ಶೇರ್
 
Comments
ಮಹಾಪರಿನಿರ್ವಾಣದ ಅಭಿಧಮ್ಮ ಸಮಾರಂಭದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವರು
ರಾಜಕಿಯ ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ನೆರವೇರಿಸುವರು, ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸುವರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರಪ್ರದೇಶ ರಾಜ್ಯಕ್ಕೆ ಅ.20ರಂದು ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಕುಶಿನಗರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ 11.30ಗೆ ಅವರು ಮಹಾಪರಿನಿರ್ವಾಣ ದೇವಸ್ಥಾನದಲ್ಲಿ ಅಭಿಧಮ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.15ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಇತರ ಕಾರ್ಯಕ್ರಮಗಳ ಉದ್ಘಾಟನೆಗೆ ಸಂಬಂಧಿಸಿದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕುಷಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಕುಷಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾದ ಕೊಲೊಂಬೊದಿಂದ ಪ್ರತಿನಿಧಿಗಳನ್ನು ಹೊತ್ತು ತರುವ ವಿಮಾನ ಇಳಿಯುವುದರೊಂದಿಗೆ ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುವುದು.  ಈ ವಿಮಾನದಲ್ಲಿ  ನೂರಾರು ಜನ ಬೌದ್ಧ ಸನ್ಯಾಸಿಗಳು ಹಾಗೂ ಬೌದ್ಧಪರಿವಾರದ ಹನ್ನೆರಡು ಜನ ಗಣ್ಯರು ಬುದ್ಧನ ಪವಿತ್ರ ಅವಶೇಷಗಳೊಂದಿಗೆ ಇಲ್ಲಿಗೆ ಆಗಮಿಸಲಿದ್ದಾರೆ.    ಈ ನಿಯೋಗದಲ್ಲಿ ಬೌದ್ಧಧರ್ಮದ ಎಲ್ಲ ವಿಭಾಗಗಳ ಮುಖ್ಯಸ್ಥರೂ ಇರಲಿದ್ದಾರೆ. ಇವರನ್ನು ಅಣುನಾಯಕರು ಎಂದು ಕರೆಯಲಾಗುತ್ತದೆ. ಶ್ರೀಲಂಕದಲ್ಲಿರುವ ನಾಲ್ಕು ಬೌದ್ಧ ಸಮುದಾಯದ ಈ ಅಣುನಾಯಕರು ಪಾಲ್ಗೊಳ್ಳಲಿದ್ದಾರೆ. ಅಸಗಿರಿಯಾ, ಅಮರಪುರ, ರಮಣ್ಯ, ಮಾಳವತ್ತದ ಮುಖ್ಯಸ್ಥರು ಹಾಗೂ ಶ್ರೀಲಂಕಾದ ಸಂಪುಟ ಸಭೆಯ ಐವರು ಸಚಿವರು, ನಮಲ್‌ ರಾಜಪಕ್ಷೆ ಅವರ ನೇತ್ರತ್ವದಲ್ಲಿ ಉತ್ತರ ಪ್ರದೇಶದ ಕುಷಿನಗರಕ್ಕೆ ಬರಲಿದ್ದಾರೆ.  ಕುಷಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣದ ಮೂಲಕ ವಿಶ್ವದ ಬೌದ್ಧ ಧರ್ಮದ ಅನುಯಾಯಿಗಳು, ಅಭಿಮಾನಿಗಳು ಭಗವಾನ್‌ ಬುದ್ಧ ಅವರ ಮಹಾಪರಿನಿರ್ವಾಣದ ಸ್ಥಳಕ್ಕೆ ಭೇಟಿ ನೀಡಲು ಅನುಕೂಲವಾಗುತ್ತದೆ. ಇಡೀ ವಿಶ್ವವನ್ನು ಬೌದ್ಧ ಧರ್ಮದ ಪವಿತ್ರ ತಾಣಕ್ಕೆ ಸಂಪರ್ಕ ಕಲ್ಪಿಸುವ ನಿಲ್ದಾಣವಾಗಿದೆ.  ಅಷ್ಟೇ ಅಲ್ಲದೆ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಹತ್ತಿರದ ಜಿಲ್ಲೆಗಳಿಗೆ ಬಂಡವಾಳ ಹೂಡಿಕೆಗೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಪ್ರದೇಶದ ಅಭಿವೃದ್ಧಿಗೆ ಕಾರಣವಾಗಲಿದೆ.

ಮಹಾಪರಿನಿರ್ವಾಣ ದೇಗುಲದಲ್ಲಿ ಅಭಿಧಮ್ಮ  ಸಮಾರಂಭ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಾಪರಿನಿರ್ವಾಣ ದೇಗುಲಕ್ಕೆ ಭೇಟಿ ನೀಡಿ, ಬುದ್ಧನ ಪ್ರತಿಮೆಗೆ ಅರ್ಚನೆ ಹಾಗೂ ಚಿವಾರ್‌ ಅನ್ನು ಅರ್ಪಿಸುವರು. ದೇಗುಲದ ಆವರಣದಲ್ಲಿ ಬೋಧಿ ವೃಕ್ಷದ ಸಸಿಯೊಂದನ್ನು ನೆಡುವರು. 

 

ಪ್ರಧಾನಮಂತ್ರಿಯವರು ಬೌದ್ಧ ಸಮುದಾಯದಿಂದ ಆಚರಿಸಲಾಗುವ ಅಭಿಧಮ್ಮ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವರ್ಷಾವಾಸ ಅಥವಾ ವಾಸ್ಸಾ ಅಂತ ಕರೆಯಲಾಗುವ ಋತುಮಾನದ ಅಂತ್ಯದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಮೂರು ತಿಂಗಳುಗಳ ಮಳೆಗಾಲ ಕಳೆದ ಸಮಯದಲ್ಲಿ ಬೋಧಿ ಸಮುದಾಯ ಈ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಬೋಧಿ ಸನ್ಯಾಸಿಗಳೆಲ್ಲ ಒಂದೇ ಸ್ಥಳದಲ್ಲಿ ನೆಲೆ ನಿಂತು, ವಿಹಾರಗಳಲ್ಲಿ ಅಥವಾ ದೇಗುಲಗಳಲ್ಲಿ ನೆಲೆ ನಿಂತು ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಶ್ರೀಲಂಕದ ಬೋಧಿ ಸನ್ಯಾಸಿಗಳು, ಮೈನ್ಮಾರ್‌, ದಕ್ಷಿಣ ಕೋರಿಯಾ, ನೇಪಾಳ, ಭುತಾನ್‌ ಹಾಗೂ ಕಂಬೋಡಿಯಾದ ಬೌದ್ಧ ಸನ್ಯಾಸಿಗಳು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳು, ರಾಯಭಾರಿಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಜಂತಾದ ಗುಹಾಂತರ್ದೇವಾಲಯದೊಳಗಿನ ಚಿತ್ರಕಲೆಗಳ ಕಲಾಕೃತಿಗಳು, ಬೌದ್ಧ ಸೂತ್ರಗಳ ಲೇಖ, ವಡನಗರದ ಉತ್ಖನನದಲ್ಲಿ ಲಭ್ಯ ಆಗಿರುವ ಬೌದ್ಧ ಧರ್ಮದ ವಿಶೇಷ ಕಲಾಕೃತಿಗಳ ಪ್ರದರ್ಶನವನ್ನು ನೋಡುವರು.  ಇವುಗಳನ್ನು ಪ್ರದರ್ಶನಕ್ಕೆ ಇರಿಸಲಾದ ಮೊಗಸಾಲೆಯಲ್ಲಿಯೂ ಪ್ರಧಾನಿ ಹೆಜ್ಜೆ ಹಾಕುವರು.

ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ಕಾರ್ಯಕ್ರಮ

ಈ ಕಾರ್ಯಕ್ರಮಗಳ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕುಷಿನಗರದಲ್ಲಿ ಕೈಗೊಳ್ಳಲಿರುವ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವರು.  ರಾಜಕಿಯ ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವರು. 280 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಈ ವೈದ್ಯಕೀಯ ಕಾಲೇಜು 500 ಹಾಸಿಗೆ ಸಾಮರ್ಥ್ಯ ಇರುವ ಆಸ್ಪತ್ರೆಯನ್ನೂ ನಿರ್ಮಿಸಲಾಗುವುದು. 2022–23ನೇ ಸಾಲಿನಲ್ಲಿ ನೂರು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುವ ವೈದ್ಯಕೀಯ ಕಾಲೇಜನ್ನು ಆರಂಭಿಸಲಾಗುವುದು.  ಇದಲ್ಲದೆ ಕುಷಿನಗರದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿಪರ ಯೋಜನೆಗಳಿಗೂ ಪ್ರಧಾನಮಂತ್ರಿ ಶಿಲಾನ್ಯಾಸ ಮಾಡುವರು. ಈ 180 ಕೋಟಿಗೂ ಮೀರಿದ ಅಂದಾಜು ವೆಚ್ಚ ಇರುವ ಅಭಿವೃದ್ಧಿಕಾರ್ಯಗಳಿಗೂ ಪ್ರಧಾನ ಮಂತ್ರಿಗಳು ಶಿಲಾನ್ಯಾಸ ಮಾಡುವರು. 

 

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
'ಪರೀಕ್ಷಾ ಪೇ ಚರ್ಚಾ 2022' ರಲ್ಲಿ  ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
How Ministries Turned Dump into Cafeterias, Wellness Centres, Gyms, Record Rooms, Parking Spaces

Media Coverage

How Ministries Turned Dump into Cafeterias, Wellness Centres, Gyms, Record Rooms, Parking Spaces
...

Nm on the go

Always be the first to hear from the PM. Get the App Now!
...
ಶೇರ್
 
Comments

PM Narendra Modi a addressed India-Central Asia Summit via video conferencing. In his remarks, PM Modi termed the mutual cooperation between India and Central Asia as essential for regional security and prosperity. "The region is central to India's vision of an integrated and stable extended neighbourhood," he said.