ಶೇರ್
 
Comments

ಇಂಗ್ಲಂಡ್ ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 12 ಮತ್ತು 13 ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ ಜಿ.7 ಶೃಂಗದ ಬಾಹ್ಯ  (ಔಟ್ ರೀಚ್) ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ  ಇಂಗ್ಲಂಡ್ ಯು ಜಿ.7 ರ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಅದು ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ.7 ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಸಭೆ ನಡೆಯಲಿದೆ.

“ಉತ್ತಮವಾಗಿ ಮರು ನಿರ್ಮಾಣ ಮಾಡಿ” ಎಂಬುದು ಶೃಂಗದ ವಿಷಯ ಶೀರ್ಷಿಕೆಯಾಗಿದೆ ಮತ್ತು ಇಂಗ್ಲೆಂಡ್ ಅದರ ಅಧ್ಯಕ್ಷತೆಗೆ ನಾಲ್ಕು ಆದ್ಯತಾ ರಂಗಗಳನ್ನು ರೂಪಿಸಿದೆ. ಅವುಗಳೆಂದರೆ ಕೊರೊನಾದಿಂದ ಜಾಗತಿಕ ಪುನಶ್ಚೇತನ; ಭವಿಷ್ಯದ ಜಾಗತಿಕ ಸಾಂಕ್ರಾಮಿಕಗಳ ವಿರುದ್ಧ ಪುನಶ್ಚೇತನವನ್ನು ಬಲಪಡಿಸುವುದು; ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರವನ್ನು ಪ್ರಚುರಪಡಿಸುವ ಮೂಲಕ ಭವಿಷ್ಯದ ಸಮೃದ್ಧಿಗೆ ಉತ್ತೇಜನ; ವಾತಾವರಣ ಬದಲಾವಣೆಯನ್ನು ನಿಭಾಯಿಸುವುದು ಮತ್ತು ಭೂಗ್ರಹದ ಜೀವವೈವಿಧ್ಯವನ್ನು ಕಾಪಾಡುವುದು, ಹಂಚಿಕೊಂಡ ಮೌಲ್ಯಗಳು ಹಾಗು ಮುಕ್ತ ಸಮಾಜಗಳನ್ನು ಬೆಂಬಲಿಸುವುದು. ಆರೋಗ್ಯ ಮತ್ತು ವಾತಾವರಣ ಬದಲಾವಣೆಗೆ ಗಮನ ನೀಡಿ ಜಾಗತಿಕ ಸಾಂಕ್ರಾಮಿಕದಿಂದ ಪುನಶ್ಚೇತನ ಕುರಿತಂತೆ ನಾಯಕರು ವಿಚಾರ ವಿನಿಮಯ ನಡೆಸುವ ನಿರೀಕ್ಷೆ ಇದೆ.

ಜಿ.7 ಸಭೆಯಲ್ಲಿ ಪ್ರಧಾನ ಮಂತ್ರಿ ಪಾಲ್ಗೊಳ್ಳುತ್ತಿರುವುದು ಇದು ಎರಡನೇ ಬಾರಿ. 2019 ರಲ್ಲಿ ಫ್ರೆಂಚ್ ಅಧ್ಯಕ್ಷತೆಯಲ್ಲಿ ನಡೆದ ಜಿ.7 ರ ಬಿರ್ರಿಟ್ಜ್ ಸಮಿತಿಯಲ್ಲಿ “ಸದ್ಭಾವನಾ ಪಾಲುದಾರ” ನಾಗಿ ಪಾಲ್ಗೊಳ್ಳಲು ಭಾರತಕ್ಕೆ ಆಹ್ವಾನ ನೀಡಲಾಗಿತ್ತು ಮತ್ತು ಪ್ರಧಾನ ಮಂತ್ರಿ ಅವರು “ವಾತಾವರಣ, ಜೀವ ವೈವಿಧ್ಯ ಮತ್ತು ಸಾಗರಗಳು” ಹಾಗು “ಡಿಜಿಟಲ್ ಪರಿವರ್ತನೆ” ಅಧಿವೇಶನಗಳಲ್ಲಿ ಭಾಗವಹಿಸಿದ್ದರು.

 

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
IT majors on hiring spree, add 50,000 in Q2; freshers in demand

Media Coverage

IT majors on hiring spree, add 50,000 in Q2; freshers in demand
...

Nm on the go

Always be the first to hear from the PM. Get the App Now!
...
ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
October 15, 2021
ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ಅವರ ನಿಧನದಿಂದ ಅತ್ಯಂತ ದುಃಖವಾಗಿದೆ. ಅವರ ಅಗಲಿಕೆಯಿಂದ ಕಲೆ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದುಃಖದ ಈ ಸಮಯದಲ್ಲಿ ಅವರ ಕುಟುಂಬದವರಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ಓ ಶಾಂತಿ!" ಎಂದು ತಿಳಿಸಿದ್ದಾರೆ.