ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಲೋಕ್ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸ 7ರಲ್ಲಿ ಸೆಮಿಕಂಡಕ್ಟರ್ ಕಾರ್ಯ ನಿರ್ವಾಹಕ ಅಧಿಕಾರಿಗಳ ದುಂಡುಮೇಜಿನ ಸಭೆಯ  ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಮಂತ್ರಿ ಅವರು ಸೆಮಿಕಂಡಕ್ಟರ್ ವಲಯಕ್ಕೆ ಸಂಬಂಧಿಸಿದಂತೆ ವ್ಯಾಪಕ ವಿಷಯಗಳ ಕುರಿತು ಚರ್ಚಿಸಿದರು. ಈ ವಲಯವು ಅಭಿವೃದ್ಧಿ ಪಥವನ್ನು ಹೇಗೆ ಮುಂದುವರಿಸಬಹುದು ಎಂಬುದರ ಕುರಿತು ಶ್ರೀ ಮೋದಿ ಮಾತನಾಡಿದರು. ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ತಮ ಹೂಡಿಕೆಯ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಹಲವಾರು ಸುಧಾರಣೆಗಳನ್ನು ಅವರು ಪ್ರಸ್ತಾಪಿಸಿದರು.

ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭಾರತ ಹೊಂದಿರುವ ಬದ್ಧತೆಯನ್ನು ವಿವಿಧ ಕಂಪನಿಗಳ ಸಿಇಒಗಳು ಶ್ಲಾಘಿಸಿದರು, ಇಂದು ದೇಶದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿಂದೆಂದೂ ಕಾಣದಷ್ಟು ಅಭೂತಪೂರ್ವವಾಗಿದೆ, ಇದರಲ್ಲಿ ಇಡೀ ಸೆಮಿಕಂಡಕ್ಟರ್ ಕ್ಷೇತ್ರದ ನಾಯಕರನ್ನು ಒಂದೇ ಸೂರಿನಡಿ ತರಲಾಗಿದೆ ಎಂದು ಅವರು ಮಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ ಸೆಮಿಕಂಡಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಸ್ವಾವಲಂಬನೆ ಹೆಚ್ಚಿಸುವ ಪ್ರಧಾನಿ ಮೋದಿ ಅವರ ದೂರದೃಷ್ಟಿ ನಿಜಕ್ಕೂ ಉತ್ತೇಜಕವಾಗಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಉತ್ತೇಜಿಸಲು ಪ್ರಧಾನಿ ಮೋದಿ ಅವರು ರೂಪಿಸಿದ ನೀತಿಗಳು ತುಂಬಾ ಉತ್ತೇಜಕವಾಗಿದೆ ಎಂದು ಮೈಕ್ರಾನ್‌ ಸಿಇಒ ಸಂಜಯ್ ಮೆಹ್ರೋತ್ರಾ ಹೇಳಿದರು. "ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ, ಸೆಮಿಕಂಡಕ್ಟರ್ ಅವಕಾಶಗಳನ್ನು ಅಭಿವೃದ್ಧಿಪಡಿಸಲು ಇದು ಪರಿಪೂರ್ಣ ಸಮಯವಾಗಿದೆ, ಏಕೆಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದೆ, ಇದರೊಂದಿಗೆ ಅವಕಾಶಗಳು ಹೆಚ್ಚಾಗುತ್ತಿವೆ, ಉತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ" ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿ ಅವರ ನಾಯಕತ್ವಕ್ಕೆ ಸರಿಸಾಟಿಯೇ ಇಲ್ಲ, ಇದು ನಿಜಕ್ಕೂ ಅಸಾಧಾರಣವಾಗಿದೆ ಎಂದು ಸೆಬಿ ಕಂಪನಿಯ ಸಿಇಒ ಅಜಿತ್ ಮನೋಚಾ ಹೇಳಿದರು. ಇದು ಭಾರತಕ್ಕೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಸ್ಫೂರ್ತಿ ನೀಡಿದೆ. "ಈ ದುಂಡುಮೇಜಿನ ಸಭೆಗೆ ಇಡೀ ವಿಶ್ವವೇ ನನ್ನೊಂದಿಗೆ ಬಂದಿರುವುದು ಎಷ್ಟು ಸಂತೋಷವಾಗಿದೆ ಎಂಬುದನ್ನು ಮೋದಿ ಅವರ ನಾಯಕತ್ವ ಭಾವಿಸುತ್ತಿದೆ" ಎಂದು ಶ್ಲಾಘಿಸಿದರು.
ಎನ್ ಎಕ್ಸ್ ಪಿ ಸಿಇಒ ಕರ್ಟ್ ಸೀವರ್ಸ್ ಮಾತನಾಡಿ, ಪ್ರಧಾನ ಮಂತ್ರಿ ಮೋದಿ ಅವರ ದೂರದೃಷ್ಟಿ, ಸ್ಥಿರತೆ ಮತ್ತು ಭಾರತಕ್ಕೆ ಸೆಮಿಕಂಡಕ್ಟರ್ ಉದ್ಯಮದ ಪರಿಸರ ವ್ಯವಸ್ಥೆಯ ಅಭಿವೃದ್ಧಿ ದೃಷ್ಟಿಕೋನದಿಂದ ಬೇಕಾದುದನ್ನು ದೂರದೃಷ್ಟಿಯಿಂದ ನೋಡಲು ಉತ್ಸುಕನಾಗಿದ್ದೇನೆ ಮತ್ತು ಸಂತೋಷಪಡುತ್ತೇನೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಅಂತಹ ಆಳವಾದ ಪರಿಣತಿ ಹೊಂದಿರುವ ಯಾವುದೇ ಒಬ್ಬ ವಿಶ್ವ ನಾಯಕನನ್ನು ಪ್ರಧಾನಿಯಾಗಿ ನಾನು ಭೇಟಿ ಮಾಡಿಲ್ಲ ಎಂದರು.

ಟಿಇಪಿಎಲ್ ಸಿಇಒ ರಣಧೀರ್ ಠಾಕೂರ್ ಮಾತನಾಡಿ, ಸೆಮಿಕಂಡಕ್ಟರ್ ಉದ್ಯಮವು ಪ್ರಧಾನಿ ಅವರ ದೂರದೃಷ್ಟಿಯ ಬಗ್ಗೆ ಮತ್ತು ಅವರು ನಮ್ಮ ದೇಶದ ಭವಿಷ್ಯಕ್ಕಾಗಿ ಡಿಜಿಟಲ್ ಮೂಲಸೌಕರ್ಯ ನೋಡುತ್ತಿರುವ ಬಗ್ಗೆ ನಿಜವಾಗಿಯೂ ಉತ್ಸುಕರಾಗಿದ್ದಾರೆ. ವಿಕಸಿತ ಭಾರತದಲ್ಲಿ ಸೆಮಿಕಂಡಕ್ಟರ್ ಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಬಾಬ್ ಪ್ರಗಾದ ಸಿಇಒ ಜೇಕಬ್ಸ್ ಮಾತನಾಡಿ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ತರಲು ಪ್ರಧಾನಿ ಅವರು ಮಾಡುತ್ತಿರುವ ಕೆಲಸ ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೆ ಬೇಕಾಗಿದೆ. “ಭಾರತವು ಉತ್ಪಾದನಾ ವಲಯದ ಪುನರುಜ್ಜೀವನದಲ್ಲಿ ಮುಂಚೂಣಿಯಲ್ಲಿರಬೇಕು. ಅದು ಖಂಡಿತ ಸಂಭವಿಸಲಿದೆ. ಮುಂದಿನ ದಶಕದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ನಾಯಕನಾಗಬಹುದು ಎಂದು ನಾನು ಭಾವಿಸುತ್ತೇನೆ” ಎಂದರು.
ಪ್ರಧಾನ ಮಂತ್ರಿ ಅವರ ಸಂದೇಶವು ಯಾವಾಗಲೂ ಸರಳ ಮತ್ತು ಸ್ಪಷ್ಟವಾಗಿರುತ್ತದೆ, ಆದ್ದರಿಂದ ಅವರು ಏನು ಬಯಸುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ರೆನೆಸಾಸ್ ಸಿಇಒ ಹಿಡೆತೋಶಿ ಶಿಬಾಟಾ ಹೇಳಿದರು. "ಸಂಪೂರ್ಣ ಸ್ಪಷ್ಟತೆ ಯಾವಾಗಲೂ ಸಹಾಯ ಮಾಡುತ್ತದೆ, ಅತ್ಯಂತ ಚುರುಕುಬುದ್ಧಿಯ ಮತ್ತು ವೇಗದ ಪ್ರಗತಿ ಮಾಡುತ್ತದೆ" ಎಂದರು.

ಐಎಂಇಸಿ ಕಂಪನಿಯ ಸಿಇಒ ಲುಕ್ ವ್ಯಾನ್ ಡೆನ್ ಹೋವ್ ಮಾತನಾಡಿ, ಪ್ರಧಾನ ಮಂತ್ರಿ ಅವರ ನಾಯಕತ್ವದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಶಕ್ತಿಕೇಂದ್ರ(ಪವರ್‌ಹೌಸ್)ವಾಗಿ ಮಾಡಲು ಪ್ರಧಾನ ಮಂತ್ರಿ ಅವರ ಬದ್ಧತೆ ಮತ್ತು ಸಮರ್ಪಣೆಯನ್ನು ಅವರು ಶ್ಲಾಘಿಸಿದರು. ಉತ್ಪಾದನೆ ಅಥವಾ ತಯಾರಿಕೆ ಮೀರಿದ ಪ್ರಧಾನ ಮಂತ್ರಿ ಅವರು ಹೊಂದಿರುವ ದೀರ್ಘಾವಧಿಯ ಸಂಶೋಧನೆ ಮತ್ತು ಅಭಿವೃದ್ಧಿ ದೃಷ್ಟಿಕೋನಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಭಾರತವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬಲಿಷ್ಠವಾಗಲು ಸಾಧ್ಯವಾಗುವಂತೆ ಅತ್ಯಂತ ಕಾರ್ಯತಂತ್ರ ಪಾಲುದಾರಿಕೆ ರೂಪಿಸವುದು ಅಗತ್ಯವಿದೆ ಎಂದರು.

ಟವರ್‌ ಸಿಇಒ ರಸೆಲ್ ಸಿ ಎಲ್ವಾಂಗರ್ ಮಾತನಾಡಿ, ಪ್ರಧಾನ ಮಂತ್ರಿ ಅವರ ದೃಷ್ಟಿಕೋನ ಮತ್ತು ಕಾರ್ಯಗತಗೊಳಿಸುವಿಕೆ ವಿಧಾನವು ಒಂದು ರೀತಿಯಲ್ಲಿ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿ ಅವರ ನಾಯಕತ್ವ ನೋಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಕ್ಯಾಡೆನ್ಸ್ ಸಿಇಒ ಅನಿರುದ್ಧ ದೇವಗನ್ ಹೇಳಿದರು. ಎಲ್ಲಾ ಡಿಜಿಟಲ್ ಉದ್ಯಮಗಳಿಗೆ ಸೆಮಿಕಂಡಕ್ಟರ್ ಅತ್ಯಗತ್ಯ ತಂತ್ರಜ್ಞಾನವಾಗಿದೆ. ಮೋದಿ ಜಿ ನಾಯಕತ್ವದಲ್ಲಿ 3 ವರ್ಷಗಳ ಹಿಂದಕ್ಕೆ ಹೋಲಿಸಿದರೆ ದೊಡ್ಡ ಆವೇಗವೇ ಸೃಷ್ಟಿಯಾಗಿದೆ. ಅವರು ಮೊದಲಿನಿಂದಲೂ ಅದರಲ್ಲಿ ತೊಡಗಿಸಿಕೊಳ್ಳುತ್ತಿರುವುದರಲ್ಲಿ ಅದೃಷ್ಟವಂತರು, ಪ್ರತಿ ವರ್ಷ ದೊಡ್ಡ ಸುಧಾರಣೆ ಕಾಣುತ್ತಿರುವುದು ನಿಜಕ್ಕೂ ಸಕಾರಾತ್ಮಕವಾಗಿದೆ ಎಂದರು.

ಸಿನೋಪ್ಸಿಸ್ ಅಧ್ಯಕ್ಷ ಮತ್ತು ಸಿಇಒ ಸಸಿನ್ ಘಾಝಿ ಮಾತನಾಡಿ, ಕಳೆದ 2-3 ವರ್ಷಗಳಲ್ಲಿ, ವಿನ್ಯಾಸ ವಲಯದಿಂದ ತಯಾರಿಕೆ ಅಥವಾ ಉತ್ಪಾದನೆ ಕ್ಷೇತ್ರದವರೆಗೆ ಎಲ್ಲ ರೀತಿಯಲ್ಲಿ ಹೂಡಿಕೆ ಮಾಡುವುದು ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡುವುದು ಎಂಬ ಸ್ಪಷ್ಟ ಕಾರ್ಯತಂತ್ರದೊಂದಿಗೆ ವಲಯದ ಸುತ್ತ ಉತ್ಸಾಹ ಮತ್ತು ಗಮನ ಕೇಂದ್ರೀಕರಿಸಿದೆ. ಸ್ಥಳೀಯ ಮತ್ತು ಜಾಗತಿಕ ಬಳಕೆಗಾಗಿ ಉತ್ಪನ್ನಗಳನ್ನು ತಯಾರಿಸಲು ಎಂಜಿನಿಯರಿಂಗ್ ಕೇಂದ್ರದಿಂದ ಹೋಗಬೇಕೆಂದು ನಾನು ಇದೀಗ ನೋಡುತ್ತಿರುವುದು, ಆಸಕ್ತಿದಾಯಕವಾಗಿದೆ ಎಂದು ಹೇಳಿದರು.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತವು ಒಂದು ದೊಡ್ಡ ಹೆಜ್ಜೆ ಇಟ್ಟಿದೆ ಎಂದು ನಾನು ಹೇಳಲೇಬೇಕು ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಆರೋಗ್ಯಸ್ವಾಮಿ ಪೌಲ್‌ರಾಜ್ ಹೇಳಿದರು. "ಬಹಳಷ್ಟು ಶಕ್ತಿ, ಬಹಳಷ್ಟು ಪ್ರಗತಿ, ಮತ್ತು ಇದು ನಿಜವಾಗಿಯೂ ಗೌರವಾನ್ವಿತ ಪ್ರಧಾನ ಮಂತ್ರಿ ಅವರ ದೂರದೃಷ್ಟಿ ಮತ್ತು ಚಾಲನೆಯಿಂದ ಇದು ಉಂಟಾಗಿದೆ" ಎಂದರು.

ಸಿಜಿ ಪವರ್‌ ಅಧ್ಯಕ್ಷ ವೆಲ್ಲಯನ್ ಸುಬ್ಬಯ್ಯ ಮಾತನಾಡಿ, ಸೆಮಿಕಂಡಕ್ಟರ್ ಉದ್ಯಮಕ್ಕೆ ಇದು ನಿಜವಾಗಿಯೂ ಉತ್ತೇಜಕ ಸಮಯ ಮತ್ತು ಇದು ಕೇವಲ ಪ್ರಾರಂಭವಾಗಿದೆ. ಭಾರತವು ಅಭೂತಪೂರ್ವ ಮಟ್ಟಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಅವರು, ಹಿಂದೆಂದೂ ಕಾಣದ ಮಟ್ಟಕ್ಕೆ ತಲುಪಿರುವ ಉದ್ಯಮ-ಸರ್ಕಾರದ ಸಹಭಾಗಿತ್ವವನ್ನು ಶ್ಲಾಘಿಸಿದರು.

ಯುಸಿಎಸ್‌ಡಿ ಕುಲಪತಿ ಪ್ರೊ ಪ್ರದೀಪ್ ಖೋಸ್ಲಾ ಮಾತನಾಡಿ, ಸೆಮಿಕಂಡಕ್ಟರ್ ಮಿಷನ್‌ನಲ್ಲಿ ಪ್ರಧಾನ ಮಂತ್ರಿ ಅದ್ಭುತ ದೃಷ್ಟಿಕೋನ ತೋರಿಸಿದ್ದಾರೆ ಎಂದು ಶ್ಲಾಘಿಸಿದರು. ಸೆಮಿಕಂಡಕ್ಟರ್‌ಗಳ ವಿಷಯದಲ್ಲಿ ಸರಿಯಾದ ನೀತಿ ರೂಪಿಸಲು ಈ ದೇಶದ ಇತಿಹಾಸದಲ್ಲಿ ಹಿಂದಿನ ಯಾವುದೇ ಆಡಳಿತ ಧೈರ್ಯವನ್ನು ತೋರಿರಲಿಲ್ಲ. ಪ್ರಧಾನಿ ಅವರು ಹೊಂದಿರುವ ದೂರದೃಷ್ಟಿ ಮತ್ತು  ಬದ್ಧತೆಯಿಂದ ಅವರು ನಮ್ಮನ್ನು ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Small tickets but big shift in MF investing: How Gen Z is rewriting India’s investment playbook

Media Coverage

Small tickets but big shift in MF investing: How Gen Z is rewriting India’s investment playbook
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಜನವರಿ 2026
January 06, 2026

Aatmanirbhar Accelerates: PM Modi’s Vision Delivering Infrastructure, Innovation and Inclusion