"ಕಾಶಿಯು ಶತ-ಶತಮಾನಗಳಿಂದಲೂ ಜ್ಞಾನ, ಚರ್ಚೆ, ಸಮಾಲೋಚನೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ"
"ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ವಿಚಾರದಲ್ಲಿ ಹಿಂದುಳಿಯದಂತೆ ನೋಡಿಕೊಳ್ಳುವುದು ಜನರ ಸಾಮೂಹಿಕ ಜವಾಬ್ದಾರಿಯಾಗಿದೆ"
"ಅಭಿವೃದ್ಧಿವಂಚಿತವಾಗಿದ್ದ ನೂರಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸುವ ಪ್ರಯತ್ನಗಳನ್ನು ನಾವು ಮಾಡಿದ್ದೇವೆ"
"ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ, ಜನರನ್ನು ಸಬಲೀಕರಣಗೊಳಿಸಲು, ದತ್ತಾಂಶವನ್ನು ಜನರಿಗೆ ಲಭ್ಯವಾಗಿಸಲು ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಸಾಧನವಾಗಿ ಬಳಸಲಾಗುತ್ತಿದೆ"
"ಭಾರತದಲ್ಲಿ ನಾವು ನದಿಗಳು, ಮರಗಳು, ಪರ್ವತಗಳು ಮತ್ತು ಪ್ರಕೃತಿಯ ಎಲ್ಲಾ ಅಂಶಗಳ ಬಗ್ಗೆ ಅತ್ಯಂತ ಗೌರವದ ಭಾವನೆ ಹೊಂದಿದ್ದೇವೆ"
"ಭಾರತವು ಮಹಿಳಾ ಸಬಲೀಕರಣಕ್ಕೆ ಸೀಮಿತವಾಗಿಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿವರೆಗೂ ಅದು ವಿಸ್ತರಿಸಿದೆ"

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ,

ಪ್ರಜಾಪ್ರಭುತ್ವದ ತಾಯಿಯ ಅತ್ಯಂತ ಹಳೆಯ ಜೀವಂತ ನಗರಕ್ಕೆ ನಿಮ್ಮೆಲ್ಲರನ್ನೂ ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಇದು ʻಜಿ 20 ಅಭಿವೃದ್ಧಿ ಮಂತ್ರಿಗಳ ಸಭೆ’ಗೆ ಸೂಕ್ತ ಸ್ಥಳವಾಗಿದೆ. ಕಾಶಿಯು ಶತ-ಶತಮಾನಗಳಿಂದ ಜ್ಞಾನ, ಚರ್ಚೆ, ಸಮಾಲೋಚನೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಇದು ಭಾರತದ ವೈವಿಧ್ಯಮಯ ಪರಂಪರೆಯ ಸಾರವನ್ನು ಹೊಂದಿದೆ. ಜೊತೆಗೆ ದೇಶದ ಎಲ್ಲಾ ಭಾಗಗಳ ಜನರಿಗೆ ಸಮಾಗಮ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಜಿ 20 ಅಭಿವೃದ್ಧಿ ಕಾರ್ಯಸೂಚಿಯು ಕಾಶಿಯವರೆಗೂ ತಲುಪಿದೆ ಎಂದು ನನಗೆ ಸಂತೋಷ ತಂದಿದೆ.

ಗೌರವಾನ್ವಿತರೇ,

ಅಭಿವೃದ್ಧಿಯು ಜಾಗತಿಕ ದಕ್ಷಿಣದ ದೇಶಗಳ ಅತ್ಯಂತ ಪ್ರಧಾನ ವಿಷಯವಾಗಿದೆ. ಜಾಗತಿಕ ಕೋವಿಡ್ ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಅಡೆತಡೆಗಳಿಂದ ಜಾಗತಿಕ ದಕ್ಷಿಣದ ದೇಶಗಳು ತೀವ್ರ ಪರಿಣಾಮ ಎದುರಿಸಿವೆ. ಅಲ್ಲದೆ, ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟುಗಳು ಮತ್ತೊಂದು ಹೊಡೆತವನ್ನು ನೀಡಿವೆ. ಇಂತಹ ಸಂದರ್ಭಗಳಲ್ಲಿ, ನೀವು ಕೈಗೊಳ್ಳುವ ನಿರ್ಧಾರಗಳು ಒಟ್ಟಾರೆ ಮಾನುಕುಲದ ಪಾಲಿಗೆ ಹೆಚ್ಚು ಮಹತ್ತರವಾದುವು. ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ನಾನು ಬಲವಾಗಿ ನಂಬುತ್ತೇನೆ. ಇದರಲ್ಲಿ ಯಾರೂ ಹಿಂದೆ ಉಳಿಯದಂತೆ ನಾವು ನೋಡಿಕೊಳ್ಳಬೇಕು. ಇದನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ನಾವು ಹೊಂದಿದ್ದೇವೆ ಎಂಬ ಬಲವಾದ ಸಂದೇಶವನ್ನು ಈ ಕಾರ್ಯಪಡೆಯು ಜಗತ್ತಿಗೆ ರವಾನಿಸಬೇಕಿದೆ. 

ಗೌರವಾನ್ವಿತರೇ,

ನಮ್ಮ ಪ್ರಯತ್ನಗಳು ಸಮಗ್ರ, ಎಲ್ಲರನ್ನೂ ಒಳಗೊಂಡ, ನ್ಯಾಯಸಮ್ಮತ ಮತ್ತು ಸುಸ್ಥಿರವಾಗಿರಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸುವಲ್ಲಿ ನಾವು ಹೂಡಿಕೆಯನ್ನು ಹೆಚ್ಚಿಸಬೇಕು. ಅನೇಕ ದೇಶಗಳು ಎದುರಿಸುತ್ತಿರುವ ಸಾಲದ ಅಪಾಯಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕು. ಅರ್ಹತಾ ಮಾನದಂಡಗಳನ್ನು ವಿಸ್ತರಿಸುವ ಸಲುವಾಗಿ ಬಹುಪಕ್ಷೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸಬೇಕು, ಅಗತ್ಯವಿರುವವರಿಗೆ ಹಣಕಾಸು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕು. ಭಾರತದಲ್ಲಿ, ನಾವು ನೂರಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸುವ ಪ್ರಯತ್ನಗಳನ್ನು ಮಾಡಿದ್ದೇವೆ. ಅವುಗಳು ಈಗ ದೇಶದ ಬೆಳವಣಿಗೆಯ ವೇಗವರ್ಧಕಗಳಾಗಿ ಹೊರಹೊಮ್ಮಿವೆ. ನಮ್ಮ ಅನುಭವದಿಂದ ಇದು ಸ್ಪಷ್ಟವಾಗಿದೆ. ಅಭಿವೃದ್ಧಿಯ ಈ ಮಾದರಿಯನ್ನು ಅಧ್ಯಯನ ಮಾಡುವಂತೆ ನಾನು ಜಿ 20 ಅಭಿವೃದ್ಧಿ ಸಚಿವರನ್ನು ಒತ್ತಾಯಿಸುತ್ತೇನೆ. ʻಕಾರ್ಯಸೂಚಿ 2030ʼ ಅನ್ನು ವೇಗವರ್ಧನೆ ಮಾಡುವ ನಿಟ್ಟಿನಲ್ಲಿ ನೀವು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ಪ್ರಸ್ತುತವಾಗಬಹುದು.

ಗೌರವಾನ್ವಿತರೇ,

ಬೆಳೆಯುತ್ತಿರುವ ಡೇಟಾ ವಿಭಜನೆಯು ನಿಮ್ಮ ಮುಂದಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಅರ್ಥಪೂರ್ಣ ನೀತಿ ನಿರೂಪಣೆ, ಪರಿಣಾಮಕಾರಿ ಸಂಪನ್ಮೂಲ ಹಂಚಿಕೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಸೇವಾ ವಿತರಣೆಗೆ ಉತ್ತಮ-ಗುಣಮಟ್ಟದ ಡೇಟಾ ನಿರ್ಣಾಯಕವಾಗಿದೆ. ತಂತ್ರಜ್ಞಾನದ ಸಾರ್ವತ್ರೀಕರಣವು ಡೇಟಾ ವಿಭಜನೆಯನ್ನು ನಿವಾರಿಸಲು ಸಹಾಯ ಮಾಡುವ ಪ್ರಮುಖ ಸಾಧನವಾಗಿದೆ. ಭಾರತದಲ್ಲಿ, ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಜನರನ್ನು ಸಬಲೀಕರಣಗೊಳಿಸಲು, ಡೇಟಾವನ್ನು ಲಭ್ಯತೆ ಹೆಚ್ಚಿಸಲು ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಸಾಧನವಾಗಿ ಬಳಸಲಾಗುತ್ತಿದೆ. ಭಾರತವು ತನ್ನ ಅನುಭವವನ್ನು ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ. ನಿಮ್ಮ ಚರ್ಚೆಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂವಾದಕ್ಕಾಗಿ ಡೇಟಾ, ಅಭಿವೃದ್ಧಿಗಾಗಿ ಡೇಟಾ ಮತ್ತು ವಿತರಣೆಗಾಗಿ ಡೇಟಾವನ್ನು ಉತ್ತೇಜಿಸಲು ಸ್ಪಷ್ಟ ಕ್ರಮಗಳಿಗೆ ದಾರಿ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತರೇ,

ಭಾರತದಲ್ಲಿ, ನಾವು ನದಿಗಳು, ಮರಗಳು, ಪರ್ವತಗಳು ಮತ್ತು ಪ್ರಕೃತಿಯ ಎಲ್ಲಾ ಅಂಶಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ಸಾಂಪ್ರದಾಯಿಕ ಭಾರತೀಯ ಚಿಂತನೆಯು ಭೂಗ್ರಹದ ಪರವಾದ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಕಳೆದ ವರ್ಷ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ, ನಾನು ʻಪರಿಸರಕ್ಕಾಗಿ ಜೀವನಶೈಲಿ ಅಭಿಯಾನʼ (Mission LiFE) ಪ್ರಾರಂಭಿಸಿದೆ. ಈ ಕಾರ್ಯಪಡೆಯು ʻಮಿಷನ್ ಲೈಫ್ʼಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತತ್ವಗಳನ್ನು ಅಭಿವೃದ್ಧಿಪಡಿಸುವತ್ತ ಕೆಲಸ ಮಾಡುತ್ತಿದೆ ಎಂಬುದು ನನಗೆ ಸಂತೋಷ ತಂದಿದೆ. ಇದು ಹವಾಮಾನ ಉಪಕ್ರಮಕ್ಕೆ ಮಹತ್ವದ ಕೊಡುಗೆಯಾಗಿದೆ.

ಗೌರವಾನ್ವಿತರೇ,

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವು ನಿರ್ಣಾಯಕವಾಗಿದೆ. ಭಾರತದಲ್ಲಿ ನಾವು ಮಹಿಳಾ ಸಬಲೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮದು ಮಹಿಳಾ ನೇತೃತ್ವದ ಅಭಿವೃದ್ಧಿ. ಮಹಿಳೆಯರು ಅಭಿವೃದ್ಧಿಯ ಕಾರ್ಯಸೂಚಿಯನ್ನು ನಿಗದಿಪಡಿಸುತ್ತಿದ್ದಾರೆ, ಬೆಳವಣಿಗೆ ಮತ್ತು ಬದಲಾವಣೆಯ ರೂವಾರಿಗಳಾಗಿದ್ದಾರೆ. ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ಕ್ರಾಂತಿಕಾರಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.

ಗೌರವಾನ್ವಿತರೇ,

ಕಾಶಿಯ ಚೈತನ್ಯವು ಭಾರತದ ಕಾಲಾತೀತ ಸಂಪ್ರದಾಯಗಳಿಂದ ಶಕ್ತಿ ಪಡೆದಿದೆ. ನೀವು ನಿಮ್ಮ ಎಲ್ಲಾ ಸಮಯವನ್ನು ಚರ್ಚಾ ಗೋಷ್ಠಿಗಳಲ್ಲಿ ಕಳೆಯುವುದಿಲ್ಲ ಎಂದು ನಾನು ಭಾವಿಸುತ್ತೇನೆ!  ಕಾಶಿಯ ಚೈತನ್ಯವನ್ನು ಹೊರಗೆ ಹೋಗಿ ಅನ್ವೇಷಿಸಲು ಮತ್ತು ಅನುಭವಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಇದನ್ನು ಹೇಳುತ್ತಿರುವುದು ಕಾಶಿ ನನ್ನ ಕ್ಷೇತ್ರ ಎಂಬ ಕಾರಣಕ್ಕಾಗಿ ಮಾತ್ರವಲ್ಲ! ಗಂಗಾ ಆರತಿಯ ಅನುಭವ ಹಾಗೂ ಸಾರನಾಥಕ್ಕೆ ಭೇಟಿಯು ನಿಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಎಂಬ ನನಗೆ ವಿಶ್ವಾಸವಿದೆ. ʻಕಾರ್ಯಸೂಚಿ 2030ʼ ಅನ್ನು ಉತ್ತೇಜಿಸಲು ಮತ್ತು ಜಾಗತಿಕ ದಕ್ಷಿಣದ ದೇಶಗಳ ಆಕಾಂಕ್ಷೆಗಳನ್ನು ಪೂರೈಸಲು ನಿಮ್ಮ ಚರ್ಚೆಗಳಲ್ಲಿ ನಿಮಗೆ ಸಂಪೂರ್ಣ ಯಶಸ್ಸನ್ನು ನಾನು ಕೋರುತ್ತೇನೆ. 

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
iPhone exports hit record ₹2 trillion in final year of smartphone PLI

Media Coverage

iPhone exports hit record ₹2 trillion in final year of smartphone PLI
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting how enthusiasm and positive energy lead to success
April 30, 2026

Prime Minister Shri Narendra Modi today shared a Sanskrit Subhashitam highlighting that enthusiasm and positive energy inspire a person to remain consistently active in their actions.

The Prime Minister noted that this unwavering enthusiasm leads all those efforts to success which a person resolves to accomplish.

The Prime Minister posted on X:

"कर्मशील और ऊर्जावान देशवासी ही राष्ट्र की सबसे बड़ी शक्ति हैं, जिनके परिश्रम से विकास की नई राहें तय होती हैं। इनके प्रयासों से देश समृद्धि, आत्मनिर्भरता और उन्नति के शिखर को छूता है।

अनिर्वेदो हि सततं सर्वार्थेषु प्रवर्तकः।

करोति सफलं जन्तोः कर्म यच्च करोति सः॥"
Enthusiasm and positive energy inspire a person to remain consistently active in their actions. This unwavering enthusiasm leads all those efforts to success which a person resolves to accomplish.