ಶೇರ್
 
Comments

ನಾನು ಸೆಪ್ಟೆಂಬರ್ 4-5, 2019 ರಂದು ರಷ್ಯಾದ ವ್ಲಾಡಿವೋಸ್ತಾಕ್‌ಗೆ ಭೇಟಿ ನೀಡಲಿದ್ದೇನೆ.

ರಷ್ಯಾದ ದೂರ ಪೂರ್ವ ಪ್ರದೇಶಕ್ಕೆ ನನ್ನ ಭೇಟಿಯು ಭಾರತದ ಪ್ರಧಾನ ಮಂತ್ರಿಯೊಬ್ಬರ ಮೊದಲ ಭೇಟಿಯಾಗಿದೆ. ಇದು ನಮ್ಮ ದೃಢವಾದ ದ್ವಿಪಕ್ಷೀಯ ಸಂಬಂಧಗಳನ್ನು ವೈವಿಧ್ಯಗೊಳಿಸಲು ಮತ್ತು ಮತ್ತಷ್ಟು ಬಲಪಡಿಸುವ ಎರಡೂ ಕಡೆಯ ಆಸಕ್ತಿಯನ್ನು ಒತ್ತಿಹೇಳುತ್ತದೆ.

ರಷ್ಯಾ ಒಕ್ಕೂಟದ ಅಧ್ಯಕ್ಷ ಶ್ರೀ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ 5 ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದು ಮತ್ತು ಅವರೊಂದಿಗೆ 20 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ನಡೆಸುವುದು ನನ್ನ ಭೇಟಿಯ ಉದ್ದೇಶವಾಗಿದೆ. ಈ ವೇದಿಕೆಯು ರಷ್ಯಾದ ದೂರ ಪೂರ್ವ ಪ್ರದೇಶದಲ್ಲಿನ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಭಾರತ ಮತ್ತು ರಷ್ಯಾ ನಡುವೆ ನಿಕಟ ಮತ್ತು ಪರಸ್ಪರ ಲಾಭದಾಯಕ ಸಹಕಾರವನ್ನು ಅಭಿವೃದ್ಧಿಪಡಿಸುವ ಅಗಾಧ ಸಾಮರ್ಥ್ಯವನ್ನು ಒದಗಿಸುತ್ತದೆ.

ನಮ್ಮ ವಿಶೇಷ ಸಹಭಾಗಿತ್ವದ ಬಲವಾದ ಅಡಿಪಾಯದ ಆಧಾರದ ಮೇಲೆ ನಮ್ಮ ಎರಡು ದೇಶಗಳು ಅತ್ಯುತ್ತಮ ಸಂಬಂಧಗಳನ್ನು ಹೊಂದಿವೆ. ರಕ್ಷಣೆ, ನಾಗರಿಕ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಉಭಯ ದೇಶಗಳು ವ್ಯಾಪಕವಾಗಿ ಸಹಕರಿಸುತ್ತಿವೆ. ವ್ಯಾಪಾರ ಮತ್ತು ಹೂಡಿಕೆಯಲ್ಲಿ ದೃಢವಾಗಿ ಬೆಳೆಯುತ್ತಿರುವ ಸಂಬಂಧಗಳನ್ನು ನಾವು ಹೊಂದಿದ್ದೇವೆ.

ನಮ್ಮ ಬಲವಾದ ಸಹಭಾಗಿತ್ವವು ಬಹು ಧ್ರುವ ಜಗತ್ತನ್ನು ಉತ್ತೇಜಿಸುವ ಬಯಕೆಯಿಂದ ಪೂರಕವಾಗಿದೆ ಮತ್ತು ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಉಭಯ ದೇಶಗಳು ಈ ನಿಟ್ಟಿನಲ್ಲಿ ನಿಕಟವಾಗಿ ಸಹಕರಿಸುತ್ತವೆ.

ನನ್ನ ಸ್ನೇಹಿತರಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ನಮ್ಮ ದ್ವಿಪಕ್ಷೀಯ ಸಹಭಾಗಿತ್ವದ ಸಂಪೂರ್ಣ ಹರವು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು ನಾನು ಕಾತರನಾಗಿದ್ದೇನೆ. ಪೂರ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳುವ ಇತರ ಜಾಗತಿಕ ನಾಯಕರನ್ನು ಭೇಟಿಯಾಗಲು ಮತ್ತು ಭಾರತೀಯ ಉದ್ಯಮ ಹಾಗೂ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲು ನಾನು ಎದುರು ನೋಡುತ್ತಿದ್ದೇನೆ.

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
'ಪರೀಕ್ಷಾ ಪೇ ಚರ್ಚಾ 2022' ರಲ್ಲಿ  ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Retired Army officers hail Centre's decision to merge Amar Jawan Jyoti with flame at War Memorial

Media Coverage

Retired Army officers hail Centre's decision to merge Amar Jawan Jyoti with flame at War Memorial
...

Nm on the go

Always be the first to hear from the PM. Get the App Now!
...
PM condoles the deaths in the building fire at Tardeo, Mumbai
January 22, 2022
ಶೇರ್
 
Comments
Approves ex-gratia from PMNRF

The Prime Minister, Shri Narendra Modi has expressed sorrow on the deaths in the building fire at Tardeo in Mumbai. He conveyed condolences to the bereaved families and prayed for quick recovery of the injured.

He also approved ex-gratia of Rs. 2 lakh each from PMNRF to be given to the next of kin of those who have lost their live. The injured would be given Rs. 50,000 each:

The Prime Minister Office tweeted:

"Saddened by the building fire at Tardeo in Mumbai. Condolences to the bereaved families and prayers with the injured for the speedy recovery: PM @narendramodi

An ex-gratia of Rs. 2 lakh each from PMNRF would be given to the next of kin of those who have lost their lives due to the building fire in Tardeo, Mumbai. The injured would be given Rs. 50,000 each: PM @narendramodi"