ಎಐಐಎಂಎಸ್ ಆಡಳಿತ ಮಂಡಳಿ ಮತ್ತು ಸುಧಾಮೂರ್ತಿ ನೇತೃತ್ವದ ತಂಡದ ಸೇವೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ
“100 ವರ್ಷಗಳಲ್ಲೇ ಎದುರಾಗಿರುವ ಅತಿದೊಡ್ಡ ಸಾಂಕ್ರಾಮಿಕ ಸೋಂಕು ಎದುರಿಸಲು ದೇಶವೀಗ 100 ಕೋಟಿ ಡೋಸ್ ಲಸಿಕೆ ನೀಡಿ ಬಲಿಷ್ಠ ಸಂರಕ್ಷಣಾ ಗೋಡೆಯನ್ನು ನಿರ್ಮಿಸಿದೆ. ಈ ಸಾಧನೆ ಭಾರತ ಮತ್ತು ಅದರ ಜನತೆಗೆ ಸಲ್ಲಬೇಕು”
“ಭಾರತದ ಕಾರ್ಪೊರೇಟ್ ವಲಯ, ಖಾಸಗಿ ರಂಗ ಮತ್ತು ಸಾಮಾಜಿಕ ಸಂಘಟನೆಗಳು ದೇಶದ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರಂತರ ಕೊಡುಗೆ ನೀಡುತ್ತಾ ಬಂದಿವೆ”

ನಮಸ್ಕಾರ,

ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್ ಜೀ, ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಜಿ, ಕೇಂದ್ರ ಆರೋಗ್ಯ ರಾಜ್ಯ ಸಚಿವರಾದ ಡಾ. ಭಾರತಿ ಪವಾರ್ ಜಿ, ಹರಿಯಾಣ ಆರೋಗ್ಯ ಸಚಿವರಾದ ಶ್ರೀ ಅನಿಲ್ ವಿಜ್ ಜಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಜೀ, ಸಂಸತ್ತಿನ ನನ್ನ ಸಹೋದ್ಯೋಗಿಗಳು, ಶಾಸಕರು, ಇತರ ಗಣ್ಯರು ಮತ್ತು ನನ್ನ ಸಹೋದರ ಸಹೋದರಿಯರೆ.

ಅಕ್ಟೋಬರ್ 21, 2021 ರ ಈ ದಿನ ಇತಿಹಾಸದಲ್ಲಿ ದಾಖಲೆಯಾಗಿದೆ. ಕೆಲವು ಸಮಯದ ಹಿಂದೆ ಭಾರತವು 100 ಕೋಟಿ ಲಸಿಕೆ ಡೋಸ್‍ಗಳನ್ನು ದಾಟಿದೆ. 100 ವರ್ಷಗಳಲ್ಲಿನ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಈಗ 100 ಕೋಟಿ ಲಸಿಕೆ ಡೋಸ್‌ಗಳ ಬಲವಾದ ರಕ್ಷಣಾತ್ಮಕ ಕವಚವನ್ನು ಹೊಂದಿದೆ. ಈ ಸಾಧನೆ ಭಾರತಕ್ಕೆ ಸೇರಿದ್ದು, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸೇರಿದ್ದು. ದೇಶದ ಎಲ್ಲ ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಸಾಗಾಣಿಕೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಲಸಿಕೆ ಹಾಕುವ ಆರೋಗ್ಯ ವಲಯದ ವೃತ್ತಿಪರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈಗಷ್ಟೇ ನಾನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಲಸಿಕೆ ಕೇಂದ್ರದಿಂದ ಬಂದೆ. ನಾವು ಒಟ್ಟಾಗಿ ಕರೋನಾವನ್ನು ಆದಷ್ಟು ಬೇಗ ಸೋಲಿಸಬೇಕು ಎಂಬ ಜವಾಬ್ದಾರಿಯೂ ಹಾಗೂ ಉತ್ಸಾಹವೂ ಇದೆ. ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ ಮತ್ತು 100 ಕೋಟಿ ಲಸಿಕೆ ಡೋಸ್‌ಗಳ ಯಶಸ್ಸನ್ನು ಪ್ರತಿಯೊಬ್ಬ ಭಾರತೀಯನಿಗೂ ಅರ್ಪಿಸುತ್ತೇನೆ.

ಸ್ನೇಹಿತರೇ,

ಏಮ್ಸ್ ಜಜ್ಜರ್ ಗೆ ಕ್ಯಾನ್ಸರ್ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಂದು ಉತ್ತಮ ಸೌಲಭ್ಯ ಸಿಕ್ಕಿದೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ನಿರ್ಮಿಸಲಾಗಿರುವ ವಿಶ್ರಾಮ್ ಸದನ್ (ವಿಶ್ರಾಂತಿ ಗೃಹ) ರೋಗಿಗಳು ಮತ್ತು ಅವರ ಸಂಬಂಧಿಕರ ಆತಂಕವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್‍ನಂತಹ ರೋಗಗಳಲ್ಲಿ, ರೋಗಿಯ ಮತ್ತು ಅವರ ಸಂಬಂಧಿಕರು ಕೆಲವೊಮ್ಮೆ ವೈದ್ಯರ ಸಲಹೆ, ಪರೀಕ್ಷೆಗಳು, ರೇಡಿಯೋ ಥೆರಪಿ ಮತ್ತು ಕೀಮೋಥೆರಪಿಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಪದೇ ಪದೇ ಬರಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅವರಿಗೆ ಎಲ್ಲಿ ಉಳಿದುಕೊಳ್ಳುವುದು ಎನ್ನುವ ದೊಡ್ಡ ಸಮಸ್ಯೆ ಇದೆ. ಈಗ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಗೆ ಬರುವ ರೋಗಿಗಳ ಸಮಸ್ಯೆ ಬಹಳವಾಗಿ ಕಡಿಮೆಯಾಗುತ್ತದೆ. ಇದು ವಿಶೇಷವಾಗಿ ಹರಿಯಾಣ, ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳು ಮತ್ತು ಉತ್ತರಾಖಂಡದ ಜನರಿಗೆ ಹೆಚ್ಚಿನ ಸಹಾಯವಾಗಲಿದೆ.

ಸ್ನೇಹಿತರೇ,

ಈ ಬಾರಿ ನಾನು ಕೆಂಪುಕೋಟೆಯಿಂದ 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಎಂದು ಒಂದು ಮಾತನ್ನು ಹೇಳಿದ್ದೆ. ಯಾವುದೇ ವಲಯದಲ್ಲಿ ಸಾಮೂಹಿಕ ಶಕ್ತಿ ಇದ್ದರೆ ಮತ್ತು ಎಲ್ಲರ ಪ್ರಯತ್ನಗಳು ಕಂಡುಬಂದರೆ, ಆಗ ಬದಲಾವಣೆಯ ವೇಗವೂ ಹೆಚ್ಚಾಗುತ್ತದೆ. ಈ ಕೊರೊನಾ ಅವಧಿಯಲ್ಲಿ ಎಲ್ಲರ ಪ್ರಯತ್ನದಿಂದ ಈ 10 ಅಂತಸ್ತಿನ ವಿಶ್ರಾಮ್ ಸದನ್ ಕೂಡ ಪೂರ್ಣಗೊಂಡಿದೆ. ಮುಖ್ಯವಾಗಿ, ಈ ವಿಶ್ರಾಮ್ ಸದನದಲ್ಲಿ ದೇಶದ ಸರ್ಕಾರ ಮತ್ತು ಕಾರ್ಪೊರೇಟ್ ವಲಯ  ಸಾಮೂಹಿಕ ಪ್ರಯತ್ನಗಳನ್ನು ಹೊಂದಿದೆ. ಇನ್ಫೋಸಿಸ್ ಫೌಂಡೇಶನ್ ವಿಶ್ರಾಮ್ ಸದನದ ಕಟ್ಟಡವನ್ನು ನಿರ್ಮಿಸಿದರೆ, ಏಮ್ಸ್ ಜಜ್ಜರ್ ಭೂಮಿ, ವಿದ್ಯುತ್ ಮತ್ತು ನೀರಿನ ವೆಚ್ಚವನ್ನು ಭರಿಸಿದೆ. ಈ ಸೇವೆಗಾಗಿ ಏಮ್ಸ್ ಆಡಳಿತ ಮತ್ತು ಸುಧಾ ಮೂರ್ತಿಯವರ ತಂಡಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸುಧಾಜೀ ಅವರ ವ್ಯಕ್ತಿತ್ವವು ತುಂಬಾ ಸರಳ ಮತ್ತು ಸಾಧಾರಣವಾದದ್ದು ಮತ್ತು ಅವರು ಬಡವರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಅವರ ತತ್ತ್ವವಾದ 'ನರರ ಸೇವೆಯೇ ನಾರಾಯಣ ಸೇವೆ'   ಮತ್ತು ಅವರ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಈ ವಿಶ್ರಾಮ್ ಸದನದಲ್ಲಿ ಅವರ ಸಹಕಾರಕ್ಕಾಗಿ ನಾನು ಅವರನ್ನು ಪ್ರಶಂಸಿಸುತ್ತೇನೆ.

ಸ್ನೇಹಿತರೇ,

ಭಾರತದ ಕಾರ್ಪೊರೇಟ್ ವಲಯ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಸ್ಥೆಗಳು ದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ನಿರಂತರವಾಗಿ ಕೊಡುಗೆ ನೀಡಿವೆ. ಆಯುಷ್ಮಾನ್ ಭಾರತ್ ಪಿಎಮ್-ಜೆಎವೈ ಕೂಡ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯಡಿ, 2.25 ಕೋಟಿಗೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಮತ್ತು ಈ ಚಿಕಿತ್ಸೆಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಆಯುಷ್ಮಾನ್ ಯೋಜನೆಯೊಂದಿಗೆ ಸಾವಿರಾರು ಆಸ್ಪತ್ರೆಗಳ ಪೈಕಿ ಸುಮಾರು 10,000 ಆಸ್ಪತ್ರೆಗಳು ಖಾಸಗಿ ವಲಯದಿಂದ ಬಂದಿವೆ.

ಸ್ನೇಹಿತರೇ,

ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಈ ಪಾಲುದಾರಿಕೆಯು ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಶಿಕ್ಷಣದ ಅಭೂತಪೂರ್ವ ವಿಸ್ತರಣೆಗೆ ಕೊಡುಗೆ ನೀಡುತ್ತಿದೆ. ಇಂದು, ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಒತ್ತು ನೀಡಿದಾಗ, ಖಾಸಗಿ ವಲಯದ ಪಾತ್ರವೂ ಬಹಳ ಮುಖ್ಯವಾಗಿದೆ. ಈ ಪಾಲುದಾರಿಕೆಯನ್ನು ಉತ್ತೇಜಿಸಲು ವೈದ್ಯಕೀಯ ಶಿಕ್ಷಣದ ಆಡಳಿತದಲ್ಲಿ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆಯ ನಂತರ ಭಾರತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು ಸುಲಭವಾಗಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಒಂದು ಮಾತು ಇದೆ ದಾನದಿಂದ ಹಣ ಕಡಿಮೆಯಾಗುವುದಿಲ್ಲ, ಹಾಗಯೇ ನದಿಯಲ್ಲಿ ನೀರು ಕಡಿಮೆಯಾಗುವುದಿಲ್ಲ. ಆದ್ದರಿಂದ, ನೀವು ಎಷ್ಟು ಹೆಚ್ಚು ಸೇವೆಯನ್ನು ಮಾಡುತ್ತೀರೋ ಅಷ್ಟು ದಾನ ಮಾಡುತ್ತೀರೋ ಅಷ್ಟು ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ, ನಾವು ನೀಡುವ ದಾನ,  ಮಾಡುವ ಸೇವೆ ಮಾತ್ರ ನಮ್ಮನ್ನು ಪ್ರಗತಿಯೆಡೆಗೆ ಕೊಂಡೊಯ್ಯುತ್ತದೆ. ಹರಿಯಾಣದ ಜಜ್ಜರ್‌ನಲ್ಲಿರುವ ವಿಶ್ರಾಮ್ ಸದನವು ವಿಶ್ವಾಸ್ ಸದನ್ (ಟ್ರಸ್ಟ್ ಹೌಸ್) ಆಗಿ ಹೊರಹೊಮ್ಮುತ್ತಿದೆ ಎಂದು ನಾನು ನಂಬುತ್ತೇನೆ. ಈ ವಿಶ್ರಾಮ ಸದನವು ವಿಶ್ವಾಸ್ ಸದನವಾಗಿಯೂ ಕಾರ್ಯನಿರ್ವಹಿಸುತ್ತದೆ. ಇಂತಹ ವಿಶ್ರಾಮ ಸದನವನ್ನು ನಿರ್ಮಿಸಲು ಇದು ದೇಶದ ಇತರ ಜನರಿಗೆ ಸ್ಫೂರ್ತಿ ನೀಡುತ್ತದೆ. ಕೇಂದ್ರ ಸರ್ಕಾರವು ತನ್ನ ಕಡೆಯಿಂದ ಎಲ್ಲಾ ಏಮ್ಸ್‍ಗಳಲ್ಲಿ ಮತ್ತು ನಿರ್ಮಾಣ ಹಂತದಲ್ಲಿರುವ ಕಡೆಗಳಲ್ಲಿ  ರಾತ್ರಿಯಲ್ಲಿ ತಂಗುವ ತಾಣಗಳನ್ನು ಮಾಡುತ್ತಿದೆ.

ಸ್ನೇಹಿತರೇ,

ರೋಗಿಗೆ ಮತ್ತು ಅವರ ಸಂಬಂಧಿಕರಿಗೆ ಸ್ವಲ್ಪ ಪರಿಹಾರ ಸಿಕ್ಕರೆ, ನಂತರ ರೋಗದ ವಿರುದ್ಧ ಹೋರಾಡುವ ಅವರ ಧೈರ್ಯವೂ ಹೆಚ್ಚಾಗುತ್ತದೆ. ಈ ಸೌಲಭ್ಯವನ್ನು ಒದಗಿಸುವುದು ಕೂಡ ಒಂದು ರೀತಿಯ ಸೇವೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಯು ಉಚಿತ ಚಿಕಿತ್ಸೆಯನ್ನು ಪಡೆದಾಗ, ಅದು ಅವನಿಗೆ ಒಂದು ಸೇವೆಯಾಗಿದೆ.  ಈ ಸೇವೆಯಿಂದಾಗಿಯೇ ನಮ್ಮ ಸರ್ಕಾರ ಸುಮಾರು 400 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದೆ. ಈ ಸೇವೆಯ ಕಾರಣದಿಂದ ಔಷಧಿಗಳನ್ನು ಜನೌಷಧಿ ಕೇಂದ್ರಗಳ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಮತ್ತು ಅತ್ಯಲ್ಪ ದರದಲ್ಲಿ ನೀಡಲಾಗುತ್ತಿದೆ. ಮತ್ತು ಮಧ್ಯಮ ವರ್ಗದ ಕುಟುಂಬಗಳು, ಕೆಲವೊಮ್ಮೆ ವರ್ಷಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಒಂದು ವರ್ಷದಲ್ಲಿ 10,000-15,000 ರೂಪಾಯಿಗಳ ಅಗತ್ಯವಿರುವ ಎಲ್ಲ ಸೌಲಭ್ಯಗಳು ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ, ನೇಮಕಾತಿ ಪ್ರಕ್ರಿಯೆಯು ಸರಳ ಮತ್ತು ಅನುಕೂಲಕರವಾಗಿದೆ ಮತ್ತು ಅಪಾಯಿಂಟ್‌ಮೆಂಟ್ ಪಡೆಯಲು ಯಾವುದೇ ತೊಂದರೆಯಾಗದಂತೆ ಗಮನ ನೀಡಲಾಗುತ್ತಿದೆ. ಇಂದು ಇನ್ಫೋಸಿಸ್ ಫೌಂಡೇಶನ್ ನಂತಹ ಅನೇಕ ಸಂಸ್ಥೆಗಳು ಈ ಸೇವಾ ಮನೋಭಾವದಿಂದ ಬಡವರಿಗೆ ಸಹಾಯ ಮಾಡುತ್ತಿವೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತಿವೆ ಎನ್ನುವ ತೃಪ್ತಿ ನನಗೆ ಇದೆ. ಮತ್ತು ಸುಧಾ ಜೀ ಅವರು 'ಪತ್ರಂ-ಪುಷ್ಪಂ' ಬಗ್ಗೆ ಬಹಳ ವಿವರವಾಗಿ ಮಾತನಾಡಿದ್ದಾರೆ ಮತ್ತು ಸೇವೆ ಮಾಡಲು ಯಾವುದೇ ಅವಕಾಶವನ್ನು ಬಿಡದಿರುವುದು ಎಲ್ಲಾ ದೇಶವಾಸಿಗಳ ಕರ್ತವ್ಯವಾಗಿದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಮಯದಲ್ಲಿ ಭಾರತವು ದೃಢವಾದ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ವೇಗವಾಗಿ ಸಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವುದು, ಇ-ಸಂಜೀವನಿ ಮೂಲಕ ಟೆಲಿ-ಮೆಡಿಸಿನ್ ಸೌಲಭ್ಯಗಳು, ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಹೊಸ ವೈದ್ಯಕೀಯ ಸಂಸ್ಥೆಗಳ ನಿರ್ಮಾಣ ಇತ್ಯಾದಿಗಳ ಕುರಿತು ಕೆಲಸ ಪ್ರಗತಿಯಲ್ಲಿದೆ ಈ ಗುರಿ ಖಂಡಿತವಾಗಿಯೂ ದೊಡ್ಡದಾಗಿದೆ. ಆದರೆ ಸಮಾಜ ಮತ್ತು ಸರ್ಕಾರವು ಸಂಪೂರ್ಣ ಬಲದಿಂದ ಒಟ್ಟಾಗಿ ಕೆಲಸ ಮಾಡಿದರೆ, ನಾವು ಬೇಗನೆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸ್ವಲ್ಪ ಸಮಯದ ಹಿಂದೆ ಸಮಾಜಕ್ಕಾಗಿ ನಾನು (ಸೆಲ್ಫ್-ಫಾರ್-ಸೊಸೈಟಿ) ಎಂಬ ವಿನೂತನ ಉಪಕ್ರಮ ಇದ್ದಿದ್ದನ್ನು ನೀವು ಗಮನಿಸಿರಬಹುದು. ಸಾವಿರಾರು ಸಂಸ್ಥೆಗಳು ಮತ್ತು ಲಕ್ಷಗಟ್ಟಲೆ ಜನರು ಸಮಾಜದ ಹಿತಕ್ಕಾಗಿ ಕೊಡುಗೆ ನೀಡುತ್ತಿದ್ದಾರೆ. ಹೆಚ್ಚು ಹೆಚ್ಚು ಜನರನ್ನು ಸಂಪರ್ಕಿಸಲು ಮತ್ತು ಭವಿಷ್ಯದಲ್ಲಿ ಜಾಗೃತಿಯನ್ನು ಹೆಚ್ಚಿಸಲು ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚು ಸಂಘಟಿತವಾಗಿ ಮುಂದುವರಿಸಬೇಕು. ಆರೋಗ್ಯಕರ ಮತ್ತು ಶ್ರೀಮಂತ ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇದು ಎಲ್ಲರ ಪ್ರಯತ್ನದಿಂದ ಮಾತ್ರ ನಡೆಯುತ್ತದೆ, ಸಮಾಜದ ಸಾಮೂಹಿಕ ಶಕ್ತಿಯಿಂದ ಮಾತ್ರ. ಸುಧಾಜಿ ಮತ್ತು ಇನ್ಫೋಸಿಸ್ ಫೌಂಡೇಶನ್‌ಗೆ ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ಹರಿಯಾಣದ ಜನರೊಂದಿಗೆ ಮಾತನಾಡುತ್ತಿರುವುದರಿಂದ, ನಾನು ಅವರಿಗೆ ಬೇರೆ ಏನನ್ನಾದರೂ ಹೇಳಲು ಬಯಸುತ್ತೇನೆ. ನನಗೆ ಹರಿಯಾಣದಿಂದ ಬಹಳಷ್ಟು ಕಲಿಯಲು ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಜೀವನದ ಸುದೀರ್ಘ ಅವಧಿಗೆ ಹರಿಯಾಣದಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ. ನಾನು ಅನೇಕ ಸರ್ಕಾರಗಳನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಹರಿಯಾಣವು ಹಲವು ದಶಕಗಳ ನಂತರ ಮನೋಹರ್ ಲಾಲ್ ಖಟ್ಟರ್‍ಜಿ ನೇತೃತ್ವದಲ್ಲಿ ಸಂಪೂರ್ಣವಾಗಿ ಪ್ರಾಮಾಣಿಕ ಸರ್ಕಾರವನ್ನು ಪಡೆದುಕೊಂಡಿದೆ, ಇದು ಹರಿಯಾಣದ ಉಜ್ವಲ ಭವಿಷ್ಯಕ್ಕಾಗಿ ಮಾತ್ರ ಸದಾ ಯೋಚಿಸುತ್ತಿದೆ. ಮಾಧ್ಯಮಗಳು ಇಂತಹ ರಚನಾತ್ಮಕ ಮತ್ತು ಸಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ ಎಂದು ನನಗೆ ತಿಳಿದಿದೆ, ಆದರೆ ಹರಿಯಾಣದಲ್ಲಿನ ಸರ್ಕಾರಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದಾಗಲೆಲ್ಲಾ, ಪ್ರಸ್ತುತ ಸರ್ಕಾರವು ತನ್ನ ನವೀನ ಮತ್ತು ದೂರಗಾಮಿ ನಿರ್ಧಾರಗಳಿಗಾಗಿ ಕಳೆದ ಐದು ದಶಕಗಳಲ್ಲಿ ಅತ್ಯುತ್ತಮವಾಗಿ ಹೊರಹೊಮ್ಮುತ್ತದೆ . ನಾನು ಮನೋಹರ್ ಲಾಲ್‍ಜಿ  ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಆದರೆ ಮುಖ್ಯಮಂತ್ರಿಯಾಗಿ ಅವರ ಪ್ರತಿಭೆ ಮುನ್ನೆಲೆಗೆ ಬಂದಿರುವ ರೀತಿ, ಅವರು ವಿವಿಧ ಉತ್ಸಾಹದಿಂದ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಮುಂದುವರಿಸುವ ರೀತಿ, ಕೆಲವೊಮ್ಮೆ ಭಾರತ ಸರ್ಕಾರ ಕೂಡ ಹರಿಯಾಣದ ಇಂತಹ ಒಂದು ಪ್ರಯೋಗವನ್ನು ದೇಶಾದ್ಯಂತ ಜಾರಿಗೊಳಿಸಬೇಕು ಎಂದು ಭಾವಿಸುತ್ತದೆ. ನಾವು ಅಂತಹ ಕೆಲವು ಪ್ರಯೋಗಗಳನ್ನು ಸಹ ನಡೆಸಿದ್ದೇವೆ. ಆದ್ದರಿಂದ, ನಾನು ಹರಿಯಾಣದ ಬಳಿ ಇರುವಾಗ ಮತ್ತು ಅದರ ಜನರೊಂದಿಗೆ ಮಾತನಾಡುವಾಗ,  ಮನೋಹರ್ ಲಾಲ್‍ಜಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಈ ತಂಡ ಹರಿಯಾಣಕ್ಕೆ ಸೇವೆ ಸಲ್ಲಿಸಿದ ರೀತಿ ಮತ್ತು ದೀರ್ಘ ಚಿಂತನೆಯೊಂದಿಗೆ ಹಾಕಿದ ಅಡಿಪಾಯ ಹರಿಯಾಣದ ಉಜ್ವಲ ಭವಿಷ್ಯಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ನಾನು ಖಂಡಿತವಾಗಿ ಹೇಳುತ್ತೇನೆ.  ನಾನು ಇಂದು ಮತ್ತೊಮ್ಮೆ ಮನೋಹರ್ ಲಾಲ್ ಜಿ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸುತ್ತೇನೆ. ಅವರ ಇಡೀ ತಂಡಕ್ಕೆ ಅನೇಕ ಅಭಿನಂದನೆಗಳು. ನನ್ನ ಹೃದಯದಾಳದಿಂದ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM's Vision Turns Into Reality As Unused Urban Space Becomes Sports Hubs In Ahmedabad

Media Coverage

PM's Vision Turns Into Reality As Unused Urban Space Becomes Sports Hubs In Ahmedabad
NM on the go

Nm on the go

Always be the first to hear from the PM. Get the App Now!
...
Prime Minister congratulates all the Padma awardees of 2025
January 25, 2025

The Prime Minister Shri Narendra Modi today congratulated all the Padma awardees of 2025. He remarked that each awardee was synonymous with hardwork, passion and innovation, which has positively impacted countless lives.

In a post on X, he wrote:

“Congratulations to all the Padma awardees! India is proud to honour and celebrate their extraordinary achievements. Their dedication and perseverance are truly motivating. Each awardee is synonymous with hardwork, passion and innovation, which has positively impacted countless lives. They teach us the value of striving for excellence and serving society selflessly.

https://www.padmaawards.gov.in/Document/pdf/notifications/PadmaAwards/2025.pdf