ಕೋಪನ್‌ ಹೇಗನ್‌ ನಲ್ಲಿರುವ ತಮ್ಮ ಅಮಾಲಿಯನ್‌ ಬೋರ್ಗ್ ಅರಮನೆಗೆ ಇಂದು ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಡೆನ್ಮಾರ್ಕ್‌ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಸ್ವಾಗತಿಸಿ ಬರಮಾಡಿಕೊಂಡರು.

 ಡೆನ್ಮಾರ್ಕ್‌ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಡೆನ್ಮಾರ್ಕ್‌ ನ ಸಿಂಹಾಸನಕ್ಕೆ ಏರಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಘನತೆವೆತ್ತ ಮಹಾರಾಣಿ ಅವರನ್ನು ಗೌರವಿಸಿದರು.

 ಇತ್ತೀಚಿನ ವರ್ಷಗಳಲ್ಲಿ ಭಾರತ - ಡೆನ್ಮಾರ್ಕ್ ಸಂಬಂಧಗಳಲ್ಲಿ ಉತ್ತಮ ಸುಧಾರಣೆ, ಅದರಲ್ಲೂ ವಿಶೇಷವಾಗಿ ಹಸಿರು ಕಾರ್ಯತಂತ್ರದ ಸಹಭಾಗಿತ್ವದ ಕುರಿತು ಪ್ರಧಾನಮಂತ್ರಿ ಅವರು ಮಹಾರಾಣಿ ಅವರಿಗೆ ವಿವರಿಸಿದರು.  ಸಾಮಾಜಿಕ ಕಾರ್ಯ- ಕಾರಣಗಳಿಗಾಗಿ ಡ್ಯಾನಿಶ್ ರಾಜಮನೆತನ ಹೊಂದಿರುವ ವಿಶೇಷ ಪಾತ್ರವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿ ಶ್ಲಾಘಿಸಿದರು.

ತಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಮಂತ್ರಿಯವರು ಫನತೆವೆತ್ತ ಮಹಾರಾಣಿ ಅವರಿಗೆ ಧನ್ಯವಾದ ಹೇಳಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian economy navigated well external uncertainties: RBI Bulletin

Media Coverage

Indian economy navigated well external uncertainties: RBI Bulletin
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಜುಲೈ 2026
July 23, 2026

Digital Rails, PLI Jobs & Swift Justice: How PM Modi’s Governance is Rewiring India’s Future