ನಮ್ಮ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸಲು ಇದೊಂದು ಐತಿಹಾಸಿಕ ಅವಕಾಶ: ಪ್ರಧಾನಮಂತ್ರಿ
ವಿಕಸಿತ ಭಾರತದ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ನಾರಿ ಶಕ್ತಿಯನ್ನು ಒಳಗೊಳ್ಳುವುದು ಪ್ರಮುಖವಾಗಿದೆ: ಪ್ರಧಾನಮಂತ್ರಿ
ಹೆಚ್ಚು ಹೆಚ್ಚು ಮಹಿಳೆಯರು ತಳಮಟ್ಟದಲ್ಲಿ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ: ಪ್ರಧಾನಮಂತ್ರಿ
ನಾವು ನಾರಿ ಶಕ್ತಿಗೆ ಏನನ್ನೋ ನೀಡುತ್ತಿದ್ದೇವೆ ಎಂದು ಭಾವಿಸಬಾರದು; ಇದು ಅವರ ಹಕ್ಕು: ಪ್ರಧಾನಮಂತ್ರಿ
ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕೇವಲ ಸಂಖ್ಯೆಗಳಿಗೆ ಸಂಬಂಧಿಸಿದ್ದಲ್ಲ, ಬದಲಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಬದ್ಧತೆಯಾಗಿದೆ: ಪ್ರಧಾನಮಂತ್ರಿ

ಸನ್ಮಾನ್ಯ ಸಭಾಧ್ಯಕ್ಷರೇ,

ಈ ಮಹತ್ವದ ಮಸೂದೆ(ವಿಧೇಯಕ) ಕುರಿತು ಚರ್ಚೆ ಇಂದು ಬೆಳಗ್ಗೆ ಆರಂಭವಾಯಿತು. ಇಲ್ಲಿರುವ ಅನೇಕ ಸಹೋದ್ಯೋಗಿಗಳು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ, ಅವರು ಖಂಡಿತವಾಗಿಯೂ ಸದನಕ್ಕೆ ವಾಸ್ತವ ಮತ್ತು ವಾದಗಳನ್ನು ಒದಗಿಸುತ್ತಾರೆ. ಆದ್ದರಿಂದ, ನಾನು ಆ ವಿಷಯಗಳ ಚರ್ಚೆಗೆ ಹೋಗಲು ಬಯಸುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಒಂದು ರಾಷ್ಟ್ರದ ಜೀವನದಲ್ಲಿ ಕೆಲವು ಪ್ರಮುಖ ಕ್ಷಣಗಳಿವೆ, ಸಮಾಜದ ಮನಸ್ಥಿತಿ ಮತ್ತು ಆ ಸಮಯದಲ್ಲಿ ನಾಯಕತ್ವ ಸಾಮರ್ಥ್ಯವು ಆ ಕ್ಷಣಗಳನ್ನು ಸೆರೆಹಿಡಿದು ರಾಷ್ಟ್ರೀಯ ಪರಂಪರೆಯಾಗಿ ಪರಿವರ್ತಿಸುತ್ತದೆ, ಬಲವಾದ ಪರಂಪರೆಯನ್ನೇ ಸೃಷ್ಟಿಸುತ್ತದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಅಂತಹ ಒಂದು ಅದ್ಭುತ ಕ್ಷಣ ಎಂದು ನಾನು ನಂಬುತ್ತೇನೆ. ತಾತ್ತ್ವಿಕವಾಗಿ, 25-30 ವರ್ಷಗಳ ಹಿಂದೆ ಈ ಕಲ್ಪನೆ ಮೊದಲು ಹೊರಹೊಮ್ಮಿದಾಗ, ಅಗತ್ಯವಿದ್ದಾಗ, ನಾವು ಅದನ್ನು ಆಗಲೇ ಕಾರ್ಯಗತಗೊಳಿಸಿ ಈಗ ಅದನ್ನು ಪ್ರಬುದ್ಧತೆಗೆ ತರಬೇಕಾಗಿತ್ತು. ಅಗತ್ಯವಿರುವಂತೆ ಕಾಲಕಾಲಕ್ಕೆ ಸುಧಾರಣೆಗಳನ್ನು ಮಾಡಬಹುದಿತ್ತು, ಅದೇ ಪ್ರಜಾಪ್ರಭುತ್ವದ ನೈಜ ಸೌಂದರ್ಯ. ನಾವು ಪ್ರಜಾಪ್ರಭುತ್ವದ ತಾಯಿ  ಆಗಿದ್ದೇವೆ. ನಮ್ಮ ಪ್ರಜಾಪ್ರಭುತ್ವವು ಸಾವಿರಾರು ವರ್ಷಗಳ ಅಭಿವೃದ್ಧಿ ಪ್ರಯಾಣವನ್ನು ಹೊಂದಿದೆ, ಇಂದು ಆ ಪ್ರಯಾಣಕ್ಕೆ ಹೊಸ ಆಯಾಮ ಸೇರಿಸಲು ನಮಗೆ ಶುಭ ಅವಕಾಶವಿದೆ. ನಾನು ಆರಂಭದಲ್ಲಿ ಹೇಳಿದಂತೆ, ರಾಷ್ಟ್ರ ನಿರ್ಮಾಣದ ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿ ದೇಶದ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಭಾಗಿಗಳನ್ನಾಗಿ ಮಾಡುವ ಸೌಭಾಗ್ಯ ನಮಗಿರುವುದು ನಮ್ಮ ಅದೃಷ್ಟವೇ ಸರಿ. ಇದು ನಮ್ಮ ಅದೃಷ್ಟವೇ ಆಗಿದೆ. ನನ್ನ ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರು ಈ ಮಹತ್ವದ ಅವಕಾಶವನ್ನು ಕಳೆದುಕೊಳ್ಳಲು ಬಿಡಬಾರದು ಎಂದು ನಾನು ಬಯಸುತ್ತೇನೆ. ಒಟ್ಟಾಗಿ, ನಾವು ಭಾರತೀಯರು ದೇಶಕ್ಕೆ ಹೊಸ ದಿಕ್ಕು ತೋರಲಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಸೂಕ್ಷ್ಮತೆಯಿಂದ ತುಂಬಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಚಾರಮಂಥನದಿಂದ ಹೊರಹೊಮ್ಮುವ ಅಮೃತವು ರಾಷ್ಟ್ರದ ರಾಜಕೀಯದ ಸ್ವರೂಪವನ್ನು ರೂಪಿಸುವುದಲ್ಲದೆ, ದೇಶದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾವು ಅಂತಹ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದೇವೆ.

ಸನ್ಮಾನ್ಯ ಸಭಾಧ್ಯಕ್ಷರೇ,

21ನೇ ಶತಮಾನದಲ್ಲಿ ಭಾರತವು ಹೊಸ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದೆ. ಇಂದು ನಾವೆಲ್ಲರೂ ಭಾರತವನ್ನು ಇಡೀ ಜಗತ್ತೇ ಗುರುತಿಸುತ್ತಿರುವುದನ್ನು ಅನುಭವಿಸುತ್ತಿದ್ದೇವೆ, ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಒಂದು ಸಮಯ ಬಂದಿದೆ, ನಾವು ಈ ಸಮಯವನ್ನು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಜೋಡಿಸಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಅತ್ಯುತ್ತಮ ರೈಲ್ವೆಗಳು, ರಸ್ತೆಗಳು, ಮೂಲಸೌಕರ್ಯ ರೂಪಿಸುವುದಾಗಿದೆ, ಕೆಲವೇ ಆರ್ಥಿಕ ಪ್ರಗತಿ ಹೊಂದಿದ ವ್ಯಕ್ತಿಗಳು ಮಾತ್ರವಲ್ಲ ಎಂದು ನಾನು ಸದೃಢವಾಗಿ ನಂಬುತ್ತೇನೆ. ಅಭಿವೃದ್ಧಿ ಹೊಂದಿದ ಭಾರತದ ಕಲ್ಪನೆ ನಮಗೆ ಸೀಮಿತವಾಗಿಲ್ಲ. "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂಬ ಮಂತ್ರವು ನೀತಿ ನಿರೂಪಣೆಯಲ್ಲಿ ಹುದುಗಿರುವ ಅಭಿವೃದ್ಧಿ ಹೊಂದಿದ ಭಾರತವನ್ನು ನಾವು ಬಯಸುತ್ತೇವೆ. ದೇಶದ ಜನಸಂಖ್ಯೆಯ 50% ಜನರು ನೀತಿ ನಿರೂಪಣೆಯ ಭಾಗವಾಗುವುದು ಈ ಕಾಲದ ಬೇಡಿಕೆಯಾಗಿದೆ. ಕಾರಣಗಳು ಏನೇ ಇರಲಿ, ನಾವು ಈಗಾಗಲೇ ವಿಳಂಬ ಮಾಡಿದ್ದೇವೆ, ಆದರೆ ನಾವು ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ನಾವು ಪ್ರತ್ಯೇಕವಾಗಿ ಭೇಟಿಯಾದಾಗ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ, ಆದರೆ ನಾವು ಸಾಮೂಹಿಕವಾಗಿ ಭೇಟಿಯಾದಾಗ, ವಿಷಯಗಳು ಬದಲಾಗುತ್ತವೆ. ಈ ಪ್ರಕ್ರಿಯೆ ನಡೆಯುತ್ತಿರುವಾಗ, ಎಲ್ಲಾ ಪಕ್ಷಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿತ್ತು ಎಂಬುದು ನನಗೆ ನೆನಪಿದೆ. ಒಂದು ಪಕ್ಷವನ್ನು ಹೊರತುಪಡಿಸಿ, ಎಲ್ಲರೂ ತಾತ್ವಿಕವಾಗಿ ಒಪ್ಪಿಕೊಂಡರು. ನಂತರ ಏನೇ ಸಂಭವಿಸಿದರೂ, ರಾಜಕೀಯ ನಿರ್ದೇಶನಗಳನ್ನು ತೆಗೆದುಕೊಳ್ಳಲಾಯಿತು. ಆದರೆ ರಾಜಕೀಯವಾಗಿ ಮಾತ್ರ ಯೋಚಿಸುವವರಿಗೆ, ನಾನು ಸ್ನೇಹಿತನಾಗಿ ಸಲಹೆ ನೀಡಲು ಬಯಸುತ್ತೇನೆ, ಈ ಸಲಹೆ ಎಲ್ಲರಿಗೂ ಉಪಯುಕ್ತವಾಗಿರುತ್ತದೆ. ಮಹಿಳಾ ಮೀಸಲಾತಿ ಕುರಿತು ಚರ್ಚೆ ಆರಂಭವಾದಾಗಿನಿಂದ, ನಂತರದ ಪ್ರತಿಯೊಂದು ಚುನಾವಣೆಯಲ್ಲೂ, ಮಹಿಳೆಯರಿಗೆ ಈ ಹಕ್ಕು ನೀಡುವುದನ್ನೂ ವಿರೋಧಿಸಿದವರನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸಲಿಲ್ಲ. ಅವರಿಗೆ ಕಠಿಣ ಶಿಕ್ಷೆಯೂ ಆಯಿತು. ಆದರೆ 2024ರ ಚುನಾವಣೆಯನ್ನು ನೋಡಿ - ಆಗ ಅದು ಆಗಲಿಲ್ಲ. ಏಕೆ? ಏಕೆಂದರೆ 2024ರಲ್ಲಿ ಎಲ್ಲರೂ ಅದನ್ನು ಅಂಗೀಕರಿಸಲು ಒಪ್ಪಿಕೊಂಡರು, ಆದ್ದರಿಂದ ಅದು ಇನ್ನು ಮುಂದೆ ಸಮಸ್ಯೆಯಾಗಿರಲಿಲ್ಲ. ಯಾರೂ ರಾಜಕೀಯವಾಗಿ ಗಳಿಸಲಿಲ್ಲ, ಯಾರೂ ರಾಜಕೀಯವಾಗಿ ಸೋತಿಲ್ಲ. 2024ರಲ್ಲಿ ಎಲ್ಲರೂ ಒಟ್ಟಿಗೆ ಇದ್ದ ಕಾರಣ ಇತರ ವಿಷಯಗಳ ಮೇಲೆ ಚುನಾವಣೆಗಳು ನಡೆದವು. ಕೆಲವರು ಇಲ್ಲಿದ್ದಾರೆ, ಕೆಲವರು ಇಲ್ಲ, ಆದರೆ ಎಲ್ಲರೂ ಒಟ್ಟಿಗೆ ಇದ್ದರು. ಇಂದಿಗೂ ನಾನು ಹೇಳುತ್ತೇನೆ, ನಾವೆಲ್ಲರೂ ಒಟ್ಟಿಗೆ ಮುಂದುವರೆದರೆ, ಇದು ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿ ಹೋಗುವುದಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇದು ದೇಶದ ಪ್ರಜಾಪ್ರಭುತ್ವದ ಪರವಾಗಿ, ರಾಷ್ಟ್ರದ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಪರವಾಗಿ ಹೋಗುತ್ತದೆ, ನಾವೆಲ್ಲರೂ ಅದರ ವೈಭವಕ್ಕೆ ಅರ್ಹರಾಗುತ್ತೇವೆ. ಖಜಾನೆ ಪೀಠವಾಗಲಿ ಅಥವಾ ಮೋದಿಯಾಗಲಿ ಒಬ್ಬಂಟಿಯಾಗಿ ಅರ್ಹರಾಗುವುದಿಲ್ಲ, ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಅರ್ಹರಾಗಿರುವುದಿಲ್ಲ. ಆದ್ದರಿಂದ,  ಇದರಲ್ಲಿ ರಾಜಕೀಯ ನೋಡುವವರು, ಕಳೆದ 30 ವರ್ಷಗಳ ಫಲಿತಾಂಶಗಳನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಅವರ ಪ್ರಯೋಜನವೂ ಇದರಲ್ಲಿದೆ, ಲಾಭವು ಇದರಲ್ಲಿದೆ, ನೀವು ನಷ್ಟಗಳಿಂದ ಪಾರಾಗುವಿರಿ ಎಂಬ ಮಾರ್ಗವನ್ನು ನಾನು ತೋರಿಸುತ್ತಿದ್ದೇನೆ. ಆದ್ದರಿಂದ, ಇದಕ್ಕೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನನಗೆ ನೆನಪಿದೆ, ಆ ಸಮಯದಲ್ಲಿ ನಾನು ಸರ್ಕಾರಿ ರಾಜಕೀಯದಲ್ಲಿ ಇರಲಿಲ್ಲ, ನಾನು ಒಂದು ಸಂಸ್ಥೆಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ, ಪಂಚಾಯಿತಿಗಳಲ್ಲಿ ಮೀಸಲಾತಿ ನೀಡುವ ವಿಷಯಕ್ಕೆ ಬಂದಾಗ, ಅವರು ಅದನ್ನು ಬಹಳ ಸುಲಭವಾಗಿ ನೀಡಿದರು ಎಂಬ ಚರ್ಚೆಗಳು ಕಾರಿಡಾರ್‌ಗಳಲ್ಲಿ ಹೆಚ್ಚಾಗಿ ಕೇಳಿಬಂದವು. ಏಕೆಂದರೆ ಪಂಚಾಯಿತಿಗಳಲ್ಲಿ ಅವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವ ಭಯವಿರಲಿಲ್ಲ. ಅವರು ಸುರಕ್ಷಿತವಾಗಿ ಭಾವಿಸಿದರು, ಆದ್ದರಿಂದ ಅವರು, ಅಲ್ಲಿ ನೀಡಿ ಎಂದು ಹೇಳಿದರು. ಆಗ ಕಾರಿಡಾರ್‌ಗಳಲ್ಲಿ ಇದು ಸಾಮಾನ್ಯ ಚರ್ಚೆಯಾಗಿತ್ತು - ಅವರು ಇಲ್ಲಿ ಸಂಸತ್ತಿನಲ್ಲಿ ಅದನ್ನು ಎಂದಿಗೂ ಮಾಡುವುದಿಲ್ಲ, ಏಕೆಂದರೆ ಇಲ್ಲಿ ಅವರು ಏನನ್ನಾದರೂ ಕಳೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಪಂಚಾಯಿತಿ ಮೀಸಲಾತಿ 50%ಗೆ ಏರಿಕೆಯಾಯಿತು.

ರಾಜಕೀಯವಾಗಿ, ನಾನು ಇನ್ನೊಂದು ವಿಷಯ ವಿವರಿಸಲು ಬಯಸುತ್ತೇನೆ ಸ್ನೇಹಿತರೆ,

25-30 ವರ್ಷಗಳ ಹಿಂದೆ ಯಾರೇ ವಿರೋಧಿಸಿದರೂ, ವಿರೋಧ ಪಕ್ಷವು ರಾಜಕೀಯ ಮೇಲ್ಮೈಗಿಂತ ಕೆಳಮಟ್ಟಕ್ಕೆ ಹೋಗಲಿಲ್ಲ. ಇಂದು, ಅದೇ ರೀತಿ ಯೋಚಿಸುವ ತಪ್ಪನ್ನು ಮಾಡಬೇಡಿ. ಕಳೆದ 25-30 ವರ್ಷಗಳಲ್ಲಿ, ಪಂಚಾಯಿತಿ ಚುನಾವಣೆಗಳಲ್ಲಿ ಗೆದ್ದ ಸಹೋದರಿಯರು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆ. ಅವರು ತಳಮಟ್ಟದಲ್ಲಿ ಅಭಿಪ್ರಾಯ ರೂಪಿಸುವವರು. 30 ವರ್ಷಗಳ ಹಿಂದೆ ಅವರು ಮೌನವಾಗಿದ್ದರು, ಅರ್ಥ ಮಾಡಿಕೊಂಡರು ಆದರೆ ಮಾತನಾಡಲಿಲ್ಲ. ಇಂದು ಅವರು ಧ್ವನಿ ಎತ್ತುತ್ತಾರೆ. ಆದ್ದರಿಂದ, ಈಗ ಯಾವುದೇ ಸ್ಥಾನದಲ್ಲಿದ್ದರೂ, ಪಂಚಾಯಿತಿಗಳಲ್ಲಿ ಕೆಲಸ ಮಾಡಿದ, ಪ್ರತಿನಿಧಿಸಿದ, ಜನರ ಸಂತೋಷ ಮತ್ತು ದುಃಖಗಳನ್ನು ಆಳವಾಗಿ ನೋಡಿದ ಲಕ್ಷಾಂತರ ಸಹೋದರಿಯರು ಉದ್ರೇಕಗೊಂಡಿದ್ದಾರೆ. ಅವರು ಹೇಳುತ್ತಾರೆ, ನೀವು ನಮ್ಮನ್ನು ಗುಡಿಸುವ ಮತ್ತು ಸ್ವಚ್ಛಗೊಳಿಸುವ ಕೆಲಸಕ್ಕೆ ತಳ್ಳುತ್ತೀರಿ, ನಾವು ಮೊದಲು ಕುಟುಂಬಗಳಲ್ಲಿ ಕೆಲಸ ಮಾಡುತ್ತಿದ್ದೆವು, ಆದರೆ ಈಗ ನಮ್ಮನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುತ್ತೀರಿ. ನಿರ್ಧಾರ ತೆಗೆದುಕೊಳ್ಳುವುದು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ನಡೆಯುತ್ತದೆ. ಆದ್ದರಿಂದ, ರಾಜಕೀಯ ಜೀವನದಲ್ಲಿ ಪ್ರಗತಿಯನ್ನು ಬಯಸುವವರಿಗೆ ನಾನು ಹೇಳುತ್ತೇನೆ, ಅವರು ಯಾವುದೇ ಪಕ್ಷದ ಬಗ್ಗೆ ಮಾತನಾಡದೆ, ಸಂಸದರಾಗಲಿ ಅಥವಾ ಶಾಸಕರಾಗಲಿ, ನೀವು ರಾಜಕೀಯ ಜೀವನದಲ್ಲಿ ಯಶಸ್ವಿಯಾಗಿ ಮುಂದುವರಿಯಲು ಬಯಸಿದರೆ, ಕಳೆದ 25-30 ವರ್ಷಗಳಲ್ಲಿ ಲಕ್ಷಾಂತರ ಸಹೋದರಿಯರು ತಳಮಟ್ಟದಲ್ಲಿ ನಾಯಕಿಯರಾಗಿದ್ದಾರೆ. ಈಗ ಅವರು ನಿಮ್ಮ ನಿರ್ಧಾರಗಳನ್ನು ಇಲ್ಲಿ ಮಾತ್ರವಲ್ಲದೆ ಅಲ್ಲಿಯೂ ಸಹ ಪ್ರಭಾವ ಬೀರುತ್ತಾರೆ. ಆದ್ದರಿಂದ, ಇಂದು ವಿರೋಧಿಸುವವರು ದೀರ್ಘಕಾಲದವರೆಗೆ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ, ರಾಜಕೀಯ ಬುದ್ಧಿವಂತಿಕೆಯು ತಳಮಟ್ಟದಲ್ಲಿ ಹೊರಹೊಮ್ಮಿರುವ ಮಹಿಳೆಯರ ರಾಜಕೀಯ ನಾಯಕತ್ವವನ್ನು ಪರಿಗಣಿಸುವುದರಲ್ಲಿಯೂ ಇದೆ. ಮುಲಾಯಂ ಸಿಂಗ್ ಜಿ ಅವರ ಕಾಲದಿಂದಲೂ ಈ ವಿಷಯವನ್ನು ಎತ್ತಲಾಗಿದೆ, ಅವರ ಕುಟುಂಬವು ಅದನ್ನು ಮುಂದುವರಿಸುತ್ತದೆ ಎಂದು ನಾನು ಕೇಳಿದ್ದೇನೆ. ದೇಶದ ಮಹಿಳೆಯರನ್ನು ನಂಬಿರಿ, ಅವರ ಬುದ್ಧಿವಂತಿಕೆಯನ್ನು ನಂಬಿರಿ. 33% ಸಹೋದರಿಯರು ಇಲ್ಲಿಗೆ ಬರಲು ಬಿಡಿ, ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು, ಯಾವ ವರ್ಗಕ್ಕೆ ಕೊಡಬೇಕು, ಯಾವ ವರ್ಗಕ್ಕೆ ಕೊಡಬಾರದು ಎಂಬುದನ್ನು ಅವರೇ ನಿರ್ಧರಿಸಲಿ. ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಸಾಮರ್ಥ್ಯವನ್ನು ನಾವು ಏಕೆ ಅನುಮಾನಿಸುತ್ತೇವೆ? ಅವರು ಒಮ್ಮೆ ಬರಲಿ! ಅವರು ಒಮ್ಮೆ ಬರಲಿ! ಅವರು ಬಂದಾಗ, ನಂತರ 2034ರಲ್ಲಿ... ಧರ್ಮೇಂದ್ರ ಜಿ, ನನ್ನನ್ನು ಪರಿಚಯಿಸಿದ್ದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ನಿಜ, ನಾನು ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿದ್ದೇನೆ. ಧರ್ಮೇಂದ್ರ ಜಿ, ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಅಖಿಲೇಶ್ ಜಿ ನನ್ನ ಸ್ನೇಹಿತ, ಆದ್ದರಿಂದ ಕೆಲವೊಮ್ಮೆ ಅವರು ನನಗೆ ಸಹಾಯ ಮಾಡುತ್ತಾರೆ. ನಾನು ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿದ್ದೇನೆ ಎಂಬುದು ನಿಜ, ಆದರೆ ನನ್ನ ಜವಾಬ್ದಾರಿ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು, ನನ್ನ ಸಂವಿಧಾನವು ನನಗೆ ತೋರಿಸುವುದು ಅದನ್ನೇ. ನನಗೆ, ಸಂವಿಧಾನವೇ ಸರ್ವೋಚ್ಚವಾಗಿದೆ. ಇಷ್ಟು ಚಿಕ್ಕ, ಅತ್ಯಂತ ಹಿಂದುಳಿದ ಸಮಾಜದ ವ್ಯಕ್ತಿಗೆ ದೇಶವು ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದು ಸಂವಿಧಾನದ ಬಲವಾಗಿದೆ. ಆದ್ದರಿಂದ, ನಾನು ದೇಶದ ಜನರಿಗೆ ಮತ್ತು ಸಂವಿಧಾನದ ನಿರ್ಮಾತೃಗಳಿಗೆ ಋಣಿಯಾಗಿದ್ದೇನೆ, ಅವರ ಕಾರಣದಿಂದಾಗಿ ನಾನು ಇಂದು ಇಲ್ಲಿದ್ದೇನೆ.

ಗೌರವಾನ್ವಿತ ಶ್ರೀ ಸಭಾಧ್ಯಕ್ಷರೇ!

ಇಂದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ, ಮಹಿಳೆಯರು ದೇಶದ ಹೆಮ್ಮೆಯನ್ನು ಎತ್ತಿ ಹಿಡಿಯುವಲ್ಲಿ ಮತ್ತು ಧ್ವಜ ಹಾರಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು ನಾವು ನೋಡಿದರೆ. ಜೀವನದ ವಿವಿಧ ಕ್ಷೇತ್ರಗಳಲ್ಲಿ, ನಮ್ಮ ತಾಯಂದಿರು ಮತ್ತು ಸಹೋದರಿಯರು ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದಾರೆ, ನಮ್ಮ ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠರಾಗಿದ್ದಾರೆ ಎಂದು ನಾವು ಹೆಮ್ಮೆಪಡಬಹುದು! ಅಂತಹ ದೊಡ್ಡ ಶಕ್ತಿ - ಅವರು ಭಾಗವಹಿಸುವುದನ್ನು ತಡೆಯಲು ನಾವು ಏಕೆ ಹೆಚ್ಚು ಶಕ್ತಿಯನ್ನು ವ್ಯಯಿಸುತ್ತಿದ್ದೇವೆ? ಅವರ ಸೇರ್ಪಡೆ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಇದನ್ನು ರಾಜಕೀಯದ ತಕ್ಕಡಿಯಲ್ಲಿ ತೂಗಬೇಡಿ ಎಂದು ನಾನು ಇಂದು ನಿಮ್ಮಲ್ಲಿ ಮನವಿ ಮಾಡಲು ಬಂದಿದ್ದೇನೆ. ಇದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರ.

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು ನಮ್ಮ ಮುಂದಿರುವ ಈ ಅವಕಾಶವೆಂದರೆ ಒಟ್ಟಿಗೆ ಕುಳಿತು, ಒಂದೇ ದಿಕ್ಕಿನಲ್ಲಿ ಯೋಚಿಸುವುದು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಮಹಿಳಾ ಶಕ್ತಿಯ ಭಾಗವಹಿಸುವಿಕೆಯನ್ನು ಬಹಿರಂಗವಾಗಿ ಸ್ವೀಕರಿಸಲು ನಿರ್ಧರಿಸುವುದು. ನಾನು ಮೊದಲೇ ಹೇಳಿದಂತೆ, ಇಂದು ಇಡೀ ದೇಶ ವಿಶೇಷವಾಗಿ ಮಹಿಳಾ ಶಕ್ತಿ, ನಮ್ಮ ನಿರ್ಧಾರಗಳನ್ನು ವೀಕ್ಷಿಸುತ್ತದೆ, ಆದರೆ ನಿರ್ಧಾರಗಳಿಗಿಂತ ಹೆಚ್ಚಾಗಿ, ಅವರು ನಮ್ಮ ಉದ್ದೇಶವನ್ನು ನೋಡುತ್ತಾರೆ. ಆದ್ದರಿಂದ, ನಮ್ಮ ಉದ್ದೇಶ ದೋಷಪೂರಿತವಾಗಿದ್ದರೆ, ದೇಶದ ಮಹಿಳಾ ಶಕ್ತಿ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

2023ರಲ್ಲಿ, ಈ ಹೊಸ ಸದನದಲ್ಲಿ ನಾವು ಈ ಕಾಯ್ದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದೇವೆ. ದೇಶಾದ್ಯಂತ ಸಂತೋಷದಾಯಕ ವಾತಾವರಣ ಸೃಷ್ಟಿಸಲಾಯಿತು, ಇದಕ್ಕೆ ಯಾವುದೇ ರಾಜಕೀಯ ಬಣ್ಣ ಸೇರಿಸಲಾಗಿಲ್ಲ. ಆದ್ದರಿಂದ ಇದು ಎಂದಿಗೂ ರಾಜಕೀಯ ವಿಷಯವಾಗಲಿಲ್ಲ. ಅದು ಒಳ್ಳೆಯ ಪರಿಸ್ಥಿತಿಯಾಗಿತ್ತು. ಈಗ ಪ್ರಶ್ನೆಯೆಂದರೆ, ನಾವು ಅದನ್ನು ಎಷ್ಟು ಸಮಯ ವಿಳಂಬ ಮಾಡುತ್ತೇವೆ? ಜನಸಂಖ್ಯಾ ಸಮಸ್ಯೆಗಳನ್ನು ಎತ್ತುವವರು, ನಿಮಗೆ ತಿಳಿದಿಲ್ಲವೇ? ನಾವು ಜನಗಣತಿಯನ್ನು ಯಾವಾಗ ನಡೆಸಿದ್ದೇವೆ, ನಂತರ ಕೋವಿಡ್‌ನಿಂದಾಗಿ ಯಾವ ತೊಂದರೆಗಳು ಉಂಟಾದವು, ಯಾವ ಅಡೆತಡೆಗಳು ಬಂದವು ಎಂಬುದರ ಎಲ್ಲಾ ವಿವರಗಳನ್ನು ಅಮಿತ್ ಭಾಯ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಬೇಕೆಂದು ನಾನು ಬಯಸುತ್ತೇನೆ. ಈ ಎಲ್ಲಾ ವಿಷಯಗಳು ನಮ್ಮ ಮುಂದಿವೆ, ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ 2023ರಲ್ಲಿ ನಾವು ಚರ್ಚಿಸಿದಾಗ, ಅದನ್ನು ತ್ವರಿತವಾಗಿ ಮಾಡುವುದು ಎಲ್ಲರ ಒಮ್ಮತವಾಗಿತ್ತು, ಎಲ್ಲರೂ ಅದನ್ನು ತ್ವರಿತವಾಗಿ ಮಾಡಿ ಎಂದು ಹೇಳುತ್ತಿದ್ದರು. 2024ರಲ್ಲಿ ಅದು ಕಡಿಮೆ ಸಮಯದ ಕಾರಣ ಸಾಧ್ಯವಾಗಲಿಲ್ಲ. ಈಗ 2029ರಲ್ಲಿ ನಮಗೆ ಅವಕಾಶವಿದೆ. 2029ರಲ್ಲಿ ನಾವು ಅದನ್ನು ಮಾಡದಿದ್ದರೆ, ಯಾವ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ನಾವೇ ಊಹಿಸಬಹುದು. ಆಗ ನಾವು ದೇಶದ ತಾಯಂದಿರು ಮತ್ತು ಸಹೋದರಿಯರಿಗೆ ನಾವು ನಿಜವಾಗಿಯೂ ಈ ಪ್ರಯತ್ನವನ್ನು ಮಾಡಬಹುದು ಎಂದು ಮನವರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾವು ಇನ್ನು ಮುಂದೆ ವಿಳಂಬ ಮಾಡಬಾರದು ಎಂಬುದು ಕಾಲದ ಬೇಡಿಕೆಯಾಗಿದೆ. ಈ ಮಧ್ಯೆ, ರಾಜಕೀಯ ಪಕ್ಷದ ಸದಸ್ಯರು, ಸಾಂವಿಧಾನಿಕ ತಜ್ಞರು, ಮಹಿಳಾ ಕಾರ್ಯಕರ್ತರು ಮತ್ತು ಇತರ ಅನೇಕರೊಂದಿಗೆ ಚರ್ಚೆಗಳು ನಡೆದಿವೆ. ಕೆಲವರು ಸ್ವಯಂಪ್ರೇರಣೆಯಿಂದ ಸಲಹೆಗಳನ್ನು ನೀಡಿದ್ದಾರೆ. ರಚನಾತ್ಮಕವಾಗಿ ಮತ್ತು ಅನೌಪಚಾರಿಕವಾಗಿ ಎಲ್ಲಾ ಪಕ್ಷಗಳೊಂದಿಗೆ ನಿರಂತರ ಚರ್ಚೆಗಳು ನಡೆದಿವೆ. ಈ ಎಲ್ಲಾ ಗೊಂದಲಗಳಿಂದ, ನಮ್ಮ ತಾಯಂದಿರು ಮತ್ತು ಸಹೋದರಿಯರ ಶಕ್ತಿಯನ್ನು ಬಳಸಿಕೊಳ್ಳುವ ಮಾರ್ಗವನ್ನು ನಾವು ಅಂತಿಮವಾಗಿ ಕಂಡುಕೊಳ್ಳಬೇಕು.

ಸನ್ಮಾನ್ಯ ಸಭಾಧ್ಯಕ್ಷರೇ,

ನಾನು ಖಂಡಿತವಾಗಿಯೂ ಒಂದು ವಿಷಯ ಹೇಳಲು ಬಯಸುತ್ತೇನೆ. ಇಲ್ಲಿ ಕುಳಿತಿರುವಾಗ, ನಮ್ಮಲ್ಲಿ ಯಾರಿಗೂ ಸಂವಿಧಾನವು ರಾಷ್ಟ್ರವನ್ನು ತುಂಡುಗಳಾಗಿ ಮಾಡಲು ಯೋಚಿಸುವ ಹಕ್ಕನ್ನು ನೀಡಿಲ್ಲ. ನಾವು ತೆಗೆದುಕೊಂಡ ಪ್ರಮಾಣವಚನವು ರಾಷ್ಟ್ರವನ್ನು ಒಂದಾಗಿ ಯೋಚಿಸಲು ನಮ್ಮನ್ನು ನಿರ್ಬಂಧಿಸುತ್ತದೆ. ಅದು ಕಾಶ್ಮೀರವಾಗಲಿ ಅಥವಾ ಕನ್ಯಾಕುಮಾರಿಯಾಗಲಿ, ನಾವು ತುಂಡುಗಳಾಗಿ ಯೋಚಿಸಲು ಸಾಧ್ಯವಿಲ್ಲ, ಅಥವಾ ತುಂಡುಗಳಾಗಿ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ, ರಾಜಕೀಯ ಲಾಭಕ್ಕಾಗಿ ಮಾತ್ರ ಎದ್ದ ಆಧಾರರಹಿತ ಬಿರುಗಾಳಿಗಳು, ಸತ್ಯದ ಒಂದು ತುಣುಕು ಇಲ್ಲದೆ, ಸದನದ ಈ ಪವಿತ್ರ ಸ್ಥಳದಿಂದ ನಾನು ಸಂಪೂರ್ಣ ಜವಾಬ್ದಾರಿಯೊಂದಿಗೆ ಹೇಳಲು ಬಯಸುತ್ತೇನೆ: ಅದು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಸಣ್ಣ ರಾಜ್ಯಗಳು ಅಥವಾ ದೊಡ್ಡ ರಾಜ್ಯಗಳಾಗಿರಲಿ, ಈ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ, ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ನಾನು ಜವಾಬ್ದಾರಿಯಿಂದ ಹೇಳುತ್ತೇನೆ. ಹಿಂದಿನ ಸರ್ಕಾರಗಳಲ್ಲಿ ಹಿಂದೆ ಯಾವುದೇ ಗಡಿ ನಿರ್ಣಯ ನಡೆದಿದ್ದರೂ, ಅಂದಿನಿಂದ ಯಾವುದೇ ಅನುಪಾತಗಳನ್ನು ಅನುಸರಿಸಿದ್ದರೂ, ಆ ಅನುಪಾತಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಯಾವುದೇ ಹೆಚ್ಚಳವು ಅದೇ ಪ್ರಮಾಣದಲ್ಲಿರುತ್ತದೆ. "ಗ್ಯಾರಂಟಿ" ಪದದ ಅಗತ್ಯವಿದ್ದರೆ, ನಾನು ಗ್ಯಾರಂಟಿ ಪದವನ್ನು ಬಳಸುತ್ತೇನೆ. ನೀವು "ಭರವಸೆ" ಎಂಬ ಪದವನ್ನು ಬಯಸಿದರೆ, ನಾನು ಭರವಸೆ ಎಂಬ ಪದವನ್ನು ಬಳಸುತ್ತೇನೆ. ತಮಿಳಿನಲ್ಲಿ ಒಳ್ಳೆಯ ಪದವಿದ್ದರೆ, ಅದನ್ನೂ ಬಳಸಲು ನಾನು ಸಿದ್ಧನಿದ್ದೇನೆ, ಏಕೆಂದರೆ ಉದ್ದೇಶ ಸ್ಪಷ್ಟವಾದಾಗ, ನಾವು ಪದಗಳೊಂದಿಗೆ ಆಟವಾಡುವ ಅಗತ್ಯವಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ಸದನದಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ನಾನು ಹೇಳಲು ಬಯಸುತ್ತೇನೆ, ನಾವು ಭ್ರಮೆಯಲ್ಲಿ ಉಳಿಯಬಾರದು, ದುರಹಂಕಾರದಲ್ಲಿ ಉಳಿಯಬಾರದು. ನಾನು "ನಾವು" ಎಂಬ ಪದವನ್ನು ಬಳಸುತ್ತಿದ್ದೇನೆ. ನಾನು "ನಾನು" ಮತ್ತು "ನೀವು" ಎಂದು ಮಾತನಾಡುತ್ತಿಲ್ಲ. ದೇಶದ ಮಹಿಳಾ ಶಕ್ತಿಗೆ ನಾವು ಏನನ್ನಾದರೂ ನೀಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಉಳಿಯಬಾರದು. ಇಲ್ಲ ಅದು ಅವರ ಹಕ್ಕು, ನಾವು ಅದನ್ನು ಹಲವು ದಶಕಗಳಿಂದ ತಡೆ ಹಿಡಿದಿದ್ದೇವೆ. ಇಂದು, ಪಶ್ಚಾತ್ತಾಪ ಪಡುವ ಮೂಲಕ ಆ ಪಾಪದಿಂದ ನಮ್ಮನ್ನು ಮುಕ್ತಗೊಳಿಸಲು ನಮಗೆ ಅವಕಾಶವಿದೆ. ಪ್ರತಿ ಬಾರಿ ತಂತ್ರಗಳನ್ನು ಮಾಡಿದಾಗ, ಬುದ್ಧಿವಂತಿಕೆಯನ್ನು ಹೇಗೆ ಬಳಸಲಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ಯಾವಾಗಲೂ ಪರವಾಗಿದ್ದೇವೆಂದು ಹೇಳುತ್ತಿದ್ದೆವು, ಆದರೆ ಪ್ರತಿ ಬಾರಿ ಅದನ್ನು ತಡೆಯಲು ಕೆಲವು ತಾಂತ್ರಿಕ ನೆಪಗಳನ್ನು ಸೇರಿಸಲಾಯಿತು. ಅಂತಹ ವಿಷಯಗಳನ್ನು ತಂದಾಗಲೆಲ್ಲಾ. ಮಹಿಳೆಯರಿಗೆ 33% ಮೀಸಲಾತಿಯನ್ನು ವಿರೋಧಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆ ಯುಗ ಕಳೆದಿದೆ, ನೀವು ಅದನ್ನು ಮಾಡಲು ಸಾಧ್ಯವಿಲ್ಲ, ಆದರೆ ಅದನ್ನು ಹೇಳುವ ಧೈರ್ಯವೂ ನಿಮಗೆ ಇರಲಿಲ್ಲ. ಆದ್ದರಿಂದ ತಾಂತ್ರಿಕ ನೆಪಗಳು - ಇದನ್ನು ಮಾಡಿ, ಅದನ್ನು ಮಾಡಿ, ಇದನ್ನು ಸೇರಿಸಿ - ಈಗ ನೀವು ಇದನ್ನು ದೇಶದ ಮಹಿಳೆಯರಿಗೆ ವಿವರಿಸಲು ಸಾಧ್ಯವಾಗುವುದಿಲ್ಲ. ಸದನದಲ್ಲಿ ಸಂಖ್ಯೆಗಳ ಆಟವನ್ನು ಸಮಯ ನಿರ್ಧರಿಸುತ್ತದೆ. ಆದರೆ ಈಗ ವಿವಿಧ ನೆಪಗಳು ಮತ್ತು ತಾಂತ್ರಿಕ ಸಮಸ್ಯೆಗಳೊಂದಿಗೆ ವಿಷಯಗಳನ್ನು ಸಿಲುಕಿಸುವ ಮೂಲಕ, ನಾವು ಅದನ್ನು 3 ದಶಕಗಳಿಂದ ತಡೆದಿದ್ದೇವೆ ಎಂಬುದು ಖಚಿತ. ನೀವು ಬಯಸಿದ್ದನ್ನು ಸಾಧಿಸಿದ್ದೀರಿ, ಈಗ ಅದನ್ನು ಬಿಡಿ! ಅದನ್ನು ತಡೆಯಲು 3 ದಶಕಗಳು ಸಾಕಾಗುವುದಿಲ್ಲವೇ? 3 ದಶಕಗಳಿಂದ ನೀವು ಅದನ್ನು ನಿಲ್ಲಿಸಿದ್ದೀರಿ, ಆದರೂ ನೀವು ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಈಗ ಅದನ್ನು ಮಾಡಿ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಲ್ಲಿ ಕೆಲವರು ಹಾಗೆ ಭಾವಿಸುತ್ತಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಲ್ಲಿ ಕೆಲವರು ಇದರಲ್ಲಿ ಎಲ್ಲೋ ಮೋದಿ ಅವರ ರಾಜಕೀಯ ಸ್ವಾರ್ಥವಿದೆ ಎಂದು ಭಾವಿಸುತ್ತಾರೆ. ಅವರು ಮಾತನಾಡಲಿ, ಬಡವರ ಬಾಯಿಗೆ ಬೀಗ ಹಾಕಲಾಗಿದೆ, ಬಂಗಾಳದಲ್ಲಿ ಯಾರೂ ಅವರನ್ನು ಮಾತನಾಡಲು ಬಿಡುವುದಿಲ್ಲ.

ಸನ್ಮಾನ್ಯ ಸಭಾಧ್ಯಕ್ಷರೇ,

ನೋಡಿ, ಇದನ್ನು ವಿರೋಧಿಸಿದರೆ, ಸ್ವಾಭಾವಿಕವಾಗಿ ನನಗೆ ರಾಜಕೀಯ ಲಾಭವಾಗುತ್ತದೆ. ಆದರೆ ನಾವು ಒಟ್ಟಿಗೆ ಚಲಿಸಿದರೆ, ಯಾರಿಗೂ ಲಾಭವಾಗುವುದಿಲ್ಲ, ಇದನ್ನು ಬರೆದಿಟ್ಟುಕೊಳ್ಳಿ. ಯಾರಿಗೂ ಲಾಭವಾಗುವುದಿಲ್ಲ, ಏಕೆಂದರೆ ಅದು ಬೇರೆ ಅಂಶವಾಗುತ್ತದೆ, ಆಗ ಯಾರಿಗೂ ಲಾಭವಾಗುವುದಿಲ್ಲ. ಆದ್ದರಿಂದ, ನಮಗೆ ಕ್ರೆಡಿಟ್ ಬೇಡ. ಇದು ಅಂಗೀಕಾರವಾದ ತಕ್ಷಣ, ನಾಳೆ ಎಲ್ಲರಿಗೂ ಧನ್ಯವಾದ ಹೇಳುವ ಜಾಹೀರಾತು ನೀಡಲು ನಾನು ಸಿದ್ಧನಿದ್ದೇನೆ, ಎಲ್ಲರ ಫೋಟೋ ಪ್ರಕಟಿಸಲು ಸಿದ್ಧ. ನೀವು ಕ್ರೆಡಿಟ್ ತೆಗೆದುಕೊಳ್ಳಿ! ನೀವು ಕ್ರೆಡಿಟ್ ಬಗ್ಗೆ ಚಿಂತಿತರಾಗಿದ್ದರೆ, ಅದನ್ನು ತೆಗೆದುಕೊಳ್ಳಿ. ನೀವು ಯಾರ ಫೋಟೊ ಪ್ರಕಟಿಸಲು ಬಯಸುತ್ತೀರೋ, ನಾವು ಅದನ್ನು ಸರ್ಕಾರಿ ವೆಚ್ಚದಲ್ಲಿ ಮಾಡುತ್ತೇವೆ. ನಾನು ನಿಮಗೆ ಮುಂಭಾಗದಿಂದ ಕ್ರೆಡಿಟ್‌ನ ಖಾಲಿ ಚೆಕ್ ನೀಡುತ್ತಿದ್ದೇನೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೇವಲ ಸಂಖ್ಯೆಗಳ ಆಟವಲ್ಲ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸೀಮಿತ ಸುಧಾರಣೆಯಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ, ಈ ನಿರ್ಧಾರವು ಭಾರತದ ಬದ್ಧತೆಯಾಗಿದೆ, ಇದು ಸಾಂಸ್ಕೃತಿಕ ಬದ್ಧತೆಯಾಗಿದೆ. ಈ ಬದ್ಧತೆಯಿಂದಾಗಿ, ಈ ವ್ಯವಸ್ಥೆಯನ್ನು ಪಂಚಾಯಿತಿಗಳಲ್ಲಿ ಮಾಡಲಾಯಿತು, ಈಗ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇದು 50% ತಲುಪಿದೆ. ನಾವು ಅದನ್ನು ಅನುಭವಿಸಿದ್ದೇವೆ. ದೀರ್ಘಕಾಲದವರೆಗೆ, ಜನರು ನನಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದರು, ಆ ಅವಧಿಯಲ್ಲಿ ನಾನು ತಳಮಟ್ಟದಲ್ಲಿ ಮಹಿಳಾ ನಾಯಕತ್ವವನ್ನು ನೋಡಿದೆ. ಸೂಕ್ಷ್ಮತೆಯೊಂದಿಗೆ ಸಮಸ್ಯೆಗಳನ್ನು ಪರಿಹರಿಸುವ ಅವರ ಬದ್ಧತೆಯು ಬಹಳ ಪರಿಣಾಮಕಾರಿಯಾಗಿತ್ತು, ಅದು ಅಭಿವೃದ್ಧಿಯ ಪ್ರಯಾಣಕ್ಕೆ ವೇಗ ನೀಡಿತು ಎಂಬುದು ನನ್ನ ವೈಯಕ್ತಿಕ ಅನುಭವ. ಆ ಅನುಭವದ ಆಧಾರದ ಮೇಲೆ, ಈ ಸದನದಲ್ಲಿ ಅವರ ಧ್ವನಿಯು ಹೊಸ ಶಕ್ತಿಯಾಗುತ್ತದೆ, ಹೊಸ ಚಿಂತನೆಯನ್ನು ಸೇರಿಸಲಾಗುತ್ತದೆ,ದೇಶದ ದಿಕ್ಕಿನಲ್ಲಿ ಸೂಕ್ಷ್ಮತೆಯನ್ನು ಸೇರಿಸಲಾಗುತ್ತದೆ ಎಂದು ನಾನು ಹೇಳುತ್ತೇನೆ. ಅನುಭವವು ಸತ್ಯಗಳು ಮತ್ತು ವಾದಗಳೊಂದಿಗೆ ಸೇರಿದಾಗ,ಅದರ ಬಲವು ಹಲವು ಪಟ್ಟು ಹೆಚ್ಚಾಗುತ್ತದೆ, ಸದನವು ಶ್ರೀಮಂತವಾಗುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ನಮ್ಮ ದೇಶದಲ್ಲಿ ಅನುಭವಿ ಮಹಿಳಾ ಶಕ್ತಿಯ ಕೊರತೆಯಿಲ್ಲ, ಸಮರ್ಥ ಮಹಿಳೆಯರ ಕೊರತೆಯಿಲ್ಲ. ನಾವು ಅವರನ್ನು ನಂಬೋಣ, ಅವರು ಕೊಡುಗೆ ನೀಡುತ್ತಾರೆ, ಅವರು ಉತ್ತಮವಾಗಿ ಕೊಡುಗೆ ನೀಡುತ್ತಾರೆ. ಇಂದಿಗೂ ಇಲ್ಲಿನ ನಮ್ಮ ಸಹೋದರಿಯರಿಗೆ ಅವಕಾಶ ನೀಡಿದಾಗಲೆಲ್ಲಾ, ಅವರು ತಮ್ಮನ್ನು ತಾವು ಚೆನ್ನಾಗಿ ವ್ಯಕ್ತಪಡಿಸಿದ್ದಾರೆ, ಸದನವನ್ನು ಶ್ರೀಮಂತಗೊಳಿಸಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಇಂದು ದೇಶದಲ್ಲಿ 650ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿಗಳಿವೆ, ಅವುಗಳಲ್ಲಿ ಸುಮಾರು 275 ಮಹಿಳೆಯರಿಂದ ನೇತೃತ್ವ ವಹಿಸಲ್ಪಟ್ಟಿವೆ, ಅವು ಕೇಂದ್ರ ಕ್ಯಾಬಿನೆಟ್ ಮಂತ್ರಿಗಳಿಗಿಂತ ಹೆಚ್ಚಿನ ಜವಾಬ್ದಾರಿ,ನಿಧಿ ಮತ್ತು ವ್ಯವಸ್ಥೆಗಳನ್ನು ಹೊಂದಿವೆ, ಅವರು ಕೆಲಸ ಮಾಡುತ್ತಾರೆ. ಸುಮಾರು 6,700 ಬ್ಲಾಕ್ ಪಂಚಾಯಿತಿಗಳಲ್ಲಿ, 2,700ಕ್ಕೂ ಹೆಚ್ಚು ಬ್ಲಾಕ್ ಪಂಚಾಯಿತಿಗಳು ಮಹಿಳೆಯರ ನೇತೃತ್ವದಲ್ಲಿವೆ. ಇಂದು 900ಕ್ಕೂ ಹೆಚ್ಚು ನಗರಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅವರು ಮೇಯರ್‌ಗಳಾಗಿ ಅಥವಾ ಸ್ಥಾಯಿ ಸಮಿತಿಗಳ ಮುಖ್ಯಸ್ಥರಾಗಿ,ನಮ್ಮ ಸಹೋದರಿಯರು ಅಧಿಕಾರ ಹೊಂದಿದ್ದಾರೆ. ಇಂದು ದೇಶ ಮಾಡುತ್ತಿರುವ ಪ್ರಗತಿಯಲ್ಲಿ, ಅವರ ಕೊಡುಗೆಯೂ ಗಮನಾರ್ಹವಾಗಿದೆ, ಆ ಕೊಡುಗೆಯನ್ನು ಒಪ್ಪಿಕೊಳ್ಳುವ ಅವಕಾಶ ಇದಾಗಿದೆ ಎಂದು ನಾನು ನಂಬುತ್ತೇನೆ. ಈ ಅನುಭವವನ್ನು ಸದನಕ್ಕೆ ಸೇರಿಸಿದಾಗ, ಅದು ಬಲವನ್ನು ಹಲವು ಪಟ್ಟು ಹೆಚ್ಚಿಸುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ದೀರ್ಘ ಕಾಯುವಿಕೆ ನಮಗೆಲ್ಲರಿಗೂ ಪ್ರಶ್ನಾರ್ಥಕ ಚಿಹ್ನೆಯನ್ನು ಸೃಷ್ಟಿಸಿದೆ, ನಾವೇ ಈ ಪರಿಸ್ಥಿತಿಯನ್ನು ಸೃಷ್ಟಿಸಿದ್ದೇವೆ. ಹಿಂದೆ ಇದ್ದ ಯಾವುದೇ ಮಿತಿಗಳು ಅಥವಾ ತೊಂದರೆಗಳಿಂದ ಹೊರಬರಲು, ಧೈರ್ಯದಿಂದ ಮುಂದುವರಿಯಲು ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದು ಒಂದು ಅವಕಾಶ. ಇಂದು ನಾವು ಒಟ್ಟಾಗಿ ನಿರ್ಧರಿಸಿದರೆ ಮತ್ತು ನಾವು ಸರ್ವಾನುಮತದಿಂದ ಮುಂದುವರಿಯಬೇಕೆಂದು ನಾನು ಒತ್ತಾಯಿಸುತ್ತೇನೆ, ಅದು ಸರ್ವಾನುಮತದಿಂದ ಮುಂದುವರಿಯುವಾಗ, ಖಜಾನೆ ಪೀಠದ ಮೇಲೂ ಒತ್ತಡವಿರುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದರಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ, ಎಲ್ಲರ ಧ್ವನಿಯನ್ನು ಪರಿಗಣಿಸಬೇಕು, ಯಾವುದೇ ಹಾನಿ ಇಲ್ಲ ಎಂದು ಅವರು ಭಾವಿಸುತ್ತಾರೆ. ಸಾಮೂಹಿಕ ಬಲವು ನಮಗೆ ಅನೇಕ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಹೆಚ್ಚು ಸಮಯ ತೆಗೆದುಕೊಳ್ಳದೆ ನಾನು ಇದನ್ನೇ ಹೇಳುತ್ತೇನೆ,ಇದನ್ನು ರಾಜಕೀಯದ ತಕ್ಕಡಿಯಲ್ಲಿ ತೂಗಬೇಡಿ. ನಾವು ನಿರ್ಧಾರ ತೆಗೆದುಕೊಳ್ಳುವಾಗಲೆಲ್ಲಾ, ಈ ಮಹಾನ್ ರಾಷ್ಟ್ರದ ಅರ್ಧದಷ್ಟು ಜವಾಬ್ದಾರಿ ನಾವು ಇಲ್ಲಿಗೆ ತರುತ್ತಿರುವವರ ಮೇಲಿದೆ. ಅವರಿಗೂ ಇಲ್ಲಿಗೆ ಬರುವ ಹಕ್ಕಿದೆ, ನಾವು ಅವರನ್ನು ತಡೆಯಬಾರದು. ಸಂಖ್ಯೆಗಳ ವಿಷಯದಲ್ಲೂ ಸಹ,ಅವರ ಸಂಖ್ಯೆಯನ್ನು ಕಡಿಮೆ ಮಾಡಬಾರದು, ಹೆಚ್ಚಿಸಬೇಕು. ನಂತರ ಅದು ತ್ವರಿತವಾಗುತ್ತದೆ ಎಂಬ ಚರ್ಚೆ ಇತ್ತು. ಆ ವಿಷಯ ಈಗ ಬಂದಿದೆ, ಹಿಂದಿನ 33% ಸಂಖ್ಯೆಯನ್ನು ಹೆಚ್ಚಿಸಬೇಕು, ಇದರಿಂದ ಯಾರೂ ತಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಭಾವಿಸುವುದಿಲ್ಲ. ಹೊಸ ಬಲವನ್ನು ಸೇರಿಸಲಾಗುತ್ತದೆ, ಹೆಚ್ಚುವರಿ ಬಲವನ್ನು ಸೇರಿಸಲಾಗುತ್ತದೆ. ಸದನದ ಸಂಯೋಜನೆಯನ್ನು ಸಹ ಸರಿಹೊಂದಿಸಲಾಗುತ್ತದೆ, ನಾವು ಈಗಾಗಲೇ ಯೋಚಿಸಿದಂತೆ ಮತ್ತು ಅದಕ್ಕೆ ಸ್ಥಳವನ್ನು ಸಿದ್ಧಪಡಿಸಿದಂತೆ.

ಸನ್ಮಾನ್ಯ ಸಭಾಧ್ಯಕ್ಷರೇ,

ಲಘುವಾಗಿ ಹೇಳುವುದಾದರೆ ನಾನು ಹೇಳಲೇಬೇಕು, ಪ್ರತಿಯೊಬ್ಬರಿಗೂ ತಮ್ಮದೇ ಆದ ರಾಜಕೀಯ ಕಾರಣಗಳಿವೆ, ಸೋಲಿನ ಭಯವು ಸ್ವಲ್ಪ ಆಶ್ಚರ್ಯಕರವಾಗಿದೆ. ಆದರೆ ನಮ್ಮ ಸಂಪ್ರದಾಯದಲ್ಲಿ, ಒಳ್ಳೆಯ ಕೆಲಸ ಮಾಡಿದಾಗಲೆಲ್ಲಾ, ದುಷ್ಟ ಕಣ್ಣನ್ನು ದೂರವಿಡಲು ನಾವು ಕಪ್ಪು ಚುಕ್ಕೆ ಹಾಕುತ್ತೇವೆ. ಕಪ್ಪು ಚುಕ್ಕೆ ಹಾಕಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ!

ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Nepal praises India's efforts in times of crisis; calls PM Modi 'exceptionally generous'

Media Coverage

Nepal praises India's efforts in times of crisis; calls PM Modi 'exceptionally generous'
NM on the go

Nm on the go

Always be the first to hear from the PM. Get the App Now!
...
List of Outcomes: Prime Minister’s State Visit to Uzbekistan
August 30, 2026

MoUs and Agreements

Sl. No.

Title

1.

Cultural Exchange Programme between the Government of the Republic of India and the Government of the Republic of Uzbekistan for the years 2026-30.

2.

Letter of Intent between the Ministry of External Affairs of the Republic of India and the Cultural Heritage Agency of the Republic of Uzbekistan for the conservation and restoration of ancient buddhist sites of Fayaz Tepa and KaraTepa located in Termez, Uzbekistan.

3.

Memorandum of Understanding on Cooperation in the field of archival work between the National Archives under the Ministry of Culture of India and the Agency "Uzarchive" under the Ministry of Justice of the Republic of Uzbekistan.

4.

Memorandum of Understanding between the Government of the Republic of India and the Government of the Republic of Uzbekistan on cooperation in the field of Ayurveda and other traditional systems of medicine.

5.

Memorandum of Understanding between the Ministry of Mines of the Republic of India and Ministry of Mining Industry and Geology of the Republic of Uzbekistan on Cooperation in the fields of Geology and Mineral Resources.

6.

Partnership Program on cooperation between the Ministry of Tourism of the Republic of India and the Tourism Committee of the Republic of Uzbekistan in the field of tourism for 2026-28.

7.

Memorandum of Understanding between The Sushma Swaraj Institute of Foreign Service, Ministry of External Affairs, Republic of India and the Diplomatic Academy at the University of World Economy and Diplomacy, Ministry of Foreign Affairs of the Republic of Uzbekistan.

8.

Memorandum of Understanding (MoU) between the Ministry of Finance of the Republic of India and the Ministry of Economy and Finance of the Republic of Uzbekistan for an Economic and Financial Dialogue.

9.

Agreement between the Ministry of Environment and Forest and Climate Change of the Republic of India and National Committee on Ecology and Climate Change of the Republic of Uzbekistan on cooperation in the field of environmental protection.

10.

Memorandum of Understanding between the Government of the Republic of India and the Government of the Republic of Uzbekistan on Cooperation in the Field of Higher Education and Scientific Research.

11.

Cooperation Agreement between the Gujarat state of the Republic of India and the Samarkand region of the Republic of Uzbekistan of establishment of partnership relations.

Announcements

Sl. No.

Title

1.

Elevating the India-Uzbekistan Strategic Partnership to a Comprehensive Strategic Partnership

2.

Grant of USD 1 million for afforestation in the Aral Sea region

3.

 Lal Bahadur Shastri Scholarship for Hindi Language (100 Scholarships)

4.

ICCR Sanskrit Chair at Tashkent State University of Oriental Studies

5.

Commercial Agreement between NPCI International Payments Ltd (NIPL) with National Interbank Processing Centre JSC (NIPC), Uzbekistan to enable UPI Apps of India to scan national QR - UZQR for making merchant payments in Uzbekistan.