मैं टीसीएस जापान का आभारी हूं कि एक अच्छा इनिशिएटिव आपने लिया है । वैसे एक जमाना था जब नालंदा और तक्षशिला यूनिवर्सिटीस थीं , तो दुनिया के स्टुडेंट्स भारत मे जाते थे, सीखने के लिए, समझने के लिए, देखने के लिए। सबसी पहली यूनिवर्सिटी 2600 इयर ओल्ड थी, भारत के साहित्य में इसका उल्लेख आता है, छब्बिश सौ साल पहले। उस समय, जैसे मैं जिस स्टेट से आता हूं, ‘गुजरात’, वहाँ एक बलल्भि यूनिवेर्सिटी थी, वो 2600 साल पुरानी थी और 89 कंट्री के स्टूडेंट्स उस समय वहाँ पढ़ाई करते थे। नालंदा एक ऐसी युनिवर्सिटी थी जहाँ जापान के बहुत लोग पढ़ने के लिए आते थे।
भारत की एक विशेषता रही है जब जब मानव जाति ने ज्ञानरूप में प्रवेश किया, तब हमेशा नेतृतव भारत का रहा। 21वीं सदी ज्ञान की सदी है और इसलिए जिसके पास अस्त्र होंगे, शस्त्र होंगे, धन होगा, दौलत होगी उस से ज़्यादा वही देश दुनिया को लीड करेगा, जिसके पास ज्ञान है, इन्फर्मेशन है, वही सबसे बड़ा मैटर करने वाला है।
इसीलिए इन्फर्मेशन के इस युग में, ज्ञान के इस युग में, मुझे विश्वास है कि आप लोग जो भारत जा रहे हैं, ज़रूर आपके ज्ञान मे इज़ाफा होगा, आपके इन्फर्मेशन मे इज़ाफा होगा । वैसे भी हमारे यहाँ एक कहावत है ‘जो फरे, ते चरे। मतलब, जो ज़्यादा घूमता ,है वो जप करता है।
मेरी आप सबको बहुत बहुत शुभकामनाएं है, लेकिन एक आग्रह है, आप भारत में आयें तो टीसीएस के कमरे में बंद मत हो जाना, सटर्डे-सनडे थोड़ा खर्चा करना और मेरे हिन्दुस्तान की और जगहों पर घूमना । इतना पुरातन देश है और देखने जैसा है और उसकी हर बारीकियों का अध्यन करना और जब वापिस आएंगे तब टीसीएस के नहीं, भारत के एम्बेस्डर बनकर आइये। आप भारत के ऐसे मजबूत एम्बेस्डर बनकर आइए कि जापान से बहुत बड़ी मात्रा मे टूरिस्ट,हिन्दुस्तान की ओर जाने के लिए प्रेरित हो जायें।
आपके वहाँ, अगर आप छह महीना रहते हैं और पर-डे तय करें कि मुझे नई डिश खानी है, एक बार भी रिपीट नहीं करनी है और मैं दावे से कहता हूं, छह महीने तक आप रोज नई डिश खा सकते हैं। अगर आप पुणे में जाएंगे तो वहां खाना अलग होगा, अगर आप अहमदाबाद में जाएंगे तो वहां खाना अलग होगा। इतनी विविधताओं से भरा हुआ देश है। अगर आप खुलेपन से वहां जाओगे, तो पता नहीं, जो आप कमरे में बैठकर के सीखने वाले हो, उससे ज्यादा कमरे के बाहर सीखने को मिलेगा।
तो मेरी, आपके इस इनिशिएटिव के लिए, टीसीएस के सभी मित्रों को मेरी बधाई है और जिनको भारत आने का सौभाग्य मिला है, उनको मेरी शुभकामनाएं हैं। मुझे विश्वास है कि वहां से बहुत सी अच्छी स्मृतियां लेकर आप यहां लौटेंगे और सच्चे अर्थ में आप, भारत के एक अच्छे एम्बेसडर बनोगे, यह मेरा विश्वास है।
बहुत-बहुत धन्यवाद, बहुत-बहुत शुभकामनायें।
ನನ್ನ ಸ್ನೇಹಿತ ಅಧ್ಯಕ್ಷರಾದ ಮ್ಯಾಕ್ರನ್, ಗಣ್ಯರೇ, ಭಾಗವಹಿಸಿರು ಎಲ್ಲರಿಗೂ ನಮಸ್ಕಾರ!
ಮೊದಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯ ಭಾಗವಾಗಲು ನನಗೆ ಸಂತೋಷವಾಗಿದೆ. ಅಧ್ಯಕ್ಷರಾದ ಮ್ಯಾಕ್ರನ್ ಅವರ ಆತ್ಮೀಯ ಆಹ್ವಾನಕ್ಕಾಗಿ ಮತ್ತು ಈ ಸಕಾಲಿಕ ಉಪಕ್ರಮ ಕೈಗೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಶತಮಾನಗಳಿಂದ, ಬಾಹ್ಯಾಕಾಶವು ನಮ್ಮ ಕಲ್ಪನೆಗೆ ಸ್ಫೂರ್ತಿ ನೀಡಿತು. ಇಂದು, ಇದು ಹವಾಮಾನ ಮತ್ತು ಬೆಳೆಗಳಿಂದ ಸಾಗರಗಳು ಮತ್ತು ಸಮುದಾಯಗಳವರೆಗೆ ಭೂಮಿಯ ಮೇಲಿನ ಜೀವನವನ್ನು ರೂಪಿಸುತ್ತದೆ. ಬಾಹ್ಯಾಕಾಶದ ಭರವಸೆ ಅನಂತವಾಗಿದೆ. ನಮ್ಮ ಜವಾಬ್ದಾರಿ ಸಾಮೂಹಿಕವಾಗಿದೆ. ಕಕ್ಷೆಗಳು ಹೆಚ್ಚು ಜನದಟ್ಟಣೆಯ ತಂತ್ರಜ್ಞಾನಗಳು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದಂತೆ ಮತ್ತು ತಾರೆಗಳು ಹೆಚ್ಚು ಸಂಖ್ಯೆಯಲ್ಲಿರುವಾಗ ನಮ್ಮ ಆಯ್ಕೆಗಳು ಸ್ಪಷ್ಟವಾಗಿರಬೇಕು: ಅಲ್ಪಾವಧಿಯ ಲಾಭಕ್ಕಿಂತ ಮುಖಾಮುಖಿಯ ಮೇಲಿನ ಸಹಕಾರ ಸುಸ್ಥಿರತೆ; ಮತ್ತು ಹೊರಗಿಡುವಿಕೆಯ ಮೇಲೆ ಹೆಚ್ಚು ಒತ್ತು ನೀಡಬೇಕಾಗಿದೆ.
ಮಿತ್ರರೇ,
ಭಾರತದ ಮನೋಭಾವವು ವಸುಧೈವ ಕುಟುಂಬಕಂನಲ್ಲಿ ಬೇರೂರಿದೆ, ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ. ಈ ಮನೋಭಾವವು ಈಗ ಭೂಮಿಯಾಚೆಗೆ ಪ್ರಯಾಣಿಸಬೇಕು. ಅಂತಾರಾಷ್ಟ್ರೀಯ ಕಾನೂನು, ಸಂವಾದ ಮತ್ತು ಬಹುಪಕ್ಷೀಯ ಸಹಕಾರದಲ್ಲಿ ನೆಲೆಗೊಂಡಿರುವ ಸುರಕ್ಷಿತ, ಸುಭದ್ರ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ಕ್ಷೇತ್ರವನ್ನು ನಾವು ಬೆಂಬಲಿಸುತ್ತೇವೆ. ವೈಜ್ಞಾನಿಕ ದತ್ತಾಂಶವು ಮುಕ್ತತೆ ಮತ್ತು ಸಮಗ್ರತೆಯೊಂದಿಗೆ ಸಾಮಾನ್ಯ ಒಳಿತನ್ನು ಪೂರೈಸಬೇಕು.
ಭಾರತದ ಬಾಹ್ಯಾಕಾಶ ಪಯಣವೂ ಸಹ ಇದೇ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ಈ ಪಯಣದ ಹೃದಯಭಾಗದಲ್ಲಿರುವ ಇಸ್ರೋ, ತನ್ನ ಶ್ರೇಷ್ಠತೆ ಮತ್ತು ವೆಚ್ಚ-ಪರಿಣಾಮಕಾರಿ ಕಾರ್ಯಾಚರಣೆಗಳಿಗಾಗಿ ಜಾಗತಿಕ ಮೆಚ್ಚುಗೆ ಗಳಿಸಿದೆ. ಅದರ ಸಾಮರ್ಥ್ಯಗಳು ರೈತರು ಮತ್ತು ಮೀನುಗಾರರು, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ ಮತ್ತು ಸಂಚರಣೆಗಳಿಗೆ ಸೇವೆ ಸಲ್ಲಿಸುತ್ತವೆ. 34 ದೇಶಗಳಿಂದ 430ಕ್ಕೂ ಅಧಿಕ ಉಪಗ್ರಹಗಳು ಭಾರತೀಯ ರಾಕೆಟ್‌ಗಳ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿವೆ. ಇಸ್ರೋದ ತಂತ್ರಜ್ಞಾನಗಳು ಮತ್ತು ಪಾಲುದಾರಿಕೆಗಳು ಭಾರತಕ್ಕೆ ಮಾತ್ರವಲ್ಲದೆ ವಿಶಾಲ ಜಗತ್ತಿಗೆ ಸೇವೆ ಸಲ್ಲಿಸುತ್ತವೆ.
ಈ ಜಾಗತಿಕ ನಂಬಿಕೆಯ ಹಿಂದೆ ಭಾರತೀಯ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ತಲೆಮಾರುಗಳ ಬದ್ಧತೆ ಮತ್ತು ಕಠಿಣ ಪರಿಶ್ರಮವಿದೆ. ಹಗಲಿರುಳು ಶ್ರಮಿಸುತ್ತಾ, ಅವರು ಇಸ್ರೋದ ಜಾಗತಿಕ ಖ್ಯಾತಿಯ ಮಿಷನ್ ಅನ್ನು ಒಂದಾರ ಒಂದರಂತೆ ಯಶಸ್ಸು ಸಾಧಿಸಿದ್ದಾರೆ ಮತ್ತು ಬಾಹ್ಯಾಕಾಶ ಪಯಣದ ರಾಷ್ಟ್ರಗಳಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನವನ್ನು ನೀಡಿದ್ದಾರೆ.
ಚಂದ್ರಯಾನ-3 ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ರಾಷ್ಟ್ರವನ್ನಾಗಿ ಮಾಡಿದೆ. ಆದಿತ್ಯ-L1 ಸೂರ್ಯನ ರಹಸ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದೆ. ಕಳೆದ ವರ್ಷ, ಒಬ್ಬ ಭಾರತೀಯರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಮುಂದೆ ನೋಡುತ್ತಿರುವಾಗ, 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವುದು ಮತ್ತು 2040 ರ ವೇಳೆಗೆ ಒಬ್ಬ ಭಾರತೀಯನನ್ನು ಚಂದ್ರನಿಗೆ ಕಳುಹಿಸುವುದು ನಮ್ಮ ಗುರಿಯಾಗಿದೆ. ಈ ಎಲ್ಲಾ ಪ್ರಯತ್ನಗಳಲ್ಲಿ, ನಮ್ಮ ಮಾರ್ಗದರ್ಶಿ ತತ್ವವು ಸ್ಪಷ್ಟವಾಗಿದೆ: ಅವುಗಳ ಪ್ರಯೋಜನಗಳು ಎಲ್ಲಾ ಮಾನವೀಯತೆಯನ್ನು ತಲುಪಬೇಕು ಎಂಬುದು.
ಇಸ್ರೋ ಜೊತೆ ಜೊತೆಗೆ ಭಾರತದ ಖಾಸಗಿ ಬಾಹ್ಯಾಕಾಶ ವಲಯವು ಸಹ ದೊಡ್ಡ ರೀತಿಯಲ್ಲಿ ಮೇಲೇರುತ್ತಿದೆ. ಉದ್ಯಮದ ಶಕ್ತಿಯು ಇಸ್ರೋದ ಶ್ರೇಷ್ಠತೆಯನ್ನು ಸೇರುತ್ತಿದೆ. 1960ರ ದಶಕದಲ್ಲಿ ಥುಂಬಾದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಆರಂಭವಾದಾಗಿನಿಂದ ಫ್ರಾನ್ಸ್ ವಿಶ್ವಾಸಾರ್ಹ ಪಾಲುದಾರ. ಇಂದು, ನಮ್ಮ ಸಹಕಾರವು ಭೂಮಿಯ ವೀಕ್ಷಣೆ ಮತ್ತು ಮುಂದುವರಿದ ತಂತ್ರಜ್ಞಾನಗಳನ್ನು ವ್ಯಾಪಿಸಿದೆ, ವೈಜ್ಞಾನಿಕ ಶ್ರೇಷ್ಠತೆಯನ್ನು ಮಾನವ ಉದ್ದೇಶದೊಂದಿಗೆ ಸಂಯೋಜಿಸುತ್ತದೆ. ಭಾರತದ ಮುಂದಿನ ಬಾಹ್ಯಾಕಾಶ ಪಯಣದಲ್ಲಿ ಸಹ-ಪ್ರಯಾಣಿಕರಾಗಲು ನಾವು ಫ್ರಾನ್ಸ್ ಮತ್ತು ಜಗತ್ತನ್ನು ಆಹ್ವಾನಿಸುತ್ತೇವೆ.
ಮಿತ್ರರೇ,
ಪ್ಯಾರಿಸ್‌ನಲ್ಲಿ ನಡೆಯುವ ಬಾಹ್ಯಾಕಾಶ ಶೃಂಗಸಭೆಯು, ಇಡೀ ಮನುಕುಲಕ್ಕಾಗಿ ಮತ್ತು ಮುಂಬರುವ ಪೀಳಿಗೆಗಾಗಿ ನಾವು ಒಟ್ಟಾಗಿ ಅನ್ವೇಷಿಸುತ್ತೇವೆ, ಒಟ್ಟಾಗಿ ನಾವೀನ್ಯತೆ ಸಾಧಿಸುತ್ತೇವೆ ಮತ್ತು ಒಟ್ಟಾಗಿ ಬಾಹ್ಯಾಕಾಶವನ್ನು ರಕ್ಷಿಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಿ. ಭಾಗವಹಿಸಿರುವ ಎಲ್ಲರಿಗೂ ಮತ್ತೊಮ್ಮೆ ನಾನು ಶುಭಾಶಯಗಳನ್ನು ತಿಳಿಸ ಬಯಸುತ್ತೇನೆ.
ತುಂಬಾ ಧನ್ಯವಾದಗಳು.


