ನೇಪಾಳಕ್ಕೆ ನಿರ್ಗಮನ ಪೂರ್ವ ಪ್ರಧಾನಮಂತ್ರಿಯವರಿಂದ ಹೇಳಿಕೆ

ನೇಪಾಳದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ಶೇರ್ ಬಹದ್ದೂರ್ ದೇವುಬಾ ಅವರ ಆಹ್ವಾನದ ಮೇರೆಗೆ ನಾನು 16 ಮೇ 2022 ರಂದು ನೇಪಾಳದ ಲುಂಬಿನಿಗೆ ಭೇಟಿ ನೀಡಲಿದ್ದೇನೆ.

ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನಾನು ಆಶಿಸುತ್ತೇನೆ. ಭಗವಾನ್ ಬುದ್ಧನ ಪವಿತ್ರ ಜನ್ಮಸ್ಥಳದಲ್ಲಿ ಗೌರವ ಸಲ್ಲಿಸುವ ಲಕ್ಷಾಂತರ ಭಾರತೀಯರ ಹೆಜ್ಜೆಗಳನ್ನು ಅನುಸರಿಸುತ್ತಾ ಗೌರವ ಸಲ್ಲಿಸಿದ್ದೇನೆ.

ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಚರ್ಚೆಗಳ ಉತ್ತಮ ಫಲಶ್ರುತಿ ನಂತರ ಮತ್ತೊಮ್ಮೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ದೇವುಬಾ ಅವರನ್ನು ಭೇಟಿ ಮಾಡಲು ಬಯಸಿದ್ದೇನೆ, ಹಾಗೂ ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ನಾವು ನಮ್ಮ ಪರಸ್ಪರ ಹಂಚಿಕೆಯ ತಿಳುವಳಿಕೆಯನ್ನು ವೃದ್ಧಿಸುವ  ಅವಕಾಶಗಳನ್ನು ನಾನು ಎದುರು ನೋಡುತ್ತಿದ್ದೇನೆ. 

ಪವಿತ್ರ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ, ಲುಂಬಿನಿ ಬೌದ್ಧ ವಿಹಾರ ಕ್ಷೇತ್ರದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಭಾರತ ಅಂತರರಾಷ್ಟ್ರೀಯ ಕೇಂದ್ರದ "ಶಿಲಾನ್ಯಾಸ" ಸಮಾರಂಭದಲ್ಲಿ ನಾನು ಭಾಗವಹಿಸಲಿದ್ದೇನೆ.  ನೇಪಾಳ ಸರ್ಕಾರ  ಬುದ್ಧ ಜಯಂತಿ ನಿಮಿತ್ತ ಆಯೋಜಿಸಿರುವ ವಿಶೇಷ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಉತ್ಸುಕನಾಗಿದ್ದೇನೆ.

 ನೇಪಾಳದೊಂದಿಗಿನ ನಮ್ಮ ಸಂಬಂಧಗಳು ಸರಿಸಾಟಿಯಿಲ್ಲದವು.  ಭಾರತ ಮತ್ತು ನೇಪಾಳದ ನಡುವಿನ ನಾಗರಿಕತೆ ಮತ್ತು ಜನರಿಂದ ಜನರ ನಿರಂತರ ಸಂಪರ್ಕಗಳು ನಮ್ಮ ನಿಕಟ ಸಂಬಂಧಗಳಿಗೆ ಬಲಿಷ್ಠ ಬುನಾದಿಯಾಗಿದೆ. 

ಶತಮಾನಗಳಿಂದ ಬೆಳೆಸಲ್ಪಟ್ಟಿರುವ ಮತ್ತು ಪರಸ್ಪರ ಸಹಬಾಂಧವ್ಯದ, ಅಂತರ್-ಮಿಶ್ರಣದ ಸುದೀರ್ಘ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿರುವ  ಎರಡೂ ದೇಶಗಳ ಸಂಬಂಧ, ಆಚಾರಣೆಗಳನ್ನು ಸಮಯ-ಗೌರವಪೂರ್ವಕವಾಗಿ ಆಚರಿಸುವುದು ಮತ್ತು ಇನ್ನಷ್ಟು ಆಳಗೊಳಿಸುವುದು ನನ್ನ ಭೇಟಿಯ ಉದ್ದೇಶವಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಡಿಸೆಂಬರ್ 2025
December 07, 2025

National Resolve in Action: PM Modi's Policies Driving Economic Dynamism and Inclusivity