ಬಿಹಾರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಾಶಯಗಳು, ಈ ವೇದಿಕೆಯು ನಿಮ್ಮ ಅತ್ಯುತ್ತಮತೆಯನ್ನು ಹೊರತರಲಿ ಮತ್ತು ನಿಜವಾದ ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸಲಿ: ಪ್ರಧಾನಮಂತ್ರಿ
ಭಾರತವು 2036ರಲ್ಲಿ ನಮ್ಮ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಪ್ರಯತ್ನಿಸುತ್ತಿದೆ: ಪ್ರಧಾನಮಂತ್ರಿ
ದೇಶದಲ್ಲಿ ಕ್ರೀಡಾ ಮೂಲಸೌಕರ್ಯ ಆಧುನೀಕರಿಸಲು ಸರ್ಕಾರ ಗಮನ ಹರಿಸುತ್ತಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ಕ್ರೀಡಾ ಬಜೆಟ್ ಅನ್ನು 3 ಪಟ್ಟು ಹೆಚ್ಚು ಹೆಚ್ಚಿಸಲಾಗಿದೆ, ಈ ವರ್ಷ ಕ್ರೀಡಾ ಬಜೆಟ್ ಸುಮಾರು 4,000 ಕೋಟಿ ರೂ. ಆಗಿದೆ: ಪ್ರಧಾನಮಂತ್ರಿ
ದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಮತ್ತು ಅತ್ಯುತ್ತಮ ಕ್ರೀಡಾ ವೃತ್ತಿಪರರನ್ನು ಸೃಜಿಸುವ ಗುರಿಯೊಂದಿಗೆ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಭಾಗವಾಗಿ ಮಾಡಿದ್ದೇವೆ: ಪ್ರಧಾನಮಂತ್ರಿ

ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಮನ್ಸುಖ್ ಭಾಯ್, ಸಹೋದರಿ ರಕ್ಷಾ ಖಾಡ್ಸೆ ಮತ್ತು ಶ್ರೀ ರಾಮ್ ನಾಥ್ ಠಾಕೂರ್ ಜಿ, ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಜಿ ಮತ್ತು ವಿಜಯ್ ಕುಮಾರ್ ಸಿನ್ಹಾ ಜಿ, ಇಲ್ಲಿ ಹಾಜರಿರುವ ಗಣ್ಯ ಅತಿಥಿಗಳೆ, ಎಲ್ಲಾ ಆಟಗಾರರೆ, ತರಬೇತುದಾರರೆ, ಇತರೆ ಸಿಬ್ಬಂದಿ ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರೆ!

ದೇಶದ ಮೂಲೆ ಮೂಲೆಯಿಂದ ಬಂದಿರುವ ಎಲ್ಲಾ ಕ್ರೀಡಾಪಟುಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ - ಒಬ್ಬರಿಗೊಬ್ಬರು ಒಬ್ಬರಿಗಿಂತ ಒಬ್ಬರು ಉತ್ತಮ ಆಟಗಾರರು, ಪ್ರತಿಯೊಬ್ಬರೂ ಒಬ್ಬರಿಗಿಂತ ಹೆಚ್ಚು ಪ್ರತಿಭಾನ್ವಿತರಾಗಿದ್ದಾರೆ.

ಸ್ನೇಹಿತರೆ,

ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸಮಯದಲ್ಲಿ, ಬಿಹಾರದ ವಿವಿಧ ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪಾಟ್ನಾದಿಂದ ರಾಜಗೀರ್ ವರೆಗೆ, ಗಯಾದಿಂದ ಭಾಗಲ್ಪುರ್ ಮತ್ತು ಬೇಗುಸರಾಯ್ ವರೆಗೆ, 6,000ಕ್ಕೂ ಹೆಚ್ಚು ಕನಸುಗಳು ಮತ್ತು ನಿರ್ಣಯಗಳನ್ನು ಹೊಂದಿರುವ 6,000ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳು ಮುಂದಿನ ಕೆಲವು ದಿನಗಳಲ್ಲಿ ಬಿಹಾರದ ಈ ಪವಿತ್ರ ಭೂಮಿಯಲ್ಲಿ ತಮ್ಮ ಛಾಪು ಮೂಡಿಸಲಿದ್ದಾರೆ. ಎಲ್ಲಾ ಆಟಗಾರರಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ. ಭಾರತದಲ್ಲಿ ಕ್ರೀಡೆಗಳು ಈಗ ಸಾಂಸ್ಕೃತಿಕ ಗುರುತಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿವೆ. ಭಾರತದಲ್ಲಿ ನಮ್ಮ ಕ್ರೀಡಾ ಸಂಸ್ಕೃತಿ ಬೆಳೆದಂತೆ, ರಾಷ್ಟ್ರವಾಗಿ ನಮ್ಮ ಮೃದು ಶಕ್ತಿ ಹೆಚ್ಚಾಗುತ್ತದೆ. ಈ ದಿಕ್ಕಿನಲ್ಲಿ ದೇಶದ ಯುವಕರಿಗೆ ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ಮಹತ್ವದ ವೇದಿಕೆಯಾಗಿದೆ.

ಸ್ನೇಹಿತರೆ,

ಯಾವುದೇ ಕ್ರೀಡಾಪಟು ತಮ್ಮ ಕಾರ್ಯಕ್ಷಮತೆ ಸುಧಾರಿಸಿಕೊಳ್ಳಲು, ನಿರಂತರವಾಗಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು, ಹೆಚ್ಚಿನ ಪಂದ್ಯಗಳನ್ನು ಆಡುವುದು ಮತ್ತು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಎನ್‌ಡಿಎ ಸರ್ಕಾರವು ತನ್ನ ನೀತಿಗಳಲ್ಲಿ ಯಾವಾಗಲೂ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇಂದು ನಾವು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ, ಖೇಲೋ ಇಂಡಿಯಾ ಯುವ ಕ್ರೀಡಾಕೂಟ, ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ ಮತ್ತು ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟಗಳನ್ನು ಹೊಂದಿದ್ದೇವೆ. ಅಂದರೆ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ವರ್ಷಪೂರ್ತಿ, ವಿವಿಧ ಹಂತಗಳಲ್ಲಿ, ದೇಶಾದ್ಯಂತ ನಿಯಮಿತವಾಗಿ ನಡೆಸಲಾಗುತ್ತದೆ. ಇದು ನಮ್ಮ ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಅವರ ಪ್ರತಿಭೆ ಬೆಳಗಲು ಸಹಾಯ ಮಾಡುತ್ತದೆ. ನಾನು ನಿಮಗೆ ಕ್ರಿಕೆಟ್ ರಂಗದ ಒಂದು ಉದಾಹರಣೆ ನೀಡುತ್ತೇನೆ. ಇತ್ತೀಚೆಗೆ, ಐಪಿಎಲ್‌ನಲ್ಲಿ ಬಿಹಾರದ ಮಗ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನವನ್ನು ನಾವು ನೋಡಿದ್ದೇವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ವೈಭವ್ ಅದ್ಭುತ ದಾಖಲೆ ಸ್ಥಾಪಿಸಿದರು. ಅವರ ಅದ್ಭುತ ಪ್ರದರ್ಶನದ ಹಿಂದೆ, ಸಹಜವಾಗಿ, ಅವರ ಕಠಿಣ ಪರಿಶ್ರಮವಿದೆ, ಆದರೆ ಅವರ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಿದ ವಿವಿಧ ಹಂತಗಳಲ್ಲಿನ ಹಲವಾರು ಪಂದ್ಯಗಳು ಸಹ ಇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಹೆಚ್ಚು ಆಡಿದಷ್ಟೂ ನೀವು ಹೆಚ್ಚು ಅರಳುತ್ತೀರಿ. ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಸಮಯದಲ್ಲಿ, ಎಲ್ಲಾ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಆಡುವ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಪಡೆಯುತ್ತಾರೆ ಮತ್ತು ನೀವು ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಪ್ರತಿಯೊಬ್ಬ ಭಾರತೀಯನ ಬಹುಕಾಲದ ಕನಸಾಗಿದೆ. ಇಂದು ಭಾರವು 2036ರಲ್ಲಿ ದೇಶದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಶ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಲು ಮತ್ತು ಶಾಲಾ ಮಟ್ಟದಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಲು, ಸರ್ಕಾರವು ಶಾಲಾ ಹಂತದಿಂದಲೇ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದೆ. ಖೇಲೋ ಇಂಡಿಯಾ ಉಪಕ್ರಮದಿಂದ TOPS(ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ)ವರೆಗೆ, ಈ ಉದ್ದೇಶಕ್ಕಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇಂದು ಬಿಹಾರ ಸೇರಿದಂತೆ ದೇಶಾದ್ಯಂತ ಸಾವಿರಾರು ಕ್ರೀಡಾಪಟುಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರವು ನಮ್ಮ ಆಟಗಾರರಿಗೆ ಹೆಚ್ಚಿನ ಕ್ರೀಡೆಗಳನ್ನು ಅನ್ವೇಷಿಸಲು ಮತ್ತು ಆಡಲು ಅವಕಾಶಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಅದಕ್ಕಾಗಿಯೇ ಗಟ್ಕಾ, ಕಲರಿಪಯಟ್ಟು, ಖೋ-ಖೋ, ಮಲ್ಲಖಂಬ್ ಮತ್ತು ಯೋಗಾಸನದಂತಹ ಆಟಗಳನ್ನು ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕ್ರೀಡಾಪಟುಗಳು ಹಲವಾರು ಹೊಸ ಕ್ರೀಡೆಗಳಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಭಾರತೀಯ ಕ್ರೀಡಾಪಟುಗಳು ಈಗ ವುಶು, ಸೆಪಕ್ ಟಕ್ರಾ, ಪೆನ್ಕಾಕ್ ಸಿಲಾಟ್, ಲಾನ್ ಬೌಲ್ಸ್ ಮತ್ತು ರೋಲರ್ ಸ್ಕೇಟಿಂಗ್‌ನಂತಹ ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿದ್ದಾರೆ. 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ನಮ್ಮ ಮಹಿಳಾ ತಂಡ ಲಾನ್ ಬೌಲ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆಯಿತು.

 

ಸ್ನೇಹಿತರೆ,

ಭಾರತದಲ್ಲಿ ಕ್ರೀಡಾ ಮೂಲಸೌಕರ್ಯ ಆಧುನೀಕರಿಸುವತ್ತ ಸರ್ಕಾರ ಗಮನ ಹರಿಸಿದೆ. ಕಳೆದ ದಶಕದಲ್ಲಿ, ಕ್ರೀಡಾ ಬಜೆಟ್ ಅನ್ನು 3 ಪಟ್ಟು ಹೆಚ್ಚು ಹೆಚ್ಚಿಸಲಾಗಿದೆ. ಈ ವರ್ಷ, ಕ್ರೀಡಾ ಬಜೆಟ್ ಸುಮಾರು 4,000 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಈ ಬಜೆಟ್‌ನ ಗಮನಾರ್ಹ ಭಾಗವನ್ನು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಖರ್ಚು ಮಾಡಲಾಗುತ್ತಿದೆ. ಇಂದು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ, ಅವುಗಳಲ್ಲಿ 3 ಡಜನ್‌ಗಿಂತಲೂ ಹೆಚ್ಚು ಬಿಹಾರದಲ್ಲಿವೆ. ಬಿಹಾರವು ಎನ್‌ಡಿಎಯ ಡಬಲ್ ಎಂಜಿನ್ ಸರ್ಕಾರಿ ಮಾದರಿಯಿಂದ ಪ್ರಯೋಜನ ಪಡೆಯುತ್ತಿದೆ. ರಾಜ್ಯ ಸರ್ಕಾರವು ತನ್ನದೇ ಆದ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ವಿಸ್ತರಿಸುತ್ತಿದೆ. ರಾಜಗೀರ್‌ನಲ್ಲಿ ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗಿದೆ. ಬಿಹಾರದಲ್ಲಿ ಬಿಹಾರ ಕ್ರೀಡಾ ವಿಶ್ವವಿದ್ಯಾಲಯ ಮತ್ತು ರಾಜ್ಯ ಕ್ರೀಡಾ ಅಕಾಡೆಮಿಯಂತಹ ಸಂಸ್ಥೆಗಳನ್ನು ಸಹ ಸ್ಥಾಪಿಸಲಾಗಿದೆ. ಪಾಟ್ನಾ-ಗಯಾ ಹೆದ್ದಾರಿಯ ಉದ್ದಕ್ಕೂ ಕ್ರೀಡಾ ನಗರ ನಿರ್ಮಿಸಲಾಗುತ್ತಿದೆ. ಬಿಹಾರದ ಹಳ್ಳಿಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗ, ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಬಿಹಾರದ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೆ,

ಕ್ರೀಡಾ ಪ್ರಪಂಚ ಮತ್ತು ಕ್ರೀಡೆಗೆ ಸಂಬಂಧಿಸಿದ ಆರ್ಥಿಕತೆಯು ಇನ್ನು ಮುಂದೆ ಆಟದ ಮೈದಾನಕ್ಕೆ ಸೀಮಿತವಾಗಿಲ್ಲ. ಇಂದು ಇದು ಯುವಕರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಭೌತಚಿಕಿತ್ಸೆ, ದತ್ತಾಂಶ ವಿಶ್ಲೇಷಣೆ, ಕ್ರೀಡಾ ತಂತ್ರಜ್ಞಾನ, ಪ್ರಸಾರ, ಇ-ಕ್ರೀಡೆ ಮತ್ತು ನಿರ್ವಹಣೆಯಂತಹ ಕ್ಷೇತ್ರಗಳು ಪ್ರಮುಖ ಉಪ-ವಲಯಗಳಾಗಿ ಹೊರಹೊಮ್ಮುತ್ತಿವೆ. ನಮ್ಮ ಯುವಕರು ತರಬೇತುದಾರರು, ಫಿಟ್‌ನೆಸ್ ತರಬೇತುದಾರರು, ನೇಮಕಾತಿ ಏಜೆಂಟ್‌ಗಳು, ಈವೆಂಟ್ ಮ್ಯಾನೇಜರ್‌ಗಳು, ಕ್ರೀಡಾ ವಕೀಲರು ಮತ್ತು ಕ್ರೀಡಾ ಮಾಧ್ಯಮ ತಜ್ಞರಾಗಿ ವೃತ್ತಿಜೀವನವನ್ನು ಪರಿಗಣಿಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಕ್ರೀಡಾಂಗಣವು ಇನ್ನು ಮುಂದೆ ಪಂದ್ಯಗಳನ್ನು ಆಡುವ ಸ್ಥಳವಾಗಿರದೆ, ಅದು ಸಾವಿರಾರು ಉದ್ಯೋಗಾವಕಾಶಗಳ ಮೂಲವಾಗಿರಲಿದೆ. ಕ್ರೀಡಾ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಯುವಕರಿಗೆ ಅನೇಕ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ದೇಶದಲ್ಲಿ ಸ್ಥಾಪನೆಯಾಗುತ್ತಿರುವ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಗಳು ಮತ್ತು ಕ್ರೀಡೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಭಾಗವಾಗಿ ಮಾಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಅತ್ಯುತ್ತಮ ಕ್ರೀಡಾಪಟುಗಳನ್ನು ಮಾತ್ರವಲ್ಲದೆ, ಭಾರತದಲ್ಲಿ ಉನ್ನತ ಶ್ರೇಣಿಯ ಕ್ರೀಡಾ ವೃತ್ತಿಪರರನ್ನು ತಯಾರಿಸುವ ಗುರಿ ಹೊಂದಿವೆ.

ನನ್ನ ಯುವ ಸ್ನೇಹಿತರೆ,

ಜೀವನದ ಪ್ರತಿಯೊಂದು ಅಂಶದಲ್ಲೂ ಕ್ರೀಡಾ ಮನೋಭಾವ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ತಂಡದ ಕೆಲಸ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇತರರೊಂದಿಗೆ ಒಟ್ಟಾಗಿ ಹೇಗೆ ಮುಂದುವರಿಯುವುದು ಎಂಬುದನ್ನು ಕಲಿಯುತ್ತೇವೆ. ನೀವು ಮೈದಾನದಲ್ಲಿ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕು, ಏಕ ಭಾರತ, ಶ್ರೇಷ್ಠ ಭಾರತ(ಒಂದು ಭಾರತ, ಶ್ರೇಷ್ಠ ಭಾರತ ದ ಬ್ರಾಂಡ್ ರಾಯಭಾರಿಗಳಾಗಿ ನಿಮ್ಮ ಪಾತ್ರವನ್ನು ಬಲಪಡಿಸಬೇಕು. ನೀವು ಅನೇಕ ಅದ್ಭುತ ನೆನಪುಗಳೊಂದಿಗೆ ಬಿಹಾರದಿಂದ ಹಿಂತಿರುಗುತ್ತೀರಿ ಎಂಬ ವಿಶ್ವಾಸ ನನಗಿದೆ. ಬಿಹಾರದ ಹೊರಗಿನಿಂದ ಬಂದಿರುವ ಕ್ರೀಡಾಪಟುಗಳು ಲಿಟ್ಟಿ-ಚೋಖಾದ ರುಚಿ ಸವಿಯಲು ಮರೆಯದಿರಿ. ನೀವು ಖಂಡಿತವಾಗಿಯೂ ಬಿಹಾರದ ಮಖಾನಾವನ್ನು ಸಹ ಆನಂದಿಸುವಿರಿ.

ಸ್ನೇಹಿತರೆ,

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಿಂದ ಉನ್ನತ ಮಟ್ಟದ ಕ್ರೀಡಾ ಮನೋಭಾವ ಮತ್ತು ದೇಶಭಕ್ತಿ ಮೂಡಲಿದೆ. ನಾನು ಈ ಮೂಲಕ 7ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಆರಂಭವನ್ನು ಅಧಿಕೃತವಾಗಿ ಘೋಷಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಡಿಸೆಂಬರ್ 2025
December 16, 2025

Global Respect and Self-Reliant Strides: The Modi Effect in Jordan and Beyond