Unveils a commemorative coin and postal stamp in honour of Bhagwan Birsa Munda
Inaugurates, lays foundation stone of multiple development projects worth over Rs 6640 crore in Bihar
Tribal society is the one which made Prince Ram into Lord Ram,Tribal society is the one that led the fight for centuries to protect India's culture and independence: PM Modi
With the PM Janman Yojana, development of settlements of the most backward tribes of the country is being ensured: PM Modi
Tribal society has made a huge contribution in the ancient medical system of India:PM Modi
Our government has put a lot of emphasis on education, income and medical health for the tribal community: PM Modi
To commemorate the 150th birth anniversary of Lord Birsa Munda, Birsa Munda Tribal Gaurav Upvans will be built in tribal dominated districts of the country: PM Modi

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ನಾನು ಭಗವಾನ್ ಬಿರ್ಸಾ ಮುಂಡಾ ಎಂದು ಹೇಳುತ್ತೇನೆ - ನೀವು ಅಮರ್ ರಹೇ, ಅಮರ್ ರಹೇ ಎಂದು ಹೇಳಿ!

ಭಗವಾನ್ ಬಿರ್ಸಾ ಮುಂಡಾ - ಅಮರ್ ರಹೇ, ಅಮರ್ ರಹೇ!

ಭಗವಾನ್ ಬಿರ್ಸಾ ಮುಂಡಾ - ಅಮರ್ ರಹೇ, ಅಮರ್ ರಹೇ!

ಭಗವಾನ್ ಬಿರ್ಸಾ ಮುಂಡಾ - ಅಮರ್ ರಹೇ, ಅಮರ್ ರಹೇ!

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಾಮ್ ಜಿ, ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ಮತ್ತು ಯು ಕೆ ದುರ್ಗಾದಾಸ್ ಜಿ ಮತ್ತು ಇಂದು ನಮ್ಮೆಲ್ಲರ ನಡುವೆ ಬಿರ್ಸಾ ಮುಂಡಾ ಜಿ ಅವರ ವಂಶಸ್ಥರು ಇದ್ದಾರೆ ಎಂಬುದು ನಮ್ಮೆಲ್ಲರ ಸೌಭಾಗ್ಯ. ಇಂದು ಅವರ ಮನೆಯಲ್ಲಿ ಪ್ರಮುಖ ಧಾರ್ಮಿಕ ಆಚರಣೆ ಇದ್ದರೂ. ಅವರ ಕುಟುಂಬ ಧಾರ್ಮಿಕ ವಿಧಿಗಳಲ್ಲಿ ನಿರತರಾಗಿದ್ದರೂ, ಬುಧ್ರಾಮ್ ಮುಂಡಾ ಜಿ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ಸಿಧು ಕನ್ಹು ಅವರ ವಂಶಸ್ಥರಾದ ಮಂಡಲ್ ಮುರ್ಮು ಜಿ ಅವರು ನಮ್ಮೊಂದಿಗೆ ಇರುವುದು ನಮಗೆ ಸಮಾನ ಗೌರವವಾಗಿದೆ. ಇಂದು ಭಾರತೀಯ ಜನತಾ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಿದ್ದರೆ, ಒಂದು ಕಾಲದಲ್ಲಿ ಲೋಕಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ ನಮ್ಮ ಕರಿಯ ಮುಂಡಾಜಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಎಂದು ಹೇಳಲು ನನಗೆ ಸಂತೋಷದ ವಿಷಯವಾಗಿದೆ. ಇದು ಇನ್ನೂ ನಮಗೆ ಮಾರ್ಗದರ್ಶನ ನೀಡುತ್ತಿದೆ. ಜುಯಲ್ ಓರಾಮ್ ಜಿ ಉಲ್ಲೇಖಿಸಿದಂತೆ, ಅವರು ನನಗೆ ತಂದೆಯಂತಿದ್ದಾರೆ. ಕರಿಯಾ ಮುಂಡಾ ಜಿ ಅವರು ಜಾರ್ಖಂಡ್‌ನಿಂದ ಇಲ್ಲಿಗೆ ವಿಶೇಷವಾಗಿ ಪ್ರಯಾಣಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ವಿಜಯ್ ಕುಮಾರ್ ಸಿನ್ಹಾ ಜಿ, ಸಾಮ್ರಾಟ್ ಚೌಧರಿ ಜಿ, ಬಿಹಾರ ಸರ್ಕಾರದ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಗಣ್ಯ ಅತಿಥಿಗಳು ಮತ್ತು ಜಮುಯಿಯ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

 

ಇಂದು ಅನೇಕ ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಜ್ಯ ಸಚಿವರು ಮತ್ತು ಕೇಂದ್ರ ಸರ್ಕಾರದ ಸಚಿವರು ಭಾರತದ ವಿವಿಧ ಜಿಲ್ಲೆಗಳಲ್ಲಿ ಈ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ನಾನು ಅವರೆಲ್ಲರನ್ನು ಸ್ವಾಗತಿಸುತ್ತೇನೆ. ವರ್ಚುವಲ್(ವಾಸ್ತವಿಕ) ಆಗಿ ನಮ್ಮೊಂದಿಗೆ ಸೇರಿಕೊಂಡ ನನ್ನ ಲಕ್ಷಾಂತರ ಬುಡಕಟ್ಟು ಸಮುದಾಯದ ಸಹೋದರರು ಮತ್ತು ಸಹೋದರಿಯರಿಗೆ ನಾನು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಗೀತ್ ಗೌರ್ ದುರ್ಗಾ ಮಾಯ್ ಮತ್ತು ಬಾಬಾ ಧನೇಶ್ವರನಾಥ್ ಅವರ ಈ ಪವಿತ್ರ ಭೂಮಿಗೆ ನಾನು ತಲೆ ಬಾಗಿ ನಮಸ್ಕರಿಸುತ್ತೇನೆ. ಭಗವಾನ್ ಮಹಾವೀರರ ಜನ್ಮಸ್ಥಳಕ್ಕೆ ನಾನು ನಮಸ್ಕರಿಸುತ್ತೇನೆ. ಇಂದು ಅತ್ಯಂತ ಮಂಗಳಕರ ದಿನ. ಇದು ಕಾರ್ತಿಕ ಪೂರ್ಣಿಮೆ, ದೇವ್ ದೀಪಾವಳಿ ಮತ್ತು ಗುರು ನಾನಕ್ ದೇವ್ ಜಿ ಅವರ 555ನೇ ಜನ್ಮದಿನ. ಈ ಹಬ್ಬಗಳಲ್ಲಿ ನಾನು ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ. ಇನ್ನೊಂದು ಕಾರಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇಂದು ಐತಿಹಾಸಿಕ ದಿನವಾಗಿದೆ. ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ರಾಷ್ಟ್ರೀಯ ಜನಜಾತಿಯ ಗೌರವ್ ದಿವಸ್(ರಾಷ್ಟ್ರೀಯ ಬುಡಕಟ್ಟು ಸಮುದಾಯದ ಹೆಮ್ಮೆಯ ದಿನ) ಎಂದು ಆಚರಿಸಲಾಗುತ್ತಿದೆ. ನಾನು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ನನ್ನ ಬುಡಕಟ್ಟು ಸಮುದಾಯದ ಸಹೋದರ ಸಹೋದರಿಯರಿಗೆ, ಜನಜಾತಿಯ ಗೌರವ ದಿವಸದಲ್ಲಿ ಅಭಿನಂದಿಸುತ್ತೇನೆ. ಈ ಹಬ್ಬಗಳಿಗೂ ಮುನ್ನ ಜಮುಯಿಯಲ್ಲಿ ಕಳೆದ 2-3 ದಿನಗಳಿಂದ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಆಡಳಿತವು ಅಭಿಯಾನದ ನೇತೃತ್ವ ವಹಿಸಿತು. ನಮ್ಮ ವಿಜಯ್ ಜಿ ಇಲ್ಲಿ ಕ್ಯಾಂಪ್ ಮಾಡಿದರು. ಬಿಜೆಪಿ ಕಾರ್ಯಕರ್ತರು ಸಹ ಮಹತ್ವದ ಸ್ವಚ್ಛತಾ ಅಭಿಯಾನ ನಡೆಸಿದರು. ನಾಗರಿಕರು, ಯುವಕರು, ತಾಯಂದಿರು ಮತ್ತು ಸಹೋದರಿಯರು ಉತ್ಸಾಹದಿಂದ ಕೊಡುಗೆ ನೀಡಿದರು. ಈ ವಿಶೇಷ ಪ್ರಯತ್ನಕ್ಕಾಗಿ ನಾನು ಜಮುಯಿ ಜನರನ್ನು ಬಹಳವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೆ,

ಕಳೆದ ವರ್ಷ ಇದೇ ದಿನ ನಾನು ಉಲಿಹತುವಿನ ಧರ್ತಿ ಆಬ ಬಿರ್ಸಾ ಮುಂಡಾ ಗ್ರಾಮದಲ್ಲಿದ್ದೆ. ಇಂದು ನಾನು ಹುತಾತ್ಮ ಯೋಧ ತಿಲ್ಕಾ ಮಾಂಝಿ ಅವರ ಶೌರ್ಯದ ಭೂಮಿಯಲ್ಲಿದ್ದೇನೆ. ಈ ವರ್ಷ ಈ ಕಾರ್ಯಕ್ರಮ ಇನ್ನಷ್ಟು ವಿಶೇಷವಾಗಿದೆ. ಇಂದಿನಿಂದ, ದೇಶವು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನ ಆಚರಿಸಲಿದೆ, ಇದು ಒಂದು ವರ್ಷದವರೆಗೆ ಮುಂದುವರಿಯುತ್ತದೆ. ನೂರಾರು ಜಿಲ್ಲೆಗಳಿಂದ ಸುಮಾರು 1 ಕೋಟಿ ಜನರು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ್ದು, ಜಮುಯಿ ಜನತೆಗೆ ಇದು ಹೆಮ್ಮೆಯ ಕ್ಷಣವಾಗಿದೆ ಎಂದು ನನಗೆ ಸಂತೋಷವಾಗಿದೆ. ಅವರೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಹಿಂದೆ ಭಗವಾನ್ ಬಿರ್ಸಾ ಮುಂಡಾ ಅವರ ವಂಶಸ್ಥರಾದ ಬುಧ್ರಾಮ್ ಮುಂಡಾಜಿ ಅವರನ್ನು ಸ್ವಾಗತಿಸುವ ಗೌರವ ನನಗೆ ಸಿಕ್ಕಿತ್ತು. ಕೆಲವು ದಿನಗಳ ಹಿಂದೆ, ಸಿಧು ಕನ್ಹು ಅವರ ವಂಶಸ್ಥರಾದ ಶ್ರೀ ಮಂಡಲ್ ಮುರ್ಮು ಜಿ ಅವರನ್ನು ಗೌರವಿಸುವ ಸೌಭಾಗ್ಯವೂ ನನ್ನದಾಗಿಗಿತ್ತು. ಅವರ ಉಪಸ್ಥಿತಿಯು ಈ ಕಾರ್ಯಕ್ರಮದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ನೇಹಿತರೆ,

ಧರ್ತಿ ಆಬಾ ಬಿರ್ಸಾ ಮುಂಡಾ ಅವರ ಈ ಭವ್ಯ ಸ್ಮರಣೆಯ ನಡುವೆ, 6 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಇಂದು ನೆರವೇರಿದೆ. ಇದರಲ್ಲಿ ನನ್ನ ಬುಡಕಟ್ಟು ಸಮುದಾಯದ ಸಹೋದರ ಸಹೋದರಿಯರಿಗೆ ಸುಮಾರು ಒಂದೂವರೆ ಲಕ್ಷ ಪಕ್ಕಾ ಮನೆಗಳು, ಬುಡಕಟ್ಟು ಮಕ್ಕಳ ಭವಿಷ್ಯಕ್ಕಾಗಿ ಶಾಲೆಗಳು, ಹಾಸ್ಟೆಲ್‌ಗಳು, ಬುಡಕಟ್ಟು ಮಹಿಳೆಯರಿಗೆ ಆರೋಗ್ಯ ಸೌಲಭ್ಯಗಳು, ಬುಡಕಟ್ಟು ಪ್ರದೇಶಗಳನ್ನು ಸಂಪರ್ಕಿಸುವ ನೂರಾರು ಕಿಲೋಮೀಟರ್ ರಸ್ತೆಗಳು, ಬುಡಕಟ್ಟು ಸಂಸ್ಕೃತಿಗೆ ಮೀಸಲಾದ ವಸ್ತುಸಂಗ್ರಹಾಲಯಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ. ಇಂದು ದೇವ್ ದೀಪಾವಳಿಯಂದು 11,000ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ತಮ್ಮ ಹೊಸ ಮನೆಗಳನ್ನು ಪ್ರವೇಶಿಸುತ್ತಿವೆ. ಇದಕ್ಕಾಗಿ ಎಲ್ಲಾ ಬುಡಕಟ್ಟು ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

ನಾವು ಜನಜಾತಿಯ ಗೌರವ ದಿವಸವನ್ನು ಆಚರಿಸುತ್ತೇವೆ, ಜನಜಾತಿಯ ಗೌರವ ವರ್ಷವನ್ನು ಆರಂಭಿಸುತ್ತಿದ್ದೇವೆ, ಈ ಸಂದರ್ಭ ಏಕೆ ಅಗತ್ಯವಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇತಿಹಾಸದಲ್ಲಿ ಆಗಿರುವ ದೊಡ್ಡ ಅನ್ಯಾಯ ಸರಿಪಡಿಸಲು ಇದು ಪ್ರಾಮಾಣಿಕ ಪ್ರಯತ್ನವಾಗಿದೆ. ಸ್ವಾತಂತ್ರ್ಯಾ ನಂತರ ಬುಡಕಟ್ಟು ಸಮುದಾಯದ ಕೊಡುಗೆಗೆ ಇತಿಹಾಸದಲ್ಲಿ ಸಿಗಬೇಕಾದ ಮನ್ನಣೆ ದೊರೆಯಲಿಲ್ಲ. ರಾಜಕುಮಾರ ರಾಮನನ್ನು ಭಗವಾನ್ ಶ್ರೀರಾಮನನ್ನಾಗಿ ಪರಿವರ್ತಿಸಿದವರು ಬುಡಕಟ್ಟು ಸಮುದಾಯದ ಜನರು. ಬುಡಕಟ್ಟು ಸಮುದಾಯವು ಭಾರತದ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ರಕ್ಷಿಸಲು ಶತಮಾನಗಳ ಹೋರಾಟ ಮುನ್ನಡೆಸಿದೆ. ಆದಾಗ್ಯೂ, ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ, ಈ ಅಮೂಲ್ಯ ಕೊಡುಗೆಯನ್ನು ಬುಡಕಟ್ಟು ಇತಿಹಾಸದಿಂದ ಅಳಿಸಿಹಾಕಲು ಪ್ರಯತ್ನಿಸಲಾಯಿತು, ಸ್ವಾರ್ಥ ರಾಜಕಾರಣದಿಂದ ಕೇವಲ ಒಂದು ಪಕ್ಷಕ್ಕೆ ಭಾರತ ಸ್ವಾತಂತ್ರ್ಯದ ಮನ್ನಣೆ ನೀಡಲಾಯಿತು. ಆದರೆ ಒಂದು ಪಕ್ಷ ಅಥವಾ ಕುಟುಂಬವು ಸ್ವಾತಂತ್ರ್ಯ ಪಡೆದುಕೊಂಡಿದ್ದರೆ, ಬಿರ್ಸಾ ಮುಂಡಾ ನೇತೃತ್ವದ ಉಲ್ಗುಲಾನ್ ಚಳುವಳಿ ಏಕೆ ಸಂಭವಿಸಿತು? ಏನಿದು ಸಂತಾಲ್ ದಂಗೆ? ಏನಿದು ಕೋಲ್ ಬಂಡಾಯ? ಮಹಾರಾಣಾ ಪ್ರತಾಪನೊಂದಿಗೆ ಹೋರಾಡಿದ ವೀರ ಭಿಲ್ಲರನ್ನು ನಾವು ಮರೆಯಬಹುದೇ? ಸಹ್ಯಾದ್ರಿಯ ದಟ್ಟ ಅರಣ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಧಿಕಾರ ನೀಡಿದ ಆದಿವಾಸಿ ಸಹೋದರ ಸಹೋದರಿಯರನ್ನು ಯಾರು ಮರೆಯಲು ಸಾಧ್ಯ? ಅಲ್ಲೂರಿ ಸೀತಾರಾಮ ರಾಜು ನೇತೃತ್ವದ ಬುಡಕಟ್ಟು ಜನಾಂಗದವರು ಭಾರತ ಮಾತೆಯ ಸೇವೆಯನ್ನು ಅಥವಾ ತಿಲ್ಕಾ ಮಾಂಝಿ, ಸಿಧು ಕನ್ಹು, ಬುಧು ಭಗತ್, ಧೀರಜ್ ಸಿಂಗ್, ತೆಲಂಗಾ ಖರಿಯಾ, ಗೋವಿಂದ ಗುರು, ತೆಲಂಗಾಣದ ರಾಮಜಿ ಗೊಂಡ್, ಬಾದಲ್ ಭೋಯ್, ರಾಜಾ ಶಂಕರ್ ಶಾ ಅವರ ಶೌರ್ಯವನ್ನು ಯಾರಾದರೂ ಕಡೆಗಣಿಸಬಹುದೇ? ಮಧ್ಯಪ್ರದೇಶದಿಂದ ಕುಮಾರ್ ರಘುನಾಥ್ ಷಾ, ತಾಂತ್ಯ ಭಿಲ್, ನಿಲಾಂಬರ್-ಪಿತಾಂಬರ್, ವೀರ್ ನಾರಾಯಣ್ ಸಿಂಗ್, ದಿವಾ ಕಿಶುನ್ ಸೊರೆನ್, ಜಾತ್ರಾ ಭಗತ್, ಲಕ್ಷ್ಮಣ್ ನಾಯಕ್, ಮತ್ತು ಮಿಜೋರಾಂನ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ರೋಪುಲಿಯಾನಿ ಜಿ, ರಾಜಮೋಹಿನಿ ದೇವಿ, ರಾಣಿ ಗೈಡಿನ್ಲಿಯು, ವೀರ್ ಬಾಲಿಕಾ ಕಾಲಿಬಾಯಿ ಮತ್ತು ಗೊಂಡ್ವಾನಾದ ರಾಣಿ ದುರ್ಗಾವತಿ... ಈ ಅಸಂಖ್ಯಾತ ಬುಡಕಟ್ಟು ವೀರರನ್ನು ಯಾರಾದರೂ ಹೇಗೆ ಮರೆಯಲು ಸಾಧ್ಯ? ನನ್ನ ಸಾವಿರಾರು ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಬ್ರಿಟಿಷರಿಂದ ಹುತಾತ್ಮರಾದ ಮಂಗರ್‌ನಲ್ಲಿ ನಡೆದ ಹತ್ಯಾಕಾಂಡವನ್ನು ನಾವು ಮರೆಯಬಹುದೇ?

ಸ್ನೇಹಿತರೆ,

ಅದು ಸಂಸ್ಕೃತಿಯಾಗಿರಲಿ ಅಥವಾ ಸಾಮಾಜಿಕ ನ್ಯಾಯವೇ ಆಗಿರಲಿ, ಇಂದಿನ ಎನ್‌ಡಿಎ ಸರ್ಕಾರದ ಮನಸ್ಥಿತಿ ಅನನ್ಯವಾಗಿದೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಅವಕಾಶ ನಮಗೆ ಸಿಕ್ಕಿದ್ದು ಕೇವಲ ಬಿಜೆಪಿಯ ಅದೃಷ್ಟವಲ್ಲ, ಇಡೀ ಎನ್‌ಡಿಎಯ ಅದೃಷ್ಟ ಎಂದು ನಾನು ಪರಿಗಣಿಸುತ್ತೇನೆ. ಅವರು ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿಯಾಗಿದ್ದಾರೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಲು ಎನ್‌ಡಿಎ ನಿರ್ಧರಿಸಿದಾಗ, ನಮ್ಮ ನಿತೀಶ್ ಬಾಬು ಅವರು ದೇಶಾದ್ಯಂತ ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಪ್ರಧಾನಮಂತ್ರಿ ಜನ್ಮನ್ ಯೋಜನೆ, ಇದರ ಅಡಿ ಅನೇಕ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ, ಇದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲುತ್ತದೆ. ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿದ್ದಾಗ ಮತ್ತು ನಂತರ ರಾಷ್ಟ್ರಪತಿಯಾದಾಗ, ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ಬಗ್ಗೆ ಆಗಾಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು. ಹಿಂದಿನ ಸರ್ಕಾರಗಳು ಈ ಹಿಂದುಳಿದ ಬುಡಕಟ್ಟು ಸಮುದಾಯಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಅವರ ಜೀವನದ ಕಷ್ಟಗಳನ್ನು ನಿವಾರಿಸಲು 24,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಪ್ರಧಾನಮಂತ್ರಿ ಜನ್ಮನ್ ಯೋಜನೆ ಪ್ರಾರಂಭಿಸಲಾಯಿತು. ಪ್ರಧಾನಮಂತ್ರಿ ಜನ್ಮನ್ ಯೋಜನೆಯು ದೇಶದ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳ ವಾಸಸ್ಥಳಗಳ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಈ ಯೋಜನೆಗೆ ಇಂದಿಗೆ ಒಂದು ವರ್ಷ ತುಂಬಿದೆ. ಈ ಸಮಯದಲ್ಲಿ, ನಾವು ಈ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳಿಗೆ ಸಾವಿರಾರು ಪಕ್ಕಾ ಮನೆಗಳನ್ನು ಒದಗಿಸಿದ್ದೇವೆ. ಈ ಸಮುದಾಯಗಳ ವಾಸ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ನೂರಾರು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ, ಹಿಂದುಳಿದ ಬುಡಕಟ್ಟು ಪ್ರದೇಶದ ನೂರಾರು ಹಳ್ಳಿಗಳಲ್ಲಿ ಪ್ರತಿ ಮನೆಗೆ ನೀರು ಸರಬರಾಜು ಮಾಡಲಾಗಿದೆ.

ಸ್ನೇಹಿತರೆ,

ಹಿಂದೆ ಯಾರಿಗೆ ಯಾರೂ ಗಮನ ಕೊಡಲಿಲ್ಲ, ಆದರೆ ಮೋದಿ ಸೇವೆ ಮಾಡುತ್ತಾರೆ. ಹಿಂದಿನ ಸರಕಾರಗಳ ಧೋರಣೆಯಿಂದಾಗಿ ಬುಡಕಟ್ಟು ಸಮುದಾಯ ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಅನೇಕ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಒಬ್ಬ ಅಧಿಕಾರಿಯನ್ನು ಶಿಕ್ಷಿಸಬೇಕಾದರೆ ಅಥವಾ ಶಿಕ್ಷೆಯ ರೂಪದಲ್ಲಿ ನಿಯೋಜಿಸಬೇಕಾದರೆ, ಅಂತಹ ಜಿಲ್ಲೆಗಳನ್ನು ಅವರ ಪೋಸ್ಟಿಂಗ್‌ಗಾಗಿ ಆಯ್ಕೆ ಮಾಡಲಾಗುತ್ತಿತ್ತು. ಹಳೆಯ ಸರ್ಕಾರಗಳ ಈ ಮನಸ್ಥಿತಿಯನ್ನು ಎನ್‌ಡಿಎ ಸರ್ಕಾರ ಬದಲಾಯಿಸಿತು. ನಾವು ಈ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಘೋಷಿಸಿದ್ದೇವೆ, ಅಲ್ಲಿಗೆ ಹೊಸ ಮತ್ತು ಶಕ್ತಿಯುತ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಇಂದು ಅನೇಕ ಮಹತ್ವಾಕಾಂಕ್ಷೆಯ ಜಿಲ್ಲೆಗಳು ವಿವಿಧ ಅಭಿವೃದ್ಧಿ ಮಾನದಂಡಗಳಲ್ಲಿ ಇತರ ಜಿಲ್ಲೆಗಳನ್ನು ಮೀರಿಸಿರುವುದು ನನಗೆ ತೃಪ್ತಿ ತಂದಿದೆ. ಇದರಿಂದ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಹೆಚ್ಚಿನ ಅನುಕೂಲವಾಗಿದೆ.

 

ಸ್ನೇಹಿತರೆ,

ಎನ್‌ಡಿಎ ಸರ್ಕಾರಕ್ಕೆ ಬುಡಕಟ್ಟು ಸಮುದಾಯದ ಕಲ್ಯಾಣ ಯಾವಾಗಲೂ ಆದ್ಯತೆಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿತು. 10 ವರ್ಷಗಳ ಹಿಂದೆ ಬುಡಕಟ್ಟು ಪ್ರದೇಶಗಳು ಮತ್ತು ಕುಟುಂಬಗಳ ಅಭಿವೃದ್ಧಿಗೆ 25,000 ಕೋಟಿ ರೂಪಾಯಿಗಿಂತ ಕಡಿಮೆ ಬಜೆಟ್ ಇತ್ತು. ಒಂದು ದಶಕದ ಹಿಂದಿನ ಪರಿಸ್ಥಿತಿಯನ್ನು ನೋಡಿ – ಅದು 25,000 ಕೋಟಿ ರೂಪಾಯಿಗಳಿಗಿಂತ ಕಡಿಮೆ. ನಮ್ಮ ಸರ್ಕಾರ ಇದನ್ನು 5 ಪಟ್ಟು ಹೆಚ್ಚಿಸಿ 1.25 ಲಕ್ಷ ಕೋಟಿ ರೂ. ಒದಗಿಸಿದೆ. ಕೆಲವೇ ದಿನಗಳ ಹಿಂದೆ, ನಾವು ದೇಶದ 60 ಸಾವಿರಕ್ಕೂ ಹೆಚ್ಚು ಬುಡಕಟ್ಟು ಹಳ್ಳಿಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಪ್ರಾರಂಭಿಸಿದ್ದೇವೆ. ಧರ್ತಿ ಆಬ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ, ಸುಮಾರು 80,000 ಕೋಟಿ ರೂಪಾಯಿಗಳನ್ನು ಬುಡಕಟ್ಟು ಹಳ್ಳಿಗಳಲ್ಲಿ ಹೂಡಿಕೆ ಮಾಡಲಾಗುವುದು. ಬುಡಕಟ್ಟು ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ, ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶ ಸೃಷ್ಟಿಸುವುದು ಇದರ ಗುರಿಯಾಗಿದೆ. ಈ ಅಭಿಯಾನವು ವಿವಿಧ ಸ್ಥಳಗಳಲ್ಲಿ ಬುಡಕಟ್ಟು ಮಾರುಕಟ್ಟೆ ಕೇಂದ್ರಗಳನ್ನು ಸ್ಥಾಪಿಸುತ್ತದೆ, ಹೋಂಸ್ಟೇಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ತರಬೇತಿಯನ್ನೂ ನೀಡುತ್ತದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸುತ್ತದೆ. ಅರಣ್ಯಗಳಲ್ಲಿರುವ ಬುಡಕಟ್ಟು ಕುಟುಂಬಗಳಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸುತ್ತದೆ, ಇದರಿಂದಾಗಿ ವಲಸೆ ನಿಲ್ಲಿಸುತ್ತದೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಉತ್ತೇಜಿಸುತ್ತದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬುಡಕಟ್ಟು ಜನಾಂಗದ ಕಲೆ ಮತ್ತು ಸಂಸ್ಕೃತಿಗೆ ಮೀಸಲಾದ ಅನೇಕ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ನಾವು ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ಭವ್ಯವಾದ ವಸ್ತುಸಂಗ್ರಹಾಲಯ ಪ್ರಾರಂಭಿಸಿದ್ದೇವೆ. ಭಗವಾನ್ ಬಿರ್ಸಾ ಮುಂಡಾ ಅವರಿಗೆ ಮೀಸಲಾಗಿರುವ ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಅಧ್ಯಯನ ಮಾಡುವಂತೆ ನಾನು ಎಲ್ಲಾ ಶಾಲಾ ವಿದ್ಯಾರ್ಥಿಗಳನ್ನು ಕೋರುತ್ತೇನೆ. ಇಂದು ಮಧ್ಯಪ್ರದೇಶದ ಚಿಂದ್ವಾರದಲ್ಲಿ ಬಾದಲ್ ಭೋಯ್ ಮ್ಯೂಸಿಯಂ ಮತ್ತು ಮಧ್ಯಪ್ರದೇಶದ ಜಬಲ್ಪುರದಲ್ಲಿ ರಾಜಾ ಶಂಕರ್ ಶಾ ಮತ್ತು ಕುನ್ವರ್ ರಘುನಾಥ್ ಶಾ ಮ್ಯೂಸಿಯಂ ಉದ್ಘಾಟನೆಗೊಂಡಿರುವುದು ನನಗೆ ಸಂತಸ ತಂದಿದೆ. ಇಂದು ಶ್ರೀನಗರ ಮತ್ತು ಸಿಕ್ಕಿಂನಲ್ಲಿ 2 ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ಸಹ ಉದ್ಘಾಟಿಸಲಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಯತ್ನಗಳು ಬುಡಕಟ್ಟು ಸಮುದಾಯದ ಶೌರ್ಯ ಮತ್ತು ಹೆಮ್ಮೆಯನ್ನು ದೇಶಕ್ಕೆ ನೆನಪಿಸುತ್ತಲೇ ಇರುತ್ತವೆ.

ಸ್ನೇಹಿತರೆ,

ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಗಳಿಗೆ ಬುಡಕಟ್ಟು ಸಮುದಾಯವು ಮಹತ್ವದ ಕೊಡುಗೆ ನೀಡಿದೆ. ಈ ಪರಂಪರೆಯನ್ನು ಸಂರಕ್ಷಿಸಲಾಗುತ್ತಿದೆ, ಮುಂದಿನ ಪೀಳಿಗೆಗೆ ಹೊಸ ಆಯಾಮಗಳನ್ನು ಸೇರಿಸಲಾಗುತ್ತಿದೆ. ಎನ್‌ಡಿಎ ಸರ್ಕಾರವು ಲೇಹ್‌ನಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋವಾ ರಿಗ್ಪಾ ಸ್ಥಾಪಿಸಿದೆ. ಅರುಣಾಚಲ ಪ್ರದೇಶದ ಈಶಾನ್ಯ ಆಯುರ್ವೇದ ಮತ್ತು ಜಾನಪದ ಔಷಧ ಸಂಶೋಧನೆಯನ್ನು ಮೇಲ್ದರ್ಜೆಗೇರಿಸಿದೆ. ವಿಶ್ವ ಆರೋಗ್ಯ ಸಂಘಟನೆಯ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ. ಇದು ಭಾರತದ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ವಿಶ್ವಾದ್ಯಂತ ಹರಡಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಬುಡಕಟ್ಟು ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ವೈದ್ಯರು, ಎಂಜಿನಿಯರ್‌ಗಳು, ಸೈನಿಕರು ಅಥವಾ ವಿಮಾನ ಪೈಲಟ್‌ಗಳಾಗಲಿ, ಬುಡಕಟ್ಟು ಜನಾಂಗದ ಪುತ್ರರು ಮತ್ತು ಪುತ್ರಿಯರು ಪ್ರತಿಯೊಂದು ವೃತ್ತಿಯಲ್ಲೂ ಮಿಂಚುತ್ತಿದ್ದಾರೆ. ಕಳೆದ 1 ದಶಕದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳಿಂದ ಉನ್ನತ ಶಿಕ್ಷಣದವರೆಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸಿರುವುದರಿಂದ ಇದು ಸಾಧ್ಯವಾಗಿದೆ. ಸ್ವಾತಂತ್ರ್ಯ ಬಂದು ಆರೇಳು ದಶಕ ಕಳೆದರೂ ದೇಶದಲ್ಲಿ ಒಂದೇ ಒಂದು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವಿತ್ತು. ಕಳೆದ 10 ವರ್ಷಗಳಲ್ಲಿ, ಎನ್‌ಡಿಎ ಸರ್ಕಾರವು ದೇಶಕ್ಕೆ 2 ಹೊಸ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯಗಳನ್ನು ನೀಡಿದೆ. ಗಮನಾರ್ಹವಾಗಿ ಬುಡಕಟ್ಟು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಅನೇಕ ಪದವಿ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಐಟಿಐಗಳನ್ನು ಸ್ಥಾಪಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, ಬುಡಕಟ್ಟು ಜಿಲ್ಲೆಗಳಲ್ಲಿ 30 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಇನ್ನೂ ಹಲವಾರು ಕೆಲಸಗಳು ನಡೆಯುತ್ತಿವೆ. ಜಮುಯಿಯಲ್ಲೂ ಹೊಸ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ. ನಾವು ದೇಶಾದ್ಯಂತ 700ಕ್ಕೂ ಹೆಚ್ಚು ಏಕಲವ್ಯ ಶಾಲೆಗಳ ದೃಢವಾದ ಜಾಲವನ್ನು ನಿರ್ಮಿಸುತ್ತಿದ್ದೇವೆ.

 

ಸ್ನೇಹಿತರೆ,

ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಬುಡಕಟ್ಟು ಸಮುದಾಯಕ್ಕೆ ಭಾಷೆಯು ಗಮನಾರ್ಹ ತಡೆಗೋಡೆಯಾಗಿದೆ. ನಮ್ಮ ಸರ್ಕಾರವು ಮಾತೃಭಾಷೆಯಲ್ಲಿ ಪರೀಕ್ಷೆಯ ಆಯ್ಕೆ ಒದಗಿಸಿದೆ. ಈ ನಿರ್ಧಾರಗಳು ಬುಡಕಟ್ಟು ಸಮುದಾಯದ ಮಕ್ಕಳಿಗೆ ಹೊಸ ಆತ್ಮವಿಶ್ವಾಸ ತುಂಬಿದ್ದು, ಅವರ ಕನಸುಗಳನ್ನು ಗಗನಕ್ಕೆ ಏರಿಸಿದೆ.

ಸ್ನೇಹಿತರೆ,

ಕಳೆದ ದಶಕದಲ್ಲಿ ಬುಡಕಟ್ಟು ಯುವಕರು ಕ್ರೀಡೆಯಲ್ಲೂ ಮಿಂಚಿದ್ದಾರೆ. ಬುಡಕಟ್ಟು ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಪದಕಗಳನ್ನು ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಪ್ರತಿಭೆಗಳನ್ನು ಗುರುತಿಸಿ ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಖೇಲೋ ಇಂಡಿಯಾ ಅಭಿಯಾನದ ಅಡಿ, ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಆಧುನಿಕ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಭಾರತದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಸ್ವಾತಂತ್ರ್ಯಾ ನಂತರ 70 ವರ್ಷಗಳ ಕಾಲ, ಬಿದಿರಿಗೆ ಸಂಬಂಧಿಸಿದ ಬಿಗಿ ಕಾನೂನುಗಳು ಬುಡಕಟ್ಟು ಸಮುದಾಯದ ಮೇಲೆ ಹೆಚ್ಚು ಪರಿಣಾಮ ಬೀರಿತು. ಬಿದಿರು ಕಡಿಯುವುದಕ್ಕೆ ಸಂಬಂಧಿಸಿದ ಕಾನೂನನ್ನು ನಮ್ಮ ಸರ್ಕಾರ ಸರಳಗೊಳಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 8-10 ಅರಣ್ಯ ಉತ್ಪನ್ನಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ವ್ಯಾಪ್ತಿಗೆ ತರಲಾಗಿತ್ತು. ಎನ್‌ಡಿಎ ಸರ್ಕಾರವೇ ಸುಮಾರು 90 ಅರಣ್ಯ ಉತ್ಪನ್ನಗಳನ್ನು ಎಂಎಸ್‌ಪಿ ವ್ಯಾಪ್ತಿಯಡಿ ತಂದಿದೆ. ಇಂದು 12 ಲಕ್ಷ ಬುಡಕಟ್ಟು ಸಹೋದರರು ಮತ್ತು ಸಹೋದರಿಯರನ್ನು ಒಳಗೊಂಡಿರುವ 4,000ಕ್ಕೂ ಹೆಚ್ಚು ವನ್ ಧನ್ ಕೇಂದ್ರಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಅವರು ಉತ್ತಮ ಜೀವನೋಪಾಯ ಕಂಡುಕೊಂಡಿದ್ದಾರೆ.

 

ಸ್ನೇಹಿತರೆ,

ಲಖ್ಪತಿ ದೀದಿ ಅಭಿಯಾನ ಪ್ರಾರಂಭಿಸಿದ ನಂತರ, ಸುಮಾರು 20 ಲಕ್ಷ ಬುಡಕಟ್ಟು ಸಹೋದರಿಯರು ಲಖ್ಪತಿ ದೀದಿಗಳಾಗಿದ್ದಾರೆ. ಇದರರ್ಥ ಅವರು ಒಮ್ಮೆ ಕೇವಲ ಒಂದು ಲಕ್ಷ ರೂಪಾಯಿ ಗಳಿಸಿದ್ದಾರೆ ಎಂದಲ್ಲ, ಬದಲಿಗೆ, ಅವರು ಪ್ರತಿ ವರ್ಷ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಾರೆ. ಅನೇಕ ಬುಡಕಟ್ಟು ಕುಟುಂಬಗಳು ಬಟ್ಟೆ, ಆಟಿಕೆಗಳು ಮತ್ತು ಅಲಂಕಾರಿಕ ವಸ್ತುಗಳಂತಹ ಸುಂದರವಾದ ವಸ್ತುಗಳನ್ನು ತಯಾರಿಸುವಲ್ಲಿ ತೊಡಗಿವೆ. ಅವರನ್ನು ಬೆಂಬಲಿಸಲು ನಾವು ಅಂತಹ ಉತ್ಪನ್ನಗಳಿಗಾಗಿ ಪ್ರಮುಖ ನಗರಗಳಲ್ಲಿ ಹಾತ್ ಬಜಾರ್‌ಗಳನ್ನು ಆಯೋಜಿಸುತ್ತಿದ್ದೇವೆ. ನಾನು ಅರ್ಧ ಗಂಟೆ ಅಲ್ಲಿ ಕಳೆದಿದ್ದೇನೆ, ಭಾರತದ ವಿವಿಧ ಜಿಲ್ಲೆಗಳ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಯಾರಿಸಿದ ಅಪರೂಪದ ಉತ್ಪನ್ನಗಳನ್ನು ನೋಡಿ ಆಶ್ಚರ್ಯಚಕಿತನಾಗಿದ್ದೇನೆ. ನೀವೆಲ್ಲರೂ ಭೇಟಿ ಮಾಡಿ, ಸ್ಫೂರ್ತಿಯಿಂದ ಖರೀದಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾವು ಈ ಉತ್ಪನ್ನಗಳಿಗೆ ಜಾಗತಿಕ ಆನ್‌ಲೈನ್ ಮಾರುಕಟ್ಟೆ ರೂಪಿಸುತ್ತಿದ್ದೇವೆ. ನಾನು ವಿದೇಶಿ ನಾಯಕರಿಗೆ ಉಡುಗೊರೆಗಳನ್ನು ನೀಡುವಾಗ, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿಂದ ತಯಾರಾದ ಉತ್ಪನ್ನಗಳನ್ನು ಆಯ್ಕೆ ಮಾಡುತ್ತೇನೆ. ಇತ್ತೀಚೆಗೆ, ನಾನು ಜಾರ್ಖಂಡ್‌ನ ಸೊಹ್ರಾಯ್ ಪೇಂಟಿಂಗ್‌ಗಳು, ಮಧ್ಯಪ್ರದೇಶದ ಗೊಂಡ್ ಪೇಂಟಿಂಗ್‌ಗಳು ಮತ್ತು ಮಹಾರಾಷ್ಟ್ರದ ವಾರ್ಲಿ ಪೇಂಟಿಂಗ್‌ಗಳನ್ನು ಪ್ರಮುಖ ವಿದೇಶಿ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಈಗ, ಈ ಕಲಾಕೃತಿಗಳು ಆಡಳಿತ ಕಚೇರಿಗಳ ಗೋಡೆಗಳನ್ನು ಅಲಂಕರಿಸಿವೆ. ನಿಮ್ಮ ಪ್ರತಿಭೆ ಮತ್ತು ಕಲೆಯ ಖ್ಯಾತಿಯನ್ನು ವಿಶ್ವಾದ್ಯಂತ ಹರಡುತ್ತದೆ.

ಸ್ನೇಹಿತರೆ,

ಕುಟುಂಬಗಳು ಆರೋಗ್ಯವಾಗಿದ್ದಾಗ ಮಾತ್ರ ಶಿಕ್ಷಣ ಮತ್ತು ಸಂಪಾದನೆಯ ಪ್ರಯೋಜನಗಳನ್ನು ಅರಿತುಕೊಳ್ಳಲು ಸಾಧ್ಯ. ಕುಡಗೋಲು ಕಣ ರಕ್ತಹೀನತೆಯು ಬುಡಕಟ್ಟು ಸಮುದಾಯಕ್ಕೆ ಗಮನಾರ್ಹ ಸವಾಲಾಗಿದೆ. ಇದನ್ನು ಎದುರಿಸಲು ನಮ್ಮ ಸರ್ಕಾರವು ರಾಷ್ಟ್ರೀಯ ಅಭಿಯಾನ ಪ್ರಾರಂಭಿಸಿದೆ, ಇದು ಈಗ ಒಂದು ವರ್ಷದಿಂದ ಚಾಲನೆಯಲ್ಲಿದೆ. ಈ ಅವಧಿಯಲ್ಲಿ ಸರಿಸುಮಾರು 4.5 ಕೋಟಿ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬುಡಕಟ್ಟು ಕುಟುಂಬಗಳು ಇತರ ವೈದ್ಯಕೀಯ ತಪಾಸಣೆಗಾಗಿ ದೂರ ಪ್ರಯಾಣಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಹಲವಾರು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗುತ್ತಿದೆ. ಅತ್ಯಂತ ದೂರದ ಪ್ರದೇಶಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳನ್ನು ಸಹ ನಿಯೋಜಿಸಲಾಗುತ್ತಿದೆ.

 

ಸ್ನೇಹಿತರೆ,

ಇಂದು, ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಹೆಸರಾಗಿದೆ. ಏಕೆಂದರೆ ಬುಡಕಟ್ಟು ಸಮುದಾಯದ ಮೂಲ ಮೌಲ್ಯಗಳು ನಮಗೆ ಯಾವಾಗಲೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಕಲಿಸಿವೆ. ನಮ್ಮ ಪ್ರಕೃತಿ-ಪ್ರೀತಿಯ ಬುಡಕಟ್ಟು ಸಮಾಜದ ಬೋಧನೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಬುಡಕಟ್ಟು ಸಮುದಾಯವು ಸೂರ್ಯ, ಗಾಳಿ ಮತ್ತು ಮರಗಳನ್ನು ಪೂಜಿಸುತ್ತದೆ. ಈ ಮಂಗಳಕರ ದಿನದಂದು, ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಆಚರಣೆಯಲ್ಲಿ ದೇಶದ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಿರ್ಸಾ ಮುಂಡಾ ಜನಜಾತಿಯ ಗೌರವ ಉಪವನಗಳನ್ನು(ಬುಡಕಟ್ಟು ಹೆಮ್ಮೆಯ ಉದ್ಯಾನಗಳು) ಸ್ಥಾಪಿಸಲಾಗುವುದು ಎಂದು ನಾನು ಹೇಳಲು ಬಯಸುತ್ತೇನೆ. ಈ ಪ್ರತಿಯೊಂದು ಬಿರ್ಸಾ ಮುಂಡಾ ಜನಜಾತಿಯ ಗೌರವ್ ಉಪವನಗಳಲ್ಲಿ 500-1,000 ಮರಗಳನ್ನು ನೆಡಲಾಗುತ್ತದೆ. ಈ ಉಪಕ್ರಮಕ್ಕೆ ಎಲ್ಲರೂ ಬೆಂಬಲ ಮತ್ತು ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ ಆಚರಣೆಯು ಗಮನಾರ್ಹ ಗುರಿಗಳನ್ನು ಹೊಂದಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಒಟ್ಟಾಗಿ, ನಾವು ಬುಡಕಟ್ಟು ನೀತಿಗಳನ್ನು ಹೊಸ ಭಾರತ ಕಟ್ಟಲು ಭದ್ರ ಬುನಾದಿ ಹಾಕುತ್ತೇವೆ. ನಾವು ಬುಡಕಟ್ಟು ಸಮುದಾಯದ ಪರಂಪರೆಯನ್ನು ಉಳಿಸುತ್ತೇವೆ ಮತ್ತು ಅವರು ಶತಮಾನಗಳಿಂದ ಕಾಪಾಡಿಕೊಂಡು ಬಂದ ಸಂಪ್ರದಾಯಗಳಿಂದ ಕಲಿಯುತ್ತೇವೆ. ಇದನ್ನು ಮಾಡುವುದರಿಂದ, ನಾವು ನಿಜವಾದ ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತವನ್ನು ನಿರ್ಮಿಸಲು ಸಾಧ್ಯ. ಮತ್ತೊಮ್ಮೆ, ಜನಜಾತಿಯ ಗೌರವ್ ದಿವಸ್‌ನಲ್ಲಿ ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಮತ್ತೊಮ್ಮೆ, ನೀವು ನನ್ನ ಮಾತುಗಳನ್ನು ಮತ್ತೆ ಹೇಳಿ --

ನಾನು ಭಗವಾನ್ ಬಿರ್ಸಾ ಮುಂಡಾ ಎಂದು ಹೇಳುತ್ತೇನೆ - ನೀವು ಅಮರ್ ರಹೇ, ಅಮರ್ ರಹೇ ಎಂದು ಹೇಳಿ!

ಭಗವಾನ್ ಬಿರ್ಸಾ ಮುಂಡಾ -ಅಮರ್ ರಹೇ, ಅಮರ್ ರಹೇ!

ಭಗವಾನ್ ಬಿರ್ಸಾ ಮುಂಡಾ -ಅಮರ್ ರಹೇ, ಅಮರ್ ರಹೇ!

ಭಗವಾನ್ ಬಿರ್ಸಾ ಮುಂಡಾ -ಅಮರ್ ರಹೇ, ಅಮರ್ ರಹೇ!

ತುಂಬು ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
JD Vance meets Modi in Delhi: Hails PM as ‘great leader’, commits to ‘relationship with India’

Media Coverage

JD Vance meets Modi in Delhi: Hails PM as ‘great leader’, commits to ‘relationship with India’
NM on the go

Nm on the go

Always be the first to hear from the PM. Get the App Now!
...
The World This Week on India
April 22, 2025

From diplomatic phone calls to groundbreaking scientific discoveries, India’s presence on the global stage this week was marked by collaboration, innovation, and cultural pride.

Modi and Musk Chart a Tech-Driven Future

Prime Minister Narendra Modi’s conversation with Elon Musk underscored India’s growing stature in technology and innovation. Modi reaffirmed his commitment to advancing partnerships with Musk’s companies, Tesla and Starlink, while Musk expressed enthusiasm for deeper collaboration. With a planned visit to India later this year, Musk’s engagement signals a new chapter in India’s tech ambitions, blending global expertise with local vision.

Indian origin Scientist Finds Clues to Extraterrestrial Life

Dr. Nikku Madhusudhan, an IIT BHU alumnus, made waves in the scientific community by uncovering chemical compounds—known to be produced only by life—on a planet 124 light years away. His discovery is being hailed as the strongest evidence yet of life beyond our solar system, putting India at the forefront of cosmic exploration.

Ambedkar’s Legacy Honoured in New York

In a nod to India’s social reform icon, New York City declared April 14, 2025, as Dr. Bhimrao Ramji Ambedkar Day. Announced by Mayor Eric Adams on Ambedkar’s 134th birth anniversary, the recognition reflects the global resonance of his fight for equality and justice.

Tourism as a Transformative Force

India’s travel and tourism sector, contributing 7% to the economy, is poised for 7% annual growth over the next decade, according to the World Travel & Tourism Council. WTTC CEO Simpson lauded PM Modi’s investments in the sector, noting its potential to transform communities and uplift lives across the country.

Pharma Giants Eye US Oncology Market

Indian pharmaceutical companies are setting their sights on the $145 billion US oncology market, which is growing at 11% annually. With recent FDA approvals for complex generics and biosimilars, Indian firms are poised to capture a larger share, strengthening their global footprint in healthcare.

US-India Ties Set to Soar

US President Donald Trump called PM Modi a friend, while State Department spokesperson MacLeod predicted a “bright future” for US-India relations. From counter-terrorism to advanced technology and business, the two nations are deepening ties, with India’s strategic importance in sharp focus.

India’s Cultural Treasures Go Global

The Bhagavad Gita and Bharata’s Natyashastra were added to UNESCO’s Memory of the World Register, joining 74 new entries this year. The inclusion celebrates India’s rich philosophical and artistic heritage, cementing its cultural influence worldwide.

Russia Lauds India’s Space Prowess

Russian Ambassador Denis Alipov praised India as a leader in space exploration, noting that Russia is learning from its advancements. He highlighted Russia’s pride in contributing to India’s upcoming manned mission, a testament to the deepening space collaboration between the two nations.

From forging tech partnerships to leaving an indelible mark on science, culture, and diplomacy, India this week showcased its ability to lead, inspire, and connect on a global scale.