ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಸ್ವಾವಲಂಬಿಯಾಗುವ ಹಾದಿಯನ್ನು ಪ್ರಾರಂಭಿಸಿದೆ: ಪ್ರಧಾನಮಂತ್ರಿ
ಇಂದು, ಸೌರಶಕ್ತಿಯಲ್ಲಿ ವಿಶ್ವದ ಅಗ್ರ 5 ದೇಶಗಳಲ್ಲಿ ಭಾರತ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ
ಭಾರತಕ್ಕೆ ಸ್ವಾವಲಂಬಿಯಾಗಲು ಎರಡು ಪ್ರಮುಖ ವಿಷಯಗಳ ಅಗತ್ಯವಿದೆ - ಇಂಧನ ಮತ್ತು ಸೆಮಿಕಂಡಕ್ಟರ್ ಗಳು. ಈ ಪ್ರಯಾಣದಲ್ಲಿ ಅಸ್ಸಾಂ ಮಹತ್ವದ ಪಾತ್ರ ವಹಿಸುತ್ತಿದೆ: ಪ್ರಧಾನಮಂತ್ರಿ
ನಾವು ನಿರಂತರವಾಗಿ ಅಸ್ಸಾಂನ ಗುರುತನ್ನು ಸಬಲೀಕರಣಗೊಳಿಸುತ್ತಿದ್ದೇವೆ: ಪ್ರಧಾನಮಂತ್ರಿ

ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಜಿ ಮತ್ತು ವಿಜಯ್ ಕುಮಾರ್ ಸಿನ್ಹಾ ಜಿ, ಇತರೆ ಗಣ್ಯ ಅತಿಥಿಗಳೆ ಮತ್ತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಬಿಹಾರದ ನನ್ನ ಲಕ್ಷಾಂತರ ಸಹೋದರಿಯರೆ - ನಿಮ್ಮೆಲ್ಲರಿಗೂ ನನ್ನ ಗೌರವಯುತ ಶುಭಾಶಯಗಳು.

ನಾನು ನನ್ನ ಮುಂದೆ ದೂರದರ್ಶನ ಪರದೆಯಲ್ಲಿ ನೋಡುತ್ತಿದ್ದೇನೆ, ನಾನಿಂದು ಲಕ್ಷಾಂತರ ಸಹೋದರಿಯರನ್ನು ನೋಡುತ್ತಿದ್ದೇನೆ. ಬಹುಶಃ, ಬಿಹಾರದ ಪ್ರತಿಯೊಂದು ಹಳ್ಳಿಯಲ್ಲಿ ಇದು ಒಂದು ದೊಡ್ಡ ಆಚರಣೆಯಾಗಿದೆ - ಅಂತಹ ಗಮನಾರ್ಹ ದೃಶ್ಯ ಇದಾಗಿದೆ. ಇಷ್ಟೊಂದು ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಪಡೆಯುವುದು ಜೀವನದಲ್ಲಿ ಇನ್ನೇನು ದೊಡ್ಡ ಅದೃಷ್ಟ ಬೇಕು?

ಸ್ನೇಹಿತರೆ,

ಈ ಶುಭ ಮಂಗಳವಾರದಂದು, ಬಹಳ ಶುಭಾರಂಭ ಮಾಡಲಾಗುತ್ತಿದೆ. ಇಂದು ಬಿಹಾರದ ತಾಯಂದಿರು ಮತ್ತು ಸಹೋದರಿಯರು ಹೊಸ ಸೌಲಭ್ಯವನ್ನು ಪಡೆಯುತ್ತಿದ್ದಾರೆ - ಜೀವಿಕಾ ನಿಧಿ ಸಖ್ ಸಹಕಾರಿ ಸಂಘ. ಇದರೊಂದಿಗೆ, ಪ್ರತಿ ಹಳ್ಳಿಯಲ್ಲಿ ಜೀವಿಕಾ ಜೊತೆ ಸಂಬಂಧ ಹೊಂದಿರುವ ಸಹೋದರಿಯರು ಈಗ ಹೆಚ್ಚು ಸುಲಭವಾಗಿ ಹಣ ಪಡೆಯಲು ಸಾಧ್ಯವಾಗುತ್ತದೆ; ಅವರು ಆರ್ಥಿಕ ಬೆಂಬಲ ಪಡೆಯುತ್ತಾರೆ. ಇದು ಅವರು ತೊಡಗಿಸಿಕೊಂಡಿರುವ ಕೆಲಸ ಮತ್ತು ವ್ಯವಹಾರಗಳನ್ನು ವಿಸ್ತರಿಸುವಲ್ಲಿ ಅವರಿಗೆ ಹೆಚ್ಚು ಸಹಾಯ ಮಾಡುತ್ತದೆ. ಜೀವಿಕಾ ನಿಧಿ ವ್ಯವಸ್ಥೆಯು ಸಂಪೂರ್ಣ ಡಿಜಿಟಲ್ ಆಗಿರುವುದನ್ನು ನೋಡಿ ನನಗೆ ವಿಶೇಷವಾಗಿ ಸಂತೋಷವಾಗಿದೆ. ಇದರರ್ಥ ಯಾರನ್ನೂ ಸಂಪರ್ಕಿಸುವ ಅಗತ್ಯವಿಲ್ಲ - ಎಲ್ಲಾ ಕೆಲಸಗಳನ್ನು ಫೋನ್ ಮೂಲಕವೇ ಪೂರ್ಣಗೊಳಿಸಬಹುದು. ಈ ಜೀವಿಕಾ ಸಹಕಾರಿ ಸಂಘಕ್ಕಾಗಿ ಬಿಹಾರದ ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗಮನಾರ್ಹ ಉಪಕ್ರಮಕ್ಕಾಗಿ, ನಾನು ಶ್ರೀ ನಿತೀಶ್ ಜಿ ಮತ್ತು ಬಿಹಾರದ ಎನ್‌ಡಿಎ ಸರ್ಕಾರವನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ.

 

ಸ್ನೇಹಿತರೆ,

‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ವು ಸಬಲೀಕೃತ ಮಹಿಳೆಯರ ಭದ್ರ ಬುನಾದಿಯ ಮೇಲೆ ನಿಂತಿದೆ. ಮಹಿಳೆಯರನ್ನು ಸಬಲೀಕರಣಗೊಳಿಸಲು, ಅವರ ಜೀವನದಿಂದ ಬರುವ ಪ್ರತಿಯೊಂದು ಕಷ್ಟವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ನಾವು ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಜೀವನವನ್ನು ಸುಲಭಗೊಳಿಸಲು ಬಹುಮುಖಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮಹಿಳೆಯರು ಬಯಲು ಮಲ ವಿಸರ್ಜನೆಯ ಅನಿವಾರ್ಯತೆಯಿಂದ ಮುಕ್ತರಾಗಲು ನಾವು ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ನಾವು ಕೋಟ್ಯಂತರ ಕಾಯಂ ಮನೆಗಳನ್ನು ನಿರ್ಮಿಸಿದ್ದೇವೆ, ಸಾಧ್ಯವಾದಾಗಲೆಲ್ಲಾ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಮಹಿಳೆ ಮನೆಯ ಮಾಲೀಕರಾದಾಗ, ಅವರ ಧ್ವನಿಯು ಹೆಚ್ಚಿನ ತೂಕವನ್ನು ಹೊಂದಿರುತ್ತದೆ.

ತಾಯಂದಿರು ಮತ್ತು ಸಹೋದರಿಯರೆ,

ಶುದ್ಧ ಕುಡಿಯುವ ನೀರಿನ ಬಿಕ್ಕಟ್ಟು ಕೊನೆಗೊಳಿಸಲು, ನಾವು ಹರ್ ಘರ್ ಜಲ ಯೋಜನೆ ಪ್ರಾರಂಭಿಸಿದ್ದೇವೆ. ತಾಯಂದಿರು ಮತ್ತು ಸಹೋದರಿಯರು ಚಿಕಿತ್ಸೆ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸದಂತೆ 5 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ಕೇಂದ್ರ ಸರ್ಕಾರವು ಇಂದು ಉಚಿತ ಪಡಿತರ ಯೋಜನೆಯನ್ನು ಸಹ ನಡೆಸುತ್ತಿದೆ. ಈ ಯೋಜನೆಯು ಪ್ರತಿಯೊಬ್ಬ ತಾಯಿಯನ್ನು ಪ್ರತಿದಿನ ತನ್ನ ಮಕ್ಕಳಿಗೆ ಹೇಗೆ ಆಹಾರ ನೀಡುವುದು ಎಂಬ ಚಿಂತೆಯಿಂದ ಮುಕ್ತಗೊಳಿಸಿದೆ. ಮಹಿಳೆಯರ ಆದಾಯ ಹೆಚ್ಚಿಸಲು, ನಾವು ಅವರನ್ನು ಲಖ್ಪತಿ ದೀದಿಗಳು, ಡ್ರೋನ್ ದೀದಿಗಳು ಮತ್ತು ಬ್ಯಾಂಕ್ ಸಖಿಗಳನ್ನಾಗಿ ಮಾಡುತ್ತಿದ್ದೇವೆ. ಈ ಎಲ್ಲಾ ಉಪಕ್ರಮಗಳು ತಾಯಂದಿರು ಮತ್ತು ಸಹೋದರಿಯರಿಗೆ ಸೇವೆ ಸಲ್ಲಿಸುವ ಒಂದು ದೊಡ್ಡ ಪವಿತ್ರ ಧ್ಯೇಯವಾಗಿದೆ. ಇಂದು ನಾನು ಈ ಕಾರ್ಯಕ್ರಮದ ಮೂಲಕ ನಿಮಗೆ ಭರವಸೆ ನೀಡುತ್ತೇನೆ, ಮುಂಬರುವ ತಿಂಗಳುಗಳಲ್ಲಿ ಬಿಹಾರದ ಎನ್‌ಡಿಎ ಸರ್ಕಾರವು ಈ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸಲಿದೆ.

ಸ್ನೇಹಿತರೆ,

ಬಿಹಾರವು ಪವಿತ್ರ ಭೂಮಿಯಾಗಿದ್ದು, ಅಲ್ಲಿ 'ಮಾತೃಶಕ್ತಿ'ಯ ಗೌರವ, ತಾಯಿಯ ಮೇಲಿನ ಗೌರವ ಯಾವಾಗಲೂ ಅತ್ಯುನ್ನತವಾಗಿದೆ. ಇಲ್ಲಿ, ಜನರು ಗಂಗಾ ಮೈಯಾ, ಕೋಸಿ ಮೈಯಾ, ಗಂಡಕಿ ಮೈಯಾ, ಪನ್ಪುನ್ ಮೈಯಾಗಳನ್ನು ಪೂಜಿಸುತ್ತಾರೆ. ನಾವೆಲ್ಲರೂ ಜಾನಕಿ ದೇವತೆ ಈ ಭೂಮಿಯ ಮಗಳು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಬಿಹಾರದ ಸಂಸ್ಕೃತಿಯಲ್ಲಿ ಬೆಳೆದ ಈ ಸಿಯಾ ಧಿಯಾ ಜಗತ್ತಿನಲ್ಲಿ ತಾಯಿ ಸೀತಾ ಪೂಜಿಸಲ್ಪಟ್ಟಳು. ಛತ್ತಿ ಮೈಯಾ ಮುಂದೆ ನಮಸ್ಕರಿಸುವ ಮೂಲಕ, ನಾವೆಲ್ಲರೂ ಧನ್ಯರು ಎಂದು ಭಾವಿಸುತ್ತೇವೆ. ಕೆಲವೇ ದಿನಗಳಲ್ಲಿ, ನವರಾತ್ರಿಯ ಪವಿತ್ರ ಹಬ್ಬ ಪ್ರಾರಂಭವಾಗುತ್ತದೆ. ದೇಶಾದ್ಯಂತ, ಜನರು ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸುತ್ತಾರೆ. ಆದರೆ ಬಿಹಾರ ಮತ್ತು ಪೂರ್ವಾಂಚಲ್ ಪ್ರದೇಶದಲ್ಲಿ, ನವದುರ್ಗೆಯ ಜೊತೆಗೆ, ಸತ್ಬಾಹಿನಿ ಪೂಜೆಯ ಸಂಪ್ರದಾಯವೂ ಇದೆ - 7 ಸಹೋದರಿಯರನ್ನು ತಾಯಿಯ ದೈವಿಕ ರೂಪಗಳಾಗಿ ಪೂಜಿಸುವುದು, ಇದು ಬಿಹಾರದ ತಾಯಿಯ ಮೇಲಿನ ಆಳವಾದ ನಂಬಿಕೆ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುವ ಸಂಪ್ರದಾಯವಾಗಿದೆ. ತಾಯಂದಿರ ಬಗ್ಗೆ ಇದನ್ನು ಸರಿಯಾಗಿ ಹೇಳಲಾಗಿದೆ:

 

(ಅವಳು ಸ್ವಲ್ಪ ತಿಂದು, ಕಷ್ಟದಲ್ಲೇ ಬದುಕುತ್ತಾಳೆ, ಆದರೆ ಎಲ್ಲರ ಗೌರವವನ್ನು ರಕ್ಷಿಸುತ್ತಾಳೆ. ಅವಳ ಮಕ್ಕಳಿಗೆ ನೋವಾದರೆ ಅವಳಿಗೆ ಏನೂ ಸರಿ ಅನಿಸುವುದಿಲ್ಲ; ಇತರರು ಎಷ್ಟೇ ಪ್ರೀತಿಯವರಾಗಿದ್ದರೂ, ತಾಯಿಯ ಸ್ಥಾನವನ್ನು ಯಾರು ಸಹ ತುಂಬಲು ಸಾಧ್ಯವಿಲ್ಲ.)

ಸ್ನೇಹಿತರೆ,

ನಮ್ಮ ಸರ್ಕಾರಕ್ಕೆ ತಾಯಂದಿರ ಘನತೆ, ಅವರ ಗೌರವ ಮತ್ತು ಅವರ ಸ್ವಾಭಿಮಾನವು ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ತಾಯಿಯೇ ನಮ್ಮ ಜಗತ್ತು, ತಾಯಿಯೇ ನಮ್ಮ ಹೆಮ್ಮೆ. ಶ್ರೀಮಂತ ಸಂಪ್ರದಾಯಗಳ ಈ ಬಿಹಾರದಲ್ಲಿ ಕೆಲವೇ ದಿನಗಳ ಹಿಂದೆ ಏನಾಯಿತು - ನಾನು ಅದನ್ನು ಎಂದಿಗೂ ಊಹಿಸಿರಲಿಲ್ಲ, ಬಿಹಾರದ ನನ್ನ ಯಾವುದೇ ಸಹೋದರ ಸಹೋದರಿಯರು ಅಥವಾ ಭಾರತದ ಯಾವುದೇ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ನವರು, ನನ್ನ ತಾಯಿಯ ಮೇಲೆ ನಿಂದನೆಗಳನ್ನು ಮಾಡದರು. ಈ ಅವಮಾನಗಳು ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ, ಈ ರಾಷ್ಟ್ರದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಮಾಡಿದ ಅವಮಾನವಾಗಿತ್ತು. ಅದು ನಿಮ್ಮೆಲ್ಲರನ್ನೂ - ಪ್ರತಿಯೊಬ್ಬ ತಾಯಿ, ಪ್ರತಿಯೊಬ್ಬ ಮಗಳು, ಬಿಹಾರದ ಪ್ರತಿಯೊಬ್ಬ ಸಹೋದರನನ್ನು ಎಷ್ಟು ಆಳವಾಗಿ ನೋಯಿಸಿರಬೇಕು ಎಂಬುದು ನನಗೆ ತಿಳಿದಿದೆ. ನನ್ನ ಹೃದಯದಲ್ಲಿ ನಾನು ಹೊತ್ತಿರುವ ನೋವು ಬಿಹಾರದ ನನ್ನ ಜನರು ಅನುಭವಿಸುವ ಅದೇ ನೋವು ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ಇಂದು, ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರು ನನ್ನ ಮುಂದೆ ಸೇರಿರುವುದನ್ನು ನಾನು ನೋಡಿದಾಗ, ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸಿದಾಗ, ನಾನು ಕೂಡ ಒಬ್ಬ ಮಗನಾಗಿದ್ದೇನೆ. ಅನೇಕ ತಾಯಂದಿರು ಮತ್ತು ಸಹೋದರಿಯರು ನನ್ನ ಮುಂದೆ ನಿಂತಿರುವಾಗ, ನನ್ನ ದುಃಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನ್ನ ಹೃದಯ ನನ್ನನ್ನು ಒತ್ತಾಯಿಸುತ್ತಿದೆ, ಇದರಿಂದ ನಿಮ್ಮ ಆಶೀರ್ವಾದದೊಂದಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನನಗೆ ಸಿಗುತ್ತದೆ.

ತಾಯಂದಿರೇ ಮತ್ತು ಸಹೋದರಿಯರೆ,

ನಾನು ಸುಮಾರು 50–55 ವರ್ಷಗಳಿಂದ ಸಮಾಜ ಮತ್ತು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನಾನು ರಾಜಕೀಯಕ್ಕೆ ಬಂದದ್ದು ಬಹಳ ಸಮಯದ ನಂತರ. ಅದಕ್ಕೂ ಮೊದಲು, ಸಮಾಜಕ್ಕಾಗಿ ನಾನು ಮಾಡಬಹುದಾದ ಯಾವುದೇ ಸಣ್ಣ ಕೆಲಸವನ್ನು ಮಾಡಲು ಪ್ರಯತ್ನಿಸಿದೆ. ಪ್ರತಿದಿನ, ಪ್ರತಿ ಕ್ಷಣ, ನನ್ನ ದೇಶ ಮತ್ತು ನನ್ನ ದೇಶವಾಸಿಗಳಿಗಾಗಿ ನಾನು ಎಲ್ಲೆಲ್ಲಿ ಮತ್ತು ಯಾವಾಗ ಸಾಧ್ಯವೋ ಅಲ್ಲಿ ಪೂರ್ಣ ಸಮರ್ಪಣೆ ಮತ್ತು ಶ್ರಮದಿಂದ ಕೆಲಸ ಮಾಡಿದ್ದೇನೆ. ಈ ಎಲ್ಲದರಲ್ಲೂ, ನನ್ನ ತಾಯಿಯ ಆಶೀರ್ವಾದ, ನನ್ನ ತಾಯಿಯ ಪಾತ್ರ ಅಪಾರವಾಗಿದೆ. ನಾನು ಭಾರತ ಮಾತೆಯ ಸೇವೆ ಮಾಡಬೇಕಾಗಿತ್ತು, ಅದಕ್ಕಾಗಿ, ನನಗೆ ಜನ್ಮ ನೀಡಿದ ತಾಯಿ ನನ್ನನ್ನು ತನ್ನ ಸ್ವಂತ ನಿರೀಕ್ಷೆಗಳು ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸಿದರು.

 

ನನ್ನ ತಾಯಿ, "ಮಗನೇ, ಹೋಗು, ಈ ದೇಶದ ಕೋಟ್ಯಂತರ ತಾಯಂದಿರ ಸೇವೆ ಮಾಡು, ಈ ದೇಶದ ಬಡವರ ಸೇವೆ ಮಾಡು" ಎಂದು ಹೇಳಿ ನನ್ನನ್ನು ಆಶೀರ್ವದಿಸಿದರು. ನನ್ನ ತಾಯಿಯ ಆ ಆಶೀರ್ವಾದದಿಂದಲೇ ನಾನು ಈ ಹಾದಿಯಲ್ಲಿ ಹೊರಟೆ. ಅದಕ್ಕಾಗಿಯೇ ಇಂದು, ನಾನು ತುಂಬಾ ನೋವು ಅನುಭವಿಸುತ್ತಿದ್ದೇನೆ - ದೇಶ ಸೇವೆಗಾಗಿ ನನಗೆ ಆಶೀರ್ವಾದ ನೀಡಿದ, ನನ್ನನ್ನು ದೇಶ ಸೇವೆ ಮಾಡಲು ಕಳುಹಿಸಿದ ಅದೇ ತಾಯಿ. ಪ್ರತಿಯೊಬ್ಬ ತಾಯಿಯೂ, ತನ್ನ ಮಗ ತನ್ನ ಸೇವೆ ಮಾಡುತ್ತಾನೆ, ತನ್ನ ಮಗ ಬೆಳೆದಂತೆ ತನಗಾಗಿ ಏನಾದರೂ ಮಾಡುತ್ತಾನೆ ಎಂದು ಬಯಸುತ್ತಾಳೆ. ಆದರೆ ನನ್ನ ತಾಯಿ ತನ್ನನ್ನು ತಾನು ಕೇಳಿಕೊಳ್ಳುವ ಬದಲು, ನಿಮ್ಮಂತಹ ಕೋಟ್ಯಂತರ ತಾಯಂದಿರಿಗೆ ಸೇವೆ ಸಲ್ಲಿಸಲು ನನ್ನನ್ನು ಬಿಟ್ಟುಕೊಟ್ಟರು. ನನ್ನ ತಾಯಿ ಈ ಜಗತ್ತಿನಲ್ಲಿ ಇಲ್ಲ ಎಂದು ನಿಮಗೆಲ್ಲರಿಗೂ ತಿಳಿದಿದೆ. ಸ್ವಲ್ಪ ಸಮಯದ ಹಿಂದೆ, 100ನೇ ವಯಸ್ಸಿನಲ್ಲಿ, ಅವರು ನಮ್ಮನ್ನು ಅಗಲಿದರು. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ, ದೈಹಿಕವಾಗಿಯೂ ಇಲ್ಲದ ನನ್ನ ಆ ತಾಯಿಯನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ವೇದಿಕೆಯಿಂದ ಅತ್ಯಂತ ಕೆಟ್ಟ ಭಾಷೆಯಿಂದ ನಿಂದಿಸಲಾಯಿತು. ತಾಯಂದಿರೆ ಮತ್ತು ಸಹೋದರಿಯರೆ, ನಾನು ನಿಮ್ಮ ಮುಖಗಳನ್ನು ನೋಡಬಲ್ಲೆ - ನೀವು ಕೂಡ ತುಂಬಾ ನೋವು ಅನುಭವಿಸಿರಬೇಕು. ಕೆಲವು ತಾಯಂದಿರ ಕಣ್ಣುಗಳಲ್ಲಿ ನಾನು ಕಣ್ಣೀರು ನೋಡಬಲ್ಲೆ. ಇದು ತುಂಬಾ ದುಃಖಕರ, ನೋವುಂಟು ಮಾಡುವ ಸಂಗತಿ. ನನ್ನ ತಾಯಿಯ ತಪ್ಪು ಏನು, ಯಾವ ಅಪರಾಧ ಮಾಡಿದರು, ಅವರು ಅಂತಹ ಅವಮಾನಗಳಿಗೆ ಒಳಗಾಗಬೇಕಾಯಿತು?

ಸ್ನೇಹಿತರೆ,

ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳನ್ನು ಅಪಾರ ತ್ಯಾಗದಿಂದ ಬೆಳೆಸುತ್ತಾಳೆ. ನನ್ನ ಮುಂದೆ ಕುಳಿತಿರುವ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳನ್ನು ಅದೇ ಸಮರ್ಪಣೆ ಮತ್ತು ತ್ಯಾಗದಿಂದ ಬೆಳೆಸಿದ್ದಾಳೆ. ಒಬ್ಬ ತಾಯಿಗೆ, ತನ್ನ ಮಕ್ಕಳಿಗಿಂತ ದೊಡ್ಡದು ಯಾವುದೂ ಇಲ್ಲ. ನಾನು ಕೂಡ ನನ್ನ ಬಾಲ್ಯದಿಂದಲೂ ನನ್ನ ತಾಯಿಯನ್ನು ಆ ಪಾತ್ರದಲ್ಲಿ ನೋಡಿದ್ದೇನೆ. ಬಡತನದಲ್ಲಿ ಬದುಕುತ್ತಾ ಮತ್ತು ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದರೂ, ಅವರು ನಮ್ಮ ಕುಟುಂಬವನ್ನು, ನಮ್ಮೆಲ್ಲರ ಸಹೋದರ ಸಹೋದರಿಯರನ್ನು ಬೆಳೆಸಿದರು. ಮಳೆಗಾಲದ ಮೊದಲು, ನನ್ನ ತಾಯಿ ಮನೆ ಛಾವಣಿ ಸೋರದಂತೆ ನೋಡಿಕೊಳ್ಳಲು ಮನೆಯನ್ನು ಸಿದ್ಧಪಡಿಸುತ್ತಿದ್ದರು, ಇದರಿಂದ ಅವರ ಮಕ್ಕಳು ಶಾಂತಿಯುತವಾಗಿ ಮಲಗಬಹುದು ಎಂಬುದು ಅವರ ಮನದಾಸೆಯಾಗಿತ್ತು, ಅದು ನನಗೆ ನೆನಪಿದೆ. ಅವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು, ಆದರೆ ನಮಗೆ ಎಂದಿಗೂ ತಿಳಿಸುತ್ತಿರಲಿಲ್ಲ, ಅವರು ಕೆಲಸ ಮಾಡುತ್ತಲೇ ಇರುತ್ತಿದ್ದರು, ಕೆಲಸಕ್ಕೆ ಹೋಗುತ್ತಿದ್ದರು. ಅವರು ಒಂದು ದಿನ ವಿಶ್ರಾಂತಿ ಪಡೆದರೂ, ಅವರ ಮಕ್ಕಳು ಬಳಲುತ್ತಾರೆ ಎಂದು ಅವರಿಗೆ ತಿಳಿದಿತ್ತು. ಅವರು ನನ್ನ ತಂದೆಗೆ ತಮ್ಮ ಕಷ್ಟಗಳ ಪೂರ್ಣ ಪ್ರಮಾಣವನ್ನು ತಿಳಿಸುತ್ತಿರಲಿಲ್ಲ. ಅವರು ತನಗಾಗಿ ಹೊಸ ಸೀರೆಯನ್ನು ಎಂದಿಗೂ ಖರೀದಿಸಲಿಲ್ಲ, ಬದಲಾಗಿ, ತನ್ನ ಮಕ್ಕಳಿಗೆ ಬಟ್ಟೆಗಳನ್ನು ಖರೀದಿಸಲು ಅವರು ಪ್ರತಿ ಪೈಸೆಯನ್ನು ಉಳಿಸುತ್ತಿದ್ದರು. ನಾನು ನನ್ನ ಸ್ವಂತ ತಾಯಿಯ ಬಗ್ಗೆ ಮಾತನಾಡುತ್ತಿದ್ದರೂ, ನನ್ನ ದೇಶದಲ್ಲಿ ಅಂತಹ ತ್ಯಾಗದ ಜೀವನವನ್ನು ನಡೆಸುವ ಕೋಟ್ಯಂತರ ತಾಯಂದಿರು ಇದ್ದಾರೆ ಎಂದು ನನಗೆ ತಿಳಿದಿದೆ. ನನ್ನ ಮುಂದೆ ಕುಳಿತಿರುವ ತಾಯಂದಿರು ಮತ್ತು ಸಹೋದರಿಯರು ಸಹ ಅದೇ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಒಬ್ಬ ಬಡ ತಾಯಿ ತನ್ನ ಮಕ್ಕಳು ಶಿಕ್ಷಣ, ಉತ್ತಮ ಮೌಲ್ಯಗಳು ಮತ್ತು ಉತ್ತಮ ಭವಿಷ್ಯ ಪಡೆಯಲಿ ಎಂದು ತನ್ನ ಇಡೀ ಜೀವನವನ್ನು ಶ್ರಮಿಸುತ್ತಾಳೆ. ಅದಕ್ಕಾಗಿಯೇ ತಾಯಿಯ ಸ್ಥಾನವನ್ನು ದೇವರು ಮತ್ತು ಪೂರ್ವಜರಿಗಿಂತ ಉನ್ನತವೆಂದು ಪರಿಗಣಿಸಲಾಗುತ್ತದೆ. ಇದು ಬಿಹಾರದ ಸಂಪ್ರದಾಯವೂ ಆಗಿದೆ. ಪ್ರತಿಯೊಬ್ಬ ಬಿಹಾರಿಯೂ ಆಗಾಗ್ಗೆ ಹೀಗೆ ಹೇಳುತ್ತಾರೆ: “ತಾಯಿಯ ಸ್ಥಾನ ದೇವರು ಮತ್ತು ಪೂರ್ವಜರಿಗಿಂತ ಮೇಲಿದೆ. ತನ್ನ ಮಕ್ಕಳ ಸಲುವಾಗಿ, ಅವಳು ದೈವಿಕ ನೆರಳಿನಂತೆ ಬದುಕುತ್ತಾಳೆ, ಅವರನ್ನು ಪ್ರೀತಿಯಿಂದ ಬೆಳೆಸುತ್ತಾಳೆ, ನೋವು ಸಹಿಸಿಕೊಳ್ಳುತ್ತಾಳೆ ಮತ್ತು ಜಗತ್ತಿಗೆ ನಗುತ್ತಿರುವ ಮುಖವನ್ನು ತೋರಿಸುತ್ತಾಳೆ. ತಾಯಿ ಇಲ್ಲದೆ, ಯಾವುದೇ ಜೀವನ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದಕ್ಕಾಗಿಯೇ ತಾಯಿ ನಿಜವಾಗಿಯೂ ಶ್ರೇಷ್ಠಳು!”

ಅದಕ್ಕಾಗಿಯೇ ಸ್ನೇಹಿತರೆ,

ಕಾಂಗ್ರೆಸ್-ಆರ್‌ಜೆಡಿ ವೇದಿಕೆ ಮಾಡಿದ ನಿಂದನೆಗಳು ನನ್ನ ತಾಯಿಯ ಮೇಲೆ ಮಾತ್ರ ನಿರ್ದೇಶಿಸಲ್ಪಟ್ಟಿಲ್ಲ. ಆ ಕೆಟ್ಟ ಅವಮಾನಗಳನ್ನು ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಮೇಲೂ ಮಾಡಿದ್ದಾರೆ.

 

ಸ್ನೇಹಿತರೆ,

ಬಡ ತಾಯಿಯ ತ್ಯಾಗ, ಆಕೆಯ ಮಗನ ನೋವು - ಇವು ರಾಜ ಮನೆತನದಲ್ಲಿ ಜನಿಸಿದ ರಾಜ ಮನೆತನದ ಉತ್ತರಾಧಿಕಾರಿಗಳಿಗೆ ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ವಿಷಯಗಳು. ಈ ಗಣ್ಯರು ಎಂದು ಕರೆಯಲ್ಪಡುವವರು ತಮ್ಮ ಬಾಯಿಯಲ್ಲಿ ಬೆಳ್ಳಿ ಮತ್ತು ಚಿನ್ನದ ಚಮಚಗಳೊಂದಿಗೆ ಜನಿಸುತ್ತಾರೆ. ಅವರು ದೇಶದ ಮತ್ತು ಬಿಹಾರದ ಶಕ್ತಿ ತಮ್ಮ ವಂಶ ಪಾರಂಪರ್ಯ ಎಂದು ನಂಬುತ್ತಾರೆ. ಅಧಿಕಾರದ ಕುರ್ಚಿ ತಮಗೆ ಮಾತ್ರ ಸೇರಬೇಕೆಂದು ಅವರು ಭಾವಿಸುತ್ತಾರೆ! ಆದರೆ ನೀವು - ಈ ಮಹಾನ್ ರಾಷ್ಟ್ರದ ಜನರು - ಬಡ ತಾಯಿಯ ಶ್ರಮಶೀಲ ಮಗನನ್ನು ಆಶೀರ್ವದಿಸಿ ಅವನನ್ನು 'ಪ್ರಧಾನ ಸೇವಕ'(ಜನರ ಮುಖ್ಯ ಸೇವಕ) ಮಾಡಿದ್ದೀರಿ. ಇದು ಗಣ್ಯರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ವಿಷಯ. ಹಿಂದುಳಿದ ಅಥವಾ ಅತ್ಯಂತ ಹಿಂದುಳಿದ ವರ್ಗಗಳಿಂದ ಯಾರಾದರೂ ಮುಂದೆ ಬಂದಾಗ ಕಾಂಗ್ರೆಸ್ ಎಂದಿಗೂ ಸಹಿಸಲು ಸಾಧ್ಯವಾಗಲಿಲ್ಲ. ಗಣ್ಯರಾಗಿ ಶ್ರಮಶೀಲ ಜನರನ್ನು ಅವಮಾನಿಸುವುದು ಅವರ ಹಕ್ಕು ಎಂದು ಅವರು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಒಂದರ ನಂತರ ಒಂದರಂತೆ ನಿಂದನೆಗಳನ್ನು ಸುರಿಸುತ್ತಿದ್ದಾರೆ.

ತಾಯಂದಿರು ಮತ್ತು ಸಹೋದರಿಯರೆ,

ನೀವು ಸಹ ಅದನ್ನು ಕೇಳಿರಬೇಕು, ನೀವು ಸಹ ಅದನ್ನು ಓದಿರಬೇಕು - ಅವರು ನನ್ನ ಮೇಲೆ ಎಸೆದಿರುವ ರೀತಿಯ ನಿಂದನೆಗಳು. ಪಟ್ಟಿ ತುಂಬಾ ಉದ್ದವಾಗಿದೆ, ನನ್ನನ್ನು ಅವಮಾನಿಸುವ ವಿಷಯಕ್ಕೆ ಬಂದಾಗ ಅವರ ಯಾವುದೇ ಹಿರಿಯ ನಾಯಕರು ಹಿಂದೆ ಉಳಿದಿಲ್ಲ. ಈ ದ್ವೇಷ, ಗಣ್ಯರ ಈ ದುರಹಂಕಾರ, ಯಾವಾಗಲೂ ಶ್ರಮಜೀವಿಯ ವಿರುದ್ಧ ನಿಂದನೆಯ ರೂಪದಲ್ಲಿ ಹೊರಹೊಮ್ಮುತ್ತದೆ. ಕೆಲವೊಮ್ಮೆ ಅವರು ನನ್ನನ್ನು ಕೀಳು ಜಾತಿಯವನು, ಕೆಲವೊಮ್ಮೆ ಕೊಳಕು ಚರಂಡಿಯ ಹುಳು, ಕೆಲವೊಮ್ಮೆ ವಿಷಕಾರಿ ಹಾವು ಎಂದು ಕರೆಯುತ್ತಾರೆ. ಇತ್ತೀಚೆಗೆ, ಬಿಹಾರ ಚುನಾವಣಾ ಪ್ರಚಾರದಲ್ಲೂ ನೀವು ಕೇಳಿರಬಹುದು, ಅವರು ನನ್ನನ್ನು ಅತ್ಯಂತ ಕೆಟ್ಟ ಪದಗಳಿಂದ, ನಿಂದನೆಯ ಮೇಲೆ ನಿಂದನೆಯೊಂದಿಗೆ ಸಂಬೋಧಿಸುತ್ತಿದ್ದರು. ಮತ್ತೊಮ್ಮೆ ತಮ್ಮ ಗಣ್ಯ ಮನಸ್ಥಿತಿಯನ್ನು ಬಹಿರಂಗಪಡಿಸಿದರು. ಈ ಮನಸ್ಥಿತಿಯಿಂದಾಗಿ, ಈಗ ಅವರು ಈ ಜಗತ್ತಿನಲ್ಲಿ ಇಲ್ಲದ, ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ನನ್ನ ದಿವಂಗತ ತಾಯಿಯನ್ನು ಸಹ ನಿಂದಿಸುವಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ.

ಸ್ನೇಹಿತರೆ,

ತಾಯಂದಿರ ಮೇಲೆ ದೌರ್ಜನ್ಯ ನಡೆಸುವ, ಸಹೋದರಿಯರ ಮೇಲೆ ದೌರ್ಜನ್ಯ ನಡೆಸುವ ಮನಸ್ಥಿತಿ ಮಹಿಳೆಯರನ್ನು ದುರ್ಬಲರೆಂದು ಪರಿಗಣಿಸುತ್ತದೆ. ಈ ಮನಸ್ಥಿತಿ ಮಹಿಳೆಯರನ್ನು ಶೋಷಣೆ ಮತ್ತು ದಬ್ಬಾಳಿಕೆಯ ವಸ್ತುಗಳೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ, ಅಂತಹ ಮಹಿಳಾ ವಿರೋಧಿ ಮನಸ್ಥಿತಿ ಅಧಿಕಾರಕ್ಕೆ ಬಂದಾಗಲೆಲ್ಲಾ, ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ಮಹಿಳೆಯರು ಹೆಚ್ಚು ಬಳಲಿದ್ದಾರೆ. ಈ ಸತ್ಯವನ್ನು ಬಿಹಾರದ ನನ್ನ ತಾಯಂದಿರು ಮತ್ತು ಸಹೋದರಿಯರಿಗಿಂತ ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ! ಆರ್‌ಜೆಡಿ ಯುಗದಲ್ಲಿ, ಬಿಹಾರದಲ್ಲಿ ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲಾಗಿರಲಿಲ್ಲ, ಕೊಲೆ, ಸುಲಿಗೆ ಮತ್ತು ಅತ್ಯಾಚಾರ ಸಾಮಾನ್ಯವಾದಾಗ, ಆರ್‌ಜೆಡಿ ಸರ್ಕಾರವು ಕೊಲೆಗಾರರು ಮತ್ತು ಅತ್ಯಾಚಾರಿಗಳನ್ನು ರಕ್ಷಿಸುತ್ತಿತ್ತು. ಆ ಆಡಳಿತದ ಭಾರವನ್ನು ಯಾರು ಹೆಚ್ಚು ಹೊರಬೇಕಾಗಿತ್ತು? ಬಿಹಾರದ ತಾಯಂದಿರು, ಹೆಣ್ಣುಮಕ್ಕಳು ಮತ್ತು ಸಹೋದರಿಯರು, ಬಿಹಾರದ ಮಹಿಳೆಯರು. ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಹೆಜ್ಜೆ ಹಾಕುವುದು ಸುರಕ್ಷಿತವಾಗಿರಲಿಲ್ಲ. ತಮ್ಮ ಗಂಡಂದಿರು ಅಥವಾ ಪುತ್ರರು ಸಂಜೆ ಜೀವಂತವಾಗಿ ಹಿಂತಿರುಗುತ್ತಾರೆ ಎಂಬ ಭರವಸೆ ಅವರಿಗೆ ಇರಲಿಲ್ಲ. ಕುಟುಂಬಗಳು ಯಾವುದೇ ದಿನ ನಾಶವಾಗುವ ಭಯದಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಆಭರಣಗಳನ್ನು ಸುಲಿಗೆಗಾಗಿ ಮಾರಾಟ ಮಾಡಬೇಕಾಗಿತ್ತು. ಕೆಲವು ಮಾಫಿಯಾಗಳು ತಮ್ಮ ಮನೆಗಳಿಂದ ಅಪಹರಿಸಬಹುದು, ಅವರ ವೈವಾಹಿಕ ಜೀವನವು ರಾತ್ರೋರಾತ್ರಿ ಛಿದ್ರವಾಗಬಹುದು ಎಂದು ಅವರು ಭಯಪಟ್ಟರು. ಪ್ರತಿಯೊಬ್ಬ ಮಹಿಳೆಯೂ ಈ ನಿರಂತರ ಭಯದಲ್ಲಿ ಬದುಕಿದ್ದಳು! ಆ ಕತ್ತಲೆಯಿಂದ ಹೊರಬರಲು ಬಿಹಾರವು ದೀರ್ಘ ಹೋರಾಟ ನಡೆಸಿದೆ. ಬಿಹಾರದ ಮಹಿಳೆಯರು ಆರ್‌ಜೆಡಿಯನ್ನು ಅಧಿಕಾರದಿಂದ ತೆಗೆದುಹಾಕುವಲ್ಲಿ, ಅವರನ್ನು ಮತ್ತೆ ಮತ್ತೆ ಸೋಲಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಅದಕ್ಕಾಗಿಯೇ ಇಂದು, ಅದು ಆರ್‌ಜೆಡಿ ಆಗಿರಲಿ ಅಥವಾ ಕಾಂಗ್ರೆಸ್ ಆಗಿರಲಿ, ಈ ಜನರು ವಿಶೇಷವಾಗಿ ನಿಮ್ಮ ಮಹಿಳೆಯರ ಮೇಲೆ ಕೋಪಗೊಂಡಿದ್ದಾರೆ. ಬಿಹಾರದ ಪ್ರತಿಯೊಬ್ಬ ಮಹಿಳೆಯೂ ತಮ್ಮ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರು ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುತ್ತಿದ್ದಾರೆ, ಅವರು ನಿಮ್ಮನ್ನು ಶಿಕ್ಷಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು.

 

ಸ್ನೇಹಿತರೆ,

ಆರ್‌ಜೆಡಿಯಂತಹ ಪಕ್ಷಗಳು ಮಹಿಳೆಯರು ಮುಂದುವರಿಯುವುದನ್ನು ಎಂದಿಗೂ ಬಯಸಿರಲಿಲ್ಲ. ಅದಕ್ಕಾಗಿಯೇ ಅವರು ಮಹಿಳಾ ಮೀಸಲಾತಿಯನ್ನು ಬಲವಾಗಿ ವಿರೋಧಿಸಿದರು. ಬಡ ಮನೆಯಿಂದ ಮಹಿಳೆ ಮೇಲೆದ್ದಾಗ, ಅವರ ಹತಾಶೆ ಮತ್ತೆ ಗೋಚರಿಸುತ್ತದೆ. ಅದಕ್ಕಾಗಿಯೇ ಕಾಂಗ್ರೆಸ್ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರನ್ನು ಬಡ ಬುಡಕಟ್ಟು ಕುಟುಂಬದ ಮಗಳು ನಿರಂತರವಾಗಿ ಅವಮಾನಿಸುತ್ತದೆ.

ಸ್ನೇಹಿತರೆ,

ಮಹಿಳೆಯರ ಮೇಲಿನ ದ್ವೇಷ ಮತ್ತು ತಿರಸ್ಕಾರದ ರಾಜಕೀಯವನ್ನು ನಿಲ್ಲಿಸುವುದು ಅವಶ್ಯಕ. ಈ ರಾಷ್ಟ್ರದ ಜನರು ಎಚ್ಚರಿಕೆಯಿಂದ ಯೋಚಿಸಬೇಕು - ಯಾವ ರೀತಿಯ ಭಾಷೆಯನ್ನು ಬಳಸಲಾಗುತ್ತಿದೆ?

ತಾಯಂದಿರು ಮತ್ತು ಸಹೋದರಿಯರೆ,

ಇಂದಿನಿಂದ 20 ದಿನಗಳಲ್ಲಿ ನವರಾತ್ರಿ ಹಬ್ಬ ಪ್ರಾರಂಭವಾಗುತ್ತದೆ. 50  ದಿನಗಳ ನಂತರ, ನಾವು ಛಠಿ ಮೈಯಾಳನ್ನು ಪೂಜಿಸುತ್ತಾ ಛಠ್ ಪೂಜೆಯನ್ನು ಆಚರಿಸುತ್ತೇವೆ. ಬಿಹಾರದ ಜನರ ಮುಂದೆ, ತಾಯಂದಿರನ್ನು ಅವಮಾನಿಸುವವರಿಗೆ ನಾನು ಹೇಳಬಯಸುತ್ತೇನೆ: ಮೋದಿ ನಿಮ್ಮನ್ನು ಒಮ್ಮೆ ಕ್ಷಮಿಸಬಹುದು, ಆದರೆ ಭಾರತದ ಮಣ್ಣು ಎಂದಿಗೂ ತಾಯಿಯ ಅವಮಾನವನ್ನು ಸಹಿಸಿಲ್ಲ. ಅದಕ್ಕಾಗಿಯೇ ಆರ್‌ಜೆಡಿ ಮತ್ತು ಕಾಂಗ್ರೆಸ್ ಸತ್‌ಬಾಹಿನಿ ಮತ್ತು ಛಠಿ ಮೈಯಾಳ ಕ್ಷಮೆ ಯಾಚಿಸಬೇಕು.

ಸ್ನೇಹಿತರೆ,

ನಾನು ಬಿಹಾರದ ಜನರಿಗೆ ಹೇಳಲು ಬಯಸುತ್ತೇನೆ - ಈ ಅಪರಾಧಿಗಳನ್ನು ಈ ಅವಮಾನಕ್ಕೆ ಹೊಣೆಗಾರರನ್ನಾಗಿ ಮಾಡುವುದು ಬಿಹಾರದ ಪ್ರತಿಯೊಬ್ಬ ಮಗನ ಜವಾಬ್ದಾರಿಯಾಗಿದೆ. ಆರ್‌ಜೆಡಿ–ಕಾಂಗ್ರೆಸ್ ನಾಯಕರು ಎಲ್ಲಿಗೆ ಹೋದರೂ, ಅವರು ಯಾವುದೇ ರಸ್ತೆ ಅಥವಾ ನಗರವನ್ನು ಪ್ರವೇಶಿಸಿದರೂ, ಅವರು ಎಲ್ಲಾ ಕಡೆಯಿಂದ ಒಂದೇ ಧ್ವನಿಯನ್ನು ಕೇಳಬೇಕು. ಪ್ರತಿಯೊಬ್ಬ ತಾಯಿ ಮತ್ತು ಸಹೋದರಿ ಮುಂದೆ ಬಂದು ಉತ್ತರ ಕೋರಬೇಕು. ಪ್ರತಿಯೊಂದು ಬೀದಿ ಮತ್ತು ನೆರೆಹೊರೆಯಿಂದ, ಒಂದು ಪ್ರತಿಧ್ವನಿಸುವ ಧ್ವನಿ ಇರಬೇಕು. "ನಾವು ಸಹಿಸುವುದಿಲ್ಲ, ತಾಯಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ. ನಮ್ಮ ಗೌರವದ ಮೇಲಿನ ದಾಳಿಯನ್ನು ನಾವು ಸಹಿಸುವುದಿಲ್ಲ, ಸಹಿಸುವುದಿಲ್ಲ. ನಾವು ಸಹಿಸುವುದಿಲ್ಲ, ಆರ್‌ಜೆಡಿಯ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ. ನಾವು ಸಹಿಸುವುದಿಲ್ಲ, ಕಾಂಗ್ರೆಸ್‌ನ ದಾಳಿಯನ್ನು ನಾವು ಸಹಿಸುವುದಿಲ್ಲ. ನಾವು ಸಹಿಸುವುದಿಲ್ಲ, ತಾಯಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು".

ಸ್ನೇಹಿತರೆ,

ನಮ್ಮ ದೇಶದಲ್ಲಿ ಮಹಿಳೆಯರ ಸಬಲೀಕರಣವು ನಮ್ಮ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. ಅವರ ಜೀವನದ ತೊಂದರೆಗಳನ್ನು ಕಡಿಮೆ ಮಾಡಲು ಎನ್‌ಡಿಎ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ತಾಯಂದಿರೆ ಮತ್ತು ಸಹೋದರಿಯರೆ, ನಾನು ನಿಮಗೆ ಭರವಸೆ ನೀಡುತ್ತೇನೆ - ನಾವು ನಿಮಗೆ ದಣಿವರಿಯದೆ, ವಿರಾಮವಿಲ್ಲದೆ ನಿಮ್ಮ ಸೇವೆ ಸಲ್ಲಿಸುತ್ತೇವೆ. ದಯವಿಟ್ಟು ನಿಮ್ಮ ಬೆಂಬಲದೊಂದಿಗೆ ಎನ್‌ಡಿಎ ಸರ್ಕಾರವನ್ನು ಆಶೀರ್ವದಿಸುವುದನ್ನು ಮುಂದುವರಿಸಿ. ರಾಷ್ಟ್ರದ ಪ್ರತಿಯೊಬ್ಬ ತಾಯಿಗೆ ನಾನು ನಮಸ್ಕರಿಸುವಾಗ, ನಾನು ಮತ್ತೊಮ್ಮೆ ಪ್ರಾರ್ಥನೆಯನ್ನು ನೆನಪಿಸಿಕೊಳ್ಳುತ್ತೇನೆ - "ಘರ್ ಘರ್ ತಿರಂಗ, ಹರ್ ಘರ್ ತಿರಂಗ"(ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ). ಈಗ ಕಾಲದ ಬೇಡಿಕೆಯೆಂದರೆ - "ಹರ್ ಘರ್ ಸ್ವದೇಶಿ, ಘರ್-ಘರ್ ಸ್ವದೇಶಿ"(ಪ್ರತಿ ಮನೆ ಸ್ವಾವಲಂಬಿ, ಪ್ರತಿ ಮನೆ ಸ್ವದೇಶಿ). ತಾಯಂದಿರೆ ಮತ್ತು ಸಹೋದರಿಯರೆ, ಭಾರತವನ್ನು ನಿಜವಾಗಿಯೂ ಸ್ವಾವಲಂಬಿಯನ್ನಾಗಿ ಮಾಡಲು, ಈ ಹೊಸ ಮಂತ್ರಕ್ಕಾಗಿ ನನಗೆ ನಿಮ್ಮ ಆಶೀರ್ವಾದ ಬೇಕು. ಹರ್ ಘರ್ ಸ್ವದೇಶಿ, ಘರ್-ಘರ್ ಸ್ವದೇಶಿ. ನಾನು ಪ್ರತಿಯೊಬ್ಬ ಅಂಗಡಿಯವರಿಗೂ ಹೇಳುತ್ತೇನೆ - ಹೆಮ್ಮೆಯಿಂದ ಒಂದು ಫಲಕವನ್ನು ಇರಿಸಿ, ಗೌರವದಿಂದ ಪ್ರದರ್ಶಿಸಿ. "ಇದು ಸ್ವದೇಶಿ, ಇದು ಸ್ವದೇಶಿ." ನಾವು ಆತ್ಮನಿರ್ಭರ ಭಾರತದ ಹಾದಿಯಲ್ಲಿ ಸದೃಢವಾಗಿ ಸಾಗಬೇಕು. ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವಿಲ್ಲದೆ ಈ ಪ್ರಯಾಣ ಪೂರ್ಣಗೊಳ್ಳುವುದಿಲ್ಲ. ನಿಮ್ಮ ಆಶೀರ್ವಾದವಿಲ್ಲದೆ ಭಾರತವು ಉಜ್ವಲ ಭವಿಷ್ಯ ಸಾಧಿಸಲಾಗದು. ನಿಮಗೆ ಚೆನ್ನಾಗಿ ತಿಳಿದಿದೆ, ಈ ಗಣ್ಯರು ಏನು ಹೇಳುತ್ತಿದ್ದಾರೆ? ಅವರ "ಭಾರತ ಮಾತೆ ಯಾರು? ಭಾರತ ಮಾತೆ ಎಂದರೇನು?" ಎಂದು ಪ್ರಶ್ನಿಸುವಷ್ಟು ದೂರ ಹೋಗಿದ್ದಾರೆ. ಭಾರತ ಮಾತೆಯನ್ನು ನಿಂದಿಸುವವರಿಗೆ, ಮೋದಿಯ ತಾಯಿಯನ್ನು ನಿಂದಿಸುವುದು ಸುಲಭದ ಕೆಲಸ. ಅದಕ್ಕಾಗಿಯೇ ಜನರು ಅಂತಹ ವ್ಯಕ್ತಿಗಳನ್ನು ಗುರುತಿಸುವುದು ಬಹಳ ಮುಖ್ಯ.

ತಾಯಂದಿರು ಮತ್ತು ಸಹೋದರಿಯರೆ,

ನನ್ನ ಮುಂದೆ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರನ್ನು ನೋಡಿದಾಗ, ನಿಮ್ಮ ಆಶೀರ್ವಾದಗಳು ಯಾವಾಗಲೂ ನನ್ನ ಮೇಲೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅನೇಕ ತಾಯಂದಿರು ಮತ್ತು ಸಹೋದರಿಯರ ಮುಂದೆ ನಿಂತು, ನನ್ನೊಳಗೆ ನಾನು ಅನುಭವಿಸುತ್ತಿದ್ದ ನೋವು ಸ್ವಾಭಾವಿಕವಾಗಿ ನಿಮ್ಮ ಮುಂದೆ ಸುರಿಯಿತು. ತಾಯಂದಿರು ಮತ್ತು ಸಹೋದರಿಯರೆ, ನಿಮ್ಮ ಆಶೀರ್ವಾದದ ಮೂಲಕವೇ ನಾನು ಅಂತಹ ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಂಡುಕೊಳ್ಳುತ್ತೇನೆ. ಆದರೆ ತನ್ನ ದೇಹ ತೊರೆದು ಅಗಲಿದ, ಯಾರಿಂದಲೂ ಏನನ್ನೂ ತೆಗೆದುಕೊಳ್ಳದ, ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ನನ್ನ ತಾಯಿ - ಅಂತಹ ತಾಯಿಯನ್ನು ನಿಂದಿಸಿದಾಗ, ನೋವು ಅಸಹನೀಯವಾಗುತ್ತದೆ, ಯಾತನೆ ಅಸಹನೀಯವಾಗುತ್ತದೆ. ಅದಕ್ಕಾಗಿಯೇ ತಾಯಂದಿರೆ ಮತ್ತು ಸಹೋದರಿಯರೆ, ನನ್ನ ದುಃಖ ಇಂದು ನಿಮ್ಮ ಮುಂದೆ ಬಂತು - ಒಬ್ಬ ನಾಯಕನಾಗಿ ಅಲ್ಲ, ಆದರೆ ಮಗನಾಗಿ - ಮತ್ತು ಅದು ಸರಳವಾಗಿ ಹೊರಹೊಮ್ಮಿತು. ನಿಮ್ಮ ಆಶೀರ್ವಾದಗಳು ನನಗೆ ಪ್ರತಿಯೊಂದು ಅನ್ಯಾಯವನ್ನು ತಡೆದುಕೊಳ್ಳುವ ಶಕ್ತಿ ನೀಡುತ್ತವೆ ಮತ್ತು ಪ್ರತಿಯೊಂದು ಅನ್ಯಾಯವನ್ನು ಜಯಿಸಲು, ಅವು ನನಗೆ ಈ ರಾಷ್ಟ್ರದ ತಾಯಂದಿರು ಮತ್ತು ಸಹೋದರಿಯರಿಗೆ ಸೇವೆ ಸಲ್ಲಿಸಲು ಹೊಸ ಶಕ್ತಿ ಮತ್ತು ಹೊಸ ಸ್ಫೂರ್ತಿಯನ್ನು ನೀಡುತ್ತವೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ. ಈ ಮಾತುಗಳೊಂದಿಗೆ, ನಾನು ಭಾಷಣ ಮುಕ್ತಾಯಗೊಳಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to a mishap in Nashik, Maharashtra
December 07, 2025

The Prime Minister, Shri Narendra Modi has expressed deep grief over the loss of lives due to a mishap in Nashik, Maharashtra.

Shri Modi also prayed for the speedy recovery of those injured in the mishap.

The Prime Minister’s Office posted on X;

“Deeply saddened by the loss of lives due to a mishap in Nashik, Maharashtra. My thoughts are with those who have lost their loved ones. I pray that the injured recover soon: PM @narendramodi”