Published By : Admin |
January 27, 2019 | 14:55 IST
Share
To overcome environmental pollution, the Government is promoting the usage of environment friendly transportation fuel: PM
To cut down on import of Crude oil, government has taken decisive steps towards reducing imports by 10% and saving the precious foreign exchange: PM
Indian refinery industry has done well in establishing itself as a major player globally: Prime Minister
ಅರಬ್ಬೀ ಸಮುದ್ರದ ರಾಣಿ, ಕೊಚ್ಚಿಯಲ್ಲಿರುವುದು ನನಗೆ ಸಂತೋಷವಾಗುತ್ತಿದೆ. ನೀಲಿ ಸಮುದ್ರ, ಹಿನ್ನೀರು, ಶ್ರೇಷ್ಠ ಪೆರಿಯಾರ್ ನದಿ , ಸುತ್ತಲಿನ ಈ ಹಸಿರು ಪರಿಸರ ಮತ್ತು ಇಲ್ಲಿನ ಕ್ರಿಯಾಶೀಲ ಜನರು, ಕೊಚ್ಚಿ ನಗರವನ್ನು ಎಲ್ಲ ನಗರಗಳ ರಾಣಿಯನ್ನಾಗಿ ಮಾಡಿದ್ದಾರೆ.
ಭಾರತದ ಶ್ರೇಷ್ಠ ಸಂತ ಆದಿ ಶಂಕರರು ಭಾರತದ ನಾಗರಿಕತೆಯನ್ನು ಮತ್ತು ದೇಶದ ಐಕ್ಯತೆಯನ್ನು ರಕ್ಷಿಸಲು ದೇಶಾದ್ಯಂತ ತಮ್ಮ ಧಾರ್ಮಿಕ ಪಯಣ ಆರಂಭಿಸಿದ್ದು ಈ ಪವಿತ್ರ ನೆಲದಿಂದಲೇ.ಕೇರಳದ ಅತಿ ದೊಡ್ಡ ಕೈಗಾರಿಕಾ ಘಟಕ ಅಭಿವೃದ್ಧಿಯಲ್ಲಿ ಹೊಸ ಹಂತ ಪ್ರವೇಶಿಸುತ್ತಿರುವ ಇಂದು ಐತಿಹಾಸಿಕ ದಿನವಾಗಿದೆ. ಇದು ದೇಶದ ದೇವರ ಸ್ವಂತ ನಾಡಿಗೆ ಮಾತ್ರವಲ್ಲ, ಇಡೀದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.ಭಾರತ್ ಪೆಟ್ರೋಲಿಯಂನ ಕೊಚ್ಚಿ ರಿಫೈನರಿ ಘಟಕ ಕಳೆದ 50 ವರ್ಷಗಳಿಂದ ಶುದ್ಧ ಇಂಧನ – ಎಲ್ ಪಿ ಜಿ ಯನ್ನು ಕೇರಳದಾದ್ಯಂತ ಮತ್ತು ನೆರೆಯ ರಾಜ್ಯಗಳಲ್ಲಿ ಜನಪ್ರಿಯಗೊಳಿಸುವ ಮೂಲಕ ಅತ್ಯಂತ ಮಹತ್ವದ ಪಾತ್ರ ವಹಿಸಿದೆ.ನನಗೆ ನನ್ನ ಬಾಲ್ಯ ಮತ್ತು ಯೌವನದಲ್ಲಿನ ದಿನಗಳು ನೆನಪಾಗುತ್ತವೆ, ಆ ದಿನಗಳಲ್ಲಿ ಹಲವು ತಾಯಂದಿರು ಅಡುಗೆ ಮನೆಯಲ್ಲಿ ಸೌದೆ ಒಲೆಯ ಮುಂದೆ ಪಡುತ್ತಿದ್ದ ಕಷ್ಟ ಕಣ್ಣ ಮುಂದೆ ಬರುತ್ತದೆ. ಆಗಿನಿಂದಲೂ ನಾನು ಭಾರತದ ತಾಯಂದಿರು ಮತ್ತು ಸಹೋದರಿಯರಿಗೆ ಆರೋಗ್ಯಕರ ಅಡುಗೆ ಕೋಣೆಗಳನ್ನು ಒದಗಿಸಬೇಕು, ಅವರ ಸ್ಥಿತಿಗತಿ ಸುಧಾರಿಸಬೇಕು ಎಂದು ಚಿಂತಿಸಿದ್ದೆನು. ಭಾರತ ಸರ್ಕಾರದ ಉಜ್ವಲಾ ಯೋಜನೆ ಈ ಕನಸಿನ ಸಾಕಾರಕ್ಕೆ ಹಾದಿಯಾಗಿದೆ. ಉಜ್ವಲ ಯೋಜನೆಯಡಿ ದೇಶಾದ್ಯಂತ ಮೇ 2016ರಿಂದ ಇಲ್ಲಿಯವರೆಗೆ ಸುಮಾರು 6 ಕೋಟಿ ಕಡು ಬಡವರಿಗೆ ಉಚಿತ ಎಲ್ ಪಿ ಜಿ ಸಂಪರ್ಕಗಳನ್ನು ನೀಡಿರುವುದು ನನಗೆ ಸಂತೋಷ ತಂದಿದೆ.
ಗೆಳೆಯರೇ,
ಸುಮಾರು 23 ಕೋಟಿಗೂ ಅಧಿಕ ಎಲ್ ಪಿ ಜಿ ಗ್ರಾಹಕರು ಪಹಲ್ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ನಕಲಿ ಖಾತೆಗಳನ್ನು ಹೊಂದಿರುವವರು ಹಲವು ಖಾತೆಗಳನ್ನು ಹೊಂದಿರುವವರು ಮತ್ತು ನಿಷ್ಕ್ರಿಯ ಖಾತೆಗಳನ್ನು ಗುರುತಿಸಲು ಪಹಲ್ ನೆರವಾಗಿದೆ. ಪಹಲ್ ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದ್ದು, ಇದು ಗಿನ್ನಿಸ್ ಪುಸ್ತಕದಲ್ಲಿ ವಿಶ್ವ ದಾಖಲೆಯಾಗಿ ಸೇರ್ಪಡೆಯಾಗಿದೆ. ಸುಮಾರು ಒಂದು ಕೋಟಿ ಗ್ರಾಹಕರು ‘ಗೀವ್ ಇಟ್ ಅಪ್’ ಸಬ್ಸಿಡಿ ತ್ಯಜಿಸಿ ಉಪಕ್ರಮದಡಿ ಎಲ್ ಪಿ ಜಿ ಸಬ್ಸಿಡಿಯನ್ನು ತೊರೆದಿದ್ದಾರೆ. ಇತ್ತೀಚಿನ ವಿಸ್ತರಣೆ ಯೋಜನೆಯ ನೆರವಿನಿಂದಾಗಿ ಎಲ್ ಪಿ ಜಿ ಉತ್ಪಾದನೆ ದುಪ್ಪಟ್ಟಾಗಿದ್ದು, ಕೊಚ್ಚಿ ರಿಫೈನರಿ ಘಟಕ ಉಜ್ವಲ ಯೋಜನೆಗೆ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಪರಿಸರ ಮಾಲಿನ್ಯದಿಂದ ಹೊರಬರಲು ಭಾರತ ಸರ್ಕಾರ ಪರಿಸರ ಸ್ನೇಹಿ ಇಂಧನವನ್ನು ಸಾರಿಗೆ ವಲಯದಲ್ಲಿ ಬಳಕೆಗೆ ಉತ್ತೇಜನ ನೀಡುತ್ತಿದ್ದು, ನಗರ ಅನಿಲ ವಿತರಣಾ ಜಾಲ(ಸಿಟಿ ಗ್ಯಾಸ್ ಡಿಸ್ಟ್ರಿಬ್ಯುಷನ್ )ವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ಸಿಜಿಡಿ – ನಗರ ಅನಿಲ ವಿತರಣಾ ಜಾಲದ 10ನೇ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇದರಿಂದಾಗಿ ದೇಶದ 400ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪೈಪ್ ಗಳ ಮೂಲಕ ಅನಿಲ ಸಂಪರ್ಕ ಒದಗಿಸಲಾಗುವುದು.
ಅನಿಲ ಆಧಾರಿತ ಆರ್ಥಿಕತೆಯನ್ನು ಸೃಷ್ಟಿಸಲು ಮತ್ತು ಇಂಧನ ಮಾರುಕಟ್ಟೆಯಲ್ಲಿ ಅನಿಲದ ಪ್ರಮಾಣ ಹೆಚ್ಚಿಸಲು ರಾಷ್ಟ್ರೀಯ ಅನಿಲ ಗ್ರಿಡ್ ಅಥವಾ ಪ್ರಧಾನಮಂತ್ರಿ ಊರ್ಜಾ ಗಂಗಾ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 15 ಸಾವಿರ ಕಿಲೋಮೀಟರ್ ಅನಿಲ ಕೊಳವೆ ಸಂಪರ್ಕಜಾಲ ಅಭಿವೃದ್ಧಿಪಡಿಸುವ ಚಿಂತನೆ ನಡೆಸಿದೆ.
ಕಚ್ಚಾತೈಲ ಆಮದು ನಿಯಂತ್ರಿಸುವ ಸಲುವಾಗಿ ಸರ್ಕಾರ ಶೇಕಡ 10ರಷ್ಟು ಆಮದನ್ನು ಕಡಿತಗೊಳಿಸುವ ನಿರ್ಣಾಯಕ ನಿರ್ಧಾರವನ್ನು ಕೈಗೊಂಡಿದ್ದು, ಮತ್ತು ಅದರಿಂದ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎರಡನೇ ತಲೆಮಾರಿನ ಎಥೆನಾಲ್ ಬಳಕೆ ಉತ್ತೇಜಿಸಲಾಗುತ್ತಿದ್ದು, ಲಿಂಗೋ ಸೆಲ್ಯುಲೋಸ್ ಮಾರ್ಗದ ಮೂಲಕ ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ 11 ರಾಜ್ಯಗಳಲ್ಲಿ 12 ಕಡೆ 2ಜಿ ಎಥೆನಾಲ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರು ಒಡಂಬಡಿಕೆಗಳಿಗೆ ಈಗಾಗಲೇ ಸಹಿ ಹಾಕಲಾಗಿದೆ. ಭಾರತೀಯ ರಿಫೈನರಿ ಉದ್ಯಮ ಉತ್ತಮ ಸಾಧನೆ ಮಾಡುತ್ತಿದ್ದು, ಅದು ಜಾಗತಿಕ ಮಟ್ಟದಲ್ಲಿ ತಾನೇ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಈಗಾಗಲೇ ನಿರೂಪಿಸಿದೆ.
ಭಾರತ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ತೈಲ ಸಂಸ್ಕರಣಾ – ರಿಫೈನರಿ ಆಗಿ ಹೊರಹೊಮ್ಮಿದ್ದು, ಅದೀಗ ತನ್ನ ಬೇಡಿಕೆಗಿಂತ ಹೆಚ್ಚಿನ ತೈಲವನ್ನು ಸಂಸ್ಕರಣೆ ಮಾಡುವ ಮೂಲಕ ತೈಲ ಸಂಸ್ಕರಣಾ ತಾಣವಾಗಿ ರೂಪುಗೊಳ್ಳುತ್ತಿದೆ. ದೇಶದ ತೈಲ ಸಂಸ್ಕರಣಾ ಸಾಮರ್ಥ್ಯ ಪ್ರಸ್ತುತ 247 ಎಂಎಂಟಿಪಿಎಗಿಂತ ಹೆಚ್ಚಾಗಿದೆ. ಸಕಾಲದಲ್ಲಿ ಐ ಆರ್ ಇ ಪಿ ಪೂರ್ಣಗೊಳಿಸಿರುವುದಕ್ಕಾಗಿ ನಾನು ಈ ಸಂದರ್ಭದಲ್ಲಿ ಎಲ್ಲರನ್ನು ಅಭಿನಂದಿಸಲು ಬಯಸುತ್ತೇನೆ.
ಕೊನೆಯದಾಗಿ ಹಾಗೂ ಅತಿಮುಖ್ಯವಾಗಿ ನಿರ್ಮಾಣದ ವೇಳೆ ಹಗಲು ರಾತ್ರಿ ದುಡಿದ ಕಾರ್ಮಿಕರಿಗೆ ನಾನು ಅಭಿನಂದಿಸಲು ಬಯಸುತ್ತೇನೆ. ಯೋಜನೆಯ ಕಾಮಗಾರಿ ಅತ್ಯಂತ ಪ್ರಮುಖ ಘಟ್ಟದಲ್ಲಿದ್ದಾಗ ಸುಮಾರು 20 ಸಾವಿರ ಕಾರ್ಮಿಕರು ಸ್ಥಳದಲ್ಲಿ ದುಡಿಯುತ್ತಿದ್ದರು ಎಂದು ನಾನು ಕೇಳಲ್ಪಟ್ಟಿದ್ದೇನೆ. ಹಲವು ವಿಧದಲ್ಲಿ ಅವರೇ ಈ ಯೋಜನೆಯ “ರಿಯಲ್ ಹಿರೋಸ್ -ನಿಜವಾದ ನಾಯಕರು”. ಈ ಸಮಗ್ರ ಸಂಸ್ಕರಣಾ ವಿಸ್ತರಣಾ ಯೋಜನೆ ಭಾರತ್ ಪೆಟ್ರೋಲಿಯಂನ ಇಂಧನೇತರ ವಲಯಕ್ಕೆ ವರ್ಗಾವಣೆಗೊಳ್ಳುವ ಕಾರ್ಯತಂತ್ರದ ಒಂದು ಭಾಗವಾಗಿದೆ.
ಗೆಳೆಯರೇ,
ಪೆಟ್ರೋ ಕೆಮಿಕಲ್ಸ್ ಒಂದು ದರ್ಜೆಯ ರಾಸಾಯನಿಕವಾಗಿದ್ದು, ಅದರ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ. ಆದರೆ ಅದು ಅಗೋಚರವಾಗಿದ್ದು, ನಮ್ಮ ದಿನನಿತ್ಯದ ಜೀವನದಲ್ಲಿ ಹಲವು ಆಯಾಮಗಳಲ್ಲಿ ಅದು ನಮ್ಮನ್ನು ಸಂಧಿಸುತ್ತದೆ. ಅವುಗಳೆಂದರೆ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪ್ಲಾಸ್ಟಿಕ್, ಪೇಯಿಂಟ್, ಪಾದರಕ್ಷೆ, ಬಟ್ಟೆ ಮತ್ತು ಇತರೆ ಜವಳಿ ಉತ್ಪನ್ನಗಳು ಅಥವಾ ಆಟೋಮೋಟಿವ್ ಬಿಡಿ ಭಾಗಗಳು, ಶೃಂಗಾರ ಸಾಧನಗಳು(ಕಾಸ್ಮೆಟಿಕ್ಸ್) ಮತ್ತು ಔಷಧಗಳು ಸೇರಿವೆ. ಆದರೆ ಬಹುತೇಕ ಈ ರಾಸಾಯನಿಕಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.
ಆದರೆ ನಮ್ಮ ಉದ್ದೇಶವೆಂದರೆ ಈ ಎಲ್ಲಾ ಪೆಟ್ರೋ ಕೆಮಿಕಲ್ಸ್ಅನ್ನು ಭಾರತದಲ್ಲಿ ಉತ್ಪಾದನೆ ಮಾಡಬೇಕು ಎಂಬುದಾಗಿದೆ. ಇದೀಗ ಕೊಚ್ಚಿ ರಿಫೈನರಿ ಸಾಮರ್ಥ್ಯವನ್ನು ಬಳಸಿಕೊಂಡು ನಾವು ಪ್ರೊಪೆಲೈನ್ ಉತ್ಪಾದಿಸುತ್ತಿದ್ದೇವೆ ಎಂಬುದು ನನಗೆ ಸಂತೋಷ ತಂದಿದೆ. ಐ ಆರ್ ಇ ಪಿ ಅನುಷ್ಠಾನದ ನಂತರ ಬಿಪಿಸಿಎಲ್, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಆರ್ಕಲಿಕ್ ಆಸಿಡ್, ಆರ್ಕಲೈಟ್ಸ್ ಮತ್ತು ಓಕ್ಸೋ ಆಲ್ಕೋಹಾಲ್ ಉತ್ಪಾದಿಸುವ ಮೂರು ವಿಶ್ವದರ್ಜೆಯ ಘಟಕಗಳನ್ನು ಸ್ಥಾಪಿಸಿ ಮುಂದಡಿ ಇಟ್ಟಿದೆ.
ಈ ಪೆಟ್ರೋ ಕೆಮಿಕಲ್ಸ್ ಅನ್ನು ಪೇಂಟ್, ಇಂಕ್(ಶಾಯಿ), ಕೋಟಿಂಗ್ (ಲೇಪನ), ಡಿಟರ್ಜೆಂಟ್(ಸಾಬೂನು) ಮತ್ತು ಇತರೆ ಹಲವು ಪದಾರ್ಥಗಳಲ್ಲಿ ಬಳಸಬಹುದಾಗಿದೆ. ಇದೀಗ ಬಿಪಿಸಿಎಲ್, ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್ಅನ್ನು ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಫೋಮ್ಸ್(ನೊರೆ), ಫೈಬರ್(ನಾರು), ಪಾದರಕ್ಷೆ, ಶೃಂಗಾರಸಾಧನ(ಕಾಸ್ಮೆಟಿಕ್ಸ್) ಮತ್ತು ಔಷಧಗಳಲ್ಲಿ ಬಳಸಬಹುದಾದ ಪಾಲಿಓಲ್ಸ್ ಉತ್ಪಾದಿಸಲಾಗುವುದು.
ಇದರಿಂದಾಗಿ ಕೊಚ್ಚಿಯಲ್ಲಿ ಹಲವು ಪೂರಕ ಉದ್ದಿಮೆಗಳು ಆರಂಭವಾಗಲಿವೆ ಎಂಬ ಭರವಸೆ ನನಗಿದೆ.ರಾಜ್ಯ ಸರ್ಕಾರ ಸ್ಥಾಪಿಸಲಿರುವ ಪೆಟ್ರೋ ಕೆಮಿಕಲ್ ಪಾರ್ಕ್ ಸದ್ಯದಲ್ಲೇ ಕಾರ್ಯಾಚರಣೆ ಮಾಡಲಿದೆ ಎಂಬ ಭರವಸೆ ನನಗಿದೆ ಮತ್ತು ಬಿಪಿಸಿಎಲ್ ನಿಂದ ಪೆಟ್ರೋ ಕೆಮಿಕಲ್ ಉದ್ದಿಮೆಯಲ್ಲಿ ಸಾಕಷ್ಟು ವಾಣಿಜ್ಯಾವಕಾಶಗಳು ದೊರಕಲಿವೆ.
ಬಿಪಿಸಿಎಲ್, ಇತರೆ ಸಾರ್ವಜನಿಕ ವಲಯದ ಉದ್ದಿಮೆಗಳ ಜೊತೆ ಸೇರಿ ದೇಶದ ಯುವ ಉದ್ಯೋಗಿಗಳನ್ನು ಸಜ್ಜುಗೊಳಿಸಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಪವಿತ್ರ ಮಹಾದೇವ ದೇವಾಲಯದ ಸಮೀಪ ಎತ್ತುಮನ್ನೂರಿನಲ್ಲಿ ಎರಡನೇ ಕೌಶಲ್ಯ ಕೇಂದ್ರದ ಕ್ಯಾಂಪಸ್ ಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ನನಗೆ ಹರ್ಷವಾಗುತ್ತಿದೆ. ಇಲ್ಲಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿನ ಕೊಚ್ಚಿನ್ ಬಾಟ್ಲಿಂಗ್ ಘಟಕದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಭಾರತೀಯ ತೈಲ ನಿಗಮ ಮೌಂಡೆಡ್ ಸ್ಟೋರೇಜ್ ಸೌಕರ್ಯ ಸ್ಥಾಪಿಸಿರುವುದನ್ನು ಉಲ್ಲೇಖಿಸಲು ನನಗೆ ಸಂತೋಷವಾಗುತ್ತಿದೆ. ಇದರಿಂದ ಎಲ್ ಪಿ ಜಿ ದಾಸ್ತಾನು ಸಾಮರ್ಥ್ಯ ಹೆಚ್ಚಾವಾಗುವುದಲ್ಲದೆ, ಎಲ್ ಪಿ ಜಿ ಕರ್ ಗಳ ರಸ್ತೆ ಸಂಚಾರ ತಗ್ಗಲಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕೇರಳ ನೂರು ವರ್ಷಗಳಲ್ಲಿ ಕಂಡರಿಯದ ಭೀಕರ ಪ್ರವಾಹದ ಸಂದರ್ಭದಲ್ಲಿಯೂ ಎಲ್ಲ ಅಡತಡೆಗಳ ನಡುವೆ ಬಿಪಿಸಿಎಲ್ ಕೊಚ್ಚಿ ರಿಫೈನರಿ ಘಟಕ ಕಾರ್ಯ ನಿರ್ವಹಿಸುತ್ತಿತ್ತು ಎಂದು ಉಲ್ಲೇಖಿಸಲು ನಾನು ಬಯಸುತ್ತೇನೆ.
ಹಲವು ಉದ್ಯೋಗಿಗಳು ರಿಫೈನರಿ ಘಟಕದಲ್ಲೇ ವಾಸ್ತವ್ಯ ಹೂಡಿ, ನಿರಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಉತ್ಪಾದನೆಯಾಗುವಂತೆ ನೋಡಿಕೊಂಡರು ಎಂಬುದು ನನಗೆ ಅರ್ಥವಾಗಿದೆ. ಇದರಿಂದ ಹಲವು ರಕ್ಷಣಾ ವಾಹನಗಳು ಮತ್ತು ಹೆಲಿಕಾಪ್ಟರ್ ಗಳು ತಮ್ಮ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಸುಗಮ ರೀತಿಯಲ್ಲಿ ನಡೆಸಲು ಸಹಕಾರಿಯಾಯಿತು. ಇದೇ ಕಠಿಣ ಪರಿಶ್ರಮ, ಸ್ಫೂರ್ತಿ, ಸಾಮಾಜಿಕ ಬದ್ಧತೆ ಮತ್ತು ಅನ್ವೇಷಣಾ ಮನೋಭಾವವನ್ನು ಮುಂದುವರಿಸಿಕೊಂಡು ಮುಂದಿನ ಹಂತದ ಅಭಿವೃದ್ಧಿಯತ್ತ ಸಾಗಬೇಕು ಎಂದು ನಾನು ಈ ಸಂದರ್ಭದಲ್ಲಿ ಬಿಪಿಸಿಎಲ್ ಕೊಚ್ಚಿ ರಿಫೈನರಿ ಘಟಕಕ್ಕೆ ಆಗ್ರಹಿಸುತ್ತೇನೆ. ರಾಷ್ಟ್ರ ನಿರ್ಮಾಣ ನಿಟ್ಟಿನಲ್ಲಿ ಕೊಚ್ಚಿ ರಿಫೈನರಿ ಘಟಕದ ಕೊಡುಗೆಯನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ.
ಆದರೆ, ಇದೀಗ ನಾವು ಘಟಕದಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದೇವೆ. ಕೊಚ್ಚಿ ರಿಫೈನರಿ ಘಟಕ ದಕ್ಷಿಣ ಭಾರತದಲ್ಲಿ ಪೆಟ್ರೋ ಕೆಮಿಕಲ್ ಕ್ರಾಂತಿಯನ್ನು ಮುನ್ನಡೆಸುವುದಲ್ಲದೆ, ನವ ಭಾರತದ ಹೆಚ್ಚುತ್ತಿರುವ ಅಗತ್ಯತೆಗಳನ್ನು ಪೂರೈಸಲು ಬೆಂಬಲ ನೀಡುತ್ತದೆ ಎಂದು ನಾನು ಬಯಸುತ್ತೇನೆ.
Prime Minister invites citizens to share their UPI experiences as UPI completes a decade
August 25, 2026
Share
The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.
Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.
The Prime Minister posted on X:
A decade ago, UPI was rolled out, marking a major turning point in India’s digital payments journey.
The sheer scale and reach of UPI are something every Indian must be proud of.
Tell me about your UPI experience and how it impacted your life...
#10YearsOfUPI
A decade ago, UPI was rolled out, marking a major turning point in India’s digital payments journey.
The sheer scale and reach of UPI are something every Indian must be proud of.