ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಎಲ್ಲ ಜನರಿಗೆ ಮನವಿ ಮಾಡಿದ್ದಾರೆ. ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ಆಚರಣೆಗೆ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಪ್ರಧಾನಮಂತ್ರಿ ಅವರು, ಮಾರ್ಚ್ 22ರಂದು ಜನರು ಮನೆಯಿಂದ ಹೊರ ಬರಬಾರದು ಎಂದು ಕರೆ ನೀಡಿದ್ದಾರೆ. ಅಲ್ಲದೆ ಅವರು ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು ಮತ್ತು ಯುವ ಜನಾಂಗ ನೇತೃತ ವಹಿಸಿರುವ ಎನ್ ಸಿಸಿ ಮತ್ತು ಎನ್ ಎಸ್ ಎಸ್ ಸಂಘಟನೆಗಳು, ನಾಗರಿಕ ಸಮಾಜ ಮತ್ತು ಇತರೆ ಸಂಸ್ಥೆಗಳು ‘ಜನತಾ ಕರ್ಫ್ಯೂ’ ಆಚರಣೆಗೆ ಜನರಿಗೆ ಉತ್ತೇಜನ ನೀಡಬೇಕು ಮತ್ತು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ‘ಜನತಾ ಕರ್ಫ್ಯೂ’ ಬಗ್ಗೆ ಪ್ರತಿ ದಿನ ಕನಿಷ್ಠ ಹತ್ತು ಮಂದಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಅವರು ಪ್ರತಿಯೊಬ್ಬರಿಗೂ ಕರೆ ನೀಡಿದರು. ಅಲ್ಲದೆ ‘ಜನತಾ ಕರ್ಫ್ಯೂ’ ಆಚರಣೆಯ ವಿಶೇಷ ಮನವಿ ಮಾಡುವಂತೆಯೂ ಪ್ರಧಾನಿ ಅವರು ಕೋರಿದರು.
Published By : Admin |
March 20, 2020 | 10:02 IST
Login or Register to add your comment
Chief Minister of Gujarat meets Prime Minister
December 19, 2025
The Chief Minister of Gujarat, Shri Bhupendra Patel met Prime Minister, Shri Narendra Modi today in New Delhi.
The Prime Minister’s Office posted on X;
“Chief Minister of Gujarat, Shri @Bhupendrapbjp met Prime Minister @narendramodi.
@CMOGuj”
Chief Minister of Gujarat, Shri @Bhupendrapbjp met Prime Minister @narendramodi.@CMOGuj pic.twitter.com/IMBh7EMPqN
— PMO India (@PMOIndia) December 19, 2025


