Quoteಶ್ರೀ ಆದಿ ಶಂಕರಾಚಾರ್ಯರ ಸಮಾಧಿ ಉದ್ಘಾಟನೆ ಮತ್ತು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ
Quote“ಬಾಬ ಕೇದಾರನಾಥ ಧಾಮದಲ್ಲಿ ನನಗೆ ಕೆಲವು ಅನುಭವಗಳು ತುಂಬಾ ಅಲೌಕಿಕವಾಗಿವೆ, ಅವುಗಳನ್ನು ಪದಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಿಲ್ಲದಷ್ಟು ಅಪರಿಮಿತವಾಗಿವೆ ಎಂಬ ಭಾವನೆಯಾಗುತ್ತಿದೆ”
Quote“ಆದಿ ಶಂಕರಾಚಾರ್ಯರ ಜೀವನ ಅಸಾಧಾರಣವಾದುದು, ಏಕೆಂದರೆ ಅದನ್ನು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಮೀಸಲಿಡಲಾಗಿತ್ತು”
Quote“ಭಾರತೀಯ ತತ್ವಶಾಸ್ತ್ರವು ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ ಮತ್ತು ಜೀವನವನ್ನು ಸಮಗ್ರವಾಗಿ ನೋಡುತ್ತದೆ. ಈ ಸತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆದಿ ಶಂಕರಾಚಾರ್ಯರು ಮಾಡಿದರು”
Quote“ನಮ್ಮ ಸಾಂಸ್ಕೃತಿಕ ಪರಂಪರೆಯ ನಂಬಿಕೆಯು ಸಾಧ್ಯವಾದಷ್ಟೂ ವಿಶ್ವಾಸಾರ್ಹ ಮತ್ತು ಹೆಮ್ಮೆಯಿಂದ ನೋಡಲಾಗುತ್ತದೆ”
Quote“ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯ ಗತ ವೈಭವ ಮರಳಿ ಪಡೆಯುತ್ತಿದೆ”
Quote“ಭಾರತವು ಇಂದು ತನಗೆ ತಾನೇ ಕಠಿಣ ಗುರಿ ಮತ್ತು ಗಡುವುಗಳನ್ನು ಹಾಕಿಕೊಳ್ಳುತ್ತದೆ. ಇಂದು ಭಾರತವು ಗಡುವು ಮತ್ತು ಗುರಿಗಳ ಬಗ್ಗೆ ಅಂಜುಬುರಕವಾಗಿದೆ ಎಂಬುದನ್ನು ಒಪ್ಪಲಾಗದು”
Quote“ಉತ್ತರಾಖಂಡ್ ಜನರ ಅಪಾರ ಸಾಮರ್ಥ್ಯ ಮತ್ತು ಅವರ ಸಾಮರ್ಥ್ಯದಲ್ಲಿರುವ ಸಂಪೂರ್ಣ ನಂಬಿಕೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರ ಉತ್ತರಾಖಂಡ್ ದ ಅಭಿವೃದ್ಧಿ ‘ಮಹಾಯಜ್ಞ’ ದಲ್ಲಿ ತೊಡಗಿಸಿಕೊಂಡಿದೆ”

ಜೈ ಬಾಬಾ ಕೇದಾರ್!

ಜೈ ಬಾಬಾ ಕೇದಾರ್!

ವೇದಿಕೆಯ ಮೇಲೆ ಹಾಜರಿರುವ ಎಲ್ಲಾ ಗಣ್ಯರಿಗೆ ನನ್ನ ಗೌರವಪೂರ್ವಕವಾದ ನಮಸ್ಕಾರಗಳು ಮತ್ತು ಈ ಪವಿತ್ರ ಭೂಮಿಗೆ ಈ ದಿವ್ಯ ತೇಜಸ್ಸಿನ ಕಾರ್ಯಕ್ರಮಕ್ಕಾಗಿ ನಂಬಿಕೆ, ವಿಶ್ವಾಸಗಳಿಂದ ಇಲ್ಲಿಗೆ ತಲುಪಿ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿರುವ ವಿಶ್ವಾಸಿಗಳಿಗೂ ನಮಸ್ಕಾರಗಳು!.

ಇಂದು ಪ್ರಮುಖ ವ್ಯಕ್ತಿಗಳು, ಪರಮಪೂಜ್ಯ ಶಂಕರಾಚಾರ್ಯ ಸಂಪ್ರದಾಯಕ್ಕೆ ಸೇರಿದ ಪೂಜ್ಯ ಸಂತರು, ಹಿರಿಯ ಯತಿಗಳು ಮತ್ತು ಎಲ್ಲ ಮಠಗಳಿಂದ, 12 ಜ್ಯೋತಿಲಿಂಗಗಳಿಂದ, ಹಲವು ಪಗೋಡಾಗಳಿಂದ, ದೇಶಾದ್ಯಂತದಿಂದ ಶಕ್ತಿಯ ದೈವಿಕ ನೆಲೆಗಳಿಂದ  ಬಂದಿರುವ ಅನೇಕ ಭಕ್ತರು ಭೌತಿಕವಾಗಿ ಮತ್ತು ಆಧ್ಯಾತ್ಮಿಕ ರೀತಿಯಲ್ಲಿ ಕೇಂದಾರನಾಥದ ಪವಿತ್ರ ಭೂಮಿಯಲ್ಲಿ ವರ್ಚುವಲ್ ರೀತಿಯಲ್ಲಿ ನಮ್ಮನ್ನು ಹರಸುತ್ತಿರುವಿರಿ. ಆದಿ ಶಂಕರಾಚಾರ್ಯರ ಸಮಾಧಿಯ ಮರುಸ್ಥಾಪನೆಗೂ ನೀವು ಸಾಕ್ಷಿಯಾಗುತ್ತಿರುವಿರಿ. ಭಾರತೀಯ ಅಧ್ಯಾತ್ಮಿಕ ಸಮೃದ್ಧಿಯ ಮತ್ತು ವಿಸ್ತರಣೆಯ ಬಹಳ ಅಲೌಕಿಕವಾದಂತಹ  ನೋಟ ಇದು. ನಮ್ಮ ದೇಶ ಎಷ್ಟು ವಿಸ್ತಾರವಾದುದೆಂದರೆ ಇಲ್ಲಿ ಬಹಳ ಗಮನಾರ್ಹವಾದ ಸಂತ ಪರಂಪರೆ ಇದೆ, ಇಂದಿಗೂ ಕೂಡಾ ಬಹಳ ದೊಡ್ಡ ತಪಸ್ವಿಗಳು ಭಾರತದ ಪ್ರತೀ ಮೂಲೆಗಳಲ್ಲಿಯೂ ಆಧ್ಯಾತ್ಮಿಕ ಜಾಗೃತಿಯನ್ನು, ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ಅಂತಹ ಅನೇಕ ಸಂತರು ಇಲ್ಲಿದ್ದಾರೆ ಮತ್ತು ದೇಶದ ಪ್ರತೀ ಭಾಗಗಳಿಂದಲೂ ಇದರ ಜೊತೆ ಸೇರಿಕೊಂಡಿದ್ದಾರೆ, ಅವರನ್ನು  ಹೆಸರು ಹಿಡಿದು ಕರೆದರೆ ಒಂದು ವಾರದ ಕಾಲಾವಧಿ ಕೂಡಾ ಸಾಲದು. ಮತ್ತು ನಾನು ಯಾರದಾದರೂ ಹೆಸರು ಹೇಳಲು ಮರೆತರೆ, ನಾನು ನನ್ನ ಉಳಿದ ಜೀವನದುದ್ದಕ್ಕೂ ಪಾಪದ ಹೊರೆಯನ್ನು ಹೊತ್ತುಕೊಳ್ಳಬೇಕಾದೀತು. ನನಗೆ ಅಶಯ ಇದ್ದರೂ ಈಗ ನಾನಿಲ್ಲಿ ಎಲ್ಲರ ಹೆಸರನ್ನು ಹೇಳಲು ಸಮರ್ಥನಾಗಿಲ್ಲ. ಆದರೆ ನಾನವರನ್ನು ಗೌರವಯುತವಾಗಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮಕ್ಕೆ ಅವರು ಎಲ್ಲೆಲ್ಲಿಂದ  ಸೇರಿದ್ದಾರೋ  ಅವರ ಆಶೀರ್ವಾದ ನಮ್ಮ ಅತಿ ದೊಡ್ಡ ಶಕ್ತಿ. ಆವರ ಆಶೀರ್ವಾದಗಳು ನಮಗೆ ಹಲವು ಪವಿತ್ರ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತವೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ:

आवाहनम न जानामि

न जानामि विसर्जनम,

पूजाम चैव ना

जानामि क्षमस्व परमेश्वर:!

ಅಂದರೆ “ಓ ದೇವನೇ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಾನೇನಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು”

ಆದುದರಿಂದ, ನಾನು ವಿನೀತನಾಗಿ ಇಂತಹ ಎಲ್ಲಾ ವ್ಯಕ್ತಿತ್ವಗಳಲ್ಲಿ ಕ್ಷಮೆ ಕೇಳುತ್ತೇನೆ ಮತ್ತು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಈ ಪುಣ್ಯಕರ ಸಂದರ್ಭದಲ್ಲಿ.. ಶಂಕರಾಚಾರ್ಯದಿಂದ, ಸಂತರಿಂದ ಮತ್ತು ದೇಶಾದ್ಯಂತದ ಶ್ರೇಷ್ಟ ಸಂತ ಪರಂಪರೆಯ ಎಲ್ಲಾ ಅನುಯಾಯಿಗಳಿಂದ  ಆಶೀರ್ವಾದಗಳನ್ನು ಕೋರುತ್ತೇನೆ.

 

|

ಸ್ನೇಹಿತರೇ,

ನಮ್ಮ ಉಪನಿಷದ್ ಗಳಲ್ಲಿ ಆದಿ ಶಂಕರಾಚಾರ್ಯರ ರಚನೆಗಳು “ಇದಲ್ಲ, ಅದೂ ಅಲ್ಲ” ‘नेति-नेति’ ಎಂಬುದರ ಬಗ್ಗೆ  ವಿವರವಾದ ವಿವರಣೆಯನ್ನು ಒಳಗೊಂಡಿವೆ. ರಾಮಚರಿತಮಾನಸದಲ್ಲಿ ಕೂಡಾ ವಿವಿಧ ರೀತಿಯಲ್ಲಿ ಇದನ್ನು ಪುನರುಚ್ಚರಿಸಲಾಗಿದೆ. ರಾಮಚರಿತಮಾನಸದಲ್ಲಿ ಇದನ್ನು ಹೀಗೆ ಹೇಳಲಾಗಿದೆ:

‘अबिगत अकथ अपार, अबिगत अकथ अपार,

नेति-नेति नित निगम कह’ नेति-नेति नित निगम कह’

ಕೆಲವು ಅಭಿವ್ಯಕ್ತಿಗಳು ಎಷ್ಟೊಂದು ಅಲೌಕಿಕವಾಗಿವೆ ಎಂದರೆ ಅವುಗಳು ಶಬ್ದಗಳಲ್ಲಿ ವಿವರಿಸಲಾಗದಷ್ಟು ಅನಂತವಾಗಿವೆ. ನಾನು ಬಾಬಾ ಕೇದಾರನಾಥ ದೇವರ ಆಶ್ರಯಕ್ಕೆ ಬಂದಾಗ  ನಾನು ಇಲ್ಲಿಯ ಅಣು ಅಣುವಿನೊಂದಿಗೂ ಸೇರಿಕೊಳ್ಳುತ್ತೇನೆ. ಗಾಳಿ, ಈ ಹಿಮಾಲಯದ ಶಿಖರಗಳು,ಬಾಬಾ ಕೇದಾರನ ಸಂಗ ವಿವರಿಸಲಾಗದಂತಹ ರೀತಿಯ ತರಂಗಗಳತ್ತ ಕಂಪನಗಳತ್ತ ಸೆಳೆದುಕೊಳ್ಳುತ್ತದೆ. ನಿನ್ನೆ ನಾನು ಪವಿತ್ರ ಹಬ್ಬ ದೀಪಾವಳಿಯ ಅಂಗವಾಗಿ ಗಡಿ ಭಾಗದಲ್ಲಿ ಸೈನಿಕರೊಂದಿಗೆ ಇದ್ದೆ. ಇಂದು ನಾನು ಸೈನಿಕರ ಭೂಮಿಯಲ್ಲಿದ್ದೇನೆ. ನಾನು ನನ್ನ ದೇಶದ ವೀರ ಸೈನಿಕರ ಜೊತೆ ಹಬ್ಬಗಳ ಸಂತೋಷವನ್ನು ಹಂಚಿಕೊಂಡಿದ್ದೇನೆ.ನಿನ್ನೆ ನಾನು ಸೇನಾ ಸಿಬ್ಬಂದಿಗಳ ಜೊತೆ ಪ್ರೀತಿ, ಗೌರವ ಮತ್ತು 130 ಕೋಟಿ ದೇಶವಾಸಿಗಳ ಆಶೀರ್ವಾದದ ಸಂದೇಶವನ್ನು ಕೊಂಡೊಯ್ದಿದ್ದೆ. ಮತ್ತು ಇಂದು ಗೋವರ್ಧನ  ಪೂಜಾ ಹಾಗು ಗುಜರಾತಿನ ಜನತೆಯ ಹೊಸ ವರ್ಷದ ಸಂದರ್ಭದಲ್ಲಿ ನನಗೆ ಕೇದಾರನಾಥಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಬಾಬಾ ಕೇದಾರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನಾನು ಕೆಲಕಾಲವನ್ನು ಆದಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಕಳೆದೆ. ಆ ಸಂದರ್ಭ ದೈವಿಕ ಅನುಭವದ ಸಂದರ್ಭವಾಗಿತ್ತು. ಪ್ರತಿಮೆಯ ಎದುರು ಕುಳಿತಾಗ ಆದಿ ಶಂಕರರ ಕಣ್ಣಿನಿಂದ ಬೆಳಕಿನ ಕಿರಣ ತೋರಿ ಬರುತ್ತಿತ್ತು, ಅದು ಬೃಹತ್ ಭಾರತದ ನಂಬಿಕೆಯನ್ನು ಜಾಗೃತಗೊಳಿಸುವಂತಿತ್ತು. ಶಂಕರಾಚಾರ್ಯರ ಸಮಾಧಿ ಮತ್ತೊಮ್ಮೆ ಹೆಚ್ಚು ದೈವಿಕ ರೂಪದಲ್ಲಿ  ನಮ್ಮೊಂದಿಗೆ ಇದೆ. ಇದರೊಂದಿಗೆ ಸರಸ್ವತಿ ನದಿ ದಂಡೆಯಲ್ಲಿ ಘಾಟ್ ಕೂಡಾ ನಿರ್ಮಾಣವಾಗುತ್ತಿದೆ. ಮತ್ತು ಮಂದಾಕಿನಿ ನದಿ ಮೇಲಿನ ಸೇತುವೆ ಗರುನ್ಚಟ್ಟಿಯನ್ನು ರಸ್ತೆ ಮೂಲಕ ಸಂಪರ್ಕಿಸಲು ಸಾಧ್ಯ ಮಾಡಿದೆ.  ಗರುನ್ಚಟ್ಟಿಯ ಜೊತೆ ನನಗೆ ವಿಶೇಷ ಸಂಬಂಧವಿದೆ. ನಾನು ಒಂದಿಬ್ಬರು ಹಳೆಯ ಜನರನ್ನು ಗುರುತಿಸಬಲ್ಲೆ ಮತ್ತು ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಹಳೆಯ ಜನರು ಈಗ ಇಲ್ಲ. ಕೆಲವರು ಈ ಸ್ಥಳ ಬಿಟ್ಟು ಹೋಗಿದ್ದಾರೆ, ಇನ್ನು ಕೆಲವರು ಈ ಲೋಕ ಬಿಟ್ಟು ಹೋಗಿದ್ದಾರೆ. ನೆರೆ ಹಾವಳಿಯಿಂದ ರಕ್ಷಣೆ ಪಡೆಯಲು ಮಂದಾಕಿನಿ ನದಿದಂಡೆಗೆ ನಿರ್ಮಾಣ ಮಾಡಲಾಗಿರುವ ಗೋಡೆ  ಭಕ್ತಾದಿಗಳ ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿ ಮಾಡಲಿದೆ. ಯಾತ್ರಾರ್ಥಿಗಳಿಗಾಗಿ ಮತ್ತು ಅರ್ಚಕರಿಗಾಗಿ ನಿರ್ಮಾಣ ಮಾಡಲಾದ ಹೊಸ ಮನೆಗಳು ಎಲ್ಲಾ ಋತುಗಳಲ್ಲೂ ಅವರಿಗೆ ಅನುಕೂಲತೆಗಳನ್ನು ಮತ್ತು ಭಗವಾನ್ ಕೇದಾರನಾಥ ದೇವರಿಗೆ ಸೇವೆ ಸಲ್ಲಿಸುವುದನ್ನು ಸುಲಭ ಮಾಡಲಿವೆ. ಈ ಮೊದಲು ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪ್ರವಾಸಿಗರು ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದುದನ್ನು ನಾನು ನೋಡಿದ್ದೇನೆ. ಹಲವಾರು ಜನರು ಇಲ್ಲಿ ಅರ್ಚಕರ ಒಂದು ಕೋಣೆಯೊಳಗೆ ಕಾಲಹರಣ ಮಾಡಬೇಕಾಗುತ್ತಿತ್ತು. ನಮ್ಮ ಅರ್ಚಕರು ಶೀತದಿಂದ, ಚಳಿಯಿಂದ ನಡುಗುತ್ತಿರುವ ಪರಿಸ್ಥಿತಿಯೂ ಇತ್ತು. ಆದರೆ ಅವರು ಅತಿಥಿಗಳ ಬಗ್ಗೆ ಕಳವಳಪಡುತ್ತಿದ್ದರು ಮತ್ತು ಕಾಳಜಿ ವಹಿಸುತ್ತಿದ್ದರು. ನಾನಿದನ್ನೆಲ್ಲ ನೋಡಿದ್ದೇನೆ. ಅವರ ಭಕ್ತಿಯನ್ನು, ಅರ್ಪಣಾಭಾವವನ್ನು ನಾನು ನೋಡಿದ್ದೇನೆ. ಈಗ ಅವರು ಈ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.

|

ಸ್ನೇಹಿತರೇ,

ಇಂದು ಪ್ರಯಾಣಿಕ ಸವಲತ್ತುಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಇಲ್ಲಿ ಶಿಲಾನ್ಯಾಸವನ್ನು ಮಾಡಲಾಗಿದೆ. ಪ್ರಯಾಣಿಕ ಸವಲತ್ತುಗಳ ಕೇಂದ್ರ, ಪ್ರವಾಸಿಗರಿಗಾಗಿ ಮತ್ತು ಸ್ಥಳೀಯರಿಗಾಗಿ ಆಧುನಿಕ ಆಸ್ಪತ್ರೆ, ಮಳೆಯಿಂದ ರಕ್ಷಣೆ ಪಡೆಯುವ ತಂಗುದಾಣಗಳು ಇತ್ಯಾದಿ ಸೌಲಭ್ಯಗಳು ಭಕ್ತಾದಿಗಳಿಗೆ ಸೇವಾ ಮಾಧ್ಯಮವಾಗಿ ಲಭ್ಯವಾಗಲಿವೆ ಮತ್ತು ಅವರ ಯಾತ್ರೆಯು ಇನ್ನು ಯಾವುದೇ ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ. ಪ್ರವಾಸಿಗರು ಜೈ ಭೋಲೆಯ ಪಾದಗಳ ಬಳಿ ಅಹ್ಲಾದಕರ ಅನುಭವವನ್ನು ಪಡೆಯಬಹುದು.

ಸ್ನೇಹಿತರೇ,

ವರ್ಷಗಳ ಹಿಂದೆ ಇಲ್ಲಿ ಸಂಭವಿಸಿದ ಅಪಾರ ಪ್ರಮಾಣದ ಹಾನಿ ಊಹೆಗೆ ನಿಲುಕದ್ದು. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ. ಆದರೆ ನಾನು ನನ್ನನ್ನು ನಿಯಂತ್ರಿಸಿಕೊಳ್ಳದಾದೆ. ನಾನಿಲ್ಲಿಗೆ ತಕ್ಷಣವೇ ಧಾವಿಸಿ ಬಂದೆ. ಹಾನಿಯನ್ನು ಮತ್ತು ನೋವನ್ನು ನಾನು ನನ್ನ ಕಣ್ಣಿನಿಂದ ನೋಡಿದೆ. ಇಲ್ಲಿಗೆ ಬರುತ್ತಿದ್ದ ಜನರಿಗೆ ಕೇದಾರಧಾಮವನ್ನು, ಈ ಕೇದಾರಪುರಿಯನ್ನು ಮರುನಿರ್ಮಾಣ ಮಾಡಲಾಗುವುದೇ ಎಂಬ ಬಗ್ಗೆ ಸಂಶಯವಿತ್ತು. ನನ್ನ ಅಂತರಾತ್ಮ ಸದಾ ಹೇಳುತ್ತಿತ್ತು ಇದು ಹಿಂದೆಂದಿಗಿಂತಲೂ ಹೆಚ್ಚು ಹೆಮ್ಮೆಯೊಂದಿಗೆ ಎದ್ದು ನಿಲ್ಲುತ್ತದೆ ಎಂಬುದಾಗಿ. ಬಾಬಾ ಕೇದಾರ್, ಆದಿ ಶಂಕರರ “ಸಾಧನಾ” ಮತ್ತು ಸಂತರ ತಪಸ್ಸು ಇದಕ್ಕೆ ಕಾರಣ ಎಂಬುದು ನನ್ನ ನಂಬಿಕೆ. ಇದೇ ವೇಳೆ ನನಗೆ ಭೂಕಂಪದ ಬಳಿಕ ಕಚ್ ಪ್ರದೇಶವನ್ನು ಮರು ನಿರ್ಮಾಣ ಮಾಡಿದ ಅನುಭವ ಇತ್ತು. ಆದುದರಿಂದ ನನಗೆ ವಿಶ್ವಾಸವಿತ್ತು, ಮತ್ತು ಆ ನಂಬಿಕೆ, ವಿಶ್ವಾಸ ನಿಜವಾಗುವುದನ್ನು ನನ್ನ ಕಣ್ಣುಗಳಿಂದಲೇ ನೋಡುವ ಭಾಗ್ಯ ನನ್ನ ಬದುಕಿನಲ್ಲಿ ಲಭಿಸಿರುವುದಕ್ಕಿಂತ ದೊಡ್ಡ ತೃಪ್ತಿ ಬೇರಾವುದು ಇದ್ದೀತು. ಇದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಬಾಬಾ ಕೇದಾರ್, ಸಂತರ ಆಶೀರ್ವಾದಗಳು, ಈ ಪವಿತ್ರ ಭೂಮಿ, ಒಂದೊಮ್ಮೆ ನನ್ನನ್ನು ಪೋಷಿಸಿದ ಮಣ್ಣಿನ ಗಾಳಿ, ಮತ್ತು ಸೇವೆ ಮಾಡುವ ಅವಕಾಶ ದೊರೆಯುವುದಕ್ಕಿಂತ ದೊಡ್ಡದಾದ ಪುಣ್ಯ ಜೀವನದಲ್ಲಿ ಬೇರಾವುದು ಇದ್ದೀತು. ಈ ಪ್ರಾಚೀನ ನೆಲದಲ್ಲಿ  ಆಧುನಿಕತೆ ಮತ್ತು ಅಲೌಕಿಕತೆಯ ಸಂಯೋಗ  ಮತ್ತು ಈ ಅಭಿವೃದ್ಧಿ ಕಾರ್ಯಗಳು ಭಗವಾನ್ ಶಂಕರರ ಸಹಜ ಕೃಪೆಯ ಫಲ. ದೇವರಾಗಲೀ ಅಥವಾ ಮಾನವರಾಗಲೀ ಇದರ ಇದಕ್ಕೆ ಕಾರಣಕರ್ತರು ತಾವೆಂದು ಹೇಳಲಾಗದು. ಬರೇ ದೈವಕೃಪೆಯಿಂದಷ್ಟೇ ಇದು ಸಾಧ್ಯ. ನಾನು ಉತ್ತರಾಖಂಡ ಸರಕಾರ, ನಮ್ಮ ಉತ್ಸಾಹಿ ಮತು ಯುವ ಮುಖ್ಯಮಂತ್ರಿ ಧಾಮೀ ಜೀ ಮತ್ತು ಈ ಕನಸನ್ನು ಈಡೇರಿಸುವಲ್ಲಿ ತಮ್ಮ ಕಠಿಣ ಶ್ರಮವನ್ನು ವಿನಿಯೋಗಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಿಮಪಾತದ ನಡುವೆ ಇಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಮತ್ತು ಇಲ್ಲಿ ಕಾಲಾವಕಾಶವೂ ಬಹಳ ಕಡಿಮೆ ಇತ್ತು. ಈ ಪರ್ವತ ಪ್ರದೇಶಗಳಿಗೆ ಸೇರಿದವರಲ್ಲದ ಮತ್ತು ಹೊರಗಿನಿಂದ ಬಂದ ನಮ್ಮ ಕಾರ್ಮಿಕ ಸಹೋದರರು ಮತ್ತು ಸಹೋದರಿಯರು ಹಿಮಪಾತ ಮತ್ತು ಮಳೆಯ ನಡುವೆ ಕೆಲಸವನ್ನು ಕೈಬಿಡದೆ ಶೂನ್ಯಕ್ಕಿಂತಲೂ ಕೆಳಗಿನ ತಾಪಮಾನದಲ್ಲಿ ಇದೊಂದು ದೇವರ ಪವಿತ್ರ ಕೆಲಸ ಎಂದು  ಮಾಡಿದ್ದಾರೆ. ಅದರಿಂದಾಗಿ ಮಾತ್ರ ಇದು ಸಾಧ್ಯವಾಗಿದೆ. ನನ್ನ ಮನಸ್ಸು ಸದಾ ಇಲ್ಲಿತ್ತು. ತಂತ್ರಜ್ಞಾನದ ಸಹಾಯದಿಂದ ಮತ್ತು ಡ್ರೋನ್ ಗಳ ಸಹಾಯದಿಂದ ನಾನು ನನ್ನ ಕಚೇರಿಯಿಂದ ತಿಂಗಳಿಗೊಂದಾವರ್ತಿ ನಿರ್ಮಾಣ ಕಾಮಗಾರಿಯನ್ನು ಬಹಳ ನಿಕಟವಾಗಿ ಗಮನಿಸುತ್ತಿದ್ದೆ. ನಾನು ರಾವಲರಿಗೆ ಮತ್ತು ಕೇದಾರನಾಥದ ಎಲ್ಲಾ ಪೂಜಾರಿ, ಅರ್ಚಕರಿಗೆ ಇಂದು ವಿಶೇಷ ಕೃತಜ್ಞತೆಗಳ್ನ್ನು ಸಲ್ಲಿಸುತ್ತೇನೆ, ಅವರು ಅವರ ಧನಾತ್ಮಕ ಧೋರಣೆಯ ಮೂಲಕ, ಸಂಪ್ರದಾಯಗಳು ಮತ್ತು ಪ್ರಯತ್ನಗಳ ಮೂಲಕ ನಮಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು.ಇದರ ಪರಿಣಾಮವಾಗಿ ಈ ಹಳೆಯ ಪರಂಪರೆಯನು ರಕ್ಷಿಸಲು ಮತ್ತು ಆಧುನಿಕತೆಯನ್ನು ಅಳವಡಿಸಲು ನಮಗೆ ಸಾಧ್ಯವಾಗಿದೆ. ರಾವಲರ ಕುಟುಂಬಗಳಿಗೆ ಮತ್ತು ಈ ಅರ್ಚಕರಿಗೆ ನಾನು ಹೃದಯಸ್ಪರ್ಶೀ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಮ್ಮ ವಿದ್ವಾಂಸರು ಆದಿ ಶಂಕರಾಚಾರ್ಯ ಜೀ ಅವರನ್ನು  ವಿವರಿಸಿದ್ದಾರೆ: “शंकरो शंकरः साक्षात्” ಅಂದರೆ ಆಚಾರ್ಯ ಶಂಕರರು ಭಗವಾನ್ ಶಂಕರರ ಅವತಾರ ಎಂಬುದಾಗಿ. ನಾವು ಈ ವೈಭವವನ್ನು ಮತ್ತು ಪಾವಿತ್ರ್ಯ, ದೈವಿಕತೆಯನ್ನು ಅವರ ಜೀವನದ ಪ್ರತೀ ಸಂದರ್ಭದಲ್ಲಿಯೂ ಕಾಣಬಹುದು. ಅವರನ್ನು ಒಮ್ಮೆ ನೋಡಿದರೆ ಎಲ್ಲ ನೆನಪುಗಳೂ ಮುನ್ನೆಲೆಗೆ ಬರುತ್ತವೆ. ಅಂತಹ ಸಣ್ಣ ಪ್ರಾಯದಲ್ಲಿ ಅದ್ಭುತವಾದ ಜ್ಞಾನ! ಬಾಲ್ಯದಿಂದಲೇ ಧರ್ಮಗ್ರಂಥಗಳ ಅಧ್ಯಯನ, ಜ್ಞಾನ ಮತ್ತು ವಿಜ್ಞಾನ ಅಧ್ಯಯನ! ಸಾಮಾನ್ಯ ಮನುಷ್ಯ ಜಗತ್ತಿನ ಲೌಕಿಕ ವಿಷಯಗಳನ್ನು ಅತ್ಯಲ್ಪವಾಗಿ ತಿಳಿಯಲು ಆರಂಭಿಸುವ ವಯಸ್ಸಿನಲ್ಲಿ, ಅವರು ವೇದಾಂತವನ್ನು ವಿಶ್ಲೇಷಿಸಲು ಆರಂಭ ಮಾಡಿದರು. ಇದು ಅವರಲ್ಲಿ ಭಗವಾನ್ ಶಂಕರರು ಉಂಟು ಮಾಡಿದ ಜಾಗೃತಿ ಹೊರತು ಬೇರೇನಲ್ಲ.

ಸ್ನೇಹಿತರೇ,

ಸಂಸ್ಕೃತದ ಮತ್ತು ವೇದಗಳ ಶ್ರೇಷ್ಟ ಪಂಡಿತರು ಇಲ್ಲಿದ್ದಾರೆ ಮತ್ತು ವರ್ಚುವಲ್ ಮೂಲಕವೂ ಸೇರಿಕೊಂಡಿದ್ದಾರೆ. ಶಂಕರ ಎಂದರೆ ಸಂಸ್ಕೃತದಲ್ಲಿ ಅದರ ಅರ್ಥ ನಿಮಗೆ ಗೊತ್ತೇ, ಬಹಳ ಸರಳ-“शं करोति सः शंकरः” ಅಂದರೆ ಯಾರು ಕಲ್ಯಾಣವನ್ನು ಮಾಡುತ್ತಾರೋ ಅವರೇ ಶಂಕರ. ಈ ಕಲ್ಯಾಣವನ್ನು ಸ್ಥಾಪಿಸಿದವರು ಕೂಡಾ ಆಚಾರ್ಯ  ಶಂಕರರೇ. ಅವರ ಬದುಕೇ ಅಸಾಧಾರಣವಾದುದು, ಆದರೆ ಅವರು ಸಾಮಾನ್ಯ ಮಾನವನ ಕಲ್ಯಾಣಕ್ಕೆ ಅರ್ಪಿಸಿಕೊಂಡರು. ಅವರು ಸದಾ ಭಾರತ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟರು. ಕ್ರೋಧ ಮತ್ತು ದ್ವೇಷದ ಸುಳಿಗಾಳಿಯಲ್ಲಿ ಸಿಲುಕಿ ಭಾರತದ ಏಕತೆ ನಾಶವಾಗುತ್ತಿದ್ದಾಗ ಶಂಕರಾಚಾರ್ಯರು ಹೇಳಿದರು: : “न मे द्वेष रागौ, न मे लोभ मोहौ, मदो नैव, मे नैव, मात्सर्य भावः” ಅಂದರೆ ದುರಾಸೆ, ಅತ್ಯಾಸೆ, ಅಸೂಯೆ ಮತ್ತು ಅಹಂಕಾರಗಳು ನಮ್ಮ ಸ್ವಭಾವ ಅಲ್ಲ ಎಂದು. ಭಾರತವನ್ನು ಜಾತಿ ಮತ್ತು ಪಂಥಗಳ ಗಡಿಯಾಚೆ ನಿಂತು ಅರ್ಥೈಸಿಕೊಳ್ಳುವ ಅವಶ್ಯಕತೆ ಮಾನವ ಕುಲಕ್ಕೆ ಬಂದಾಗ ಮತ್ತು ಕಳವಳಗಳು, ಸಂಶಯಗಳಿಂದ ಮೇಲೆದ್ದು ನಿಲ್ಲಬೇಕಾದ ಅಗತ್ಯ ಬಂದಾಗ ಅವರು ಸಮಾಜದಲ್ಲಿ ಪ್ರಜ್ಞೆಯನ್ನು ಮೂಡಿಸಿದರು. ಆದಿ ಶಂಕರರು ಹೇಳಿದರು : “न मे मृत्यु-शंका, न मे जातिभेदः” ಅಂದರೆ ನಾಶವಾಗುವ  ಸಂಶಯ ಅಂದರೆ ಮೃತ್ಯುಭಯ,  ಜಾತಿ ಬೇಧಗಳು ನಮ್ಮ ಸಂಪ್ರದಾಯಕ್ಕೆ  ಏನೂ ಮಾಡಲಾರವು ಎಂದರು. ನಾವೇನು, ನಮ್ಮ ತತ್ವಜ್ಞಾನ ಮತ್ತು ಚಿಂತನೆಗಳು ಏನು ಎಂಬುದನ್ನು ವಿವರಿಸಲು ಆದಿ ಶಂಕರರು ಹೇಳಿದರು “चिदानन्द रूपः शिवोऽहम् शिवोऽहम” ಅಂದರೆ, ನಾನು ಪ್ರಜ್ಞೆ ಎಂಬ ಪ್ರಕೃತಿಯ ಮತ್ತು ಆನಂದದ ಶಿವ ಎಂದು. “ಶಿವ ಆತ್ಮದಲ್ಲಿಯೇ ಇದ್ದಾನೆ. ಕೆಲವೊಮ್ಮೆ ’ಅದ್ವೈತ” ದ ತತ್ವಗಳನ್ನು ವಿವರಿಸಲು ಬೃಹತ್ ಪ್ರಮಾಣದ ಪಠ್ಯಗಳು ಬೇಕಾಗುತ್ತವೆ. ನಾನು ಪಂಡಿತ ಅಲ್ಲ. ನಾನದನ್ನು ಸರಳ ಭಾಷೆಯಲ್ಲಿ ಅರ್ಥೈಸಿಕೊಂಡಿದ್ದೇನೆ. ನಾನು ಹೇಳುವುದೇನೆಂದರೆ ಎಲ್ಲಿ ದ್ವಂದ್ವಾರ್ಥ ಇಲ್ಲವೋ ಅಲ್ಲಿ ಪ್ರಾಮಾಣಿಕತೆ ಇರುತ್ತದೆ. ಶಂಕರಾಚಾರ್ಯ ಜೀ ಭಾರತದ ಸುಪ್ತಪ್ರಜ್ಞೆಯಲ್ಲಿ ಮತ್ತೂ ಬದುಕಿದ್ದಾರೆ ಹಾಗು ಅವರು ನಮಗೆ ನಮ್ಮ ಆರ್ಥಿಕ ಅತೀಂದ್ರಿಯ ಪ್ರಗತಿಗೆ ಮಂತ್ರವನ್ನೂ ಕೊಟ್ಟಿದ್ದಾರೆ. ಅವರು ಹೇಳಿದ್ದರು: “ज्ञान विहीनः सर्व मतेन्, मुक्तिम् न भजति जन्म शतेन” ದುಃಖದಿಂದ, ನೋವುಗಳಿಂದ ಮತ್ತು ಕಷ್ಟಗಳಿಂದ  ಪಾರಾಗಲು ನಮಗೆ ಒಂದೇ ಒಂದು ದಾರಿ ಇದೆ, ಅದೆಂದರೆ ಜ್ಞಾನ. ಆದಿ ಶಂಕರಾಚಾರ್ಯರು ಭಾರತದ ಜ್ಞಾನ ವಿಜ್ಞಾನ ಮತ್ತು ತತ್ವ ಶಾಸ್ತ್ರದ ಕಾಲಾತೀತವಾದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದರು.

 

 

|

ಸ್ನೇಹಿತರೇ,

ಆಧ್ಯಾತ್ಮ ಮತ್ತು ಧರ್ಮವನ್ನು ತಪ್ಪಾಗಿ ವಿಶ್ಲೇಶಿಸುವ ಕಾಲವೊಂದಿತ್ತು. ಆದರೆ ಭಾರತದ ತತ್ವಜ್ಞಾನ ಮಾನವ ಕಲ್ಯಾಣವನ್ನು ಪ್ರಸ್ತಾಪಿಸುತ್ತದೆ, ಜೀವನವನ್ನು ಸಂಪೂರ್ಣ ದೃಷ್ಟಿಯಿಂದ ನೋಡುತ್ತದೆ ಮತ್ತು ಸಮಗ್ರ ಧೋರಣೆಯನ್ನು ಅನುಸರಿಸುತ್ತದೆ. ಆದಿ ಶಂಕರಾಚಾರ್ಯರು ಈ ಸತ್ಯವನ್ನು ಸಮಾಜ ಅರಿತುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರು. ಅವರು ಪವಿತ್ರ ಮಠಗಳನ್ನು ಸ್ಥಾಪಿಸಿದರು. ನಾಲ್ಕು ಧಾಮಗಳನ್ನು ಸ್ಥಾಪಿಸಿದರು ಮತ್ತು 12 ಜ್ಯೋತಿರ್ಲಿಂಗಗಳನ್ನು ಪುನರುಜ್ಜೀವನಗೊಳಿಸಿದರು. ಅವರು ಎಲ್ಲವನ್ನೂ ತ್ಯಾಗ ಮಾಡಿದರು ಮತ್ತು ದೇಶಕ್ಕಾಗಿ, ಸಮಾಜಕ್ಕಾಗಿ ಮತ್ತು ಮಾನವತೆಗಾಗಿ ಬದುಕುವವರಿಗಾಗಿ ಬಲಿಷ್ಟವಾದ ಸಂಪ್ರದಾಯವನ್ನು ನಿರ್ಮಾಣ ಮಾಡಿದರು. ಇಂದು ಈ ಸಂಸ್ಥೆಗಳು ಭಾರತದ ಬಲಿಷ್ಟ ಗುರುತಾಗಿ ಪರಿಗಣಿತವಾಗಿವೆ ಮತ್ತು ಭಾರತೀಯತೆಯ ಪ್ರತೀಕವಾಗಿವೆ. ನಮಗೆ ಧರ್ಮ ಎಂದರೇನು? ಜ್ಞಾನ ಮತ್ತು ಧರ್ಮದ ನಡುವಿನ ಸಂಬಂಧ ಏನು? ಅದನ್ನೇಕೆ ‘अथातो ब्रह्म जिज्ञासा’ ಎನ್ನುತ್ತಾರೆ, ಅಂದರೆ ಬ್ರಹ್ಮ –ದರ್ಶನದ ಕುತೂಹಲ ಬಲಿಷ್ಟವಾಗಿದ್ದಷ್ಟೂ ನಾರಾಯಣನನ್ನು ಬಹಳ ಬೇಗ ಕಾಣಲು ಸಾಧ್ಯವಾಗುತ್ತದೆ. ಪ್ರತೀ ಸಂದರ್ಭದಲ್ಲಿಯೂ ಪ್ರಶ್ನೆಗಳನ್ನು  ಕೇಳುವಂತಹದನ್ನು ಕಲಿಸುವ ಈ ಮಂತ್ರವನ್ನು ನೀಡುವ ಉಪನಿಷದ್ ಸಂಪ್ರದಾಯ ಏನು ಮತ್ತು ಕೆಲವೊಮ್ಮೆ ಬಾಲಕ ನಚಿಕೇತ ಯಮನ ಆಸ್ಥಾನಕ್ಕೆ ಹೋಗಿ ಆತನನ್ನು ಕೇಳುತ್ತಾನೆ “ಸಾವು ಎಂದರೆ ಏನು” ?. ನಮ್ಮ ಮಠಗಳು ಈ ಪ್ರಶ್ನೆಗಳನ್ನು ಕೇಳುವ ಪರಂಪರೆಯನ್ನು ಮತ್ತು ಜ್ಞಾನವನ್ನು ಗಳಿಸುವ ಪರಂಪರೆಯನ್ನು ಸಾವಿರಾರು ವರ್ಷಗಳಿಂದ ಜೀವಂತವಾಗಿರಿಸಿವೆ. ಮತ್ತು ಅದನ್ನು ಶ್ರೀಮಂತಗೊಳಿಸುತ್ತಿವೆ. ತಲೆಮಾರುಗಳಿಂದ ಈ ಮಠಗಳು ಶಂಕರಾಚಾರ್ಯರ ಸಂಪ್ರದಾಯಗಳನ್ನು ರಕ್ಷಿಸಿಕೊಂಡು ಬಂದಿವೆ ಮತ್ತು ಪರಂಪರೆಯ ಪಥವನ್ನು ತೋರಿಸುತ್ತಿವೆ. ಅದು ಸಂಸ್ಕೃತವಾಗಿರಲಿ, ಅಥವಾ ಸಂಸ್ಕೃತ ಭಾಷೆಯಲ್ಲಿರುವ ವೇದ ಗಣಿತದಂತಹ ವಿಜ್ಞಾನವೇ ಇರಲಿ ಅಲ್ಲಿ ಸುರಕ್ಷಿತವಾಗಿದೆ. ಅದಿ ಶಂಕರಾಚಾರ್ಯರ ತತ್ವಗಳು ಇಂದಿನ ಕಾಲಘಟ್ಟದಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ನನ್ನ ಭಾವನೆ. 

ಸ್ನೇಹಿತರೇ,

ಚಾರ್ ಧಾಮ ಯಾತ್ರಾದ ಮಹತ್ವ ಶತಮಾನಗಳಿಂದ ಇಲ್ಲಿದೆ, ದ್ವಾದಶ ಜ್ಯೋತಿರ್ಲಿಂಗಗಳಿಗೆ ಮತ್ತು ಶಕ್ತಿ ಪೀಠಗಳಿಗೆ ಅಥವಾ ಅಷ್ಟವಿನಾಯಕ ಜೀ ದೇವರಿಗೆ ಯಾತ್ರೆ ಕೈಗೊಳ್ಳುವುದು ಸಂಪ್ರದಾಯವಾಗಿದೆ. ಈ ಯಾತ್ರೆಯನ್ನು ನಮ್ಮ ಬದುಕಿನ ಜೀವಮಾನದ ಭಾಗ ಎಂದು ಪರಿಗಣಿಸಲಾಗುತ್ತದೆ. ಈ ಯಾತ್ರೆ ನಮಗೆ ಬರೇ ಸ್ಥಳ ವೀಕ್ಷಣೆಯ ಪ್ರವಾಸವಲ್ಲ. ಭಾರತವನ್ನು ಜೋಡಿಸುವ ಜೀವಂತ ಸಂಪ್ರದಾಯ ಇದು. ಇದು ಭಾರತದ ಬಗ್ಗೆ ಒಂದು ಸ್ಥೂಲ ನೋಟವನ್ನು ಒದಗಿಸುತ್ತದೆ.ಇಲ್ಲಿರುವ ಪ್ರತಿಯೊಬ್ಬರೂ ಜೀವಮಾನದಲ್ಲೊಮ್ಮೆ ಚಾರ್ ಧಾಮ, ದ್ವಾದಶ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ ಪವಿತ್ರ  ಗಂಗಾ ಸ್ನಾನ ಮಾಡಲು ಇಚ್ಛಿಸುತ್ತಾರೆ.  ಮೊದಲೆಲ್ಲಾ ಈ ಸಂಪ್ರದಾಯವನ್ನು ಮಕ್ಕಳಿಗೆ ಮನೆಯಲ್ಲಿಯೇ ತಿಳಿಸಿಕೊಡುವುದಿತ್ತು. “सौराष्ट्रे सोमनाथम् च, श्रीशैले मल्लि-कार्जुनम्”. ದ್ವಾದಶ ಜ್ಯೋತಿರ್ಲಿಂಗಗಳ ಈ ಮಂತ್ರ ಮನೆಯಲ್ಲಿ ಕುಳಿತೇ ನಮ್ಮನ್ನು ಇಡೀ ದೇಶ ಪರ್ಯಟನೆ ಮಾಡಿಸುತಿತ್ತು. ಬಾಲ್ಯದಿಂದಲೇ ದೇಶದ ವಿವಿಧ ಭಾಗಗಳ ಜೊತೆ ಸಂಪರ್ಕ ಸಾಧಿಸುವುದು ಬಹಳ ಸುಲಭದ ವಿಧಿ ವಿಧಾನವಾಗಿತ್ತಿದು. ಈ ನಂಬಿಕೆಗಳು ಭಾರತವನ್ನು ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೆ ಜೀವಂತ ಆತ್ಮವನ್ನಾಗಿಸಿವೆ, ರಾಷ್ಟ್ರೀಯ ಏಕತೆಯ ಬಲವನ್ನು ಹೆಚ್ಚಿಸಿವೆ, ’ಏಕ ಭಾರತ್-ಶ್ರೇಷ್ಟ ಭಾರತ್” ಎಂಬ ಅದ್ದೂರಿಯ ತತ್ವಶಾಸ್ತ್ರಕ್ಕೆ ಶಕ್ತಿಯನ್ನು ನೀಡಿವೆ. ಬಾಬಾ ಕೇದಾರನಾಥಕ್ಕೆ ಭೇಟಿ ನೀಡಿದ ಬಳಿಕ ಪ್ರತಿಯೊಬ್ಬ ಭಕ್ತನೂ ತನ್ನೊಂದಿಗೆ ಹೊಸ ಶಕ್ತಿಯನ್ನು ಕೊಂಡೊಯ್ಯುತ್ತಾನೆ.

ಸ್ನೇಹಿತರೇ,

ದೇಶವು ಇಂದು ಆದಿ ಶಂಕರಾಚಾರ್ಯರ ಪರಂಪರೆಯನ್ನು ತನ್ನೊಳಗಿನ ಪ್ರೇರಣೆಯಾಗಿ ಕಾಣುತ್ತಿದೆ. ಈಗ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯ ಕೇಂದ್ರಗಳನ್ನು ಅವುಗಳಿಗೆ ನೀಡಬೇಕಾದ ಹೆಮ್ಮೆಯಿಂದ ನೋಡಲಾಗುತ್ತಿದೆ. ಇಂದು ಅಯೋಧ್ಯೆಯಲ್ಲಿ ಅದ್ದೂರಿಯ ಭಗವಾನ್ ಶ್ರೀ ರಾಮ ಮಂದಿರವನ್ನು ಪೂರ್ಣ ವೈಭವದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಅಯೋಧ್ಯೆಯು ಶತಮಾನಗಳ ಬಳಿಕ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ. ಬರೇ ಎರಡು ದಿನಗಳ ಹಿಂದೆ ಅಯೋಧ್ಯೆಯಲ್ಲಿ ನಡೆದ ಅದ್ದೂರಿಯ ದೀಪೋತ್ಸವವನ್ನು ಇಡೀ ಜಗತ್ತು ನೋಡಿದೆ. ಇಂದು ನಾವು ಭಾರತದ ಪ್ರಾಚೀನ ಸಾಂಸ್ಕೃತಿಕ ಮಾದರಿಯು ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಾಶಿಯನ್ನು ಪುನರುಜ್ಜೀವನ ಮಾಡಲಾಗುತ್ತಿದೆ. ಮತ್ತು ವಿಶ್ವನಾಥ ಧಾಮದ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಬನಾರಸ್ಸಿನ ಸಾರಾನಾಥ ಬಳಿಯ ಕುಶಿನಗರ್ ನಲ್ಲಿ ಮತ್ತು ಬೋಧ ಗಯಾದಲ್ಲಿ ಅವುಗಳನ್ನು ಬುದ್ಧ ಧರ್ಮದ ಸರ್ಕ್ಯೂಟ್ ಗಳನ್ನಾಗಿ ಅಭಿವೃದ್ಧಿ ಮಾಡಲು ಕಾಮಗಾರಿಗಳು ತ್ವರಿತಗತಿಯಿಂದ ಸಾಗುತ್ತಿವೆ. ಇವುಗಳನ್ನು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಜಗತ್ತಿನ ವಿವಿಧೆಡೆಗಳಿಂದ ಬುದ್ಧ ಧರ್ಮೀಯ ಭಕ್ತರನ್ನು ಆಕರ್ಷಿಸಲು ಅನುಕೂಲವಾಗುವಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಭಗವಾನ್ ರಾಮನಿಗೆ ಸಂಬಂಧಪಟ್ಟಂತಹ ಎಲ್ಲಾ ಯಾತ್ರಾ ಸ್ಥಳಗಳನ್ನು ಜೋಡಿಸಿ ಸಂಪೂರ್ಣ ಸರ್ಕ್ಯೂಟ್ ಮಾಡುವಂತಹ ಕಾಮಗಾರಿ ಪ್ರಗತಿಯಲ್ಲಿದೆ. ಮಥುರಾ-ವೃಂದಾವನದಲ್ಲಿ ಅಭಿವೃದ್ಧಿ ಸಹಿತ ಪಾವಿತ್ರ್ಯವನ್ನೂ ಕಾಪಾಡಿಕೊಳ್ಳಲಾಗುತ್ತಿದೆ. ಸಂತರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದೆಲ್ಲಾ ಆಗುತ್ತಿರುವುದಕ್ಕೆ ಕಾರಣ ಇಂದಿನ ಭಾರತ ನಮ್ಮ ಆದಿ ಶಂಕರಾಚಾರ್ಯರಂತಹ ಸಂತರ ಬೋಧನೆಯಲ್ಲಿ ಹೆಮ್ಮೆ ಮತ್ತು ಗೌರವಗಳನ್ನು ಹೊಂದಿ ಮುನ್ನಡೆಯುತ್ತಿರುವುದು.

ಸ್ನೇಹಿತರೇ,

ಪ್ರಸ್ತುತ ನಮ್ಮ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ತನ್ನ ಭವಿಷ್ಯಕ್ಕಾಗಿ ಮತ್ತು ಮರುನಿರ್ಮಾಣಕ್ಕಾಗಿ ದೇಶವು ಹೊಸ ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಅಮೃತ ಮಹೋತ್ಸವಕ್ಕೆ ಸಂಬಂಧಿಸಿ ಕೈಗೊಳ್ಳುವ ನಿರ್ಧಾರಗಳಿಗೆ ಆದಿ ಶಂಕರಾಚಾರ್ಯರು ಬಹಳ ದೊಡ್ಡ ಪ್ರೇರಣೆಯಾಗಿ ನನಗೆ ಗೋಚರಿಸುತ್ತಾರೆ.

ದೇಶವು ತನಗೆ ತಾನೇ ದೊಡ್ಡ ಗುರಿಗಳನ್ನು ನಿಗದಿ ಮಾಡಿದಾಗ ಮತ್ತು ಸಮಯದ ಮಿತಿ ನಿಗದಿ ಮಾಡಿದಾಗ ಕೆಲವು ಜನರು ಇಷ್ಟೊಂದು ಕಡಿಮೆ ಸಮಯದಲ್ಲಿ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಚಕಿತರಾಗುತ್ತಾರೆ!. ಇದು ಸಾಧ್ಯವಾಗುತ್ತದೋ ಅಥವಾ ಇಲ್ಲವೋ!. ಆಗ ನನ್ನೊಳಗಿನ ಒಂದು ಧ್ವನಿ ಬರುತ್ತದೆ. ನಾನು 130 ಕೋಟಿ ದೇಶವಾಸಿಗಳ ಧ್ವನಿಯನ್ನು ಕೇಳುತ್ತೇನೆ.  ಸಮಯದ ನಿರ್ಬಂಧಗಳಿಂದ ಭಾರತವನ್ನು ಬೆದರಿಸುವುದನ್ನು ಇನ್ನು ಮುಂದೆ ಒಪ್ಪಲಾಗುವುದಿಲ್ಲ ಎಂದು ನಾನು ಹೇಳುತ್ತೇನೆ.ಆದಿ ಶಂಕರಾಚಾರ್ಯ ಜೀ ಅವರತ್ತ ನೋಡಿ. ಸಣ್ಣ ವಯಸ್ಸಿನಲ್ಲಿ ಅವರು ಮನೆಯನ್ನು ತೊರೆದರು ಮತ್ತು ಸನ್ಯಾಸಿಯಾದರು. ಕೇರಳದ ಕಾಲಡಿಯಿಂದ ಅವರು ಕೇದಾರಕ್ಕೆ ಬಂದರು. ಬಹಳ ಸಣ್ಣ ವಯಸ್ಸಿನಲ್ಲಿ ಈ ಲೋಕವನ್ನು ತೊರೆದರು ಆದರೆ ಭಾರತಕ್ಕೆ ಜ್ಞಾನವನ್ನು ನೀಡಿದರು. ಮತ್ತು ಭಾರತಕ್ಕೆ ಹೊಸ ಭವಿಷ್ಯವನ್ನು ಬಹಳ ಸಣ್ಣ ಅವಧಿಯಲ್ಲಿ ನಿರ್ಮಾಣ ಮಾಡಿದರು. ಅವರು ರೂಪಿಸಿದ ಶಕ್ತಿ ಭಾರತವು ಚಲಿಸುತ್ತಿರುವಂತೆ ಮಾಡಿದೆ. ಮತ್ತು ಅದು ಬರಲಿರುವ ಸಾವಿರಾರು ವರ್ಷಗಳ ಕಾಲವೂ ಮುಂದೆ ಸಾಗುವಂತೆ ಮಾಡುತ್ತದೆ. ಅದೇ ರೀತಿ ಸ್ವಾಮಿ ವಿವೇಕಾನಂದ ಜೀ ಅವರತ್ತ ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರತ್ತ ನೋಡಿ. ಇಲ್ಲಿ ಜನಿಸಿದ ಅಸಂಖ್ಯಾತ ಶ್ರೇಷ್ಟ ವ್ಯಕ್ತಿತ್ವಗಳಿವೆ ಮತ್ತು ಬಹಳ ಸಣ್ಣ ಅವಧಿಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತವು ಈ ಶ್ರೇಷ್ಟ ವ್ಯಕ್ತಿತ್ವಗಳ ಪ್ರೇರಣೆಗಳನ್ನು ಅನುಸರಿಸುತ್ತಿದೆ. ಆಧ್ಯಾತ್ಮಿಕವಾಗಿ ಮತ್ತು ಚಿರಂತನತೆಯ ರೀತಿಯಲ್ಲಿ ನಾವು ಕಾರ್ಯದಲ್ಲಿ, ಕರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ವಿಶ್ವಾಸದೊಂದಿಗೆ, ದೇಶವು ಈ “ಅಮೃತ ಕಾಲ”ದಲ್ಲಿ ಮುನ್ನಡೆಯುತ್ತಿದೆ. ಮತ್ತು ಇಂತಹ ಸಮಯದಲ್ಲಿ ದೇಶವಾಸಿಗಳಲ್ಲಿ ನಾನು ಇನ್ನೊಂದು ಕೋರಿಕೆಯನ್ನು ಮಂಡಿಸಲು ಬಯಸುತ್ತೇನೆ.  ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಚಾರಿತ್ರಿಕ ಸ್ಥಳಗಳನ್ನು ನೋಡುವುದರ ಜೊತೆಗೆ ಹೊಸ ತಲೆಮಾರಿಗೆ ಪರಿಚಯ ಮಾಡಿಕೊಡುವುದಕ್ಕಾಗಿ ಇಂತಹ ಪವಿತ್ರ ಸ್ಥಳಗಳಿಗೆ ಸಾಧ್ಯವಾದಷ್ಟು ಬಾರಿ ಭೇಟಿ ಕೊಡಿ. ಭಾರತ ಮಾತೆಯ ಅನುಭವ ಪಡೆದುಕೊಳ್ಳಿ. ಸಾವಿರಾರು ವರ್ಷಗಳ ಶ್ರೇಷ್ಟ ಸಂಪ್ರದಾಯದ ಪ್ರಜ್ಞೆಯನ್ನು ಮೂಡಿಸಿಕೊಳ್ಳಿ. ಸ್ವಾತಂತ್ರ್ಯದ ಪುಣ್ಯಕರವಾದ ಸಂದರ್ಭದಲ್ಲಿ ಇದೂ ಸ್ವಾತಂತ್ರ್ಯದ ವೈಭವದ ಹಬ್ಬವಾಗಬಲ್ಲದು. ಶಂಕರರ ಸ್ಪೂರ್ತಿ ಯನ್ನು ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಜಾಗೃತಗೊಳಿಸಬಹುದು. ಭಾರತದ ಪ್ರತೀ ಮೂಲೆ ಮೂಲೆಗೂ ಅದನ್ನು ಹರಡಬಹುದು. ಮತ್ತು ಈ ನಿಟ್ಟಿನಲ್ಲಿ ಮುಂದುವರೆಯಲು ಇದು ಸಕಾಲ. ನೂರಾರು ವರ್ಷಗಳ ನಮ್ಮ ದಾಸ್ಯದ ಸಂಕೋಲೆಯಲ್ಲಿದ್ದಾಗಲೂ  ನಮ್ಮ ನಂಬಿಕೆಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿರುವುದು ಮತ್ತು ಅದಕ್ಕೆ ಯಾವ ಹಾನಿಯೂ ಆಗದಂತೆ ನೋಡಿಕೊಂಡಿರುವುದು ಬಹಳ ಸಣ್ಣ ಸೇವೆಯೇನಲ್ಲ. ಸ್ವಾತಂತ್ರ್ಯದ ಈ ಅವಧಿಯಲ್ಲಿ ಈ ದೊಡ್ಡ ಸೇವೆಯನ್ನು ಪೂಜಿಸುವುದು, ಆರಾಧಿಸುವುದು ಭಾರತದ ನಾಗರಿಕರ ಕರ್ತವ್ಯವಲ್ಲವೇ?. ಮತ್ತು ಅದರಿಂದಾಗಿ ನಾನೊಬ್ಬ ನಾಗರಿಕನಾಗಿ ಹೇಳುತ್ತೇನೆ ನಾವು ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಅವುಗಳ ವೈಭವವನ್ನು, ಮಹತ್ವವನ್ನು  ತಿಳಿದುಕೊಳ್ಳಬೇಕು.

ಸ್ನೇಹಿತರೇ,

ದೇವಭೂಮಿ ಮತ್ತು ನಂಬಿಕೆಗಳಿಗೆ ಇಲ್ಲಿ ಮಿತಿ ಇಲ್ಲದಷ್ಟು ಸಾಧ್ಯತೆಗಳಿವೆ. ಉತ್ತರಾಖಂಡ ಸರಕಾರ ಇಂದು ಅಭಿವೃದ್ಧಿಯ “ಮಹಾಯಾಗ” ದಲ್ಲಿ ಪೂರ್ಣ ಶಕ್ತಿಯೊಂದಿಗೆ ತೊಡಗಿಸಿಕೊಂಡಿದೆ. ಚಾರ್ ಧಾಮ್ ರಸ್ತೆ ಯೋಜನೆಯ ಕೆಲಸ ಬಹಳ ತ್ವರಿತಗತಿಯಿಂದ ಸಾಗುತ್ತಿದೆ. ಮತ್ತು ಎಲ್ಲಾ ನಾಲ್ಕು ಧಾಮಗಳನ್ನೂ ಹೆದ್ದಾರಿಯೊಂದಿಗೆ ಜೋಡಿಸಲಾಗುತ್ತಿದೆ. ಆಸ್ತಿಕರು ಕೇಬಲ್ ಕಾರ್ ಮೂಲಕ ಕೇದಾರನಾಥ್ ಜೀ ಗೆ ಬರಲು ಅನುಕೂಲವಾಗುವಂತೆ ಮಾಡಲು ಯೋಜನೆಯನ್ನು ಆರಂಭ ಮಾಡಲಾಗಿದೆ. ಇಲ್ಲಿಗೆ ಹತ್ತಿರದಲ್ಲಿ ಪವಿತ್ರ ಹೇಮಕುಂಡ ಸಾಹೀಬ್ ಇದೆ. ಹೇಮಕುಂಡ ಸಾಹೀಬ್ ಜೀ ಗೆ ಭೇಟಿ ನೀಡಲು ಅನುಕೂಲವಾಗುವಂತೆ ರೋಪ್ ವೇ ನಿರ್ಮಾಣ ಮಾಡುವ ತಯಾರಿಗಳು ಸಾಗುತ್ತಿವೆ. ಇದಲ್ಲದೆ ಋಷಿಕೇಶ ಮತ್ತು ಕರ್ಣಪ್ರಯಾಗ್ ಗಳನ್ನು ರೈಲಿನ ಮೂಲಕ ಜೋಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಮುಖ್ಯಮಂತ್ರಿಗಳು ಹೇಳುತ್ತಿದ್ದರು ಪರ್ವತವಾಸಿಗಳಿಗೆ ರೈಲು ನೋಡುವುದು ಕಷ್ಟ ಎಂದು. ಈಗ ರೈಲು ಇಲ್ಲಿಗೆ ತಲುಪುತ್ತಿದೆ. ಒಮ್ಮೆ ದಿಲ್ಲಿ-ಡೆಹ್ರಾಡೂನ್ ಹೆದ್ದಾರಿ ನಿರ್ಮಾಣಗೊಂಡರೆ ಜನರು ಪ್ರಯಾಣಕ್ಕಾಗಿ ವಿನಿಯೋಗಿಸುವ ಕಾಲಾವಧಿ ಕಡಿಮೆಯಾಗುತ್ತದೆ. ಈ ಎಲ್ಲಾ ಯೋಜನೆಗಳೂ ಉತ್ತರಾಖಂಡ ಮತ್ತು ಅದರ  ಪ್ರವಾಸೋದ್ಯಮಕ್ಕೆ  ಬಹಳ ದೊಡ್ದ ಸಹಾಯ ಮಾಡಲಿವೆ. ಉತ್ತರಾಖಂಡದ ಜನತೆ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಲಿ. ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ವೇಗದಿಂದ ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಳೆದ ನೂರು ವರ್ಷಗಳ ಅವಧಿಗಿಂತ ಹೆಚ್ಚಾಗಲಿದೆ. ಇಲ್ಲಿಯ ಆರ್ಥಿಕತೆಗೆ ಅದು ನೀಡುವ ಬಲವನ್ನು ನೀವು ಕಲ್ಪಿಸಿಕೊಳ್ಳಬಹುದು. 21 ನೇ ಶತಮಾನದ ಮೂರನೇ ದಶಕ ಉತ್ತರಾಖಂಡದ್ದಾಗಲಿದೆ. ನನ್ನ ಮಾತುಗಳನ್ನು ಗುರುತಿಸಿಟ್ಟುಕೊಳ್ಳಿ. ನಾನು ಪವಿತ್ರ ಭೂಮಿಯಿಂದ ಮಾತನಾಡುತ್ತಿದ್ದೇನೆ. ಇತ್ತೀಚಿನ ಕಾಲಘಟ್ಟದಲ್ಲಿ ಚಾರ್-ಧಾಮ ಯಾತ್ರೆಗೆ ಬರುತ್ತಿರುವ ಭಕ್ತರ ಸಂಖ್ಯೆ ನಿರಂತರವಾಗಿ ದಾಖಲೆಗಳನ್ನು ಹೇಗೆ ಮುರಿಯುತ್ತಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲಿ ಕೋವಿಡ್ ಇರದಿದ್ದರೆ, ಆ ಸಂಖ್ಯೆ ಎಷ್ಟು ಆಗುತ್ತಿತ್ತೋ ನನಗೆ ಗೊತ್ತಿಲ್ಲ?. ಉತ್ತರಾಖಂಡದ ಬಗ್ಗೆ ನನಗೆ ಸಂತೋಷವೆನಿಸುತ್ತಿದೆ. ಅದರಲ್ಲೂ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಮತ್ತು ಪರ್ವತ ಪ್ರದೇಶಗಳಲ್ಲಿ ಅವರ ಶಕ್ತಿ ಬೇರೆ ಬೇರೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಉತ್ತರಾಖಂಡಕ್ಕೆ ಬರುತ್ತಿರುವ ಪ್ರವಾಸಿಗರು ಸಣ್ಣ ಪ್ರದೇಶಗಳಲ್ಲಿರುವ ಹೋಂ ಸ್ಟೇಗಳ ಜಾಲವನ್ನು ಮತ್ತು ಪ್ರಕೃತಿ ಸೌಂದರ್ಯವನ್ನು ಬಹಳ ಮೆಚ್ಚುತ್ತಾರೆ. ಅಲ್ಲಿ ಉದ್ಯೋಗಾವಕಾಶಗಳಿರುತ್ತವೆ ಮತ್ತು ಅಲ್ಲಿ ಆತ್ಮ ಗೌರವದೊಂದಿಗೆ ಬದುಕುವ ಅವಕಾಶವೂ ಇರುತ್ತದೆ. ಇಲ್ಲಿಯ ಸರಕಾರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ರೀತಿಯಿಂದಾಗಿ ಇಲ್ಲಿ ಮತ್ತೊಂದು ಪ್ರಯೋಜನವೂ ಇದೆ. ಈ ಸ್ಥಳದ ಬಗ್ಗೆ ಹೇಳಲಾಗುತ್ತದೆ ಏನೆಂದರೆ, ಪರ್ವತ ಪ್ರದೇಶಗಳ ನೀರು ಮತ್ತು ಪರ್ವತ ಪ್ರದೇಶದ ಯುವ ಜನತೆ ಪರ್ವತಗಳಿಗೆ  ಪ್ರಯೋಜನಕ್ಕಿಲ್ಲ ಎಂದು. ನಾನೀಗ ಇದನ್ನು ಬದಲಿಸಿದ್ದೇನೆ. ಈಗ ನೀರು ಕೂಡಾ ಪರ್ವತಗಳಿಗೆ ಉಪಯುಕ್ತವಾಗುತ್ತದೆ ಮತ್ತು ಯುವಜನತೆ ಕೂಡಾ ಉಪಯುಕ್ತ ಎಂದು. ವಲಸೆಯನ್ನು ಈಗ ನಿಲ್ಲಿಸಬೇಕಾಗಿದೆ. ಆದುದರಿಂದ ನನ್ನ ಯುವ ಸ್ನೇಹಿತರೇ, ಈ ದಶಕ ನಿಮ್ಮದು, ಇದು ಉತ್ತರಾಖಂಡಕ್ಕೆ ಸೇರಿದ್ದು, ಇದಕ್ಕೆ ಉತ್ತಮ ಭವಿಷ್ಯ ಇದೆ ಮತ್ತು ಬಾಬಾ ಕೇದಾರ ಅವರ ಆಶೀರ್ವಾದ ನಮ್ಮ ಮೇಲಿದೆ.

ಈ ದೇವ ಭೂಮಿಯು ತಾಯ್ನಾಡನ್ನು ರಕ್ಷಿಸಿದ ಅನೇಕ ವೀರ ಪುತ್ರರು ಮತ್ತು ಹೆಣ್ಣು ಮಕ್ಕಳ ಜನ್ಮಭೂಮಿ ಕೂಡಾ. ಇಲ್ಲಿ ವೀರತ್ವದ ಕಥೆ ಇಲ್ಲದೇ ಇರುವ  ಯಾವುದೇ ಮನೆ, ಗ್ರಾಮಗಳು ಇಲ್ಲ. ಇಂದು ದೇಶವು ತನ್ನ ಪಡೆಗಳನ್ನು ಆಧುನೀಕರಿಸುತ್ತಿರುವ ರೀತಿ, ಅವುಗಳನ್ನು ಸ್ವಾವಲಂಬಿಯಾಗಿಸುವ ರೀತಿಯಿಂದಾಗಿ ನಮ್ಮ ಧೀರ ಸೈನಿಕರ ಶಕ್ತಿ ವರ್ಧಿಸುತ್ತಿದೆ. ಇಂದು ಅವರ ಮತ್ತು ಅವರ ಕುಟುಂಬದವರ ಅವಶ್ಯಕತೆಗಳಿಗೆ  ಮತ್ತು ನಿರೀಕ್ಷೆಗಳಿಗೆ  ಆದ್ಯತೆ ನೀಡಲಾಗುತ್ತಿದೆ. ನಾಲ್ಕು ದಶಕಗಳ ಬೇಡಿಕೆಯಾದ ಒಂದು ದರ್ಜೆ, ಒಂದು ಪೆನ್ಷನ್ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಕಳೆದ ಶತಮಾನದ ಬೇಡಿಕೆ ಈ ಶತಮಾನದಲ್ಲಿ ಈಡೇರಿದೆ. ನನ್ನ ದೇಶದ ಸೈನಿಕರಿಗೆ ಸೇವೆ ಮಾಡುವ ಅವಕಾಶ ನನಗೆ ದೊರೆತುದಕ್ಕಾಗಿ ನನಗೆ ತೃಪ್ತಿ ಇದೆ. ಇದರಿಂದ ಉತ್ತರಾಖಂಡದ ಸಾವಿರಾರು ಕುಟುಂಬಗಳಿಗೆ ಪ್ರಯೋಜನವಾಗಿದೆ.

 

|

ಸ್ನೇಹಿತರೇ,

ಕೊರೊನಾ ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ ತೋರಿದ ಶಿಸ್ತು ಬಹಳ ಶ್ಲಾಘನೀಯವಾದುದು. ಭೌಗೋಳಿಕ ಸಂಕಷ್ಟಗಳ ನಡುವೆಯೂ ಅದನ್ನು ಮೀರಿ, ಇಂದು ಉತ್ತರಾಖಂಡದ ಜನತೆ 100% ಸಿಂಗಲ್ ಡೋಸ್ ಗುರಿಯನ್ನು ಸಾಧಿಸಿದ್ದಾರೆ. ಇದು ಉತ್ತರಾಖಂಡದ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ. ಪರ್ವತಗಳ ಬಗ್ಗೆ ಹೆಚ್ಚು ಪರಿಚಯ ಇರುವವರು ಈ ಕೆಲಸ ಸುಲಭ ಅಲ್ಲ ಎಂಬುದನ್ನು ತಿಳಿದಿರುತ್ತಾರೆ. ಬರೇ ಎರಡು ಅಥವಾ ಐದು ಕುಟುಂಬಗಳನ್ನು ಲಸಿಕಾಕರಣಕ್ಕೆ ಒಳಪಡಿಸಲು ಗಂಟೆಗಟ್ಟಲೆ ನಡೆದು ಪರ್ವತ ಶಿಖರಗಳನ್ನು ಹತ್ತಿ ಮತ್ತು ರಾತ್ರಿ ಇಡೀ ನಡೆದು ಮನೆಗೆ ಮರಳುವುದು ಎಷ್ಟೊಂದು ಕಷ್ಟಕರ ಎಂಬುದು ನನಗೆ ಗೊತ್ತಿದೆ. ಹಾಗಿದ್ದರೂ ಉತ್ತರಾಖಂಡ ಪ್ರತಿಯೊಬ್ಬರ ಜೀವವನ್ನು ಉಳಿಸುವುದಕ್ಕಾಗಿ ಇದನ್ನು ಮುಂದುವರೆಸಿತು. ನಾನು ಮುಖ್ಯಮಂತ್ರಿ ಮತ್ತವರ ತಂಡವನ್ನು ಅಭಿನಂದಿಸುತ್ತೇನೆ. ಎತ್ತರದಲ್ಲಿರುವ ಉತ್ತರಾಖಂಡವು ಇನ್ನೂ ದೊಡ್ಡ ಸಾಧನೆ ಮಾಡುತ್ತದೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಈ ಪವಿತ್ರ ಭೂಮಿಯಿಂದ ನಮ್ಮ ಅನೇಕ ದೃಢ ನಿರ್ಧಾರಗಳನ್ನು ಕಾರ್ಯಗತ ಮಾಡುವತ್ತ ಮುನ್ನಡೆಯೋಣ, ಬಾಬಾ ಕೇದಾರನ ಭೂಮಿಯಿಂದ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮತ್ತು ಸಂತರ, ಮಹಂತರ, ಯತಿಗಳ, ಮತ್ತು ದೇಶದ ಪ್ರತೀ ಮೂಲೆಗಳಲ್ಲಿರುವ ಆಚಾರ್ಯರ ಆಶೀರ್ವಾದಗಳೊಂದಿಗೆ ಮುಂದಡಿ ಇಡೋಣ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರ್ಧಾರವನ್ನು  ಪ್ರತಿಯೊಬ್ಬರೂ ಮಾಡುವಂತಾಗಲಿ. ಹೊಸ ಹುರುಪು, ಹೊಸ ಬೆಳಕು, ಮತ್ತು ಹೊಸ ಶಕ್ತಿಯು ದೀಪಾವಳಿಯ ಬಳಿಕ ನಮಗೆ ಹೊಸದೇನನ್ನಾದರೂ ಮಾಡುವ ಬಲವನ್ನು ನೀಡಲಿ. ಭಗವಾನ್ ಕೇದಾರನಾಥನ ಪಾದಗಳಿಗೆ ಮತ್ತು ಆದಿ ಶಂಕರಾಚಾರ್ಯರಿಗೆ  ಶಿರಬಾಗಿ ನಮಿಸುತ್ತ ದೀಪಾವಳಿ ಮತ್ತು ಛಾತ್ ಪೂಜಾದ ನಡುವೆ ಬರುವ ಹಲವಾರು ಹಬ್ಬಗಳಿಗಾಗಿ ನಾನು ನಿಮಗೆ ಮತ್ತೊಮ್ಮೆ ಶುಭಾಶಯಗಳನ್ನು ಹಾರೈಸುತ್ತೇನೆ. ಪ್ರೀತಿ,  ಭಕ್ತಿ, ಮತ್ತು ಪೂರ್ಣಹೃದಯದೊಂದಿಗೆ ನನ್ನೊಂದಿಗೆ ಹೇಳಿ

ಜೈ ಕೇದಾರ್!

ಜೈ ಕೇದಾರ್!

ಜೈ ಕೇದಾರ್!

ಧನ್ಯವಾದಗಳು.

 

  • krishangopal sharma Bjp February 22, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 22, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp February 22, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 22, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp February 22, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • Reena chaurasia August 30, 2024

    बीजेपी
  • MLA Devyani Pharande February 17, 2024

    नमो नमो नमो
  • Aditya Mishra March 24, 2023

    हर हर महादेव
  • G.shankar Srivastav June 19, 2022

    नमस्ते
  • Laxman singh Rana June 11, 2022

    नमो नमो 🇮🇳🌷
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Modi’s India hits back: How Operation Sindoor is the unveiling of a strategic doctrine

Media Coverage

Modi’s India hits back: How Operation Sindoor is the unveiling of a strategic doctrine
NM on the go

Nm on the go

Always be the first to hear from the PM. Get the App Now!
...
Text of PM’s address at Sikkim@50 event
May 29, 2025
QuotePM lays foundation stone, inaugurates multiple development projects in Sikkim
QuoteSikkim is the pride of the country: PM
QuoteOver the past decade, our government has placed the Northeast at the core of India's development journey: PM
QuoteWe are advancing the 'Act East' policy with the spirit of 'Act Fast': PM
QuoteSikkim and the entire Northeast are emerging as a shining chapter in India's progress: PM
QuoteWe endeavour to make Sikkim a global tourism destination: PM
QuoteIndia is set to become a global sports superpower, with the youth of the Northeast and Sikkim playing a key role: PM
QuoteOur dream is that Sikkim should become a Green Model State not only for India but for the entire world: PM

सिक्किम के राज्यपाल श्री ओपप्रकाश माथुर जी, राज्य के लोकप्रिय मुख्यमंत्री, मेरे मित्र प्रेम सिंह तमांग जी, संसद में मेरे साथी दोरजी शेरिंग लेपचा जी, डॉ इंद्रा हांग सुब्बा जी, उपस्थित अन्य जनप्रतिनिधिगण, देवियों और सज्जनों,

कंचनजंगाको शितल छायाँमा बसेको हाम्रो प्यारो सिक्किमको आमा-बाबु, दाजु-भाई अनि दीदी-बहिनीहरु। सिक्किम राज्यको स्वर्ण जयंतीको सुखद उपलक्ष्यमा तपाईहरु सबैलाई मंगलमय शुभकामना।

आज का ये दिन विशेष है, ये अवसर सिक्किम की लोकतांत्रिक यात्रा की गोल्डन जुबली का है। मैं स्वयं आप सबके बीच रहकर के इस उत्सव का, इस उमंग का, 50 वर्ष की सफल यात्रा का साक्षी बनना चाहता था, मैं भी आपके साथ कंधे से कंधा मिलाकर इस उत्सव का हिस्सा बनना चाहता था। मैं बहुत सुबह दिल्ली से निकलकर बागडोगरा तो पहुंच गया, लेकिन मौसम ने मुझे आपके दरवाजे तक तो पहुंचा दिया, लेकिन आगे जाने से रोक लिया और इसलिए मुझे आपके प्रत्यक्ष दर्शन का अवसर नहीं मिला है। लेकिन मैं यह दृश्य देख रहा हूं, ऐसा भव्य दृश्य मेरे सामने है, लोग ही लोग नजर आ रहे हैं, कितना अद्भुत नजारा है। कितना अच्छा होता, मैं भी आपके बीच होता, लेकिन मैं नहीं पहुंच पाया, मैं आप सबकी क्षमा मांगता हूं। लेकिन जैसे माननीय मुख्यमंत्री जी ने मुझे निमंत्रण दिया है, मैं आपको विश्वास दिलाता हूं, जैसे ही राज्य सरकार तय करेगी, मैं सिक्किम जरूर आऊंगा, आप सबके दर्शन करूंगा और इस 50 वर्ष की सफल यात्रा का मैं भी एक दर्शक बनूंगा। आज का ये दिन बीते 50 वर्षों की अचीवमेंट्स को सेलिब्रेट करने का है और आपने काफी अच्छा कार्यक्रम आयोजित किया है। और मैं तो लगातार सुन रहा था, देख रहा था, खुद मुख्यमंत्री जी इस आयोजन को यादगार बनाने के लिए काफी ऊर्जा के साथ लगे रहे हैं। वो दिल्ली में भी मुझे दो बार आकर के निमंत्रण देकर गए हैं। मैं आप सभी को सिक्किम राज्य के 50 वर्ष होने की बहुत-बहुत बधाई देता हूं।

|

साथियों,

50 साल पहले सिक्किम ने अपने लिए एक डेमोक्रेटिक फ्यूचर तय किया था। सिक्किम के लोगों का जनमन geography के साथ ही भारत की आत्मा से जुड़ने का भी था। एक भरोसा था, जब सबकी आवाज़ सुनी जाएगी, सबके हक सुरक्षित होंगे, तो विकास के एक जैसे मौके मिलेंगे। आज मैं कह सकता हूं कि सिक्किम के एक-एक परिवार का भरोसा लगातार मजबूत हुआ है। और देश ने इसके परिणाम सिक्किम की प्रगति के रूप में देखे हैं। सिक्किम आज देश का गर्व है। इन 50 वर्षों में सिक्किम प्रकृति के साथ प्रगति का मॉडल बना। बायोडायवर्सिटी का बहुत बड़ा बागीचा बना। शत-प्रतिशत ऑर्गेनिक स्टेट बना। कल्चर और हैरिटेज की समृद्धि का प्रतीक बनकर सामने आया। आज सिक्किम देश के उन राज्यों में है, जहां प्रतिव्यक्ति आय सबसे अधिक है। ये सारी उपलब्धियां सिक्किम के आप सभी साथियों के सामर्थ्य से हासिल हुई हैं। इन 50 वर्षों में सिक्किम से ऐसे अनेक सितारे निकले हैं, जिन्होंने भारत का आसमान रोशन किया है। यहां के हर समाज ने सिक्किम की संस्कृति और समृद्धि में अपना योगदान दिया है।

साथियों,

2014 में सरकार में आने के बाद मैंने कहा था- सबका साथ-सबका विकास। भारत को विकसित बनाने के लिए देश का संतुलित विकास बहुत जरूरी है। ऐसा नहीं होना चाहिए कि, एक क्षेत्र तक तो विकास का लाभ पहुंचे और दूसरा पीछे ही छूटता चला जाए। भारत के हर राज्य, हर क्षेत्र की अपनी एक खासियत है। इसी भावना के तहत बीते दशक में हमारी सरकार, नॉर्थ ईस्ट को विकास के केंद्र में लाई है। हम 'Act East' के संकल्प पर 'Act Fast' की सोच के साथ काम कर रहे हैं। अभी कुछ दिन पहले ही दिल्ली में नॉर्थ ईस्ट इन्वेस्टमेंट समिट हुई है। इसमें देश के बड़े-बड़े इंडस्ट्रियलिस्ट, बड़े इन्वेस्टर शामिल हुए। उन्होंने सिक्किम सहित पूरे नॉर्थ ईस्ट में बहुत बड़ी इन्वेस्टमेंट्स की घोषणा की है। इससे आने वाले समय में सिक्किम के नॉर्थ ईस्ट के नौजवानों के लिए यहीं पर रोजगार के अनेक बड़े अवसर तैयार होने वाले हैं।

साथियों,

आज के इस कार्यक्रम में भी सिक्किम की फ्यूचर जर्नी की एक झलक मिलती है। आज यहां सिक्किम के विकास से जुडे अनेक प्रोजेक्ट्स का शिलान्यास और लोकार्पण हुआ है। इन सारे प्रोजेक्ट्स से यहां हेल्थकेयर, टूरिज्म, कल्चर और स्पोर्ट्स की सुविधाओं का विस्तार होगा। मैं आप सभी को इन सारे प्रोजेक्ट्स के लिए ढेर सारी बधाई देता हूं।

साथियों,

सिक्किम समेत पूरा नॉर्थ ईस्ट, नए भारत की विकास गाथा का एक चमकता अध्याय बन रहा है। जहाँ कभी दिल्ली से दूरियां विकास की राह में दीवार थीं, अब वहीं से अवसरों के नए दरवाज़े खुल रहे हैं। इसका सबसे बड़ा कारण है, यहां की कनेक्टिविटी में जो बदलाव आ रहा है, आप लोगों ने तो अपनी आंखों के सामने ये परिवर्तन होते देखा है। एक समय था जब पढ़ाई के लिए, इलाज के लिए, रोजगार के लिए कहीं पर भी आना-जाना बहुत बड़ी चुनौती था। लेकिन बीते दस वर्षों में स्थिति काफी बदल गई है। इस दौरान सिक्किम में करीब चार सौ किलोमीटर के नए नेशनल हाईवे बने हैं। गांवों में सैकड़ों किलोमीटर नई सड़कें बनी हैं। अटल सेतु बनने से सिक्किम की दार्जिलिंग से कनेक्टिविटी बेहतर हुई है। सिक्किम को कालिम्पोंग से जोड़ने वाली सड़क पर भी काम तेज़ी से चल रहा है। और अब तो बागडोगरा-गंगटोक एक्सप्रेसवे से भी सिक्किम आना-जाना बहुत आसान हो जाएगा। इतना ही नहीं, आने वाले समय में हम इसे गोरखपुर-सिलीगुड़ी एक्सप्रेसवे से भी जोड़ेंगे।

|

साथियों,

आज नॉर्थ ईस्ट के हर राज्य की राजधानी को रेलवे से जोड़ने का अभियान तेज़ी से आगे बढ़ रहा है। सेवोक-रांगपो रेल लाइन, सिक्किम को भी देश के रेल नेटवर्क से जोड़ेगी। हमारा ये भी प्रयास है कि जहां सड़कें नहीं बन सकतीं, वहां रोपवे बनाए जाएं। थोड़ी देर पहले ऐसे ही रोपवे प्रोजेक्ट्स का लोकार्पण किया गया है। इससे भी सिक्किम के लोगों की सहूलियत बढ़ेगी।

साथियों,

बीते एक दशक में भारत नए संकल्पों के साथ आगे बढ़ रहा है। और इसमें बेहतर हेल्थकेयर का लक्ष्य हमारी बहुत बड़ी प्राथमिकता रहा है। पिछले 10-11 साल में देश के हर राज्य में बड़े अस्पताल बने हैं। एम्स और मेडिकल कॉलेजों का बहुत विस्तार हुआ है। आज यहां भी 500 बेड का अस्पताल आपको समर्पित किया गया है। ये अस्पताल गरीब से गरीब परिवार को भी अच्छा इलाज सुनिश्चित करेगा।

साथियों,

हमारी सरकार एक तरफ अस्पताल बनाने पर बल दे रही है, वहीं दूसरी तरफ सस्ते और बेहतर इलाज का भी इंतज़ाम कर रही है। आयुष्मान भारत योजना के तहत सिक्किम के 25 हजार से ज्यादा साथियों का मुफ्त इलाज किया गया है। अब पूरे देश में 70 वर्ष से ऊपर के सभी बुजुर्गों को 5 लाख रुपए तक का मुफ्त इलाज मिल रहा है। अब सिक्किम के मेरे किसी भी परिवार को अपने बुजुर्गों की चिंता नहीं करनी पड़ेगी। उनका इलाज हमारी सरकार करेगी।

साथियों,

विकसित भारत का निर्माण, चार मजबूत पिलर्स पर होगा। ये पिलर्स हैं- गरीब, किसान, नारी और नौजवान। आज देश, इन पिलर्स को लगातार मजबूत कर रहा है। आज के अवसर पर मैं सिक्किम के किसान बहनों-भाइयों की खुले दिल से प्रशंसा करुंगा। आज देश, खेती की जिस नई धारा की तरफ बढ़ रहा है, उसमें सिक्किम सबसे आगे है। सिक्किम से ऑर्गेनिक प्रोडक्ट्स का एक्सपोर्ट भी बढ़ रहा है। हाल में ही यहा की मशहूर डैले खुरसानी मिर्च, ये पहली बार एक्सपोर्ट शुरु हुआ है। मार्च महीने में ही, पहला कन्साइनमेंट विदेश पहुंच गया है। आने वाले समय में ऐसे अनेक उत्पाद यहां से विदेश निर्यात होंगे। राज्य सरकार के हर प्रयास के साथ केंद्र सरकार कंधे से कंधा मिलाकर चल रही है।

साथियों,

सिक्किम की ऑर्गेनिक बास्केट को और समृद्ध करने के लिए केंद्र सरकार ने एक और कदम उठाया है। यहां सोरेंग जिले में देश का पहला ऑर्गेनिक फिशरीज़ क्लस्टर बन रहा है। ये सिक्किम को, देश और दुनिया में एक नई पहचान देगा। ऑर्गेनिक फार्मिंग के साथ-साथ सिक्किम को ऑर्गेनिक फिशिंग के लिए भी जाना जाएगा। दुनिया में ऑर्गेनिक फिश और फिश प्रोडक्ट्स की बहुत बड़ी डिमांड है। इससे यहां के नौजवानों के लिए मछली पालन के क्षेत्र में नए मौके मिलेंगे।

|

साथियों,

अभी कुछ दिन पहले ही दिल्ली में नीति आयोग की गवर्निंग काउंसिल की बैठक हुई है। इस बैठक के दौरान मैंने कहा है, हर राज्य को अपने यहां एक ऐसा टूरिस्ट डेस्टिनेशन डवलप करना चाहिए, जो इंटरनेशनल लेवल पर अपनी पहचान बनाए। अब समय आ गया है, सिक्किम सिर्फ हिल स्टेशन नहीं, ग्लोबल टूरिज्म डेस्टिनेशन बने! सिक्किम के सामर्थ्य का कोई मुकाबला ही नहीं है। सिक्किम टूरिज्म का complete package है! यहाँ प्रकृति भी है, आध्यात्म भी है। यहाँ झीलें हैं, झरने हैं, पहाड़ हैं और शांति की छाया में बसे बौद्ध मठ भी हैं। कंचनजंगा नेशनल पार्क, UNESCO वर्ल्ड हेरिटेज साइट, सिक्किम की इस धरोहर पर सिर्फ भारत नहीं, पूरी दुनिया को गर्व है। आज जब यहां नया स्कायवॉक बन रहा है, स्वर्ण जयंती प्रोजेक्ट का लोकार्पण हो रहा है, अटल जी की प्रतिमा का अनावरण किया जा रहा है, ये सभी प्रोजेक्ट, सिक्किम की नई उड़ान के प्रतीक हैं।

साथियों,

सिक्किम में एडवेंचर और स्पोर्ट्स टूरिज्म का भी बहुत पोटेंशियल है। ट्रेकिंग, माउंटेन बाइकिंग, हाई-एल्टीट्यूड ट्रेनिंग जैसी गतिविधियाँ यहां आसानी से हो सकती हैं। हमारा सपना है सिक्किम को कॉन्फ्रेंस टूरिज्म, वेलनेस टूरिज्म और कॉनसर्ट टूरिज्म का भी हब बनाया जाए। स्वर्ण जयंती कन्वेंशन सेंटर, यही तो भविष्य की तैयारी का हिस्सा है। मैं चाहता हूँ कि दुनिया के बड़े-बड़े कलाकार गंगटोक की वादियों में आकर perform करें, और दुनिया कहे “अगर कहीं प्रकृति और संस्कृति साथ-साथ हैं, तो वो हमारा सिक्किम है!”

साथियों,

G-20 समिट की बैठकों को भी हम नॉर्थ ईस्ट तक इसलिए लेकर आए, ताकि दुनिया यहाँ की क्षमताओं को देख सके, यहां की संभावनाओं को समझ सके। मुझे खुशी है कि सिक्किम की NDA सरकार इस विज़न को तेज़ी से धरातल पर उतार रही है।

साथियों,

आज भारत दुनिया की बड़ी आर्थिक शक्तियों में से एक है। आने वाले समय में भारत स्पोर्ट्स सुपरपावर भी बनेगा। और इस सपने को साकार करने में, नॉर्थ ईस्ट और सिक्किम की युवा शक्ति की बहुत बड़ी भूमिका है। यही धरती है जिसने हमें बाईचुंग भूटिया जैसे फुटबॉल लीजेंड दिए। यही सिक्किम है, जहाँ से तरुणदीप राय जैसे ओलंपियन निकले। जसलाल प्रधान जैसे खिलाड़ियों ने भारत को गौरव दिलाया। अब हमारा लक्ष्य है, सिक्किम के हर गाँव, हर कस्बे से एक नया चैम्पियन निकले। खेल में सिर्फ भागीदारी नहीं, विजय का संकल्प हो! गंगटोक में जो नया स्पोर्ट्स कॉम्प्लेक्स बन रहा है, वो आने वाले दशकों में चैम्पियनों की जन्मभूमि बनेगा। ‘खेलो इंडिया’ स्कीम के तहत सिक्किम को विशेष प्राथमिकता दी गई है। टैलेंट को पहचान कर, ट्रेनिंग, टेक्नोलॉजी और टूर्नामेंट – हर स्तर पर मदद दी जा रही है। मुझे पूरा विश्वास है, सिक्किम के युवाओं की ये ऊर्जा, ये जोश, भारत को ओलंपिक पोडियम तक पहुंचाने का काम करेगा।

साथियों,

सिक्किम के आप सभी लोग पर्यटन की पावर को जानते हैं, समझते हैं। टूरिज्म सिर्फ मनोरंजन नहीं है, ये डायवर्सिटी का सेलिब्रेशन भी है। लेकिन आतंकियों ने जो कुछ पहलगाम किया, वो सिर्फ भारतीयों पर हमला नहीं था, वो मानवता की आत्मा पर हमला था, भाईचारे की भावना पर हमला था। आतंकियों ने हमारे अनेक परिवारों की खुशियां को तो छीन लिया, उन्होंने हम भारतीयों को बांटने की भी साजिश रची। लेकिन आज पूरी दुनिया देख रही है कि, भारत पहले से कहीं ज़्यादा एकजुट है! हमने एकजुट होकर आतंकियों और उनके सरपरस्तों को साफ़ संदेश दिया है। उन्होंने हमारी बेटियों के माथे से सिंदूर पोछकर उनका जीना हराम कर दिया, हमने आतंकियों को ऑपरेशन सिंदूर से करारा जवाब दिया है।

|

साथियों,

आतंकी अड्डे तबाह होने से बौखलाकर पाकिस्तान ने हमारे नागरिकों और सैनिकों पर हमले की कोशिश की, लेकिन उसमें भी पाकिस्तान की पोल ही खुल गई। और हमने उनके कई एयरबेस को तबाह करके दिखा दिया, कि भारत कब क्या कर सकता है, कितना तेजी से कर सकता है, कितना सटीक कर सकता है।

साथियो,

राज्य के रूप में सिक्किम के 50 वर्ष का ये पड़ाव हम सभी के लिए प्रेरणा है। विकास की ये यात्रा अब और तेज़ होगी। अब हमारे सामने 2047 हैं, वो साल जब देश की आजादी के 100 साल पूरे होंगे

और यही वो समय होगा, जब सिक्किम को राज्य बने 75 वर्ष कंप्लीट हो जाएंगे। इसलिए हमें आज ये लक्ष्य तय करना है, कि 75 के पड़ाव पर हमारा सिक्किम कैसा होगा? हम सभी किस प्रकार का सिक्किम देखना चाहते हैं, हमें रोडमैप बनाना है, 25 साल के विजन के साथ कदम कदम पर कैसे आगे बढ़ेंगे ये सुनिश्चित करना है। हर कुछ समय पर बीच-बीच में उसकी समीक्षा करते रहना है। और लक्ष्य से हम कितना दूर हैं, कितना तेजी से आगे बढ़ना है। नए हौसले, नई उमंग, नई ऊर्जा के साथ आगे बढ़ना है, हमें सिक्किम की इकॉनॉमी की रफ्तार बढ़ानी है। हमें कोशिश करनी है कि हमारा सिक्किम एक वेलनेस स्टेट के रूप में उभरे। इसमें भी विशेष रूप से हमारे नौजवानों को ज्यादा अवसर मिले। हमें सिक्किम के यूथ को स्थानीय जरूरतों के साथ ही दुनिया की डिमांड के लिए भी तैयार करना है। दुनिया में जिन सेक्टर्स में यूथ की डिमांड है, उनके लिए यहां स्किल डवलपमेंट के नए मौके हमें बनाने हैं।

साथियों,

आइए, हम सब मिलकर एक संकल्प लें, अगले 25 वर्षों में सिक्किम को विकास, विरासत और वैश्विक पहचान का सर्वोच्च शिखर दिलाएँगे। हमारा सपना है— सिक्किम, केवल भारत का नहीं, पूरे विश्व का ग्रीन मॉडल स्टेट बने। एक ऐसा राज्य जहां के हर नागरिक के पास पक्की छत हो, एक ऐसा राज्य जहां हर घर में सोलर पावर से बिजली आए, एक ऐसा राज्य जो एग्रो- स्टार्ट अप्स, टूरिज्म स्टार्ट अप्स में नया परचम लहराए, जो ऑर्गैनिक फूड के एक्सपोर्ट में दुनिया में अपनी पहचान बनाए। एक ऐसा राज्य जहां का हर नागरिक डिजिटल ट्रांजेक्शन करे, जो वेस्ट टू वेल्थ की नई ऊंचाइयों पर हमारी पहचान को पहुंचाए, अगले 25 साल ऐसे अनेक लक्ष्यों की प्राप्ति के हैं, सिक्किम को वैश्विक मंच पर नई ऊंचाई देने के हैं। आइए, हम इसी भावना के साथ आगे बढ़ें और विरासत को, इसी तरह आगे बढ़ाते रहें। एक बार फिर, सभी सिक्किम वासियों को इस महत्वपूर्ण 50 वर्ष की यात्रा पर, इस महत्वपूर्ण अवसर पर देशवासियों की तरफ से, मेरी तरफ से बहुत-बहुत शुभकामनाएं देता हूं, बहुत बहुत धन्यवाद!