Dr. Singh's life teaches future generations how to rise above adversity and achieve great heights: PM
Dr. Singh will always be remembered as a kind person, a learned economist, and a leader dedicated to reforms: PM
Dr. Singh's distinguished parliamentary career was marked by his humility, gentleness, and intellect: PM
Dr. Singh always rose above party politics, maintaining contact with individuals from all parties and being easily accessible to everyone: PM

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನವು ನಮ್ಮ ಹೃದಯವನ್ನು ಆಳವಾದ ಗಾಯ ಮಾಡಿದೆ. ಅವರ ಅಗಲಿಕೆಯಿಂದ ನಮಗೆ ಅಪಾರ ನಷ್ಟವಾಗಿದೆ. ವಿಭಜನೆಯ ಸಮಯದಲ್ಲಿ ಭಾರತಕ್ಕೆ ಬಂದ ನಂತರ ತುಂಬಾ ಕಳೆದುಕೊಂಡಿದ್ದ ಅವರು ನಂತರ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದು ಸಾಮಾನ್ಯ ಸಾಧನೆಯಲ್ಲ. ಅವರ ಜೀವನವು ಭವಿಷ್ಯದ ಪೀಳಿಗೆಗೆ ಕಷ್ಟಗಳು ಮತ್ತು ಸವಾಲುಗಳನ್ನು ಮೀರಿ ಎತ್ತರಕ್ಕೆ ಏರುವುದು ಹೇಗೆ ಎಂಬ ಪಾಠವಾಗಿದೆ.

ಅವರು ಯಾವಾಗಲೂ ದಯೆಯುಳ್ಳ ವ್ಯಕ್ತಿ, ಪಾಂಡಿತ್ಯಪೂರ್ಣ ಅರ್ಥಶಾಸ್ತ್ರಜ್ಞ ಮತ್ತು ಸುಧಾರಣೆಗಳಿಗೆ ಸಮರ್ಪಿತ ನಾಯಕರಾಗಿ ನೆನಪಿನಲ್ಲಿ ಉಳಿಯುತ್ತಾರೆ. ಅರ್ಥಶಾಸ್ತ್ರಜ್ಞರಾಗಿ, ಅವರು ಭಾರತ ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಸವಾಲಿನ ಸಮಯದಲ್ಲಿ, ಅವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಪಾತ್ರವನ್ನು ನಿರ್ವಹಿಸಿದರು. ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಶ್ರೀ ಪಿ.ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದರು ಮತ್ತು ಹೊಸ ಆರ್ಥಿಕ ದಿಕ್ಕಿಗೆ ದಾರಿ ಮಾಡಿಕೊಟ್ಟರು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಧಾನಿಯಾಗಿ ಅವರು ನೀಡಿದ ಕೊಡುಗೆಗಳನ್ನು ಯಾವಾಗಲೂ ಗೌರವಿಸಲಾಗುತ್ತದೆ.

ಜನರಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವರ ಬದ್ಧತೆ ಶಾಶ್ವತವಾಗಿ ಗೌರವಾನ್ವಿತವಾಗಿದೆ. ಡಾ. ಮನಮೋಹನ್ ಸಿಂಗ್ ಅವರ ಜೀವನವು ಪ್ರಾಮಾಣಿಕತೆ ಮತ್ತು ಸರಳತೆಯ ಪ್ರತಿಬಿಂಬವಾಗಿತ್ತು. ಅವರೊಬ್ಬ ಅಸಾಧಾರಣ ಸಂಸದೀಯ ಪಟು. ಅವರ ನಮ್ರತೆ, ಸೌಮ್ಯತೆ ಮತ್ತು ಬುದ್ಧಿಶಕ್ತಿ ಅವರ ಸಂಸದೀಯ ಜೀವನವನ್ನು ವ್ಯಾಖ್ಯಾನಿಸಿತು. ಈ ವರ್ಷದ ಆರಂಭದಲ್ಲಿ, ರಾಜ್ಯಸಭೆಯಲ್ಲಿ ಅವರ ಅಧಿಕಾರಾವಧಿ ಮುಗಿದಾಗ, ಸಂಸತ್ ಸದಸ್ಯರಾಗಿ ಅವರ ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ಎಂದು ನಾನು ನೆನಪಿಸಿಕೊಳ್ಳುತ್ತೇನೆ. ಸಂಸತ್ತಿನ ಅಧಿವೇಶನಗಳ ನಿರ್ಣಾಯಕ ಕ್ಷಣಗಳಲ್ಲಿಯೂ ಅವರು ಗಾಲಿಕುರ್ಚಿಯಲ್ಲಿ ಹಾಜರಾಗುತ್ತಾರೆ ಮತ್ತು ತಮ್ಮ ಸಂಸತ್ತಿನ ಕರ್ತವ್ಯಗಳನ್ನು ಪೂರೈಸುತ್ತಿದ್ದರು.

ವಿಶ್ವದ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದರೂ ಮತ್ತು ಸರ್ಕಾರದ ಹಲವಾರು ಉನ್ನತ ಹುದ್ದೆಗಳನ್ನು ಹೊಂದಿದ್ದರೂ, ಅವರು ತಮ್ಮ ವಿನಮ್ರ ನಡತೆ, ಸಭ್ಯತೆಯ ಮೌಲ್ಯಗಳನ್ನು ಎಂದಿಗೂ ಮರೆಯಲಿಲ್ಲ. ಪಕ್ಷಾತೀತ ರಾಜಕೀಯದಿಂದ ಮೇಲಕ್ಕೆ ಏರಿದ ಅವರು ಯಾವಾಗಲೂ ಪಕ್ಷದ ರೇಖೆಗಳಾದ್ಯಂತ ಜನರೊಂದಿಗೆ ಸಂಪರ್ಕವನ್ನು ಉಳಿಸಿಕೊಂಡರು ಮತ್ತು ಎಲ್ಲರಿಗೂ ಹತ್ತಿರವಾಗಿದ್ದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ನಡೆಸಿದ್ದೇನೆ. ದೆಹಲಿಗೆ ಬಂದ ನಂತರವೂ ಅವರನ್ನು ಆಗಾಗ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ದೇಶದ ಬಗ್ಗೆ ನಮ್ಮ ಚರ್ಚೆಗಳು ಮತ್ತು ನಮ್ಮ ಸಭೆಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಇತ್ತೀಚಿಗೆ ಅವರ ಜನ್ಮದಿನದಂದು ನಾನು ಅವರೊಂದಿಗೆ ಸಂವಾದ ನಡೆಸಿದ್ದೆ.

ಈ ಕಷ್ಟದ ಕ್ಷಣದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ದೇಶದ ಎಲ್ಲಾ ನಾಗರಿಕರ ಪರವಾಗಿ, ನಾನು ಡಾ. ಮನಮೋಹನ್ ಸಿಂಗ್ ಅವರಿಗೆ ವಿನಮ್ರವಾಗಿ ಗೌರವ ಸಲ್ಲಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Since 2019, a total of 1,106 left wing extremists have been 'neutralised': MHA

Media Coverage

Since 2019, a total of 1,106 left wing extremists have been 'neutralised': MHA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಡಿಸೆಂಬರ್ 2025
December 13, 2025

PM Modi Citizens Celebrate India Rising: PM Modi's Leadership in Attracting Investments and Ensuring Security