ʻಮಹಾಕುಂಭಮೇಳ-2025ʼಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಿರುವ ಪ್ರಧಾನಮಂತ್ರಿ
ಪ್ರಯಾಗ್‌ರಾಜ್‌ನಲ್ಲಿ 5,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ʻಕುಂಭ ಸಹಾಯಕ್‌ʼ(Kumbh Sah’AI’yak) ʻಚಾಟ್ ಬಾಟ್‌ʼಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 13ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 12:15ರ ಸುಮಾರಿಗೆ ʻಸಂಗಮ್ ನೋಸ್ʼನಲ್ಲಿ ಪೂಜೆ ಮತ್ತು ದರ್ಶನ ಮಾಡಲಿದ್ದಾರೆ. ನಂತರ ಮಧ್ಯಾಹ್ನ 12:40ಕ್ಕೆ ʻಅಕ್ಷಯ್ ವಟವೃಕ್ಷʼದಲ್ಲಿ ಪೂಜೆ ನೆರವೇರಿಸಲಿದ್ದು, ನಂತರ ಹನುಮಾನ್ ಮಂದಿರ ಮತ್ತು ಸರಸ್ವತಿ ಕೂಪ್‌ನಲ್ಲಿ ದರ್ಶನ ಮತ್ತು ಪೂಜೆ ಮಾಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಹಾಕುಂಭ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ ಅವರು ಪ್ರಯಾಗ್‌ರಾಜ್‌ನಲ್ಲಿ 5,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ʻಮಹಾಕುಂಭ-2025ʼರ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮೂಲಸೌಕರ್ಯ ಹೆಚ್ಚಿಸಲು ಮತ್ತು ಸುಗಮ ಸಂಪರ್ಕವನ್ನು ಒದಗಿಸಲು 10 ಹೊಸ ರಸ್ತೆ ಮೇಲ್ಸೇತುವೆಗಳು (ಆರ್‌ಒಬಿ) ಅಥವಾ ಫ್ಲೈಓವರ್‌ಗಳು, ಶಾಶ್ವತ ಘಾಟ್‌ಗಳು ಮತ್ತು ನದಿ ಮುಂಭಾಗದ ರಸ್ತೆಗಳಂತಹ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳನ್ನು ಒಳಗೊಂಡಿರುತ್ತದೆ.

ʻಸ್ವಚ್ಛ ಮತ್ತು ನಿರ್ಮಲ ಗಂಗಾʼ ಕುರಿತ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಗಂಗಾ ನದಿಗೆ ಸೇರ್ಪಡೆಯಾಗುವ ಸಣ್ಣ ಚರಂಡಿಗಳ ನೀರನ್ನು ತಡೆಯುವ, ಮಾರ್ಗ ಬದಲಿಸುವ ಮತ್ತು ಸಂಸ್ಕರಣೆ ಮಾಡುವ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಸಂಸ್ಕರಿಸದ ನೀರು ನದಿಗೆ ಸೇರದಂತೆ ಖಚಿತಪಡಿಸುತ್ತದೆ. ಕುಡಿಯುವ ನೀರು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.

ʻಭಾರದ್ವಾಜ್ ಆಶ್ರಮ ಕಾರಿಡಾರ್ʼ, ಶೃಂಗ್ವೇರ್‌ಪುರ ಧಾಮ ಕಾರಿಡಾರ್, ಅಕ್ಷಯವಟ್‌ ಕಾರಿಡಾರ್, ಹನುಮಾನ್ ಮಂದಿರ ಕಾರಿಡಾರ್ ಸೇರಿದಂತೆ ಪ್ರಮುಖ ದೇವಾಲಯ ಕಾರಿಡಾರ್‌ಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಭಕ್ತರಿಗೆ ಪ್ರವೇಶವನ್ನು ಸುಲಭಗೊಳಿಸುತ್ತವೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ.

2025ರ ಮಹಾಕುಂಭಮೇಳದ ಸಂದರ್ಭದಲ್ಲಿ ಭಕ್ತರಿಗೆ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮತ್ತು ತಾಜಾ ಮಾಹಿತಿ ಒದಗಿಸುವ ʻಕುಂಭ ಸಹಾಯಕ್‌ʼ (Kumbh Sah’AI’yak) ʻಚಾಟ್ ಬಾಟ್ʼ ಅನ್ನೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Digital Health Records For All: Half Of India Now Has ABHA IDs Under Ayushman Bharat Digital Mission

Media Coverage

Digital Health Records For All: Half Of India Now Has ABHA IDs Under Ayushman Bharat Digital Mission
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಮಾರ್ಚ್ 2025
March 18, 2025

Citizens Appreciate PM Modi’s Leadership: Building a Stronger India