ಭಾರತದ ಜಿ.ಡಿ.ಪಿ ಬೆಳವಣಿಗೆಯು 2025-26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ. 8.2ರಷ್ಟು ಬೆಳವಣಿಗೆಯನ್ನು ಹೊಂದಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಇತ್ತೀಚಿನ ಜಿ.ಡಿ.ಪಿ ಅಂಕಿಅಂಶಗಳನ್ನು ಸ್ವಾಗತಿಸಿದ್ದಾರೆ. ಈ ಪ್ರಗತಿಯು ಸರ್ಕಾರದ ಬೆಳವಣಿಗೆಗೆ ಪೂರಕವಾಗಿನ ನೀತಿಗಳು ಮತ್ತು ಸುಧಾರಣೆಗಳ ಪ್ರಭಾವ ಹಾಗೂ ಭಾರತದ ಜನರ ಕಠಿಣ ಪರಿಶ್ರಮ ಮತ್ತು ಇಲ್ಲಿನ ಜನರ ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ. ಬೆಳವಣಿಗೆಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುತ್ತಾ ಸುಧಾರಣೆಗಳನ್ನು ಮುಂದುವರಿಸಲು ಮತ್ತು ಪ್ರತಿಯೊಬ್ಬ ನಾಗರಿಕರ ಸುಲಲಿತ ಜೀವನ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"2025-26ರ ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ರಷ್ಟು ಜಿ.ಡಿ.ಪಿ ಬೆಳವಣಿಗೆ ಉತ್ತೇಜನಕಾರಿಯಾಗಿದೆ. ಇದು ನಮ್ಮ ಸರ್ಕಾರದ ಬೆಳವಣಿಗೆ ಪರ ನೀತಿಗಳು ಮತ್ತು ಸುಧಾರಣೆಗಳ ಪ್ರಭಾವವಾಗಿದೆ. ನಮ್ಮ ಜನರ ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯನ್ನೂ ಸಹ ಇದು ಪ್ರತಿಬಿಂಬಿಸುತ್ತದೆ. ನಮ್ಮ ಸರ್ಕಾರವು ಸುಧಾರಣೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಪ್ರತಿಯೊಬ್ಬ ನಾಗರಿಕನ ಸುಲಲಿತ ಜೀವನ ಬಲವರ್ಧನೆಗೆ ಪ್ರಯತ್ನಗಳನ್ನು ಮುಂದುವರಿಸಲಿದೆ."
The 8.2% GDP growth in Q2 of 2025-26 is very encouraging. It reflects the impact of our pro-growth policies and reforms. It also reflects the hard work and enterprise of our people. Our government will continue to advance reforms and strengthen Ease of Living for every citizen.
— Narendra Modi (@narendramodi) November 28, 2025


