ಸ್ವಚ್ಛ ಭಾರತದತ್ತ ಒಂದು ಹೆಜ್ಜೆ

Published By : Admin | January 1, 2016 | 01:06 IST
ಶೇರ್
 
Comments

ಸ್ವಚ್ಚ ಭಾರತ ಭಾರತ ದೇಶಕ್ಕೆ ಸಲ್ಲಿಸುವ ಅತ್ಯನ್ನತ ಗೌರವವಾಗಿದ್ದು, ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ನೂರೈವತ್ತನೇ ಜನ್ಮ ಜಯಂತಿಯ ಅಂಗವಾಗಿ ಅವರಿಗೆ ಅರ್ಪಿಸುವ ಗೌರವವಾಗಿದೆ. ಎಂದು ಮಾನ್ಯ ಶ್ರೀಯುತ ಪ್ರಧಾನ ಮಂತ್ರಿ ನರೇಂದ್ರ , ಮೋದಿ ಹೇಳಿದ್ದಾರೆ. ಈ ಸಂಬಂಧ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನವನ್ನ 2014 ರ ಸಾಲಿನಲ್ಲಿ ಅಕ್ಟೋಬರ್ 2 ರಂದು ದೇಹಲಿಯ ರಾಜಪತ್ನಲ್ಲಿ ಜಾರಿಗೆ ತಂದಿದ್ದಾರೆ. ಅಂದಿನಿಂಧ ದೇಶದಲ್ಲಿ ಸ್ವಚ್ಚ ಭಾರತ ಮಿಷನ್ ಅನುಷ್ಟಾನಗೊಂಡಿದ್ದು ದೇಶದ  ಉದ್ದಗಲಕ್ಕೂ ಮೂಲೆ ಮೂಲೆಯಲ್ಲೂ ರಾಷ್ಟ್ರೀಯ ಅಭಿಯಾನದ ರೀತಿಯಲ್ಲಿ ವ್ಯಾಪಿಸಿದೆ..

ಸ್ವಚ್ಚಭಾರತ ಅಭಿಯಾನವನ್ನ ದೇಶದಲ್ಲಿ ಮುನ್ನೆಡೆಸುವ ಮೂಲಕ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನ ಸ್ವಚ್ಚತೆಯ ಅರಿವನ್ನ ಮೂಡಿಸುವ ಮೂಲಕ ದೇಶದ ಪ್ರಜೆಗಳು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಕಂಡಿದ್ದ ಸ್ವಚ್ಚ ಹಾಗೂ ನೈಮರ್ಲ್ಯ  ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸಿದ್ದಾರೆ. ಅಷ್ಟೆಅಲ್ಲದೇ ಸ್ವತಃ ತಾವೇ ಖುದ್ದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಸ್ಟೇಷನ್ನ ಆವರಣದ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದ್ದರು. ಸ್ವತಃ ಕಸದ ಪೊರಕೆ ಹಿಡಿದು ಕಸಗುಡಿಸಿ ಆವರಣವನ್ನ ಸ್ವಚ್ಛ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನ ದೇಶದುದ್ದಕ್ಕೂ ರಾಷ್ಟ್ರೀಯ ಚಳುವಳಿಯ ರೂಪತಾಳಲು ಪ್ರೇರಪಿಸಿದ್ದಾರೆ. ಈ ಸಂಬಂಧ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂಧ್ರಮೋದಿ  ಕಸ ಹಾಕದಿರಿ ಹಾಗು ಅದರ ಜೊತೆಯಲ್ಲಿ ಮತ್ತೊಬ್ಬರು ಕಸ ಹಾಕಲು ಬಿಡದಿರಿ ಅಂತಾ ಮನವಿಮಾಡಿದ್ರು. ಅಲ್ಲದೇ ಈ ಸಂಬಂಧ ಘೋಷವಾಕ್ಯವೊಂದನ್ನ  ಇದೇ ಸಂದರ್ಭದಲ್ಲಿ ಹೇಳಿದ್ರು. ನಾ ಗಂದಿಗಿ ಕರೇಂಗೆ ನಾ ಕರ್ನೇ ದೇಂಗೆ (ನಾನು ಗಲೀಜು ಮಾಡೋದಿಲ್ಲ. ಹಾಗೇ ಮತ್ತೊಬ್ಬರಿಗೆ ಗಲೀಜು ಮಾಡಲು ಅವಕಾಶ ನೀಡೋದಿಲ್ಲ) ಈ ಘೋಷವ್ಯಾಕ್ಯದ ಜೊತಜೊತೆಗೆ ತಾವು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಮುನ್ನೆಡುಸವ ಮೂಲಕ ತಮ್ಮ ಜೊತೆಯಲ್ಲಿ ಒಂಬತ್ತುಮಂದಿಯನ್ನ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಚತೆಯ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕುವಂತೆ ಆಮಂತ್ರಿಸಿದ್ದರು. ಅಲ್ಲದೇ ಅವರಿಗೆ ತಲಾ ಒಂಬತ್ತು ಮಂದಿಯನ್ನು ಸ್ವಚ್ಚತಾ ಅಭಿಯಾನಕ್ಕೆ ಆಮಂತ್ರಿಸುವಂತೆ ಪ್ರಧಾನಮಂತ್ರಿಯವರೇ ಮನವಿಮಾಡಿದ್ರು.

ದೇಶದ ಜನತೆಯನ್ನ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದ ಪ್ರತಿಫಲವಾಗಿ ದೇಶದಲ್ಲಿ ಸ್ವಚ್ಚತಾ ಅಭಿಯಾನ ಬೃಹತ್ ರಾಷ್ಟ್ರೀಯ ಅಭಿಯಾನವಾಗಿ ಮಾರ್ಪಾಡಾಗಿದೆ.  ಈ ಸ್ವಚ್ಚ ಭಾರತ ಚಳುವಳಿಯ ಅನುಷ್ಟಾನದ ಬಳಿಕ ದೇಶದ ಜನರಲ್ಲಿ  ಸ್ವಚ್ಚತೆಯ ಬಗೆಗಿನ ಒಟ್ಟಾರೆ ಜವಬ್ದಾರಿ ದೇಶದ ಜನರಲ್ಲಿ ಜಾಗೃತಿಗೊಂಡಿದೆ ಎಂದ್ರೆ ಅತಿಶಯೋಕ್ತಿಯಾಗಲಾರದು. ದೇಶದ ನಾಗರಿಕರ ಸಕ್ರೀಯ ಹಾಗೂ ಸಕರಾತ್ಮಕ ಪಾಲ್ಗೊಳ್ಳುವಿಕೆಯಿಂದಾಗಿ ಸ್ವಚ್ಚತಾ ಕಾರ್ಯಗಳು ದೇಶದ ಉದ್ದಗಲದಲ್ಲೂ ಪರಿಣಾಮಕಾರಿಯಾಗಿ ಕಾಣುತ್ತಿದೆ. ಅಲ್ಲದೆ ಇದು ಹಿಂದೊಮ್ಮೆ ರಾಷ್ಟ್ರಪಿತಿ ಮಹಾತ್ವ ಗಾಂಧಿಜಿಯವರು ಕಂಡಿದ್ದ ಸ್ವಚ್ಚಭಾರತ ಕನಸಿಗೆ ಒಂದು ರೂಪರೇಷೆಯನ್ನ ನೀಡುವ, ಒಂದು ನಿರ್ಧಿಷ್ಟ ಆಕಾರವನ್ನ ನೀಡುವ ಪ್ರಾರಂಭವಾಗಿದೆ..

ಈ ಸ್ವಚ್ಚಭಾರತ  ಅಭಿಯಾನದಲ್ಲಿ ಸ್ವಚ್ಚತೆಯ ಅರಿವಿನ ಸಂದೇಶದ ದೇಶದೆಲ್ಲೆಡೆ ವ್ಯಾಪಿಸಲು ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿಯವರು ನೆರವಾಗಿದ್ದು ಅವರು ತಮ್ಮ ಮಾತು ಹಾಗೂ ಕೃತಿಯ ಮೂಲಕ ದೇಶದ ಜನ್ರಲ್ಲಿ ಸ್ವಚ್ಚತೆಯ ಅರಿವು ಮೂಡಿಸಿದ್ರು. ಅಷ್ಟೆಅಲ್ಲದೇ ಅದನ್ನ ನಾಗರಿಕರು ಜವಬ್ಧಾರಿ ಎಂದು ತಿಳಿದು ಕೃತಿಗೆ ಇಳಿಸಲು ಪ್ರೇರಪಿಸಿದ್ರು.  ಪ್ರಧಾನಮಂತ್ರಿ ತಮ್ಮ ಸ್ಚಕ್ಷೇತ್ರ  ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ವಚ್ಚತಾ ಅಭಿಯಾನನ್ನ ತಾವೇ ಖುದ್ಧಾಗಿ ಮುನ್ನೆಡಿಸಿದ್ದಾರೆ ಅನ್ನೋದು ಪ್ರಶಂಸನೀಯ. ಸ್ವಚ್ಚಭಾರತ ಮಿಷನ್ ನಡಿಯಲ್ಲಿ ಪ್ರಧಾನಮಂತ್ರಿ ಸಣಿಕೆ ಹಿಡಿದು ವಾರಣಾಸಿಯಲ್ಲಿರುವ ಗಂಗಾ ತೀರದ ಅಸ್ಸಿ ಗಾಟ್ನಲ್ಲಿ ಸ್ವಚ್ಚಗೊಳಿಸುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡ್ರು. ಅಲ್ಲದೇ  ಸಾವಿರಾರು ಮಂದಿ ಸ್ಥಳೀಯ ಜನರ ಸಹಕಾರದ ಜೊತೆಯಲ್ಲಿಯೇ ಪ್ರಧಾನಮಂತ್ರಿ ನರೇಂಧ್ರ ಮೋದಿ ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಷ್ಟೆಅಲ್ಲದೇ ನೈರ್ಮಲ್ಯದ ಮಹತ್ವವನ್ನ ಸ್ಪಷ್ಟವಾಗಿ ಅರಿತುಕೊಂಢ ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿ ಸ್ವಚ್ಛಭಾರತ ಅಭಿಯಾನದ ಜೊತೆಯಲ್ಲಿ ಏಕಕಾಲದಲ್ಲಿ ದೇಶದ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಅಳವಡಿಸದಿರುವ ಶೌಚಾಲಯಗಳ ಕೊರತೆಯಿಂದಾಗಿ ಎದುರಿಸುತ್ತಿರುವ ನಾನಾರೀತಿಯ ಆರೋಗ್ಯ ಸಮಸ್ಯೆಗಳ ಕುರಿತಾಗಿ ಗಮನಹರಿಸಿದ್ರು. ಅಲ್ಲದೇ ಅದ್ರ ಬಗ್ಗೆ ಕ್ರಮಕೈಗೊಳ್ಳಲು ಮುಂದಾದ್ರು..

ದೇಶದ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಸೇರಿದಂತೆ ಸಮಾಜದ ವಿವಿಧ ಜನರು ಮುಂದೆ ಬಂದು ಈ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಢರು . ಮೇಲಾಗಿ ಉತ್ಸಾಹದಿಂದ ಸಕ್ರೀಯವಾಗಿ ಪಾಲ್ಗೊಂಢು ಸ್ವಚ್ಚತಾ ಅಭಿಯಾನದ ಮುನ್ನಡೆಸುವ ಮೂಲಕ  ಸಾಮೂಹಿಕ ಚಳುವಳಿಯನ್ನಾಗಿ ಸಿದ್ರು. ಸರ್ಕಾರದ ವಿವಿಧ ವಿಭಾಗಗಳ ಅಧಿಕಾರಿಗಳು ಸಿಬ್ಬಂದಿಯಿಂದ ಹಿಡಿದು ದೇಶದ ವೀರಯೋಧರವೆರಗೆ ಹಾಗೂ ಬಾಲಿವುಡ್ನ ಪ್ರಸಿದ್ದ ನಟನಟಿಯರಿಂದ ಹಿಡಿದು ದೇಶದ ಅತ್ಯುನ್ನತ ಪ್ರಖ್ಯಾತ ಕ್ರೀಡಾಪುಟಗಳ ವರೆಗೆ,  ದೇಶದ ಬೃಹತ್ ಉದ್ಯಮಿಗಳಿಂದ ಹಿಡಿದು ಧಾರ್ಮಿಕ ನಾಯಕರವರೆಗೆ.. ಎಲ್ಲರು ಅಂದ್ರೆ  ಪ್ರತಿಯೊಬ್ಬರು ಸ್ವಚ್ಚತಾ ಅಭಿಯಾನ ಹೆಸರಿನ ಶ್ರೇಷ್ಟ ಕಾರ್ಯಕ್ಕಾಗಿ ಸರದಿಯಲ್ಲಿ ಬಂದು ನಿಂತು ಅಭಿಯಾನದಲ್ಲಿ ಪಾಲ್ಗೊಂಢರು.ಇನ್ನೂ  ಈ ದೇಶದ ನಾಗರಿಕರು ದಿನಬಿಟ್ಟು ದಿನ ಲಕ್ಷಲಕ್ಷ ಸಂಖ್ಯೆಯಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡರು. ಅವರನ್ನ  ಅಭಿಯಾನವನ್ನ ಪಾಲ್ಗೊಳ್ಳುವಂತೆ ಮಾಡುವ ಕೆಲಸವನ್ನು ಸರ್ಕಾರದ ವಿವಿಧ ಇಲಾಖೆಗಳು ನೆರವೇರಿಸಿದವು..ಎನ್ಜಿಓ ಹಾಗೂ ಸ್ಥಳೀಯ ಆಡಳಿತಗಳು ಸಮುದಾಯಗಳು ಭಾರತವನ್ನ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತಮ್ಮ ಪಾತ್ರವನ್ನ ಜವಬ್ದಾರಿಯುತವಾಗಿ ನಿಭಾಯಸಿದವು ಸ್ವಚ್ಚಭಾರತದ ಅರಿವನ್ನ ಸಮಾಜದಲ್ಲಿ ಮೂಡಿಸುವ ಸಲುವಾಗಿ ದೇಶದಲ್ಲಿ ಹಲವೆಡೆ ಸ್ವಚ್ಚತಾ ಅಭಿಯಾನವನ್ನ ಸಂಘಟಿಸಲಾಯ್ತು. ಅಲ್ಲದೆ ನೈರ್ಮಲ್ಯದ ಕುರಿತಾಗಿ ಸಂಗೀತ ಸೇರಿದಂಥೆ ವಿವಿಧ ಮೂಲಗಳ ಮೂಲಕ ಜಾಗೃತಿ ಮೂಡಿಸುವವಂತೆ ಕಾರ್ಯಕ್ರಮಗಳು ಸದ್ದಿಲ್ಲದೇ ಸಮರೋಪಾಧಿಯಲ್ಲಿ ನಡೆದವು. ನೆಪಮಾತ್ರಕ್ಕೆ ಈ ಕಾರ್ಯಕ್ರಮಗಳು ನಡೆಯದೆ ಸ್ವಚ್ಚಭಾರತ ಅಭಿಯಾನ ರಾಷ್ಟ್ರದ ಮೂಲೆಮೂಲೆಗಳಲ್ಲೂ ವ್ಯಾಪಿಸುವಂತಾಗಿದೆ

ಬಾಲಿವುಡ್ ನ ಗಣ್ಯಾತಿಗಣ್ಯರು, ಕಿರುತೆರೆಯ ಪ್ರಖ್ಯಾತ ನಟನಟಿಯರು ಮುಂದೆ ಬಂದ್ರು. ಅಷ್ಟೆ ಅಲ್ಲದೇ ಸ್ವಚ್ಚತಾ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಪಾತ್ರವನ್ನ ಸಮರ್ಥವಾಗಿ ನಿಭಾಯಿಸಿದ್ರು. ಬಾಲಿವುಡ್ ನಟ ಶ್ರೀ ಅಮಿತಾಬ್ ಬಚ್ಚನ್ ಆಮೀರ್ ಖಾನ್, ಕೈಲಾಶ್ ಕೇರ್ ಪ್ರಿಯಾಂಕಾ ಚೋಪ್ರಾ, ಸಬ್ ಟೆಲಿವಿಶನ್ ನ ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮ್  ಕಾರ್ಯಕ್ರಮದ ಎಲ್ಲಾ ತಾಂತ್ರಿಕ ಹಾಗೂ ಎಡಿಟೋರಿಯಲ್ ಸಿಬ್ಬಂದಿ ವರ್ಗ  ಸ್ವಚ್ಚತಾ ಅಭಿಯಾನವನ್ನ ಯಶಸ್ವಿಯಾಗಿ ಮುನ್ನೆಡಸಲು ಕೈಜೋಡಿಸಿತು.. ಇವರಷ್ಟೆ ಅಲ್ಲದೇ ಪ್ರಖ್ಯಾತ ಕ್ರೀಡಾಪಟುಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾನಿಯಾ ಮಿರ್ಜಾ, ಸೈನಾ ನೇಹ್ವಾಲ್ ಮೇರಿಕೋಮ್ ರಂತಃ ಗಣ್ಯಾತಿಗಣ್ಯ ಸಾಧಕರು ಸ್ವಚ್ಚತಾ ಅಭಿಯಾನವನ್ನ ಮತ್ತಷ್ಟು ಸದೃಡಗೊಳಿಸಿದ್ರು ಅಂದ್ರೆ ಹೆಚ್ಚಿನಸಿಲಾರರು

ಇನ್ನೂಈ ಗಣ್ಯಾತಿಗಣ್ಯರ ಜೊತೆಯಲ್ಲಿ ಮಾನ್ಯ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿ ಪ್ರತಿತಿಂಗಳು ರೇಡಿಯೋ ಮೂಲಕ ಹಮ್ಮಿಕೊಳ್ಳುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸ್ವಚ್ಚತಾ ಅಭಿಯಾವನ್ನ ಪ್ರಸ್ತಾಪಿಸುತ್ತೇಲೆ ಬಂದಿದ್ದಾರೆ. ಅಷ್ಟೆಅಲ್ಲದೇ ಸ್ವಚ್ಚತಾ ಅಭಿಯಾನದಲ್ಲಿ ದೇಶದೆಲ್ಲೆಡೆ ವಿಶೇಷ ಶ್ರಮ ಆಸಕ್ತಿ ತೋರಿದ ಸಂಘಟನೆ ಹಾಗೂ ವ್ಯಕ್ತಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು. ಜೊತೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡ ವಿಶೇಷ ವ್ಯಕ್ತಿಗಳಿಗೆ ಸಾಧಕರನ್ನ ಕೊಂಡಾಡಿದ್ರು. ಅಭಿಯಾನದಲ್ಲಿ ವಿಶೇಷವಾಗಿ ಗಮನಸೆಳೆದ ವ್ಯಕ್ತಿಗಳನ್ನ ಕೊಂಡಾಡಿದ್ರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಮನ್ ಕೀ ಬಾತ್ನಲ್ಲಿ ಸ್ವಚ್ಚತಾ ಅಭಿಯಾನವನ್ನ ಅಭೂತಪೂರ್ವ ಯಶಸ್ವಿಗೊಳಿಸಲು ನೆರವಾದ ಗಣ್ಯರಿಗೆ ಧನ್ಯವಾದವನ್ನ ಅರ್ಪಿಸಿದ್ರು. ವೇಳೆ ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಗಳ ವಿಶೇಷ ತಂಡಕ್ಕೆ ವಿಶೇಷ ಅಭಿನಂದೆನಯನ್ನ ಸಲ್ಲಿಸಿದ್ರು. ಇಲ್ಲಿನ ಹಾರ್ದಾ ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿ ಸ್ವಚ್ಚತಾ ಅಭಿಯಾನದಲ್ಲಿ ವಿಶೇಷ ಪಾತ್ರವಹಿಸಿತ್ತು. ಇದಷ್ಟೆ ಅಲ್ಲದೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ನ್ಯೂ ಹಾರಿಜೋನ್ಗ ಸ್ಕೂಲ್ ಒಟ್ಟು ಐವರು ವಿದ್ಯಾರ್ಥಿಗಳ ಹೆಸರನ್ನ ಪ್ರಸ್ತಾಪಿಸಿ ಅವರನ್ನ ವಿಶೇಷವಾಗಿ ಕೊಂಡಾಡಿದ್ರು. ಸ್ಕೂಲ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದ ತ್ಯಾಜ್ಯಗಳನ್ನ ಖರೀದಿಸುವ ಹಾಗೂ ಮಾರಾಟ ಮಾಡುವ ಸೌಲಭ್ಯವನ್ನ ಹೊಂದಿದ್ದ ಮೊಬೈಲ್ ಆಪ್ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡಿದ್ದನ್ನ ಸ್ಮರಿಸಬಹುದು

ಇನ್ನು ರಾಷ್ಟ್ರೀಯ ಚಳುವಳಿ ರೂಪ ತಳೆದ ಸ್ವಚ್ಚತಾ ಅಭಿಯಾನದಲ್ಲಿ ಹಲವು ಸಂಘಟನೆಗಳು ಸಂಸ್ಥೆಗಳು ಕೂಢ ಸಕ್ರೀಯವಾಗಿ ಪಾಲ್ಗೊಂಡವು. ವಿಶೇಷವಾಗಿ ಐಸಿಐಸಿಐ ಬ್ಯಾಂಕ್ ಪಂಜಾಬ್ ನ್ಯಾಷನಲ್  ಬ್ಯಾಲ್ ಎಕ್ಸ್ಎಲ್ ಆರ್ ಜೆಮ್ ಶೆಡ್ಪುರ್ ಮತ್ತು ಐಐಎಮ್ ಬೆಂಗಳೂರು ನಂತಃ ಕಾರ್ಪೋರೆಟ್ ಸಂಸ್ಥೆಗಳು ಸ್ವಚ್ಚತಾ ಅಭಿಯಾನದ ಸಂಬಂಧ ಸಾಮೂಹಿಕ ಹಾಗೂ ಬೃಹತ್ ಜಾಗೃತಿ ಕಾರ್ಯಕ್ರಮಗಳನ್ನ ಜನರ ನಡುವೆ ನಡೆಸಿ ಯಶಸ್ವಿಗೊಳಿಸಿದ್ವು..

ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿ ಮನ್ ಕೀ ಬಾತ್ ನ ಜೊತೆಯಲ್ಲಿ ಸಿಕ್ಕ ಅವಕಾಶಗಳಲ್ಲೆಲ್ಲಾ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡವರ ಬಗ್ಗೆ ಪ್ರಸ್ತಾಪಿಸಿದ್ರು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಶ್ರೀಯುತ ನರೇಂಧ್ರ ಮೋದಿ ಅಭಿಯಾನದಲ್ಲಿ ಸಾಧಸಿದ ಸಾಧಕರ ಹೆಸರನ್ನ ವಿಶೇಷವಾಗಿ ಪ್ರಸ್ತಾಪಿಸಿದ್ರು. ಅದ್ರಲ್ಲಿ ಪ್ರಮುಖವಾಗಿ ತೆಮ್ಸುತ್ಲಾ ಐಮ್ ಸಂಗ್, ದರ್ಶಿಕಾ ಶಾ ಮತ್ತು ಇವರುಗಳು ಸಂಘಟಿಸಿದ ಮಿಶನ್ ಪ್ರಭುಗಾಟ್ ನ ಸ್ವಯಂಸೇವಕರನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ರು. ಮಿಶನ್ ಪ್ರಭುಗಾಟ್ ಅನ್ನೋ ಹೆಸರಿನ ಸಂಘಟನೆ ಪ್ರಧಾನಮಂತ್ರಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಸ್ವಚ್ಚತಾ ಅಭಿಯಾನವನ್ನ ವಿಶೇಷವಾಗಿ ಮುನ್ನಡೆಸಿ ಹಲವು ಶ್ಲಾಘನೀಯ ಕೆಲಸಗಳನ್ನ ಮಾಡಿತ್ತು

ಇನ್ನೂ ಈ ಸ್ವಚ್ಚತಾ ಅಭಿಯಾನದ ಜೊತಜೊತೆಯಲ್ಲಿ ಹಾಗೂ ಇದ್ರ ಅಂಗವಾಗಿ ಮತ್ತೊಂದು ಅಭಿಯಾನ ಜಾರಿಗೆಯಾಗಿದೆ. ಮೈ ಕ್ಲೀನ್ ಇಂಡಿಯಾ  ಅಥವಾ ನನ್ನ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮವನ್ನ ಅನಷ್ಟಾನಗೊಳಿಸಲಾಗಿದೆ. ಈ ನನ್ನ ಸ್ವಚ್ಚ ಭಾರತ ಕಾರ್ಯಕ್ರಮ ವಿಸೇಷ ವಾಗಿ ಸ್ವಚ್ಚತಾ ಅಭಿಯಾನದಲ್ಲಿ ದೇಶದ ವಿವಿದಡೆಯಲ್ಲಿ ವಿಶೇಷವಾಗಿ ಸ್ವಚ್ಚತೆಯ ಕಾರ್ಯಕ್ರ ಮಾಡಿದ ವಿಶೇಷ ವ್ಯಕ್ತಿಗಳನ್ನ ಸಂಘಟನೆಗಳನ್ನ ಗುರತಿಸಿ ಗೌರವಿಸುವ ಕೆಲಸ ಮಾಡುತ್ತಿದೆ.

ಸ್ವಚ್ಚ ಭಾರತ ಅಭಿಯಾನ ರಾಷ್ಟ್ರೀಯ ಚಳುವಳಿ ಅನ್ನಿಸಿಕೊಂಡಿದ್ದರ ಜೊತಜೊತೆಗೆ ಜನಾಂಧೋಲನವಾಗಿ ಮಾರ್ಪಟ್ಟಿದೆ. ದೇಶದ ನಾಗರಿಕರ ಅಭೂತ ಪೂರ್ವ ಬೆಂಬಲವನ್ನ ಸ್ವಚ್ಚತಾ ಅಭಿಯಾನವನ್ನ ಪಡೆದುಕೊಂಡಿದೆ. ಅಷ್ಟೆಅಲ್ಲದೇ ದೇಶದ ನಾಗರಿಕರಲ್ಲಿ ಬಹಳಷ್ಟು ಮಂದಿಯನ್ನ ದೇಶವನ್ನು ಸ್ವಚ್ಚ ಹಾಗೂ ಸುಂದರವಾಗಿಟ್ಟುಕೊಳ್ಳುವುದರ ಬಗ್ಗೆ ಸ್ವಚ್ಚತಾ ಅಭಿಯಾನ ಪ್ರೇರಪಿಸಿದ್ದು , ಅದ್ರಲ್ಲಿ ಅಸಂಖ್ಯಾತ ನಾಗರಿಕರ ಚಿಂತೆನಗಳು ಬದಲಾಗಿವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕಸದ ಪೊರಕೆಯನ್ನ ಕೈಯಲ್ಲಿ ಹಿಡಿದುಕೊಂಡು ಅಂಜಿಕೆ, ನಾಚಿಕೆ, ಅಥವಾ ಮತ್ಯಾವ ಭಾವಗಳನ್ನ ಪ್ರದರ್ಶಿಸಿದೇ ರಸ್ತಬದಿಯಲ್ಲಿನ ಕಸಗಳನ್ನ ಗುಡಿಸಿ ಕ್ಲೀನ್ ಮಾಡುವುದು ಕಸದ ತೊಟ್ಟಿಗಳನ್ನ ಸ್ವಚ್ಚಗೊಳಸುವುದು ನೈರ್ಮಲ್ಯದ ಬಗ್ಗೆ ವಿಶೇಷವಾದ ಗಮನವನ್ನ ಹರಿಸಿ ನಿರ್ಮಲವಾದ ಪರಿಸರವನ್ನ ನಿರ್ಮಿಸಿ ಕಾಯ್ದುಕೊಳ್ಳುವಂತಃ ಆಶಾದಾಯಕವಾದ ವಾತಾವರಣ ದೇಶದಲ್ಲಿ ಸ್ವಚ್ಚ ಭಾರತ ಅಭಿಯಾನವನ್ನ ಜಾರಿಗೊಳಿಸಲಾದಾಗಲಿನಿಂದ ಎಲ್ಲೆಡೆ ಕಂಡುಬರುತ್ತಿದೆ. ಮೇಲಾಗಿ ದೇಶದ ನಾಗರಿಕರು  ಸ್ವಚ್ಚತಾ ಅಭಿಯಾನದ ಭಾಗವಾಗಿದ್ದಷ್ಟೆ ಅಲ್ಲದೇ ಅಭಿಯಾನದ ಸಂದೇಶ ಉದ್ದೇಶ ಗುರಿ ಸಾಧನೆಗಳ ಬಗ್ಗೆ ಸಂದೇಶಗಳನ್ನ ಪರಸರಿಸಿದ್ರು. ಸ್ವಚ್ಚತೆ ದೇವರಗುಡಿ ಇದ್ದಂತೆ ಅನ್ನುವಂತಃ ಸಂದೇಶವನ್ನ ಹರಡುತ್ತಾ ಜಾಗೃತಿ ಮೂಡುವಲ್ಲಿ ನೆರವಾಗಿದ್ದಾರೆ..

ದೇಶಧ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ ಬಹುಮುಖ್ಯವಾಗಿ ಹಲವು ವಿಚಾರಗಳಲ್ಲಿ ಗಮನಹರಿಸುತ್ತದೆ. ಅಷ್ಟೆಅಲ್ಲದೇ ಇದ್ರಲ್ಲಿ ಪ್ರತ್ಯೇಕ ಶೌಚಾಲಯಗಳನ್ನ ನಿರ್ಮಿಸುವುದು. ಸಾರ್ವಜನಿಕ ಶೌಚಾಲಯಗಳನ್ನ ನಿರ್ಮಿಸುವದಕ್ಕೆ ಪ್ರಾಧಾನ್ಯತೆ ನೀಢುವುದದರ ಜೊತೆಜೊತೆಗೆ ನಗರ ಪ್ರದೇಶಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಯ ನಿರ್ವಹಣೆಯ ಬಗ್ಗೆ ಅಭಿಯಾನ ವಿಶೇಷ  ಆದ್ಯತೆಯನ್ನ ತೋರುತ್ತಿದೆ.  ಇನ್ನೂ ದೇಶದ ಗ್ರಾಮೀಣ ಭಾಗ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಯಲ ಶೌಚಾಲಯದ ಬಗ್ಗೆ ಇರುವ ಮನಸ್ತಿತಿಗಳನ್ನ ಬದಲಾಯಿಸುವ ಸಂಬಂಧ ವಿಶೇಷ ಗಮನಹರಿಸಲಾಗ್ತಿದೆ. ಮೇಲಾಗಿ ಮಧ್ಯಸ್ತಿಕೆ ಮೂಲಕ ಜಾಗೃತಿ ಮೂಡಿಸುವುದು ಮತ್ತುನಾಗರಿಕರ ನಡುವೆ ಪರಸ್ಪರ ಮಾಹಿತಿ ವಿನಿಮಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಹಾಗೂ ಸ್ವಚ್ಚತಾ ಅಭಿಯಾನದ ಮೂಲಕ ಕಾರ್ಯಕ್ರಮವನ್ನ ಸಮರ್ಪಕ ಹಾಗೂ ಸಮಗ್ರವಾಗಿ ಜಾರಿಗೊಳಿಸುವುದರ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನ ಸ್ತಳೀಯ ಗ್ರಾಮ ಪಂಚಾಯತ್ಗಲಿಗೆ ಒದಗಿಸುವ ಕೆಲಸ ನಿರ್ವಹಿಸುತ್ತಿದೆ. ಈ ಸಂಬಂಧ ಗ್ರಾಮಪಂಚಾಯತ್ಗಳು ತಮ್ಮ ತಮ್ಮ ಹಳ್ಳಿಗಳ  ಅಗತ್ಯತೆ ಅನಿವಾರ್ಯತೆ ಹಾಗೂ ಸೂಕ್ಷತೆ ಸಾಂಸ್ಕತಿಕ  ಹಾಗೂ ಪದ್ದತಿಗಳಿಗೆ ಅನುಸಾರವಾಗಿ ಅಗತ್ಯವಿರುವಷ್ಟು ಸಾಮಗ್ರಿಗಳನ್ನ ಒದಗಿಸಲು ಅವಕಾಶ ಕಲ್ಪಿಸಿದೆ. ಮೇಲಾಗಿ ಈ ವಿಚಾರದಲ್ಲಿ ಯಾವ ಗ್ರಾಮಗಳಿಗೆ ಎಷ್ಟು ಅಗತ್ಯ ಸೌಲಭ್ಯಗಳನ್ನ ಒದಗಿಸಬೇಕು ಅನ್ನೋದ್ನ ಆಯಾ ಗ್ರಾಮಗಳ ಅವಶ್ಯಕತೆಗಳಿಗೆ ತಕ್ಕಂತೆ ಪೂರೈಸುವ ಅವಕಾಶವನ್ನಆಯಾ ರಾಜ್ಯಗಳಿಗೆ ಕಲ್ಪಿಸಿಲಾಗಿದೆ.  ಇನ್ನೂ ಇವೆಲ್ಲದರ ಜೊತೆಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಻ನುಧಾನವನ್ನ ಎರಡುಸಾವಿರ ಹೆಚ್ಚಿಸಲಾಗಿದೆ. ಇದ್ರ ಪರಿಣಾಮವಾಗಿ ತಲಾ ಹತ್ತುಸಾವಿರ ಸಿಗುತ್ತಿದ್ದ ಒಂದು ಶೌಚಾಲಯಕ್ಕೆ  ತಲಾ ಹನ್ನೇರಡು ಸಾವಿರ ರೂಪಾಯಿ ಅನುಧಾನ ಪ್ರತಿಯೊಂದು ಪ್ರತ್ಯೇಕ ಶೌಚಾಯಲಯ ನಿರ್ಮಾಣಕ್ಕೆ ಸಿಗಲಿದೆ. ಇನ್ನೂ ಇದರ ಜೊತೆಯಲ್ಲಿಯೇ ಘನ ಹಾಗೂ ದೃವ ತ್ಯಾಜ್ಯ ವಿಲೇವಾರಿಗಾಗಿ ಗ್ರಾಮಪಂಚಾಯತ್ಗಳಿಗೆ ಅಗತ್ಯ ಅನುಧಾನಗಳನ್ನ ವಿಶೇಷ ವಾಗಿ ಕಲ್ಪಿಸಲಾಗಿದೆ..

Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
PM Modi's Talks Motivate Me, Would Like to Meet Him after Winning Every Medal: Nikhat Zareen

Media Coverage

PM Modi's Talks Motivate Me, Would Like to Meet Him after Winning Every Medal: Nikhat Zareen
...

Nm on the go

Always be the first to hear from the PM. Get the App Now!
...
PM Modi Adorns Colours of North East
March 22, 2019
ಶೇರ್
 
Comments

The scenic North East with its bountiful natural endowments, diverse culture and enterprising people is brimming with possibilities. Realising the region’s potential, the Modi government has been infusing a new vigour in the development of the seven sister states.

Citing ‘tyranny of distance’ as the reason for its isolation, its development was pushed to the background. However, taking a complete departure from the past, the Modi government has not only brought the focus back on the region but has, in fact, made it a priority area.

The rich cultural capital of the north east has been brought in focus by PM Modi. The manner in which he dons different headgears during his visits to the region ensures that the cultural significance of the region is highlighted. Here are some of the different headgears PM Modi has carried during his visits to India’s north east!