ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿಗಳು, ಇಂಧನ, ನಿರ್ಣಾಯಕ ಖನಿಜಗಳು, ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ಜನರ ನಡುವಿನ ಬಾಂಧವ್ಯಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯರು ವ್ಯಾಪಕ ಚರ್ಚೆ ನಡೆಸಿದುದಾಗಿ ತಿಳಿಸಿದ್ದಾರೆ.
ಲ್ಯಾಟಿನ್ ಅಮೆರಿಕಾದಲ್ಲಿ ವೆನೆಜುವೆಲಾ ಮೌಲ್ಯಯುತ ಪಾಲುದಾರ ಎಂಬುದನ್ನು ಹೇಳುತ್ತಾ ಶ್ರೀ ಮೋದಿ ಅವರು, ಈ ರಾಷ್ಟ್ರದೊಂದಿಗಿನ ನಿಕಟ ಸಹಕಾರವು ಜಾಗತಿಕ ದಕ್ಷಿಣಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು. ಎರಡೂ ರಾಷ್ಟ್ರಗಳ ಜನರ ಪರಸ್ಪರ ಅನುಕೂಲಕ್ಕಾಗಿ ಉಭಯ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
"ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ ಅವರನ್ನು ಭೇಟಿಯಾಗಿ ಸಂತೋಷವಾಗಿದೆ. ಇಂಧನ, ನಿರ್ಣಾಯಕ ಖನಿಜಗಳು, ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ಜನರ ನಡುವಿನ ಬಾಂಧವ್ಯಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸುವ ಕುರಿತು ನಾವು ವ್ಯಾಪಕ ಚರ್ಚೆ ನಡೆಸಿದ್ದೇವೆ.
ಲ್ಯಾಟಿನ್ ಅಮೆರಿಕಾದಲ್ಲಿ ಮೌಲ್ಯಯುತ ಪಾಲುದಾರರಾಗಿ, ವೆನೆಜುವೆಲಾದೊಂದಿಗಿನ ನಮ್ಮ ನಿಕಟ ಸಹಕಾರವು ಜಾಗತಿಕ ದಕ್ಷಿಣಕ್ಕೆ ಅಪಾರ ಮಹತ್ವದ್ದಾಗಿದೆ. ನಮ್ಮ ರಾಷ್ಟ್ರಗಳ ಜನರ ಪರಸ್ಪರ ಅನುಕೂಲಕ್ಕಾಗಿ ನಾವು ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದೇವೆ. @delcyrodriguezv"
Happy to meet with the Acting President of Venezuela, Ms. Delcy Rodríguez. We had extensive discussions on expanding our cooperation in energy, critical minerals, technology, agriculture, health and people-to-people ties.
— Narendra Modi (@narendramodi) June 4, 2026
As a valued partner in Latin America, our close… pic.twitter.com/TSQJjw50TB


