ್ತು ಎರಡೂ ದೇಶಗಳಲ್ಲಿನ ವ್ಯವಹಾರಗಳು ವರ್ಧಿತ ಮಾರುಕಟ್ಟೆ ಲಭ್ಯತೆ ಅವಕಾಶಗಳಿಂದ ಪ್ರಯೋಜನ ಪಡೆದಿವೆ.

ಆದರೆ ನಾವು ಅಷ್ಟಕ್ಕೆ ನಿಲ್ಲುತ್ತಿಲ್ಲ. ನಾವು ಈಗ ಸಮಗ್ರ ಸಿಇಸಿಎ ಒಪ್ಪಂದದತ್ತ ಸಾಗುತ್ತಿದ್ದೇವೆ. ಈ ಪ್ರಯತ್ನಗಳ ಮೂಲಕ ಎರಡೂ ದೇಶಗಳ ಸರ್ಕಾರಗಳು ಹೊಸ ರನ್‌ವೇಯನ್ನು ರೂಪಿಸುತ್ತಿವೆ.

ಈಗ ಹೂಡಿಕೆ ಮತ್ತು ನಾವೀನ್ಯತೆಯ ವಿಮಾನವು ಈ ರನ್‌ವೇಯಿಂದ ಹಾರಲು ಸಿದ್ಧವಾಗಿದೆ. ಈ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

 

ಮಿತ್ರರೇ,

ಶುದ್ಧ ಇಂಧನಕ್ಕೆ ಸಂಬಂಧಿಸಿದ ಹಲವು ಕಂಪನಿಗಳು ಇಂದು ಉಪಸ್ಥಿತಿಯಿವೆ. ಭಾರತದಲ್ಲಿ ನಾವು ಜಲ ಯೋಜನೆಗಳು, ಹಸಿರು ಜಲಜನಕ, ಸೌರ ಮಾದರಿಗಳು ಮತ್ತು ಪವನ ವಿದ್ಯುತ್ ಗಾಗಿ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ.

ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮತ್ತು 2070 ರ ವೇಳೆಗೆ ನಿವ್ವಳ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ  ಗುರಿ ಹೊಂದಿದೆ. ಆಸ್ಟ್ರೇಲಿಯಾದ ತಂತ್ರಜ್ಞಾನ, ಬಂಡವಾಳ ಮತ್ತು ಸಂಪನ್ಮೂಲಗಳು ಈ ಪರಿವರ್ತನೆಯನ್ನು ವೇಗಗೊಳಿಸಬಹುದು.

ಕೆಲವು ತಿಂಗಳ ಹಿಂದೆ ಭಾರತವು ಶಾಂತಿ ಕಾಯ್ದೆಯ ಮೂಲಕ ಪರಮಾಣು ಇಂಧನ ವಲಯವನ್ನು ಖಾಸಗಿ ಕಂಪನಿಗಳಿಗೆ ತೆರೆಯಿತು. 2047 ರ ವೇಳೆಗೆ 100 GW ಪರಮಾಣು ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆಸ್ಟ್ರೇಲಿಯಾದ ವಿಶಾಲವಾದ ಯುರೇನಿಯಂ ನಿಕ್ಷೇಪಗಳು ಭಾರತದ ಪರಮಾಣು ಇಂಧನ ಪಯಣಕ್ಕೆ ನೇರವಾಗಿ ಸಂಬಂಧಿಸಿವೆ. ನಮ್ಮ ಎರಡೂ ರಾಷ್ಟ್ರಗಳಿಗೆ, ಈ ಪ್ರಮುಖ ವಲಯದಲ್ಲಿ ಸಹಕಾರವನ್ನು ವಿಸ್ತರಿಸಲು ಇದು ಐತಿಹಾಸಿಕ ಅವಕಾಶ ಒದಗಿಸುತ್ತದೆ.

ಭಾರತದಲ್ಲಿ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು, ರೈಲ್ವೆಗಳು ಮತ್ತು ನಗರ ಮೂಲಸೌಕರ್ಯಗಳಲ್ಲಿ ದೀರ್ಘಕಾಲೀನ ಆಸ್ಟ್ರೇಲಿಯಾದ ಹೂಡಿಕೆದಾರರಿಗೆ ಅಪಾರ ಅವಕಾಶಗಳಿವೆ. ಇಂದು ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿನಕ್ಕೆ ಸುಮಾರು 34 ಕಿಲೋಮೀಟರ್ ವೇಗದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿದಿನ 8 ಕಿಲೋಮೀಟರ್‌ಗಳಿಗಿಂತ ಅಧಿಕ ರೈಲ್ವೆ ಹಳಿಗಳನ್ನು ಅಳವಡಿಸಲಾಗುತ್ತಿದೆ.. ಇದು ಪ್ರಮಾಣ, ವೇಗ ಮತ್ತು ಸ್ಥಿರತೆಯ ವಿಶಿಷ್ಟ ಸಂಯೋಜನೆಯನ್ನು ಪ್ರತಿಬಿಂಬಿಸುತ್ತದೆ.

ಉಕ್ಕಿನ ವಲಯದಲ್ಲಿ ನಾವು ಈಗಾಗಲೇ ಸದೃಢ ಪಾಲುದಾರರಾಗಿದ್ದೇವೆ. ಭಾರತ ಇಂದು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ಒಟ್ಟಾಗಿ, ನಾವು ಕಡಿಮೆ-ಇಂಗಾಲದ ಅಲ್ಯೂಮಿನಿಯಂ, ಹಸಿರು ಕಬ್ಬಿಣ ಮತ್ತು ಶುದ್ಧ ಉತ್ಪಾದನೆಯಲ್ಲಿ ಕೆಲಸ ಮಾಡಬಹುದು.

ಎಐ ಮಿಷನ್, ಕ್ವಾಂಟಮ್ ಮಿಷನ್ ಮತ್ತು ಸೆಮಿಕಂಡಕ್ಟರ್ ಕಾರ್ಯಕ್ರಮದ ಅಡಿಯಲ್ಲಿ, ಭಾರತ ಸರ್ಕಾರವು 10 ಬಿಲಿಯನ್ ಡಾಲರ್‌ಗಳಿಗಿಂತ ಅಧಿಕ ಬೆಂಬಲವನ್ನು ಒದಗಿಸಿದೆ. ಜಾಗತಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವು ಡೇಟಾ ಕೇಂದ್ರಗಳು, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನಗಳು, ಸೆಮಿಕಂಡಕ್ಟರ್‌ಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬಹುದು.

ಆಸ್ಟ್ರೇಲಿಯಾದ ಪಿಂಚಣಿ ನಿಧಿಗಳು ಇಂದು 4 ಟ್ರಿಲಿಯನ್ ಡಾಲರ್‌ಗಳಿಗಿಂತ ಅಧಿಕ ಮೌಲ್ಯದ ಸ್ವತ್ತುಗಳನ್ನು ನಿರ್ವಹಿಸುತ್ತವೆ. ಭಾರತದಲ್ಲಿ, ಪಿಂಚಣಿ ಉಳಿತಾಯವನ್ನು ಪವಿತ್ರ ಟ್ರಸ್ಟ್ ಎಂದು ಪರಿಗಣಿಸಲಾಗುತ್ತದೆ. ನಾವು ಅವುಗಳನ್ನು ಕೇವಲ ಬಂಡವಾಳವಾಗಿ ನೋಡುವುದಿಲ್ಲ; ನಾವು ಅವುಗಳನ್ನು ಲಕ್ಷಾಂತರ ಕುಟುಂಬಗಳ ಟ್ರಸ್ಟ್ ಎಂದು ನೋಡುತ್ತೇವೆ. ಭಾರತವು ನಿಮ್ಮ ನಿಧಿಗಳಿಗೆ ಸುರಕ್ಷಿತ, ಸ್ಥಿರ ಮತ್ತು ಸುಸ್ಥಿರ ಬೆಳವಣಿಗೆಗೆ ಅವಕಾಶವನ್ನು ನೀಡುತ್ತದೆ. ನಿಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ನಿಮ್ಮ ಬಂಡವಾಳವನ್ನು ಬೆಳೆಯಲು ಸಹಾಯ ಮಾಡುವುದು ನಮ್ಮ ಪ್ರಯತ್ನವಾಗಿದೆ.

ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ನಮ್ಮ ಎರಡು ದೇಶಗಳ ನಡುವೆ ಸ್ವಭಾವಿಕ ಸಹಮತವಿದೆ. ಡೀಕಿನ್ ವಿಶ್ವವಿದ್ಯಾಲಯ ಮತ್ತು ವೊಲೊಂಗೊಂಗ್ ವಿಶ್ವವಿದ್ಯಾಲಯಗಳು ಗಿಫ್ಟ್ ನಗರದಲ್ಲಿ ಕ್ಯಾಂಪಸ್‌ಗಳನ್ನು ತೆರೆದಿದ್ದು, ಹೊಸ ಅಧ್ಯಾಯದ ಆರಂಭವನ್ನು ಸೂಚಿಸಿವೆ. ಇದು ಭಾರತದ ಮೇಲಿನ ಅವರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳ ಚಲನಶೀಲತೆಯನ್ನು ಪ್ರತಿಭಾ ಪಾಲುದಾರಿಕೆಯಾಗಿ ಪರಿವರ್ತಿಸುವುದು ನಮ್ಮ ಹಂಚಿಕೆಯ ಗುರಿಯಾಗಿರಬೇಕು.

 

ಮಿತ್ರರೇ,

ಈ ಎಲ್ಲಾ ವಲಯಗಳಲ್ಲಿ ಮುಂದುವರಿಯಲು ನಾವು ಇನ್ನೊಂದು ಪ್ರಮುಖ ಆಯಾಮದತ್ತ ಗಮನ ಹರಿಸಬೇಕು. ನಮ್ಮ ಪಾಲುದಾರಿಕೆ ಕೇವಲ ಎರಡು ರಾಜಧಾನಿಗಳು ಅಥವಾ ಕೆಲವು ನಗರಗಳಿಗೆ ಸೀಮಿತವಾಗಿರಬಾರದು. ನಮ್ಮ ರಾಜ್ಯಗಳು, ಸಣ್ಣ ಮತ್ತು ದೊಡ್ಡ ನಗರಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳು - ಇವೆಲ್ಲವನ್ನೂ ಈ ಪಾಲುದಾರಿಕೆಯಲ್ಲಿ ಪಾಲುದಾರರನ್ನಾಗಿ ಮಾಡಬೇಕು.

ಪಶ್ಚಿಮ ಆಸ್ಟ್ರೇಲಿಯಾದ ನಿರ್ಣಾಯಕ ಖನಿಜ ಸಾಮರ್ಥ್ಯವನ್ನು ಒಡಿಶಾ ಮತ್ತು ಗುಜರಾತ್‌ನ ಉತ್ಪಾದನಾ ಸಾಮರ್ಥ್ಯಗಳೊಂದಿಗೆ ಸಂಯೋಜಿಸಬಹುದು. ಕ್ವೀನ್ಸ್‌ಲ್ಯಾಂಡ್ ಮತ್ತು ಟ್ಯಾಸ್ಮೇನಿಯಾದ ಶುದ್ಧ ಇಂಧನ ಮತ್ತು ಕೃಷಿ ಪರಿಣತಿಯು ಪಂಜಾಬ್, ತಮಿಳುನಾಡು ಮತ್ತು ಆಂಧ್ರಪ್ರದೇಶದ ನವೀಕರಿಸಬಹುದಾದ ಇಂಧನ ಕಾರಿಡಾರ್‌ಗಳು ಮತ್ತು ಆಹಾರ ಸಂಸ್ಕರಣಾ ಪೂರಕ ವ್ಯವಸ್ಥೆಗಳಿಗೆ ಹೊಸ ವೇಗವನ್ನು ನೀಡುತ್ತದೆ.

ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾದ ಹಣಕಾಸು, ಶಿಕ್ಷಣ, ವೈದ್ಯಕೀಯ ತಂತ್ರಜ್ಞಾನ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳು ಜಾಗತಿಕ ಪರಿಹಾರಗಳನ್ನು ರಚಿಸಲು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸಬಹುದು. ದಕ್ಷಿಣ ಆಸ್ಟ್ರೇಲಿಯಾದ ರಕ್ಷಣೆ, ಬಾಹ್ಯಾಕಾಶ ಮತ್ತು ಉತ್ಪಾದನಾ ಸಾಮರ್ಥ್ಯಗಳು ಉತ್ತರ ಪ್ರದೇಶ ಮತ್ತು ಕೇರಳದ ಸಹಭಾಗಿತ್ವದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.

ನನ್ನ ಸಲಹೆಯೆಂದರೆ ಮುಂಬರುವ ಕಾಲದಲ್ಲಿ, ನಾವು ಕೆಲವು ಕೇಂದ್ರೀಕೃತ ರಾಜ್ಯ-ರಾಜ್ಯ ಮತ್ತು ವಲಯ-ವಲಯ ಪಾಲುದಾರಿಕೆಗಳನ್ನು ಗುರುತಿಸುತ್ತೇವೆ ಮತ್ತು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ತಂತ್ರಗಳನ್ನು ಅಭಿವೃದ್ಧಿಪಡಿಸಬೇಕು.

ಮಿತ್ರರೇ,

ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಇಂಡೋ-ಪೆಸಿಫಿಕ್‌ಗಾಗಿ ನಮ್ಮ ಹಂಚಿಕೆಯ ದೂರದೃಷ್ಟಿಯ ಆಧಾರದ ಮೇಲೆ ನಮ್ಮ ಎರಡು ರಾಷ್ಟ್ರಗಳ ನಡುವೆ ಆಳವಾದ ಕಾರ್ಯತಂತ್ರವು ಸಂಯೋಜಿಸಲಟ್ಟಿದೆ. ನಮ್ಮ ವ್ಯವಹಾರ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ. ಈ ಪ್ರಯತ್ನದಲ್ಲಿ, ನಿಮ್ಮ ಪಾತ್ರವು ಅತ್ಯಂತ ಮುಖ್ಯವಾಗಿದೆ.

ಇಂದಿನ ಸಂವಾದವು ಹೊಸ ಆಲೋಚನೆಗಳು, ಹೊಸ ಪಾಲುದಾರಿಕೆಗಳು ಮತ್ತು ಹೊಸ ಬದ್ಧತೆಗಳಿಗೆ ಕಾರಣವಾಗುತ್ತದೆ ಎಂಬ ವಿಶ್ವಾಸ ನನಗಿದೆ.

ಮತ್ತೊಮ್ಮೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಿಮ್ಮಲ್ಲರಿಗೂ ನನ್ನ ಶುಭಾಶಯಗಳು.

ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Our private space ecosystem can become major force for India and the world, PM tells start-ups

Media Coverage

Our private space ecosystem can become major force for India and the world, PM tells start-ups
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the values of compassion and contentment
August 24, 2026

The Prime Minister, Shri Narendra Modi, said that compassion brings self-respect and contentment brings true happiness. He noted that this spirit further strengthens the bonds of cooperation and harmony in society.

The Prime Minister shared a Sanskrit Subhashitam-

“कारुण्येनात्मनो मानं तृष्णां च परितोषतः।

उत्थानेन जयेत्तन्द्रीं वितर्कं निश्चयाज्जयेत्॥”

The Subhashitam conveys that self-respect is achieved by showing kindness or compassion to others. Greed is overcome by being satisfied at one's fortune in life. One must conquer laziness, dubious reasoning and indecisiveness by exertion and entrepreneurship.

The Prime Minister wrote on X;

“करुणा से आत्म-सम्मान और संतोष से सच्ची खुशी मिलती है। इसी भाव से समाज में सहयोग और सद्भाव की डोर और सशक्त होती है।

कारुण्येनात्मनो मानं तृष्णां च परितोषतः।

उत्थानेन जयेत्तन्द्रीं वितर्कं निश्चयाज्जयेत्॥”