ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯೋಗ್ಯಕರ್ತಾದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. ವಿಶೇಷ ಗೌರವಾರ್ಥವಾಗಿ ಇಂಡೋನೇಷ್ಯಾದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಪ್ರಧಾನಮಂತ್ರಿಯವರೊಂದಿಗೆ ದೇವಾಲಯ ಭೇಟಿಗೆ ಜೊತೆಯಾದರು. ಉಭಯ ನಾಯಕರು ದೇವಾಲಯ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್.ಐ.) ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಯ ಆರಂಭದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಿದರು.

 

9ನೇ ಶತಮಾನದಲ್ಲಿ ನಿರ್ಮಿಸಲಾದ ಪ್ರಂಬನನ್ ದೇವಾಲಯ ಸಂಕೀರ್ಣವು ಇಂಡೋನೇಷ್ಯಾದ ಅತಿದೊಡ್ಡ ದೇವಾಲಯ ಸಂಕೀರ್ಣವಾಗಿದ್ದು, ತ್ರಿಮೂರ್ತಿಗಳಾದ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಶಿವನಿಗೆ ಸಮರ್ಪಿತವಾಗಿದೆ. ದೇವಾಲಯದ ಸಂಕೀರ್ಣವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಹಂಚಿಕೆಯ ನಾಗರಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಶಾಶ್ವತ ಸಂಕೇತವಾಗಿ ನಿಂತಿದೆ.

 

ಈ ಸಂರಕ್ಷಣಾ ಯೋಜನೆಯು 2025ರಲ್ಲಿ ಅಧ್ಯಕ್ಷರಾದ ಪ್ರಬೋವೊ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ನಾಯಕರ ನಡುವೆ ಏರ್ಪಟ್ಟ ಒಡಂಬಡಿಕೆಯ ಭಾಗವಾಗಿದೆ. ಇದು ಪ್ರಂಬನನ್ ಸಂಕೀರ್ಣದಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಭಾರತದ ಸಹಾಯವನ್ನು ಸೂಚಿಸುತ್ತದೆ.

 

ಭಾರತವು ಆಗ್ನೇಯ ಏಷ್ಯಾದ ಹಲವಾರು ವಿಶ್ವ ಪರಂಪರೆಯ ತಾಣಗಳ ಪರಂಪರೆಯ ಪುನಃಸ್ಥಾಪನೆ ಮತ್ತು ಸಂರಕ್ಷಣೆಯ ಯಶಸ್ವಿ ದಾಖಲೆಯನ್ನು ಹೊಂದಿದೆ. ಎ.ಎಸ್.ಐ. ಈ ಹಿಂದೆ ಇಂಡೋನೇಷ್ಯಾದ ಬೊರೊಬೊಡೂರ್ ದೇವಾಲಯ ಆವರಣಗಳ ವ್ಯಾಪಕ ದಾಖಲೀಕರಣವನ್ನು ಕೈಗೆತ್ತಿಕೊಂಡಿತ್ತು. ಪ್ರಂಬನನ್ ದೇವಾಲಯ ಸಂಕೀರ್ಣದ ಪುನಃಸ್ಥಾಪನೆ ಮತ್ತು ಸಂರಕ್ಷಣೆಗೆ ಭಾರತದ ಬೆಂಬಲವು, ಹಂಚಿಕೆಯ ನಾಗರಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಭಾರತದ ನಿರಂತರ ಬದ್ಧತೆಯನ್ನು ಸೂಚಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From 'chalta hai' to 'badal sakta hai': Decoding PM Modi's Punctuality narrative

Media Coverage

From 'chalta hai' to 'badal sakta hai': Decoding PM Modi's Punctuality narrative
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಆಗಸ್ಟ್ 2026
August 23, 2026

From Free Coaching to 400+ Space Startups — India’s Atmanirbhar Leap Under PM Modi