“ಮಣಿಪುರದ ತಮ್ಮ ಇತಿಹಾಸ ಏರಿಳಿತಗಳನ್ನು ಎದುರಿಸುವಾಗ ಅವರ ದೃಢತೆ ಮತ್ತು ಏಕತೆ ಅವರ ನಿಜವಾದ ಶಕ್ತಿಯಾಗಿದೆ’’
“ಮಣಿಪುರ ರಸ್ತೆ ಮತ್ತು ಬಂದ್ ಮಾಡುವುದರಿಂದ ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಪಡೆಯಲು ಅರ್ಹವಾಗಿದೆ’’
“ಮಣಿಪುರವನ್ನು ದೇಶದ ಕ್ರೀಡಾಶಕ್ತಿಯ ಕೇಂದ್ರವನ್ನಾಗಿ ಮಾಡಲು ಸರ್ಕಾರ ಬದ್ಧವಿದೆ’’
“ಈಶಾನ್ಯ ಪ್ರದೇಶವನ್ನು ಪೂರ್ವ ಕ್ರಿಯಾ ನೀತಿಯ ಕೇಂದ್ರವನ್ನಾಗಿ ಮಾಡುವ ದೃಷ್ಟಿಯಲ್ಲಿ ಮಣಿಪುರವು ಪ್ರಮುಖ ಪಾತ್ರ ವಹಿಸಲಿದೆ’’
“ರಾಜ್ಯದ ಅಭಿವೃದ್ಧಿ ಪಯಣದಲ್ಲಿನ ಅಡೆತಡೆಗಳನ್ನು ದೂರಮಾಡಲಾಗಿದೆ ಮತ್ತು ಮುಂದಿನ 25 ವರ್ಷ ಮಣಿಪುರದ ಅಭಿವೃದ್ಧಿಯ ಅಮೃತಕಾಲವಾಗಲಿದೆ’’

ಖುರುಮ್ ಜಾರಿ!

ನಮಸ್ಕಾರ್!

ಮಣಿಪುರ ರಾಜ್ಯ ರಚನೆಯಾಗಿ 50 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಮಹಾಜನತೆಗೆ ಅಭಿನಂದನೆಗಳು!

ಮಣಿಪುರವನ್ನು ರಾಜ್ಯವಾಗಿ ರೂಪಿಸಿದ ಸಾಧನೆಯ ಹಿಂದೆ ಎಷ್ಟೋ ಧೀಮಂತ ನಾಯಕರು ಮತ್ತು ಜನರ ಪರಿಶ್ರಮ ಮತ್ತು ತ್ಯಾಗವಿದೆ. ಅಂತಹ ಪ್ರತಿಯೊಬ್ಬ ವ್ಯಕ್ತಿಗೂ ನಾನು ಗೌರವಪೂರ್ವಕವಾಗಿ ತಲೆಬಾಗುತ್ತೇನೆ. ಕಳೆದ 50 ವರ್ಷಗಳಲ್ಲಿ ಮಣಿಪುರ ಹಲವು ಏರಿಳಿತಗಳನ್ನು ಕಂಡಿದೆ. ಮಣಿಪುರದ ಜನರು ಪ್ರತಿ ಕ್ಷಣವನ್ನು ಒಗ್ಗಟ್ಟಿನಿಂದ ಬದುಕಿದ್ದಾರೆ, ಪ್ರತಿ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿದ್ದಾರೆ. ಇದೇ ಮಣಿಪುರದ ನಿಜವಾದ ಶಕ್ತಿ. ನಿಮ್ಮ ನಡುವೆ ಬರಲು ಮತ್ತು ನಿಮ್ಮ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಪೂರೈಸಲು ಕಳೆದ 7 ವರ್ಷಗಳಿಂದ ನನ್ನ ನಿರಂತರ ಪ್ರಯತ್ನ ಸಾಗಿದೆ. ನಿಮ್ಮ ನಿರೀಕ್ಷೆಗಳು ಮತ್ತು ಭಾವನೆಗಳನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಇದು ಕಾರಣವಾಗಿದೆ. ಮಣಿಪುರವು ಪ್ರತಿಭಟನೆ ಮತ್ತು ದಿಗ್ಬಂಧನಗಳಿಂದ ಹೊರತಾಗಿ ಶಾಂತಿ ಮತ್ತು ಸ್ವಾತಂತ್ರ್ಯ(ಮುಕ್ತತೆ)ವನ್ನು ಕಾಪಾಡಿಕೊಂಡು ಬಂದಿದೆ. ಇದು ಮಣಿಪುರದ ಮಹಾಜನತೆಯ ಪ್ರಮುಖ ಮಹತ್ವಾಕಾಂಕ್ಷೆಯೂ ಆಗಿದೆ. ಮಣಿಪುರದ ಜನರು ಸುದೀರ್ಘ ಕಾಲದ ನಂತರ ಬಿರೇನ್ ಸಿಂಗ್ ಜಿ ನೇತೃತ್ವದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಸಾಧಿಸಿದ್ದಾರೆ. ಇದು ನನಗೆ ನಿಜಕ್ಕೂ ಸಂತೋಷವಾಗಿದೆ. ಅಭಿವೃದ್ಧಿಯು ಇಂದು ಯಾವುದೇ ತಾರತಮ್ಯವಿಲ್ಲದೆ ಮಣಿಪುರದ ಪ್ರತಿಯೊಂದು ಪ್ರದೇಶವನ್ನು ತಲುಪುತ್ತಿದೆ. ಇದು ವೈಯಕ್ತಿಕವಾಗಿ ನನಗೆ ಅತ್ಯಂತ ತೃಪ್ತಿಯ ವಿಷಯವಾಗಿದೆ.

ಸ್ನೇಹಿತರೆ,

ಮಣಿಪುರವು ತನ್ನ ನೈಜ ಸಾಮರ್ಥ್ಯವನ್ನು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಮತ್ತು ಇಲ್ಲಿನ ಯುವಕರ ಸಾಮರ್ಥ್ಯವು ಜಾಗತಿಕ ವೇದಿಕೆಯಲ್ಲಿ ಬೆಳಗುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಆಟದ ಮೈದಾನದಲ್ಲಿ ಮಣಿಪುರದ ಗಂಡು, ಹೆಣ್ಣು ಮಕ್ಕಳ ಉತ್ಸಾಹವನ್ನು ನಾವು ನೋಡಿದಾಗ, ಇಡೀ ದೇಶವೇ ಹೆಮ್ಮೆಯಿಂದ ತಲೆ ಎತ್ತಿ ಬೀಗುತ್ತದೆ. ಮಣಿಪುರದ ಯುವಕರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯವನ್ನು ದೇಶದ ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡಲು ನಾವು ಉಪಕ್ರಮ ಕೈಗೊಂಡಿದ್ದೇವೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದಿನ ಕಾರಣ ಇದೇ ಆಗಿದೆ. ಕ್ರೀಡೆ, ಕ್ರೀಡಾ ಶಿಕ್ಷಣ, ಕ್ರೀಡಾ ನಿರ್ವಹಣೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಇದು ಉತ್ತಮ ಪ್ರಯತ್ನವಾಗಿದೆ. ಕ್ರೀಡೆ ಮಾತ್ರವಲ್ಲ, ಮಣಿಪುರದ ಯುವಕರು ನವೋದ್ಯಮ ಮತ್ತು ಉದ್ಯಮಶೀಲತೆಯ ವಿಷಯದಲ್ಲೂ ಅದ್ಭುತಗಳನ್ನು ಮಾಡುತ್ತಿದ್ದಾರೆ. ಇದರಲ್ಲಿಯೂ ಇಲ್ಲಿನ ಸಹೋದರಿಯರ ಪಾತ್ರ ಶ್ಲಾಘನೀಯ. ಮಣಿಪುರದ ಕರಕುಶಲ ಸಾಮರ್ಥ್ಯವನ್ನು ಶ್ರೀಮಂತಗೊಳಿಸಲು ಸರ್ಕಾರವು ಬದ್ಧತೆಯಿಂದ ಕೆಲಸ ಮಾಡುತ್ತಿದೆ.

ಸ್ನೇಹಿತರೆ,

ಈಶಾನ್ಯ ರಾಜ್ಯಗಳನ್ನು “ಆಕ್ಟ್ ಈಸ್ಟ್ ನೀತಿ”ಯ ಕೇಂದ್ರವನ್ನಾಗಿ ಮಾಡಲು ನಾವು ಮುನ್ನಡೆಯುತ್ತಿರುವ ದೃಷ್ಟಿಕೋನದಲ್ಲಿ ಮಣಿಪುರದ ಪಾತ್ರವು ಪ್ರಮುಖವಾಗಿದೆ. ಮೊದಲ ಪ್ಯಾಸೆಂಜರ್ ರೈಲಿಗಾಗಿ ನೀವು 50 ವರ್ಷ ಕಾಯಬೇಕಾಯಿತು. ರೈಲು ಸೇವೆಗಳು ಇಷ್ಟು ದೀರ್ಘ ಅವಧಿಯ ನಂತರ, ಹಲವು ದಶಕಗಳ ನಂತರ ಮಣಿಪುರವನ್ನು ತಲುಪಿವೆ. ಈ ಕನಸು ನನಸಾಗುತ್ತಿರುವುದನ್ನು ಜನರು ನೋಡಿದಾಗ, ಪ್ರತಿಯೊಬ್ಬ ಮಣಿಪುರದ ನಾಗರಿಕರೂ ಇದಕ್ಕೆ ‘ಡಬಲ್ ಎಂಜಿನ್ ಸರ್ಕಾರ’ ಕಾರಣ ಎಂದು ಹೇಳುತ್ತಾರೆ. ಇಂತಹ ಮೂಲಸೌಕರ್ಯ ಅಭಿವೃದ್ಧಿಪಡಿಸಲು ದಶಕಗಳೇ ಬೇಕಾಯಿತು. ಆದರೆ ಈಗ, ಮಣಿಪುರದಲ್ಲಿ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಕೆಲಸ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಇಂದು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಸಂಪರ್ಕ ಯೋಜನೆಗಳ ಕಾಮಗಾರಿಯು ಶರವೇಗದಲ್ಲಿ ನಡೆಯುತ್ತಿದೆ. ಇದು ಜಿರಿಬಾಮ್-ತುಪುಲ್-ಇಂಫಾಲ್ ರೈಲು ಮಾರ್ಗವನ್ನು ಸಹ ಒಳಗೊಂಡಿದೆ. ಅಂತೆಯೇ, ಇಂಫಾಲ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಸ್ಥಾನಮಾನ ಪಡೆಯುವ ಜತೆಗೆ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನೊಂದಿಗೆ ಈಶಾನ್ಯ ರಾಜ್ಯಗಳ ಸಂಪರ್ಕ ಸುಧಾರಿಸಿದೆ. ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಕಾಮಗಾರಿ ಸಹ ಭರದಿಂದ ಸಾಗುತ್ತಿದೆ. ಈಶಾನ್ಯದಲ್ಲಿ 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗುತ್ತಿರುವ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಲಾಭವನ್ನು ಮಣಿಪುರ ಜನತೆ ಪಡೆಯಲಿದ್ದಾರೆ.

ಸಹೋದರ ಸಹೋದರಿಯರೇ,

ರಾಜ್ಯ ಉದಯವಾಗಿ 50 ವರ್ಷಗಳ ಸುದೀರ್ಘ ಪ್ರಯಾಣದ ನಂತರ ಇಂದು ಮಣಿಪುರ ಮಹತ್ವದ ಘಟ್ಟದಲ್ಲಿದೆ. ಮಣಿಪುರ ಕ್ಷಿಪ್ರ ಅಭಿವೃದ್ಧಿಯತ್ತ ಪಯಣ ಆರಂಭಿಸಿದೆ. ಇದ್ದ ಅಡೆತಡೆಗಳು ಈಗ ದೂರವಾಗಿವೆ. ಈಗ ನಾವು ಇಲ್ಲಿಂದ ಹಿಂತಿರುಗಿ ನೋಡಬೇಕಾಗಿಲ್ಲ. ನಮ್ಮ ದೇಶವು ತನ್ನ ಸ್ವಾತಂತ್ರ್ಯ ಪಡೆದ 100 ವರ್ಷಗಳನ್ನು ಪೂರ್ಣಗೊಳಿಸುವಾಗ, ಮಣಿಪುರ ರಾಜ್ಯೋತ್ಸವಕ್ಕೆ ರಾಜ್ಯತ್ವದ 75 ವರ್ಷಗಳು ತುಂಬಿ, ಅಮೃತ ಮಹೋತ್ಸವ ಆಚರಿಸಿಕೊಳ್ಳಲಿದೆ. ಆದ್ದರಿಂದ, ಮಣಿಪುರದ ಅಭಿವೃದ್ಧಿಗೆ ಇದು ಪುಣ್ಯಕಾಲವಾಗಿದೆ. ಮಣಿಪುರದ ಅಭಿವೃದ್ಧಿಯನ್ನು ದೀರ್ಘಕಾಲದಿಂದ ಕೈಬಿಟ್ಟ ಶಕ್ತಿಗಳಿಗೆ ಮತ್ತೆ ತಲೆ ಎತ್ತುವ ಅವಕಾಶ ನೀಡಬಾರದು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈಗ ನಾವು ಮುಂದಿನ ದಶಕದಲ್ಲಿ ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ನಡೆಯಬೇಕಾಗಿದೆ. ವಿಶೇಷವಾಗಿ ಕಿರಿಯ ಪುತ್ರರು ಮತ್ತು ಪುತ್ರಿಯರು ಮುಂದೆ ಬರಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ಉಜ್ವಲ ಭವಿಷ್ಯದ ಬಗ್ಗೆ ನನಗೆ ಭರವಸೆ ಇದೆ. ಮಣಿಪುರ ಅಭಿವೃದ್ಧಿಯ ಡಬಲ್ ಎಂಜಿನ್‌ನೊಂದಿಗೆ ವೇಗದ ಗತಿಯಲ್ಲಿ ಮುನ್ನಡೆಯಬೇಕಾಗಿದೆ. ಮಣಿಪುರದ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ಮತ್ತೊಮ್ಮೆ ಶುಭಾಶಯಗಳು!

ತುಂಬು ಹೃದಯದ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Portraits of PVC recipients replace British officers at Rashtrapati Bhavan

Media Coverage

Portraits of PVC recipients replace British officers at Rashtrapati Bhavan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2025
December 17, 2025

From Rural Livelihoods to International Laurels: India's Rise Under PM Modi