ನನ್ನ ಸ್ನೇಹಿತರಾದ ಸೆಶೆಲ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಡಾ. ಪ್ಯಾಟ್ರಿಕ್ ಹರ್ಮಿನಿ ಅವರ ಆಹ್ವಾನದ ಮೇರೆಗೆ, ಸೆಶೆಲ್ಸ್ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ನಾನು 2026ರ ಜೂನ್ 27 ರಿಂದ 29 ರವರೆಗೆ ಸೆಶೆಲ್ಸ್‌ಗೆ ಅಧಿಕೃತ (ಸ್ಟೇಟ್) ಭೇಟಿ ನೀಡಲಿದ್ದೇನೆ.

ಸೆಶೆಲ್ಸ್ ನಮ್ಮ ಮೌಲ್ಯಯುತ ಕಡಲ ನೆರೆಯ ರಾಷ್ಟ್ರವಾಗಿದೆ, ನಮ್ಮ 'ಮಹಾಸಾಗರ್' ದೃಷ್ಟಿಕೋನ ಹಾಗೂ 'ಜಾಗತಿಕ ದಕ್ಷಿಣ'ದ  ವಿಚಾರದಲ್ಲಿ ಸಮಾನ ಬದ್ಧತೆಯುಳ್ಳ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಈ ವರ್ಷ ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಸಹ ಆಚರಿಸುತ್ತಿದ್ದೇವೆ. ಈ ಸಂಬಂಧವು ಪರಸ್ಪರ ನಂಬಿಕೆ, ಒಂದೇ ಪ್ರಜಾಸತ್ತಾತ್ಮಕ ಮೌಲ್ಯಗಳು, ವೈವಿಧ್ಯತೆಗೆ ಗೌರವ ಮತ್ತು ನಮ್ಮ ಜನರ ನಡುವಿನ ಆಳವಾದ ಬಾಂಧವ್ಯವನ್ನು ಆಧರಿಸಿದೆ.

2026 ರ ಫೆಬ್ರವರಿಯಲ್ಲಿ ಅಧ್ಯಕ್ಷ ಹರ್ಮಿನಿ ಅವರ ಯಶಸ್ವಿ ಭಾರತ ಭೇಟಿಯ ಆಧಾರದ ಮೇಲೆ, ನಮ್ಮ ಸುದೀರ್ಘ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದ ಮಾತುಕತೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಾವು ನಮ್ಮ ಜನರ ಪ್ರಗತಿಯನ್ನು ಹೆಚ್ಚಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಹಾಗೂ ಸಮೃದ್ಧಿಯನ್ನು ಉತ್ತೇಜಿಸಲು ಶ್ರಮಿಸುತ್ತೇವೆ.

ಈ ಭೇಟಿಯ ಸಂದರ್ಭದಲ್ಲಿ, ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ನಾನು ಪಾತ್ರನಾಗಲಿದ್ದೇನೆ. ಈ ಐತಿಹಾಸಿಕ ಅವಕಾಶವು ನಮ್ಮ ಎರಡು ರಾಷ್ಟ್ರಗಳನ್ನು ಬೆಸೆಯುವ ಬಲವಾದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂಸದೀಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ.

ಸೆಶೆಲ್ಸ್‌ನಲ್ಲಿರುವ ಕ್ರಿಯಾಶೀಲ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ನಾನು ಉತ್ಸುಕನಾಗಿದ್ದೇನೆ. ಅವರು ತಲೆಮಾರುಗಳಿಂದ ಭಾರತ ಮತ್ತು ಸೆಶೆಲ್ಸ್ ನಡುವಿನ ವಿಶೇಷ ಸ್ನೇಹವನ್ನು ಪೋಷಿಸುತ್ತಿದ್ದಾರೆ ಮತ್ತು ನಮ್ಮ ಎರಡು ರಾಷ್ಟ್ರಗಳ ನಡುವಿನ ಜೀವಂತ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನನ್ನ ಭೇಟಿಯು ಎರಡು ದೇಶಗಳ ನಡುವಿನ ಸುದೀರ್ಘ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸುತ್ತದೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಸಹಕಾರವನ್ನು ಹೆಚ್ಚಿಸುತ್ತದೆ ಜೊತೆಗೆ ಸುರಕ್ಷಿತ, ಶಾಂತಿಯುತ ಹಾಗೂ ಸಮೃದ್ಧ ಹಿಂದೂ ಮಹಾಸಾಗರದ ಪ್ರದೇಶಕ್ಕಾಗಿ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂಬ ವಿಶ್ವಾಸ ನನಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
E-Samudra: India’s digital push to reshape maritime governance

Media Coverage

E-Samudra: India’s digital push to reshape maritime governance
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಆಗಸ್ಟ್ 2026
August 11, 2026

Champions on the Podium, Capital Unlocked, Digital Seas Opened: New India’s Winning Streak Under PM Modi