ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 9ರಂದು ಸಂಜೆ 5 ಗಂಟೆಗೆ ನವದೆಹಲಿಯ ಲೋಕ ಕಲ್ಯಾಣ ಮಾರ್ಗ ದಲ್ಲಿ  ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕುರಿತು 21 ವಿದ್ವಾಂಸರ ವ್ಯಾಖ್ಯಾನಗಳಿರುವ 11 ಹಸ್ತಪ್ರತಿಗಳ ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾದ ಶ್ರೀ ಮನೋಜ್ ಸಿನ್ಹಾ ಮತ್ತು ಕರಣ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀಮದ್ ಭಗವದ್ಗೀತ: ಮೂಲ ಸುಂದರ ಬರವಣಿಗೆ (ಕ್ಯಾಲಿಗ್ರಫಿ) ಯಲ್ಲಿರುವ ಸಂಸ್ಕೃತದ ಅಪರೂಪದ ಅನೇಕ ವ್ಯಾಖ್ಯಾನಗಳು

ಶ್ರೀಮದ್ ಭಗವದ್ದೀತೆಯ ಪಠ್ಯವನ್ನು ಒಂದೇ ವ್ಯಾಖ್ಯಾನದೊಂದಿಗೆ ಪ್ರಸ್ತುತಪಡಿಸುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ದತಿ.  ಆದರೆ ಇದೇ ಮೊದಲ ಬಾರಿಗೆ ಶ್ರೀಮದ್ ಭಗವದ್ದೀತೆಯ ಸಮಗ್ರ ಮತ್ತು ತುಲನಾತ್ಮಕ ರೀತಿಯಲ್ಲಿ ಮೆಚ್ಚುಗೆಯನ್ನು ಗಳಿಸುವಂತೆ ಸಾಧ್ಯವಾಗಲು ಭಾರತದ ಹಲವು ವಿದ್ವಾಂಸರು ತಮ್ಮ ಸುಂದರ ಬರವಣಿಗೆಯಲ್ಲಿ ಮಾಡಿರುವ ಪ್ರಮುಖ ವ್ಯಾಖ್ಯಾನಗಳನ್ನು ಒಗ್ಗೂಡಿಸಲಾಗಿದೆ. ಶಂಕರ ಭಾಷ್ಯದಿಂದ ಹಿಡಿದು ಭಾಷಾನುವಾದದವರೆಗೆ ಭಾರತೀಯ ಕ್ಯಾಲಿಗ್ರಫಿಯ ಅಸಾಧಾರಣ ವೈವಿಧ್ಯತೆ ಮತ್ತು ಸೂಕ್ಷ್ಮತೆಯನ್ನು ಒಳಗೊಂಡಿರುವ ಈ ಹಸ್ತಪತ್ರಿಗಳನ್ನು ಧರ್ಮಾರ್ಥ ಟ್ರಸ್ಟ್ ಪ್ರಕಟಿಸುತ್ತಿದೆ.        ಡಾ. ಕರಣ್ ಸಿಂಗ್  ಜಮ್ಮು ಮತ್ತು ಕಾಶ್ಮೀರದಲ್ಲಿರುವ ಧರ್ಮಾರ್ಥ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ. 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi