ಕೋವಿಡ್ ಹೊರತಾಗಿಯೂ, ಕಾಶಿಯಲ್ಲಿ ಅಭಿವೃದ್ಧಿಯ ವೇಗಕ್ಕೆ ಧಕ್ಕೆಯಾಗಿಲ್ಲ: ಪ್ರಧಾನಿ
ಈ ಸಮಾವೇಶ ಕೇಂದ್ರವು ಭಾರತ ಮತ್ತು ಜಪಾನ್ ನಡುವಿನ ಗಾಢ ಸಂಬಂಧವನ್ನು ತೋರಿಸುತ್ತದೆ: ಪ್ರಧಾನಿ
ಈ ಸಮಾವೇಶ ಕೇಂದ್ರವು ಸಾಂಸ್ಕೃತಿಕ ಕೇಂದ್ರವಾಗಲಿದೆ ಮತ್ತು ವಿಭಿನ್ನ ಜನರನ್ನು ಒಂದುಗೂಡಿಸುವ ಮಾಧ್ಯಮವಾಗಲಿದೆ: ಪ್ರಧಾನಿ
ಕಳೆದ 7 ವರ್ಷಗಳಲ್ಲಿ ಕಾಶಿಯನ್ನು ಹಲವು ಅಭಿವೃದ್ಧಿ ಯೋಜನೆಗಳಿಂದ ಸಿಂಗರಿಸಲಾಗಿದೆ ಮತ್ತು ರುದ್ರಾಕ್ಷ್ ಇಲ್ಲದೆ ಇದು ಪೂರ್ಣಗೊಳ್ಳುವುದಿಲ್ಲ: ಪ್ರಧಾನಿ

ಹರ್ ಹರ್ ಮಹದೇವ್! ಹರ್ ಹರ್ ಮಹದೇವ್ !

ನಮ್ಮೊಂದಿಗಿರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ಸಮರ್ಥ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ. ಭಾರತದಲ್ಲಿನ ಜಪಾನ್ ರಾಯಭಾರಿ ಶ್ರೀ ಸುಜುಕಿ ಸಂತೋಷಿ ಜಿ, ನನ್ನ ಸಹೋದ್ಯೋಗಿ ಶ್ರೀ ರಾಧಾ ಮೋಹನ್ ಸಿಂಗ್ ಜಿ,  ಕಾಶಿಯ ಪ್ರಬುದ್ಧ ಜನತೆಯೇ ಹಾಗೂ ಗೌರವಾನ್ವಿತ ಸ್ನೇಹಿತರೇ,

ನನ್ನ ಹಿಂದಿನ ಕಾರ್ಯಕ್ರಮದಲ್ಲಿ ನಾನು ಕಾಶಿ ಜನರಿಗೆ ಹೇಳುತ್ತಿದ್ದೆ, ಅದೃಷ್ಟವಶಾತ್ ನಿಮ್ಮ ಮುಂದೆ ಬಹಳ ಸಮಯದ ನಂತರ ಹಾಜರಾಗಲು ನನಗೆ ಅವಕಾಶ ದೊರೆತಿದೆ. ಆದರೆ ಬನಾರಸ್ ನ ಮನಸ್ಥಿತಿ ಏನೆಂದರೆ ಬಹು ದಿನಗಳ ನಂತರ ಈ ಸ್ಥಳಕ್ಕೆ ಭೇಟಿ ನೀಡಿದ್ದರೂ ನಗರ ನಮ್ಮನ್ನು ಸಂಪೂರ್ಣ ಸಂತೋಷದಿಂದ ಸ್ವೀಕರಿಸುತ್ತದೆ. ಈಗ ನೀವು ನೋಡುತ್ತಿದ್ದೀರಿ, ಅಂತರ ದೊಡ್ಡದಾಗಿದ್ದರೂ ಬನಾರಸ್ ಜನರು ಏಕಕಾಲಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಾವಿಂದು ಮಹದೇವನ ಆಶರ್ವಾದದೊಂದಿಗೆ ಕಾಶಿ ಜನತೆ ಅಭಿವೃದ್ಧಿಯ ಪ್ರವಾಹ ಪ್ರಾರಂಭಿಸಿದ್ದಾರೆ.  ಇಂದು ನೂರಾರು ಕೊಟಿ ರೂಪಾಯಿ ಮೊತ್ತದ ಹಲವಾರು ಯೋಜನೆಗಳ ಪ್ರಾರಂಭ ಮತ್ತು ಶಿಲಾನ್ಯಾಸ ನೆರವೇರಿಸಲಾಗಿದೆ. ಇದೀಗ ರುದ್ರಾಕ್ಷ ಸಮಾವೇಶ ಕೇಂದ್ರ ! ಕಾಶೀಯ ಪ್ರಾಚೀನ ವೈಭವ, ಮತ್ತದರ ಆಧುನಿಕ ರೂಪದಲ್ಲಿ ಅಸ್ಥಿತ್ವಕ್ಕೆ ಬರುತ್ತಿದೆ. ಕಾಶಿಯ ಬಗ್ಗೆ ಒಂದು ಮಾತಿದೆ, ಬಾಬಾಗಳ ನಗರ ಎಂದಿಗೂ ನಿಲ್ಲುವುದಿಲ್ಲ, ಎಂದಿಗೂ ದಣಿಯುವುದಿಲ್ಲ. ಕಾಶಿಯ ಪರಿಸರದಲ್ಲಿ ಹೊಸ ಈ ಎತ್ತರವು ಕಾಶಿಯ ಈ ಸ್ವರೂಪವನ್ನು ಮತ್ತೊಮ್ಮೆ  ಸಾಬೀತುಪಡಿಸಿದೆ.  ಕೊರೋನಾ ಅವಧಿಯಲ್ಲಿ ಜಗತ್ತು ಸ್ಥಿಗಿತಗೊಂಡಾದ ಕಾಶಿ ಸಂಯಮ ಮತ್ತು ಶಿಸ್ತುಬದ್ಧವಾಗಿತ್ತು. ಆದರೂ ಸೃಜನಶೀಲ ಮತ್ತು ಅಭಿವೃದ್ಧಿ ಪ್ರವಾಹ ಹರಿಯುತ್ತಲೇ ಇತ್ತು. ಕಾಶಿಯ ಅಭಿವೃದ್ಧಿಯ ಆಯಾಮಗಳು ಇಂದು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ – ರುದ್ರಾಕ್ಷ್ ಸಾಕಾರಗೊಂಡಿದೆ ಮತ್ತು ಸೃಜನಶೀಲತೆ ಮತ್ತು ಚೈತನ್ಯದ ಪರಿಣಾಮ ಇದಾಗಿದೆ. ನಿಮ್ಮೆಲ್ಲರನ್ನು ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ. ಈ ಸಾಧನೆಗೆ ಕಾಶಿಯ ಪ್ರತಿಯೊಬ್ಬರೂ ಕಾರಣವಾಗಿದ್ದಾರೆ. ನಿರ್ದಿಷ್ಟವಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಭಾರತದ ಉತ್ತಮ ಸ್ನೇಹಿತ, ಜಪಾನ್ ಪ್ರಧಾನಿ ಶ್ರೀ ಸುಗ ಯೊಶಿಹಿದೆ ಮತ್ತು ರಾಯಭಾರಿ ಶ್ರೀ ಸುಜುಕಿ ಸಂತೋಶಿ ಅವರಿಗೆ. ಈಗಷ್ಟೇ ನಾವು ಜಪಾನ್ ಪ್ರಧಾನಿ ಅವರ ವಿಡಿಯೋ ಸಂದೇಶವನ್ನು ನೋಡಿದ್ದೇವೆ. ಸ್ನೇಹದ ಪ್ರಯತ್ನದ ಫಲವಾಗಿ ಕಾಶಿ ಈ ಕೊಡುಗೆಯನ್ನು ಸ್ವೀಕರಿಸಿದೆ. ಪ್ರಧಾನಿ ಶ್ರೀ ಸುಗ ಯೊಶಿಹಿದೆ ಜಿ ಅವರು ಆಗ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದರು. ಆಗಿನಿಂದ ಈಗ ಪ್ರಧಾನಿಯಾಗುವ ತನಕ ಅವರು ವೈಯಕ್ತಿವಾಗಿ ಈ ಯೋಜನೆಗೆ ನಿರಂತರ ಪ್ರಯತ್ನ ಹಾಕಿದ್ದಾರೆ. ಭಾರತದ ಬಗ್ಗೆ ಅವರಿಗೆ ಇರುವ ಒಲವಿನ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ದೇಶವಾಸಿ ಅವರಿಗೆ ಕೃತಜ್ಞರಾಗಿದ್ದಾರೆ.

ಸ್ನೇಹಿತರೇ

ಇವತ್ತಿನ ಕಾರ್ಯಕ್ರಮದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಹಾಗೂ ಅವರ ಹೆಸರನ್ನು ಪ್ರಸ್ತಾಪಿಸಲು ನಾನು ಮರೆಯುವುದಿಲ್ಲ. ನನ್ನ ಮತ್ತೊಬ್ಬ ಸ್ನೇಹಿತ ಜಪಾನ್ ನ – ಶ್ರೀ ಶಿಂಜೋ ಅಬೆ. ಶ್ರೀ ಶಿಂಜೋ ಅಬೆ ಜಿ ಅವರು ಪ್ರಧಾನಿಯಾಗಿ ಕಾಶಿಗೆ ಆಗಮಿಸಿದಾಗ ಅವರೊಂದಿಗೆ ದೀರ್ಘ ಅವಧಿವರೆಗೆ ರುದ್ರಾಕ್ಷ್ ಕಲ್ಪನೆ ಬಗ್ಗೆ ಚರ್ಚಿಸಲಾಗಿತ್ತು. ನಂತರ ಅವರು ಅಧಿಕಾರಿಗಳಿಗೆ ತಕ್ಷಣವೇ ಈ ಕಲ್ಪನೆಯತ್ತ ಕಾರ್ಯನಿರ್ವಹಿಸುವಂತೆ ಸೂಚಿಸಿದರು.  ತರುವಾಯ ನಾವೆಲ್ಲರೂ ಜಪಾನ್ ಸಂಸ್ಕೃತಿಯೊಂದಿಗೆ ಪರಿಚಿತರಾಗಿದ್ದೇವೆ. ವಿಶೇಷವಾಗಿ ಅವರ ಯೋಜನೆ ಮತ್ತು ಪರಿಪೂರ್ಣತೆ ಗಮನಾರ್ಹ. ನಂತರ ಈ ನಿಟ್ಟಿನಲ್ಲಿ ಕೆಲಸ ಆರಂಭವಾಯಿತು ಮತ್ತು ಇದರಿಂದ ಕಾಶಿಯಲ್ಲಿ ವೈಭವದ ಕಟ್ಟಡ ಅಲಂಕರಿಸುವಂತಾಯಿತು. ಈ ಕಟ್ಟಡ ಆಧುನಿಕತೆಯ ಕಾಂತಿ ಮಾತ್ರವಲ್ಲ, ಸಾಂಸ್ಕೃತಿಕ ಸೆಳೆತವನ್ನು ಹೊಂದಿದೆ. ಇದು ಭಾರತ  - ಜಪಾನ್ ಬಾಂಧವ್ಯವನ್ನು ಸಂಪರ್ಕಿಸಿದೆ ಮತ್ತು ಭವಿಷ್ಯದ ಹಲವಾರು ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಿದೆ. ಜಪಾನ್ ಗೆ ತಾವು ಭೇಟಿ ನೀಡಿದ ಸಮಯದಲ್ಲಿ ನಾವು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ, ಜನರಲ್ಲಿ, ಜನರ ಸಂಪರ್ಕದಲ್ಲಿ, ಈ ಪರಿಚಯದ ಬಗ್ಗೆ ಮಾತನಾಡಿದ್ದೇವೆ ಮತ್ತು ಜಪಾನ್ ನೊಂದಿಗಿನ ಇದೇ ರೀತಿಯ ಸಾಂಸ್ಕೃತಿಕ ಸಂಬಂಧಗಳ ರೂಪರೇಷೆಗಳನ್ನು ನಾವು ರಚಿಸಿದ್ದೇವು. ಅಭಿವೃದ್ಧಿ ಕುರಿತ ಎರಡೂ ದೇಶಗಳ ಪ್ರಯತ್ನದಿಂದಾಗಿ ಇಂದು ಮಾಧುರ್ಯದ ಹೊಸ ಅಧ್ಯಾಯವನ್ನು ಬರೆಯಲಾಗುತ್ತಿದೆ. ಕಾಶಿಯಲ್ಲಿ ರುದ್ರಾಕ್ಷ್ ನಂತೆ ಗುಜರಾತ್ ನಲ್ಲಿ ಕೆಲವು ವಾರಗಳ ಹಿಂದೆ ಜಪಾನ್  ಝೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ಸಹ ಉದ್ಘಾಟಿಸಲಾಗಿತ್ತು.  ಇದೀಗ ರುದ್ರಾಕ್ಷವನ್ನು ಜಪಾನ್ ಭಾರತಕ್ಕೆ ನೀಡಿದ ಪ್ರೀತಿಯ ಹಾರವಾಗಿ ಮಾರ್ಪಟ್ಟಿದ್ದು, ಝೆನ್ ಗಾರ್ಡನ್ ಕೂಡ ಎರಡೂ ದೇಶಗಳ ನಡುವೆ ಪ್ರೀತಿಯ ಸುಗಂಧವನ್ನು ಹರಡುತ್ತಿದೆ. ಇದೇ ರೀತಿ ಕಾರ್ಯತಂತ್ರ ಅಥವಾ ಆರ್ಥಿಕ ವಲಯದಲ್ಲಿ ಜಪಾನ್ ಭಾರತಕ್ಕೆ ಅತ್ಯಂತ ನಂಬಿಕೆಗೆ ಪಾತ್ರವಾದ ದೇಶವಾಗಿದೆ. ನಮ್ಮ ಸ್ನೇಹ ಈ ಸಂಪೂರ್ಣ ವಲಯದಲ್ಲಿ ಅತ್ಯಂತ ನೈಸರ್ಗಿಕ ಕಾರ್ಯತಂತ್ರದಿಂದ ಕೂಡಿದ್ದಾಗಿದೆ. ಆಧುನಿಕ ಮೂಲ ಸೌಕರ್ಯ  ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಅತ್ಯಂತ ದೊಡ್ಡ ಯೋಜನೆ ಮತ್ತು ಪ್ರಮುಖ ವಲಯಗಳಲ್ಲಿ ಜಪಾನ್ ನಮ್ಮ ಸಹಭಾಗಿ ರಾಷ್ಟ್ರವಾಗಿದೆ.  ಇದು ಮುಂಬೈ – ಅಹ್ಮದಾಬಾದ್ ಹೈ ಸ್ಪೀಡ್ ರೈಲು, ದೆಹಲಿ – ಮುಂಬೈ ಕೈಗಾರಿಕಾ ಕಾರಿಡಾರ್ ಅಥವಾ ಮೀಸಲಾದ ಸರಕು ಕಾರಿಡಾರ್ ನಂತಹ ಯೋಜನೆಗಳನ್ನು ಜಪಾನ್ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿದ್ದೇವೆ ಮತ್ತು ಇದರಿಂದ ನವ ಭಾರತ ನಿರ್ಮಾಣಕ್ಕೆ  ಬಲ ಬರುತ್ತಿದೆ.  

ಅಭಿವೃದ್ಧಿ ಎಂಬುದು ಸಂತೋಷದೊಂದಿಗೆ ಸಂಪರ್ಕ ಹೊಂದಿದೆ ಎಂಬ ನಿಲುವು ಭಾರತ – ಜಪಾನ್ ದೇಶಗಳದ್ದಾಗಿದೆ. ಇದು ಸರ್ವಾಂಗೀಣ ಅಭಿವೃದ್ಧಿಯಾಗಿದ್ದು, ಇದು ಎಲ್ಲರಿಗಾಗಿ ಮತ್ತು ಇದು ಎಲ್ಲರನ್ನೂ ಒಳಗೊಳ್ಳುತ್ತದೆ. ನಮ್ಮ ಪುರಾಣದಲ್ಲಿ ಹೀಗೆ ಹೇಳಾಗಿದೆ.

तत्र अश्रु बिन्दुतो जाता, महा रुद्राक्ष वृक्षाकाः। मम आज्ञया महासेन, सर्वेषाम् हित काम्यया॥

ಅದಕ್ಕಾಗಿ ಇದು ಎಲ್ಲರ ಲಾಭಕ್ಕಾಗಿ, ರುದ್ರಾಕ್ಷ ಶಿವನ ಕಣ‍್ಣಿನಿಂದ ಕಣ‍್ಣೀರಿನ ಹನಿ ಕೆಳಗೆ ಬೀಳುವುದನ್ನು ಪ್ರತಿನಿಧಿಸುತ್ತಿದ್ದು, ಇದು ಎಲ್ಲರ ಕಲ್ಯಾಣಕ್ಕಾಗಿ.  ಶಿವ ಪ್ರತಿಯೊಬ್ಬರಿಗೂ ಸೇರಿದ್ದು, ಶಿವನ ಕಣ‍್ಣೀರ ಹನಿ ಮಾನವೀಯತೆಗೆ ಪ್ರೀತಿಯ ಸಂಕೇತವಾಗಿದೆ. ಈ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ – ರುದ್ರಾಕ್ಷ್ ಇಡೀ ಜಗತ್ತನ್ನು ಪ್ರೀತಿ, ಕಲೆ ಮತ್ತು ಸಂಸ್ಕೃತಿಯಿಂದ ಸಂಪರ್ಕಿಸುವ ಮಾಧ್ಯಮವಾಗಲಿದೆ. ಹೇಗಾದರೂ ಆಗಲಿ ಕಾಶಿ ಜಗತ್ತಿನ ಅತ್ಯಂತ ಹಳೆಯ ನಗರವಾಗಿದೆ. ಶಿವನಿಂದ – ಭಗವಾನ್ ಬುದ್ಧನ ಸಾರನಾಥ್. ಅಲ್ಲದೇ ಕಾಶಿಯು ಶತಮಾನಗಳಿಂದ ಅಮೂಲ್ಯ ಧಾರ್ಮಿಕತೆ ಜತೆಗೆ ಕಲೆ ಮತ್ತು ಸಂಸ್ಕೃತಿಗೆ ಹೆಸರಾಗಿದೆ.  ಈಗಿನ ಕಾಲದಲ್ಲೂ “ ಬನಾರಸ್ ಬಾಜ್, ‘ತಬಲ’, ‘ತುಮ್ರಿ’, ‘ದಾದ್ರಾ’. ‘ಖ್ಯಾಯಲ್’, ತಪ್ಪ ಮತ್ತು ದ್ರುಪದ್ ‘, ‘ಡಮರ್, ‘ಕಜ್ರಿ’, ‘ಚೈಟಿ’, ‘ಹೊರಿ’ ಶೈಲಿಗಳು ಮತ್ತು ‘ ಸಾರಂಗಿ ಮತ್ತು ಪಖವಾಜ್’ ಅಥವಾ ಶೆಹನಾಯಿ ಗಾಯನಕ್ಕೆ ಖ್ಯಾತಿ ಪಡೆದಿದೆ.   ಹೌದು ಗೀತೆ, ಸಂಗೀತ ಮತ್ತು ಕಲೆ ಬನಾರಸ್ ನಗರದಿಂದ ಹಾರಾಡುತ್ತಿದೆ. ಗಂಗಾ ನದಿ ತಟಗಳಲ್ಲಿ ಹಲವಾರು ಕಲಾ ಪ್ರಕಾರಗಳು ಅಭಿವೃದ್ಧಿಯಾಗಿವೆ, ಈ ಶೃಂಗದಿಂದ ಜ್ಞಾನ ತಲುಪಿದೆ ಮತ್ತು ಹಲವಾರು ಗಂಭೀರ ಚಿಂತನೆಗಳೂ ಮತ್ತು ಇದೇ ಮಣ್ಣಿನಿಂದ ಮಾನವೀಯತೆಗೆ ಸಂಬಂಧಿಸಿದ ಪರಿಕಲ್ಪನೆಗಳು ಹೊರ ಹೊಮ್ಮಿವೆ.  ಹೀಗಾಗಿ ಬನಾರಸ್ ಗೀತೆ-ಸಂಗೀತ, ಧರ್ಮ-ಧಾರ್ಮಿಕತೆ ಮತ್ತು ಜ್ಞಾನ ಮತ್ತು ವಿಜ್ಞಾನಗಳ ಪ್ರಮುಖ ಜಾಗತಿಕ ಕೇಂದ್ರವಾಗಿದೆ.

ಸ್ನೇಹಿತರೇ

ಬನಾರಸ್ ನ ಬೌದ್ಧಿಕ ಚರ್ಚೆಗಳು, ದೊಡ್ಡ ಪ್ರಮಾಣದ ವಿಚಾರ ಸಂಕಿರಣಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದರ್ಶ ಸ್ಥಳವಾಗಿದೆ.  ದೇಶಾದ್ಯಂತ ಮತ್ತು ವಿದೇಶಗಳಿಂದ ಜನತೆ ಬರುತ್ತಾರೆ ಮತ್ತು ಇಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಪರಿಸ್ಥಿತಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲು ಸೌಲಭ್ಯವಿದ್ದರೆ, ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಮೂಲ ಸೌಕರ್ಯವಿದ್ದರೆ, ಸಹಜವಾಗಿಯೇ ಕಲಾ ಜಗತ್ತಿನಿಂದ ಹೆಚ್ಚಿನ ಜನ ಬನಾರಾಸ್ ಗೆ ಆದ್ಯತೆ ನೀಡುತ್ತಾರೆ. ಮುಂಬರುವ ದಿನಗಳಲ್ಲಿ ರುದ್ರಾಕ್ಷ್ ಇದನ್ನು ಸಾಧ್ಯವಾಗಿಸಲಿದ್ದು, ದೇಶವು ವಿದೇಶಗಳಿಂದ ಸಾಂಸ್ಕೃತಿಕ ವಿನಿಯಮದ ಕೇಂದ್ರವಾಗಲಿದೆ. ಉದಾಹರಣೆಗೆ  ಕವಿ ಸಮ್ಮೇಳನಗಳು ನಡೆದರೆ ದೇಶದ ಎಲ್ಲಾ ಮತ್ತು ಜಗತ್ತಿನ ಎಲ್ಲಾ ಪ್ರೇಮಿಗಳು ಬನಾರಸ್ ನಲ್ಲಿ ಸಿಗುತ್ತಾರೆ. ಬರುವ ದಿನಗಳಲ್ಲಿ ಜಾಗತಿಕ ಮಾದರಿಯಲ್ಲಿ ಇಂತಹ ಕವಿ ಸಮ್ಮೇಳನಗಳನ್ನು ಈ ಕೇಂದ್ರದಲ್ಲಿ ಆಯೋಜಿಸಲಾಗುವುದು. ಇಲ್ಲಿ 1200 ಮಂದಿ ಕುಳಿತುಕೊಳ್ಳುವ ಸಭಾಂಗಣ ಮತ್ತು ಸಮಾವೇಶ ಕೇಂದ್ರವಿದೆ. ವಾಹನ ನಿಲುಗಡೆ ವ್ಯವಸ್ಥೆ ಮತ್ತು ದಿವ್ಯಾಂಗರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದೇ ರೀತಿ ಕಳೆದ 6-7 ವರ್ಷಗಳಲ್ಲಿ ಬನಾರಸ್ ನಲ್ಲಿ ಕರಕುಶಲ ವಸ್ತುಗಳ ವಲಯವನ್ನು ಬಲಗೊಳಿಸಲು ಮತ್ತು ಉತ್ತೇಜನ ಮಾಡುವ  ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿವೆ. ಇದರ ಜತೆಗೆ ಬನಾರಸಿ ಸಿಲ್ಕ್ ಮತ್ತು ಬನಾರಸಿ ಕುಶಲ ಕಲೆಗೆ ಮತ್ತೆ ಹೊಸ ಗುರುತು ದೊರೆತಿದ್ದು, ವ್ಯಾಪಾರ ಕೂಡ ಬೆಳವಣಿಗೆಯಾಗುತ್ತಿದೆ. ರುದ್ರಾಕ್ಷ ಈ ಎಲ್ಲಾ ಚಟುವಟಿಕೆಗಳನ್ನು ವೃದ್ಧಿಸಲು ನೆರವಾಗಲಿದೆ. ಹಲವಾರು ಮಾರ್ಗದಲ್ಲಿ ಈ ಮೂಲ ಸೌಕರ್ಯವನ್ನು ವ್ಯಾಪಾರ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ.

ಸ್ನೇಹಿತರೇ

ಭಗವಾನ್ ವಿಶ್ವನಾಥ್ ಸ್ವತಃ ಹೇಳಿದ್ದಾರೆ.

सर्व क्षेत्रेषु भूपृष्ठे काशी क्षेत्रम् च मे वपुः।

ಅಂದರೆ, ಕಾಶಿಯ ಇಡೀ ಪ್ರದೇಶ ನನ್ನ ರೂಪ. ಕಾಶಿ ಎಂದರೆ ಸ್ವತಃ ಶಿವ. ಅಂತಹ ಕಾಶಿಯಲ್ಲಿ ಕಳೆದ 7 ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ಅಲಂಕೃತವಾಗಿದ್ದು, ರುದ್ರಾಕ್ಷ ಇಲ್ಲದೇ ಇದು ಪೂರ್ಣಗೊಳ್ಳಲು ಹೇಗೆ ಸಾಧ್ಯ. ಈಗ ಕಾಶಿ ಈ ರುದ್ರಾಕ್ಷವನ್ನು ಧರಿಸಿದ್ದು, ಕಾಶಿ ಅಭಿವೃದ್ಧಿ ಕಾರ್ಯಗಳ ಮೂಲಕ ಇದು ಇನ್ನಷ್ಟು ವಿಸ್ತಾರಗೊಳ್ಳಲಿದೆ ಮತ್ತು ಕಾಶಿಯ ಸೌಂದರ್ಯದ ಹರವು ವಿಸ್ತರಿಸಲಿದೆ. ಈಗ ಕಾಶಿ ಜನರ ಜವಾಬ್ದಾರಿತನ ಮುಖ್ಯವಾಗಿದೆ. ಇದೀಗ ರುದ್ರಾಕ್ಷದ ಶಕ್ತಿಯನ್ನು ಜನತೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ. ಕಾಶಿಯ ಸಾಂಸ್ಕೃತಿಕ ಸೌಂದರ್ಯ ಪ್ರತಿಭೆಗಳೊಂದಿಗೆ ಬೆರತುಕೊಂಡಿದೆ. 

 

ನೀವು ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಇಡೀ ರಾಷ್ಟ್ರ ಮತ್ತು ಜಗತ್ತನ್ನು ಸಂಪರ್ಕಿಸುತ್ತೀರಿ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಕೇಂದ್ರ ಸಕ್ರಿಯವಾದರೆ ಇದರ ನೆರವಿನಿಂದ ಭಾರತ – ಜಪಾನ್ ಬಾಂಧವ್ಯ ಕೂಡ ಜಗತ್ತಿನಲ್ಲಿ ಹೊಸ ಗುರುತುಪಡೆಯಲಿದೆ.  ಮಹದೇವನ ಆಶಿರ್ವಾದದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದ್ದು, ಬರುವ ದಿನಗಳಲ್ಲಿ ಈ ಕೇಂದ್ರ ಕಾಶಿಗೆ ಹೊಸ ಗುರುತು ನೀಡಲಿದೆ ಮತ್ತು ಕಾಶಿಯ ಅಭಿವೃದ್ಧಿಗೆ ಇದು ಹೊಸ ಪ್ರಚೋದನೆ ಕೊಡುತ್ತದೆ.

 

ನಿಮಗೆಲ್ಲಾ ನನ್ನ ಶುಭಾಶಯಗಳು, ನಾನು ನನ್ನ ಭಾಷಣವನ್ನು ಮುಗಿಸುತ್ತಿದ್ದೇನೆ. ಜಪಾನ್ ಸರ್ಕಾರ ಮತ್ತು ಜಪಾನ್ ಪ್ರಧಾನಿ ಅವರಿಗೆ ಮತ್ತೊಮ್ಮೆ ನನ್ನ ಕೃತಜ್ಞತೆಗಳು. ಬಾಬಾ ಅವರು ನಿಮ್ಮೆಲ್ಲರನ್ನೂ ಆರೋಗ್ಯವಾಗಿ, ಸಂತೋಷದಿಂದ ಮತ್ತು ಎಚ್ಚರವಾಗಿಡಲು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ಕೊರೋನಾ ಶಿಷ್ಟಾಚಾರಗಳನ್ನು ಪಾಲಿಸುವ ಅಭ್ಯಾಸವನ್ನು ಲಾಪಾಡಿಕೊಳ್ಳಿ.

ತುಂಬಾ ಧನ್ಯವಾದಗಳು, ಹರ್ ಹರ್ ಮಹದೇವ್

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India vehicle retail sales seen steady in December as tax cuts spur demand: FADA

Media Coverage

India vehicle retail sales seen steady in December as tax cuts spur demand: FADA
NM on the go

Nm on the go

Always be the first to hear from the PM. Get the App Now!
...
Prime Minister Modi Meets Mr. Lip-Bu Tan, Hails Intel’s Commitment to India’s Semiconductor Journey
December 09, 2025

Prime Minister Shri Narendra Modi today expressed his delight at meeting Mr. Lip-Bu Tan and warmly welcomed Intel’s commitment to India’s semiconductor journey.

The Prime Minister in a post on X stated:

“Glad to have met Mr. Lip-Bu Tan. India welcomes Intel’s commitment to our semiconductor journey. I am sure Intel will have a great experience working with our youth to build an innovation-driven future for technology.”