ಘನತೆವೆತ್ತ ರಾಣಿ ಎಲಿಜಬೆತ್ ಅವರು ಕೋವಿಡ್‌ನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಬ್ರಿಟನ್ ಪ್ರಧಾನ ಮಂತ್ರಿ ಘನತೆವೆತ್ತ ಬೋರಿಸ್ ಜಾನ್ಸನ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನ ಮಂತ್ರಿ ಹೀಗೆ ಹೇಳಿದ್ದಾರೆ;
"ಘನತೆವೆತ್ತ ರಾಣಿ ಎಲಿಜಬೆತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಹಾರೈಸುತ್ತೇನೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ."
I wish Her Majesty Queen Elizabeth a speedy recovery and pray for her good health. https://t.co/Em873ikLl8
— Narendra Modi (@narendramodi) February 20, 2022


